Categories
ಸಿನಿ‌ ಆ್ಯಡ್

ಖುಷಿಯ ಖುಷಿ ಹೆಚ್ಚಿಸಿದ ದಿಯಾ !

ಅವಕಾಶಕ್ಕಾಗಿ ಪರದಾಡುತ್ತಿದ್ದ ಹುಡುಗಿ, ಇವತ್ತು ಬಹು ಬೇಡಿಕೆಯ ನಟಿ , ಸಾಲು ಸಾಲು ಸಿನಿಮಾಗಳಿಗೆ ನಾಯಕಿ.  ಇದಕ್ಕೆಲ್ಲ ಕಾರಣ ಯಾರು ಗೊತ್ತಾ? ಈ ಸ್ಟೋರಿ ನೋಡಿ

ಖುಷಿ ಅಲಿಯಾಸ್ ದಿಯಾ ಇವತ್ತು ಕನ್ನಡದ ಬಹು ಬೇಡಿಕೆ ನಟಿ. ಕೊರೋನಾ ಸೃಷ್ಟಿಸಿದ ಅತೀವ ಸಂಕಷ್ಟದ ಕಾಲದಲ್ಲೂ ‘ದಿಯಾ’ 2020 ರ ಸೂಪರ್ ಹಿಟ್ ಚಿತ್ರ. ಚಿತ್ರಮಂದಿರಗಳ ಜತೆಗೆ ಅನ್ ಲೈನ್ ಜಗತ್ತಿನಲ್ಲೂ ಇದು ಸೃಷ್ಟಿಸಿದ ಹವಾ‌, ಈ ನಟಿಯನ್ನು ರಾತ್ರೋರಾತ್ರಿ ಸ್ಟಾರ್ ಆಗಿಸಿತು‌ . ಅದರ ಫಲವೇ ಎನ್ನುವ ಹಾಗೆ ಈ ನಟಿ‌ ಇವತ್ತು ಸಾಲು ಸಾಲು ಸಿನಿಮಾಗಳಿಗೆ ನಾಯಕಿ.

ಅದೃಷ್ಟ ಅಂದ್ರೆ ಹೀಗೆಯೇ. ಯಾವಾಗ ,ಹೇಗೆ , ಯಾರಿಗೆ ‌ ಒಲಿದು ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಅಂತಹ ಅದೃಷ್ಟವೀಗ  ಈ ನಟಿಗೆ  ದಿಯಾ ಹೆಸರಿನೊಂದಿಗೆ ಒಲಿದು ಬಂದಿದ್ದು  ಬಿದ್ದಿದೆ. ಅದೇ ಚಿತ್ರದ
ಜನಪ್ರಿಯತೆಯೊಂದಿಗೆ ಖುಷಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೀಗ ಅವರ ಕೈಯಲ್ಲಿ ಐದಾರು ಸಿನಿಮಾಗಳಿವೆ.‌ ಆ ಸಿನಿಮಾಗಳಲ್ಲಿ‌ಬ್ಯುಸಿ ಇರುವಾಗಲೇ’  ದಿಯಾ’ ರೀ ರಿಲೀಸ್ ಆಗುತ್ತಿರುವುದು ನಟಿ‌ ಖುಷಿ ಅವರಲ್ಲಿ ಥ್ರಿಲ್ ತರಿಸಿದೆ.

ನಿಜ‌, ಕೊರೋನಾ‌ ಆತಂಕದ ನಡುವೆಯೂ ನಾನೀಗ ಸಾಕಷ್ಟು ಅವಕಾಶಗಳೊಂದಿಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರಬಹುದು. ಬಟ್, ಇದಕ್ಕೆಲ್ಲ ಕಾರಣ ‘ದಿಯಾ’ ಚಿತ್ರ. ಆ ಚಿತ್ರ ಮತ್ತೆ ಈಗ ಬಿಡುಗಡೆ ಆಗುತ್ತಿದೆ ಅಂತ ಚಿತ್ರ ತಂಡದವರು ಹೇಳಿದಾಗ ಥ್ರಿಲ್ ಆದೆ‌. ಹಳೆಯ ಎಕ್ಸೈಟ್ ಮೆಂಟ್ ಈಗಲೂ‌ಶುರುವಾಗಿದೆ. ಹಾಗಂತ‌ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆನ್ನುವ ಭಯಕ್ಕಲ್ಲ‌‌ . ಒಂಥರ ಖುಷಿ. ಹಾಗೆಯೇ ಅದು ಇನ್ನಷ್ಟು ಜನರಿಗೆ ತಲುಪಲಿ ಎನ್ನುವ ಆಶಯಕ್ಕೆ’ ಅಂತ ತಮ್ಮ ಮುದ್ದಾದ ಮುಖದಲ್ಲಿ‌ನಗು ಅರಳಿಸುತ್ತಾರೆ ನಟಿ‌ ಖುಷಿ.

‘ದಿಯಾ’ ಚಿತ್ರದ ಹಾಗೆಯೇ ಈ‌ ವರ್ಷದ ಬ್ಲಾಕ್‌ ಬಸ್ಟರ್‌ಚಿತ್ರ. ‘ಲವ್‌ಮಾಕ್ಟೆಲ್’ ಕೂಡ‌‌ರೀ‌ರಿಲೀಸ್ ಆಗುತ್ತಿದೆ. ಹಾಗೆಯೇ ಫೆಬ್ರವರಿ ಕೊನೆಯಲ್ಲಿ ಬಿಡುಗಡೆ ಕಂಡ ಮತ್ತಷ್ಟು ಸಿನಿಮಾಗಳು ಜನರ‌ ಮುಂದೆ‌ ಬರುತ್ತಿವೆ‌. ಆ‌ ಕತೆ ಬೇರೆ. ಆದರೆ’ ದಿಯಾ ‘ ಹೆಸರಿನ ಒಂದು‌ಸಿನಿಮಾ‌ ಸಂಕಷ್ಟದ ಕಾಲದಲ್ಲೂ‌ಗೆದ್ದು‌ಬಿಗಿದು, ಅದರ‌ ಕಲಾವಿದರ ಬದುಕಲ್ಲಿ ಎಷ್ಟೇಲ್ಲ ಟ್ವಿಸ್ಟ್ ನೀಡಿತು ಎನ್ನುವುದಕ್ಕೆ ಸಾಕ್ಷಿ ನಾಯಕಿ‌ ಖುಷಿ ಅವರೇ ಸಾಕ್ಷಿ.

ನಕ್ಷೆ,  ಸ್ಪೂಕಿ ಕಾಲೇಜ್,  ಮಾರ್ಗ ಚಿತ್ರಗಳ ಜತೆಗೆ  ‘ ದಿಯಾ’  ಚಿತ್ರ ಹೀರೋ‌ ಪೃಥ್ವಿ ಅಂಬರ ಅವರೇ ಕತೆ ಬರೆದು ನಾಯಕರಾಗಿರುವ ಮತ್ತೊದು ಚಿತ್ರಕ್ಕೂ‌ನಟಿ  ಖುಷಿ ನಾಯಕಿ ಆಗಿದ್ದಾರೆ. ಈಗಾಗಲೇ ಅಷ್ಟು ಚಿತ್ರಗಳು ಶುರುವಾಗಿ, ಮುಹೂರ್ತ ಹಾಗೂ‌ ಚಿತ್ರೀಕರಣದೊಂದಿಗೆ ಸುದ್ದಿ ಮಾಡಿವೆ. ಒಂದು ಚಿತ್ರ ನವೆಂಬರ್‌ತಿಂಗಳಲ್ಲಿ ಸೆಟ್ಟೇರುತ್ತಿದೆ. ಇನ್ನೆರೆಡು ಕತೆಗಳು ಫೈನಲ್ ಆಗಿದ್ದು, ಅವು ಕೂಡ ಇಷ್ಟರಲ್ಲಿಯೇ ಸೆಟ್ಟೇರಲಿವೆ ಎನ್ನುವ ಅಧಿಕೃತ ‌ಮಾಹಿತಿ ಖುಷಿ ಅವರಿಂದಲೇ‌ ಬಹಿರಂಗಗೊಂಡಿದೆ.

ಒಟ್ಟಿನಲ್ಲಿ , ಒಂದು ಚಿತ್ರ ಗೆದ್ದರೆ ಏನೆಲ್ಲ ಆಗುತ್ತೆ, ಅದರ ನಟ-ನಟಿಯರು, ಕಲಾವಿದರು ಹೇಗೆಲ್ಲ ಬ್ಯುಸಿಯಾಗಬಲ್ಲರು ಎನ್ನುವುದಕ್ಕೆ ಸಾಕ್ಷಿ .‌ಒಂದು ಕಾಲದಲ್ಲಿ  ಅಂದ್ರೆ ಮೊದಲ‌ಚಿತ್ರ ಬಂದು‌ಹೋದ ದಿನಗಳಲ್ಲಿ ಅವಕಾಶಕ್ಕಾಗಿ‌ಪರದಾಡುತ್ತಿದ್ದ ಹುಡುಗಿ ಇವತ್ತು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಸಾಲು‌ ಸಾಲು ಸಿನಿಮಾಗಳಿಗೆ‌ ನಾಯಕಿ. ಅವರ ಹೇಳುವ ಹಾಗೆ ಕತೆ‌ಕೇಳುವುದಕ್ಕೂ‌ ಸಮಯ‌ ಸಿಗ್ತಿಲ್ವಂತೆ‌. ಟೈಮ್ ಅಂದ್ರೆ ಇದೇ ಅಲ್ವಾ? ಎಲ್ಲವೂ ಅದೃಷ್ಟದಾಟ.‌
….

Categories
ಸಿನಿ ಸುದ್ದಿ

ಮಾಸ್ಕೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನಿ‌ ಕುಸ್ರುತಿ‌ ಅತ್ಯುತ್ತಮ ನಟಿ‌

* ಮಾಸ್ಕೋ ಪ್ರಶಸ್ತಿ ಗೆದ್ದ ಮೊದಲ‌ ಮಲಯಾಳಂ ಚಿತ್ರ

* ಭಾರತದ ಮೊ‌ದಲ‌ ದಲಿತ ನಟಿ‌ ಪಿ.ಕೆ. ರೋಸಿಗೆ ಪ್ರಶಸ್ತಿ ಅರ್ಪಿಸಿದ ಕನಿ‌ಕುಸ್ರುತಿ

* ಚಿತ್ರರಂಗದಲ್ಲೀಗ ಸಾಮಾರ್ಥ್ಯಕ್ಕೆ ತಕ್ಕಂತಹ ಪಾತ್ರ ಸಿಗುತ್ತಿಲ್ಲ ಎನ್ನುವ ಬೇಸರ ಹೊರಹಾಕಿದ ನಟಿ

* ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ – ಕನಿ‌ಮಾತು

* ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನೇ ಗಮನದಲ್ಲಿಟ್ಟು ಕೊಂಡಿದ್ದೆ- ನಿರ್ದೇಶಕ ಸಜಿನ್ ಬಾಬು

ಬರಹ- ರಮೇಶ್ ಹೆಚ್.ಕೆ. ಶಿವಮೊಗ್ಗ
…………………………………………………….

