Categories
ಸಿನಿ ಸುದ್ದಿ

ಗಣೇಶನ ಹಬ್ಬಕ್ಕೆ ಲಂಕೆ ಲಗ್ಗೆ! 200ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಪ್ರದರ್ಶನ !

ಲೂಸ್ ಮಾದ ಯೋಗೇಶ್ ಅಭಿನಯದ “ಲಂಕೆ” ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಕೆಲವು ಚಿತ್ರಗಳಿಗೆ ಶುರುವಲ್ಲೇ ತೊಂದರೆಗಳು ಎದುರಾಗುತ್ತವೆ. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ ಅಂತ ಪ್ರೀತಿಯಿಂದ ಹೇಳಿಕೊಂಡರು ನಿರ್ದೇಶಕ ರಾಮಪ್ರಸಾದ್.
ಈ ಚಿತ್ರ ಇನ್ನಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಬೇಕೆಂದು ಕೊಂಡಾಗ ನನ್ನ ಬೆಂಬಲಕ್ಕೆ ನಿಂತವರು ನನ್ನ ಪತ್ನಿ ಸುರೇಖ ರಾಮಪ್ರಸಾದ್.
ನಾಯಕ ಯೋಗಿ, ಕೃಷಿ ತಾಪಂಡ ಸೇರಿದಂತೆ ಚಿತ್ರತಂಡದ ಸದಸ್ಯರ ಹಾಗೂ ಮಿತ್ರರಾದ ರಕ್ಷಿತ್ ಮಹೇಂದ್ರ, ಹರ್ಷ ಮಹೇಂದ್ರ, ನಂಜುಂಡ ಮೂರ್ತಿ ಮುಂತಾದವರು ಮಾಡಿರುವ ಉಪಕಾರ ಬಹಳವಾದದ್ದು. ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸಿದ ರಾಮಪ್ರಸಾದ್, ಇದೇ ಹತ್ತರಂದು ನಮ್ಮ ಚಿತ್ರ ತೆರೆಗೆ ಬರಲಿದೆ ನೋಡಿ ಹರಸಿ ಎಂದರು.

ನಾನು ನಮ್ಮ ತಂದೆಯವರು ನಿರ್ಮಿಸಿದ್ದ ಚಿತ್ರಗಳಲ್ಲೇ ಇಷ್ಟು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಲ್ಲ.. ಆದರೆ ಈ ಚಿತ್ರದ ಎಲ್ಲಾ ರೀತಿಯ ಪ್ರಚಾರ ಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ ಎಂದ ನಾಯಕ ಲೂಸ್ ಮಾದ ಯೋಗೇಶ್ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಗಣಪತಿ ಹಬ್ಬಕ್ಕೆ ಚಿತ್ರ ಬರುತ್ತಿದೆ ನೋಡಿ ಹಾರೈಸಿ ಎಂದರು ಯೋಗಿ.

ಚಿತ್ರದ ಬಗ್ಗೆ ಹೇಳುವುದೆಲ್ಲಾ ಹಿಂದೆ ಹೇಳಿ ಆಗಿದೆ..ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ..ನಿಮ್ಮೆಲ್ಲರ ಪ್ರೋತ್ಸಾಹದಿಂದ ಚಿತ್ರ ಗೆಲ್ಲುವ ಭರವಸೆಯಿದೆ ಎನ್ನುತ್ತಾರೆ ನಾಯಕಿ ಕೃಷಿ ತಾಪಂಡ.

ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಸುರೇಖ ರಾಮಪ್ರಸಾದ್ ಹಾಗೂ ಕಲಾವಿದರಾದ ಮಾಸ್ಟರ್ ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ‌ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.
.
ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಪ್ರೀತ್ಸೆ ಪ್ರೀತ್ಸೆ ಗಾಯಕನಿಗೆ ಸರಿಗಮಪ ರೆಡ್ ಕಾರ್ಪೆಟ್; ರಾಜೇಶ್ ಕೃಷ್ಣನ್ ಜಾಗಕ್ಕೆ ಹೇಮಂತ್ ಗ್ರ್ಯಾಂಡ್ ಎಂಟ್ರಿ !

ಗಾಯಕ ಹೇಮಂತ್ ಕುಮಾರ್ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ

ಸರಿಗಮಪ ಸಿಂಗಿಂಗ್ ಅಖಾಡದಿಂದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್
ಹೊರನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ನಿರ್ಣಾಯಕರಾಗಿ ಕೂತಿದ್ದಾರೆ. ಇತ್ತ ರಾಜೇಶ್ ಕೃಷ್ಣನ್ ಬಿಟ್ಟೋದ ಜಾಗವನ್ನ ತುಂಬುವವರು ಯಾರು ? ಕೃಷ್ಣನ್ ಕುರ್ಚಿ ಅಲಂಕರಿಸುವ ಅದೃಷ್ಟ ಹಾಗೂ ಸೌಭಾಗ್ಯ ಯಾರಿಗೆ ದಕ್ಕಲಿದೆ ಎನ್ನುವಂತಹ ಕೂತೂಹಲ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು. ಫೈನಲೀ ಆ ದಶಕದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೀ ಸಂಸ್ಥೆ ಕನ್ನಡದ ಮತ್ತೊಬ್ಬ ಹೆಮ್ಮೆಯ ಗಾಯಕ ಹೇಮಂತ್ ಸುಬ್ರಮಣ್ಯ ಅವರಿಗೆ ರತ್ನಗಂಬಳಿ ಹಾಕಿ ಕರೆತಂದಿದೆ.

ಹೇಮಂತ್ ಸ್ಯಾಂಡಲ್ ವುಡ್ ನ ಸೆನ್ಸೇಷನಲ್ ಸಿಂಗರ್. ಪ್ರೀತ್ಸೆ ಪ್ರೀತ್ಸೆ… ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಅಂತ ಹಾಡುತ್ತಾ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟ ಹೇಮಂತ್
ಇಲ್ಲಿವರೆಗೂ ಹಿಂತಿರುಗಿ ನೋಡಿಯೇ ಇಲ್ಲ. ಮುಂಗಾರು ಮಳೆ, ಬುಲ್ ಬುಲ್, ರಾಜಹುಲಿ, ಐರಾವತ ಸೇರಿದಂತೆ ರಾಬರ್ಟ್ ವರೆಗೂ ಹೇಮಂತ್ ಸಂಗೀತ ‌ಸವಾರಿ ಮುಂದುವರೆದಿದೆ. ಈಗ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭವಾಗಿದೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ.

