Categories
ಸಿನಿ ಸುದ್ದಿ

ಏನಾಯ್ತೋ ಕಾಣೆ ಹಾಡಿಗೆ ಶಶಿಕುಮಾರ್‌ ಪುತ್ರ ಸ್ಟೆಪ್ಪು! ಶೂಟಿಂಗ್‌ ಮುಗಿಯುವ ಹಂತದಲ್ಲಿ ಓ ಮೈ ಲವ್‌ ಚಿತ್ರ

ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅಭಿನಯದ “ಓ ಮೈ ಲವ್”‌ ಈಗ ಶೇ.೯೦ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದೆ. ಇತ್ತೀಚೆಗೆ “ಏನಾಯ್ತೋ ಕಾಣೆ, ತಂಗಾಳಿ ಸುರಿದಂತೆ ತಂಪಾದೆ ನಾನುʼ ಎಂಬ ಹಾಡನ್ನು ಚಿತ್ರೀಕರಿಸಲಾಗಿದೆ. ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರು ಬರೆದ ಈ ಗೀತೆಯನ್ನು ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹೀರೋ ಅಕ್ಷಿತ್‌ ಶಶಿಕುಮಾರ್‌ ಜೊತೆ ಕೀರ್ತಿ ಕಲ್ಕರೆ, ದೀಪಿಕಾ ಆರಾಧ್ಯ, ಅಕ್ಷತಾ, ಶೌರ್ಯ, ಸುವೇದ್‌ ಈ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಶೂಟಿಂಗ್‌ ಮಾಡಲಾಗಿದೆ. ಸದ್ಯ ಮೂರು ಹಾಡುಗಳ ಚಿತ್ರೀಕರಣ ಮಾತ್ರ ಚಿತ್ರತಂಡ ಬಾಕಿ ಉಳಿಸಿಕೊಂಡಿದೆ.


ಜಿಸಿಬಿ. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಈ ಚಿತ್ರಕ್ಕೆ “ಸ್ಮೈಲ್” ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೊಂದು ಲವ್‍ಸ್ಟೋರಿ ಆಗಿದ್ದರೂ ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್‍ಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‍ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದಲ್ಲದೆ ಜಿ.ರಾಮಾಂಜಿನಿ ಅವರಂಥ ಸದಭಿರುಚಿಯ ನಿರ್ಮಾಪಕರು ಹಾಗೂ ಪಾತ್ರಕ್ಕೆ ನ್ಯಾಯ ಒದಗಿಸುವಂಥ ಕಲಾವಿದರು ಸಿಕ್ಕಿರುವುದು ನನ್ನ ಅದೃಷ್ಟ ಎನ್ನುತ್ತಾರೆ ನಿರ್ದೇಶಕ ಸ್ಮೈಲ್ ಶ್ರೀನು.

ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿರುವ ಸ್ಮೈಲ್ ಶ್ರೀನು, ಈ ಸಲವೂ ಹೊಸಬರ ಜೊತೆ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ.
ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತವಿದೆ. ಹಾಲೇಶ್ ಎಸ್. ಛಾಯಾಗ್ರಹಣ ಮಾಡಿದರೆ, ರಿಯಲ್ ಸತೀಶ್ ಸಾಹಸ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಡಿ.ಮಲ್ಲಿ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ.

ಹಿರಿಯ ನಿರ್ದೇಶಕ ಎಸ್.ನಾರಾಯಣ್, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣನ ಎದುರು ಭಯಾನಕ ವಿಲನ್!‌ ʼಆರಕ ದಿ ಡೆಮಾನ್‌ʼ ಪಾತ್ರ ರಿವೀಲ್‌ ಭಜರಂಗಿಯಲ್ಲಿ ಬೆಚ್ಚಿ ಬೀಳಿಸೋ ಚೆಲುವರಾಜ್!!

ಭಜರಂಗಿಯ ಅಖಾಡದಲ್ಲಿ ಎಂತೆಂತಹ ನಟರಾಕ್ಷಸರಿದ್ದಾರೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಂಚುರಿಸ್ಟಾರ್ ಶಿವಣ್ಣ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ಕೂಡ ನಟನೆಯಲ್ಲಿ ಭೀಕರ ಹಾಗೂ ರಣಭಯಂಕರ ಎನ್ನುವುದು ಪೋಸ್ಟರ್‌ನಿಂದಲೇ ಗೊತ್ತಾಗ್ತಿದೆ. ಒಬ್ಬೊಬ್ಬರ ಲುಕ್-ಗೆಟಪ್ ನೋಡುಗರನ್ನು ದಿಗ್‌ದಿಗ್ಭ್ರಾಂತರನ್ನಾಗಿ ಮಾಡ್ತಿದೆ. ಲೋಕಿ ಹಾಗೂ ಚಿಣಿಮಿಣಿಕಿ ಕ್ಯಾರೆಕ್ಟರ್ ದಂಗುಬಡಿಸಿರುವ ಬೆನ್ನಲ್ಲೇ ಬಿಡುಗಡೆಗೊಂಡಿರುವ `ಆರಕ ದಿ ಡೆಮಾನ್’ ಪಾತ್ರ ಸಿನಿಪ್ರೇಮಿಗಳನ್ನು ಬೆಚ್ಚಿಬೀಳಿಸಿ ಮೈ ಬೆವರಿಳಿಸ್ತಿದೆ

ಸಿನಿದುನಿಯಾದಲ್ಲಿ ಭಜರಂಗಿ'ಯ ಹವಾ ಜೋರಾಗಿದೆ. ದೊಡ್ಮನೆ ಭಕ್ತರು ಮಾತ್ರವಲ್ಲ ಸಕಲ ಸಿನಿಮಾ ಪ್ರೇಮಿಗಳ ಬಳಗ ಬೆಳ್ಳಿತೆರೆಗೆ ಭಜರಂಗಿಯನ್ನು ಸ್ವಾಗತ ಮಾಡಿಕೊಳ್ಳಲಿಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಭಜರಂಗಿಯ ಅವತಾರವೆತ್ತಿ ಧಗಧಗಿಸೋ ಕರುನಾಡ ಚಕ್ರವರ್ತಿಯನ್ನು ತಲೆಮೇಲೆ ಹೊತ್ತು ಮೆರೆಸೋದಕ್ಕೆ ಉತ್ಸುಕರಾಗಿದ್ದಾರೆ. ಬಿಗ್‌ಸ್ಕ್ರೀನ್ ಮೇಲೆ ಭಜರಂಗಿಯ ಅಬ್ಬರ -ಆರ್ಭಟ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕ್ತಿದ್ದಾರೆ. ಇಂತಹ ಹೊತ್ತಲ್ಲಿಆರಕ ದಿ ಡೆಮಾನ್’ ಕ್ಯಾರೆಕ್ಟರ್ ರಿವೀಲ್ ಆಗಿದೆ. ಭಜರಂಗಿ-2 ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಆರಕ ದಿ ಡೆಮಾನ್' ಭಜರಂಗಿ-2 ಚಿತ್ರದ ಮತ್ತೊಂದು ಪವರ್‌ಫುಲ್ ಕ್ಯಾರೆಕ್ಟರ್. ಪಾತ್ರದ ಹೆಸರೇ ಹೇಳುವಂತೆ ಇದೊಂದು ಭೀಕರ ಹಾಗೂ ರಣಭಯಂಕರ ಪಾತ್ರ. ಚೆಲುವರಾಜ್ ಎನ್ನುವ ಪ್ರತಿಭೆ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿ ಸಾರಥಿ‌ ʼಆರಕ ದಿ ಡೆಮಾನ್’ ಕ್ಯಾರೆಕ್ಟರ್‌ನ ರಿವೀಲ್ ಮಾಡಿದ್ದಾರೆ. ಹಣೆ-ಎದೆ ಹಾಗೂ ಕಟ್ಟುಮಸ್ತಾದ ತೋಳಿನ ಮೇಲಿರುವ ಟ್ಯಾಟೂ, ಡಿಫರೆಂಟ್ ಹೇರ್‌ಸ್ಟೈಲ್, ಚುಚ್ಚೆ ಬಿಡ್ತೀನಿ ಅಂತ ಎಗರೆಗರಿ ಹೊಡೆಯೋ ಓಟ ಹಾಗೂ ಎದೆಭಾಗ ಸೀಳುವಂತಹ ನೋಟ ಭಯಾನಕವಾಗಿದೆ. ಗಟ್ಟಿಗುಂಡಿಗೆಯನ್ನು ಅಲುಗಾಡಿಸೋ ತಾಕತ್ತಿರೋ ಚೆಲುವ `ಭಜರಂಗಿ-2′ ಬಿಡುಗಡೆಯಾದ್ಮೇಲೆ ನಟರಾಕ್ಷಸ ಪಟ್ಟಕ್ಕೇರಿದ್ರೂ ಏರಬಹುದು.

ಯಾರೂ ಈ ಚೆಲುವ ರಾಜ್? ಈ ಕಲಾವಿದನ ಹಿನ್ನಲೆ ಏನು? ಈ ಹಿಂದೆ ಯಾವುದಾದರೂ ಸಿನಿಮಾ ಮಾಡಿದ್ರಾ? ಬೆಳ್ಳಿತೆರೆ ಮೇಲೆ ಧಗಧಗಿಸಿದ್ದರಾ? ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಾ? ಈ ಕೂತೂಹಲದ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಚೆಲುವರಾಜ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಈಗಷ್ಟೇ ಭಜರಂಗಿ ಟೀಮ್ `ಆರಕ ದಿ ಡೆಮಾನ್’ ಪಾತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಿದೆ. ಈ ಮೂಲಕ ಚೆಲುವರಾಜ್ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದಾರೆ. ಸಿನಿಪ್ರೇಕ್ಷಕರ ಕಣ್ಣಿಗೆ ಬಿದ್ದು ಕೂತೂಹಲ ಕೆರಳಿಸಿದ್ದಾರೆ. ಯಾರೀ ಈ ಪಾತ್ರಧಾರಿ? ನಿರ್ದೇಶಕ ಹರ್ಷ ಅವರು ಈ ಕಲಾವಿದನನ್ನು ಅದೆಲ್ಲಿಂದ ಹುಡುಕಿ ತಂದರು? ಅದ್ಹೇಗೆ ಭಜರಂಗಿ-2 ಪಾತ್ರಕ್ಕೆ ಆಯ್ಕೆಯಾದರು? ರಣರಾಕ್ಷಸ ಪಾತ್ರಕ್ಕೆ ಚೆಲುವರಾಜ್ ಏನೆಲ್ಲಾ ಕಸರತ್ತು ನಡೆಸಿದರು? ಹೇಗೆಲ್ಲಾ ತಯ್ಯಾರಿ ಮಾಡಿಕೊಂಡಿದ್ರು? ಹೀಗೆ ಪ್ರಶ್ನೆ ಮೇಲೊಂದು ಪ್ರಶ್ನೆ ಉದ್ಭವವಾಗುತ್ತಿದೆ. ಇದಕ್ಕೆಲ್ಲಾ ಉತ್ತರ ರಿಲೀಸ್‌ಗೂ ಮೊದಲೇ ನಡೆಯೋ ಪ್ರಿರಿಲೀಸ್ ಇವೆಂಟ್‌ನಲ್ಲಿ ಸಿಗಲಿದೆ. ಅನಂತರ ನಿಮ್ಮ ಮುಂದೆ ಬಿಚ್ಚಿಡಲಿದ್ದೇವೆ.

