Categories
ಸಿನಿ ಸುದ್ದಿ

ಸೀತಮ್ಮನ ಮಗ ಶೂಟಿಂಗ್ ನಲ್ಲಿ ನಡೆದೇ ಹೋಯ್ತು ನಟ ಯತಿರಾಜ್ ಮದ್ವೆ!

ನಟ ಕಮ್ ನಿರ್ದೇಶಕ ಯತಿರಾಜ್ ಮದ್ವೆಯಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಯತಿರಾಜು, ದಿಢೀರ್ ಮದ್ವೆ ಆಗಿದ್ದಾರೆ! ಅದೂ ಸೀತಮ್ಮನ ಮಗ ಚಿತ್ರದ ಶೂಟಿಂಗ್ ವೇಳೆ…

ಸೋನು ಫಿಲಂಸ್ ಬ್ಯಾನರ್ ನಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಾಣದ, ಯತಿರಾಜ್ ನಿರ್ದೇಶಿಸುತ್ತಿರುವ “ಸೀತಮ್ಮನ ಮಗ” ಚಿತ್ರಕ್ಕೆ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.


ಕಳೆದ ಹದಿನೈದು ದಿನಗಳಿಂದ ಅಲ್ಲಿನ ಮನೆ, ಶಾಲೆ ಹಾಗೂ ಸುಂದರ ಪರಿಸರದಲ್ಲಿ ಅನೇಕ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌ ಮತ್ತು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿನು ಮನಸು ಸಂಗೀತ ‌ನಿರ್ದೇಶನವಿರುವ ಈ ಚಿತ್ರಕ್ಕೆ ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಅವರ ಸಹ ನಿರ್ದೇಶನವಿದೆ. ಅಂದಹಾಗೆ, ನಟ ಕಮ್ ನಿರ್ದೇಶಕ ಯತಿರಾಜ್ ಅವರು ಮದ್ವೆ ಆಗಿರೋದು ನಿಜ. ಹಾಗಂತ ಅದು ರಿಯಲ್ ಮದ್ವೆ ಅಲ್ಲ,

ರೀಲ್ ಮದ್ವೆ. ಸೀತಮ್ಮನ ಮಗ ಚಿತ್ರದ ಚಿತ್ರೀಕರಣದ ದೃಶ್ಯ ಒಂದರಲ್ಲಿ ಯತಿರಾಜ್ ಮದುವೆ ನಡೆದಿದೆ. ಅದು ಯಾಕೆ ಅನ್ನೋ ಕುತೂಹಲಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

Categories
ಸಿನಿ ಸುದ್ದಿ

ದಿವ್ಯ ಆಚಾರ್ ಮೌನ!‌ಮಾಡೆಲಿಂಗ್‌ ಹುಡುಗಿಯ ಆಲ್ಬಂ ಸಾಂಗ್


ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿವ್ಯ ಆಚಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ. ಬಾಲ್ಯದಿಂದಲೂ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯ ಆಚಾರ್ ತನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಎರಡು ಚಿತ್ರಗ ಳ ಲ್ಲಿ ಪ್ರಮುಖ ಪಾತ್ರ ನಟಿಸಿದ್ದಾರೆ.

“ನಾನು ಪೂರ್ಣಪ್ರಮಾಣದ ನಾಯಕಿ ಆಗಬೇಕು ಎಂಬ ಆಸೆ ಈಡೇರಿದೆ ಹೌದು ಒಂದು ಕಥೆ ಕೇಳಿದ್ದು ತುಂಬಾ ಇಷ್ಟವಾಗಿದೆ ಅತಿ ಶೀಘ್ರದಲ್ಲೇ ಸೆಟ್ಟೇರಲಿದ್ದು ತುಂಬಾ ಖುಷಿಯಾಗುತ್ತಿದೆ ಮುಂದಿನ ದಿನದಲ್ಲಿ ಈ ಚಿತ್ರದ ಬಗ್ಗೆ ತಿಳಿಯಲಿದೆ.
“ಮೌನ” ಎಂಬ ಟೈಟಲ್ ನ ಒಂದು ಆಲ್ಬಮ್ ಸಾಂಗ್ ಇಷ್ಟವಾಗಿದ್ದು ಇದರಲ್ಲಿ ನಟಿಸುತ್ತಿದ್ದೇನೆ ತುಂಬಾ ಖುಷಿಯಾಗುತ್ತಿದೆ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ಇದರ ಪೋಸ್ಟರ್ ಹೊಸವರ್ಷದ
ದಿನದೊಂದು ಬಿಡುಗಡೆಯಾಗಲಿದೆ.

ಮದರ್ ಹಾರ್ಟ್ ಪ್ರೊಡಕ್ಷನ್ ನಲ್ಲಿ
ಮೂಡಿಬರಲಿದ್ದು ಈ ಹಾಡಿಗೆ ಸಾಹಿತ್ಯ ನಿರ್ದೇಶನ ದೇವ್ ಸಂಗೀತ ಮಂಜುಕವಿ ನೃತ್ಯ ಮಧುಮಿತ ಮಾಡಿದ್ದಾರೆ.

Categories
ಸಿನಿ ಸುದ್ದಿ

ಭಯಂಕರ ನಟನ ಟ್ರೇಲರ್‌ ರೆಡಿ; ಪ್ರಥಮ್‌ ನಟನೆಯ ನಟ ಭಯಂಕರ ಥ್ರಿಲ್ಲಿಂಗ್ ಸಿನಿಮಾ!

ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ನಟ ಭಯಂಕರ” ಚಿತ್ರದ ಥ್ರಿಲ್ಲಿಂಗ್ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾರರ್, ಕಾಮಿಡಿ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ‌ ಚಿತ್ರ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಹೆಚ್. ಪಿ. ನಿತೇಶ್ ಈ ಚಿತ್ರದ ಸಹ ನಿರ್ಮಾಪಕರು.

