Categories
ಸಿನಿ ಸುದ್ದಿ

ರಿಷಬ್ ಶೆಟ್ಟಿ ತಂಡದ ಕಥೆಗೆ ಮೆಚ್ಚುಗೆ: ಹರಿಕಥೆ ಅಲ್ಲ ಗಿರಿಕಥೆ ಟ್ರೇಲರ್ ಹೊರಬಂತು…

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ
ಯವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ. ಗಿರಿ ಅಂದರೆ ನಾನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ.


ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಅದ್ಬುತವಾದ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ಗಂಟೆಳ ಕಾಲ ಸಂಪೂರ್ಣ ಮನೋರಂಜನೆಯಿರುವ ಸಿನಿಮಾ ನಮ್ಮದು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ರಿಷಭ್ ಶೆಟ್ಟಿ.

ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್ “ಕಥಾಸಂಗಮ” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆನಂತರ ನಾನು ಹಾಗೂ ಅನಿರುದ್ಧ್ ಮಹೇಶ್ ಸೇರಿ ಈ ಚಿತ್ರ ನಿರ್ದೇಶನ‌ ಮಾಡಿದ್ದೇವೆ ಎಂದರು ಕರಣ್ ಅನಂತ್ . ಮತ್ತೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಚಿತ್ರದ ಕುರಿತು ಮಾತನಾಡಿದರು.

ನಾನು ಈ ಚಿತ್ರದಲ್ಲಿ ಗಿರಿಜಾ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ‌ ಹುಡುಗಿ. ತಾಯಿ ಇರುವುದಿಲ್ಲ. ತಂದೆ ಹಾಗೂ ಅಣ್ಣ ಇರುತ್ತಾರೆ ಎಂದು ನಾಯಕಿ ರಚನಾ ಇಂದರ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ನನ್ನ ಪಾತ್ರ ಕೂಡ ಚೆನ್ನಾಗಿದೆ. ಖುಷಿ ಜೋಕುಮಾರಸ್ವಾಮಿ ನನ್ನ ಪಾತ್ರದ ಹೆಸರು ಎಂದರು ನಟಿ ತಪಸ್ವಿನಿ.

ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ‌.‌ಇದರಲ್ಲೂ ಅದೇ ಹೆಸರು . ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ದಿನೇಶ್ ಮಂಗಳೂರು.

ನಾನು ಎಲ್ಲಾ‌ ಜವಾಬ್ದಾರಿಯನ್ನು ರಿಷಭ್ ಅವರಿಗೆ ನೀಡಿದ್ದೀನಿ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು. ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಂದೇಶ್ ಎನ್.

ರಿಷಭ್ ಶೆಟ್ಟಿ, ರಚನ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಭರತ್ ದೀಪ್ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಮಠದಲ್ಲಿ ಹಾಸ್ಯ ಕಲಾವಿದರ ದಂಡು: 25 ಜಿಲ್ಲೆಗಳಲ್ಲಿ ಶೂಟಿಂಗ್- ಇದು ರಿಯಲ್ ಸ್ಟೋರಿ ಸಿನಿಮಾ…

ಮಠ…ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ. ಜಗ್ಗೇಶ್ ಹಾಗೂ ಗುರು ಪ್ರಸಾದ್ ಜುಗಲ್ ಬಂದಿಯ ಈ ಚಿತ್ರ ಪ್ರೇಕ್ಷಕರನ್ನು‌ ನಕ್ಕು ನಲಿಸಿತ್ತು. ಇದೀಗ ಇದೇ ಹೆಸರಿನ ಸಿನಿಮಾ ಬರ್ತಿದೆ. ಹಾಗಂತ ಈ ಸಿನಿಮಾಗೂ ಆ ಸಿನಿಮಾಗೂ ಸಂಬಂಧವಿಲ್ಲ. ಇದೇ ಬೇರೆ ಅದೇ ಬೇರೆ.

ಫಿಲಾಸಫಿಕಲ್, ಕಾಮಿಡಿ ಸತ್ಯ ಘಟನೆಯಾಧಾರಿತ ಮಠ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ಗುರು ಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ.

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು ಹೀಗೆ.

ಸಾಧುಕೋಕಿಲಾ ಮಾತಾನಾಡಿ, ನಾನು ಸುಮಾರು ಮಾಡಿರಬಹುದು. ಆದ್ರೆ ಲೆಕ್ಕ ಇಟ್ಟಿಲ್ಲ. ಸುಮಾರು 600 ರಿಂದ 700 ಸಿನಿಮಾ ಮಾಡಿರಬಹುದು. ಜಾಸ್ತಿ, ಕಡಿಮೆ ಎರಡು ಇರಬಹುದು. ಆದ್ರೆ ಗುರು ಪ್ರಸಾದ್ ಮಠ ಸಿನಿಮಾದಲ್ಲಿ ನಾನು ಒಂದೆರೆಡು ಸೀನ್ ನಲ್ಲಿ ಮಾಡಿದ್ದೇನೆ. ಆ ಎಲ್ಲಾವೂ ಹಿಟ್. ಆದ್ರೆ ಈ ಮಠ ಹೆಸ್ರು ತೆಗೆದುಕೊಂಡಿದೆ. ಕಥಾವಸ್ತು ಬೇರೆ. ನಾನು ಮೇಜರ್ ರೋಲ್ ಮಾಡಿದ್ದು, ಆದ್ರೆ ಅದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಗುರು ಪ್ರಸಾದ್ ಮಾತಾನಾಡಿ, ಮನೆ ಕಟ್ಟುವುದು ಸುಲಭ. ಮಠದ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡೋದು ಕಷ್ಟ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಮಠ ಸಿನಿಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿದ್ವಿ. ಅವ್ರು ಗ್ರೀನ್ ಸಿಗ್ನಲ್ ಕೊಟ್ಟರು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಜೀವನ್ ಗೌಡ ಛಾಯಾಗ್ರಹಣ, ರಾಜ್ಯಪ್ರಶಸ್ತಿ ವಿಜೇತ ಸಿ.ರವಿಚಂದ್ರನ್ ಸಂಕಲನ, ವಿ ಮನೋಹರ್ ಸಂಗೀತ ನಿರ್ದೇಶನ, ಯೋಗರಾಜ್ ಭಟ್ಟ್, ವಿ‌ ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಶುಗರ್‌ ಗೆ ಸಿಕ್ತು ಒಳ್ಳೇ ಬೆಲೆ! ಹಿಂದಿ ರೀಮೇಕ್ ರೈಟ್ಸ್ ಮಾರಾಟ; ಟೀಮ್ ಖುಷಿ

ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಶುಗರ್‌ ಲೆಸ್ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ನ್ನು ಹೆಸರಾಂತ ಸಂಸ್ಥೆಯೊಂದು ಖರೀದಿಸಿದೆ.
ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್ (ಲಂಡನ್ ಹಾಗೂ ಮುಂಬೈ)ನ ಶಿವ ಆರ್ಯನ್ ಅವರು ಶುಗರ್ಲೆಸ್ ಚಿತ್ರದ ನಿರೂಪಣೆ ಇಷ್ಟ ಪಟ್ಟು ಉತ್ತಮ ಬೆಲೆಗೆ ಖರೀದಿಸಿದ್ದಾರೆ.

ಶಿವ ಆರ್ಯನ್ ಕೂಡ ಒಬ್ಬ ಪ್ರತಿಭಾವಂತ ಕಲಾವಿದ, ನಿರ್ಮಾಪಕ ಹಾಗೂ ಉದ್ಯಮಿಯಾಗಿದ್ದು ಶುಗರ್ ಲೆಸ್ ಸಿನಿಮಾದ ಮೇಕಿಂಗ್ ಅವರಿಗೆ ಇಷ್ಟವಾಗಿದೆ. ಬರುವ ಜುಲೈ ತಿಂಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಸಹ ಶಶಿಧರ್ ಕೆ.ಎಂ. ಅವರೇ ಮಾಡಿದ್ದು, ಅವರ ಜೊತೆ ಸಹಾಯಕ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾಥ್ ನೀಡಿದ್ದಾರೆ. ಅಲ್ಲದೆ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರಘು ಸಿಂಗಂ ಹಾಗೂ ದಿವ್ಯ ಶಶಿಧರ್ ಕಾರ್ಯನಿರ್ವಹಿಸಿದ್ದಾರೆ.

ದಿಶಾ ಎಂಟರ್‌ಟೈನ್‌ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಶುಗರ್‌ಲೆಸ್ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್ ಕೆಲಸ ಮಾಡಿದ್ದು, ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಗುರು ಕಶ್ಯಪ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.


ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ
ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದ್ದು. ಈ ಚಿತ್ರಕ್ಕೆ
ನಲವತೈದು ದಿನಗಳ ಕಾಲ ಚಿತ್ರೀಕರಣ
ನಡೆಸಲಾಗಿದೆ. ಸಕ್ಕರೆ ಖಾಯಿಲೆ ಹಿನನೆಲೆಯಲ್ಲಿ ನಡೆಯುವ ತುಂಬಾ ಹ್ಯೂಮರಸ್ ಆದ ನಿರೂಪಣೆ ಇರುವಂಥ ಚಿತ್ರ ಇದಾಗಿದ್ದು, ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿರುತ್ತದೆ.
ನಾನು ಸ್ಕಿಪ್ಟ್ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಡಿದ್ದೆನೋ, ಅದೇ ರೀತಿಯಲ್ಲಿ ನಾಯಕನಟ ಪೃಥ್ವಿ ಅಂಬರ್ ನಟಿಸಿದ್ದಾರೆ ಎಂದು ಶಶಿಧರ ಹೇಳಿದ್ದಾರೆ.

Categories
ಸಿನಿ ಸುದ್ದಿ

ಪ್ರಮೋದ್ ನಟನೆಯ ಬಾಂಡ್ ರವಿ ಶೂಟಿಂಗ್ ಕಂಪ್ಲೀಟ್…

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯೆಸ್ಟ್ ಹೀರೋಗಳಲ್ಲಿ ಒಬ್ಬರಾಗಿರುವ ಮಂಡ್ಯ ಹೈದ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಬಾಂಡ್ ರವಿ ಸಿನಿಮಾದ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ ಮಂಗಳೂರು ಭಾಗದಲ್ಲಿ ಸುಮಾರು 50 ದಿನಗಳ‌ ಕಾಲ ಶೂಟಿಂಗ್ ಮುಗಿಸಿರುವ ಬಾಂಡ್ ರವಿ ಬಳಗ ಕುಂಬಳಕಾಯಿ ಹೊಡೆದಿದೆ.

ಕಳೆದ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಎಸ್ ಪಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾವಾಗಿದ್ದು, ಈ ಹಿಂದೆ ಮಾದ ಮಾನಸಿ ಸಿನಿಮಾ ನಿರ್ಮಾಣ ಮಾಡಿದ್ದ ನರಸಿಂಹಮೂರ್ತಿ ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ.