ಸರಿಗಮಪ ಕನ್ನಡ ಟೆಲಿವಿಷನ್ ಲೋಕದ, ಜೀ ಕನ್ನಡದ ಹೆಮ್ಮೆಯ ಜನಪ್ರಿಯ ಸಿಂಗಿಂಗ್ ಶೋ. ಭರ್ತಿ 17 ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 18 ನೇ ಸೀಸನ್ ಗೆ ಹೊಸ ರೂಪ ಸಿಗಲಿದ್ದು, ಸರಿಗಮಪ
ಚಾಂಪಿಯನ್ ಶಿಪ್ ನ ಅದ್ಧೂರಿಯಾಗಿ ಆರಂಭ ಮಾಡುವ ಪ್ಲ್ಯಾನ್ ಇದೆಯಂತೆ. ಇಲ್ಲಿವರೆಗೂ ಸರಿಗಮಪ ಸ್ವರ ಸಾಮ್ರಾಜ್ಯದಲ್ಲಿ ಕಂಠದ ಜೊತೆ ಸ್ಪರ್ಧೆಗಿಳಿದು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಎಲ್ಲಾ ವಿಜೇತರನ್ನ ಮತ್ತೊಮ್ಮೆ ಸ್ಟೇಜ್ ಗೆ ಕರೆತಂದು ಸರಿಗಮಪ ಚಾಂಪಿಯನ್ ಶಿಪ್ ಆರಂಭ ಮಾಡಲಿದ್ದಾರಂತೆ. ಅಷ್ಟಕ್ಕೂ, ಸೀಸನ್ 18 ಹೊಸ ರೂಪದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಸಿಕ್ಕಿಲ್ಲ‌ ಆದರೆ ಸರಿಗಮಪ ಸಿಂಗಿಂಗ್ ಶೋಗೆ ಕಿಕ್‌ಸ್ಟಾರ್ಟ್ ಸಿಕ್ಕಿದೆ.
ಶೂಟಿಂಗ್ ಸೆಟ್ ನಲ್ಲಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ಜೊತೆ ಸೆಲ್ಫಿ‌ ಕ್ಲಿಕ್ಕಿಸಿಕೊಂಡಿರುವ ಹೇಮಂತ್ ಅವರು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗಾಯಕ ಹೇಮಂತ್ ಅವರು ಹಂಚಿಕೊಂಡಿರುವ ಈ‌ ಪೋಸ್ಟರ್ ನೋಡಿದರೆ ಇದು ಪಕ್ಕಾ ಸರಿಗಮಪ ಸಿಂಗಿಂಗ್ ಶೋ ಅಖಾಡ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತೆ. ಸರಿಗಮಪ ತೀರ್ಪುಗಾರರೊಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಪೋಸ್ಟ್ ಮಾಡಿ
ಶೋ ಟೈಮ್, ಸ್ಪೆಷಲ್, ಸಪ್ರೈಸ್ ಜೊತೆ ‘ಲಾಟ್ಸ್ ಆಫ್ ಲವ್’ ಅಂತ ಬರೆದುಕೊಂಡಿದ್ದಾರೆ. ಅಲ್ಲಿಗೆ, ಸರಿಗಮಪ ಹೊಸ ರೂಪದ‌ ಶೋಗೆ ಹೇಮಂತ್ ತೀರ್ಪುಗಾರರಾಗಿ ಕೂರೋದು ಪಕ್ಕಾ ಅಲ್ಲವೇ. ಎನಿವೇ, ಸೆನ್ಸೇಷನಲ್ ಸಿಂಗರ್ ಹೇಮಂತ್ ನಯಾ ಜರ್ನಿ ಗೆ ಶುಭವಾಗಲಿ. ಜಯವಾಗಲಿ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸುದೀಪ್, ಸಿಎಂ ಭೇಟಿ; ಕೋಟಿಗೊಬ್ಬ 3 ರಿಲೀಸ್ ಫಿಕ್ಸ್- ದಸರಾ ಹಬ್ಬಕ್ಕೆ ಕಿಚ್ಚನ ಆರ್ಭಟ!?

ಕೋಟಿಗೊಬ್ಬ-3 ಚಿತ್ರಕ್ಕಾಗಿ ಕಿಚ್ಚನ ಫ್ಯಾನ್ಸ್ ಎರಡು ವರ್ಷಗಳಿಂದ ಕಾಯ್ತಿದ್ದಾರೆ. ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ರಿಲೀಸ್ ಡೇಟ್ ಮುಂದೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಚಿತ್ರ ರಿಲೀಸ್‌ಗೆ ಮುಹೂರ್ತ ಫಿಕ್ಸಾಗಿದೆ. ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರಲು ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ

ಸುದೀಪ್ ಹಾಗೂ ಸಿಎಂ ಭೇಟಿ ಕೂತೂಹಲ ಕೆರಳಿಸಿತ್ತು. ಏಕಾಏಕಿ ಮುಖ್ಯಮಂತ್ರಿಗಳನ್ನ ಮಾಣಿಕ್ಯ ಅದ್ಯಾಕ್ ಭೇಟಿ ಮಾಡಿದ್ರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಕೂತೂಹಲದ ಪ್ರಶ್ನೆಗೆ ಕಿಚ್ಚನ ಕಡೆಯಿಂದ ಉತ್ತರ ಸಿಕ್ಕಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದರು. ಸಿಎಂ ಏನ್ ಹೇಳಿದ್ದರು? ಕೋಟಿಗೊಬ್ಬ-3 ರಿಲೀಸ್ ತಯ್ಯಾರಿ? ಬಿಗ್‌ಸ್ಕ್ರೀನ್ ನಲ್ಲಿ ಕಿಚ್ಚನ ಅಬ್ಬರ ? ಇದೆಲ್ಲದರ ಚಿಕ್ಕದೊಂದು ರಿಪೋರ್ಟ್ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಕಳೆದ ಮಂಗಳವಾರ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿವರನ್ನ ಭೇಟಿ ಮಾಡಿದ್ದರು. ಆಗಲೇ ಸುದೀಪ್-ಸಿಎಂ ಅಚ್ಚರಿಯ ಭೇಟಿ ಕುರಿತಾಗಿ ಒಂದಿಷ್ಟು ಚರ್ಚೆಗಳ ನಡೆದಿದ್ವು. ಬರ್ತ್ಡೇಗೆ ಮೂರು ದಿನ ಮುನ್ನ ಮಾಣಿಕ್ಯ ಮುಖ್ಯಮಂತ್ರಿಗಳನ್ನ ಮೀಟ್ ಮಾಡಿದ್ದಕ್ಕೆ ಕೂತೂಹಲ ಜಾಸ್ತಿಯಾಗಿತ್ತು. ಹುಟ್ಟು ಹಬ್ಬದ ಆಚರಣೆ ವಿಚಾರ ಇರ‍್ಬೋದಾ ? ಎನ್ನುವ ಕ್ಯೂರಿಯಾಸಿಟಿ ಕೂಡ ಇತ್ತು. ಇದರ ಜೊತೆಗೆ ಚಿತ್ರಮಂದಿರಕ್ಕೆ ೧೦೦ ಪರ್ಸೆಂಟ್ ಅನುಮತಿ ಕೊಡಿಸುವಂತೆ ಮನವಿ ಮಾಡಿಕೊಳ್ಳುವುದಕ್ಕೇನಾದರೂ ಮೀಟ್ ಮಾಡಿರಬಹುದಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇತ್ತು. ಆ ಕ್ಯೂರಿಯಾಸಿಟಿಗೆ ಸಿಎಂ ಟ್ವೀಟ್ ನಿಂದ ಕೊಂಚ ಬ್ರೇಕ್ ಬಿದ್ದಿತ್ತು.