ಸಜಿನ್ ಬಾಬು ಅವರ “ಬಿರಿಯಾನಿ” ಚಿತ್ರದಲ್ಲಿನ ತಮ್ಮ ಅತ್ಯುತ್ತಮ ನಟನೆಗಾಗಿ ನಟಿ ಕನಿ ಕಸ್ರುತಿ , 42 ನೇ ಮಾಸ್ಕೋ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ‌ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆನೇ, ಮಾಸ್ಕೋ ಸಿನಿಮೋತ್ಸವದಲ್ಲಿ ಪ್ರಶಸ್ತಿ‌ ಗೆದ್ದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆ ಬಿರಿಯಾನಿ ಚಿತ್ರದ ಪಾಲಾಗಿದೆ.

ಮೊನ್ನೆ ಮೊನ್ನೆಯಷ್ಟೇ ಮ್ಯಾಂಡ್ರಿಡ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗೆ ಪಾತ್ರವಾಗಿದ್ದ ನಟಿ‌ ಕನಿಗೆ ಈಗ ಮಾಸ್ಕೋ‌ ಫೆಸ್ಟಿವಲ್ ಪ್ರಶಸ್ತಿ ಸಂದಿದೆ. ಹಾಗೆಯೇ ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಮೊದಲ‌ ನಟಿ ಹಾಗೂ ಭಾರತೀಯ ಚಿತ್ರರಂಗದ ಮೊದಲ ದಲಿತ ನಟಿ ಪಿ.ಕೆ. ರೋಸಿ ಅವರಿಗೆ ಅರ್ಪಿಸಿರುವುದು ವಿಶೇಷ.
ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಕನಿ ‌ಕುಸ್ರುತಿ “ ಈ ಪ್ರಶಸ್ತಿಯನ್ನು ನಾನು ಮಲಯಾಳಂನ ಮೊದಲ ನಾಯಕಿ ನಟಿ, ಹಾಗೂ ಭಾರತದ ಸಿನಿಮಾ ರಂಗದ ಮೊದಲ ದಲಿತ ನಟಿಯಾದ ಪಿಕೆ ರೋಸಿ, ಅವರಿಗೆ ಅರ್ಪಿಸುತ್ತೇನೆ. ಇತ್ತೀಚೆಗೆ ಚಿತ್ರರಂಗದಲ್ಲಿ ಬಹುತೇಕ ನಟ ನಟಿಯರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಪಾತ್ರ ದೊರೆಯದೇ ಇರುವಂತಹ ಪರಿಸ್ಥಿತಿಯಿದ್ದು ಸಂಪನ್ಮೂಲಗಳ ಕಾರಣಕ್ಕೇ ಅವರಿಗೆ ಸಿಗಬೇಕಾದ ಪಾತ್ರಗಳು ದೊರೆಯದಂತಾಗಿದೆ. ಹೀಗಾಗಿ ಈ ಪ್ರಶಸ್ತಿಯನ್ನು ಅಂತಹ ಪ್ರತಿಭಾನ್ವಿತ ನಟ ನಟಿಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಾನು ಎಲ್ಲಾ ನಟ ನಟಿಯರಿಗೆ ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂದು ನಾನು ಆಶಿಸುತ್ತೇನೆ” ಎಂದು‌ ನಟಿ ಕನಿ ಪ್ರತಿಕ್ರಿಯೆ ನೀಡಿದ್ದಾರೆ.

“ಬಿರಿಯಾನಿ” ಸಿನಿಮಾವು ಖದೀಜಾ ಎಂಬ ಬಡ ಮುಸ್ಲಿಂ ಮಹಿಳೆಯೊಬ್ಬಳ ಬದುಕಿನ ಪಯಣದ ಕುರಿತಾಗಿದ್ದು ಆಕೆ ಜಾತಿ ಧರ್ಮಾಧಾರಿತವಾಗಿ ರಚನೆಗೊಂಡಿರುವ ಸಮಾಜದಲ್ಲಿ ಇರುವಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸುವ ಚಿತ್ರಣವಿದೆ. ಈ ಚಿತ್ರವು ಸಂಪೂರ್ಣವಾಗಿ ಮಹಿಳೆಯ ದೃಷ್ಟಿಕೋನದಲ್ಲಿ ಇದ್ದು ಯಾವ ಕಾರಣಕ್ಕಾಗಿ ಖದೀಜಾ ಈ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳ ವಿರುದ್ಧ ಬಂಡೇಳುತ್ತಾಳೆ ಎಂಬುದರ ಕುರಿತಾಗಿದೆ.

ಈ ಸಿನಿಮಾವು ಈ ವರ್ಷ ರೋಮ್ ನಲ್ಲಿ ನಡೆದ ಏಷಿಯಾಟಿಕ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ನೆಟ್ ಪ್ಯಾಕ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ.
ಇದಕ್ಕಿಂತ ಮುಂಚೆ ಕನಿ ಅವರು ಮ್ಯಾಡ್ರೀಡ್ ನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರವಾಗಿದ್ದರು. ನ್ಯೂಯಾರ್ಕ್ ನಲ್ಲಿ ನಡೆದ ಟ್ರುಬೆಕಾ ಸಿನಿಮೋತ್ಸವದಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಇನ್ನು ಚಿತ್ರದ ನಿರ್ದೇಶಕ ಸಜಿನ್ ಬಾಬು ಸಂದರ್ಶನವೊಂದೆಲ್ಲಿ ಹೇಳುವಂತೆ “ಇಂತಹ ಪ್ರಭಾವಿ ಚಿತ್ರಕ್ಕೆ “ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಬರೆದಿದ್ದೆ, ಎಂದು ಹೇಳಿಕೊಂಡಿದ್ದಾರೆ


ಕರೋನಾ ಕಾರಣದಿಂದಾಗಿ ಕನಿ ಅವರಿಗೆ ಖುದ್ಧಾಗಿ ತೆರಳಿ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕನಿ ಅವರು “ನಾನು ಮನೆಯಲ್ಲೇ ಹಸಿರು ವಾತಾವರಣದ ನಡುವೆ ಇರಲು ಇಷ್ಟ ಪಡುತ್ತೇನೆ, ನನಗೆ ಪ್ರಯಾಣ ಎಂದರೆ ಆಗಿ ಬರುವುದಿಲ್ಲ” ಎಂದಷ್ಟೇ ಹೇಳಿ ನಗುತ್ತಾರೆ.” ಇನ್ನು ಈ ವರ್ಷ “Tryst with Destiny, ಮತ್ತು OK Computer ಎಂಬ ಇವರ ಎರಡು ಚಿತ್ರಗಳು ಬಿಡುಗಡೆಗೊಳ್ಳಲಿದ್ದು ಈ ಚಿತ್ರಗಳನ್ನು ಕ್ರಮವಾಗಿ ಪೂಜಾ ಶೆಟ್ಟಿ, ಹಾಗೂ ನೀಲ್ ಪಾಗೇದಾರ್ ಅವರು ನಿರ್ದೇಶಿಸಿದ್ದಾರೆ. ಆನಂದ್ ಗಾಂಧಿ ನಿರ್ಮಾಣ ಮಾಡಿದ್ದಾರಂತೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ‌ ಮತ್ತೊಬ್ಬಳು ಬೇಬಿ ಡಾಲ್‌ ಎಂಟ್ರಿ !

ಪುಟಾಣಿ ಸಿಂಗರ್ ಈಗ ಪುಟಾಣಿ‌ ನಟಿ ! ಯಾರು ಈ ಬಾಲಕಿ? ಈ ಸ್ಟೋರಿ ನೋಡಿ

ಭೀಮ ಸೇನ ಸೆಟ್ ನಲ್ಲಿ ನಟ ಅಚ್ಯುತ್ ಕುಮಾರ್ ಜತೆಗೆ ಆದ್ಯಾ

ಕನ್ನಡ ಸಿನಿಮಾದ‌ ಮಟ್ಟಿಗೆ ಒಂದು‌ ಕಾಲದಲ್ಲಿ‌ ಪುಟಾಣಿ ಬಾಲಕಿ ಅಂದಾಕ್ಷಣ ನೆನಪಾಗುತ್ತಿದದ್ದು ಬೇಬಿ ಶಾಮಿಲಿ. ಯಾಕಂದ್ರೆ, ಆಕೆ‌ ಆಗ ಪರದೆ ಮೇಲಿನ ಫ್ಯಾಮಿಲಿಯ ಖಾಯಂ ಮಗಳು. ಕಾಲ ಬದಲಾದಂತೆ ಶಾಮಿಲಿ ಜಾಗಕ್ಕೆ ಸಾಕಷ್ಟು ಪುಟಾಣಿಗಳು ಬಂದರು. ಆದರೆ ಬೇಬಿ ಶಾಮಿಲಿ‌ಯಷ್ಟು ಯಾರು ಸೌಂಡು ಮಾಡಲಿಲ್ಲ. ಆ ಕತೆ‌ ಬೇರೆ. ಈಗ ಶಾಮಿಲಿ‌ ಜಾಗಕ್ಕೆ‌ ಮತ್ತೊಬ್ಬಳು ಪುಟಾಣಿ ಬೇಬಿ‌ ಡಾಲ್ ಎಂಟ್ರಿ ಆಗುತ್ತಿದ್ದಾಳೆ. ಆಕೆ ಅಭಿನಯಿಸಿದ ಸಿನಿಮಾ‌ ಈ‌ ತಿಂಗಳ‌ 29ಕ್ಕೆ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಈ ಸಿನಿಮಾ‌‌ ಮೂಲಕ ಈ ಬೇಬಿ ಡಾಲ್ ಎಷ್ಟು ಸುದ್ದಿ ಮಾಡಬಲ್ಲರು ಎನ್ನುವುದೀಗ ಕುತೂಹಲದ ವಿಷಯ.

ಬೇಬಿ ಡಾಲ್ ಅಂದ್ರೆ‌ ಇವಳೇ‌….!!