ಕಾಜಲ್ ಕುಂದರ್ ಪ್ರಮೋದ್ ಗೆ ಜೋಡಿಯಾಗಿ ನಟಿಸ್ತಿದ್ದು , ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್& ದೇವ್ ಎನ್ ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಪ್ರಜ್ವಲ್ ಜೊತೆ ಶೈನ್ ಶೆಟ್ಟಿ ಮಾಫಿಯಾ!

ಬಿಗ್ ಬಾಸ್ ಹುಡುಗ ಶೈನ್ ಶೆಟ್ಟಿ ಹೊಸ ಸಿನಿಮಾ ಒಪ್ಪಿದ್ದಾರೆ. ಅದು ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ. ಹೌದು ಈ ಚಿತ್ರದಲ್ಲಿ ಶೈನ್ ಶೆಟ್ಟಿ ನಟಿಸುತ್ತಿದ್ದಾರೆ. ಬಿ.ಕುಮಾರ್ ನಿರ್ಮಾಣದ ಲೋಹಿತ್ ನಿರ್ದೇಶಿಸುತ್ತಿರುವ “ಮಾಫಿಯಾ” ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಪಾತ್ರ ಕುರಿತಂತೆ ಶೈನ್ ಶೆಟ್ಟಿ ಹೇಳೋದಿಷ್ಟು.

ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ನಲ್ಲಿ ನಾನು ನಿರೂಪಕನಾಗಿದ್ದೆ. ಪ್ರಜ್ವಲ್ ಆ ಕಾರ್ಯಕ್ರಮದ ಜಡ್ಜ್ ಆಗಿದ್ದರು. ಆ ಕಾರ್ಯಕ್ರಮದಿಂದ ನಾವಿಬ್ಬರು ಆತ್ಮೀಯ ಮಿತ್ರರು. ಅಣ್ಣ-ತಮ್ಮನ ಅನುಬಂಧ ನಮ್ಮದು. “ಮಾಫಿಯಾ” ಚಿತ್ರದಲ್ಲೂ ನಾನು ಪ್ರಜ್ವಲ್ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರ ಚೆನ್ನಾಗಿದೆ ಎನ್ನುತ್ತಾರೆ ಶೈನ್ ಶೆಟ್ಟಿ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಅನೀಶ್ ತರುಣ್ ಕುಮಾರ್ ಛಾಯಾಗ್ರಹಣ, ರವಿಚಂದ್ರ ಸಿ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿನೋದ್, ಸತೀಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಶೈನ್ ಶೆಟ್ಟಿ, ವಾಸುಕಿ ವೈಭವ್, ಸಿದ್ಲಿಂಗು ಶ್ರೀಧರ್, ಪ್ರಕಾಶ್ ಬೆಳವಾಡಿ, ಒರಟ ಪ್ರಶಾಂತ್, ರವಿಭಟ್ ಮುಂತಾದವರು “ಮಾಫಿಯಾ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್‌ ಜೊತೆ ಪೃಥ್ವಿ ರಾಜ್ ಸಿನಿಮಾ: ಈ ಮೂಲಕ ವಿಜಯ್ ಕಿರಗಂದೂರು ಮಾಲಿವುಡ್‌ಗೆ ಗ್ರ್ಯಾಂಡ್‌ ಎಂಟ್ರಿ…

ಚಲನಚಿತ್ರ ನಿರ್ಮಾಣದಲ್ಲಿ ಯಶಸ್ಸಿನ ಓಟ ನಡೆಸುತ್ತಿರುವ ಹೊಂಬಾಳೆ ಫಿಲಂಸ್‌ ತನ್ನ ಚೊಚ್ಚಲ ಮಲಯಾಳಂ ಚಲನಚಿತ್ರವನ್ನು ಘೋಷಿಸಿದ್ದು, ಮಲಯಾಳಂನ ‘ಸೂಪರ್ ಸ್ಟಾರ್’ ಪೃಥ್ವಿರಾಜ್ ಸುಕುಮಾರನ್ ಅವರು ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಲಿರುವ “ಟೈಸನ್” ಆಕ್ಷನ್-ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಲಿದ್ದಾರೆ ಮತ್ತು ಮುರಳಿ ಗೋಪಿ ಚಿತ್ರಕಥೆ ಮಾಡಿದ್ದಾರೆ. ಭಾರತದ ಪ್ರಸ್ತುತತೆಯ ತಕ್ಕಂತೆ ನಿರ್ಮಿಸಲಾಗುತ್ತಿರುವ ಈ ಚಲನಚಿತ್ರವು ಪೃಥ್ವಿರಾಜ್ ಮತ್ತು ಮುರಳಿ ಗೋಪಿ ಸಹಯೋಗದಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ.

ಎಂಪುರಾನ್ ನಂತರ, ದಾಖಲೆ ಮುರಿಯುವ ಮಲಯಾಳಂ ಬ್ಲಾಕ್‌ಬಸ್ಟರ್ ಲೂಸಿಫರ್‌ನ ಮುಂದುವರಿದ ಭಾಗವಾಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಲೂಸಿಫರ್ ಕೂಡ ಮೆಗಾ ಹಿಟ್ ಆಗಿತ್ತು. ಟೈಸನ್‌ ಕೇರಳದ ಅತಿದೊಡ್ದ ಚಲನಚಿತ್ರಗಳಲ್ಲೊಂದಾಗಿ ಹೊರ ಹೊಮ್ಮಲಿದೆ. 2023ರ ಕೊನೆಯಲ್ಲಿ ತೆರೆಕಾಣಲಿದ್ದು 2024ರಲ್ಲಿ ಹಿಂದಿ ಹಾಗೂ ದಕ್ಷಿಣ ಭಾರತದ 4 ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಬಿಡುಗಡೆಯಾಗಲಿದೆ.