ಉದಯ್ ಮೆಹ್ತಾ ಅವರು ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ. ಧ್ರುವ ಸರ್ಜಾರ ಧ್ವನಿ ಚಿತ್ರದುದ್ದಕ್ಕೂ ಕೇಳಿಸಲಿದೆ.


ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್ ಹಾಗೂ ಅರಸು ಅಂತಾರೆ ಹಾಡುಗಳನ್ನು ರಚಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಈಗ ಡಿಐ ನಡೆಯುತ್ತಿದೆ.‌

ಪ್ರಥಮ್ ಅವರೊಂದಿಗೆ ಹಿರಿಯ ನಟ ಸಾಯಿಕುಮಾರ್ ಸಹ ನಟಿಸಿದ್ದಾರೆ. ಡಕೋಟ ಎಕ್ಸ್‌ಪ್ರೆಸ್ ನ ನಂತರ ಓಂಪ್ರಕಾಶ್ ರಾವ್ ನಟಿಸಿರುವ ಕಾಮಿಡಿ ಚಿತ್ರವಿದು. ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಇದ್ದಾರೆ.

Categories
ಸಿನಿ ಸುದ್ದಿ

ಫಿಲ್ಮಾಹಾಲಿಕ್‌ ಫೌಂಡೇಶನ್‌ನ ಸಿನಿಮಾ ಅಂತರಂಗ ಚಿತ್ರೋತ್ಸವ ಯಶಸ್ವಿ; 11 ವಿಭಾಗದಲ್ಲಿ ಪ್ರಶಸ್ತಿ ವಿತರಣೆ

ಇದು ಫಿಲ್ಮಾಹಾಲಿಕ್ ಫೌಂಡೇಶನ್ ನಡೆಸುವ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ -2021

ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ಅಯೋಜಿಸಿದ್ದ ಸಿನಿಮಾ ಅಂತರಂಗ ಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. 50ಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು. ರಾಜ್ಯದಲ್ಲಿ ಮೊದಲ ಬಾರಿಗೆ ಇಂಡಿಪೆಂಡೆಂಟ್ ಚಲನಚಿತ್ರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ವಿಶೇಷವಾಗಿತ್ತು. ಸಸಿಯೊಂದಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಂತರ ಚಿತ್ರೋತ್ಸವದಲ್ಲಿ ಮೂರು ಉತ್ತಮ ಚಿತ್ರಗಳು ಪ್ರದರ್ಶನಗೊಂಡವು. “ದನಗಳು”, “ಕೇರಳ ಪ್ಯಾರಡೈಸ್”‌ ಮತ್ತು “ದಾರಿ ಯಾವುದಯ್ಯ ವೈಕುಂಟಕ್ಕೆ” ಚಿತ್ರಗಳು ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡವು.


ಅದಕ್ಕೂ ಮುನ್ನ ಚಿತ್ರ ನಿರ್ಮಾಣ ಕಾರ್ಯಗಾರವನ್ನು ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಪಕ, ನಿರ್ದೇಶಕ ಡಾ.ರಾಜಾ ಬಾಲಕೃಷ್ಣ ಅವರು ನಡೆಸಿಕೊಟ್ಟರು. ಅವಿನಾಶ್ ಶೆಟ್ಟಿ, ಪ್ರಯಾಗ್, ನಂದಲಿಕೆ ನಿತ್ಯಾನಂದ ಪ್ರಭು, ಡಾ.ರಾಜಗೋಪಾಲನ್, ಕಲಾದೇಗುಲ ಶ್ರೀನಿವಾಸ್, ಮನೋಜ್ ಕುಮಾರ್, ಮುಕುಲ್ ಗೌಡ ಅವರು ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಫಿಲ್ಮಾಹಾಲಿಕ್ ಫೌಂಡೇಶನ್ನ ಲಕ್ಷ್ಮೀಶ ರಾಜು ಹಾಗೂ ಪ್ರವೀಣಾ ಕುಲ್ಕರ್ಣಿ ಕೂಡ ಉಪಸ್ಥಿತರಿದ್ದರು.

ಸಂಜೆ ನಡೆದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮಕ್ಕೆ ಪದ್ಮಶ್ರೀ ಡಾ.|ದೊಡ್ಡರಂಗೇಗೌಡ ಅವರು ಚಾಲನೆ ಕೊಟ್ಟರು. ಸಂಗೀತ ನಿರ್ದೇಶಕ ವಿ.ಮನೋಹರ್, ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ದೇವಸ್ಥಾನದ ಮುಖ್ಯಸ್ಥ ಡಾ. ಅಂಬರೀಶ್, ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕ ಆದಿತ್ಯ. ಆರ್. ಎ, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್ ಹೆಚ್ ಆರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ವ್ಯೂಹ ಕಾದಂಬರಿ ಬಿಡುಗಡೆ…

ಅಪ್ಪು ಅಜರಾಮರ ಕಾರ್ಯಕ್ರಮದಲ್ಲಿ ಅಪ್ಪು ಅವರ ಚಿತ್ರವನ್ನು ರಬಿಕ್ ಕ್ಯೂಬ್ಸ್ ನಲ್ಲಿ ಹರಿಹಂತ ಜೈನ್ ಅವರು ಚಿತ್ರಿಸಿದರು. ಅಪ್ಪು ಅವರ ಸವಿನೆನಪಿನಲ್ಲಿ ಅನೇಕ ಪ್ರತಿಭಾವಂತರು ಕಳಿಸಿದ್ದ ಹಾಡುಗಳನ್ನು, ನೃತ್ಯ ಹಾಗೂ ಮೋನೋ ಆಕ್ಟಿಂಗ್ ವಿಡಿಯೋ ಪ್ರದರ್ಶಿಸಲಾಯಿತು. ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದ “ವ್ಯೂಹ” ಕಾದಂಬರಿ ಕೂಡ ಇದೇ ವೇಳೆ ಬಿಡುಗಡೆಯಾಯಿತು. ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಬಿಡುಗಡೆ ಮಾಡಿ ಶುಭ ಕೋರಿದರು.