ಅಂದ ಹಾಗೆ, ಈ ಬೇಬಿ ಡಾಲ್ ಬೇರಾರು‌ ಅಲ್ಲ, ಝೀ‌ ಕನ್ನಡದ‌ ‘ ಸರಿಗಮಪ ಲಿಟಲ್ ಚಾಂಪ್ಸ್ ‘ ಖ್ಯಾತಿಯ ಬೇಬಿ ಡಾಲ್ ಪುಟಾಣಿ ಆದ್ಯಾ. ಕಿರುತೆರೆಯಲ್ಲಿ ಸಿಂಗರ್ ಆಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಬಾಲಕಿ ಇವಳು. ಆಕೆಯ‌ ಮುದ್ದು ಮುದ್ದಾದ ಮಾತು, ಕ್ಯೂಟ್ ಫೇಸು, ಮಧುರವಾದ ಧ್ವನಿಗೆ ಫಿದಾ ಆಗದವರೇ ಇಲ್ಲ. ಅದೇ ಜನಪ್ರಿಯತೆಯೊಂದಿಗೆ ಸಿನಿಮಾ‌ ರಂಗದಲ್ಲೋ ಈಕೆ ಮೋಡಿಬಲ್ಲಳೇ ಎನ್ನುವುದು ಕಿರುತೆರೆ ವೀಕ್ಷಕರಲ್ಲಿ ಸಹಜವಾಗಿ ಮೂಡುವ ಕ್ಯೂರಿಯಾಸಿಟಿ

ನಿರ್ಮಾಪಕ ಪುಷ್ಕರ್ ಜತೆಗೆ ಆದ್ಯಾ

ಭೀಮಸೇನ ದೊಂದಿಗೆ ತೆರೆ ಮೇಲೆ ಆದ್ಯಾ!
ಇನ್ನು, ‘ಸರಿಗಮಪ ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋ ನಂತರ ಪುಟಾಣಿ ಆದ್ಯಾ ಅಭಿನಯಿಸಿದ ಮೊದಲ‌ ಚಿತ್ರ ‘ ಭೀಮಸೇನ ನಳ‌ಮಹಾರಾಜ’ . ಈ ಚಿತ್ರ ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿಯೇ ತೆರೆಗೆ ಬರುತ್ತಿದೆ. ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, ಈ ಚಿತ್ರ ತೆರೆಗೆ ಬಂದು‌ ಹಳೇ ಮಾತೇ ಆಗಿರುತ್ತಿತ್ತೇನೋ, ಆದರೆ ಕೆಲವು ತಾಂತ್ರಿಕ ಕೆಲಸಗಳ ಜತೆಗೆ‌ ಕೋರೋನಾ ಕಾರಣದಿಂದಲೂ ಈಗ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಚಿತ್ರ ಮಂದಿರಕ್ಕೆ ಬರುತ್ತಿಲ್ಲ ಎನ್ನುವುದನ್ನು‌ಬಿಟ್ಟರೆ ಈ ಚಿತ್ರ ಹಲವು ಕಾರಣಕ್ಕೆ ಕುತೂಹಲ ಮೂಡಿಸಿ, ಅಕ್ಟೋಬರ್ 29 ಕ್ಕೆ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಮ್ ಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿಯೂ ಇದೆ.
ಪ್ರತಿಷ್ಟಿತ ಸಂಸ್ಥೆಯ ಚಿತ್ರ ಎನ್ನುವುದರ ಜತೆಗೆ ಕಥೆ ಇಲ್ಲಿನ ಕುತೂಹಲ ಅಂಶ‌. ಇಂತಹ ಚಿತ್ರದ ಮೂಲಕ‌ ಆದ್ಯಾ‌ಕನ್ನಡ ಚಿತ್ರರಂಗಕ್ಮೆ ಪರಿಚಯವಾಗುತ್ತಿದ್ದಾಳೆ ಎನ್ನುವುದು ಆಕೆಯ ಪೋಷಕರಲ್ಲಿ ಸಾಕಷ್ಟು ಎಕ್ಸೈಟ್ ಮೆಂಟ್ ಮೂಡಿಸಿದೆ.

ಪ್ರತಿಷ್ಟಿತ ಸಂಸ್ಥೆ ಅನ್ನೋದೆ ಕಾರಣ…
ಆದ್ಯಾಳನ್ನು ಸಿನಿಮಾ‌ರಂಗಕ್ಕೆ ಪರಿಚಯಿಸಬೇಕೆಂದು ನಾವು ಅಂದುಕೊಂಡವರೇ ಅಲ್ಲ.‌ಸರಿಗಮಪ‌‌ಲಿಟಲ್ ಚಾಂಪ್ಸ್ ಮುಗಿದ ತಕ್ಷಣ ಸಾಕಷ್ಟು ಫೋನ್ ಕಾಲ್ ಬಂದರೂ ನಾವು ಮನಸು‌ಮಾಡಿರಲಿಲ್ಲ. ಆದರೆ‌ ಒಂದಿನ ನಿರ್ಮಾಪಕ‌ ಪುಷ್ಕರ್ ಹಾಗೂ‌ನಿರ್ದೇಶಕ ಕಾರ್ತಿಕ್ ಮನೆಗೇ ಬಂದು, ‌ನಿಮ್ಮ‌ಮಗಳು‌ನಮ್ಮ ಸಿನಿಮಾದಲ್ಲಿ‌ ಅಭಿನಯಿಸಬೇಕು ಅಂತ ಪಟ್ಟು‌ಹಿಡಿದರು. ಆನಂತರ ಕತೆ ಹೇಳಿದರು. ಹಾಗಾಗಿ ಆಕೆಯನ್ನು ‌ಭೀಮಸೇನ ನಳ‌ಮಹಾರಾಜ‌ ಚಿತ್ರಕ್ಕೆ ಕಳುಹಿಸಬೇಕಾಯಿತು. ಅಲ್ಲಿಂದ
ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್‌’ , ಸುದೀಪ್ ಅಭಿನಯದ ‘ಕೋಟಿಗೊಬ್ಬ 3 ‘ನಲ್ಲೂ‌ ಇದ್ದಾಳೆ. ಒಳ್ಳೆಯ‌ಸಂಸ್ಥೆಯ ಸಿನಿಮಾ, ಸ್ಟಾರ್ ಸಿನಿಮಾಗಳು ಎನ್ನುವ ಕಾರಣಕ್ಕೆ ನಾವು ಒಪ್ಪಿಕೊಂಡೆವು. ಅದು‌ಬಿಟ್ಟರೆ
ಆಕೆಯ ಶಿಕ್ಷಣಕ್ಕೆ ತೊಂದರೆವೊಡ್ಡಿ ಸಿನಿಮಾ‌ಕ್ಕೆ ಕಳುಹಿಸುವುದಕ್ಕೆ‌ನಮಗೂ‌ ಇಷ್ಟ ಇಲ್ಲ.‌ ಉಳಿದಂತೆ ಈ‌ಮೂರರಲ್ಲಿ ಈಗ ‘ಭೀಮಸೇನ‌ ನಳ ಮಹಾರಾಜ ‘ ಮೊದಲ ಸಿನಿಮಾವಾಗಿ ತೆರೆಗೆ ಬರುತ್ತಿದೆ.‌ಆಕೆಯನ್ನು‌ಜನ‌ ಹೇಗೆ ಸ್ವೀಕರಸುತ್ತಾರೆನ್ನುವ ಕುತೂಹಲ , ಒಂಥರ ಭಯ ನಮಗೂ‌ಇದೆ ‘ ಎನ್ನುತ್ತಾರೆ ಬೇಬಿ‌ ಆದ್ಯಾಳ ತಾಯಿ‌ ಅಶ್ವಿನಿ ಉಡುಪಿ.

ಭೀಮಸೇನನ ಮಗಳು…
ಭೀಮ‌ಸೇನ‌ ನಳ‌ಮಹಾರಾಜ‌ ಶೀರ್ಷಿಕೆ ಯೇ ಹೇಳುವ ಹಾಗೆ ಇದು ನಳ ಪಾಕದ ಸಿನಿಮಾ.‌ಇಲ್ಲಿ ಅರವಿಂದ್ ಅಯ್ಯರ್, ಪ್ರಿಯಾಂಕಾ ತಿಮ್ಮೇಶ್, ಆರೋಹಿ ನಾರಾಯಣ್ ಸೇರಿ ಹಲವರ ತಾರಗಣ ಈ ಚಿತ್ರಕ್ಕಿದೆ. ಇಲ್ಲಿ ಆದ್ಯಾ ನಾಯಕ‌ ಅರವಿಂದ್ ಅಯ್ಯರ್ ಮಗಳು. ಉಳಿದಂತೆ‌ಇಬ್ಬರು‌ನಾಯಕಿಯರಲ್ಲಿ ಆಕೆಯ ತಾಯಿ ಯಾರು ಎನ್ನುವುದು ಸಸ್ಪೆನ್ಸ್ . ಕತೆಯಲ್ಲಿ ಹಾಗೊಂದು‌ ಟರ್ನ್ ಆ್ಯಂಡ್ ಟ್ವಿಸ್ಟ್ ಇರುವ ಪಾತ್ರ ಆದ್ಯಾ ಳದು. ಪಾತ್ರ‌ತುಂಬಾ ಚೆನ್ನಾಗಿದೆ. ಚಿತ್ರವೂ ಸೊಗಸಾಗಿ ಬಂದಿದೆ. ಸರಿ ಸುಮಾರು 30 ದಿನ ಚಿತ್ರೀಕರಣಕ್ಕೆ ಹೋಗಿದ್ದೆವು. ಕೊಡಚಾದ್ರಿ, ಬೆಂಗಳೂರಿನಲ್ಲಿ ಚಿತ್ರೀಕರಣ ಇತ್ತು.‌ ಚಿತ್ರ ತಂಡ ನಮ್ಮನ್ನು ಒಂದು ಫ್ಯಾಮಿಲಿ‌ಮೆಂಬರ್ ಥರ ಟ್ರಿಟ್ ಮಾಡಿತು ಎನ್ನುವ ಮೂಲಕ ಮಗಳ‌ಸಿನಿಮಾ‌ಬಗ್ಗೆ ಅತೀವ ಭರವಸೆ ಹೊರ ಹಾಕುತ್ತಾರೆ ಅಶ್ಬಿನಿ. ಅವರು ಬಯಸಿದಂತೆ ಪುಟಾಣಿ ಆದ್ಯಾ ‘ಸಿನಿಲಹರಿ‌’ ಕಡೆ ಯಿಂದಲೂ‌ ಬೆಸ್ಟ್ ವಿಶಷ್.

ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಆದ್ಯಾ
Categories
ಸಿನಿ ಸುದ್ದಿ

ದರ್ಶನ್ ಪಾಲಿಗೆ ಕಭಿ ‌ಖುಷಿ , ಕಭಿ ಗಮ್ !

ಡಿಸೆಂಬರ್ ನಲ್ಲಿ ರಾಬರ್ಟ್, ಡಿ.ಬಾಸ್ ಅಭಿಮಾನಿಗಳಿಗೆ  ಭರ್ಜರಿ ಹಬ್ಬ 


ದರ್ಶನ್ ಅವರಿಗೂ ಬೇಮೊದಲುಸರ ಇದೆ‌. ಹಾಗಂತ ಅದೊಂದು ವಿಚಾರಕ್ಕೆ ಖುಷಿಯೂ ಇದೆ. ಅದೇನು ವಿಚಾರ ?ಈ ಸ್ಟೋರಿ ನೋಡಿ.

ಕನ್ನಡದ ಬಹುತೇಕ ಸ್ಟಾರ್ ಗಳು ಇಂದು ಬೇಸರದಲ್ಲಿದ್ದಾರೆ. ಅಂತಹದೇ ಒಂದು ಬೇಸರ ದರ್ಶನ್ ಅವರಿಗೂ ಇದೆ. 2020 ರ ಈ ದಿನದವರೆಗೂ  ಅವರ ಅಭಿನಯದ ಒಂದೇ ಒಂದು‌ ಸಿನಿಮಾ ಅಭಿಮಾನಿಗಳ ಮುಂದೆ ಬರದೇ ಹೊಯಿತ್ತಲ್ಲ ಎನ್ನುವುದೇ ಅದಕ್ಕೆ ಕಾರಣ. ಯಾಕಂದ್ರೆ, ದರ್ಶನ್ ಅವರ ಸಿನಿ‌ಜರ್ನಿಯ ಇಷ್ಟು ವರ್ಷಗಳಲ್ಲಿ ಯಾವತ್ತಿಗೂ ಹೀಗೆ ಆಗಿರಲಿಲ್ಲ. 2014 ರಲ್ಲಿ ಒಮ್ಮೆ ಹೀಗಾಗಿತ್ತಾದರೂ, ಆಗೆಲ್ಲ ಅವರು ಚಿತ್ರೀಕರಣದಲ್ಲಿ ಬ್ಯುಸಿಯಿದ್ದರು. ಶೂಟಿಂಗ್ ಅಂತಲೋ, ಟೀಸರ್ ಲಾಂಚ್ ಅಂತಲೋ ಸದಾ ಒಂದಲ್ಲೊಂದು‌ ಕಾರಣಕ್ಕೆ ಸುದ್ದಿಯಲ್ಲಿದ್ದರು. ಹಾಗಾಗಿ ಆ ವರ್ಷ ಅವರು ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ, ಅಭಿಮಾನಿಗಳಿಗೆ ಬೇಸರ ಎನಿಸಲಿಲ್ಲ. ಆದರೂ ಬೇಸರ ದೂರವಾಗುವ ಕಾಲ ಸನಿಹವಾಗಿದೆ‌.

