ಅದರಲ್ಲೂ ನಂಬರ್ ಒನ್ ಯಾರು ?
ಉತ್ತರಕ್ಕೆ ಈ ಸ್ಟೋರಿ ನೋಡಿ.
ಕೊರೋನಾ ಸೃಷ್ಟಿಸಿದ ಅವಾಂತರಗಳಲ್ಲಿ ಡಬ್ಬಿಂಗ್ ಕೂಡ ಒಂದು. ಇದು ವರವೋ, ಶಾಪವೋ ಗೊತ್ತಿಲ್ಲ, ಆದರೆ, ಕನ್ನಡ ಕಿರುತೆರೆ ಮಾತ್ರ ಈಗ ಫುಲ್ ಡಬ್ಬಿಂಗ್ ಮಯ. ಹಾಗೆಯೇ ಡಬ್ಬಿಂಗ್ ಧಾರಾವಾಹಿಗಳೇ ಈಗ ಕನ್ನಡದ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು.ಕಥಾ ವಿಷಯದಾಚೆ ಕನ್ನಡ ಕಿರುತೆರೆ ಉದ್ಯಮದ ಭವಿಷ್ಯಕ್ಕೆ ಡಬ್ಬಿಂಗ್ ಬೆಳವಣಿಗೆ ಅಷ್ಟೇನು ಹಿತಕರ ಅಲ್ಲ. ಅದರೂ ಈಗ ಅದೇ ದೊಡ್ಡ ಟ್ರೆಂಡ್. ಇದನ್ನು ದುರಂತ ಎನ್ನಬೇಕೋ, ಒಳ್ಳೆಯದು ಅಂತ ಖುಷಿ ಪಡಬೇಕೋ ಗೊತ್ತಾಗುತ್ತಿಲ್ಲ ಬಿಡಿ.
ಅಂದ ಹಾಗೆ , ಇಲ್ಲಿ ಹೇಳ ಹೊರಟ ವಿಷಯ ಅದಲ್ಲ. ಕೊರೋನಾ ಬಂದ ನಂತರ ಕನ್ನಡ ಕಿರುತೆರೆಯ ಟಿಆರ್ ಪಿ ಟ್ರೆಂಡ್ ಗಗನಕ್ಕೇರಿದೆ. ಕೊರೋನಾ ಎನ್ನುವ ಮಹಾಮಾರಿ ಜನರನ್ನು ತೀವ್ರವಾಗಿ ಕಾಡಿದರೂ, ಬಹುದಿನಗಳ ಕಾಲ ಜನರು ಗೃಹ ಬಂಧನಕ್ಕೆ ಸಿಲುಕಿದ ಪರಿಣಾಮ ಧಾರಾವಾಹಿಗಳನ್ನು ಎಡೆ ಬಿಡದೆ ನೋಡಿದ್ದಾರೆ. ಅದಕ್ಕೆ ಸಾಕ್ಷಿ ಮುಗಿಲಿಗೆ ಚಿಮ್ಮಿದ ಸೀರಿಯಲ್ ಟಿಆರ್ ಪಿ. ಅದರ ಪರಿಣಾಮ ಒಂದಕ್ಕಿಂತ ಒಂದು ಧಾರಾವಾಹಿಗಳು ಪೈಪೋಟಿಯಲ್ಲಿವೆ.
ಕೊರೋನಾ ಕಾರಣಕ್ಕೆ ಕನ್ನಡ ಕಿರುತೆರೆ ದೊಡ್ಡ ಬದಲಾವಣೆ ಕಂಡಿದೆ. ಹಿಂದಿಯ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಕನ್ನಡ ಕಿರುತೆರೆಗೆ ಬಂದಿವೆ. ಸಿನಿಮಾ ಶೂಟಿಂಗ್ ನಿಂತ ಹಾಗೆ, ಇಲ್ಲಿ ಸೀರಿಯಲ್ ಶೂಟಿಂಗ್ ಕೂಡ ಬಂದ್ ಆಗಿದ್ದು, ಡಬ್ಬಿಂಗ್ ಪ್ರಕ್ರಿಯೆಗೆ ಮುಕ್ತ ಅವಕಾಶ ನೀಡಿದೆ.ಅದೇ ಕಾರಣಕ್ಕೆ ಕನ್ನಡದಲ್ಲೀಗ ಹಿಂದಿಯ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಸಖತ್ ಸೌಂಡ್ ಮಾಡುತ್ತಿವೆ.ಅದಕ್ಕೆ ಸಾಕ್ಷಿ ಮಹಾಭಾರತ ಹಾಗೂ ಮಹಾನಾಯಕ.