ಇವತ್ತು ನಮ್ಮ ಕಚೇರಿಯಲ್ಲಿ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಭೇಟಿ ಮಾಡಿದರು. ಉಭಯ ಕುಶಲೋಪರಿ ಜೊತೆಗೆ ಮನರಂಜನಾ ಕ್ಷೇತ್ರದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ವಿ. ಹೀಗಂತ ಟ್ವೀಟ್ ಮೂಲಕ ತಿಳಿಸಿದ ಸಿಎಂ ಸಾಹೇಬ್ರು, ಸುದೀಪ್ ಸಿನಿಮಾ ಜರ್ನಿಗೆ ಮನದುಂಬಿ ಹಾರೈಸಿದ್ದರು. ನಟ ಸುದೀಪ್ ಕೂಡ ಭೇಟಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು. ಇದಾಗಿ ಮೂರು ದಿನಕ್ಕೆ ಅಭಿನಯ ಚಕ್ರವರ್ತಿ ೫೦ನೇ ವಸಂತಕ್ಕೆ ಕಾಲಿಟ್ಟರು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮಾತ್ರವಲ್ಲ ಲಕ್ಷಾಂತರ ಸಿನಿಮಾ ಭಕ್ತರಿಂದ ಮಾಣಿಕ್ಯನಿಗೆ ಶುಭಾಷಯಗಳ ಮಹಾಪೂರ ಹರಿದುಬಂತು. ವಿಕ್ರಾಂತ್ ರೋಣ' ಫಿಲ್ಮ್ ಟೀಮ್ಡೆಡ್ ಆಂಥಮ್’ ಸಾಂಗ್ ಝಲಕ್ ತೋರಿಸಿದರು. ಕೋಟಿಗೊಬ್ಬ-3 ಚಿತ್ರತಂಡದವರು ಸಿನಿಮಾ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿ ಸುದೀಪಿಯನಸ್‌ಗೆ ಸಪ್ರೈಸ್ ಕೊಟ್ಟರು.

ಯಸ್, ಕೋಟಿಗೊಬ್ಬ-3 ಚಿತ್ರಕ್ಕಾಗಿ ಸುದೀಪಿಯನ್ಸ್ ಭರ್ತಿ ಎರಡು ವರ್ಷಗಳಿಂದ ಕಾತುರದಿಂದ ಕಾಯ್ತಿದ್ದಾರೆ. ಬಿಗ್‌ಸ್ಕ್ರೀನ್‌ನಲ್ಲಿ ಸತ್ಯ ಹಾಗೂ ಶಿವನ ಅವತಾರ ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಎರೆಡೆರಡು ಭಾರಿ ಕೊರೊನಾ-ಕ್ವಾರಂಟೈನ್-ಲಾಕ್‌ಡೌನ್ ಆಗಿದ್ದರಿಂದ ಕೋಟಿಗೊಬ್ಬ-3 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಬಹುಕೋಟಿ ವೆಚ್ಚದ ಕೋಟಿಗೊಬ್ಬ-3 ಬಿಡುಗಡೆಗೆ ದಿವ್ಯ ಮುಹೂರ್ತ ಫಿಕ್ಸಾಗಿದೆ. ನಾಡಹಬ್ಬ ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರುವುದಕ್ಕೆ ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ. ಹೀಗಾಗಿಯೇ, ಮಾಣಿಕ್ಯನ ಬರ್ತ್ಡೇಗೆ ಮ್ಯಾಸೀವ್ ಪೋಸ್ಟರ್ ಬಿಟ್ಟು ನಾಡಹಬ್ಬಕ್ಕೆ ಕೋಟಿಗೊಬ್ಬ-3 ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ. ಡೇಟ್ ಪಕ್ಕಾ ಫಿಕ್ಸ್ ಮಾಡಿದ್ದಾರೆ ಅಂದರೆ, ದಸರಾ ಹಬ್ಬ ಬರುವಷ್ಟರಲ್ಲಿ ಥಿಯೇಟರ್‌ಗೆ 100 ಪರ್ಸೆಂಟ್ ಅನುಮತಿ ಸಿಗ್ಬೋದು ಎನ್ನುವ ಆಶ್ವಾಸನೆಯನ್ನೇನಾದರೂ ಸಿಎಂ ಕೊಟ್ಟರಾ? ಕಿಚ್ಚನ ಭೇಟಿ ಟೈಮ್‌ನಲ್ಲಿ 100 ಪರ್ಸೆಂಟ್ ವಿಚಾರ ಪ್ರಸ್ತಾಪ ಆಯ್ತಾ? ಗೊತ್ತಿಲ್ಲ.

ಬರೋಬ್ಬರಿ 70 ಕೋಟಿ ವೆಚ್ಚದ ಕೋಟಿಗೊಬ್ಬ 3ಗೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಮಡೋನ್ನಾ ಸೆಬಾಸ್ಟಿನ್ ಕಿಚ್ಚನಿಗೆ ಜೋಡಿಯಾಗಿದ್ದು, ಫಸ್ಟ್ ಟೈಮ್ ಕನ್ನಡ ಸಿನಿಮಾದಲ್ಲಿ ಮಿಂಚಿದ್ದಾರೆ. ಶ್ರದ್ದಾ ದಾಸ್, ಅಫ್ತಾಬ್ ಶಿವದಾಸಿನಿ, ರವಿಶಂಕರ್, ನವಾಬ್ ಶಾ, ಡ್ಯಾನಿಶ್ ಸೇಠ್ ಅಖ್ತರ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸ್ಯಾಟ್‌ಲೈಟ್-ಡಿಜಿಟಲ್ ರೈಟ್ಸ್-ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿ ಒಟ್ಟು 27 ಕೋಟಿಗೆ ಸೇಲ್ ಆಗಿದೆ. ರಿಲೀಸ್‌ಗೂ ಮೊದಲೇ ಭರ್ಜರಿಯಾಗಿ ಕಮಾಯಿ ಮಾಡಿರುವ ಕೋಟಿಗೊಬ್ಬ-3 ಚಿತ್ರದ ಭರಾಟೆ ದಸರಾ ಹಬ್ಬದಂದು ಶುರುವಾಗಲಿದೆ. ಈ ಭಾರಿಯಾದರೂ ಫಿಕ್ಸಾದ ಡೇಟ್‌ಗೆ ಕೋಟಿಗೊಬ್ಬ ಕಣಕ್ಕಿಳಿಯಲಿ, ಈ ಚೀನಿ ಕ್ರಿಮಿ ಕೊರೊನಾ ಮೂರನೇ ಅಟ್ಟಹಾಸ ಶುರುವಿಟ್ಟುಕೊಳ್ಳದಿರಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಧನ್ವೀರ್‌ ಬರ್ತ್‌ಡೇಗೆ ಬೈ ಟು ಲವ್‌ ಚಿತ್ರತಂಡ ಸ್ಪೆಷಲ್ ಸ‌ರ್ಪೈಸ್‌!