 

 

ಎಲ್ಲದಕ್ಕೂ ‘ಅದೇ ‘ ಕಾರಣ !

ಅದು ಬಿಟ್ಟರೆ ಪ್ರತಿ ವರ್ಷ ಒಂದೋ ಅಥವಾ ಅದಕ್ಕಿಂತ ಹೆಚ್ಚೋ ಸಿನಿಮಾಗಳ ಮೂಲಕ ಅವರು ತೆರೆ ಮೇಲೆ‌ ಬಂದು‌ ಆಭಿಮಾನಿಗಳನ್ನು‌ ರಂಜಿಸುತ್ತಿದ್ದರು. ಸೂಪರ್ ಹಿಟ್ ಸಿನಿಮಾ‌ ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ಸಾಬೀತು ಮಾಡುತ್ತಿದ್ದರು. ಅವರ ಅಭಿಮಾನಿಗಳೂ ಖುಷಿ ಪಡುತ್ತಿದ್ದರು. ಅವರನ್ನು ಇಷ್ಟ ಪಡುತ್ತಿದ್ದವರಿಗೆ ಅದೇ ಸಮಾಧಾನ ಇರುತ್ತಿತ್ತು. ಆದರೆ ಈ ವರ್ಷ ಈ ತನಕ ಹಾಗೆ ಆಗಿಲ್ಲ. ಕೊರೋನಾ ಬಂದು‌ ಎಲ್ಲವನ್ನು ತೆಲೆ ಕೆಳಗು ಮಾಡಿತು. ಬಹು ಬೇಡಿಕೆಯ ನಟ ದರ್ಶನ್ ಸಿನಿಮಾ ಕೂಡ ಈ ವರ್ಷದಲ್ಲಿ ತೆರೆಗೆ ಬರದಂತಾಯಿತು.ಚಿತ್ರೀಕರಣದಲ್ಲಿದ್ದ ‘ರಾಜಾವೀರ ಮದಕರಿ ನಾಯಕ ‘ ಚಿತ್ರಕ್ಕೂ ಅದು ಅಡ್ಡಿಯಾಯಿತು. ಹೊಸ ಸಿನಿಮಾದ ಆರಂಭಕ್ಕೂ‌ಅಡಚಣೆಯಾಗಿದ್ದು ನಿಮಗೂ ಗೊತ್ತು. ಇದು ದರ್ಶನ್ ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಬೇಸರವೇ ಹೌದು‌.

ಕೊರೋನಾ ಬರದಿದ್ದರೆ..‌‌

ಒಂದು ವೇಳೆ ಕೊರೋನಾ ಬರದಿದ್ದರೆ, ಎಲ್ಲವೂ ಅಂದುಕೊಂಡಂತೆಯೇ ಆಗುತ್ತಿದ್ದವು. ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ಈ ವರ್ಷದ ಆರಂಭದಲ್ಲೇ ತೆರೆಗೆ ಬರುತ್ತಿತ್ತು. ವರ್ಷದ ಆರಂಭದಲ್ಲೆ ಈ‌ ಚಿತ್ರದ ಬಿಡುಗಡೆಯ ಸುದ್ದಿ ಹರಡಿತ್ತು.
ಕೊನೆಗೆ ಫೆಬ್ರವರಿ ಗೆ ಬರುತ್ತೆ ಅಂತಾಯಿತು‌. ‘ ರಾಮನವಮಿ’ ಗೆ ಖಚಿತ ಅಂತಲೂ ಹೇಳಲಾಯಿತು. ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸಿದ್ದತೆಯೂ ನಡೆಸಿತು.ಅಲ್ಲಿಂದ ಮಾರ್ಚ್ ತಿಂಗಳಿಗೆ ಕನಫರ್ಮ್ ಆಗಿತ್ತು. ಮತ್ತೊಂದೆಡೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಜವೀರ ಮದಕರಿ ನಾಯಕ ಚಿತ್ರಕ್ಕೂ ಚಿತ್ರೀಕರಣ ಶುರುವಾಗಿತ್ತು. ಚಿತ್ರ ತಂಡದ ದುರ್ಗ ಭೇಟಿ ದರ್ಶನ್ ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್ ಹುಟ್ಟಿಸಿತ್ತು. ಅದರ ಜತೆಗಯೇ ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುದೀರ್ ಕಾಂಬಿನೇಷನ್ ಮೂಲಕವೇ ದರ್ಶನ್ ಅಭಿನಯದ‌‌ ಮತ್ತೊಂದು ಚಿತ್ರಕ್ಕೂ ತಯಾರಿ‌ ನಡೆದಿತ್ತು. ಎಲ್ಲವೂ ಇನ್ನೇನು ಕೊರೋನಾ ಬಂದು ಎಲ್ಲವನ್ನು ತಲೆ ಕೆಳಗು ಮಾಡಿತು.

 

ಅದೊಂದು ಬೇಸರ ದರ್ಶನ್ ಅವರಿಗೂ ಇದೆ…

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ವರ್ಷದಲ್ಲಿ ದರ್ಶನ್ ಅಭಿನಯದ ‘ರಾಬರ್ಟ್’ ತೆರೆಗೆ ಬರಲಿತ್ತು. ವರ್ಷದ ಆಭದಿಂದಲೂ‌ ದರ್ಶನ್ ಅಭಿಮಾನಿಗಳು ಅದರ ಆಗಮನಕ್ಕೆ ತುದಿಗಾಲ ಮೇಲೆ ನಿಂತಿದ್ದರು. ದರ್ಶನ್ ಅಭಿನಯದ ಚಿತ್ರ ಎನ್ನುವುದಕ್ಕಷ್ಟೇ ಅಲ್ಲ,ಹಲವು ಕಾರಣಕ್ಕೆ ಈ ಚಿತ್ರ ದೊಡ್ಡ ಸದ್ದು ಮಾಡಿತ್ತು. ಚಿತ್ರದ ಪೋಸ್ಟರ್ ಗಳೆಲ್ಲವೂ ವೈರಲ್ ಆಗಿದ್ದವು. ಹಾಗೆಯೇ ಚಿತ್ರದ ದೊಡ್ಡ ತಾರಾಗಣವೂ ಕುತೂಹಲ ಮೂಡಿಸಿತ್ತು. ಕೊನೆ ಪಕ್ಷ ಮಾರ್ಚ್ ತಿಂಗಳಲ್ಲಾದರೂ ಕಣ್ತುಂಬಿ ಕೊಳ್ಳಬಹುದೆನ್ನುವ ಅಭಿಮಾನಿಗಳ‌‌ನಿರೀಕ್ಷೆ ಹುಸಿಯಾಗಿದ್ದ ಕೊರೋನಾ ಕಾರಣಕ್ಕೆ‌ . ಅಂದು‌ ಹುಸಿಯಾದ ನಿರೀಕ್ಷೆ ಈಗಲೂ ಕೈ ಗೂಡುತ್ತಿಲ್ಲ. ಈ ಇನ್ನೇನು ಅಕ್ಟೋಬರ್‌ ಕಳೆದು ನವೆಂಬರ್ ಬಂದರೂ ಚಿತ್ರ ಮಂದಿರಗಳು ಶುರುವಾಗುವುದು ಡೌಟು. ಚಿತ್ರ ಮಂದಿರಗಳು ತೆರೆದರೂ ಆಡಿಯನ್ಸ್ ಬರುವುದು ಕಷ್ಟ. ಅದೆಲ್ಲ ಕಾರಣಕ್ಕೆ ಈ ವರ್ಷದ ಮಟ್ಟಿಗೆ ಅಭಿಮಾನಿಗಳ ಪಾಲಿಗೆ ದರ್ಶನ್ ಅಭಿನಯದ ಸಿನಿಮಾ‌ತೆರೆ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಖಚಿತತೆ ಇಲ್ಲ. ಅದೊಂದು ಬೇಸರ ದರ್ಶನ್ ಅವರಿಗೂ ಇದೆ.

ಮತ್ತೊಂದೆಡೆ ಖುಷಿಯೂ ಇದೆ..
ಈ ವರ್ಷದ ಈ ದಿನದವರೆಗೂ ಸಿನಿಮಾ ಬರಲಿಲ್ಲ ಎನ್ನುವ ನೋವು ದರ್ಶನ್ ಅವರಿಗಿದ್ದರೂ, ಮತ್ತೊಂದೆಡೆ‌ ಅವರಿಗೆ ಖುಷಿಯೂ ಇದೆ. ಹಾಗಂತ ಅವರೇ ಹೇಳಿದ್ದಾರೆ. ‘ ಇಡೀ ಜಗತ್ತಿಗೇ ಕೊರೋನಾ ಬಂದಿದೆ. ಯಾರೇನು‌ಮಾಡುವುದಕ್ಕೆ ಆಗೋದಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳುವುಸಕ್ಕಾಗಿಯೇ ಹೋರಾಡಬೇಕಾದ ಸಂದರ್ಭದಲ್ಲಿ ನನ್ನ ಸಿನಿಮಾ‌ಬಿಡುಗಡೆ ಆಗಲಿಲ್ಲ ಬೇಸರ ಯಾಕೆ ಆಗಬೇಕು. ಹಾಗೆ ನೋಡಿದರೆ ಈ‌ ಸಮಯದಲ್ಲಿ ಕೃಷಿ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುವ ಖುಷಿ ನನಗಿದೆ ‘ ಅಂತ ದರ್ಶನ್ ಅವರೇ ಹೇಳಿಕೊಂಡಿದ್ದರು. ಅದು ನಿಜವೂ ಹೌದು‌. ಕೊರೋನಾ ಕಾರಣಕ್ಕೆ ಆದ ಲಾಕ್ ಡೌನ್ ಸಮಯದಲ್ಲಿ ‌ದರ್ಶನ್ ಫಾರಂ ಹೌಸ್ ನಲ್ಲಿದ್ದರು. ಒಂದಷ್ಟು ದಿನ ವ್ಯವಸಾಯ ಅಂತ ಬ್ಯುಸಿಯಾಗಿದ್ದರು. ಕುದುರೆ ಸಾಕಾಣೆ, ಹಸುಗಳ ಆರೈಕೆ ಅಂತ‌ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಲಾಕ್ ಡೌನ್ ತೆರೆವಾದ ನಂತರ ತಮ್ಮ‌ನೆಚ್ಚಿನ ಪೋಟೋ ಗ್ರಪಿಗಾಗಿ ಭದ್ರ ಅಭಯಾರಣ್ಯ, ಡಾರ್ಜಿಲಿಂಗ್ ಕಾಡು ಸುತ್ತಿದರು. ಅಲ್ಲಿಂದ ಬಂದು ಕುರಿ‌ಖರೀದಿ, ಎಮ್ಮೆ ಖರೀದಿ ಅಂತ ಉತ್ತರ ಕರ್ನಾಟಕ ಪ್ರವಾಸ ಮಾಡಿದರು. ಇದೆಲ್ಲವೂ ಅವರ ಖುಷಿಯ ಕಾರ್ಯಕ್ರಮ ಗಳು. ಕೊರೋನಾ‌ ಕಾರಣಕ್ಕೆ‌ಅವರ ಸಿನಿಮಾ‌ ಬಂದಿಲ್ಲ‌ಎನ್ನುವ ಅಭಿಮಾನಿಗಳಿಗಿದ್ದರೂ , ಕೃಷಿ ಕಡೆ ಗಮನ ಹರಿಸಲು ಒಂದಷ್ಟು ಸಮಯ ಸಿಕ್ಕಿತ್ತೇನು ಖುಷಿ ದರ್ಶನ್ ಅವರಿಗಿದೆ. ಆದರೆ ಸಿನಿಮಾ ಅವರ ಮುಖ್ಯ ಕ್ಷೇತ್ರ. ಅದಷ್ಟು ಬೇಗ ಅದು ಶುರುವಾಗಬೇಕೆನ್ನುವ ಕಾತರ ಅವರಲ್ಲೂ ಇದೆ.