ಈ ಪ್ರಾಜೆಕ್ಟ್‌ ಮೂಲಕ ಹೊಂಬಾಳೆ ಫಿಲಂಸ್‌ ಮಾಲಿವುಡ್ ಚಿತ್ರೋದ್ಯಮಕ್ಕೆ ಅಧಿಕೃತವಾಗಿ ಇದೇ ಮೊದಲ ಬಾರಿಗೆ ಕಾಲಿಟ್ಟಂತಾಗಿದೆ. ಸಂಗೀತಕ್ಕೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್‌, ಟೈಸನ್‌ನಲ್ಲಿಯೂ ಇದನ್ನು ಮುಂದುವರೆಸುವ ಭರವಸೆಯನ್ನು ನೀಡಿದೆ. ಇಬ್ಬರು ಶ್ರೇಷ್ಟರ ಪರಿಪೂರ್ಣ ಸಮ್ಮಿಲನದಲ್ಲಿ ಈ ಚಲನಚಿತ್ರ ಮೂಡಿಬರಲಿದೆ. ಸಾಮಾಜಿಕ ಸಂದೇಶದ ಜತೆ ಶ್ರೇಷ್ಠ ಕಂಟೆಂಟ್‌ಗೆ ಹೆಸರುವಾಸಿಯಾಗಿರುವ ಉದ್ಯಮವನ್ನು ಜಾಗತಿಕ ಮಾಧ್ಯಮ್ಕಕೆ ಕೊಂಡೊಯ್ಯಲು ಸೂಕ್ತ ಸಮಯವಾಗಿದೆ.

ಮಾರ್ಕೆಟಿಂಗ್‌, ಕಲಾವಿದರು ಹಾಗೂ ಅತ್ಯುತ್ತಮ ತಂತ್ರಜ್ಞರ ಆಯ್ಕೆಯಲ್ಲಿ ಹೊಂಬಾಳೆ ಫಿಲಂಸ್‌ ತನ್ನ ದೃಢ ನಿರ್ಧಾರ ಹಾಗೂ ಅನನ್ಯತೆಯನ್ನು ಸಾಭೀತುಪಡಿಸಿದೆ. ಯಶ್‌ ಅಭಿನಯದ ಕೆಜಿಎಫ್‌-2 ಚಲನಚಿತ್ರದ ಮೂಲಕ ಸಂಚಲನವನ್ನು ಮೂಡಿಸುವ ಜತೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನ ಛಾಪು ಮೂಡಿಸಿದೆ. ಹಾಗೆಯೇ ಕನ್ನಡ ಚಲನಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆಗಳನ್ನು ಮತ್ತು ಕಲಾವಿದರನ್ನು ಇಂದು ಇಡಿ ಭಾರತೀಯ ಚಿತ್ರರಂಗವೇ ಹಾಡಿ ಹೊಗಳುತ್ತಿದೆ. ಕಾಲಿವಿಡ್‌, ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ನಿಂದ ಒಬ್ಬೊಬ್ಬ ದೊಡ್ಡ ನಟರ ಸಮ್ಮಿಳನವು ಅತ್ಯದ್ಭುತ ಹೊಂದಾಣಿಕೆಯಂತೆ ಭಾಸವಾಗಿದೆ. ಆಧುನಿಕ ಯುಗದಲ್ಲಿ ಬ್ಲಾಕ್‌ ಬಸ್ಟರ್‌ ನೀಡುವ ಕಲೆಯನ್ನು ಹೊಂಬಾಳೆ ಫಿಲಂಸ್‌ ಕರಗತ ಮಾಡಿಕೊಂಡಿದೆ. ಕೆಜಿಎಫ್‌-2 ವಿಶ್ವಾದ್ಯಂತ ಭರ್ಜರಿ ಯಶಸ್ಸು ಕಂಡ ಬಳಿಕ ಹೊಂಬಾಳೆ ಫಿಲಂಸ್‌ ತನ್ನ ಸಿನಿ ಪಯಣಕ್ಕೆ ಇನ್ನಷ್ಟು ವೇಗ ನೀಡಿದೆ. ಕೆಜಿಎಫ್‌ ಬಿಡುಗಡೆಯಾದ ತಿಂಗಳ ಅವಧಿಯಲ್ಲಿ 6 ಮೆಗಾ ಚಲನಚಿತ್ರಗಳನ್ನು ಘೋಷಿಸಿದ್ದಾರೆ. ಈ ಸಂಖ್ಯೆಗಳೇ ಹೊಂಬಾಳೆ ಫಿಲಂಸ್‌ನ ಅತ್ಯುತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಒಂದುಕಡೆ ಸಲಾರ್ ಸಿದ್ಧವಾಗುತ್ತಿದೆ ಮತ್ತು ರಾಕಿಂಗ್ ಸ್ಟಾರ್ ಯಶ್, ಸುಧಾ ಕೊಂಗೂರ, ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಹೊಂಬಾಳೆ ಜತೆ ಕಾರ್ಯನಿರ್ವಹಿಸುತ್ತಿದ್ದು, ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಾದ್ಯಂತ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಒಂದರ ಹಿಂದೊಂದು ಅತ್ಯುತ್ತಮ ಚಲನಚಿತ್ರಗಳು ಬರುತ್ತಿದ್ದು ಹೊಸದೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳು ದಟ್ಟವಾಗಿವೆ.