ನಿರ್ದೇಶಕ ಹರಿ ಸಂತೋಷ್‌ ಅವರ ‘ಬೈ ಟು ಲವ್‌’ ಸಿನಿಮಾದ ಮಾತಿನ ಭಾಗ ಮುಗಿದಿದೆ. ‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಇತ್ತೀಚೆಗೆ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದು ಗೊತ್ತೇ ಇದೆ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋವೊಂದು ಎಲ್ಲೆಡೆ ವೈರಲ್‌ ಆಗಿತ್ತು. ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಅವರ ಹುಟ್ಟುಹಬ್ಬ. ಅಂದು ಸಾಕಷ್ಟು ವಿಶೇಷತೆಗಳಿವೆ. ಚಿತ್ರತಂಡ ಧನ್ವೀರ್‌ಗಾಗಿಯೇ ಒಂದು ಸ್ಪೆಷಲ್‌ ಗಿಫ್ಟ್‌ ಕೊಡಲು ಸಜ್ಜಾಗಿದೆ. ಆದರೆ, ಅದು ಏನೆಂಬುದನ್ನು ಈಗಲೇ ಗುಟ್ಟು ಬಿಟ್ಟುಕೊಡಲು ಚಿತ್ರತಂಡ ಸಿದ್ಧವಿಲ್ಲ.
ಧನ್ವೀರ್‌ ಹುಟ್ಟು ಹಬ್ಬಕ್ಕೆ ಸರ್ಪೈಸ್‌ ನೀಡುವ ಸಲುವಾಗಿ ಚಿತ್ರತಂಡ ಕುತೂಹಲಕಾರಿ ಕಂಟೆಂಟ್‌ ಸಿದ್ಧಪಡಿಸಿದ್ದು, ಅದನ್ನು ಹುಟ್ಟುಹಬ್ಬದಂದೇ ರಿವೀಲ್‌ ಮಾಡುವ ಯೋಜನೆ ಹಾಕಿಕೊಂಡಿದೆ.

ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ ಅವರಿಗಿಲ್ಲಿ ಲವರ್‌ ಬಾಯ್‌ ಪಾತ್ರ. ಅವರ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದವರಿಗೆ ಫ್ಯಾಮಿಲಿ ಮ್ಯಾನ್‌ ಅಂತಾನು ಅನಿಸದೇ ಇರದು. ಈಗ ಚಿತ್ರತಂಡ ಹೊಸ ಕಂಟೆಂಟ್‌ ಹರಿಬಿಡುವ ಯೋಜನೆಯಲ್ಲಿರುವುದರಿಂದ ಸದ್ಯದ ಮಟ್ಟಿಗೆ ನಿರೀಕ್ಷೆಯನ್ನಂತೂ ಹುಟ್ಟಿಸಿದೆ.
ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಲಾಗಿದೆ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ ನಿರ್ಮಾಣ ಮಾಡಿದೆ. ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಇದು ಎರಡನೇ ಚಿತ್ರ. ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

‘ಈ ಸಿನಿಮಾ ಶುರುವಾಗಲು ಮುಖ್ಯ ಕಾರಣ ಕಥೆ. ಒನ್‌ಲೈನ್‌ ಕೇಳಿದ ನಿರ್ಮಾಪಕರು, ಒಂದೇ ಸಿಟ್ಟಿಂಗ್‌ನಲ್ಲಿ ಪೂರ್ತಿ ಕಥೆ ಕೇಳಿ ಓಕೆ ಮಾಡಿದರು. ಆನಂತರವಷ್ಟೇ ತಾರಾಗಣ, ತಾಂತ್ರಿಕವರ್ಗ ಅಂತಿಮವಾಗಿದ್ದು. ಈಗ ಮಾತಿನ ಭಾಗವನ್ನು ಮುಗಿಸಿದ್ದೇವೆ. ಎಲ್ಲವೂ ಅಂದುಕೊಂಡದ್ದಕ್ಕಿಂತ ನೀಟಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರದಿಂದ ಶೂಟಿಂಗ್‌ ಬೇಗ ಮುಗಿಸಲು ಸಾಧ್ಯವಾಯ್ತು. ಈ ಚಿತ್ರದಲ್ಲಿ ಧನ್ವೀರ್‌-ಶ್ರೀಲೀಲಾ ಕಾಂಬಿನೇಷನ್‌ ಅದ್ಭುತವಾಗಿ ಮೂಡಿ ಬಂದಿದೆ.

ಅದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. 8 ತಿಂಗಳ ಮಗು ಕೂಡ ಪ್ರಮುಖ ಪಾತ್ರಧಾರಿ. ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಇದು ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಿದ ಕಥೆ. ಹೀಗಾಗಿ ಎಲ್ಲರಿಗೂ ಕನೆಕ್ಟ್‌ ಆಗಲಿದೆ ಎಂಬುದು ನಿರ್ದೇಶಕ ಹರಿ ಸಂತೋಷ್‌ ಮಾತು.

Categories
ಸಿನಿ ಸುದ್ದಿ

ಪ್ರಜ್ವಲ್‌ ಸಿನ್ಮಾಗೆ ಬಾಲಿವುಡ್‌ ನಟ ಗೋವಿಂದ ಬರ್ತಾರ? ಹೆಸರಿಡದ ಸಿನಿಮಾದಲ್ಲಿ ನಟಿಸುವ ಸುದ್ದಿ ಜೋರು ಗುರು


ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ಭಾರತೀಯ ಚಿತ್ರರಂಗದ ಹಲವು ದಿಗ್ಗಜರು ನಟಿಸಿದ್ದಾರೆ. ನಟಿಸುತ್ತಲೂ ಇದ್ದಾರೆ. ಬಾಲಿವುಡ್‌ ನಟ, ನಟಿಯರೂ ಇಲ್ಲೊಮ್ಮೆ ಇಣುಕಿ ನೋಡಿದ್ದು ಗೊತ್ತೇ ಇದೆ. ಅಮಿತಾಬ್‌ ಬಚ್ಚನ್‌, ಜಾಕಿಶಾರ್ಫ್‌, ಸಂಜಯ್‌ ದತ್‌, ಜೂಹಿ ಚಾವ್ಲಾ, ಶಿಲ್ಪಾಶೆಟ್ಟಿ, ರವೀನಾ ಟಂಡನ್‌, ನಾನಾ ಪಾಟೇಕರ್‌ ಸೇರಿದಂತೆ ಹಲವು ನಟ ನಟಿಯರು ಈಗಾಗಲೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಲಿಗೆ ಮತ್ತೊಬ್ಬ ಬಾಲಿವುಡ್‌ ನಟನ ಆಗಮನವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ!