ಅಂದ್ಹಾಗೇ, ಭಜರಂಗಿ-2 ಚಿತ್ರದಲ್ಲಿ ಬರುವ ಒಂದೊಂದು ಕ್ಯಾರೆಕ್ಟರ್ ಕೂಡ ಪವರ್‌ಫುಲ್ಲೇ. ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆಯಾಗಿ ನಿಲ್ಲುವ ಪ್ರತಿ ಪಾತ್ರಧಾರಿಯ ಕ್ಯಾರೆಕ್ಟರ್‌ಗೆ ಅದರದ್ದೇ ಆದ ತೂಕವಿದೆಯಂತೆ. ಈ ಬಗ್ಗೆ ಹಿಂದೊಮ್ಮೆ ಸಿನಿಲಹರಿ ಜೊತೆ ಮಾತನಾಡುತ್ತಾ ನಿರ್ದೇಶಕ ಹರ್ಷ ಅವರು ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದರು. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಪಾತ್ರವನ್ನು ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ತೆರೆಮೇಲೆ ಹೀಗೆ ಕಾಣಬೇಕು ಅಂತ ಸ್ಕೆಚ್ ಮಾಡಿಕೊಂಡಿದ್ದೆ ಅದರಂತೆಯೇ ಔಟ್‌ಫುಟ್ ಬಂದಿದೆ. ತನ್ನ ಕಲ್ಪನೆಯ ಕ್ಯಾರೆಕ್ಟರ್‌ಗೆ ಜೀವತುಂಬಲಿಕ್ಕೆ ಪಾತ್ರಧಾರಿಗಳು ಬೆವರು ಬಸಿದಿದ್ದಾರೆ. ಕಲಾನಿರ್ದೇಶಕ ರವಿ ಹಾಗೂ ಅವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಕಾಸ್ಟ್ಯೂಮ್ ಡಿಸೈನರ್‌ಗಳಾದ ಯೋಗಿ ಅಂಡ್ ಗಣೇಶ್ ಶ್ರಮವಹಿಸಿ ದುಡಿದಿದ್ದಾರೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಸಮಯ ಹಿಡಿದರೂ ನಿರಾಯಾಸವಾಗಿ ಕೆಲಸ ಮಾಡಿದ್ದಾರೆ. ಇವತ್ತು, ಇಡೀ ಸಿನಿಮಾ ಪ್ರೇಕ್ಷಕ ಕುಲ `ಭಜರಂಗಿ-2′ ಪಾತ್ರಧಾರಿಗಳ ಮೊದಲ ಲುಕ್-ಗೆಟಪ್‌ನ ನೋಡಿ ಆಶ್ಚರ್ಯಚಕಿತರಾಗಿದ್ದಾರೆ ಅಂದರೆ ಅದಕ್ಕೆ ಇವರೆಲ್ಲರೂ ಕೂಡ ಕಾರಣಿಭೂತರಾಗುತ್ತಾರೆ.

ಒಟ್ನಲ್ಲಿ ಭಜರಂಗಿ'ಯ ಹೊಸ ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ನಿರ್ದೇಶಕ ಕಲ್ಪನೆಯ ಕನಸಿನ ಕೂಸಿಗೆ ಪಾತ್ರಧಾರಿಗಳು ಜೀವತುಂಬಿದ್ದಾರೆ. ಹೀಗೆ ಜೀವ ಪಡೆದುಕೊಂಡಿರುವ ಪಾತ್ರ, ಬೆಳ್ಳಿತೆರೆಯ ಮಡಿಲು ಸೇರಿ ಪ್ರೇಕ್ಷಕರಿಂದ ಲಾಲಿ ಆಡಿಸಿಕೊಳ್ಳುವುದಕ್ಕೆ ಮುಹೂರ್ತ ಫಿಕ್ಸಾಗಿದೆ. ಇದೇ ಅಕ್ಟೋಬರ್ 29 ರಂದು ಭಜರಂಗಿ-2′ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಅಂದರೆ ಅಕ್ಟೋಬರ್ 20ರಂದು ಟ್ರೈಲರ್ ಹೊರಬೀಳಲಿದೆ. ಈಗಾಗಲೇ ಟೀಸರ್‌ನಲ್ಲಿ ಭಜರಂಗಿ ಶಿವಣ್ಣನ ಜೊತೆಗೆ ಖಳನಾಯಕ ಲೋಕಿ ವಿಜೃಂಭಿಸಿದ್ದಾರೆ. ಹಿರಿಯ ನಟಿ ಶ್ರುತಿ ಕೈಯಲ್ಲಿ ಸಿಗಾರ್ ಹಿಡಿದು ನಶೆಯೇರಿಸಿದ್ದಾರೆ.

ಚಿಣಿಮಿಣಿಕಿ ಪಾತ್ರದಲ್ಲಿ ಜಾಕಿ ಭಾವನ ಬೆರಗುಗೊಳಿಸಿದ್ದಾರೆ. ಪ್ರಸನ್ನ ಕಣ್ಣೋಟದಲ್ಲೇ ಕೊಂದರೆ, ಚೆಲುವರಾಜ್ ಚಿತ್ರಪ್ರೇಮಿಗಳನ್ನು ಕುಂತಲ್ಲೇ ಬೆವರುವಂತೆ ಮಾಡಿದ್ದಾರೆ. ಕಾಮಿಡಿ ಖಿಲಾಡಿ ಶಿವರಾಜ್ ಕೆ. ಆರ್ ಪೇಟೆ ಕಮಾಲ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಅದ್ದೂರಿ ತಾರಾಬಳಗಕ್ಕೆ ಕೋಟಿ ಕೋಟಿ ಸುರಿದು `ಭಜರಂಗಿ-2′ ನಿರ್ಮಿಸಿರುವ ಅನ್ನದಾತರಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರು ಹೊರರಾಜ್ಯದ ಮಂದಿ ಬೆಚ್ಚುವಂತೆ ಸಿನಿಮಾ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಅವರ ಇಚ್ಛೆಯಂತೆ ಎಲ್ಲವೂ ಸಾಗಲಿ ಬೆಳ್ಳಿಪರದೆಯ ಮೇಲೆ ಭಜರಂಗಿ ಧಗಧಗಿಸಲಿ, ಪ್ರೇಕ್ಷಕರ ಮನಸ್ಸು ಗೆದ್ದು ಬಾಕ್ಸ್ಆಫೀಸ್ ಧೂಳೆಬ್ಬಿಸಲಿ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸೆನ್ಸಾರ್ ಸಮಸ್ಯೆ- ಅನಿಮಲ್ ಬೋರ್ಡ್ ಕಿರಿಕಿರಿ‌ ತಪ್ಪಿಸಲು ಸಚಿವರಿಗೆ ಮನವಿ; ಗಂಧದಗುಡಿಗೆ ಸೆಂಟ್ರಲ್ ಮಿನಿಸ್ಟರ್ ಕೊಟ್ಟರು ಭರವಸೆ !

ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ‌ ಎಂದು ಮನವಿ ಮಾಡಲಾಗಿದೆ

ಚಂದನವನ ಚಿಕ್ಕದ್ದು, ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಹೊರ ರಾಜ್ಯದ ಅಂಗಳದಲ್ಲಿ ಕಮಾಯಿ ಮಾಡಿಲ್ಲ, ಹೀಗೆ ಮಾತನಾಡುತ್ತಿದ್ದವರು ಎಲ್ಲಾ ಗಂಧದಗುಡಿಯನ್ನು ಬೆರಗುಗಣ್ಣಿನಿಂದ ನೋಡ್ತಿದ್ದಾರೆ.‌ ಇಡೀ ಇಂಡ್ಯಾ ಇವತ್ತು ಕನ್ನಡ ಚಿತ್ರರಂಗದತ್ತ ಕಣ್ಣುಹಾಯಿಸಿದೆ ಮತ್ತು ಕೊಂಡಾಡುತ್ತಿದೆ. ಇಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರುವ ಸ್ಯಾಂಡಲ್ ವುಡ್ ಸಿನಿಮಾಗಳು, ಸೆನ್ಸಾರ್ ಮಂಡಳಿ ಹಾಗೂ ಅನಿಮಲ್ ಬೋರ್ಡ್ ಅಂಗಳಕ್ಕೆ ಹೋದಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸ್ತಿವೆ. ಹೀಗಾಗಿ, ಆ ಎಲ್ಲಾ ಸಮಸ್ಯೆಗಳನ್ನು
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರ ಗಮನಕ್ಕೆ ತರುವ ಕೆಲಸವನ್ನು ಫಿಲ್ಮ್ ಚೇಂಬರ್ ಮಾಡಿಮುಗಿಸಿದೆ.