ಮೂಲಗಳ ಪ್ರಕಾರ, ಟೈಸನ್‌ ಹೈಬಜೆಟ್‌ ಹಾಗೂ ದೊಡ್ಡ ಪ್ರಮಾಣದ ಚಲನಚಿತ್ರವಾಗಿರಲಿದೆ. ಟಾಪ್‌ ನಟರು ಹಾಗೂ ಅತ್ಯುತ್ಕೃಷ್ಟ ತಂತ್ರಜ್ಞರ ತಂಡವನ್ನೊಳಗೊಂಡಿರಲಿದ್ದು ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ. ತೂಕದ ಕಂಟೆಂಟ್‌ಗೆ ಬಂಡವಾಳ ಹೂಡುವ ಮೂಲಕ ಹೊಂಬಾಳೆ ಫಿಲಂಸ್‌, ಸಂಕಷ್ಟದಲ್ಲಿರುವ ಭಾರತೀಯ ಚಲನಚಿತ್ರೋದ್ಯಮಲ್ಲೆ ಬೂಸ್ಟ್‌ ನೀಡುವ ನಿರೀಕ್ಷೆಯಿದೆ.

Categories
ಸಿನಿ ಸುದ್ದಿ

ಯೂ ಆರ್‌ ಮೈ ಹೀರೋ ಅಂದ್ರು ಫ್ಯಾಷನ್ ಬೆಡಗಿ ಸಂಹಿತಾ ವಿನ್ಯಾ : ಫ್ಯಾಷನ್‌ ಶೋ ಮೂಲಕ ಗುರುತಿಸಿಕೊಂಡ ಹುಡುಗಿಯ ಹೊಸ ಜರ್ನಿ

ಮಾಡೆಲಿಂಗ್‌ಗೂ ಸಿನಿಮಾ ಕ್ಷೇತ್ರಕ್ಕೂ ಅದೆನೋ ಬಿಡಿಸದ ನಂಟಿದೆ. ಅಲ್ಲಿಯವರು ಇಲ್ಲಿ, ಇಲ್ಲಿಯವರು ಅಲ್ಲಿ ಆಗಾಗ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುತ್ತಾರೆ. ಇದೀಗ ಮಾಡೆಲಿಂಗ್‌ನಿಂದ ಆರಂಭವಾದ ಸಂಹಿತಾ ವಿನ್ಯಾ ಅವರ ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಹಾಗಂತ ಮಾಡೆಲಿಂಗ್‌ ಅವರ ಕೈ ಬಿಟ್ಟಿಲ್ಲ. ಅವಕಾಶ ಎಲ್ಲೆಲ್ಲಿ ಸಿಗುತ್ತದೆಯೋ ಅಲ್ಲಿ ಪ್ರತಿಭೆಯ ಅನಾವರಣ ಮಾಡುತ್ತಿದ್ದಾರವರು. ಇದೀಗ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮೇಲೆಯೇ ಹೋಗಿದ್ದಾರೆ. ಅಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೇನು ಆ ಸಿನಿಮಾ ಇದೇ 17ಕ್ಕೆ ಬಿಡುಗಡೆ ಆಗಲಿದೆ.


ಅಂದಹಾಗೆ, ಆ ಸಿನಿಮಾ ಹೆಸರು “ಯೂ ಆರ್‌ ಮೈ ಹೀರೋ”. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗೆ ಡಬ್‌ ಆಗಿ ತೆರೆಗೆ ಬರಲಿದೆ. ಮೊದಲಿಗೆ ಇದೇ 17ಕ್ಕೆ ತೆಲುಗು ಅವತರಣಿಕೆ ತೆರೆಗೆ ಬರಲಿದೆ.
ಈ ಬಗ್ಗೆ ಹೇಳಿಕೊಳ್ಳುವ ಸಂಹಿತಾ ವಿನ್ಯಾ, “ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ತುಂಬ ಡಿಫರಂಟ್.‌ ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ” ಎಂಬುದು ಅವರ ಮಾತು.


ಅದೇ ರೀತಿ “ಯೂ ಆರ್‌ ಮೈ ಹೀರೋ” ಸಿನಿಮಾ ಬಗ್ಗೆಯೂ ಹೇಳಿಕೊಳ್ಳುವ ಅವರು, “ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ ಎನ್ನುತ್ತಾರೆ.
ಈಗಾಗಲೇ ಹೇಳಿದಂತೆ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿರುವ ಸಂಹಿತಾ ವಿನ್ಯಾ, ಮೆಟ್‌ ಗಾಲಾದಲ್ಲಿಯೂ ಹೆಜ್ಜೆ ಹಾಕಿ ಬಂದಿದ್ದಾರೆ. ಅದರ ಜತೆಗೆ 60ಕ್ಕೂ ಅಧಿಕ ಫ್ಯಾಷನ್‌ ಶೋಗಳಲ್ಲಿ ಸಂಹಿತಾ ಶೋ ಸ್ಟಾಪರ್‌ ಆಗಿ ಭಾಗವಹಿಸಿದ್ದೇನೆ. ಆ ಎಲ್ಲ ಶೋಗಳಿಗೆ ಫಾರೆವರ್‌ ನವೀನ್‌ ಕುಮಾರ್‌ ಫ್ಯಾಷನ್‌ ಡಿಸೈನರ್‌ ಆಗಿದ್ದರು. ಈ ಸಿನಿಮಾಕ್ಕೂ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರೆ.