ಹೌದು, ಕನ್ನಡದ ಸಿನಿಮಾವೊಂದರಲ್ಲಿ ಬಾಲಿವುಡ್‌ ನಟ ಗೋವಿಂದ ಅವರು ಎಂಟ್ರಿಯಾಗಲಿದ್ದಾರೆ ಅನ್ನೋ ಸುದ್ದಿ ಇದೆ. ಹಾಗೆ ನೋಡಿದರೆ, ಬಹಳ ದಿನಗಳಿಂದಲೂ ಗೋವಿಂದ ಅವರು ಬರ್ತಾರೆ ಎಂಬ ಸುದ್ದಿ ಇತ್ತು. ಆದರೆ, ಯಾವಾಗ, ಯಾವ ಸಿನಿಮಾ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸಲು ಬರುತ್ತಾರೆ ಎಂಬ ಸುದ್ದಿ ಹಬ್ಬಿರುವುದಂತೂ ನಿಜ.
ಗೋವಿಂದ ಅವರು, ಪ್ರಜ್ವಲ್ ದೇವರಾಜ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ. ಸ್ಕ್ರಿಪ್ಟ್ ಕೇಳಿ ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಸದ್ಯ ಸುದ್ದಿಯಂತೂ ಹರಿದಾಡುತ್ತಿದೆ. ಗೋವಿಂದ ಬಂದ ಮೇಲಷ್ಟೇ ಅದು ಪಕ್ಕಾ ಆಗಲಿದೆ. ಇನ್ನು, ಪ್ರಜ್ವಲ್‌ ದೇವರಾಜ್‌ ಅವರು “ಮಾಫಿಯಾ” ಸಿನಿಮಾ ಒಪ್ಪಿದ್ದಾರೆ. ಇನ್ನು, “ವೀರಂ” ಕೂಡ ಮುಗಿಯುವ ಹಂತ ತಲುಪಿದೆ.

Categories
ಸಿನಿ ಸುದ್ದಿ

ಎವರ್ ಗ್ರೀನ್ ಹೀರೋ ಹುಟ್ಟು ಹಬ್ಬ; ವಿಜಯ್ ಸಂಕೇಶ್ವರ್ ಬಯೋಪಿಕ್‌ನಲ್ಲಿ ಅನಂತ್‌ನಾಗ್‌ ಎಂಟ್ರಿ!

ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ ರಿಲೀಸ್‌ ಮಾಡಿದೆ. ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಅನಂತ್‌ನಾಗ್‌ ಧಗಧಗಿಸಲಿದ್ದಾರೆ. ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದು ಲುಕ್ ಕೊಟ್ಟಿರುವ ಅವರ ಪೋಸ್ಟರ್ ಮತ್ತು ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಕನ್ನಡ ಚಿತ್ರರಂಗ ಕಂಡ ಅದ್ಭುತ- ಅಮೋಘ ಹಾಗೂ ಅಪರೂಪದ ನಟ ಅನಂತ್ ನಾಗ್. ‌ಸ್ಯಾಂಡಲ್‌ವುಡ್‌ನ ಚಿರಯುವಕ ಅಂತಾನೇ ಕರೆಸಿಕೊಳ್ಳುವ ಅನಂತ್‌ನಾಗ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಚಾರ್ಮಿಂಗ್ ಅಂಡ್ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಸೆಲಬ್ರಿಟಿಗಳು ಮಾತ್ರವಲ್ಲ, ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ವಿಷಸ್ ತಿಳಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಅಂದರೆ “ವಿಜಯಾನಂದ” ಸಿನಿಮಾ ಟೀಮ್ ಕೊಟ್ಟಿರುವ ಸಪ್ರೈಸ್ ಗಿಫ್ಟ್!

ಹೌದು, ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ನ ಉಡುಗೊರೆಯಾಗಿ ನೀಡಿದೆ. ಈ ಮೂಲಕ ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್‌ ಧಗಧಗಿಸೋದು ಪಕ್ಕಾ‌ ಆಗಿದೆ.‌ ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದುಕೊಂಡು ನಟ ಅನಂತ್‌ನಾಗ್‌ ಲುಕ್ ಕೊಟ್ಟಿರುವ ಪೋಸ್ಟರ್ ರಿಲೀಸ್ ಆಗಿದೆ. ಇವತ್ತೇ ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಡಾ.‌ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರಕ್ಕೆ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. “ಟ್ರಂಕ್” ಸಿನಿಮಾ ನಿರ್ದೇಶಿಸಿ ಸೈ‌ ಎನಿಸಿಕೊಂಡಿದ್ದ ರಿಷಿಕಾ, ಎರಡನೇ ಚಿತ್ರದಲ್ಲೇ ಮಹಾ ಸಾಹಸಕ್ಕೆ ಕೈ ಹಾಕಿದ್ದಾರೆ. “ಟ್ರಂಕ್” ಹೀರೋ ನಿಹಾಲ್, ಡಾ.‌ವಿಜಯ್ ಸಂಕೇಶ್ವರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಮಹಾ ಸಿನಿಮಾಗೆ ಮೇರು ನಟ ಅನಂತ್ ನಾಗ್ ಸೇರ್ಪಡೆಗೊಂಡಿರುವುದು ವಿಶೇಷ ಹಾಗೂ‌ ಹೆಮ್ಮೆಯ ವಿಚಾರ.