“ವ್ಯೂಹ” ಕಾದಂಬರಿಯನ್ನು ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಕಿಶೋರ್ ಎಂಟರ್‌ಟೈನರ್ಸ್‌ ಮೂಲಕ ಚಿತ್ರ ನಿರ್ಮಾಣ ಮಾಡಲಿದೆ. ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ನಿರ್ಮಿಸಿದ್ದ “ಅಪ್ಪು ನೆನಪು” ಹಾಡನ್ನು ಇದೇ ವೇಳೆ “ಮ್ಯೂಸಿಕ್ ಬಾಕ್ಸ್” ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಇದೇ ಸಮಯದಲ್ಲಿ ಫಿಲ್ಮಾಹಾಲಿಕ್ ಕ್ಲಬ್ ಉದ್ಘಾಟಿಸಿತು. ಫಿಲ್ಮಾಹಾಲಿಕ್ ಕ್ಲಬ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ, ಕ್ರೀಡೆ ಹಾಗೂ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ.

11 ವಿಭಾಗದಲ್ಲಿ ಪ್ರಶಸ್ತಿ

ಸಿನಿಮಾ ಅಂತರಂಗ ಚಿತ್ರೋತ್ಸವದಲ್ಲಿ 11 ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಕೇರಳ ಪ್ಯಾರಡೈಸ್‌ ಉತ್ತಮ ಚಿತ್ರವಾಗಿ ಹೊರಹೊಮ್ಮಿದರೆ, ದಾರಿ ಯಾವುದಯ್ಯ ವೈಕುಂಟಕೆ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಅದೇ ಚಿತ್ರದ ನಟನೆಗೆ ಬಲರಾಜವಾಡಿ ಅವರಿಗೆ ಉತ್ತಮ ಸಹನಟ ಪ್ರಶಸ್ತಿ ಲಭಿಸಿತು. ಕಟಿಲ್‌ ಚಿತ್ರದ ಉತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಬಿ. ಲೆನಿನ್ ಪಡೆದರೆ, ದ್ವಿಭಜಕ ಚಿತ್ರ ಉತ್ತಮ ಸಂಕಲನ ಪ್ರಶಸ್ತಿಯನ್ನು ರತೇಶ್ ಕೌಸಲ್ಯ ಪಡೆದರು. ಮಂತ್ರಿ ಹಾಂಡ್ಸ್‌ಮ್‌ ಸೋಲ್ಸ್‌ ಚಿತ್ರಕ್ಕೆ ರಾಜು ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದರು. ಕಟಿಲ್‌ ಚಿತ್ರದ ಉತ್ತಮ ನಟಿ ಪ್ರಶಸ್ತಿ ಸೃಷ್ಟಿ ದಂಗಿ, ಕವಡೆ ಕಾಸಿನ ಚಿತ್ರದ ಕರ್ಣ ಕುಮಾರ್‌ ಉತ್ತಮ ನಟ ಪ್ರಶಸ್ತಿ, ಮತ್ತು ಇದೇ ಚಿತ್ರದ ಉತ್ತಮ ಸಂಗೀತ ಪ್ರಶಸ್ತಿ ಜೀವರತ್ನಮ್ ಪಡೆದರು.


ವಿಶೇಷ ತೀರ್ಪುಗಾರರ ಪ್ರಶಸ್ತಿಗೆ “ದನಗಳು” ಚಿತ್ರ ಆಯ್ಕೆಯಾಯಿತು. ಇದೇ ವೇಳೆ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್‌ಗೆ ಸಮಾಜ ಸೇವೆ ಸಲ್ಲಿಸಿದ ಗಣ್ಯರು, ಸಾಹಿತ್ಯ, ರಂಗಭೂಮಿ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಈ ಚಿತ್ರೋತ್ಸವಕ್ಕೆ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮುಖ್ಯಸ್ಥ ಡಾ.ಅಂಬರೀಶ್ ಜಿ, ಕವಿತಾ ಕಲ್ಪತರು ಫೌಂಡೇಶನ್ ಮುಖ್ಯಸ್ಥೆ ಕವಿತಾ ಶ್ರೀನಾಥ್,

ಬರಹಗಾರ್ತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ಎನ್ ಟಿ ಸುರೇಶ್, ಪ್ರಕೃತಿ ಪ್ರಸನ್ನ, ಸವಿತಾ ರಾಮು, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ದಿಲೀಪ್ ಕುಮಾರ್, ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದಾನಂದ ಸ್ವಾಮಿ ಸಹಪ್ರಾಯೋಜಕರಾಗಿದ್ದರು. ಈ ವೇಳೆ ಫಿಲ್ಮಾಹಾಲಿಕ್‌ ಫೌಂಡೇ಼ಶನ್‌ನ ಕಿಶೋರ್ ಸಾವಂತ್, ಗಣೇಶ್,ಚಂದ್ರಕಾಂತ್, ಉದಯ್ ಕುಮಾರ್, ಲಕ್ಷ್ಮೀಶ ರಾಜು, ಪ್ರಜ್ಞಾ ಬಿ, ಕಿರಣ್ ಬಿ ಎನ್, ಪ್ರವೀಣಾ ಕುಲ್ಕರ್ಣಿ, ಮುರಳಿ, ತೇಜಸ್ವಿನಿ ರಾವ್, ಜಯಪ್ರಕಾಶ್ ಇತರರು ಇದ್ದರು.

Categories
ಸಿನಿ ಸುದ್ದಿ

ಪ್ರಜ್ವಲ್‌ ನಟನೆಯ ಅರ್ಜುನ್‌ ಗೌಡ ಡಿ.31ರಿಂದ ರಾಜ್ಯಾದ್ಯಂತ ಪ್ರಜ್ವಲಿಸಲಿದೆ

ರಾಮು ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಅರ್ಜುನ್ ಗೌಡ” ಚಿತ್ರ ಡಿ.31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ.

