ಪ್ರಜ್ವಲ್ ಜೊತೆ ಶೈನ್ ಶೆಟ್ಟಿ ಮಾಫಿಯಾ!

ಬಿಗ್ ಬಾಸ್ ಹುಡುಗ ಶೈನ್ ಶೆಟ್ಟಿ ಹೊಸ ಸಿನಿಮಾ ಒಪ್ಪಿದ್ದಾರೆ. ಅದು ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ. ಹೌದು ಈ ಚಿತ್ರದಲ್ಲಿ ಶೈನ್ ಶೆಟ್ಟಿ ನಟಿಸುತ್ತಿದ್ದಾರೆ. ಬಿ.ಕುಮಾರ್ ನಿರ್ಮಾಣದ ಲೋಹಿತ್ ನಿರ್ದೇಶಿಸುತ್ತಿರುವ “ಮಾಫಿಯಾ” ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಪಾತ್ರ ಕುರಿತಂತೆ ಶೈನ್ ಶೆಟ್ಟಿ ಹೇಳೋದಿಷ್ಟು.

ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ನಲ್ಲಿ ನಾನು ನಿರೂಪಕನಾಗಿದ್ದೆ. ಪ್ರಜ್ವಲ್ ಆ ಕಾರ್ಯಕ್ರಮದ ಜಡ್ಜ್ ಆಗಿದ್ದರು. ಆ ಕಾರ್ಯಕ್ರಮದಿಂದ ನಾವಿಬ್ಬರು ಆತ್ಮೀಯ ಮಿತ್ರರು. ಅಣ್ಣ-ತಮ್ಮನ ಅನುಬಂಧ ನಮ್ಮದು. “ಮಾಫಿಯಾ” ಚಿತ್ರದಲ್ಲೂ ನಾನು ಪ್ರಜ್ವಲ್ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರ ಚೆನ್ನಾಗಿದೆ ಎನ್ನುತ್ತಾರೆ ಶೈನ್ ಶೆಟ್ಟಿ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಅನೀಶ್ ತರುಣ್ ಕುಮಾರ್ ಛಾಯಾಗ್ರಹಣ, ರವಿಚಂದ್ರ ಸಿ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿನೋದ್, ಸತೀಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಶೈನ್ ಶೆಟ್ಟಿ, ವಾಸುಕಿ ವೈಭವ್, ಸಿದ್ಲಿಂಗು ಶ್ರೀಧರ್, ಪ್ರಕಾಶ್ ಬೆಳವಾಡಿ, ಒರಟ ಪ್ರಶಾಂತ್, ರವಿಭಟ್ ಮುಂತಾದವರು “ಮಾಫಿಯಾ” ಚಿತ್ರದ ತಾರಾಬಳಗದಲ್ಲಿದ್ದಾರೆ.

Related Posts

error: Content is protected !!