ಒಂದೇ ಒಂದು ಟ್ರಕ್‌ನಿಂದ ಶುರುವಾದ ಡಾ. ವಿಜಯ್ ಸಂಕೇಶ್ವರ್ ಅವರ ಜರ್ನಿ ಕೊನೆಗೆ ಭಾರತದ ಅತಿದೊಡ್ಡ ಪ್ಲೀಟ್ ಮಾಲೀಕರಾಗಿ ಬೆಳೆದು ನಿಲ್ಲುವಂತೆ ಮಾಡಿತು. ಪತ್ರಿಕೆ ಮೂಲಕ ದೊಡ್ಡ ಸಾಧನೆ ಮಾಡಿದರು. ಮಾಧ್ಯಮ ರಂಗದಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಬದುಕಲ್ಲಿ ಏಳು ಬೀಳು‌ ಕಂಡು ಮುಗಿಲೆತ್ತರಕ್ಕೆ‌ ಬೆಳೆದು ನಿಂತಿರುವ ಡಾ. ವಿಜಯ್ ಸಂಕೇಶ್ವರ್ ಅವರ ಜೀವನವನ್ನ ರಿಷಿಕಾ ಹಾಗೂ ನಿಹಾಲ್ ಬೆಳ್ಳಿತೆರೆ ಮೇಲೆ ತರಲಿದ್ದಾರೆ. ಇವರ ಮಹಾಸಾಹಸಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರೊಮೋಟರ್ ಆದ ಆನಂದ್ ಸಂಕೇಶ್ವರ್ ಕೈ ಜೋಡಿಸಿದ್ದಾರೆ.

ವಿಆರ್‌ಎಲ್ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ‘ವಿಜಯಾನಂದ’ ಸಿನಿಮಾ ಅದ್ದೂರಿಯಾಗಿ ಮೂಡಿ ಬರಲಿದೆ. ಅಪ್ಪನ‌ ಸಿನಿಮಾಗೆ ಮಗನೇ ಬಂಡವಾಳ ಹೂಡುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರ ತಯ್ಯಾರಿಗೆ ಪ್ಲ್ಯಾನ್ ಆಗಿದೆ. ತೆಲುಗು- ಮಲೆಯಾಳಂ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ‘ವಿಜಯಾನಂದ’ ಬಯೋಪಿಕ್ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ಪಾತ್ರವರ್ಗದ ಆಯ್ಕೆ ಜೊತೆ ಜೊತೆಗೆ ಚಿತ್ರೀಕರಣ ನಡೆಯುತ್ತಿದೆ. ಅತೀ ದೊಡ್ಡ ತಾರಾಬಳಗ ಈ‌ ಸಿನಿಮಾದಲ್ಲಿದ್ದು ಶೀಘ್ರದಲ್ಲೇ ಕಾಸ್ಟ್ ಅಂಡ್ ಕ್ರೂ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮ.


ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಾಲಿ-ಚಿಟ್ಟೆ ಮತ್ತೆ ಜೊತೆಯಾದ್ರು ಹಚ್ರಿ ಪಟಾಕಿ; ಹೆಡ್‌ಬುಷ್ ಆಡಲಿದೆ ಟಗರು ಜೋಡಿ!

“ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್‌ ಧನಂಜಯ್‌ ಹಾಗೂ ಚಿಟ್ಟೆ ಅಲಿಯಾಸ್‌ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್‌ಬುಷ್‌”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.

ಡಾಲಿ-ಚಿಟ್ಟೆ ಫ್ಯಾನ್ಸ್ ಕುಣಿದು ಕುಪ್ಪಳಿಸುವ, ಪಟಾಕಿ ಹಚ್ಚಿ ಕೇಕೆ ಹೊಡೆದು ಸಂಭ್ರಮಿಸುವ ಸುದ್ದಿ ಇದು. ಇಂತಹದ್ದೊಂದು ಬಡಾ ಖಬರ್‌ನ ಕೇಳೋದಕ್ಕಾಗಿಯೇ, ಇಂತಹದ್ದೊಂದು ಕ್ಷಣಕ್ಕಾಗಿಯೇ ಇವರಿಬ್ಬರ ಫ್ಯಾನ್ಸ್ ಕಾತುರರಾಗಿ ಕಾಯ್ತಿದ್ದರು. ಕೊನೆಗೆ ಆ ಕೌತುಕದ ಕ್ಷಣಕ್ಕೆ ಬಿಗ್ ಬ್ರೇಕ್ ಬಿದ್ದಿದೆ. “ಟಗರು” ನಂತರ ಡೆಡ್ಲಿ ಕಾಂಬೋ ಮತ್ತೆ ಜೊತೆಯಾಗಿದೆ. ಅದೇ ಈ ಹೊತ್ತಿನ ಸುದ್ದಿ.

“ಟಗರು” ಸಿನಿಮಾ ಖ್ಯಾತಿಯ ಡಾಲಿ ಮತ್ತು ಚಿಟ್ಟೆನಾ ಒಟ್ಟಿಗೆ ನೋಡಬೇಕು ಎನ್ನುವುದು ಇವರಿಬ್ಬರ ಅಭಿಮಾನಿಗಳ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಫ್ಯಾನ್ಸ್ ಎದುರು ನೋಡ್ತಿದ್ದರು. ಫೈನಲೀ, ಆ ದಿವ್ಯ ಘಳಿಗೆ ಕೂಡಿ ಬಂದಿದೆ. “ಟಗರು” ಅಖಾಡದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಧಗಧಗಿಸಿ, ಬೆಳ್ಳಿತೆರೆ ಅಂಗಳದಲ್ಲಿ ಧೂಳೆಬ್ಬಿಸಿದ ಡಾಲಿ-ಚಿಟ್ಟೆ ಜೋಡಿ ಈಗ ಪುನಃ “ಹೆಡ್‌ಬುಷ್’ಗಾಗಿ ಒಂದಾಗಿದೆ. “ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್‌ ಧನಂಜಯ್‌ ಹಾಗೂ ಚಿಟ್ಟೆ ಅಲಿಯಾಸ್‌ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್‌ಬುಷ್‌”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.

`ಹೆಡ್‌ಬುಷ್’ ಟೀಮ್‌ಗೆ ಲೂಸ್ ಮಾದ ಯೋಗಿ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದರು. ಇದೀಗ, ಚಿಟ್ಟೆ ಸರದಿ. ಗೆಳೆಯ ಕಮ್ ಕೋಸ್ಟಾರ್ ಡಾಲಿಯ ಬಹುನಿರೀಕ್ಷಿತ ಸಿನಿಮಾಗೆ ಸೇರಿಕೊಂಡಿರುವ ಕುರಿತಾಗಿ ಖಾಸಗಿ ಪತ್ರಿಕೆಗೆ ಚಿಟ್ಟೆ ಅಲಿಯಾಸ್ ವಸಿಷ್ಟ ಎನ್.ಸಿಂಹ ಸಂದರ್ಶನ ನೀಡಿದ್ದಾರೆ. ಡಾಲಿ-ಚಿಟ್ಟೆ ಜುಗಲ್‌ಬಂಧಿನಾ ಬಿಗ್‌ಸ್ಕ್ರೀನ್ ಮೇಲೆ ಮತ್ತೆ ನೋಡೋದಕ್ಕೆ ಫ್ಯಾನ್ಸ್ ಬಯಸಿದ್ದರು. ಯಾವಾಗ ಒಂದಾಗ್ತೀರಿ ಅಂತ ಕೇಳ್ತಾನೆ ಇದ್ದರು. ಒಂದೊಳ್ಳೆ ಸ್ಕ್ರಿಪ್ಟ್‌ಗಾಗಿ ನಾವಿಬ್ಬರು ಕಾಯ್ತಿದ್ದೆವು, ಈಗ ಸ್ಕ್ರಿಪ್ಟ್‌ ಜೊತೆ ಒಂದೊಳ್ಳೆ ಟೀಮ್ ಕೂಡ ಸಿಕ್ಕಿದೆ ಎಂದಿದ್ದಾರೆ. ಈಗಾಗಲೇ, ಹೆಡ್‌ಬುಷ್ ಅಖಾಡಕ್ಕೆ ಧುಮ್ಕಿ ಒಂದೆರಡು ಸೀನ್‌ಗಳಲ್ಲಿ ಖದರ್ ತೋರಿಸಿದ್ದಾರೆ.

