ಪ್ರೀತ್ಸೆ ಪ್ರೀತ್ಸೆ ಗಾಯಕನಿಗೆ ಸರಿಗಮಪ ರೆಡ್ ಕಾರ್ಪೆಟ್; ರಾಜೇಶ್ ಕೃಷ್ಣನ್ ಜಾಗಕ್ಕೆ ಹೇಮಂತ್ ಗ್ರ್ಯಾಂಡ್ ಎಂಟ್ರಿ !

ಗಾಯಕ ಹೇಮಂತ್ ಕುಮಾರ್ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ

ಸರಿಗಮಪ ಸಿಂಗಿಂಗ್ ಅಖಾಡದಿಂದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್
ಹೊರನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ನಿರ್ಣಾಯಕರಾಗಿ ಕೂತಿದ್ದಾರೆ. ಇತ್ತ ರಾಜೇಶ್ ಕೃಷ್ಣನ್ ಬಿಟ್ಟೋದ ಜಾಗವನ್ನ ತುಂಬುವವರು ಯಾರು ? ಕೃಷ್ಣನ್ ಕುರ್ಚಿ ಅಲಂಕರಿಸುವ ಅದೃಷ್ಟ ಹಾಗೂ ಸೌಭಾಗ್ಯ ಯಾರಿಗೆ ದಕ್ಕಲಿದೆ ಎನ್ನುವಂತಹ ಕೂತೂಹಲ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು. ಫೈನಲೀ ಆ ದಶಕದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೀ ಸಂಸ್ಥೆ ಕನ್ನಡದ ಮತ್ತೊಬ್ಬ ಹೆಮ್ಮೆಯ ಗಾಯಕ ಹೇಮಂತ್ ಸುಬ್ರಮಣ್ಯ ಅವರಿಗೆ ರತ್ನಗಂಬಳಿ ಹಾಕಿ ಕರೆತಂದಿದೆ.

ಹೇಮಂತ್ ಸ್ಯಾಂಡಲ್ ವುಡ್ ನ ಸೆನ್ಸೇಷನಲ್ ಸಿಂಗರ್. ಪ್ರೀತ್ಸೆ ಪ್ರೀತ್ಸೆ… ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಅಂತ ಹಾಡುತ್ತಾ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟ ಹೇಮಂತ್
ಇಲ್ಲಿವರೆಗೂ ಹಿಂತಿರುಗಿ ನೋಡಿಯೇ ಇಲ್ಲ. ಮುಂಗಾರು ಮಳೆ, ಬುಲ್ ಬುಲ್, ರಾಜಹುಲಿ, ಐರಾವತ ಸೇರಿದಂತೆ ರಾಬರ್ಟ್ ವರೆಗೂ ಹೇಮಂತ್ ಸಂಗೀತ ‌ಸವಾರಿ ಮುಂದುವರೆದಿದೆ. ಈಗ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭವಾಗಿದೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ.

ಸರಿಗಮಪ ಕನ್ನಡ ಟೆಲಿವಿಷನ್ ಲೋಕದ, ಜೀ ಕನ್ನಡದ ಹೆಮ್ಮೆಯ ಜನಪ್ರಿಯ ಸಿಂಗಿಂಗ್ ಶೋ. ಭರ್ತಿ 17 ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 18 ನೇ ಸೀಸನ್ ಗೆ ಹೊಸ ರೂಪ ಸಿಗಲಿದ್ದು, ಸರಿಗಮಪ
ಚಾಂಪಿಯನ್ ಶಿಪ್ ನ ಅದ್ಧೂರಿಯಾಗಿ ಆರಂಭ ಮಾಡುವ ಪ್ಲ್ಯಾನ್ ಇದೆಯಂತೆ. ಇಲ್ಲಿವರೆಗೂ ಸರಿಗಮಪ ಸ್ವರ ಸಾಮ್ರಾಜ್ಯದಲ್ಲಿ ಕಂಠದ ಜೊತೆ ಸ್ಪರ್ಧೆಗಿಳಿದು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಎಲ್ಲಾ ವಿಜೇತರನ್ನ ಮತ್ತೊಮ್ಮೆ ಸ್ಟೇಜ್ ಗೆ ಕರೆತಂದು ಸರಿಗಮಪ ಚಾಂಪಿಯನ್ ಶಿಪ್ ಆರಂಭ ಮಾಡಲಿದ್ದಾರಂತೆ. ಅಷ್ಟಕ್ಕೂ, ಸೀಸನ್ 18 ಹೊಸ ರೂಪದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಸಿಕ್ಕಿಲ್ಲ‌ ಆದರೆ ಸರಿಗಮಪ ಸಿಂಗಿಂಗ್ ಶೋಗೆ ಕಿಕ್‌ಸ್ಟಾರ್ಟ್ ಸಿಕ್ಕಿದೆ.
ಶೂಟಿಂಗ್ ಸೆಟ್ ನಲ್ಲಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ಜೊತೆ ಸೆಲ್ಫಿ‌ ಕ್ಲಿಕ್ಕಿಸಿಕೊಂಡಿರುವ ಹೇಮಂತ್ ಅವರು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗಾಯಕ ಹೇಮಂತ್ ಅವರು ಹಂಚಿಕೊಂಡಿರುವ ಈ‌ ಪೋಸ್ಟರ್ ನೋಡಿದರೆ ಇದು ಪಕ್ಕಾ ಸರಿಗಮಪ ಸಿಂಗಿಂಗ್ ಶೋ ಅಖಾಡ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತೆ. ಸರಿಗಮಪ ತೀರ್ಪುಗಾರರೊಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಪೋಸ್ಟ್ ಮಾಡಿ
ಶೋ ಟೈಮ್, ಸ್ಪೆಷಲ್, ಸಪ್ರೈಸ್ ಜೊತೆ ‘ಲಾಟ್ಸ್ ಆಫ್ ಲವ್’ ಅಂತ ಬರೆದುಕೊಂಡಿದ್ದಾರೆ. ಅಲ್ಲಿಗೆ, ಸರಿಗಮಪ ಹೊಸ ರೂಪದ‌ ಶೋಗೆ ಹೇಮಂತ್ ತೀರ್ಪುಗಾರರಾಗಿ ಕೂರೋದು ಪಕ್ಕಾ ಅಲ್ಲವೇ. ಎನಿವೇ, ಸೆನ್ಸೇಷನಲ್ ಸಿಂಗರ್ ಹೇಮಂತ್ ನಯಾ ಜರ್ನಿ ಗೆ ಶುಭವಾಗಲಿ. ಜಯವಾಗಲಿ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!