ಸ್ಟಾರ್ ಸುವರ್ಣದಲ್ಲಿ ‘ಮಹಾಭಾರತ’ ಬಂದರೆ, ಝೀಕನ್ನಡದಲ್ಲಿ’ ಮಹಾನಾಯಕ’ ಪ್ರಸಾರವಾಗುತ್ತಿದೆ. ಒಂದ್ರೀತಿ ಎರಡು ಪೈಪೋಟಿ ಗೆ ಬಿದ್ದು ಜನರನ್ನು ತಲುಪುತ್ತಿವೆ. ಅಷ್ಟೇ ಅಲ್ಲ, ಜನರನ್ನುಆಕರ್ಷಿಸಲು ಈ ಚಾನೆಲ್ ಹಲವು ಗಿಮಿಕ್ ಮಾಡಿರುವುದು ನಿಮಗೆ ಗೊತ್ತು. ಮುಖ್ಯಮಂತ್ರಿಗಳೇ ಮಹಾಭಾರತ ಧಾರಾವಾಹಿ ನೋಡುತ್ತಾರೆಂಬ ಒಂದು ಸಂದೇಶ ಸ್ಟಾರ್ ಸುವರ್ಣ ಕಡೆಯಿಂದ ಬಂದರೆ, ಮಹಾ ನಾಯಕ ನಿಲ್ಲಿಸಲು ಬೆದರಿಕೆ ಕರೆಗಳು ಬರುತ್ತಿವೆ ಅಂತ ಝೀ ಕನ್ನಡ ಬಡಬಡಿಸಿದ್ದು, ಧಾರಾವಾಹಿ ಪರವಾದ ದೊಡ್ಡ ಅಲೆಯೇ ಸೃಷ್ಟಿಯಾಗುವಂತೆ ಮಾಡಿತು. ಎಂದಿಗೂ ಧಾರಾವಾಹಿ ನೋಡದ ಒಂದು ವರ್ಗವೇ ಝೀಕನ್ನಡದ ಪರವಾಗಿ ಎದ್ದು ಕುಳಿತು ಕೊಂಡಿತು. ಇದು ತಮ್ಮನಾಯಕನಿಗೆ ಮಾಡಿದ ಅವಮಾನ ಅಂತ ದಲಿತ ಮುಖಂಡರು ಹೇಳಿಕೆ ನೀಡಿದ್ದು ಝೀ ಕನ್ನಡಕ್ಕೆ ಹೊಸ ವರ್ಗವೇ ವೀಕ್ಷಕರಾಗಿ ಸಿಗುವಂತೆ ಮಾಡಿತು.
ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ‘ಮಹಾಭಾರತ ‘ ಧಾರಾವಾಹಿಯ ಕತೆ ಇದಕ್ಕಿಂದ ಭಿನ್ನವಾಗಿಲ್ಲ. ಮಹಾಭಾರತ ಎನ್ನುವುದು ಮೊದಲೇ ಜನ ಜನಿತ ಮಹಾಕಾವ್ಯ. ಪುಸ್ತಕಗಳ ಮೂಲಕ, ಸಣ್ಣ ಪುಟ್ಟ ಕಿರು ಚಿತ್ರಗಳ ಮೂಲಕ , ಇಲ್ಲವೇ ದೊಡ್ಡಾಟಗಳ ಮೂಲಕ ಅಷ್ಟೋ ಇಷ್ಟೋ ಸನ್ನಿವೇಶಗಳನ್ನು ಕಣ್ತುಂಬಿಕೊಂಡವರಿಗೆ ಇಡೀ’ಮಹಾಭಾರತ’ ವೇ ದಿನನಿತ್ಯ ನಮ್ಮದೇ ಮನೆಬಾಗಿಲಿಗೆ ಬರುತ್ತೆ ಎಂದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ಮಹಾಭಾರತ ಮನೆ ಮಾತಾಯಿತು. ಜನ ಯಾವ ಪರಿನೋಡುತ್ತಾ ಬಂದರೆಂದರೆ, ಮಹಾಭಾರತ ಪ್ರಸಾರದ ಹೊತ್ತಿಗೆ ಯಾವುದೇ ಚಾನೆಲ್ ಆನ್ ಆಗಿಲ್ಲ.ಅಷ್ಟು ದೊಡ್ಡ ಕ್ರೇಜ್ ಈ ಧಾರಾವಾಹಿಗೆ ಸಿಕ್ಕಿದ್ದು ವಿಶೇಷ.
ಸದ್ಯಕ್ಕೆ ಸ್ಟಾರ್ ಸುವರ್ಣದ ‘ಮಹಾಭಾರತ’ ಕ್ಲೈಮ್ಯಾಕ್ಸ್ ಹಂತಕ್ಕೆಬಂದಿದೆ. ಇನ್ನಷ್ಟು ದಿನ ಬಾಕಿಯಿದೆ. ಉಳಿದಂತೆ ಝೀಕನ್ನಡದ ‘ ಮಹಾನಾಯಕ’. ಇನ್ಜು ಹಲವು ದಿನ ಪ್ರಸಾರವಾಗಲಿದೆ. ಉಳಿದಂತೆ, ಇವರೆಡುಬಧಾರಾವಾಹಿಗಳ ಪೈಕಿ ಹೈಯೆಸ್ಟ್ ರೇಟಿಂಗ್ ಧಾರಾವಾಹಿ ಯಾವುದು? ಕಿರುತೆರೆಯ ಮೂಲಗಳ ಪ್ರಕಾರ ಇವೆರೆಡು ಧಾರಾವಾಹಿಗಳೇ ಕಿರುತೆರೆಯ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು. ಡಬ್ಬಿಂಗ್ ವರ್ಷನ್ ಧಾರಾವಾಹಿಗಳಾದರೂ, ಇವು ಜನರಿಗೆ ತಲುಪಿರುವ ರೀತಿ ರೋಚಕ. ಪೈಪೋಟಿಗೆ ಬಿದ್ದಂತೆ ಜನರನ್ನು ತಲುಪುತ್ತಿವೆ. ಆದರೂ ರೇಟಿಂಗ್ ಅಂಕೆ- ಸಂಖ್ಯೆಯಲ್ಲಿ ‘ ಮಹಾಭಾರತ’ ನಂಬರ್ ಸ್ಥಾನದಲ್ಲಿದೆ ಎನ್ನುತ್ತಿವೆ.