Categories
ಸಿನಿ ಸುದ್ದಿ

ಜಗ್ಗೇಶ್ ಅಂದ್ರೆ ನವರಸಗಳ‌ ಕಲಾಕಾರ ಮನಸ್ಸು ಪರಿವರ್ತಿಸುವ ಮಾತುಗಾರ…!

ನವರಸ ನಾಯಕ ಜಗ್ಗೇಶ್ ಕನ್ನಡದ ಅಪರೂಪದ ನಟ.‌ ನೂರಾರು ಸಿನಿಮಾ‌, ಹತ್ತಾರು ಗೆಟಪ್, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರನ್ನು ಭರಪೂರ ರಂಜಿಸಿದ ಪಕ್ಕಾ ದೇಸಿ ಪ್ರತಿಭೆ. ಅದು‌ ಬಿಟ್ಟರೆ, ನಟನೆಯ ಆಚೆ ಈಗವರು ಮನಸ್ಸು ಪರಿವರ್ತಿಸೋ ಮಾತುಗಾರ. ಅವರ ಮಾತು ಬರೀ‌ ಮಾತಲ್ಲ.‌‌ ಅವು ವಾಸ್ತವ ಬದುಕಿನ ನೀತಿ‌ಪಾ‌ಠ.‌ ಒಂಥರ ಬೋಧನೆ. ಇದು ಅವರ ಇನ್ನೊಂದು ಅವತಾರ. ಅದಕ್ಕೆ ವೇದಿಕೆ ಆಗಿದೆ ‘ ಕಾಮಿಡಿ ಕಿಲಾಡಿಗಳು‌ ‘ ಹೆಸರಿನ ಒಂದು‌ ರಿಯಾಲಿಟಿ ಶೋ.

ಅವು ಬರೀ‌ ಮಾತಲ್ಲ…

 

ಅಲ್ಲಿ ಅವರು ಮಾತನಾಡುತ್ತಾರಂದ್ರೆ , ಕೇಳ್ಬೇಕು‌ ನೀವು. ಯಾಕಂದ್ರೆ, ಆ ಮಾತುಗಳೇ ಹಾಗೆ. ಅವು ಮೌಲ್ಯಯುತ ಬದುಕಿನ‌‌ ಅಣಿ‌ ಮುತ್ತು. ಮೌಲ್ಯಗಳೇ ಕಳೆದು ಹೋಗುತ್ತಿರುವ ಈ ಸಮಾಜಕ್ಕೆ ಅವರ ಪ್ರತಿ ಮಾತು , ಮನೆ‌ ಮದ್ದು‌ ಇದ್ದಂತೆ. ಸುತ್ತಲ‌ ಸಮಾಜದ ಆಗು- ಹೋಗು, ಮಕ್ಕಳಿಗೆ ತಂದೆ- ತಾಯಿ ಮೇಲಿರಬೇಕಾದ ಗೌರವ, ಅವರ ಲಾಲನೆ-ಪಾಲನೆ, ದೇವರ ಮೇಲಿನ ನಂಬಿಕೆ, ಸಿನಿಮಾ ಬದುಕು, ಸಿನಿಮಾ‌ ಎನ್ನುವ ಕಲಾ ಸೇವೆಗೆ ಇರುವ ಶಕ್ತಿ, ಅದನ್ನು ತಾವು ಶ್ರದ್ದೆಯಿಂದ ಒಲಿಸಿಕೊಂಡ ಪರಿ, ಪ್ರಸಕ್ತ ವಿದ್ಯಮಾನ, ಸಿದ್ಧಾಂತ ಇಲ್ಲದ ರಾಜಕಾರಣ, ಅಕ್ರಮ ಸಂಪಾದನೆಯ ಕೆಡಕು, ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗುತ್ತಿರುವ ಯುವ ಜಗತ್ತು…ಹೀಗೆ ಎಲ್ಲದರ ಕುರಿತು ಅವರು ಮಾತನಾಡುತ್ತಾರೆ. ಸಮಾಜದ ಕೆಡುಕುಗಳ ಮೇಲೆ ತಮ್ಮದೇ ಮಾತುಗಳ ಮೂಲಕ ಬೆಳಕು ಚೆಲ್ಲಿ ವೀಕ್ಷಕರ‌‌ ಮನ ಗೆಲ್ಲುತ್ತಾ ಹೋಗುತ್ತಾರೆ ಜಗ್ಗೇಶ್.

ಇದು ರಿಯಾಲಿಟಿ ಶೋ‌ ವಿಶೇಷ..

‘ ಕಾಮಿಡಿ ಕಿಲಾಡಿಗಳು ‘ ಎನ್ನುವ ಶಿರ್ಷಿಕೆಯೇ ಹೇಳುವ ಹಾಗೆ ಇದೊಂದು‌ ಕಾಮಿಡಿ‌ ಪ್ರಧಾನ ರಿಯಾಲಿಟಿ ಶೋ. ನವ ನವೀನ ಪರಿಕಲ್ಪನೆಗಳ ಮೂಲಕ ವೀಕ್ಷರನ್ನು ರಂಜಿಸುವುದು ಈ ಕಾರ್ಯಕ್ರಮ ದ ಉದ್ದೇಶ. ಇನ್ನು‌ ಜಗ್ಗೇಶ್ ಅವರದ್ದು ಕೂಡ ಕಾಮಿಡಿಯೇ ಟ್ರಂಪ್ ಕಾರ್ಡ್. ಅವರೇ ಈ ಶೋ‌ ತೀರ್ಪುಗಾರರಾದರೆ ವೀಕ್ಷರು ಇನ್ನಷ್ಟು ನಗಬಹುದು, ಕಾರ್ಯಕ್ರಮ ಕೂಡ ಸಕ್ಸಸ್ ಆಗಬಹುದು ಎನ್ನುವುದು ಚಾನೆಲ್ ನ‌ ನಿರೀಕ್ಷೆಯೂ ಆಗಿತ್ತೇನೋ. ಆದರೆ ಅದು ಜಗ್ಗೇಶ್ ಅವರ ಎಂಟ್ರಿ‌ ಮೂಲಕ ಅಷ್ಟಕ್ಕೆ ಮಾತ್ರ ಸೀಮಿತವಾಗದೆ ಪರಿಣಾಮಕಾರಿ‌ ಮಾತುಗಳ ಮೂಲಕ ಜನ ಮನ ಗೆದಿದ್ದು ಅದರ ಇನ್ನೊಂದು ಹೆಗ್ಗಳಿಕೆ.ಅಷ್ಟೇ ಅಲ್ಲ, ಅದು ಕಿರುತೆರೆಯೊಂದರ ರಿಯಾಲಿಟಿ ಶೋ ನ ವಿಶೇಷತೆಯೂ ಹೌದು‌.

ಕಿರುತೆರೆ ವೀಕ್ಷಕರಿಗೆ ಗೊತ್ತಿರುವಂತೆ ‘ ಕಾಮಿಡಿ‌ಕಿಲಾಡಿಗಳು ‘ ರಿಯಾಲಿಟಿ‌ ಶೋ ಈಗಾಗಲೇ ಮೂರು ಸೀಸನ್ ಮುಗಿಸಿದೆ. ಈ‌ ಮೂರು ಸೀಸನ್ ಗಳಲ್ಲೂ‌‌ ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಅವರ ಜತೆಗೆ ನಟ ಜಗ್ಗೇಶ್ ಕೂಡ ಅದರ ಖಾಯಂ ಜಡ್ಜ್. ಹಾಗೆ ನೋಡಿದರೆ ಅವರೇ ಅಲ್ಲಿ ಹೈಲೈಟ್. ಶೋ‌ ವೇದಿಕೆ ಮೇಲೆ ಪ್ರತಿ‌ವಾರ ನಡೆಯುವ ಕಂಟೆಸ್ಟೆಡ್ ಗಳ ಅಭಿನಯ ಅಥವಾ ಪ್ರದರ್ಶನಕ್ಕೆ‌ ಅಯ್ಕೆ ಮಾಡಿಕೊಂಡ ಕಾನ್ಸೆಪ್ಟ್ ಬಗ್ಗೆ ಯೋಗರಾಜ್ ಭಟ್ ಅಥವಾ ರಕ್ಷಿತಾ ಏನ್ ಹೇಳ್ತಾರೆ ಎನ್ನುವುದಕ್ಕಿಂತ ಜಗ್ಗೇಶ್ ಅವರ ಮಾತುಗಳ ಬಗ್ಗೆಯೇ ದೊಡ್ಡ ಕುತೂಹಲ ಇರುತ್ತೆ.

ಮನಸ್ಸು ಪರಿವರ್ತಿಸುವ ಮಾತು..