ಹೆಡ್‌ಬುಷ್' ಡಾಲಿ ಧನಂಜಯ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಭೂಗತ ದೊರೆ ಎಂ.ಪಿ.ಜಯರಾಜ್‌ರ ಜೀವನಾಧರಿತ ಚಿತ್ರ ಇದಾಗಿದ್ದು, ಡಾನ್ ಪಾತ್ರದಲ್ಲಿ ಡಾಲಿ ಅಟ್ಟಹಾಸ ಮೆರೆಯಲಿದ್ದಾರೆ. ಧನಂಜಯ್ ಜೊತೆಗೆ ಹೆಡ್‌ಬುಷ್ ಟೀಮ್ ಸೇರಿಕೊಂಡಿರುವ ಲೂಸ್ ಮಾದ ಯೋಗಿ ಹಾಗೂ ಚಿಟ್ಟೆ ವಸಿಷ್ಟ ಸಿಂಹರದ್ದು ಯಾವ್ ರೀತಿಯ ಪಾತ್ರ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಡಾನ್ ಡಾಲಿ ಜೊತೆ ಚಿಟ್ಟೆ ಹಾಗೂ ಯೋಗಿ ಕೈ ಜೋಡಿಸ್ತಾರಾ ಅಥವಾ ಭೂಗತ ಪಾತಕಿ ವಿರುದ್ಧ ತಿರುಗಿ ಬೀಳ್ತಾರಾ ಎನ್ನುವ ಕೂತೂಹಲ ಸದ್ಯಕ್ಕೆ ಗುಟ್ಟಾಗಿದೆ.ಹೆಡ್‌ಬುಷ್’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಡಾಲಿ ಅಂಡ್ ಯೋಗಿ ಕಾಂಬಿನೇಷನ್ ದೃಶ್ಯಗಳನ್ನ ಸೆರೆಹಿಡಿಯೋದ್ರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಭೂಗತ ಜಗತ್ತಿನ ದೊರೆಯ ಬಯೋಪಿಕ್ ಆದ ಹೆಡ್‌ಬುಷ್’ಗೆ ಅಗ್ನಿಶ್ರೀಧರ್ ಕಥೆ-ಚಿತ್ರಕಥೆ ರಚಿಸಿದ್ದಾರೆ. ಯುವ ಪ್ರತಿಭೆ ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಆ ದಿನಗಳು ಚಿತ್ರಕ್ಕೆ ಕಥೆ ಕೆತ್ತಿಕೊಟ್ಟು ಸಿನಿರಸಿಕರನ್ನ ಮಾತ್ರವಲ್ಲದೇ ಬಿಗ್‌ಸ್ಕ್ರೀನೇ ಬೆಚ್ಚಿಬೀಳುವಂತೆ ಮಾಡಿದ ನಿರ್ದೇಶಕ ಅಗ್ನಿ ಶ್ರೀಧರ್,ಹೆಡ್‌ಬುಷ್’ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಶೇಕ್ ಆಗುವಂತಹ ಕಥೆ ರಚಿಸ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಟಗರು ಜೋಡಿ ಒಂದಾಗಿರುವುದಕ್ಕೆ ಹೆಡ್‌ಬುಷ್’ ಮೇಲೆ ಕೂತೂಹಲ ಜಾಸ್ತಿಯಾಗ್ತಿದೆ. ಮಲ್ಟಿಲಾಂಗ್ವೇಜ್‌ನಲ್ಲಿ ತೆರೆಗೆ ತರಬೇಕು, ಎರಡು ಚಾಪ್ಟರ್‌ಗಳಾಗಿ ನಿರ್ಮಾಣ ಮಾಡ್ಬೇಕು ಎನ್ನುವ ಪ್ಲ್ಯಾನ್ ಚಿತ್ರತಂಡದ್ದು. ಅದೇ ಪ್ರಕಾರವಾಗಿಹೆಡ್‌ಬುಷ್’ ಟೀಮ್ ಮುನ್ನುಗುತ್ತಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಅತೀ ದೊಡ್ಡ ತಾರಾಬಳಗವಿರುವ ಹೆಡ್‌ಬುಷ್‌ಗೆ ಸೌತ್ ಸುಂದರಿ ಪಾಯಲ್ ರಜಪೂತ್ ಜೊತೆಯಾಗುತ್ತಿದ್ದಾರೆ. ಡಾನ್ ಡಾಲಿ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಡ್ಡಿದೋಸ್ತಿಗಳ ಗ್ರ್ಯಾಂಡ್ ದರ್ಶನ ; ಸೆಪ್ಟೆಂಬರ್ 17 ರಂದು ಕಡ್ಡಿ ಅಲ್ಲಾಡ್‌ಸ್ತಾರೆ!

ಕನ್ನಡದಲ್ಲಿ ಹೊಸ ಬಗೆಯ ಶೀರ್ಷಿಕೆ ಹೊತ್ತ ಚಿತ್ರಗಳಿಗೇನು ಲೆಕ್ಕವಿಲ್ಲ. ವಿಭಿನ್ನ ಮತ್ತು ವಿಶೇಷ ಎನಿಸುವ ಶೀರ್ಷಿಕೆಯ ಚಿತ್ರಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಕೂಡ ಸೇರಿದೆ. ಹೌದು ಈಗಾಗಲೇ ಈ ಚಿತ್ರ ಒಂದಷ್ಟು ಜೋರು ಸುದ್ದಿ ಮಾಡಿದ್ದು, ಸಿನಿಮಾ ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಚಿತ್ರ ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಿರ್ಮಾಣದಲ್ಲಿ ತಯಾರಾಗಿದೆ. ಇನ್ನು, ಆಸ್ಕರ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಇದೇ ಮೊದಲ ಸಲ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 17 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗುತ್ತಿರುವ ಈ ಚಿತ್ರ ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲಿದೆ ಎಂಬುದು ಚಿತ್ರತಂಡದ ನಂಬಿಕೆ. ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಇಬ್ಬರು ಸ್ನೇಹಿತರ ನಡುವೆ ಪ್ರವೇಶಿಸುವ ಒಬ್ಬ ಹುಡುಗಿ ಮತ್ತು ಆಕೆಯೂ ಸೇರಿದಂತೆ ಆ ಇಬ್ಬರು ಗೆಳೆಯರ ಮಧ್ಯೆ ನಡೆಯುವ ಕಥೆ.