ತೆಲುಗಿನ ಈ “ಯೂ ಆರ್‌ ಮೈ ಹೀರೋ” ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಸೇರಿ ಹಲವರು ನಟಿಸಿದ್ದಾರೆ. ಶೇರ್‌ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಸಂಗೀತ, ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಿನ್ನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣ್‌ ಕಾವೇಟಿ ಛಾಯಾಗ್ರಹಣ, ಡಿ ವೆಂಕಟ್‌ ಪ್ರಭು ಅವರ ಸಂಕಲನ, ಸಾಯಿರಾಜ್‌ ನೃತ್ಯ ನಿರ್ದೇಶನವಿದೆ.


ಇನ್ನು ಕನ್ನಡದಲ್ಲಿ “ಯಾಕೋ ಬೇಜಾರು” ಮತ್ತು “ದಿ ಕೇಸ್‌ ಅಫ್‌ ಹಂಸ” ಸಿನಿಮಾದ ಕೆಲಸಗಳನ್ನು ಮುಗಿಸಿರುವ ವಿನ್ಯಾ, ತಮಿಳಿನ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಅದರ ಅರ್ಧ ಶೂಟಿಂಗ್‌ ಸಹ ಈಗಾಗಲೇ ಮುಗಿದಿದೆ. ಯೂ ಆರ್‌ ಮೈ ಹೀರೋ ಚಿತ್ರದ ನಿರ್ದೇಶಕ ಶೇರ್‌ ಅವರ ಬಾಳಿವುಡ್‌ ಪ್ರಾಜೆಕ್ಟ್‌ನಲ್ಲಿಯೂ ಸಂಹಿತಾ ನಟಿಸಲಿದ್ದಾರೆ. ಈ ಸಿನಿಮಾ ಹೊರತುಪಡಿಸಿದರೆ, ಕನ್ನಡದಲ್ಲಿ ಹಾಲುತುಪ್ಪ, ಅಮೃತಗಳಿಗೆ, ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು, ವಿಷ್ಣು ಸರ್ಕಲ್‌, ಸೂತ್ರಧಾರಿ ಚಿತ್ರಗಳು ತೆರೆಕಂಡಿವೆ.

Categories
ಸಿನಿ ಸುದ್ದಿ

ಹೊಸಬರು ದಿಲ್ ಖುಷ್! ಬ್ರಾಹ್ಮಿ ಮುಹೂರ್ತಕ್ಕೆ ಹೊಸ ಚಿತ್ರ ಶುರು…

ಸೂರ್ಯೋದಯಕ್ಕೂ ಪೂರ್ವದಲ್ಲಿ ಬರುವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ. ಆ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳು ಉತ್ತಮ ಫಲ ಕೊಡುತ್ತದೆ ಎಂಬ ನಂಬಿಕೆಯಿದೆ.‌

ಇದೇ ನಂಬಿಕೆಯೊಂದಿಗೆ ” ದಿಲ್ ಖುಷ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಶ್ರೀ ವರಸಿದ್ದಿ ವಿನಾಯಕ‌ ವೆಂಕಟೇಶ್ವರ ಮಂದಿರದಲ್ಲಿ ನಡೆದಿದೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ‌ಪ್ರವೀಣ್ ಹಾಗೂ ಪ್ರಭಾ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಮೋದ್ ಜಯ ನಿರ್ದೇಶಿಸುತ್ತಿದ್ದಾರೆ.

ನಾನು ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದೀನಿ. “ಬಜಾರ್” ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದೇನೆ‌. “ದಿಲ್ ಖುಷ್” ನನ್ನ ಪ್ರಥಮ ನಿರ್ದೇಶನದ ಚಿತ್ರ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನನ್ನ ಜೀವನದ ಕೆಲವು ಅನುಭವಗಳೊಂದಿಗೆ, ನಾನು‌ ಕಂಡ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ತೊಂಭತ್ತರಷ್ಟು ಭಾಗ ಮನೋರಂಜನೆ ಇದ್ದರೆ, ಹತ್ತು ಭಾಗದಷ್ಟು ಭಾವನಾತ್ಮಕ ಸನ್ನಿವೇಶಗಳಿರುತ್ತದೆ. ಈ ತಿಂಗಳ ಹದಿನೈದರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಶನಿವಾರ ಸಂತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕನ ಕಣ್ಣಂಚಿನಲ್ಲಿ ನೀರು ಬರುವುದು ಖಂಡಿತಾ ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ.

ನಾಟಕ, ಧಾರಾವಾಹಿ, ಕಿರುಚಿತ್ರ ಹಾಗೂ ಹಿರಿತೆರೆಯ ಕೆಲವು ಚಿತ್ರಗಳಲ್ಲಿ‌ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಸದಾ ಲವಲವಿಕೆಯಿಂದಿರುವ ಹುಡುಗನ ಪಾತ್ರ ನನ್ನದು ಎಂದರು ನಾಯಕ ರಂಜಿತ್.

ಧಾರಾವಾಹಿಯಲ್ಲಿ ‌ನಟಿಸಿದ್ದ ನನಗೆ ಇದು ಮೊದಲ ಚಿತ್ರ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೊ, ಅದೇ ರೀತಿಯಿರುವ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ಹೇಳಿದ ಕಥೆ ಕೇಳೀ ಖುಷಿಯಾಯಿತು‌ ಎನ್ನುತ್ತಾರೆ ನಾಯಕಿ ಸ್ಪಂದನ ಸೋಮಣ್ಣ.