ಹೌದು,ಕನ್ನಡ ಚಿತ್ರರಂಗದ ಪಾಲಿಗೆ ಮಾತೃ ಸಂಸ್ಥೆಯಾಗಿರುವ ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಇವತ್ತು
ಸುದ್ದಿಗೋಷ್ಠಿಯನ್ನು ಕರೆದಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್ ಗೆ ಆಹ್ವಾನ ನೀಡಲಾಗಿತ್ತು. ಇದೇ ಮೊದಲ ಭಾರಿಗೆ ವಾಣಿಜ್ಯ ಮಂಡಳಿಗೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.‌ ಕನ್ನಡ ಚಿತ್ರರಂಗದ ಲೀಡರ್ ಹ್ಯಾಟ್ರಿಕ್ ಹೀರೋ ಶಿವಣ್ಣ ಸಮ್ಮುಖದಲ್ಲಿ ಸಭೆ ನಡೀತು‌.ಈ ವೇಳೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದ ವಾಣಿಜ್ಯ ಮಂಡಳಿಯ ಸಭಾಸದಸ್ಯರು ಸೆಂಟ್ರಲ್ ಮಿನಿಸ್ಟರ್ ಡಾ. ಎಲ್. ಮುರುಗನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಅಂದ್ಹಾಗೇ, ಮನವಿ ಪತ್ರದಲ್ಲಿ ಹಿಂದಿಗೆ ಡಬ್ ಆಗುವ ಕನ್ನಡ ಸಿನಿಮಾಗಳ ಸೆನ್ಸಾರ್ ಬೆಂಗಳೂರಿನಲ್ಲೇ ಆಗುವಂತೆ ವ್ಯವಸ್ಥೆ ಮಾಡಿಕೊಡಿ. ಯಾಕಂದ್ರೆ, ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಹಳಷ್ಟು ಚಿತ್ರಗಳು ತಯ್ಯಾರಾಗುತ್ತಿವೆ. ಸೆನ್ಸಾರ್ ಗೆ ಮುಂಬೈಗೆ ಹೋಗಬೇಕಾದ ಪರಿಸ್ಥಿತಿ‌ ಇದೆ, ಅಲ್ಲಿ ಸೆನ್ಸಾರ್ ಆಗುವುದು ತಡವಾಗ್ತಿದೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ತಯ್ಯಾರಾಗುವ ಚಿತ್ರಗಳಿಗೆ ಪೆಟ್ಟು ಬೀಳ್ತಿರುವುದಾಗಿ ನಮೂದಿಸಿದ್ದಾರೆ. ಅದರಂತೇ, ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ‌ ಎಂದು ಮನವಿ ಪತ್ರದಲ್ಲಿ ನಮೂದಿಸಿದ್ದಾರೆ. ದೂರದರ್ಶನದಲ್ಲಿ ಅವಾರ್ಡ್ ಮೂವೀಗಳು ಮಾತ್ರ ಟೆಲಿಕಾಸ್ಟ್ ಆಗುತ್ತಿವೆ, ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಚಿತ್ರಗಳು ಕೂಡ ಪ್ರಸಾರವಾಗುವುದಕ್ಕೆ ಅವಕಾಶ ಮಾಡಿಕೊಟ್ಟರೆ ನಿರ್ಮಾಪಕರು ಉಳಿಯುತ್ತಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಕೊಟ್ಟು,
ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿದ
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್‌ ಅವರು ಕನ್ನಡ ಸಿನಿಮಾರಂಗದಲ್ಲಿನ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮುರುಗ ಅಂದ್ರೇನೇ ಕೈಬಿಡಲ್ಲ ಎನ್ನುವ ಮಾತಿದೆ ಹೀಗಾಗಿ ಮುರುಗನ್ ಸಾಹೇಬ್ರು ಕನ್ನಡ ಚಿತ್ರರಂಗವನ್ನು ಕೈಬಿಡಲ್ಲ ಎಂದು ನಂಬಿರುವುದಾಗಿ ಶಿವಣ್ಣ ಸುದ್ದಿಗೋಷ್ಠಿಯಲ್ಲೇ ಹೇಳಿದರು.

ಜಿಎಸ್ ಟಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು.ಸೆಂಟ್ರಲ್ ಮಿನಿಸ್ಟರ್ ದಕ್ಷಿಣ ಭಾರತದವರೇ ಆಗಿರೋದ್ರಿಂದ ನಮ್ಮ ಕಷ್ಟ ಅವರಿಗೆ ಅರ್ಥವಾಗಿರುತ್ತೆ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡ್ತಾರೆನ್ನುವ ನಂಬಿಕೆ ಇದೆಯೆಂದು ಸೆಂಚುರಿ ಸ್ಟಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬಿಜೆಪಿ ಗವರ್ನಮೆಂಟ್ ಎಲ್ಲಾ ಇಂಡಸ್ಟ್ರಿಗೂ ಫ್ರೆಂಡ್ಲಿ ಆಗಿದೆ. ಆದಷ್ಟು ಬೇಗ ಸಮಸ್ಯೆಗೆ ಬಗೆಹರಿಸಿ ಕೊಡುವುದಾಗಿ ಸೆಂಟ್ರಲ್ ಮಿನಿಸ್ಟರ್ ಮುರುಗನ್ ಮಾತುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಸಹಾಯ ಆಗುತ್ತೆ, ಯಾವುದು ಅಸ್ತಿತ್ವಕ್ಕೆ ಬರುತ್ತೆ ಕಾದುನೋಡಬೇಕಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಸಲಗ ಓಟಿಟಿಯಲ್ಲಿ ಬರಲ್ಲ; ಥಿಯೇಟರ್‌ನಲ್ಲೇ ನೋಡಿ! ಸುಳ್ಳು ಸುದ್ದಿ ಬಗ್ಗೆ ಕೇರ್‌ ಮಾಡಲ್ಲ ಅಂದ್ರು ದುನಿಯಾ ವಿಜಯ್

ಸದ್ಯ ಸಲಗ ಜೋರು ಸದ್ದು ಮಾಡುತ್ತಿದೆ. ಅದರ ಬಗೆಗಿನ ಸುದ್ದಿಯೂ ಸಹ ಸಾಕಷ್ಟು ಕಡೆ ಚರ್ಚೆಯಾಗುತ್ತಿದೆ. ಸಲಗ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದಿರುವುದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆಯೇ ಒಂದು ಸುದ್ದಿ ಜೋರಾಗಿ ಓಡುತ್ತಿದ್ದು, ಬಹಳಷ್ಟು ಮಂದಿ ಕನ್‌ಫ್ಯೂಷನ್‌ ಮಾಡಿಕೊಂಡಿದ್ದಾರೆ. ಹಾಗಾದರೆ, ಆ ಸುದ್ದಿ ಏನು ಗೊತ್ತಾ? ಸಲಗ ಸಿನಿಮಾ ಒಟಿಟಿಯಲ್ಲಿ ಬರಲಿದೆ ಎಂಬ ಸುದ್ದಿಯೇ ಆ ಗೊಂದಲಗಳಿಗೆ ಕಾರಣ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಸ್ವತಃ ದುನಿಯಾ ವಿಜಯ್ ಅವರೇ ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಲಗ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದನ್ನ ಸಹಿಸಿಕೊಳ್ಳಲಾಗದ ಕೆಲ ಕಿಡಿಗೇಡಿಗಳು ಸಿನಿಮಾ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಪ್ರತಿಕ್ರಿಯೆ ಹೀಗಿದೆ. “ಕಳೆದ ವಾರ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ಒಳ್ಳೆಯ ಕಲೆಕ್ಷನ್‌ ಕೂಡ ಆಗುತ್ತಿದೆ. ಇಷ್ಟಿದ್ದರೂ, ಸಿನಿಮಾ ಓಟಿಟಿಯಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾವುದೇ ಸಲಗ ಓಟಿಟಿಯಲ್ಲಿ ಬರುವುದಿಲ್ಲ. ಚಿತ್ರಮಂದಿರದಲ್ಲೇ ಸಿನಿಮಾ ಇರಲಿದೆ. ಅಲ್ಲೇ ಸಿನಿಮಾ ನೋಡಿ ಎಂದಿದ್ದಾರೆ ವಿಜಯ್.


“ನಾವು ಸಿನಿಮಾ ಮಾಡಿದ್ದು ಥಿಯೇಟರ್‌ನಲ್ಲಿ ರಿಲೀಸ್ ಮಾಡಲು. ಓಟಿಟಿಯಲ್ಲಿ ರಿಲೀಸ್ ಮಾಡೋದಾಗಿದ್ರೆ, ಇಷ್ಟು ದಿನ ಕಾಯುತ್ತಿರಲಿಲ್ಲ. ಓಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಕೇಳಿದಾಗಲೂ ನಾವು ಕೊಡಲ್ಲ ಎಂದಿದ್ದೆವು. ಸಲಗ ಚಿತ್ರ ಥಿಯೇಟರ್‌ನಲ್ಲೆ ಪ್ರದರ್ಶನ ಕಾಣುತ್ತೆ. ಯಾರು ಕೂಡ ಈ ಸುದ್ದಿಗೆ ಕಿವಿ ಕೊಡಬೇಡಿ. ಹೀಗೆ ಸುಳ್ಳು ಸುದ್ದಿಯನ್ನು ಹರಡುವ ಹುಳಗಳು ಇದ್ದೇ ಇರುತ್ತವೆʼ ಎಂದಿರುವ ವಿಜಯ್‌, ನಾನು ಸಲಗ ಚಿತ್ರ ನಿರ್ದೇಶನ ಮಾಡಲು ತೀರ್ಮಾನಿಸಿದಾಗಲೇ ಒಂದು ಕನಸು ಕಂಡಿದ್ದೆ. ಸಲಗ ಚಿತ್ರಮಂದಿರದಲ್ಲೇ ರಿಲೀಸ್ ಆಗಬೇಕು ಅಂತ. ಆ ಆಸೆ ಈಡೇರಿದೆ. ಇಂತಹ ಸುಳ್ಳು ಸುದ್ದಿ ಬಗ್ಗೆ ನಾವು ಕೇರ್ ಮಾಡಲ್ಲ, ಪ್ರೇಕ್ಷಕರು ನಮ್ಮೊಂದಿಗೆ ಇದ್ದಾಗ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ ಅವರು.

Categories
ಸಿನಿ ಸುದ್ದಿ

ಹೊಸ ಇತಿಹಾಸ ಬರೆದ ಲಹರಿ ಮ್ಯೂಸಿಕ್‌ ಸಂಸ್ಥೆ; ಇಂತಹ ಹಿಸ್ಟ್ರಿ ಯಾರೂ ಕೆತ್ತಿಲ್ಲ ಕಣ್ರೀ- ಭಾರತದಲ್ಲಿ ಇದೇ ಮೊದಲು!!

ಇತಿಹಾಸ ಬರೆಯೋದು ಅಂದರೆ ಹಿಂದ್ಯಾರೋ ಮಹಾ ಪುರುಷರು ಬರೆದಿರುವ ಇತಿಹಾಸವನ್ನು ಬ್ರೇಕ್ ಮಾಡಿ ಬೀಗೋದಲ್ಲ. ಹಿಂದೆಂದೂ ಬೇರ‍್ಯಾರು ಕೆತ್ತಿರದ ಇತಿಹಾಸಕ್ಕೆ ಸಾಕ್ಷಿಯಾಗೋದು ನಯಾ ಇತಿಹಾಸ. ಇಂತಹದ್ದೊಂದು ಹಿಸ್ಟ್ರಿಯ ಸೃಷ್ಟಿಗೆ ಕನ್ನಡದ ಹೆಮ್ಮೆಯ ಲಹರಿ ಮ್ಯೂಸಿಕ್ ಸಂಸ್ಥೆ ಕಾರಣವಾಗಿದೆ. ಇಡೀ ಭಾರತದಲ್ಲಿ ಇಲ್ಲಿವರೆಗೂ ಯಾರೂ ಕೆತ್ತದ ಹಿಸ್ಟ್ರಿಯನ್ನು ಕೆತ್ತಿ‌, ಕನ್ನಡಿಗರು ಎದೆಯುಬ್ಬಿಸುವಂತೆ ಮಾಡಿದೆ. ಹಾಗಾದ್ರೆ ಮತ್ಯಾಕ್ ತಡ `ಲಹರಿ’ ಕಂಪೆನಿಯ ನಯಾ ಇತಿಹಾಸ ನಿಮ್ಮ ಮುಂದೆ ನೋಡಿ

