ಕೋಟಿಗೊಬ್ಬ-3 ಚಿತ್ರಕ್ಕಾಗಿ ಕಿಚ್ಚನ ಫ್ಯಾನ್ಸ್ ಎರಡು ವರ್ಷಗಳಿಂದ ಕಾಯ್ತಿದ್ದಾರೆ. ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ರಿಲೀಸ್ ಡೇಟ್ ಮುಂದೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಚಿತ್ರ ರಿಲೀಸ್‌ಗೆ ಮುಹೂರ್ತ ಫಿಕ್ಸಾಗಿದೆ. ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರಲು ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ
ಸುದೀಪ್ ಹಾಗೂ ಸಿಎಂ ಭೇಟಿ ಕೂತೂಹಲ ಕೆರಳಿಸಿತ್ತು. ಏಕಾಏಕಿ ಮುಖ್ಯಮಂತ್ರಿಗಳನ್ನ ಮಾಣಿಕ್ಯ ಅದ್ಯಾಕ್ ಭೇಟಿ ಮಾಡಿದ್ರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಕೂತೂಹಲದ ಪ್ರಶ್ನೆಗೆ ಕಿಚ್ಚನ ಕಡೆಯಿಂದ ಉತ್ತರ ಸಿಕ್ಕಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದರು. ಸಿಎಂ ಏನ್ ಹೇಳಿದ್ದರು? ಕೋಟಿಗೊಬ್ಬ-3 ರಿಲೀಸ್ ತಯ್ಯಾರಿ? ಬಿಗ್‌ಸ್ಕ್ರೀನ್ ನಲ್ಲಿ ಕಿಚ್ಚನ ಅಬ್ಬರ ? ಇದೆಲ್ಲದರ ಚಿಕ್ಕದೊಂದು ರಿಪೋರ್ಟ್ ಇಲ್ಲಿದೆ ನೋಡಿ.
ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಕಳೆದ ಮಂಗಳವಾರ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿವರನ್ನ ಭೇಟಿ ಮಾಡಿದ್ದರು. ಆಗಲೇ ಸುದೀಪ್-ಸಿಎಂ ಅಚ್ಚರಿಯ ಭೇಟಿ ಕುರಿತಾಗಿ ಒಂದಿಷ್ಟು ಚರ್ಚೆಗಳ ನಡೆದಿದ್ವು. ಬರ್ತ್ಡೇಗೆ ಮೂರು ದಿನ ಮುನ್ನ ಮಾಣಿಕ್ಯ ಮುಖ್ಯಮಂತ್ರಿಗಳನ್ನ ಮೀಟ್ ಮಾಡಿದ್ದಕ್ಕೆ ಕೂತೂಹಲ ಜಾಸ್ತಿಯಾಗಿತ್ತು. ಹುಟ್ಟು ಹಬ್ಬದ ಆಚರಣೆ ವಿಚಾರ ಇರ‍್ಬೋದಾ ? ಎನ್ನುವ ಕ್ಯೂರಿಯಾಸಿಟಿ ಕೂಡ ಇತ್ತು. ಇದರ ಜೊತೆಗೆ ಚಿತ್ರಮಂದಿರಕ್ಕೆ ೧೦೦ ಪರ್ಸೆಂಟ್ ಅನುಮತಿ ಕೊಡಿಸುವಂತೆ ಮನವಿ ಮಾಡಿಕೊಳ್ಳುವುದಕ್ಕೇನಾದರೂ ಮೀಟ್ ಮಾಡಿರಬಹುದಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇತ್ತು. ಆ ಕ್ಯೂರಿಯಾಸಿಟಿಗೆ ಸಿಎಂ ಟ್ವೀಟ್ ನಿಂದ ಕೊಂಚ ಬ್ರೇಕ್ ಬಿದ್ದಿತ್ತು.
ಇವತ್ತು ನಮ್ಮ ಕಚೇರಿಯಲ್ಲಿ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಭೇಟಿ ಮಾಡಿದರು. ಉಭಯ ಕುಶಲೋಪರಿ ಜೊತೆಗೆ ಮನರಂಜನಾ ಕ್ಷೇತ್ರದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ವಿ. ಹೀಗಂತ ಟ್ವೀಟ್ ಮೂಲಕ ತಿಳಿಸಿದ ಸಿಎಂ ಸಾಹೇಬ್ರು, ಸುದೀಪ್ ಸಿನಿಮಾ ಜರ್ನಿಗೆ ಮನದುಂಬಿ ಹಾರೈಸಿದ್ದರು. ನಟ ಸುದೀಪ್ ಕೂಡ ಭೇಟಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು. ಇದಾಗಿ ಮೂರು ದಿನಕ್ಕೆ ಅಭಿನಯ ಚಕ್ರವರ್ತಿ ೫೦ನೇ ವಸಂತಕ್ಕೆ ಕಾಲಿಟ್ಟರು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮಾತ್ರವಲ್ಲ ಲಕ್ಷಾಂತರ ಸಿನಿಮಾ ಭಕ್ತರಿಂದ ಮಾಣಿಕ್ಯನಿಗೆ ಶುಭಾಷಯಗಳ ಮಹಾಪೂರ ಹರಿದುಬಂತು. ವಿಕ್ರಾಂತ್ ರೋಣ' ಫಿಲ್ಮ್ ಟೀಮ್
ಡೆಡ್ ಆಂಥಮ್’ ಸಾಂಗ್ ಝಲಕ್ ತೋರಿಸಿದರು. ಕೋಟಿಗೊಬ್ಬ-3 ಚಿತ್ರತಂಡದವರು ಸಿನಿಮಾ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿ ಸುದೀಪಿಯನಸ್‌ಗೆ ಸಪ್ರೈಸ್ ಕೊಟ್ಟರು.