ಅಂತಹದೊಂದು ಸಂದರ್ಭವನ್ನೆ ಬಳಸಿಕೊಂಡು ಮಾತಿಗಿಳಿಯುವ ಜಗ್ಗೇಶ್ , ಅಲ್ಲಿನ‌ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಅನುಭದ ಮಾತುಗಳನ್ನು ಪೋಣಿಸಿ, ಹಾಸ್ಯದ ಜತೆಗೆ ಗಂಭೀರತೆಯೂ ತುಂಬಿಕೊಳ್ಳುವಂತೆ ಮಾಡುತ್ತಾರೆ. ಅದು ವೀಕ್ಷಕರಿಗೆ ತುಂಬಾ ಹಿಡಿಸುತ್ತದೆ.’ ನಾನು ಕಾಮಿಡಿ‌ ಕಿಲಾಡಿಗಳು’ ಶೋ ನ ಖಾಯಂ ವೀಕ್ಷಕ. ಪ್ರತಿ ವಾರ ಮಿಸ್ ಮಾಡೋದಿಲ್ಲ. ಅದಕ್ಕೆ ಎರಡು ಕಾರಣ. ನಕ್ಕು ಹಗುರಾಗಬೇಕೆನ್ನುವುದರ ಜತೆಗೆ ಜಗ್ಗೇಶ್ ಅವರ ವಾಸ್ತವದ ಮಾತುಗಳನ್ನು ಕೇಳಬೇಕು. ಅವರ ಅಲ್ಲಿ ಆಡುವ ಪ್ರತಿ ಮಾತು ವೇದವಾಕ್ಯ. ನನಗೇ ಗೊತ್ತಿರುವಂತೆ ಒಂದಿಬ್ಬರು ಗೆಳೆಯರು ಜಗ್ಗೇಶ್ ಅವರ ಮಾತಿನಿಂದ ಮನಸ್ಸು ಪರಿವರ್ತನೆ ಮಾಡಿಕೊಂಡಿದ್ದಾರೆ. ವೃದ್ದಾಶ್ರಮದಲ್ಲಿದ್ದ ತಮ್ಮ ತಂದೆ- ತಾಯಿಯನ್ನು ಮನೆಗೆ ಕರೆದುಕೊಂಡು‌ ಬಂದೀಗ ಸಂತೋಷದಲ್ಲಿದ್ದಾರೆ. ಆ ಮಟ್ಟಿಗೆ ಮನಪರಿವರ್ತನೆ ಮಾಡಿಸುವ ಶಕ್ತಿ ಜಗ್ಗೇಶ್ ಅವರ ಮಾತುಗಳಲ್ಲಿರುತ್ತವೆ. ಒಂದೆಡೆ ನಗು, ಮತ್ತೊಂದೆಡೆ ಮನಪರಿವರ್ತಿಸುವ ಮಾತು ಈ ಕಾರ್ಯಕ್ರಮದಲ್ಲಿ ಸಿಗುತ್ತದೆ’ ಎನ್ನುತ್ತಾರೆ ಕಲಬುರಗಿ ನಿವಾಸಿ ಅನಿಲ್ ಕುಮಾರ್ ಕೋಟೆ‌.

ಇತಿ ಮಿತಿಯ ಪರಧಿಯಾಚೆ…

ರಿಯಾಲಿಟಿ ಶೋ ಗಳಲ್ಲಿ ಚಾನೆಲ್ ಕಡೆಯಿಂದ ತೀರ್ಪುಗಾರರಿಗೂ ಕೆಲವು ಷರತ್ತು ವಿಧಿಸುವುದು ಸಹಜ. ಅವರ ಇತಿ ಮಿತಿಗಳ ಪರಿಧಿಯೊಳಗೆಯೇ ಅವರೆಲ್ಲ ಮಾತನಾಡ ಬೇಕಾಗುತ್ತದೆ. ಅಂತಹ ಅನೇಕ ರಿಯಾಲಿಟಿ ಶೋ ಗೆ ಕನ್ನಡದ ಸ್ಟಾರ್ ಗಳೇ ತೀರ್ಪುಗಾರರಾಗಿದ್ದು ಗೊತ್ತೇ ಇದೆ. ಅವರೆಲ್ಲ ಆ ಪರಿಮಿತಿಯೊಳಗೆ ತಮ್ಮ ಅಭಿಪ್ರಾಯ ಮಂಡಿಸಿ, ಶೋ ಮುಗಿಸಿದ್ದಾರೆ.ಆದರೆ ಜಗ್ಗೇಶ್ ಹಾಗಲ್ಲ,ಅಲ್ಲಿನ ಮಿತಿಗಳನ್ನು ದಾಟಿ ತಮ್ಮ ಅನುಭವ ಸೇರಿಸಿ ಅದಕ್ಕೊಂದು ಹೊಸ ನೋಟ ಸಿಗುವಂತೆ ಮಾಡುತ್ತಾರೆ.‌ ಹಾಗೆಯೇ ಹೊಸ ಪ್ರತಿಭೆಗಳಿಗೂ ದೊಡ್ಡ ಪ್ರೋತ್ಸಾಹ ‌ನೀಡುತ್ತಾರೆ.

 

 

‘ ‌ನಟ ಜಗ್ಗೇಶ್ ಅಂದ್ರೆ ಒಂದು ಸ್ಪೂರ್ತಿಯ ವ್ಯಕ್ತಿತ್ವ. ಕಾಮಿಡಿ ಕಿಲಾಡಿಗಳ ಶೋ ಗೆ ನಾನು ‌ಆಯ್ಕೆಯಾದಾಗ ನೆಚ್ಚಿನ ನಟ ಜಗ್ಗೇಶ್ ಅವರನ್ನು ಹತ್ತಿರದಿಂದ ನೋಡುವ ಸಿಕ್ಕಿತ್ತಲ್ಲ ಅಂತಲೇ ಖುಷಿ ಪಟ್ಟಿದ್ದೆ. ಅಷ್ಟರವರೆಗೆ ಅವರನ್ನು ನಟನಾಗಿ ಕಂಡಿದ್ದ ನನಗೆ ಅಲ್ಲಿಗೆ ಹೋದಾಗ ಗೊತ್ತಾಗಿದ್ದ ಅವರೊಬ್ಬ ಗುರು ಅಂತ. ಹಳ್ಳಿಗರಂದ್ರೆ ಅವರಿಗೆ ವಿಶೇಷ ಪ್ರೀತಿ. ಶೋ‌ಮೊದಲ ದಿನವೇ ನನ್ನ ಅಭಿನಯ ಮೆಚ್ವಿಕೊಂಡು ಮಾತನಾಡಿದ್ದು ದೊಡ್ಡ ಹುಮ್ಮಸ್ಸು ತುಂಬಿತು‌. ನನ್ನ ಹಾಗೆ ಅವರು ಪ್ರತಿಭಾವಂತ ಪ್ರತಿಯೊಬ್ಬರನ್ನು ಇಷ್ಟಪಡುತ್ತಾರೆ. ಅವರು ಕೂಡ ಹಳ್ಳಿಯಿಂದ ಬಂದವರು. ಹಳ್ಳಿಯ ಜೀವನದ ಕಷ್ಟ-ಸುಖದ ಮಾತುಗಳನ್ನು ಹೇಳುತ್ತಲೇ, ನಮ್ಮನ್ನು ಮತ್ತಷ್ಟು ಪ್ರೇರೆಪಿಸುತ್ತಿದ್ದರು. ಒಂದು ಸ್ಟ್ರಿಪ್ ನಲ್ಲಿನ ನನ್ನ ಅಭಿನಯ ನೋಡಿ, ಜೂನಿಯರ್ ಶ್ರೀನಿವಾಸ ಮೂರ್ತಿ ಕಣೋ ನೀನು ಅಂತ ಬಿರುದು ಕೊಟ್ಟರು. ಅದು ನನ್ನೊಳಗಿನ‌‌ ನಟನೆಯ ಆಸೆಯನ್ನು ದುಪ್ಪಟ್ಟು ಮಾಡಿತು. ಹಾಗೆಯೇ ಕಾಮಿಡಿ‌ಕಿಲಾಡಿಗಳು ಎನ್ನುವ ಒಂದು ಕಾಮಿಡಿ‌ ಶೋ ಪ್ರತಿಯೊಬ್ಬರಿಗೂ ಇಷ್ಟವಾಗುವುದಕ್ಕೆ ಮುಖ್ಯ ಕಾರಣ ಜಗ್ಗೇಶ್ ಅವರ ಮಾತು, ಜತೆಗೆ ಸ್ಕಿಟ್ ಗಳ ಕೊನೆಯಲ್ಲಿ ಹೇಳುವ ಮೆಸೇಜ್. ನನಗೆ ತಿಳಿದಿರುವಂತೆ ಅದು ಅಲ್ಲಿ ಸೇರಿಕೊಂಡಿದ್ದೇ ಜಗ್ಗೇಶ್ ಅವರ ಕಾರಣಕ್ಕೆ. ಶೋ‌ ಯಶಸ್ಸಿನಲ್ಲಿ ಅದು ಕೂಡ ಕಾರಣ ಎಂದರೆ ತಪ್ಪಲ್ಲ’ ಎನ್ನುತ್ತಾರೆ ‘ ಕಾಮಿಡಿ ಕಿಲಾಡಿಗಳು’ ಸೀಸನ್ 3 ಕಂಟೆಸ್ಟೆಡ್ ಆಗಿದ್ದ ದಾವಣಗೆರೆ ಜಿಲ್ಲೆ ಹಿರೇಗೊಣಿಗೆರೆಯ ಚಂದ್ರ ಶೇಖರ್.

Categories
ಸಿನಿ ಸುದ್ದಿ

ದಸರಾ ಹಬ್ಬಕ್ಕೆ ದಮಯಂತಿ‌ ಧಮಾಕ!


ಮತ್ತೆ ರಿಲೀಸ್ ಆಗಲಿದೆ ರಾಧಿಕಾ‌ ಚಿತ್ರ

ಕೊರೊನಾ‌ ಆತಂಕದ ನಡುವೆಯೇ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳು ಇದೀಗ ತಮ್ಮ ಕಾರ್ಯ ಚಟುವಟಿಕೆಗಳಿಗೆ ಚಾಲನೆ‌ ನೀಡುತ್ತಿವೆ. ಇದಕ್ಕೆ ಚಿತ್ರರಂಗವೂ ಹೊರತಲ್ಲ. ಈಗಾಗಲೇ ಸಿನಿಮಾರಂಗ ತನ್ನ‌ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಇದೀಗ ಸಿನಿಮಾ‌ ಬಿಡುಗಡೆಗೂ ಮುಂದಾಗಿದೆ. ಅ.16ರಂದು ಮದರಂಗಿ ಕೃಷ್ಣ ಅಭಿನಯದ”ಲವ್ ಮಾಕ್ಟೇಲ್”, ಚಿರಂಜೀವಿ ಸರ್ಜಾ ಅಭಿನಯದ ” ಶಿವಾರ್ಜುನ” ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಅವುಗಳ ಜೊತೆಗೆ ಈಗೆ ರಾಧಿಕಾ ಕುಮಾರಸ್ವಾಮಿ ನಟನೆಯ “ದಮಯಂತಿ” ಚಿತ್ರ ಕೂಡ ಬಿಡುಗಡೆಗೆ ರೆಡಿಯಾಗಿದೆ.