ಕಳೆದ ನಾಲ್ಕುವರೆ ದಶಕಗಳ ಸಂಗೀತ ಸೇವೆಯಲ್ಲಿರುವ ಈ ಲಹರಿ ಸಂಸ್ಥೆ, ಕರುನಾಡಿನ ಆರೂವರೆ ಕೋಟಿ ಕನ್ನಡಿಗರ ನಾಡಿಮಿಡಿತ. ಕನ್ನಡ ನಾಡು-ನುಡಿ-ನೆಲ-ಜಲ ಹೇಗೆ ಕನ್ನಡಿಗರ ಪ್ರಾಣವೋ, ಹಾಗೆಯೇ ಲಹರಿ' ಮ್ಯೂಸಿಕ್ ಸಂಸ್ಥೆ ಕನ್ನಡಿಗರ ಉಸಿರು ಜೊತೆಗೆ ಹೃದಯಕ್ಕೆ ಹತ್ತಿರವಾಗಿರುವ, ಭಾವನೆಗಳೊಟ್ಟಿಗೆ ಬೆಸೆದುಕೊಂಡಿರುವ ಆಡಿಯೋ ಸಂಸ್ಥೆ. ಅಂದ್ಹಾಗೇ, ಈ ಸಂಸ್ಥೆ ಇವತ್ತು ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಬೆಳೆದಿದೆ. ಇಂತಹ ಅತ್ಯದ್ಬುತ- ಅಮೋಘ-ಅವಿಸ್ಮರಣೀಯ ಸಾಧನೆಗೆ ಕರುನಾಡಿನ ಆರೂವರೆ ಕೋಟಿಯ ಜನತೆಯ ಪ್ರೀತಿ-ಪ್ರೋತ್ಸಾಹ-ಆಶೀರ್ವಾದ ಮತ್ತು ಹಾರೈಕೆಯೇ ಕಾರಣ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆಲಹರಿ’ ಸಂಸ್ಥೆಯ ಸಂಸ್ಥಾಪಕರಾದ ಲಹರಿ ವೇಲು ಮತ್ತು ಅವರ ಸಹೋದರ ಮನೋಹರ ನಾಯ್ಡು.

ಲಹರಿ' ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವಂತಹ ಸಂಗೀತ ಸಂಸ್ಥೆ. ಸಿನಿಮಾ ಸಂಗೀತ ಮಾತ್ರವಲ್ಲದೇ ಭಾವಗೀತೆ-ಜಾನಪದಗೀತೆಗಳ ಆಡಿಯೋದ ಮೂಲಕ ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.ಲಹರಿ’ ಮ್ಯೂಸಿಕ್ ಕನ್ನಡಿಗರನ್ನು ಮಾತ್ರವಲ್ಲ ಜಗತ್ತಿನಾದ್ಯಂತ ಕೋಟಿ ಕೋಟಿ ಮಂದಿಯ ಹೃದಯ ತಲುಪಿರುವುದು ಒಂದು ರೀತಿಯ ಮೈಲುಗಲ್ಲೇ ಸರೀ. ಇತ್ತೀಚೆಗಷ್ಟೇ, ಲಹರಿ ಮುಡಿಗೆ ಯೂಟ್ಯೂಬ್ ಲೋಕ ವಜ್ರದ ಕಿರೀಟವನ್ನೇ ತೊಡಿಸಿ ಸಂಭ್ರಮಿಸಿತ್ತು. ಒಂದು ಕೋಟಿ 18 ಲಕ್ಷ ಚಂದದಾರರನ್ನು ಸಂಪಾದಿಸುವ ಮೂಲಕ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಮಗದೊಂದು ಮೈಲ್‌ಸ್ಟೋನ್‌ಗೆ ಲಹರಿ ಯೂಟ್ಯೂಬ್ ಲೋಕ’ ಕಾರಣವಾಗಿದೆ.

ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಜೊತೆಗೆ ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಚಿತ್ರಗೀತೆಗಳಿಗೆ ಸೀಮಿತವಾಗದೇ ಕನ್ನಡದ ಭಾವಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಜನಮನಕ್ಕೆ ತಲುಪಿಸಿ ಕನ್ನಡದ ಕಲೆ ಮತ್ತು ಸಂಗೀತವನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವಂತಹ ಕೆಲಸವನ್ನು ಲಹರಿ' ಆಡಿಯೋ ಕಂಪೆನಿ ಮಾಡ್ತಿದೆ.

ಕನ್ನಡದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಾಗುವಂತೆ ಮಾಡ್ತಿರುವ ಲಹರಿ ಸಂಸ್ಥೆಯ ಈ ಕಾರ್ಯಕ್ಕೆ ದೇಶಿ ಹಾಗೂ ವಿದೇಶಿ ಕನ್ನಡಿಗರು ಕೂಡ ಸಪೋರ್ಟ್ ಮಾಡ್ತಿದ್ದಾರೆ.ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್‌ಗೆ ವಿಸಿಟ್ ಮಾಡಿ ಹಾಡುಗಳನ್ನು ಕೇಳೋದಲ್ಲದೇ ಸಬ್‌ಸ್ಕ್ರೈಬ್ ಕೂಡ ಮಾಡ್ತಿದ್ದಾರೆ. ಹೀಗಾಗಿಯೇ, ಚಂದದಾರರ ಸಂಖ್ಯೆ ಹೆಚ್ಚಾಗ್ತಿದೆ, ಇಲ್ಲಿಗೆ ೧೦ ಲಕ್ಷ ಜನ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಯೂಟ್ಯೂಬ್ ಕಡೆಯಿಂದ ಚಿನ್ನದ ಹಾರ ಬರುವಂತೆ ಮಾಡಿದ್ದಾರೆ.

ಎಲ್ಲರಿಗೂ ನಾವು ಚಿರಋಣಿ
ಹೌದು, ಲಹರಿ ಭಾವಗೀತೆಗಳು ಅಂಡ್ ಫೋಕ್' ಯೂಟ್ಯೂಬ್ ಚಾನೆಲ್‌ಗೆ 10 ಲಕ್ಷ ಜನ ಸಬ್‌ಸ್ಕ್ರೈಬರ್ಸ್ ಆಗಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಕಡೆಯಿಂದ ಚಿನ್ನದ ಕಿರೀಟ ಸಿಗುತ್ತಿದೆ. ಕನ್ನಡ ರಾಜ್ಯೋತ್ಸವದಂದು ಚಿನ್ನದ ಅವಾರ್ಡ್‌ ಕೊಡಲಿಕ್ಕೆ ಯೂಟ್ಯೂಬ್ ಲೋಕ ಕೂಡ ಸಕಲ ತಯ್ಯಾರಿ ಮಾಡಿಕೊಂಡಿದೆ. ಈ ಖುಷಿಯ ಸಂಗತಿಯ ಬಗ್ಗೆಸಿನಿಲಹರಿ’ ಜೊತೆ ಮಾಹಿತಿ ಹಂಚಿಕೊಂಡ ಲಹರಿ' ಸಂಸ್ಥೆಯ ಮಾಲೀಕರಾದ ವೇಲು ಅವರು, ಯೂಟ್ಯೂಬ್ ಕಡೆಯಿಂದ ಚಿನ್ನದ ಅವಾರ್ಡ್ ಸಿಕ್ತಿರುವುದು ಕನ್ನಡಿಗರಿಂದ, ಹೀಗಾಗಿ ನಾವು ಅದನ್ನುಕರ್ನಾಟಕದ ಹೆಮ್ಮೆಯ ಪ್ರಶಸ್ತಿ’ ಅಂತ ಕರೆಯಲಿಕ್ಕೆ ಇಷ್ಟಪಡುತ್ತೇವೆ ಎಂದರು.

45 ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಗ್ತು. ಈ ಸಂದರ್ಭದಲ್ಲಿ, ಕುವೆಂಪು, ದ.ರಾ ಬೇಂದ್ರೆ, ನಿಸಾರ್ ಅಹಮ್ಮದ್, ದಿವಂಗತ ಕಾಳಿಂಗರಾಯರು, ದಿವಂಗತ ಅನಂತ್‌ಸ್ವಾಮಿಯವರು, ದಿವಂಗತ ಸಿ ಅಶ್ವತ್ಥ್, ರತ್ನಮಾಲ ಪ್ರಕಾಶ್, ಬಿ.ಕೆ ಸುಮಿತ್ರ, ಬಿ, ಆರ್ ಛಾಯ, ಎಂ.ಡಿ ಪಲ್ಲವಿ, ಅರ್ಚನ ಉಡುಪ, ನರಸಿಂಹ ನಾಯಕ್, ಯಶ್ವಂತ್ ಹಳಿಬಂಡಿ, ಅಬ್ಬಗೆರೆ ತಿಮ್ಮರಾಜು , ಪಿಚ್ಚಳ್ಳಿ ಶ್ರೀನಿವಾಸ್, ಮಂಜುಳ ಗುರುರಾಜ್, ಬಿಕೆ ಸುಮಿತ್ರ, ಗುರುರಾಜ್ ಹೊಸಕೋಟೆ, ಬಿ.ವಿ ಶ್ರೀನಿವಾಸ್ ಸೇರಿದಂತೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲಾ ಕವಿಗಳು-ಕಾದಂಬರಿಕಾರರು-ಸಾಹಿತಿಗಳು-ಸಂಗೀತ ನಿರ್ದೇಶಕರು-ಗಾಯಕ-ಗಾಯಕಿಯರು ಎಲ್ಲರನ್ನೂ ನೆನೆಯುತ್ತೇವೆ, ಚಿರಋಣಿಯಾಗಿರುತ್ತೇವೆ ಎಂದರು.

ಇದು ಭಾರತದಲ್ಲೇ ದಾಖಲೆ!
ಅಚ್ಚರಿ ಅಂದರೆ, ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳ ಇತಿಹಾಸದಲ್ಲಿ ಯೂಟ್ಯೂಬ್‌ಗೆ 10 ಲಕ್ಷ ಸಬ್‌ಸ್ಕ್ರೈಬ್ ಆಗಿರುವುದು ಇಡೀ ಭಾರತದ ದೇಶದಲ್ಲೇ ಇದೇ ಮೊದಲು. ಪ್ರಾದೇಶಿಕ ಭಾಷೆಯಲ್ಲಿ ಈ ತರಹದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಯಾವ ಯೂಟ್ಯೂಬ್‌ಗೂ ಕೂಡ ೧೦ ಲಕ್ಷ ಮಂದಿ ಚಂದದಾರರಿಲ್ಲ. ಆದರೆ, ನಮ್ಮ ಕನ್ನಡ ಭಾಷೆಯ ಜಾನಪದ ಹಾಗೂ ಭಾವಗೀತೆಯನ್ನು ಪ್ರಸಾರ ಮಾಡುವ ಲಹರಿ' ಯೂಟ್ಯೂಬ್‌ಗೆ 10 ಲಕ್ಷ ಮಂದಿ ಸಬ್‌ಸ್ಕ್ರೈಬ್ ಆಗಿದ್ದಾರೆ. ಅಂದ್ಹಾಗೇ ಇದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಂತಹ ಸಾಧನೆ ಅಲ್ಲ. ಯೂಟ್ಯೂಬ್ ಲೋಕಕ್ಕಾಗಿಲಹರಿ’ ತಂಡ ಬರೋಬ್ಬರಿ ಹತ್ತು ವರ್ಷಗಳ ಕಾಲ ಬೆವರು ಸುರಿಸಿ ದುಡಿದಿದೆ.

ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡಿದ್ದರಿಂದಲೇ ಇಂತಹ ಪ್ರತಿಫಲ ಸಿಕ್ಕಿದೆ. ಆರುವರೆ ಕೋಟಿ ಕನ್ನಡಿಗರು ಲಹರಿ' ಆಡಿಯೋ ಕಂಪೆನಿಯನ್ನು ಎತ್ತಿಹಿಡಿದಿದ್ದಾರೆ. ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಇಲ್ಲಿಯವರೆಗೆ 36 ಕೋಟಿ ಜನ ಕೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವೀವರ್‌ಶಿಪ್ ಪ್ರೀತಿ ಮತ್ತು ಪ್ರೋತ್ಸಾಹದಿಂದ ಹೊಸ ಹುರುಪು ಸಿಕ್ಕಿದೆ. ಮತ್ತಷ್ಟು ಸಾಧನೆಗೆ ದಾರಿಯಾಗಿದೆ ಎಂದರು ಲಹರಿ ಮಾಲೀಕರಾದ ವೇಲು ಅವರು. ಎನಿವೇ, ಈ ಜಗತ್ತಿನಲ್ಲಿ ಹಿಸ್ಟ್ರಿನಾ ಫಾಲೋ ಮಾಡೋರು ಇದ್ದಾರೆ, ಹಿಸ್ಟ್ರಿನಾ ಬ್ರೇಕ್ ಮಾಡೋರು ಇದ್ದಾರೆ, ಹಿಸ್ಟ್ರಿನಾ ಸೃಷ್ಟಿ ಮಾಡೋರು ಇದ್ದಾರೆ. ಇವರುಗಳ ಪೈಕಿಲಹರಿ’ ಆಡಿಯೋ ಕಂಪೆನಿಯವರು ಹೊಸ ಹೊಸ ಹಿಸ್ಟ್ರಿಯ ಸೃಷ್ಟಿಕರ್ತರು. ಅವರುಗಳ ಸಾಧನೆ ಹಿಂಗೆ ಮುಂದುವರೆಯಲಿ ಅನ್ನೋದು “ಸಿನಿಲಹರಿ” ಅಶಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದುಬೈನಲ್ಲೂ ಸುಧೀರ್‌ ಅತ್ತಾವರ್‌ ಸಕ್ಸಸ್! ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸಿದ ‌ಸಕ್ಸಸ್‌ ಫಿಲ್ಮ್ಸ್‌ ಕಾರ್ಯವ್ಯಾಪ್ತಿ…

ದುಬೈನ ಡೇರಾ ಪ್ರಾಂತ್ಯದಲ್ಲಿ ‌ನಿರ್ದೇಶಕ ಸುಧೀರ್‌ ಅತ್ತಾವರ್ ಅವರ ಕನಸಿನ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಶುರುವಾಗಿದೆ. ಇತ್ತೀಚೆಗೆ ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಆಗಮಿಸಿ “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಶುಭಕೋರಿದ್ದಾರೆ

ಸುಧೀರ್‌ ಅತ್ತಾವರ್… ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ “ಮರಳಿ ಮರೆಯಾಗಿ…” ಎಂಬ ಅದ್ಭುತ ಗೀತೆ. ಹೌದು, ಇಂತಹ ಅದೆಷ್ಟೋ ಜನಪ್ರಿಯ ಹಾಡುಗಳನ್ನು ಗೀಚಿದ ಸುಧೀರ್‌ ಅತ್ತಾವರ್‌, ಬರೀ ಗೀತ ಸಾಹಿತಿಯಲ್ಲ, ಅವರೊಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ನೈಜತೆಗೆ ಹೆಚ್ಚು ಒತ್ತು ಕೊಡುವ ಸುಧೀರ್‌, ಕನ್ನಡ ಮಾತ್ರವಲ್ಲ, ಮರಾಠಿ ಮತ್ತು ಬಾಲಿವುಡ್‌ ಸಿನಿಮಾಗಳಿಗೂ ಆಕ್ಷನ್‌-ಕಟ್‌ ಹೇಳಿದ್ದಾರೆ. ಕನ್ನಡದ ಅಪ್ಪಟ ಪ್ರತಿಭೆ ಸುಧೀರ್‌ ಅತ್ತಾವರ್‌, ಬಾಲಿವುಡ್‌ ಅಂಗಳದಲ್ಲಷ್ಟೇ ಅಲ್ಲ, ಈಗ ಸಾಗರದಾಚೆಗೂ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನತ್ತ ಪಯಣ ಬೆಳೆಸಿದ ಸುಧೀರ್‌ ಅತ್ತಾವರ್‌, ಅಲ್ಲೇ ಗಟ್ಟಿ ನೆಲೆ ಕಾಣಬೇಕು ಎಂಬ ಉದ್ದೇಶದಿಂದ ಮರಾಠಿ ಸಿನಿಮಾಗಳ ಜೊತೆ ಹಿಂದಿ ಸಿನಿಮಾಗಳ ಮೇಲೂ ಒಲವು ತೋರಿಸಿ ಅಲ್ಲಿ ನಿರ್ದೇಶನಕ್ಕಿಳಿದರು. ಜೊತೆ ಜೊತೆಯಲ್ಲಿ ಅವರು ಮುಂಬೈನಲ್ಲಿ ಸಕ್ಸಸ್‌ ಫಿಲ್ಮ್ಸ್‌ ಸಂಸ್ಥೆಯನ್ನೂ ಸ್ಥಾಪಿಸಿದರು. ಇಂಡಿಯಾಕ್ಕೆ ಸೀಮಿತವಾಗಿದ್ದ ಅವರ ಸಕ್ಸಸ್‌ ಫಿಲ್ಮ್ಸ್‌ ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿಕೊಂಡಿದೆ ಎನ್ನುವುದೇ ಹೆಮ್ಮೆಯ ವಿಷಯ.

ಸಹಜವಾಗಿಯೇ ಇದು ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗಷ್ಟೇ ಅಲ್ಲ, ಅವರ ಬಳಗ ಮತ್ತು ಗೆಳೆಯರಿಗೂ ಸಂಭ್ರಮದ ವಿಷಯವೇ ಸರಿ. ಸುಧೀರ್‌ ಅತ್ತಾವರ್‌ ಅವರ ಸಕ್ಸಸ್ ಕನಸು ಈಗ ದುಬೈನಲ್ಲೂ ನನಸಾಗಿದೆ ಅನ್ನೋದೇ ಹೆಮ್ಮೆ. ಯುಎಇಯ ದುಬೈನಲ್ಲಿ ಅವರು ತಮ್ಮ ಪ್ರೀತಿಯ ಸಕ್ಸಸ್‌ ಫಿಲ್ಮ್ಸ್‌ ಇಂಟರ್ನ್ಯಾಷನಲ್‌ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ದುಬೈನ ಡೇರಾ ಪ್ರಾಂತ್ಯದಲ್ಲಿ ಅವರು ಈ ತಮ್ಮ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಸುಧೀರ್‌ ಅತ್ತಾವರ್‌ ಅವರ ಪ್ರೀತಿಯ ಆಹ್ವಾನದ ಮೇರೆಗೆ, “ಸಕ್ಸಸ್‌ ಫಿಲ್ಮ್ಸ್”‌ ಸಂಸ್ಥೆಯ ನೂತನ ಕಚೇರಿಗೆ ಆಗಮಿಸಿ, ಶುಭಕೋರಿದ್ದಾರೆ. ಈ ವೇಳೆ ಕನ್ನಡಿಗ ಸುಧೀರ್ ಅತ್ತಾವರ್ ಅವರೆಲ್ಲರನ್ನೂ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ತಿಳಿಸಿಕೊಟ್ಟರು.

ದುಬೈನಲ್ಲಿ ಮಹತ್ವಾಕಾಂಕ್ಷೆ ಯೋಜನೆ!
ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರೂ ಅದರಲ್ಲೂ ಸದಾ ಸಿನಿಮಾವನ್ನೇ ಧ್ಯಾನಿಸುವ ಸೂಕ್ಷ್ಮ ಸಂವೇದನೆಯ ನಿರ್ದೇಶಕರೊಬ್ಬರು ದುಬೈನಲ್ಲಿ ಸಿನಿಮಾ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ಹೆಮ್ಮೆಯ ವಿಷಯ. ಇನ್ನು, ಇದೇ ಸಂದರ್ಭದಲ್ಲಿ www.success films international.com ಎಂಬ ವೆಬ್‌ಸೈಟನ್ನೂ ಸಹ ದುಬೈನ ಖ್ಯಾತ ರಂಗಕರ್ಮಿ ಡಾ. ಫರ್ಹದ್ ಚೌಧರಿ ಅವರು ಸಕ್ಸಸ್ ಫಿಲ್ಮ್ಸ್‌ನ ವಿದ್ಯಾಧರ್ ಶೆಟ್ಟಿ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಇನ್ನು, ಸಕ್ಸಸ್ ಫಿಲ್ಮ್ಸ್‌ನ ದುಬೈ ಪಾಲುದಾರರಾದ ದೆಹಲಿ‌ ಮೂಲದ ಮಿನ್ಹಾಜ್ ಖಾನ್ ಅವರು ಈ ವೇಳೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಧೀರ್‌ ಅತ್ತಾವರ್‌ ಅವರು, ಶೀಘ್ರದಲ್ಲೇ ದುಬೈನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರಬ್ ಪಾಲುದಾರಿಕೆಯಲ್ಲಿ ಆರಂಭಿಸುವ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರತಿಭೆಗೆ ಸಂದ ಪ್ರಶಸ್ತಿ

ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ಎಂದಿಗೂ ಪ್ರಶಸ್ತಿ, ಸನ್ಮಾನ ಬಯಸಿದವರಲ್ಲ. ಆದರೆ, ಅವರ ಸಿನಿಮಾಗಳು, ಸಾಧನೆ ಅವರಿಗೆ ಪ್ರಶಸ್ತಿ ಹುಡುಕಿ ಬಂದಿದೆ. ಸನ್ಮಾಗಳೂ ಲೆಕ್ಕವಿಲ್ಲದಷ್ಟು ನಡೆದಿವೆ. ಮೊದಲೇ ಹೇಳಿದಂತೆ ಅವರು ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರು ಇತ್ತೀಚೆಗೆ ನಿರ್ದೇಶಿಸಿದ್ದ “ಮಡಿʼ ಚಿತ್ರಕ್ಕೆ ರಿಫ್ಟ್‌ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಿಕ್ಕಿದೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿರುವುದು ಅವರ ಕಥೆಯೊಳಗಿನ ಗಟ್ಟಿತನಕ್ಕೆ ಕಾರಣ.


“ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್. ಆಗಿತ್ತು. ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿತ್ತು. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿದ್ದರು. “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದರು. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ.

ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ. ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

ಬಾನುಲಿ ಸರಣಿ
ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ “ಹಮಾರೇ ಸ್ವತಂತ್ರ್ಯ ತಾ ಸೇನಾನಿʼ ಬಾನುಲಿ ಸರಣಿ ಕೂಡ ಬಂದಿದೆ. ಅದಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸ ಮಾಡಿದ ಸುಧೀರ್‌ ಬಗ್ಗೆ ಒಳ್ಳೇಯ ಮಾತುಗಳು ಕೇಳಿಬಂದಿದ್ದವು. ಮುಂಬೈನಲ್ಲಿರೋ ತಮ್ಮ ಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದರು.

ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಟ್ಟಿದ್ದರು. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದು ವಿಶೇಷ.

Categories
ಸಿನಿ ಸುದ್ದಿ

ಸಲಗ ಕೋಟಿಗೊಬ್ಬನ‌ ನಡುವೆಯೂ ನಿನ್ನ ಸನಿಹಕೆ ಹೌಸ್ ಫುಲ್!

ದಸರಾ ಹಬ್ಬ ಈಗಷ್ಟೇ ಮುಗಿದಿದೆ. ಆದರೆ, ಸಿನಿಮಾ ಹಬ್ಬ ಜೋರಾಗಿದೆ. ಹೌದು, ಒಂದೊಂದೇ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಸಿನಿಮಾ ಪ್ರೇಮಿ ಈಗ ಆ ಚಿತ್ರಗಳನ್ನು ಒಪ್ಪಿ ಅಪ್ಪಿಕೊಂಡಿದ್ದಾನೆ. ಆ ಸಾಲಿಗೆ ‘ನಿನ್ನ ಸನಿಹಕೆ’ ಚಿತ್ರವೂ ಸೇರಿದೆ.

ದೊಡ್ಡ ಚಿತ್ರಗಳ‌ ಅಬ್ಬರದ ನಡುವೆಯೂ ನಿನ್ನ ಸನಿಹಕೆ ಚಿತ್ರವನ್ನ ಪ್ರೇಕ್ಷಕರು ಕೈ ಬಿಡಲಿಲ್ಲ ಎಂಬುದು ಚಿತ್ರತಂಡದ ಖುಷಿ. ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲೂ ನಿನ್ನ ಸನಿಹಕೆ‌ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ದಲ್ಲಿ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ.
10ರಲ್ಲಿ 7 ಸ್ಕ್ರೀನ್ ಹೌಸ್ ಫುಲ್. 3 ಸ್ಕ್ರೀನ್ 90% ಫಿಲ್ ಅಗಿರುವುದು ತಂಡದ ಉತ್ಸಾಹಕ್ಕೆ ಕಾರಣವಾಗಿದೆ.
ಹಬ್ಬ, ವೀಕೆಂಡ್ ನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ಸ್ಕ್ರೀನ್ ಹೆಚ್ಚಿಸಲು ಕೆ.ಆರ್.ಜಿ‌ ಸ್ಟುಡಿಯೋಸ್ ನಿರ್ಧರಿಸಿದೆ.

ರಾಜ್ಯದಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲೂ ನಿನ್ನ ಸನಿಹಕೆ ಪ್ರದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ.
ಪ್ರೇಕ್ಷಕ ಹಾಗೂ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿರೋ ಚಿತ್ರದ ವೇಗ ಇನ್ನಷ್ಟು ಹೆಚ್ಚಿದೆ.

ದೊಡ್ಡ ಚಿತ್ರಗಳ‌ ಆಗಮನದಿಂದ ಥಿಯೇಟರ್ ಮತ್ತು ಸ್ಕ್ರೀನ್ಸ್ ಸಮಸ್ಯೆ ಎದುರಿಸಿದ್ದ ಚಿತ್ರತಂಡ. ಇದೀಗ ಪ್ರೇಕ್ಷಕರ ಒತ್ತಾಯ ನೋಡಿ‌ ಪರದೆಗಳನ್ನು ಹೆಚ್ಚಿಸಲು ವಿತರಕರು ಮುಂದಾಗ್ತಿದ್ದಾರೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ.

Categories
ಸಿನಿ ಸುದ್ದಿ

ಕಿಚ್ಚು ಹೆಚ್ಚಿಸಿದ ಕಿಚ್ಚನಿಗೆ ಪ್ರೇಕ್ಷಕರ ಬಹುಪರಾಕ್! ಕಳ್ಳ ಪೋಲೀಸ್ ಆಟದಲ್ಲಿ ಭರಪೂರ ಮನರಂಜನೆ!!

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಚಿತ್ರ : ಕೋಟಿಗೊಬ್ಬ 3

ನಿರ್ದೇಶನ: ಶಿವಕಾರ್ತಿಕ್

ನಿರ್ಮಾಣ : ಸೂರಪ್ಪ ಬಾಬು

ತಾರಾಗಣ: ಸುದೀಪ್, ನವಾಬ್, ಮಡೋನ ಸೆಬಾಸ್ಟಿಯನ್, ರವಿಶಂಕರ್ ಇತರರು

ಅಭಿನವ ಭಾರ್ಗವನ ಮುಂದೆ ಹಲ್ಲಲ್ಲು ಕಡಿದ, ಸಾಹಸಸಿಂಹ ವಿಷ್ಣುದಾದಾ ವಿರುದ್ದ ಕತ್ತಿ ಮಸೆದ ಖಳನಾಯಕನಿಗೆ ಕಿಚ್ಚ ಸುದೀಪ್ ಆಯುಧಪೂಜೆ ದಿನದಂದೇ ಮಹೂರ್ತವಿಟ್ಟಿದ್ದರು.ಧೂರ್ತ ದೇವೇಂದ್ರನ ಸಾಮ್ರಾಜ್ಯವನ್ನು ಹೊಡೆದುರುಳಿಸಬೇಕು ಜೊತೆಗೆ ಒಡೆಯ ದೇವೇಂದ್ರನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದರು. ಆದರೆ, ಆಯುಧಪೂಜೆಯ ದಿನದಂದು ಅಂದುಕೊಂಡ ಕೆಲಸ ನೆರವೇರಲಿಲ್ಲ. ಹಾಗಂತ, ಹಾಕಿದ್ದ ಸ್ಕೆಚ್ ಮರುದಿನ ಮಿಸ್ ಆಗಲೇ ಇಲ್ಲ.ಪ್ಲ್ಯಾನ್ ಪ್ರಕಾರ ಎಲ್ಲವೂ ನಡೀತು. ಕ್ಯಾನ್ಸಲ್ ಆದ ಶೋಗಳು ಮರುದಿನ ಬೆಳಗ್ಗೆಯಿಂದಲೇ ಪ್ರಾರಂಭಗೊಂಡವು. ಕಿಚ್ಚನ ಸೈನ್ಯ ಥಿಯೇಟರ್ ಗೆ ಮುತ್ತಿಗೆ ಹಾಕ್ತು. ಇತ್ತ ಕಿಚ್ಚ ಕಣ್ಣಲ್ಲೇ ಕೆಂಡ ಉಗುಳುತ್ತಾ, ಬಾಲಿವುಡ್ ಬಾದ್ ಷಾ ನಂತೆ ಎಂಟ್ರಿಕೊಟ್ಟರು. ನೋಡುಗರು ಏನಾಯ್ತು ಎನ್ನುವಷ್ಟರಲ್ಲಿ ದಾದಾ ವಿರುದ್ಧ ಕತ್ತಿಮಸೆದವನನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿಬಿಟ್ಟರು. ಇಷ್ಟೆಲ್ಲಾ ಆಗಿದ್ದು ಕೋಟಿಗೊಬ್ಬ 3 ಚಿತ್ರ ಬೆಳ್ಳಿತೆರೆ ಮೇಲೆ ಧಗಧಗಿಸಿದಾಗ.

ಅಂದ್ಹಾಗೇ, ಜೇಷ್ಠ ಸಿನಿಮಾದಲ್ಲಿ ದಾದಾಗೆ ಬಿಟೌನ್ ನವಾಬ್ ಎದುರಾಳಿಯಾಗಿದ್ದರು. ಭರ್ತಿ ಹದಿನೇಳು ವರ್ಷಗಳು ಕಳೆದ ಮೇಲೆ ಕಿಚ್ಚನ ಕೋಟಿಗೊಬ್ಬ 3 ಗೆ ಖಳನಾಯಕನಾಗಿ ಮತ್ತೆ ಕನ್ನಡಕ್ಕೆ ಬಂದು ಕಮಾಲ್ ಮಾಡಿದ್ದಾರೆ. ಕೋಟಿಗೊಬ್ಬ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಎವರ್ ಗ್ರೀನ್‌ ಸಿನಿಮಾ.‌ ಇದೇ ಸಿನಿಮಾದ ಟೈಟಲ್ ನ ಕೋಟಿಗೊಬ್ಬ 2 ಚಿತ್ರಕ್ಕೆ ಬಣ್ಣಹಚ್ಚಿದ ಕಿಚ್ಚ ದಾದಾ ಅಭಿಮಾನಿಗಳ ಹೃದಯ ಗೆದ್ದರು. ಯಜಮಾನನ ಭಕ್ತರು ಮಾಣಿಕ್ಯನನ್ನು ತಲೆಮೇಲೆ ಹೊತ್ಕೊಂಡು ಮೆರೆಸಿದರು. ಅಭಿಮಾನಿ ದೇವರುಗಳು ತೋರಿಸಿದ ಪ್ರೀತಿ ಹಾಗೂ ಪ್ರೋತ್ಸಾಹವೇ ಕೋಟಿಗೊಬ್ಬ 3 ಚಿತ್ರಕ್ಕೆ ಸ್ಪೂರ್ತಿಯಾಯ್ತು. ಫೈನಲೀ, ಕೋಟಿಗೊಬ್ಬ 3 ಚಿತ್ರ ಪ್ರೇಕ್ಷಕರನ್ನು ತಲುಪಿದೆ. ಬೆಳ್ಳಿತೆರೆ ಮೇಲೆ ಅಭಿನಯ ಚಕ್ರವರ್ತಿ ದರ್ಬಾರ್ ಜೋರಾಗಿದೆ. ಕೋಟಿಗೊಬ್ಬ ಅಂತ ಹೆಸರಿಟ್ಟುಕೊಂಡು ಎರಡನೇ ಭಾರಿ ಬಿಗ್ ಸ್ಕ್ರೀನ್ ಮೇಲೆ ಬಂದ ಕಿಚ್ಚನ ಸಿನಿಮಾ ಬರೀ ಮನರಂಜನೆ ನೀಡೋದಲ್ಲದೆ, ಒಂದೊಳ್ಳೆ ಸಂದೇಶ ನೀಡಿದೆ.

