
ನಟ ಸುದೀಪ್ ಹೇಳಿದ್ದು ಯಾವುದರ ಕುರಿತು ಗೊತ್ತಾ?
…………………………………….
ಶಿವಣ್ಣ ಆಯ್ತು, ಉಪೇಂದ್ರ ಆಯ್ತು, ದರ್ಶನ್ ಆಯ್ತ, ಕೊನೆಗೆ ಸುದೀಪ್ ಪ್ರತಿಕ್ರಿಯೆ ಏನು ಅಂತ ಕಾತರದಲ್ಲಿದ್ದ ಚಿತ್ರೋದ್ಯಮಕ್ಕೆಕೊನೆಗೂ ಉತ್ತರ ಸಿಕ್ಕಿತು. ಕಳೆದ ನಾಲ್ಕೈದು ದಿನಗಳಿಂದ ಬಾರೀ ಸದ್ದುಮಾಡುತ್ತಿದ್ದ ಡ್ರಗ್ಸ್ ಮಾಫಿಯಾ ಕುರಿತು ನಟ ಕಿಚ್ಚ ಸುದೀಪ್ ಕೊನೆಗೂ ಪ್ರತಿಕ್ರಿಯೆ ಕೊಟ್ಟರು. ಅಚ್ಚರಿ ಅಂದ್ರೆ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಕೇಂದ್ರ ಬಿಂದು ಆಗಿರುವ ಇಂದ್ರಜಿತ್ ಲಂಕೇಶ್ ಅವರ ಜತೆಗೆಯೇ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ್ದು.

ಡ್ರಗ್ಸ್ ಮಾಫಿಯಾ: ಸುದೀಪ್ ಹೇಳಿದ್ದಿಷ್ಟು!
ಡ್ರಗ್ಸ್ ದಂಧೆ ಬಗ್ಗೆ ನಾನೇನು ಹೇಳಲ್ಲ. ನಾನು ಕೂಡಾ ಚಿತ್ರರಂಗದವನೇ, ಆದರೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಲು ಹೋಗಬಾರದು. ನಮಗೆ ರೈಸ್, ದಾಲ್ ಗೊತ್ತು….ಇದರ ಬಗ್ಗೆ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.
ಚಿರು ಹೆಸರು ಪ್ರಸ್ತಾಪಕ್ಕೆ ಗರಂ
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದಾಗಿ ಚಿತ್ರರಂಗದ ದೂಷಣೆ ಬೇಡ ಎಂದು ಸುದೀಪ್ ಹೇಳಿದರು.ಹಾಗೆಯೇ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಚಿರು ಹೆಸರು ಕೇಳಿಬಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಟ ಚಿರಂಜೀವಿ ಸರ್ಜಾಗೆ ಕುಟುಂಬ ಇದೆ, ಪತ್ನಿಯೂ ಇದ್ದಾರೆ. ಹೀಗಾಗಿ ನಿಧನರಾದವರ ಬಗ್ಗೆ ಮಾತನಾಡೋದು ಬೇಡ ಎಂದುವಿನಂತಿಸಿಕೊಂಡರು.

ನಂಗೆ ಡ್ರಗ್ಸ್ ಪಾರ್ಟಿ ಗೊತ್ತಿಲ್ಲ:
ನನಗೆ ಪಾರ್ಟಿ ಆಫರ್ ಬಂದಿರೋದು ರಾಜಕೀಯ ಪಕ್ಷಗಳಿಂದ, ಹೀಗಾಗಿ ಬೇರೆ ಪಾರ್ಟಿಗಳ ಬಗ್ಗೆ ನನಗೆ ಗೊತ್ತಿಲ್ಲ ಎನ್ನುತ್ತಾ ತಮ್ಮದೇ ಶೈಲಿಯಲ್ಲಿ ಡ್ರಗ್ಸ್ವಮಾಫಿಯಾ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟರು.




ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್” ಚಿತ್ರದಲ್ಲಿ ಕಾಣಿಸಿಕೊಂಡಳು. ಹಾಗೆಯೇ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳ ಮಹಾರಾಜ’ ಚಿತ್ರದಲ್ಲೂ ಮುದ್ದಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾಳೆ. ಆ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.


. ಕಳೆದ ವರ್ಷವಷ್ಟೇ ಪುಟ್ಟರಾಜು ಲವರ್ ಆಫ್ ಶಶಿಕಲಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು.ಅ ಚಿತ್ರ ತೆರೆ ಕಾಣುವ ಹೊತ್ತಿಗೆ ‘ ಅಧಿಕ ಪ್ರಸಂಗಿ’. ಹೆಸರಿನ ಹೊಸಬರ ಚಿತ್ರಕ್ಕೆನಾಯಕಿಆಗಿದ್ದರು. ಕೊರೋನಾ ಕಾರಣ ಅದಿನ್ನೂ ಬಿಡುಗಡೆ ಆಗುವುದಕ್ಕೆ ಸಿದ್ದತೆ ನಡೆಸಿರುವಾಗಲೇ, ದ್ವಿಭಾಷಾ ಚಿತ್ರವೊಂದಕ್ಕೆ ನಾಯಕಿಆಗಿದ್ದಾರೆ. ಅವರೇ ಹೇಳುವ ಹಾಗೆ ಇದೊಂದುಅದೃಷ್ಟದ ಅವಕಾಶ.



















ಅಂದ ಹಾಗೆ ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರುತ್ ‘ಚಿತ್ರದಲ್ಲಿನಮುಸ್ಲಿಂ ಹುಡುಗಿ ಪಾತ್ರದಲ್ಲಿಲತಾ ಅದ್ಬುತವಾಗಿ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು, ಕನ್ನಡದ ಜತೆಗೆ ತೆಲುಗಿನಲ್ಲೂ ಮತ್ತಷ್ಟು ಅವಕಾಶಗಳೊಂದಿಗೆ ಸಕ್ರಿಯವಾಗುವ ನಿರೀಕ್ಷೆಯಲ್ಲಿದ್ದಾರೆ.