ಆ ಕಥೆಯಲ್ಲಿ ಸುತ್ತಿಕೊಳ್ಳುವ ಸಾಮಾಜಿಕ ವ್ಯವಸ್ಥೆಯ ಹಲವು ರೂಪಗಳು, ಇವುಗಳ ನಡುವೆ ಸಿಲುಕಿ ಹಾಕಿಕೊಂಡ ಸ್ನೇಹ, ಪ್ರೀತಿ ಮತ್ತಿತರ ಭಾವನಾತ್ಮಕ ಸಂಬಂಧಗಳು ಚಿತ್ರದ ಹೈಲೈಟ್. ಚಿತ್ರದ ಕಥೆಗೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರು ಇಲ್ಲಿ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ಬರುವ ಹುಡುಗಿ ಪಾತ್ರದಲ್ಲಿ ಮಲಯಾಳಿ ನಟಿ ಗೌರಿ ನಾಯರ್ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸಿ.ವಿ.ಜಿ, ಗಜರಾಜ್, ಪ್ರತಾಪ್, ಸತೀಶ್ ಗೌಡ, ರಾಜು ನಾಯಕ್, ವರ್ಧನ್ ಬಾಲು, ನವೀನ್ ಮಧುಗಿರಿ, ಮಾಸ್ಟರ್ ರಾಕಿನ್, ಮಹಾಲಕ್ಷ್ಮಿ, ಡಾ.|ಪದ್ಮಾಕ್ಷಿ, ಭಾನು, ಆಸಿಯಾ ಷರೀಫ್, ಮೈಸೂರು ಶೋಭ ಮತ್ತಿತರರು ನಟಿಸಿದ್ದಾರೆ. ಹರ್ಷಿತ ಕಲ್ಲಿಂಗಲ್ ಎಂಬುವ ಮಾದಕ ಚೆಲುವೆ ವಿಶೇಷ ಹಾಡೊಂದಕ್ಕೆ ನರ್ತಿಸಿರುವುದು ಚಿತ್ರದ ಮತ್ತೊಂದು ಹೈಲೈಟ್.

ಅನಂತ್ ಆರ್ಯನ್ ಸಂಗೀತ ನೀಡಿದರೆ, ಗಗನ್ ಕುಮಾರ್ ಛಾಯಾಗ್ರಹಣವಿದೆ. ಮರಿಸ್ವಾಮಿ ಸಂಕಲನವಿದೆ. ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ. ಅಕುಲ್ ನೃತ್ಯ, ಶ್ರೀಧರ್ ಸಿಯಾ, ಕೃಷ್ಣಕುಮಾರ್ ಮತ್ತು ಸತೀಶ್ ಕ್ಯಾತಘಟ್ಟ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಜಯದೇವ್ ಫಿಲಮ್ಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಪೃಥ್ವಿ ಅಂಬರ್‌ ನಮ್‌ ತಾಯಾಣೆ ಅಂತಾರಲ್ಲ ಗುರು! ಶುಗರ್‌ ಲೆಸ್‌ ಚಿತ್ರದ ಹಾಡು ನಾಳೆ ರಿಲೀಸ್

ಚಿತ್ರದ ಎರಡನೇ ಹಾಡು ‘ನಮ್ ತಾಯಾಣೆ’ ವಿಡಿಯೊ ಸಾಂಗ್ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ಸಂಚಿತ್ ಹೆಗ್ಡೆ ಹಾಡಿರುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಶುಗರ್ ಲೆಸ್ ಚಿತ್ರ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದೆ. ಈಗಾಗಲೇ ಈ ಚಿತ್ರದ ಹಾಡೊಂದು ಸಖತ್ ವೈರಲ್ ಆಗಿದೆ. ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ.


ಹೌದು, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ನಿರ್ಮಾಪಕ ಶಶಿಧರ ಕೆ.ಎಂ ಅಚರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಒಂದೊಳ್ಳೆಯ ಕಂಟೆಂಟ್ ಚಿತ್ರ ಮಾಡಿದ್ದಾರೆ.

ಆ ಚಿತ್ರದ ಎರಡನೇ ಹಾಡು ‘ನಮ್ ತಾಯಾಣೆ’ ವಿಡಿಯೊ ಸಾಂಗ್ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ಸಂಚಿತ್ ಹೆಗ್ಡೆ ಹಾಡಿರುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಚಾಮುಂಡೇಶ್ವರಿ ದರ್ಶನ ಪಡೆದ ಕಿಚ್ಚ; ಮಾಣಿಕ್ಯನ ದರ್ಶನಕ್ಕೆ ಅಭಿಮಾನಿ ಸಾಗರ!


ಸ್ಯಾಂಡಲ್‌ವುಡ್‌ ಬಾದ್ ಷಾ ಕಿಚ್ಚ ಸುದೀಪ್ ತಮ್ಮ 50 ನೇ ವರ್ಷದ ಬರ್ತ್ ಡೇನಾ ಸಂಭ್ರಮ ಸಡಗರದಿಂದ ಆಚರಣೆ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಮರುದಿನ ಅಭಿನಯ ಚಕ್ರವರ್ತಿ ಟೆಂಪಲ್ ರನ್ ಶುರು ಮಾಡಿದ್ದಾರೆ.

ಶುಕ್ರವಾರ ಬೆಳ್ಳಂ ಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ಕೊಟ್ಟಿದ್ದ ಕಿಚ್ಚ, ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲಿಂದ ಹೊರಟು ಚನ್ನಪಟ್ಟಣದ ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ನೆರವೇರಿಸಿದ್ದಾರೆ.

ಕೋಟಿಗೊಬ್ಬ ಕಿಚ್ಚನ ಭೇಟಿಯ ಹಿನ್ನಲೆ ಅಭಿಮಾನಿಗಳ ದಂಡೇ ಸೇರಿತ್ತು. ಕಿಚ್ಚ.. ಕಿಚ್ಚ.. ಎಂತ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದರು. ಮಾಣಿಕ್ಯನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ಮುಗಿಬಿದ್ದರು.

error: Content is protected !!