ನಿರ್ದೇಶಕ ನವರಸನ್

ಈಗಾಗಲೇ ಬಿಡುಗಡೆ ಕಂಡು ಮೆಚ್ಚುಗೆ ಪಡೆದಿದ್ದ “ದಮಯಂತಿ” ಚಿತ್ರವನ್ನು ಪುನಃ ಬಿಡುಗಡೆ ಮಾಡಲು ನಿರ್ದೇಶಕ ಕಮ್‌ ನಿರ್ಮಾಪಕ ನವರಸನ್‌ ತಯಾರಿ ನಡೆಸಿದ್ದಾರೆ.
ಅಕ್ಟೊಬರ್ 23ರಂದು ರಾಜ್ಯಾದ್ಯಂತ “ದಮಯಂತಿ” ಚಿತ್ರವನ್ನು ಬಿಡುಗಡೆ ಮಾಡಲು ಅವರು ಮುಂದಾಗಿದ್ದಾರೆ.
ಮತ್ತೆ ಅಬ್ಬರಿಸಲು ಬರುತ್ತಿರುವ ” ದಮಯಂತಿ” ದಸರಾ ಹಬ್ಬಕ್ಕೆ ಮನರಂಜನೆ‌ ನೀಡಲು ರೆಡಿಯಾಗಿದ್ದಾಳೆ.
ಕೊರೊನಾ ಹಿನ್ನೆಲೆಯಲ್ಲಿ ‌ಮನರಂಜನೆಯೂ ಇರಲಿಲ್ಲ.‌ಈಗ ಮನರಂಜನೆ ಬಯಸುವ ಸಿನಿ ಪ್ರೇಮಿಗಳಿಗೆ ಹಬ್ಬವಂತೂ ಹೌದು.‌ಚಿತ್ರರಂಗ ಕೂಡ ಸರ್ಕಾರದ ಸೂಚನೆಯಂತೆ ಎಲ್ಲಾ‌ ಮುಂಜಾಗ್ರತಾ ಕ್ರಮ‌ ಕೈಗೊಂಡು ಚಿತ್ರಮಂದಿರಗಳನ್ನು ಸಜ್ಜುಗೊಳಿಸಿದೆ. ಅದೇನೆ ಇರಲಿ ಚಿತ್ರರಂಗ ಈಗ ಗರಿಗೆದರಿದೆ. ಪ್ರೇಕ್ಷಕನ ಮನ ತಣಿಸಲು ಸಿನಿಮಾ‌ ಮಂದಿ ಕೂಡ ರೆಡಿಯಾಗಿದ್ದಾರೆ.

Categories
ಸಿನಿ ಸುದ್ದಿ

ಮಹಾ‌ಭಾರತ, ಮಹಾ‌ನಾಯಕ – ರೇಟಿಂಗ್ ನಲ್ಲಿ ಇವರೇ ‘ಮಹಾ’!


ಅದರಲ್ಲೂ ನಂಬರ್ ಒನ್ ಯಾರು ?
ಉತ್ತರಕ್ಕೆ ಈ ಸ್ಟೋರಿ ನೋಡಿ.

ಕೊರೋನಾ ಸೃಷ್ಟಿಸಿದ ಅವಾಂತರಗಳಲ್ಲಿ ಡಬ್ಬಿಂಗ್ ಕೂಡ ಒಂದು.‌ ಇದು ವರವೋ, ಶಾಪವೋ ಗೊತ್ತಿಲ್ಲ, ಆದರೆ, ಕನ್ನಡ ಕಿರುತೆರೆ ಮಾತ್ರ ಈಗ ಫುಲ್ ಡಬ್ಬಿಂಗ್ ಮಯ. ಹಾಗೆಯೇ ಡಬ್ಬಿಂಗ್ ಧಾರಾವಾಹಿಗಳೇ ಈಗ ಕನ್ನಡದ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು.ಕಥಾ ವಿಷಯದಾಚೆ ಕನ್ನಡ ಕಿರುತೆರೆ ಉದ್ಯಮದ ಭವಿಷ್ಯಕ್ಕೆ ಡಬ್ಬಿಂಗ್ ಬೆಳವಣಿಗೆ ಅಷ್ಟೇನು ಹಿತಕರ ಅಲ್ಲ. ಅದರೂ ಈಗ ಅದೇ ದೊಡ್ಡ ಟ್ರೆಂಡ್. ಇದನ್ನು ದುರಂತ ಎನ್ನಬೇಕೋ, ಒಳ್ಳೆಯದು ಅಂತ ಖುಷಿ ಪಡಬೇಕೋ ಗೊತ್ತಾಗುತ್ತಿಲ್ಲ ಬಿಡಿ.
ಅಂದ ಹಾಗೆ , ಇಲ್ಲಿ ಹೇಳ ಹೊರಟ ವಿಷಯ ಅದಲ್ಲ. ಕೊರೋನಾ ಬಂದ ನಂತರ ಕನ್ನಡ ಕಿರುತೆರೆಯ ಟಿಆರ್ ಪಿ ಟ್ರೆಂಡ್ ಗಗನಕ್ಕೇರಿದೆ. ಕೊರೋನಾ ಎನ್ನುವ ಮಹಾಮಾರಿ ಜನರನ್ನು ತೀವ್ರವಾಗಿ ಕಾಡಿದರೂ, ಬಹುದಿನಗಳ‌ ಕಾಲ‌ ಜ‌ನರು ಗೃಹ ಬಂಧನಕ್ಕೆ ಸಿಲುಕಿದ ಪರಿಣಾಮ ಧಾರಾವಾಹಿಗಳನ್ನು ಎಡೆ ಬಿಡದೆ ನೋಡಿದ್ದಾರೆ.‌ ಅದಕ್ಕೆ ಸಾಕ್ಷಿ ಮುಗಿಲಿಗೆ ಚಿಮ್ಮಿದ ಸೀರಿಯಲ್ ಟಿಆರ್ ಪಿ. ಅದರ ಪರಿಣಾಮ ಒಂದಕ್ಕಿಂತ ಒಂದು ಧಾರಾವಾಹಿಗಳು ಪೈಪೋಟಿಯಲ್ಲಿವೆ.
ಕೊರೋನಾ ಕಾರಣಕ್ಕೆ ಕನ್ನಡ ಕಿರುತೆರೆ ದೊಡ್ಡ ಬದಲಾವಣೆ ಕಂಡಿದೆ. ಹಿಂದಿಯ‌ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಕನ್ನಡ‌ ಕಿರುತೆರೆಗೆ ಬಂದಿವೆ. ಸಿನಿಮಾ ಶೂಟಿಂಗ್ ನಿಂತ ಹಾಗೆ, ಇಲ್ಲಿ ಸೀರಿಯಲ್‌ ಶೂಟಿಂಗ್ ಕೂಡ ಬಂದ್ ಆಗಿದ್ದು, ಡಬ್ಬಿಂಗ್ ಪ್ರಕ್ರಿಯೆಗೆ ಮುಕ್ತ ಅವಕಾಶ ನೀಡಿದೆ.ಅದೇ ಕಾರಣಕ್ಕೆ ಕನ್ನಡದಲ್ಲೀಗ ಹಿಂದಿಯ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಸಖತ್ ಸೌಂಡ್ ಮಾಡುತ್ತಿವೆ.ಅದಕ್ಕೆ ಸಾಕ್ಷಿ ಮಹಾಭಾರತ ಹಾಗೂ ಮಹಾನಾಯಕ.


ಸ್ಟಾರ್ ಸುವರ್ಣದಲ್ಲಿ ‘ಮಹಾಭಾರತ’ ಬಂದರೆ, ಝೀ‌ಕನ್ನಡದಲ್ಲಿ‌’ ಮಹಾ‌ನಾಯಕ’ ಪ್ರಸಾರವಾಗುತ್ತಿದೆ. ಒಂದ್ರೀತಿ ಎರಡು ಪೈಪೋಟಿ ಗೆ ಬಿದ್ದು ಜನರನ್ನು ತಲುಪುತ್ತಿವೆ‌. ಅಷ್ಟೇ ಅಲ್ಲ, ಜನರನ್ನು‌ಆಕರ್ಷಿಸಲು ಈ‌ ಚಾನೆಲ್ ಹಲವು ಗಿಮಿಕ್ ಮಾಡಿರುವುದು ನಿಮಗೆ ಗೊತ್ತು. ಮುಖ್ಯಮಂತ್ರಿಗಳೇ ಮಹಾಭಾರತ ಧಾರಾವಾಹಿ‌ ನೋಡುತ್ತಾರೆಂಬ ಒಂದು‌‌ ಸಂದೇಶ‌ ಸ್ಟಾರ್ ಸುವರ್ಣ ಕಡೆಯಿಂದ ಬಂದರೆ, ಮಹಾ ನಾಯಕ ನಿಲ್ಲಿಸಲು ಬೆದರಿಕೆ‌ ಕರೆಗಳು ಬರುತ್ತಿವೆ ಅಂತ ಝೀ‌ ಕನ್ನಡ‌ ಬಡಬಡಿಸಿದ್ದು, ಧಾರಾವಾಹಿ‌ ಪರವಾದ ದೊಡ್ಡ ಅಲೆಯೇ ಸೃಷ್ಟಿಯಾಗುವಂತೆ ಮಾಡಿತು. ಎಂದಿಗೂ ಧಾರಾವಾಹಿ‌ ನೋಡದ ಒಂದು ವರ್ಗವೇ ಝೀ‌ಕನ್ನಡದ ಪರವಾಗಿ ಎದ್ದು ಕುಳಿತು ಕೊಂಡಿತು. ಇದು ತಮ್ಮ‌ನಾಯಕನಿಗೆ ಮಾಡಿದ ಅವಮಾನ ಅಂತ ದಲಿತ‌ ಮುಖಂಡರು ಹೇಳಿಕೆ‌ ನೀಡಿದ್ದು ಝೀ ಕನ್ನಡಕ್ಕೆ ಹೊಸ ವರ್ಗವೇ ವೀಕ್ಷಕರಾಗಿ ಸಿಗುವಂತೆ ಮಾಡಿತು.


ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ‘ಮಹಾಭಾರತ ‘ ಧಾರಾವಾಹಿಯ ಕತೆ ಇದಕ್ಕಿಂದ ಭಿನ್ನವಾಗಿಲ್ಲ. ಮಹಾಭಾರತ ಎನ್ನುವುದು ಮೊದಲೇ ಜನ ಜನಿತ ಮಹಾಕಾವ್ಯ. ಪುಸ್ತಕಗಳ‌ ಮೂಲಕ, ಸಣ್ಣ ಪುಟ್ಟ ಕಿರು ಚಿತ್ರಗಳ‌‌ ಮೂಲಕ , ಇಲ್ಲವೇ ದೊಡ್ಡಾಟಗಳ‌ ಮೂಲಕ ಅಷ್ಟೋ‌ ಇಷ್ಟೋ ಸನ್ನಿವೇಶಗಳನ್ನು‌ ಕಣ್ತುಂಬಿಕೊಂಡವರಿಗೆ ಇಡೀ‌’ಮಹಾಭಾರತ’ ವೇ ದಿನ‌ನಿತ್ಯ ನಮ್ಮದೇ ಮನೆ‌ಬಾಗಿಲಿಗೆ ಬರುತ್ತೆ ಎಂದಾಗ ಆದ ಸಂತೋಷ ಅಷ್ಟಿಷ್ಟಲ್ಲ.‌ ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ಮಹಾಭಾರತ ಮನೆ‌ ಮಾತಾಯಿತು. ಜನ ಯಾವ ಪರಿ‌ನೋಡುತ್ತಾ ಬಂದರೆಂದರೆ, ಮಹಾಭಾರತ ಪ್ರಸಾರದ ಹೊತ್ತಿಗೆ ಯಾವುದೇ ಚಾನೆಲ್ ಆನ್ ಆಗಿಲ್ಲ.ಅಷ್ಟು ದೊಡ್ಡ ಕ್ರೇಜ್ ಈ ಧಾರಾವಾಹಿಗೆ ಸಿಕ್ಕಿದ್ದು ವಿಶೇಷ.

