Categories
ಸಿನಿ ಸುದ್ದಿ

ಫ್ಯಾಂಟಮ್ ಸೇರಿಕೊಂಡ ಮತ್ತೊಬ್ಬ ಚೆಲುವೆ

ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕೆ ಹೊಸ ನಾಯಕಿ‌ ಎಂಟ್ರಿ ಕೊಟ್ಟಿದ್ದಾಳೆ. ಅಪರ್ಣ ಬಲ್ಲಾಳ್ ಎಂಬ ಪಾತ್ರದಲ್ಲಿ ಇದೇ ಮೊದಲ ಸಲ ನೀತು ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಅದೊಂದು ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ‌ಪಾತ್ರ. ಸದ್ಯಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಇದನ್ನು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಜೋರಾಗಿ ನಡೆಯುತ್ತಿದೆ.

 

 

Categories
ಸಿನಿ ಸುದ್ದಿ

ವಿಕ್ರಮ್ ಹುಟ್ಟು ಹಬ್ಬಕ್ಕೆ ಹೊರ ಬಂತು ತ್ರಿವಿಕ್ರಮ್ ಅಫೀಸಿಯಲ್ ಟೀಸರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಗೆ ಗಮಭಾನುವಾರ ಹುಟ್ಟು ಹಬ್ಬಸ ಸಂಭ್ರಮ. ಅವರ ಹುಟ್ಟು ಹಬ್ಬದ ಗಿಫ್ಟ್ ಆಗಿ ವಿಕ್ರಮ್ ಚೊಚ್ಚಲ ಚಿತ್ರ ತ್ರಿವಿಕ್ರಮ್ ನ ಅಫೀಸಿಯಲ್ ಟೀಸರ್ ಹೊರ ಬಂದಿದೆ‌.ಅದು ಹೊರ ಬಂದ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳ ಆಶೀರ್ವಾದ ದಿಂದ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅ ಟೀಸರ್ ಲಾಂಚ್ ಆದ ಕೇವಲ‌ಮೂರು ಗಂಟೆಗಳಲ್ಲಿ ಅದನ್ನು ನೋಡಿದವರ ಸಂಖ್ಯೆ ೫೦ ಸಾವಿರ ದಾಟಿತ್ತು.‌ಈ ಹೊತ್ತಿಗೆ ಅದು ಲಕ್ಷಾಂತರ ನೋಡುಗರನ್ನು ದಾಖಲಿಸುವುದು ಗ್ಯಾರಂಟಿ.‌ ಇದು ವಿಕ್ರಮ್ ಅಭಿನಯದ ಚೊಚ್ಚಲ ಚಿತ್ರ. ಚಿತ್ರದಲ್ಲಿ ಪಕ್ಕಾ ರಗಡ್ ಲುಕ್ ಮೂಕ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ ವಿಕ್ರಮ್ ಮಾಸ್ ಹೀರೊ ಆಗುವುದು ಖಚಿತ.‌ಹಾಗೆಯೇ‌ಲವರ್ ಬಾಯ್ ಕೂಡ. ಅಂತಹ ಅಂಶಗಳು ಚಿತ್ರದಲ್ಲಿ ಗಟ್ಟಿ ಆಗಿರುವುದಕ್ಕೆ ಟೀಸರ್ ಸುಳಿವು ನೀಡುತ್ತದೆ. ಸಹನಾ‌ಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಸೋಮಶೇಖರ್ ಅಲಿಯಾಸ್ ಸೋಮಣ್ಣ ಬಂಡವಾಳ ಹಾಕಿದ್ದಾರೆ. ಮುಂಬೈ ಮೂಲದ ಚೆಲುವೆ ಆಕಾಂಕ್ಷಾ ಶರ್ಮಾ ನಾಯಕಿ ಆಗಿದ್ದಾರೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ.‌ಕೊರೊನಾ ಕಾರಣಕ್ಕೆ ಸೂಕ್ತ ಸಮಯ ಎದುರು‌ನೋಡುತ್ರಿದೆ ಚಿತ್ರತಂಡ.‌ ಸದ್ಯಕ್ಕೀಗ ವಿಕ್ರಮ್ ಬರ್ತ್ ಡೇ ಗೆ ಟೀಸರ್ ಲಾಂಚ್ ಮಾಡಿ‌ಸುದ್ದಿ‌ಮಾಡಿದೆ.ಇದೇ ವೇಳೆ ‘ಪ್ರಾರಂಭ’ ಚಿತ್ರ ತಂಡ ಕೂಡ ವಿಕ್ರಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ.

Categories
ಸಿನಿ ಸುದ್ದಿ

ಶ್ರೀ ಗಣೇಶಾಯ ನಮಃ ….

error: Content is protected !!