ಉಳಿದಂತೆ ಈ ಚಿತ್ರದಲ್ಲಿ ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ‌ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದಿಗಂತ್‌ ಹುಟ್ಟುಹಬ್ಬದ ಶುಭಾಶಯಗಳು; ಡಿ.31ಕ್ಕೆ ರಾಜ್ಯಾದ್ಯಂತ ಬಿಡುಗಡೆ

ದಿಗಂತ್‌ ಅಭಿನಯದ “ಹುಟ್ಟು ಹಬ್ಬದ ಶುಭಾಶಯಗಳು” ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಡಿಸೆಂಬರ್‌ 31ರಂದು ರಿಲೀಸ್‌ ಆಗುತ್ತಿದೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್‌ ಸಿನಿಮಾಸ್ ಬ್ಯಾನರ್‌ ನಲ್ಲಿ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಾಣ ಮಾಡಿದ್ದಾರೆ.

ನಾಗರಾಜ್ ನಿರ್ದೇಶನದ ಈ ಚಿತ್ರಕ್ಕೆ ದಿಗಂತ್ ಅವರಿಗೆ ನಾಯಕಿಯಾಗಿ ಕವಿತಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಚೇತನ್ ಗಂಧರ್ವ, ಮಡೆನೂರು ಮನು, ಶರಣ್ಯ ಶೆಟ್ಟಿ, ಸೂರಜ್, ಸೂರ್ಯ ಮುಂತಾದವರು ನಟಿಸಿದ್ದಾರೆ.

ಪ್ರಸನ್ನ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಆನಂದ್ ರಾಜ್ ವಿಕ್ರಂ ಹಿನ್ನೆಲೆ ಸಂಗೀತ, ಅಭಿಲಾಶ್ ಕಲತ್ತಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸರಾಫ್ ಅವರ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪುನೀತ್ – ಯಶ್ವಂತ್‌ ನಮನ ;‌ ಡಿ.30ರ ಸಂಜೆ ನೃತ್ಯ ಸಂಗೀತ ಸಮ್ಮಿಲನ-

ಕನ್ನಡದ ಚಿತ್ರರಂಗಕ್ಕೆ ಪುನೀತ್‌ ನಿಧನ ಬರಸಿಡಿಲು ಬಡಿದಂತಾಗಿದ್ದು ನಿಜ. ಇಂದಿಗೂ ಅವರಿಲ್ಲ ಅನ್ನುವ ಭಾವನೆ ಯಾರಲ್ಲೂ ಇಲ್ಲ. ಅಂತಹ ನಟನ ಬಗ್ಗೆ ಗುಣಗಾನ ಮಾಡದವರಿಲ್ಲ. ಅವರ ನೆನಪಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆ ಸಾಲಿಗೆ ಈಗ ಅವರ ಸ್ಮರಣಾರ್ಥ “ನೃತ್ಯ ಸಂಗೀತ ಸಮ್ಮಿಲನ” ಕಾರ್ಯಕ್ರಮ ಆಯೋಜಿಸಲಾಗಿದೆ. ಹೌದು, ವೈಕೆ ಕ್ರಿಯೇಷನ್ಸ್‌ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಕೋವಿಡ್‌ನಿಂದ ಮೃತಪಟ್ಟ ಯಶವಂತ್‌ ಕುಮಾರ್‌ ಅವರ ನೆನಪಿಗೂ ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದ್ದು, ಅವರ ಕುಟುಂಬದ ಸಹಾಯಾರ್ಥ ನಡೆಸಲಾಗುತ್ತಿದೆ. ಅಂದಹಾಗೆ, ಡಿಸೆಂಬರ್‌ ೩೦ರಂದು ಸಂಜೆ ೪ ಗಂಟೆಗೆ ಗಾಂಧಿನಗರದ ಗುಬ್ಬಿ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ಅಂದು ಶಾಸಕ ಭೈರತಿ ಸುರೇಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಮಹೇಂದ್ರ ಮನೋತ್‌, ರೇಖಾ ಎಸ್.ರಾವ್‌, ಹರೀಶ್‌ ಕುಮಾರ್‌, ಶಾಂತಾ ಕೃಷ್ಣಮೂರ್ತಿ, ಗಂಡಸಿ ಸದಾನಂದಸ್ವಾಮಿ ನಟ ಬಾಲರಾಜ್, ನಿರ್ಮಾಪಕರಾದ ಡಾ.ಕೃಷ್ಣ, ಕೆ.ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಅನೇಕ ಚಿತ್ರರಂಗದ ಗಣ್ಯರು, ಸಮಾಜ ಸೇವಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.


ಅಂದಹಾಗೆ, ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿದ್ದ ಯುವ ಉತ್ಸಾಹಿ ಫೋಟೋಗ್ರಾಫರ್‌, ರ್ಯಾಪರ್, ವಿಡಿಯೋ ಎಡಿಟರ್, ಡ್ಯಾನ್ಸರ್, ಲಿರಿಕ್ ರೈಟರ್, ಶಾರ್ಟ್ ಫಿಲ್ಮ್ ಡೈರೆಕ್ಟರ್ ಯಶವಂತ್‌ಕುಮಾರ್‌ ಅವರು ಕೋವಿಡ್‌ನಿಂದಾಗಿ ನಿಧನರಾದರು. ಅವರೀಗ ನೆನಪು ಮಾತ್ರ. ಅವರ ಆಕಾಲಿಕ ಮರಣ ಅವರ ಕುಟುಂಬವನ್ನು ಮಾತ್ರವಲ್ಲ ಆತನ ಅದೆಷ್ಟೋ ಮಂದಿ ಸ್ನೇಹಿತರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಅದರಲ್ಲೂ ಮಗನನ್ನು ಅತೀವ ಪ್ರೀತಿಯಿಂದ ಸಾಕಿ ಸಲಹಿದ್ದ ಅವರ ತಾಯಿ ಇಂದಿಗೂ ದುಃಖದಲ್ಲಿದ್ದಾರೆ. ಯುವ ಊತ್ಸಾಹಿ ಪ್ರತಿಭಾವಂತ ಹುಡುಗ ಯಶವಂತ್‌ ಕುಮಾರ್, ಕನ್ನಡ ಚಿತ್ರರಂಗದ ಪೋಷಕ ನಟಿ ರಾಣಿ ಅವರ ಪುತ್ರ.‌