ಸದ್ಯಕ್ಕೆ‌ ಸ್ಟಾರ್ ಸುವರ್ಣದ ‘ಮಹಾಭಾರತ‌‌’ ಕ್ಲೈಮ್ಯಾಕ್ಸ್ ಹಂತಕ್ಕೆ‌ಬಂದಿದೆ. ಇನ್ನಷ್ಟು ದಿನ ಬಾಕಿಯಿದೆ. ಉಳಿದಂತೆ ‌ಝೀ‌ಕನ್ನಡದ ‘ ಮಹಾನಾಯಕ‌’. ಇನ್ಜು ಹಲವು ದಿನ ಪ್ರಸಾರವಾಗಲಿದೆ. ಉಳಿದಂತೆ, ಇವರೆಡುಬಧಾರಾವಾಹಿಗಳ ಪೈಕಿ ಹೈಯೆಸ್ಟ್ ರೇಟಿಂಗ್ ಧಾರಾವಾಹಿ ಯಾವುದು? ಕಿರುತೆರೆಯ ಮೂಲಗಳ ಪ್ರಕಾರ ಇವೆರೆಡು ಧಾರಾವಾಹಿಗಳೇ ಕಿರುತೆರೆಯ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು. ಡಬ್ಬಿಂಗ್ ವರ್ಷನ್ ಧಾರಾವಾಹಿಗಳಾದರೂ, ಇವು ಜನರಿಗೆ ತಲುಪಿರುವ ರೀತಿ ರೋಚಕ. ಪೈಪೋಟಿಗೆ ಬಿದ್ದಂತೆ ಜನರನ್ನು ತಲುಪುತ್ತಿವೆ. ಆದರೂ ರೇಟಿಂಗ್ ಅಂಕೆ- ಸಂಖ್ಯೆಯಲ್ಲಿ ‘ ಮಹಾಭಾರತ’ ನಂಬರ್ ಸ್ಥಾನದಲ್ಲಿದೆ ಎನ್ನುತ್ತಿವೆ.

Categories
ಸಿನಿ ಸುದ್ದಿ

ಇವರು ಕತ್ತಲೆ ಗುಡ್ಡದ ಗೂಢಾಚಾರಿಗಳು!

 ಬರಲಿದ್ದಾರೆ ರಮೇಶ್ ಸುರೇಶ್…

ನ್ಮಡ‌ ಚಿತ್ರರಂಗ ಇದೀಗ ಗರಿಗೆದರಿದೆ. ಕೊರೊನಾ ಕಾಲಿಟ್ಟು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಇದಕ್ಕೆ ಬಣ್ಣದ ಲೋಕವೂ ಹೊರತಲ್ಲ. ಈಗ ಮೆಲ್ಲನೆ‌ ಸಿನಿಮಾ‌ ಚಟುವಟಿಕೆಗಳು ಶುರುವಾಗಿವೆ. ಬಹುತೇಕ ಸ್ಟಾರ್ ಚಿತ್ರಗಳ ಚಿತ್ರೀಕರಣಕ್ಕೂ ಚಾಲನೆ‌ ಸಿಕ್ಕಿದೆ. ಹೊಸಬರು ಕೂಡ ಉತ್ಸಾಹದಲ್ಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಾಲಿಗೆ “ರಮೇಶ್ ಸುರೇಶ್” ಚಿತ್ರವೂ ಸೇರಿದೆ.
‌ಕಳೆದ ವಾರದಿಂದ ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ.

ಕೃಷ್ಣ , ನಿರ್ಮಾಪಕರು

ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ‌ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು. ಆರ್ ಕೆ ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಹಾಗೂ ಶಂಕರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ.ಬಹುತೇಕ‌ ಮಾತಿನ ಭಾಗದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಸದ್ಯಕ್ಕೆ ಪುಟ್ಟಣ ಕಣಗಾಲ್ ಸ್ಟುಡಿಯೋದಲ್ಲಿ ಚಿತ್ತೀಕರಿಸುತ್ತಿದೆ. ಫೈಟ್ಸ್ ಮತ್ತು ಒಂದು‌ ಐಟಂ ಸಾಂಗ್ ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಬೀಳಲಿದೆ.ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ‌ ಖ್ಯಾತ ನಟ ಸತ್ಯ ಪ್ರಕಾಶ್. ಉಳಿದಂತೆ ಮೋಹನ್ ಜುನೇಜಾ ಹಾಗೂ ರಂಗಭೂಮಿ ಪ್ರತಿಭೆಗಳಿವೆ.

ನಾಗರಾಜ್, ರಘುರಾಜ್

*ಹಾಸ್ಯದ‌ ಹೊನಲು

ಸಿನಿಮಾ‌ ಕುರಿತು ಹೇಳುವುದಾದರೆ ಚಿತ್ರದ ಟೈಟಲ್ ಇದೊಂದು ಹಾಸ್ಯಮಯ ಸಿನಿಮಾ ಎಂಬುದನ್ನು ಸಾರುತ್ತದೆ. ಕಥೆ ಕೂಡ‌ ಹಾಸ್ಯವಾಗಿಯೇ ಸಾಗಲಿದೆ.
ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ. ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಚಿತ್ರದಲ್ಲಿದೆ. ಸಿನಿಮಾ‌ ಅಪ್ಟಟ‌ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು.
ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ‌ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೂಡ ಹಗಲಿರುಳು ಕೆಲಸ ಮಾಡಿಸುತ್ತಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿವೆ. ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ವಿಶ್ವಜಿತ್ ಛಾಯಾಗ್ರಹಣವಿದೆ. ಮೂರು ಭರ್ಜರಿ ಫೈಟ್ ಗಳಿಗೆ ಥ್ರಿಲ್ಲರ್‌ ಮಂಜು ಸಾಹಸವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

ಹೊಸಬರ ಉತ್ಸಾಹ

ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ‌ ಎಂಟ್ರಿಯಾಗಿದ್ದಾರೆ.
ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ‌ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ‌ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ‌ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿ‌ನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಬಿರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.

*ಅವಕಾಶ ಕೊಟ್ಟ ಅನ್ನದಾತರು

ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ‌ ಇಂಡಸ್ಟ್ರಿಯಲ್ಲಿ ಅವಕಾಶ‌ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ‌ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ. ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ತನ್ನ ಕೆಲಸ ಮುಗಿಸಿ ಪ್ರೇಕ್ಷಕರ‌ ಮುಂದೆ‌ ಬರಲು ತಯಾರಾಗುತ್ತಿದೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಮಂಜೂ ಇರಲಿ, ಮಳೆಯೂ ಬರಲಿ…


ಕೊರೋನಾ ನಡುವೆಯೂ ಸಿನಿಮಾ‌ ರಿಲೀಸ್ , ಉದ್ಯಮದ‌ ಹಿತಕ್ಕಾಗಿ ಈ ರಿಸ್ಕ್ –  ನಿರ್ಮಾಪಕ  ಜಾಕ್ ಮಂಜು

Categories
ಸಿನಿ ಸುದ್ದಿ

ಪಾವನಾ ಮತ್ತೆ ಸ್ಟ್ರಾಂಗ್ ಲೇಡಿ!

ರುದ್ರಿ ಚಿತ್ರತಂಡದ ಜೊತೆ ಇನ್ನೊಂದು ಇನ್ನಿಂಗ್ಸ್

 

ಕನ್ನಡದ ಅಪ್ಪಟ ನಟಿ ಪಾವನಾಗೌಡ ಅಭಿನಯದ “ರುದ್ರಿ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಿಡುಗಡೆಗೆ ಸಜ್ಜಾಗಿರುವ ಆ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ.

ಹೌದು, “ರುದ್ರಿ” ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವಂತೂ ಹೌದು.ಈ ಚಿತ್ರ ಬಿಡುಗಡೆ ಮುನ್ನವೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಕಾರಣ, ಅದೊಂದು ಮಹಿಳಾ ಪ್ರಧಾನ ಸಿನಿಮಾ. ಅದರಲ್ಲೂ ಸಮಾಜದಲ್ಲಿ ನೊಂದು-ಬೆಂದ ಮಹಿಳೆಯೊಬ್ಬಳ ಕಥಾಹಂದರ ಹೊಂದಿರುವ ಸಿನಿಮಾ. ದೇವೇಂದ್ರ ಬಡಿಗೇರ್ ನಿದರ್ೇಶನದ ಈ ಚಿತ್ರದಲ್ಲಿ ಪಾವನಾ ಗೌಡ ಅವರಿಗೊಂದು ಪವರ್ಫುಲ್ ಪಾತ್ರವಿದೆ. ಕನ್ನಡ ಚಿತ್ರರಂಗಕ್ಕೆ ಬಂದು ಐದಾರು ವರ್ಷಗಳನ್ನೇ ಕಳೆದಿರುವ ಪಾವನಾಗೌಡ ಅವರ ವೃತ್ತಿ ಬದುಕಿನಲ್ಲಿ “ರುದ್ರಿ’ ವಿಶೇಷ ಸಿನಿಮಾ.

LPP
ಈಗಾಗಲೇ “ರುದ್ರಿ” ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ದೇಶ-ವಿದೇಶಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದೆ. ಕೊಲ್ಕತ್ತಾದಲ್ಲಿ ನಡೆದ ಚಿತ್ರೋತ್ಸವ ಹಾಗು ಇಟಲಿ ಸೇರಿದಂತೆ ಹಲವು ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ “ರುದ್ರಿ’ಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಇದೇ ಖುಷಿಯಲ್ಲಿರುವ “ರುದ್ರಿ’ ಚಿತ್ರತಂಡ, ಸಿನಿಮಾ ಬಿಡುಗಡೆ ಮುನ್ನವೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದೆ.

ಸದ್ಯಕ್ಕೆ ಆ ಚಿತ್ರಕ್ಕಿನ್ನೂ ಶೀಷರ್ಿಕೆ ಪಕ್ಕಾ ಮಾಡಿಲ್ಲ. ಆ ಚಿತ್ರದಲ್ಲೂ ಪಾವನಾಗೌಡ ಅವರೇ ನಟಿಸಲಿದ್ದಾರೆ. ಅಂದಹಾಗೆ, “ರುದ್ರಿ” ಚಿತ್ರದಲ್ಲಿ ಪಾವನಾಗೌಡ ಅವರದು ಸ್ಟ್ರಾಂಗ್ ವುಮೆನ್ ರೋಲ್. ಮತ್ತೆ, ಹೊಸ ಚಿತ್ರದಲ್ಲೂ ಮಹಿಳಾ ಪ್ರಧಾನ ಕಥೆ ಇರುವುದರಿಂದ, ಅಲ್ಲೂ ಪಾವನಾ ಗೌಡ ಅವರಿಗೆ ವಿಶೇಷ ರೀರಿಯ ಪಾತ್ರ ಸಿಕ್ಕಿದೆ. ಅದೊಂದು ಸ್ಟ್ರಾಂಗ್ ಲೇಡಿ ಪಾತ್ರ. ಸದ್ಯಕ್ಕೆ ಅಕ್ಟೋಬರ್ ಅಂತ್ಯದಲ್ಲಿ ಚಿತ್ರದ ಶೀಷರ್ಿಕೆ ಬಿಡುಗಡೆ ಮಾಡಿ, ಚಿತ್ರೀಕರಣಕ್ಕೆ ಅಣಿಯಾಗಲಿದೆ. ಚಿತ್ರತಂಡ.


ಈ ಮಧ್ಯೆ ಪಾವನಾಗೌಡ ಅವರು, ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ. ಕೆಲ ಆಯ್ದ ಫೋಟೋಗಳನ್ನು “ಸಿನಿಲಹರಿ” ಓದುಗರ ಮುಂದಿಟ್ಟಿದೆ

error: Content is protected !!