ಕೋಟಿಗೊಬ್ಬ 3 ಚಿತ್ರದಲ್ಲಿ ಅಂತದ್ದೇನಿದೆ? ಸತ್ಯ ಯಾರು ? ಶಿವ ಯಾರು ? ಸತ್ಯ ಹಾಗೂ ಶಿವ ಇಬ್ಬರು ಒಬ್ಬರೇನಾ ಅಥವಾ ಇಬ್ಬರು ಬೇರೆ ಬೇರೆನಾ? ಈ ರೀತಿಯ ಕನ್ಫೂಷನ್ ನ ಕೋಟಿಗೊಬ್ಬ 2 ಚಿತ್ರದಲ್ಲಿ ಕ್ರಿಯೇಟ್ ಮಾಡಿದ್ದರು. ಸಿನಿರಸಿಕರನ್ನು ಗೊಂದಲಕ್ಕೀಡು ಮಾಡಿದ್ರು. ಬಹುಷಃ ಆ ಕನ್ಫ್ಯೂಷನ್ ಗೆ ಕೋಟಿಗೊಬ್ಬ 3ನಲ್ಲಿ ಉತ್ತರ ಕೊಟ್ಟಿರ್ತಾರೆ ಅಷ್ಟೇ. ಹೀಗೆ ‌ಅಂದುಕೊಂಡು ಚಿತ್ರಮಂದಿರಕ್ಕೆ ಬರುವವರಿಗೆ ಕ್ಲ್ಯಾರಿಟಿ ಕೊಡುವುದರ ಜೊತೆಗೆ ಕಾಸು ಕೊಟ್ಟು ಥಿಯೇಟರ್ ಒಳಗಡೆ ಬಂದ ಪ್ರೇಕ್ಷಕ ಮಹಾಷಯನಿಗೆ ಮನರಂಜನೆಯನ್ನು ಕೊಟ್ಟು ಬೀಳ್ಕೊಟ್ಟಿದ್ದಾರೆ. ಒಂದಂತೂ ನಿಜ ಕೊಟ್ಟ ಕಾಸಿಗೆ ಇಲ್ಲಿ ಮೋಸವಿಲ್ಲ.

ಆಟೋರಿಕ್ಷಾ ಏರಿ ಎಂಟ್ರಿ ತೆಗೆದುಕೊಳ್ಳುವ ಕೋಟಿಗೊಬ್ಬ ಕಿಚ್ಚ, ಬಿಗ್ ಬಿ ಅಮಿತಾಬ್ ರಂತೆ ಕಾಣ್ತಾರೆ. ಪಟಾಕಿ ಪೋರಿ ಆಶಿಕಾ ರಂಗನಾಥ್ ಜೊತೆ ಕುಣಿದು ಕುಪ್ಪಳಿಸ್ತಾರೆ, ಬೇಬಿಡಾಲ್ ಆದ್ಯಾ ಮುಂದೆ ಮಂಡಿಯೂರ್ತಾರೆ. ಸ್ಟೈಲಿಷ್ ಲುಕ್ ನಲ್ಲಿ ಕಿಕ್ಕೇರಿಸುತ್ತಾರೆ. ಕಾರ್ ಚೇಸಿಂಗ್ ಮಾಡಿ ಚಿತ್ರಪ್ರೇಮಿಗಳನ್ನು ಎಡ್ಜ್ ಆಫ್‌ ದಿ ಸೀಟ್ ನಲ್ಲಿ ಕೂರಿಸ್ತಾರೆ. ಎದುರಾಳಿಗಳ ಜೊತೆ ಹೊಡೆದಾಡಿ ಮೀಸೆ ತಿರುವುತ್ತಾರೆ. ಕೊನೆಗೆ ಹೆತ್ತ ತಾಯಿ ಸಾವಿಗೆ ಕಾರಣರಾದ ಧೂರ್ತನಂತಿರುವ ದೇವೇಂದ್ರ ಅಲಿಯಾಸ್ ನವಾಬ್ ಷಾರನ್ನು ಮುಗಿಸಿ ಮರೆಯಾಗುತ್ತಾರೆ. ಅಲ್ಲಿಗೆ, ಕೋಟಿಗೊಬ್ಬ 3 ಗೆ ತೆರೆಬೀಳುತ್ತೆ.

ಕೋಟಿಗೊಬ್ಬ 2 ಚಿತ್ರ ದಲ್ಲಿದ್ದ ಎರಡು ಕ್ಯಾರೆಕ್ಟರ್ ಗಳು ಮಾತ್ರ ಕೋಟಿಗೊಬ್ಬ 3 ನಲ್ಲಿ ಕಂಟಿನ್ಯೂ ಆಗಿವೆ. ಸತ್ಯ ಹಾಗೂ ಶಿವ ಎರಡು ಪಾತ್ರದಲ್ಲಿ ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡಿದ್ದ ಸುದೀಪ್, ಭಾಗ 3 ರಲ್ಲೂ ಸತ್ಯ- ಶಿವ ಹಾಗೂ ಗೋಸ್ಟ್ ಅಂತ ಮತ್ತೆ ಕನ್ಫ್ಯೂಸ್ ಮಾಡಿದ್ದಾರೆ. ಜೈಲು ಹಕ್ಕಿ ಆಗಿದ್ದ ರವಿಶಂಕರ್ ಕೋಟಿಗೊಬ್ಬ 3 ನಲ್ಲೂ ಕಂಬಿಹಿಂದೆ ಹಲ್ಲಲ್ಲು ಕಡಿದು , ಕಿಚ್ಚನ ಮುಂದೆ ಬಂದಾಗ ಕಾಮಿಡಿ ಮಾಡುತ್ತಾ ಹಾಸ್ಯದ ರಸದೌತಣ ಉಣಬಡಿಸಿದ್ದಾರೆ. ನವಾಬ್ ಷಾ, ಅಫ್ತಾಬ್ ಶಿವದಾಸಿನಿ, ಶ್ರದ್ದಾದಾಸ್ ಕೋಟಿಗೊಬ್ಬನ ಜೊತೆ ಮೆರೆದಿದ್ದಾರೆ. ರಾಜೇಶ್ ನಟರಂಗ್, ಅಭಿರಾಮಿ,ತಾರಕ್ ಪಾತ್ರಗಳು ಗಮನ ಸೆಳೆಯುತ್ತವೆ. ರವಿಶಂಕರ್, ಶಿವರಾಜ್ ಕೆ. ಆರ್ ಪೇಟೆ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.ರಂಗಾಯಣ ರಘು ಹಾಗೂ ತಬಲನಾಣಿಯವರ ಪ್ರತಿಭೆಯನ್ನು ಇಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ. ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದರೂ ಕೇರಳದ ಕುಟ್ಟಿ ಮಡೋನ್ನ ಸೆಬಾಸ್ಟಿನ್ ಅಷ್ಟೇನು ಮೋಡಿ ಮಾಡಿಲ್ಲ ಅನ್ನೋದು ಬೇಸರದ ಸಂಗತಿ.

ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ. ಪೋಲ್ಯಾಂಡ್ ಕಾರ್ ಚೇಸಿಂಗ್ ದೃಶ್ಯಗಳು ರೋಮಾಂಚನಗೊಳಿಸುತ್ತವೆ. ಅರ್ಜುನ್ ಜನ್ಯಾ ಸಂಗೀತದ ಒಂದು ಹಾಡು ಹುಚ್ಚೆದ್ದು ಕುಣಿಸುತ್ತೆ, ಬ್ಯಾಗ್ರೌಂಡ್ ಸ್ಕೋರ್ ಕೊಂಚ ಸೊರಗಿದೆ. ಮೊದಲರ್ಧ ಮನರಂಜನೆಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತೆ. ಅಲ್ಲಲ್ಲಿ ಪಂಚಿಂಗ್ ಡೈಲಾಗ್ ಕೊರತೆ ಎದ್ದು ಕಾಣುತ್ತೆ.. ಕಿಚ್ಚ ಕೊಟ್ಟ ಒನ್ ಲೈನ್ ಸ್ಟೋರಿಗೆ ಸ್ಕ್ರೀನ್ ಪ್ಲೇ ಮಾಡಿಕೊಂಡ ನಿರ್ದೇಶಕ ಶಿವಕಾರ್ತಿಕ್ ಇನ್ನಷ್ಟು ಧಮ್ ಕಟ್ಟಬೇಕಿತ್ತು. ನಿರೂಪಣೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಎಲ್ಲೋ ಒಂದು ಕಡೆ ಟ್ರ್ಯಾಕ್ ಚೇಂಜ್ ಆಗುತ್ತೆ ಅನ್ನುವ ಹೊತ್ತಿಗೆ ಮದರ್ ಸೆಂಟಿಮೆಂಟ್ ಮೈನಸ್ ಪಾಯಿಂಟ್ ಗಳನ್ನ ಮರೆಸುತ್ತೆ. ಅಲ್ಲಲ್ಲಿ ಬಾಲಿವುಡ್ ರೇಂಜ್ ಗಿರುವ ಮೇಕಿಂಗ್ ಖುಷಿ ಕೊಡುತ್ತೆ. ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯಕ್ಕೆ ಇಂಟರ್ ನ್ಯಾಷನಲ್ ಕಿಲಾಡಿ‌ ಕಿರೀಟ ಸಲ್ಲಬೇಕು. ಕೋಟಿ‌ಕೋಟಿ ಸುರಿದು ನಾಲ್ಕು ವರ್ಷ ಕೈಕಟ್ಟಿ ಕುಳಿತ ಅನ್ನದಾತ ನಿರ್ಮಾಪಕ ಸೂರಪ್ಪ ಬಾಬುಗೆ ಕಿಚ್ಚನ ಪಡೆ ಸೆಲ್ಯೂಟ್ ಹೊಡಿಲೇಬೇಕು. ಕಾರಣ ಅದ್ಧೂರಿತನ.

ಇಲ್ಲಿ ಸತ್ಯ- ಶಿವ ಬೇರೆ ಬೇರೆನಾ? ಅಥವಾ ಇಬ್ಬರು ಒಬ್ಬರೇನಾ? ಇದೊಂದು ಕೂತೂಹಲಕ್ಕೆ ಸಿನಿಮಾ ನೋಡಬೇಕಿಲ್ಲ. ಕ್ರಿಷ್ ಹಾಗೂ ಧೂಮ್‌ ಸಿನಿಮಾದಷ್ಟೇ ರೋಚಕ ಎನಿಸೋ ಕಾರ್ ಚೇಸ್ ನೋಡಿದ ನಂತರ ಕೋಟಿಗೊಬ್ಬನ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚದೇ ಇರದು.ಇಲ್ಲೊಂದು ಮೆಡಿಕಲ್‌ ಮಾಫಿಯಾ ಇದೆ. ಜೊತೆಗೆ ರಿವೇಂಜ್ ಸ್ಟೋರಿ ಇಲ್ಲಿ ಹೈಲೆಟ್. ಉಳಿದಂತೆ, ಇಲ್ಲಿ ಸಣ್ಣ ಪ್ರೇಮ್ ಕಹಾನಿ ಇದೆ, ಅಮ್ಮನ ಸೆಂಟಿಮೆಂಟ್ ಕೂಡ ಇದೆ. ಭರ್ಜರಿ ಆಕ್ಷನ್ ಮತ್ತೊಂದು ಹೈಲೆಟ್.ಒಟ್ಟಾರೆ, ಇದು ಎಲ್ಲಾ ವರ್ಗಕ್ಕೂ ಸಲ್ಲುವ ಮನರಂಜನಾತ್ಮಕ ಸಿನಿಮಾ.