ತಾಯಿ ಕಲಾ ಜಗತ್ತಿನಲ್ಲಿದ್ದಾರೆಂಬ ಸೆಳೆತದಿಂದ ಚಿಕ್ಕ ವಯಸ್ಸಿನಲ್ಲಿಯೇ ವಿಡಿಯೋ ಎಡಿಟಿಂಗ್‌ ಹಾಗೂ ಫೋಟೋಗ್ರಫಿ ಕಲಿತು, ತನ್ನ ಕಾಲ ಮೇಲೆ ತಾನು ನಿಲ್ಲಲು ಹೊರಟಿದ್ದ ಯುವ ಪ್ರತಿಭೆ. ಸಾಕಷ್ಟು ಮಂದಿ ಮಾಡೆಲಿಂಗ್‌ ಬೆಡಗಿಯರ ಫೋಟೋಗಳನ್ನು ಕ್ಕಿಕ್ಕಿಸಿದ್ದು ಯಶವಂತ್‌ ಫೋಟೋಗ್ರಫಿಯ ವಿಶೇಷವೇ ಹೌದು. ಡಿಜೆಯಾಗಿಯೂ ಗುರುತಿಸಿಕೊಂಡಿದ್ದ ಯಶವಂತ್‌, ಸಾಕು ನಾಯಿಗಳ ಮೇಲೆ ಅತೀವ ಪ್ರೀತಿ ಹೊಂದಿದ್ದರು. ವಿದೇಶದ ದುಬಾರಿ ನಾಯಿಗಳನ್ನು ತರಿಸಿ, ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಾಕುತ್ತಿದ್ದ ಆತನ ಶ್ವಾನ ಪ್ರೀತಿ ಬಣ್ಣಿಸಲಾಗದು. ಮನುಷ್ಯರಷ್ಟೇ ತನ್ನ ಸಾಕು ನಾಯಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ವಿಧಿಯಾಟ ಆತನನ್ನು ಬಹುಬೇಗ ಸೆಳೆದುಕೊಂಡು ಬಿಟ್ಟಿತು.

ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಯಶವಂತ್, ತುಂಬಾ ಮೃದು ಸ್ವಭಾವದ ಹುಡುಗ. ಸದಾ ಏನಾದರೊಂದು ಹೊಸತನ್ನು ಮಾಡುವ ಹಂಬಲ ಅವನಲ್ಲಿತ್ತು. ಜೀವನದಲ್ಲಿ ಸಾಧಿಸಿ ಮುಂದೆ ಬರಬೇಕು ಎಂದು ಹಗಲಿರುಳು ಎಲ್ಲಾ ವಿಭಾಗಗಳಲ್ಲೂ ದುಡಿಯುತ್ತಿದ್ದ ಯಶವಂತ್, ಸಿನಿಲಹರಿ ಕಚೇರಿಯಲ್ಲಿ ವಿಡಿಯೋ ಎಡಿಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಸದಾ ಉತ್ಸಾಹದಲ್ಲಿರುತ್ತಿದ್ದ ಯಶವಂತ್ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಅವರು ಜೊತೆಗಿದ್ದಾರೆ.

ಅಪ್ಪು ಅವರೂ ಸದಾ ನೆನಪಲ್ಲಿರುವ ಜೀವ. ಹಾಗಾಗಿ, ಅವರ ನಟಿ ರಾಣಿ ಅವರು ತಮ್ಮ ಪುತ್ರನ ನೆನಪಿಗಾಗಿ, ಅಪ್ಪು ಅವರ ಮೇಲಿರುವ ಅಭಿಮಾನಕ್ಕಾಗಿಯೇ, ಈ ನೃತ್ಯ ಸಂಗೀತ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಂದು ಸಿನಿರಂಗದ ಕಲಾವಿದರು, ತಾಂತ್ರಿಕ ವರ್ಗದವರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಬಿ.ಎಲ್. ವೇಣು ಕಾದಂಬರಿ ಚಿತ್ರಕ್ಕೆ ಪ್ರಶಸ್ತಿ; ‌ದನಗಳು ಸಿನಿಮಾಗೆ ಫಿಲ್ಮಾಹಾಲಿಕ್‌ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್…

ಕೆಲವು ಸಿನಿಮಾಗಳು ಬಿಡುಗಡೆ ನಂತರ ಸುದ್ದಿಯಾಗುತ್ತವೆ. ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಗೂ ಮೊದಲೇ ಜೋರು ಸುದ್ದಿಯಾಗುತ್ತವೆ. ಆ ಸಾಲಿಗೆ “ದನಗಳು” ಸಿನಿಮಾ ಇದೀಗ ಬಂದಿರುವ ಸುದ್ದಿಯಲ್ಲಿದೆ. ಹೌದು, ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೂ ಮೊದಲು ಒಂದು ಸಂಭ್ರಮದ ಸುದ್ದಿಯೆಂದರೆ, ಈ ಚಿತ್ರಕ್ಕೆ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ನಡೆಸಿದ ಎರಡನೇ ವರ್ಷದ ಸಿನಿಮಾಂತರಂಗ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಸಹಜವಾಗಿಯೇ ಚಿತ್ರತಂಡದಲ್ಲಿ ಸಂಭ್ರಮ ಮನೆಮಾಡಿದೆ

ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ಚಿತ್ರೋತ್ಸವದ ಜೊತೆಯಲ್ಲಿ ಪಬ್ಲಿಕ್‌ ಐ ಸೋಶಿಯಲ್‌ ಇಂಪ್ಯಾಕ್ಟ್‌ ಅವಾರ್ಡ್ಸ್‌ ಕೂಡ ನೀಡಿದ್ದು ವಿಶೇಷ. ಸುಮಾರು 60ಕ್ಕೂ ಹೆಚ್ಚು ಚಿತ್ರಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ಪ್ರದರ್ಶನಗೊಂಡಿದ್ದವು. ಆ ಪೈಕಿ “ದನಗಳು” ಸಿನಿಮಾ ಕೂಡ ಪಾಲ್ಗೊಂಡಿತ್ತು. ವಿಶೇಷವಾಗಿ ಈ ಚಿತ್ರಕ್ಕೆ ಜ್ಯೂರಿ ಅವಾರ್ಡ್‌ ಸಿಕ್ಕಿದ್ದು, ಚಿತ್ರೋತ್ಸವದಲ್ಲಿ ನೋಡುಗರ ಪ್ರಶಂಸೆಯನ್ನೂ ಪಡೆದುಕೊಂಡಿದೆ.
ಅಂದಹಾಗೆ, ಇದು ಕಾದಂಬರಿ ಆಧಾರಿತ ಸಿನಿಮಾ. ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ.

“ದನಗಳು” ಕಥೆಗಾರ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್‌ ನಿರ್ದೇಶನ ಮಾಡಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅದಕ್ಕೂ ಮುನ್ನ, ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ನಡೆಸುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಇನ್ನು, ಈ ಚಿತ್ರದ ಮೂಲಕ ಮಧು ಮಂದಗೆರೆ ಹೀರೋ ಆಗಿದ್ದಾರೆ. ಮಧು ಮಂದಗೆರೆ ಈಗಾಗಲೇ ಕಳೆದ ಒಂದುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗದಲ್ಲಿದ್ದಾರೆ. ಕನ್ನಡದ ಬಹುತೇಕ ಸ್ಟಾರ್‌ ನಟರ ಜೊತೆ ನಟಿಸಿದ್ದಾರೆ. ಈಗಿನ ಯುವ ನಟರೊಂದಿಗೂ ನಟಿಸುತ್ತಿದ್ದಾರೆ. ಇದುವರೆಗೆ ಸುಮಾರು ೮೦ಕ್ಕೂ ಚಿತ್ರಗಳಲ್ಲಿ ನಟಿಸಿರುವ ಮಧು ಅವರಿಗೆ “ಧನಗಳು” ಸಿನಿಮಾ ತುಂಬಾನೇ ವಿಶೇಷವಾದದ್ದು. ಇಂಥದ್ದೊಂದು ಯಶಸ್ಸು ಸಿಕ್ಕ ಸಿನಿಮಾದಲ್ಲಿ ಮಧು ನಟಿಸಿದ್ದಾರೆ ಅನ್ನುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಅವರು.

ಈ ಚಿತ್ರದಲ್ಲಿ ಮಧು ಮಂದಗೆರೆ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರು ಈವರೆಗೆ ನಟಿಸಿರುವ 75 ಸಿನಿಮಾಗಳ ಪೈಕಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟು ಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರ ಹುಡುಕಿ ಬರುವಂತಾಗಿದೆ.”ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರ ನನಗೊಂದು ಹೊಸ ಬದುಕು ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಮಧು ಮಂದಗೆರೆ ಅವರದು.


ಇನ್ನು, “ದನಗಳು” ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆ ಹೈಲೈಟ್‌. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್‌ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್‌.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.

ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ನೋಡುಗರಿಗೆ ಇಷ್ಟವಾಗಲಿದೆ ಎನ್ನುತ್ತದೆ. ಚಿತ್ರದಲ್ಲಿ ಮಧು ಮಂದಗೆರೆ ಅವರಿಗೆ ನಟಿ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ ಕೃಷ್ಣ, ಅಶೋಕ್‌ ಜಂಬೆ, ಸಂಪತ್‌, ಪ್ರಿಯಾ, ಚಂದ್ರು, ಹರಿಚರಣ ತಿಲಕ್‌, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್‌ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್‌ ರಿಶಿಕ್‌ ಸಂಗೀತವಿದೆ.

ಇತ್ತೀಚೆಗೆ ನಡೆದ ಚಿತ್ರೋತ್ಸವದಲ್ಲಿ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಹಭಾಗಿತ್ವ ಹೊಂದಿದ್ದವು.

ಅಂದಿನ ಚಿತ್ರೋತ್ಸವದಲ್ಲಿ ಡಾ.ದೊಡ್ಡ ರಂಗೆ ಗೌಡ, ಸಂಗೀತ ನಿರ್ದೇಶಕ ವಿ.ಮನೋಹರ್‌, ಹೆಚ್.ಆರ್. ದಿಲೀಪ್ ಹಾಗು ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆಯ ಪದಾಧಿಕಾರಿಗಳು ಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Categories
ಸಿನಿ ಸುದ್ದಿ

ಡಿಸೆಂಬರ್ 24 ಹಾಡುಗಳ ಸಂಭ್ರಮ!

ಗಾಂಧಿನಗರದಲ್ಲಿ ದಿನ ಕಳೆದಂತೆ ಹೊಸಬರ ಹೊಸತನದ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಡಿಸೆಂಬರ್ 24 ಕೂಡ ಸೇರಿದೆ. ಇದೊಂದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಚಿತ್ರ. ಇತ್ತೀಚೆಗೆ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ

ಎಂಜಿ ಎನ್ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆ ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರವಿದು. ಇದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿದ್ದು, ಮೋಷನ್ ಪೋಸ್ಟರ್ ಹಾಗು ಹಾಡುಗಳನ್ನು ಹೊರತರಲಾಗಿದೆ. ಶ್ರೀನಗರ ಕಿಟ್ಟಿ ತಂಡಕ್ಕೆ ಶುಭಕೋರಿದ್ದಾರೆ.

ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ನೀಡಿದ್ದಾರೆ. ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಸಾಹಿತ್ಯ ಬರೆದಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ‌ಮಾಡಿದ ಶ್ರೀನಗರ ಕಿಟ್ಟಿ, ‘ ಹೊಸಬರು ಚಿತ್ರ ಮಾಡಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.

ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್, ‌ ಭೂಮಿಕಾ ರಮೇಶ್, ಮಿಲನಾ ರಮೇಶ್, ದಿವ್ಯ ಆಚಾರ್ ನಟಿಸಿದ್ದು, ಆನಂದ್ ಪಟೇಲ್ ಹುಲಿಕಟ್ಟೆ ಪಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ್ ಗೌಡ ಖಳನಾಯಕನಾಗಿ ನಟಿಸಿದ್ದಾರೆ. ಎಂ.ಜಿ.ಎನ್. ಪ್ರೊಡಕ್ಷನ್ ಲಾಂಛನದಲ್ಲಿ ದೇವು ಹಾಸನ್, ಮಂಜು. ಡಿ. ಟಿ,ವಿ.ಬೆಟ್ಟೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


ಉಸಿರಾಟದ ತೊಂದರೆಯಿಂದ ಮರಣ ಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ಮೆಡಿಕಲ್ ರೀಸರ್ಚ್ ಗೆಂದು ಕಾಡಿಗೆ ತೆರಳುವ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಲ್ಲಿ ಎದುರಾದ ಸಮಸ್ಯೆಗಳು, ತೊಂದರೆಗಳ ಹಿನ್ನೆಲೆ ಏನು. ಅದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದೇ ಡಿಸೆಂಬರ್ 24 ಚಿತ್ರದ ಕಥೆ. 2015ರಿಂದ 2019ರೊಳಗೆ ನಡೆದ ಕೆಲ ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿಕೊಂಡಿರುವಂತಹ ಚಿತ್ರ ಇದಾಗಿದ್ದು, ಪಕ್ಕಾ ಫ್ಯಾಮಿಲಿ ಲವ್, ಫ್ರೆಂಡ್ಷಿಪ್, ಹಾರರ್, ಥ್ರಿಲ್ ಅಂಶಗಳಿವೆ. ಆರ್ಯಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಗಳು ಹಾಗೂ
ಬಾಮಾ ಹರೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿಡಿಯೋಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ರೈಡರ್ ಎಂಬ ಭರ್ಜರಿ ಪ್ಯಾಕೇಜ್ ಸಿನಿಮಾ!

ಚಿತ್ರ ವಿಮರ್ಶೆ

ನಿರ್ದೇಶನ ವಿಜಯ್ ಕುಮಾರ್ ಕೊಂಡ
ನಿರ್ಮಾಣ : ಸುನೀಲ್ ಗೌಡ, ಲಹರಿ ಸಂಸ್ಥೆ
ತಾರಾಗಣ; ನಿಖಿಲ್ ಕುಮಾರ್, ಕಶ್ಮೀರಾ, ದತ್ತಣ್ಣ, ಅಚ್ಯುತಕುಮಾರ್, ಚಿಕ್ಕಣ್ಣ, ಗರುಡ ರಾಮ್, ರಾಜೇಶ್ ನಟರಂಗ ಇತರರು

ಒಂದು ಸಿನಿಮಾ ಅಂದರೆ ಹೇಗಿರಬೇಕು? ಮೊದಲಿಗೆ ಒಂದೊಳ್ಳೆಯ ಕಥೆ ಇರಬೇಕು. ಅಲ್ಲಿ ಚಿತ್ರಕಥೆಯೇ ಹೈಲೈಟ್ ಆಗಿರಬೇಕು. ಒಂದೇ ವರ್ಗಕ್ಕೆ ಸೀಮೀತವಾಗಿರಬಾರದು. ಅಲ್ಲಿ ಪ್ರೀತಿ, ಪ್ರೇಮ, ಗೆಳೆತನ, ಸೆಂಟಿಮೆಂಟ್, ಬಾಂಧವ್ಯ, ಹಾಸ್ಯ ಹೀಗೆ ಎಲ್ಲದರ ಪಾಕವಿರಬೇಕು. ಅಂಥದ್ದೊಂದು ರುಚಿಯಾದ ಹೂರಣದ ಸವಿಯಿರುವ ಸಿನಿಮಾಗಳ ಸಾಲಿಗೆ ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಸಿನಿಮಾದಲ್ಲಿದೆ.

ಹೌದು, ಈ ವಾರ ತರೆಗೆ ಅಪ್ಪಳಿಸಿರುವ ‘ರೈಡರ್’ ಅಪ್ಪಟ ಪ್ರೇಮಕಥೆಯೊಂದಿಗೆ
ಭರ್ಜರಿ ಆ್ಯಕ್ಷನ್ ಇರುವ ಮಜಭೂತಾದ ಚಿತ್ರವಾಗಿ ಹೊರಹೊಮ್ಮಿದೆ.