ನಿರ್ದೇಶಕರು ಹೇಳಿದರು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಅಂತ. ರೊಮ್ಯಾಂಟಿಕ್ ಗೆ ನಾಯಕ, ನಾಯಕಿ ಇದ್ದಾರೆ. ಕಾಮಿಡಿ ಮಾಡಲು ನಾನು, ರಂಗಾಯಣ ರಘು ಹಾಗೂ ರಘು ರಮಣಕೊಪ್ಪ ಇದ್ದೇವೆ ಎಂದರು ನಟ ಧರ್ಮಣ್ಣ.

“ಯಜಮಾನ”, ” ಅವನ್ನೇ ಶ್ರೀಮನ್ನಾರಾಯಣ” ಚಿತ್ರಗಳಲ್ಲಿ ನನ್ನ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು . ಈ ಚಿತ್ರದಲ್ಲೂ ಒಳ್ಳೆಯ ಪಾತ್ರವಿದೆ ಎಂದರು ನಟ ಸೂರ್ಯಪ್ರವೀಣ್.

ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟ ರಘು ರಮಣಕೊಪ್ಪ.

ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ, ಛಾಯಾಗ್ರಾಹಕ ನಿವಾಸ್ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದರು.

Categories
ಸಿನಿ ಸುದ್ದಿ

ಹೊಸಬರು ದಿಲ್ ಖುಷ್! ಬ್ರಾಹ್ಮಿ ಮುಹೂರ್ತಕ್ಕೆ ಚಿತ್ರ ಶುರು…

ಸೂರ್ಯೋದಯಕ್ಕೂ ಪೂರ್ವದಲ್ಲಿ ಬರುವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ. ಆ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳು ಉತ್ತಮ ಫಲ ಕೊಡುತ್ತದೆ ಎಂಬ ನಂಬಿಕೆಯಿದೆ.‌

ಇದೇ ನಂಬಿಕೆಯೊಂದಿಗೆ ” ದಿಲ್ ಖುಷ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಶ್ರೀ ವರಸಿದ್ದಿ ವಿನಾಯಕ‌ ವೆಂಕಟೇಶ್ವರ ಮಂದಿರದಲ್ಲಿ ನಡೆದಿದೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ‌ಪ್ರವೀಣ್ ಹಾಗೂ ಪ್ರಭಾ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಭು ಜಯ ನಿರ್ದೇಶಿಸುತ್ತಿದ್ದಾರೆ.

ನಾನು ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದೀನಿ. “ಬಜಾರ್” ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದೇನೆ‌. “ದಿಲ್ ಖುಷ್” ನನ್ನ ಪ್ರಥಮ ನಿರ್ದೇಶನದ ಚಿತ್ರ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನನ್ನ ಜೀವನದ ಕೆಲವು ಅನುಭವಗಳೊಂದಿಗೆ, ನಾನು‌ ಕಂಡ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ತೊಂಭತ್ತರಷ್ಟು ಭಾಗ ಮನೋರಂಜನೆ ಇದ್ದರೆ, ಹತ್ತು ಭಾಗದಷ್ಟು ಭಾವನಾತ್ಮಕ ಸನ್ನಿವೇಶಗಳಿರುತ್ತದೆ. ಈ ತಿಂಗಳ ಹದಿನೈದರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಶನಿವಾರ ಸಂತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕನ ಕಣ್ಣಂಚಿನಲ್ಲಿ ನೀರು ಬರುವುದು ಖಂಡಿತಾ ಎನ್ನುತ್ತಾರೆ ನಿರ್ದೇಶಕ ಪ್ರಭು ಜಯ.

ನಾಟಕ, ಧಾರಾವಾಹಿ, ಕಿರುಚಿತ್ರ ಹಾಗೂ ಹಿರಿತೆರೆಯ ಕೆಲವು ಚಿತ್ರಗಳಲ್ಲಿ‌ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಸದಾ ಲವಲವಿಕೆಯಿಂದಿರುವ ಹುಡುಗನ ಪಾತ್ರ ನನ್ನದು ಎಂದರು ನಾಯಕ ರಂಜಿತ್.

ಧಾರಾವಾಹಿಯಲ್ಲಿ ‌ನಟಿಸಿದ್ದ ನನಗೆ ಇದು ಮೊದಲ ಚಿತ್ರ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೊ, ಅದೇ ರೀತಿಯಿರುವ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ಹೇಳಿದ ಕಥೆ ಕೇಳೀ ಖುಷಿಯಾಯಿತು‌ ಎನ್ನುತ್ತಾರೆ ನಾಯಕಿ ಸ್ಪಂದನ ಸೋಮಣ್ಣ.

ನಿರ್ದೇಶಕರು ಹೇಳಿದರು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಅಂತ. ರೊಮ್ಯಾಂಟಿಕ್ ಗೆ ನಾಯಕ, ನಾಯಕಿ ಇದ್ದಾರೆ. ಕಾಮಿಡಿ ಮಾಡಲು ನಾನು, ರಂಗಾಯಣ ರಘು ಹಾಗೂ ರಘು ರಮಣಕೊಪ್ಪ ಇದ್ದೇವೆ ಎಂದರು ನಟ ಧರ್ಮಣ್ಣ.

“ಯಜಮಾನ”, ” ಅವನ್ನೇ ಶ್ರೀಮನ್ನಾರಾಯಣ” ಚಿತ್ರಗಳಲ್ಲಿ ನನ್ನ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು . ಈ ಚಿತ್ರದಲ್ಲೂ ಒಳ್ಳೆಯ ಪಾತ್ರವಿದೆ ಎಂದರು ನಟ ಸೂರ್ಯಪ್ರವೀಣ್.

ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟ ರಘು ರಮಣಕೊಪ್ಪ.

ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ, ಛಾಯಾಗ್ರಾಹಕ ನಿವಾಸ್ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದರು.

Categories
ಸಿನಿ ಸುದ್ದಿ

ವೀರಲೋಕ ಪ್ರಕಾಶನದ ಹತ್ತು ಪುಸ್ತಕಗಳ ಲೋಕಾರ್ಪಣೆ; ವೀರಕಪುತ್ರ ಶ್ರೀನಿವಾಸ್ ಸಾಹಸಕ್ಕೆ ಸುದೀಪ್, ರಮೇಶ್ ಅರವಿಂದ್ ಮೆಚ್ಚುಗೆ…

ಪುಸ್ತಕ ಕ್ಷೇತ್ರದಲ್ಲೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ವೀರಕಪುತ್ರ ಶ್ರೀನಿವಾಸ್ ಮುನ್ನುಡಿ ಬರೆದಿದ್ದಾರೆ. ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯುವಂತಹ ಅವಕಾಶವನ್ನು ಶ್ರೀನಿವಾಸ್ ಕಲ್ಪಿಸಿದ್ದಾರೆ. ವೀರಕಪುತ್ರ ಶ್ರೀನಿವಾಸ್ ವೀರಲೋಕ ಪ್ರಕಾಶನ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆ ವೃದ್ಧಿಸಲು ಸಜ್ಜಾದ್ದಾರೆ.

ವೀರಲೋಕ ಪ್ರಕಾಶನ ಹೊರತಂದಿರುವ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಪುಸ್ತಕಗಳು ಜ್ಞಾನದ ಕೀಲಿಕೈ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕಗಳ ರಾಯಭಾರಿಯಾಗಿರುವ ನಟ ರಮೇಶ್ ಅವರಿಂದ್ ಕಾರ್ಯಕ್ರಮ ಉದ್ಘಾಟಿಸಿದರು. ನಟ ಕಿಚ್ಚ ಸುದೀಪ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ರಮೇಶ್ ಅರವಿಂದ್, ಫೌಡ್ರಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಪಾತ್ರಕ್ಕಾಗಿ ತಲೆ ಕೂದಲು ತೆಗೆದಿದ್ದೆ. ಹೀಗಾಗಿ ಶಾಲೆಗೆ ಹೋಗುವ ಬದಲು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಲು ಶುರುಮಾಡಿದೆ. ನಂತರ ಅದು ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ ಪರಿಣಾಮ ನಾನು ಈಗ ಪುಸ್ತಕ ಬರೆಯಲು ಶುರು ಮಾಡಿದ್ದೇನೆ ಎಂದರು.

ಸುದೀಪ್ ಮಾತಾನಾಡಿ, ನಾನು ಜಾಸ್ತಿ ಓದದೆ ಇರುವುದು ತುಂಬಾ ಒಳ್ಳೆಯದಾಗಿದೆ. ಏಕಂದ್ರೆ ಇದರಿಂದ ಹೆಚ್ಚು ಪುಸ್ತಕ ಓದಲು ಸಾಧ್ಯವಾಗದೇ ಇದೀಗ ಹಲವು ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡಿ ಜೀವನದಲ್ಲಿ ಒಳ್ಳೆ ಕೆಲಸ ಮಾಡಿದೆ. ಎಲ್ಲಾ ಬರಹ ಹತ್ತಿರವಿಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ವೀರ ಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ‘ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗುವಂತಾಗಲು ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್‌ಗಳನ್ನು ಬೆಂಗಳೂರಿನ ಮಾಲ್, ಅಂಗಡಿ ಮಳಿಗೆಗಳಲ್ಲಿ ಇರಿಸಲಾಗುವುದು. ಸ್ಥಳದಲ್ಲೇ ಖರೀದಿಗೆ ಅವಕಾಶ ಇದೆ’ ಎಂದರು. ‘ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ನಮ್ಮ ಬಳಿ 11 ಲಕ್ಷ ಓದುಗರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಪುಸ್ತಕ ಪರಿಚಯ, ಮಾರಾಟ ಮಾಡುತ್ತೇವೆ’ ಎಂದರು.

ಕೈಹಿಡಿದು ನೀ ನಡೆಸು ತಂದೆ(ವಿಶ್ವೇಶ್ವರ ಭಟ್), ಅವರು ಇವರು ದೇವರು(ಜೋಗಿ), ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್(ಗಣೇಶ್ ಕಾಸರಗೋಡು), ವಿಶ್ವ ಸುಂದರಿ(ಕುಂ. ವೀರಭದ್ರಪ್ಪ), ಸೋಲೆಂಬ ಗೆಲುವು(ದೀಪಾ ಹಿರೇಗುತ್ತಿ), ಮನಿ ಮನಿ ಎಕಾನಮಿ(ರಂಗಸ್ವಾಮಿ ಮೂಕನಹಳ್ಳಿ), ಆರ್ಟ್ ಆಫ್ ಸಕ್ಸಸ್( ರಮೇಶ್ ಅರವಿಂದ್), ನಿಮಗೆಷ್ಟು ಹಣ ಬೇಕು?(ಅನಂತ ಹುದೆಂಗಜೆ), ಒಳ್ಳೆಯ ಬದುಕಿನ ಸೂತ್ರಗಳು(ರವಿಕೃಷ್ಣಾ ರೆಡ್ಡಿ) ಕೃತಿಗಳು ಬಿಡುಗಡೆಯಾಗಿವೆ.

error: Content is protected !!