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಮೇಘನಾ ರಾಜ್ ಕೊಟ್ರು ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ – ಯುವ ಸಾಮ್ರಾಟನ ಫ್ಯಾನ್ಸ್ ಥ್ರಿಲ್ !

ಇಂತಹದ್ದೊಂದು ಸುದ್ದಿಗೋಸ್ಕರ ಸ್ಯಾಂಡಲ್‌ವುಡ್ ಯುವ ಸಾಮ್ರಾಟನ ಅಪ್ಪಟ ಅಭಿಮಾನಿಗಳು ಮಾತ್ರವಲ್ಲ, ನಟಿ ಮೇಘನಾ ರಾಜ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದರು. ಫೈನಲೀ ಅಭಿಮಾನಿ ದೇವರುಗಳ ಕಾಯುವಿಕೆಯ ಕೌತುಕಕ್ಕೆ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಆಸೆ-ಆಕಾಂಕ್ಷೆಯನ್ನು ಈಡೇರಿಸಿದ್ದಾರೆ. ವಿಐಪಿಗಳ ಕನಸಿನ ಕೋರಿಕೆಯಂತೆ, ಅವರ ಅಭಿಲಾಷೆಯಂತೆ ಬಣ್ಣದ ಜಗತ್ತಿಗೆ ಮರಳಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ನಟಿ ಮೇಘನಾ ಚಿತ್ರರಂಗಕ್ಕೆ ಮರಳಬೇಕು, ಮಾಯಲೋಕದಲ್ಲಿ ಮಿನುಗಬೇಕು ಎನ್ನುವುದು ಅಭಿಮಾನಿ ದೇವರುಗಳ ಅಭಿಲಾಷೆಯಾಗಿತ್ತು. ಮನೆದೇವರ ಅಗಲಿಕೆಯಿಂದ ಮನನೊಂದಿರುವ ಮೇಘನಾ ಆದಷ್ಟು ಬೇಗ ಚೇತರಿಸಿಕೊಂಡು ಗಂಧದಗುಡಿಗೆ ವಾಪಾಸ್ ಆಗ್ಬೇಕು ಅಂತ ಫ್ಯಾನ್ಸ್ ಬಯಸಿದ್ದರು. ಅಭಿಮಾನಿಗಳ ಮಹದಾಸೆಯಂತೆ ನಟಿ ಮೇಘನಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇವತ್ತು ಬೆಳಗ್ಗೆ ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ ಕೊಟ್ಟ ಮೇಘನಾ, ಸರ್ಜಾ ಕುಟುಂಬದ ವಿಐಪಿಗಳು ಹಾಗೂ ಆಟಗಾರನ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ.

ಅಷ್ಟಕ್ಕೂ, ಯಾವ್ ಸಿನಿಮಾ? ಏನ್ ಕಥೆ? ಅದ್ಯಾವ ಚಿತ್ರತಂಡವನ್ನು ಸೇರಿಕೊಂಡರು? ಅದೆಂತಾ ಪಾತ್ರಕ್ಕೆ ಜೀವ ತುಂಬಿದರು? ಈ ಕೂತೂಹಲವನ್ನು ನಟಿ ಮೇಘನಾ ಹಾಗೇ ಉಳಿಸಿದ್ದಾರೆ. ಮಿಲ್ಟ್ರಿ ಮಾಸ್ಕ್ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಕಾರು ಏರಿದ ಮೇಘನಾ, `ಶೂಟಿಂಗ್ ಫಾರ್ ಸಂಥಿಂಗ್ ರಿಯಲಿ ಎಕ್ಸೈಟಿಂಗ್ ಟುಡೇ’ ಅಂತ ಬ್ರಿಟಿಷರ ಭಾಷೆಯಲ್ಲಿ ಎರಡು ಲೈನ್ ಟೈಪ್ ಮಾಡಿ ಒಂದ್ ಫೋಟೋ ಸಮೇತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಘನಾ ಪೋಟೋ ಅಂಡ್ ಪೋಸ್ಟ್ ನೋಡಿ ನಿಜಕ್ಕೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಮೇಘನಾ ಕಮ್‌ಬ್ಯಾಕ್ ಪಯಣ ಭರ್ಜರಿಯಾಗಿ ಶುರುವಾಗಲಿ ಅಂತ ಆಶಿಸುತ್ತಿದ್ದಾರೆ.

ಅಂದ್ಹಾಗೇ, ಮೇಘನಾ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ-2 ಚಿತ್ರಗಳು ಚಿರು ಇದ್ದಾಗಲೇ ಒಪ್ಪಿಕೊಂಡಿದ್ದರು. ಚಿತ್ರೀಕರಣ ಕೂಡ ಶುರುವಾಗಿತ್ತು. ಈ ಮಧ್ಯೆ ವಿಧಿಯೆಂಬ ಆಟಗಾರನ ಆಟದಿಂದ ಯುವಸಾಮ್ರಾಟ ಚಿರು ಅರ್ಧಕ್ಕೆ ಜೀವನದ ಆಟ ಮುಗಿಸಬೇಕಾಗಿ ಬಂತು. ಜನ್ಮಕೊಟ್ಟ ಹೆತ್ತವರು, ರಕ್ತಹಂಚಿಕೊಂಡು ಹುಟ್ಟಿದ ಅಣ್ತಮ್ಮ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟೇ ಹೋದರು. ಚಿರು ಗೋಣು ಚೆಲ್ಲಿದ ಕ್ಷಣದಿಂದ ರಾಯನ್ ರಾಜ್ ಸರ್ಜಾ ಆಗಮನದವರೆಗೆ ಮನೆ-ಮನಸ್ಸು ಬರೀ ಕತ್ತಲೆಯಿಂದ ತುಂಬಿತ್ತು. ಆದ್ರೀಗ, ಎರಡು ಕುಟುಂಬದ ಮನೆ-ಮನಸ್ಸುಗಳಲ್ಲಿ ಪ್ರಕ್ಷುಬ್ಧ ಬೆಳಕಿನ ವಾತಾವರಣ.

ವಾಯುಪುತ್ರನನ್ನೇ ಹೋಲುವ, ಚಿರುನಾ ಕಣ್ಮುಂದೆ ತಂದು ನಿಲ್ಲಿಸುವ ರಾಯನ್ ರಾಜ್ ಸರ್ಜಾ ಇದೀಗ ಅಮ್ಮನನ್ನು ಶೂಟಿಂಗ್‌ಗೆ ಮರಳುವಂತೆ ಮಾಡಿದ್ದಾನೆ. `ಚಿರು ನನ್ನ ರಾಜ ನಮ್ಮ ರಾಯನ್ ನನ್ನ ಯುವರಾಜ’ ಹೀಗನ್ನುವ ಮೇಘನಾ ಮತ್ತೆ ಕಲಾಸರಸ್ವತಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಜಾಹೀರಾತುಗೋಸ್ಕರ ಬಣ್ಣ ಹಚ್ಚಿದ್ದರು. ಇದಾದ್ಮೇಲೆ ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೀತು. ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಿರ್ದೇಶಕನ ಕಲ್ಪನೆಯಲ್ಲಿ ಅರಳಿದ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಪತ್ನಿ ಮೇಘನಾ ಕಲಾರಾಧನೆಗೆ ಬೆಳ್ಳಿಮೋಡಗಳಿಂದಲೇ ಚಿರು ಹಾರೈಸುತ್ತಿರುತ್ತಾರೆ. ಸೋ, ಸದ್ಯಕ್ಕೆ ಗುಟ್ಟಾಗಿರುವ ನಟಿ ಮೇಘನಾ ಸಿನಿಮಾ ಹಾಗೂ ಪಾತ್ರ ಆದಷ್ಟು ಬೇಗ ಅವರೇ ಹೇಳಿಕೊಳ್ಳಲಿ. ಫ್ಯಾನ್ಸ್ ಜೊತೆ ಬೆಳ್ಳಿಪರದೆಯನ್ನು ಖುಷಿಪಡಿಸಲಿ ಅನ್ನೋದೇ ನಮ್ಮ ಆಸೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಲ್ಮಾನ್‌ ಖಾನ್‌ ಚಿತ್ರಕ್ಕೆ ರವಿಬಸ್ರೂರು ಸಂಗೀತ


ಕನ್ನಡ ಚಿತ್ರರಂಗವನ್ನು ಪರಭಾಷಿಗರು ಅದ್ಯಾವತ್ತೋ ಒಪ್ಪಿ ಅಪ್ಪಿದ್ದಾಗಿದೆ. ಇಲ್ಲಿನ ಸಿನಿಮಾಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾಗಿದೆ. ಹಾಗಾಗಿಯೇ ಈಗ ಕನ್ನಡದ ಹೀರೋಗಳು, ನಿರ್ದೇಶಕರು ಅಷ್ಟೇ ಯಾಕೆ ತಾಂತ್ರಿಕ ವರ್ಗದವರಿಗೆ ಬೇಡಿಕೆ ಹೆಚ್ಚು. ಇಲ್ಲಿನ ಅನೇಕರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿ ಅಂದರೆ, “ಉಗ್ರಂ” ಮತ್ತು “ಕೆಜಿಎಫ್‌” ಮೂಲಕ ಜೋರು ಸುದ್ದಿ ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.

ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಈ ಬಗ್ಗೆ ರವಿ ಬಸ್ರೂರು ಅವರೇ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದೇನೆ. ಈ ನನ್ನ ಜರ್ನಿಗೆ ನಿಮ್ಮ ಬೆಂಬಲ ಹೀಗೆ ಇರಲಿ” ಎಂದು ತಮ್ಮ ಸಂಭ್ರವನ್ನು ಹಂಚಿಕೊಂಡಿದ್ದಾರೆ ರವಿಬಸ್ರೂರು.


“ಅಂತಿಮ್” ದಿ ಫೈನಲ್ ಟ್ರೂತ್ ಚಿತ್ರವನ್ನು ಮಹೇಶ್ ಮಂಜ್ರೆಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಬಸ್ರೂರು ಸಂಗೀತ ನೀಡುತ್ತಿರುವುದು ವಿಶೇಷವಾದರೂ, ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ “ಕೆಜಿಎಫ್”. ಇದು ರವಿಬಸ್ರೂರು ಅವರಿಗೆ ಪರಭಾಷೆಯಲ್ಲಿ ಹೆಸರು ತಂದುಕೊಟ್ಟಿತು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಿಗೂ ಸಂಗೀತ ನೀಡುತ್ತಿರುವ ರವಿಬಸ್ರೂರು, ಇನ್ನೂ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೌದು, ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್, ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡುತ್ತಿದ್ದು, ಆ ನೈಜ ಚಿತ್ರಕ್ಕೆ ‘ಗರುಡ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್‌ ಹೇಳುತ್ತಿದೆ. ಈಗಾಗಲೇ ರವಿ ಬಸ್ರೂರ್ ಹಿಂದಿಯ ಯುಧ್ರಾ. ‘ಗಲ್ಲಿ ಬಾಯ್’ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

error: Content is protected !!