ಯಸ್, ಕೋಟಿಗೊಬ್ಬ-3 ಚಿತ್ರಕ್ಕಾಗಿ ಸುದೀಪಿಯನ್ಸ್ ಭರ್ತಿ ಎರಡು ವರ್ಷಗಳಿಂದ ಕಾತುರದಿಂದ ಕಾಯ್ತಿದ್ದಾರೆ. ಬಿಗ್‌ಸ್ಕ್ರೀನ್‌ನಲ್ಲಿ ಸತ್ಯ ಹಾಗೂ ಶಿವನ ಅವತಾರ ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಎರೆಡೆರಡು ಭಾರಿ ಕೊರೊನಾ-ಕ್ವಾರಂಟೈನ್-ಲಾಕ್‌ಡೌನ್ ಆಗಿದ್ದರಿಂದ ಕೋಟಿಗೊಬ್ಬ-3 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಬಹುಕೋಟಿ ವೆಚ್ಚದ ಕೋಟಿಗೊಬ್ಬ-3 ಬಿಡುಗಡೆಗೆ ದಿವ್ಯ ಮುಹೂರ್ತ ಫಿಕ್ಸಾಗಿದೆ. ನಾಡಹಬ್ಬ ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರುವುದಕ್ಕೆ ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ. ಹೀಗಾಗಿಯೇ, ಮಾಣಿಕ್ಯನ ಬರ್ತ್ಡೇಗೆ ಮ್ಯಾಸೀವ್ ಪೋಸ್ಟರ್ ಬಿಟ್ಟು ನಾಡಹಬ್ಬಕ್ಕೆ ಕೋಟಿಗೊಬ್ಬ-3 ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ. ಡೇಟ್ ಪಕ್ಕಾ ಫಿಕ್ಸ್ ಮಾಡಿದ್ದಾರೆ ಅಂದರೆ, ದಸರಾ ಹಬ್ಬ ಬರುವಷ್ಟರಲ್ಲಿ ಥಿಯೇಟರ್‌ಗೆ 100 ಪರ್ಸೆಂಟ್ ಅನುಮತಿ ಸಿಗ್ಬೋದು ಎನ್ನುವ ಆಶ್ವಾಸನೆಯನ್ನೇನಾದರೂ ಸಿಎಂ ಕೊಟ್ಟರಾ? ಕಿಚ್ಚನ ಭೇಟಿ ಟೈಮ್‌ನಲ್ಲಿ 100 ಪರ್ಸೆಂಟ್ ವಿಚಾರ ಪ್ರಸ್ತಾಪ ಆಯ್ತಾ? ಗೊತ್ತಿಲ್ಲ.
ಬರೋಬ್ಬರಿ 70 ಕೋಟಿ ವೆಚ್ಚದ ಕೋಟಿಗೊಬ್ಬ 3ಗೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಮಡೋನ್ನಾ ಸೆಬಾಸ್ಟಿನ್ ಕಿಚ್ಚನಿಗೆ ಜೋಡಿಯಾಗಿದ್ದು, ಫಸ್ಟ್ ಟೈಮ್ ಕನ್ನಡ ಸಿನಿಮಾದಲ್ಲಿ ಮಿಂಚಿದ್ದಾರೆ. ಶ್ರದ್ದಾ ದಾಸ್, ಅಫ್ತಾಬ್ ಶಿವದಾಸಿನಿ, ರವಿಶಂಕರ್, ನವಾಬ್ ಶಾ, ಡ್ಯಾನಿಶ್ ಸೇಠ್ ಅಖ್ತರ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸ್ಯಾಟ್‌ಲೈಟ್-ಡಿಜಿಟಲ್ ರೈಟ್ಸ್-ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿ ಒಟ್ಟು 27 ಕೋಟಿಗೆ ಸೇಲ್ ಆಗಿದೆ. ರಿಲೀಸ್‌ಗೂ ಮೊದಲೇ ಭರ್ಜರಿಯಾಗಿ ಕಮಾಯಿ ಮಾಡಿರುವ ಕೋಟಿಗೊಬ್ಬ-3 ಚಿತ್ರದ ಭರಾಟೆ ದಸರಾ ಹಬ್ಬದಂದು ಶುರುವಾಗಲಿದೆ. ಈ ಭಾರಿಯಾದರೂ ಫಿಕ್ಸಾದ ಡೇಟ್‌ಗೆ ಕೋಟಿಗೊಬ್ಬ ಕಣಕ್ಕಿಳಿಯಲಿ, ಈ ಚೀನಿ ಕ್ರಿಮಿ ಕೊರೊನಾ ಮೂರನೇ ಅಟ್ಟಹಾಸ ಶುರುವಿಟ್ಟುಕೊಳ್ಳದಿರಲಿ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