ಇದೊಂದು ಲವ್ ಸ್ಟೋರಿ, ಸೆಂಟಿಮೆಂಟ್, ಎಮೋಶನ್‌ಸ್‌, ಕಾಮಿಡಿ, ಭರ್ಜರಿ ಆ್ಯಕ್ಷನ್ ಜೊತೆಗೆ ನೆನಪಿಸೋ ಹಾಡುಗಳು ಚಿತ್ರದ ವೇಗಕ್ಕೆ ಅಡ್ಡಿಯಾಗಿಲ್ಲ.
ಇನ್ನು, ಸಿನಿಮಾ ಕಥೆ, ಚಿತ್ರಕಥೆಯಲ್ಲಷ್ಟೇ ಅಲ್ಲ ಎಲ್ಲದರಲ್ಲೂ ಶ್ರೀಮಂತಿಕೆ ಇದೆ. ಅದರಲ್ಕೂ ಅದ್ಧೂರಿ ಮೇಕಿಂಗ್ ‌ಖುಷಿ ಕೊಡುತ್ತದೆ. ಇದು ಔಟ್ ಆ್ಯಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ ಆಗಿರುವುದರಿಂದ ಮಾಸ್ ಆಡಿಯನ್ಸ್ ಗೆ ರುಚಿಸಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದು ರೈಡರ್ ಒನ್ ಲೈನ್..
ಒಂದು ಅನಾಥಾಶ್ರಮದಲ್ಲಿ ಭೆಟಿಯಾಗುವ ಕಿಟ್ಟಿ ಮತ್ತು ಚಿನ್ನು ಆ ಬಳಿಕ ಘಟನೆಯೊಂದರಲ್ಲಿ ಅವರಿಬ್ಬರೂ ಬೇರೆಯಾಗುತ್ತಾರೆ. ಮತ್ತೆ ಅವರಿಬ್ಬರೂ ದೊಡ್ಡವರಾದ ನಂತರ ಒಬ್ಬರನ್ನೊಬ್ಬರು ಹುಡುಕಿಕೊಂಡು ಹೊರಡುತ್ತಾರೆ. ಅವರಿಬ್ಬರ ಪ್ರೀತಿಯ ಹುಡುಕಾಟ, ಒಂದಷ್ಟು ತಳಮಳದ ಸುತ್ತ ಸಾಗುವ ಕಥೆಯಲ್ಲಿ ರೋಚಕತೆ ಇದೆ, ಕುತೂಹಲವೂ ಇದೆ. ಹಾಗಾದರೆ, ಕೊನೆಗೆ ಕಿಟ್ಟಿ ಮತ್ತು ಚಿನ್ನು ಇಬ್ಬರೂ ಸಿಗ್ತಾರ, ಒಂದಾಗ್ತಾರ ಅನ್ನುವ ಕುತೂಹಲ ನಿಮಗಿದ್ದರೆ ಒಮ್ಮೆ ರೈಡರ್ ಜೊತೆ ಹಾಗೊಂದು ರೈಡ್ ಮಾಡಿಬರಬಹುದು.

ಚಿತ್ರ ನೋಡುವರಿಗೆ ಇಲ್ಲಿ ಮೋಸ ಇಲ್ಲ ಎಂಬ ಗ್ಯಾರಂಟಿ ಕೊಡಬಹುದು. ಕೊಟ್ಟ ಕಾಸಿಗೆ ಭರಪೂರ ಮನರಂಜನೆಗಂತೂ ಧೋಕ ಆಗಲ್ಲ. ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೊಂದು ಸ್ಪಷ್ಟತೆ ಇದೆ. ಈಗಿ ಯೂಥ್ಸ್ ಮನಸಲ್ಲಿಟ್ಟುಕೊಂಡು, ಫ್ಯಾನ್ಸ್ ಅನ್ನೂ ಗಮನದಲ್ಲಿಟ್ಟಕೊಂಡು ಮಜ ಎನಿಸೋ ಚಿತ್ರ ಕಟ್ಟಿಕೊಟ್ಟಿದ್ದಾರೆ.

ನಟನೆ ವಿಷಯಕ್ಕೆ ಬಂದರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಎಷ್ಟು ಗಟ್ಟಿತನವಿದೆಯೋ ಪಾತ್ರದಲ್ಲೂ ಅಷ್ಟೇ ಗಟ್ಟಿತನ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.

ನಟ ನಿಖಿಲ್ ಕುಮಾರ್ ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮತ್ತೆ ಅವರಿಲ್ಲಿ ಪಕ್ಜಾ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾಾರೆ. ಒಂದು ಮನೆಗೆ ಒಳ್ಳೆಯ ಮಗನಾಗಿ, ಗೆಳೆಯನಾಗಿ, ಹುಡುಕಾಟದ ಲವರ್ ಬಾಯ್ ಆಗಿ ನಿಖಿಲ್ ಗಮನಸೆಳೆಯುವುದರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಾಗಿ ಕಟ್ಟಿಕೊಟ್ಟಿದ್ದಾರೆ.
ಇನ್ನು, ಭರ್ಜರಿ ಆ್ಯಕ್ಷನ್, ಡ್ಯಾಾನ್ಸ್‌ ಮತ್ತು ತಮ್ಮ ಹೊಸತನದ ಮ್ಯಾನರಿಸಂ ಮೂಲಕ ತಾವು ಮಾಸ್ ಹೀರೋ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ನಾಯಕಿ ಕಶ್ಮೀರಾ ಕೂಡ ಇಲ್ಲಿ ಅಕರ್ಷಿಸುತ್ತಾರೆ. ತಮ್ಮ ಬ್ಯೂಟಿ ಮತ್ತು ನಟನೆ ಈ ಎರಡರಿಂದಲೂ ಇಷ್ಟವಾಗುತ್ತಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ಗರುಡ ರಾಮ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡು ತೆರೆಯ ಮೇಲೆ ಮೋಡಿ ಮಾಡಿದೆ.

ರೈಡರ್ ತಾಂತ್ರಿಕವಾಗಿ ಹೊಸತನದಿಂದ ಕೂಡಿದೆ. ಚಿತ್ರದ ಮೇಕಿಂಗ್ ನೋಡಿದವರಿಗೆ ನಿರ್ಮಾಪಕರ ಸಿನಿಮಾ ಪ್ರೀತಿ ಎಂಥದ್ದು ಅನ್ನೋದು ಗೊತ್ತಾಗುತ್ತೆ. ಭರ್ಜರಿಯಾಗಿ ಸಿನಿಮಾ ಕಥೆ ಡಿಮ್ಯಾಂಡ್ ಮಾಡಿದ್ದನ್ನು ಚಾಚೂ ತಪ್ಪದೆ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಹಾಡುಗಳು ಗುನುಗುವಂತಿವೆ.
ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಅವರ ಕೆಲಸ ಇಲ್ಲಿ ಗಮನಸೆಳೆಯುತ್ತದೆ.
ಒಟ್ಟಾರೆ ಇದು ಎಲ್ಲ ಮನರಂಜನಾತ್ಮಕ ಅಂಶಗಳನ್ನು ಹೊತ್ತು ಬಂದ ರೈಡರ್.

error: Content is protected !!