Categories
ಸಿನಿ ಸುದ್ದಿ

ಗರಡಿ ಹಾಡು ಹಿಟ್ ಆಯ್ತು! ಹೊಡಿರೆಲೆ ಹಲಗಿ…

ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಮೊದಲ ಹಾಡು “ಹೊಡಿರೆಲೆ ಹಲಗಿ” ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು.

ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತ್ತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16ಲಕ್ಷ ಜನ ವೀಕ್ಷಿಸಿದ್ದಾರೆ.

ಪ್ರಶಂಸೆಯ ಮಳೆಯನ್ನೇ ಸುರಿಸುತ್ತಿದ್ದಾರೆ. ಮುಂದಿನ ಹಾಡು ಯಾವಾಗ ಬಿಡುಗಡೆಯಾಗುವುದೊ? ಎಂಬ ನಿರೀಕ್ಷೆಯಲ್ಲಿದ್ದಾರೆ. ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ “ಗರಡಿ” ತಂಡ ಸಂತಸ ವ್ಯಕ್ತಪಡಿಸಿದೆ.

ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸೂರ್ಯ, ಸೋನಾಲ್ ಮಾಂಟೆರೊ, ಬಿ.ಸಿ.ಪಾಟೀಲ್, ಸುಜಯ್, ರಾಘವೇಂದ್ರ, ಧರ್ಮಣ್ಣ ಮುಂತಾದವರು “ಗರಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ನಕುಲ್ ಗೌಡನ ‘ಬ್ಯಾಡ್’ ಬಾಯ್ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್

“ರೋಮಿಯೋ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿರುವ ಪಿ.ಸಿ ಶೇಖರ್ ನಿರ್ದೇಶನದಲ್ಲಿ ನಕುಲ್ ಗೌಡ(ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ “BAD”. ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರ ಕನ್ನಡದಲ್ಲಿ ವಿಭಿನ್ನ ಪ್ರಯತ್ನ ಎನ್ನಬಹುದು.

ಈ ಚಿತ್ರಕ್ಕೆ ” BAD” ಅಂತ ಹೆಸರಿಡಲು ಕಾರಣವಿದೆ. ಏಕೆಂದರೆ ಇದರಲ್ಲಿ ನಾಯಕ ಹಾಗೂ ನಾಯಕಿ ಅಂತ ಇಲ್ಲ. ಎಲ್ಲಾ ವಿಲನ್ ಪಾತ್ರಗಳೆ. ಅದರಲ್ಲಿ ಮುಖ್ಯ ವಿಲನ್ ಗಳಿರುತ್ತಾರಷ್ಟೆ. “ರೋಷಮಾನ್ ಎಫೆಕ್ಟ್” ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ‌. ಜಪಾನ್ ನಿರ್ದೇಶರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಒಂದೇ ಕಥೆಯನ್ನೇ ಬೇರೆಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ನನ್ನ ನಿರ್ದೇಶನದ ಹತ್ತನೇ ಚಿತ್ರ.

ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನನ್ನ ನಿರ್ದೇಶನದ ಹತ್ತು ಚಿತ್ರಗಳಲ್ಲಿ ಒಂಭತ್ತು ಚಿತ್ರಗಳಿಗೆ ಅರ್ಜುನ್ ಜನ್ಯ ಅವರೆ ಸಂಗೀತ ನೀಡಿದ್ದಾರೆ. ನಾನೇ ಕಥೆ, ಚಿತ್ರಕಥೆ ರಚಿಸಿದ್ದೇನೆ. ಸಂಕಲನವನ್ನು ಮಾಡುತ್ತಿದ್ದೇನೆ. ನನ್ನ ಹಿಂದಿನ “ರಾಗ ಹಾಗೂ “ದಿ ಟೆರರಿಸ್ಟ್” ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನವಿದೆ.
ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಬರುವ ಪಾತ್ರಗಳ ಅಭಿನಯ ನೋಡುಗರಿಗೆ ಸಹಜ ರೀತಿಯಲ್ಲಿ ಕಾಣಬೇಕು ಹಾಗೂ ಅವರ ಪಾತ್ರವನ್ನು ನೋಡಿದ ಕೂಡಲೆ, ಇವರದು ಇಂತಹುದೇ ಪಾತ್ರ ಎಂದು ಪ್ರೇಕ್ಷಕರು ಅಂದುಕೊಳ್ಳಬಾರದು. ಹಾಗಾಗಿ ಈ ಚಿತ್ರದಲ್ಲಿ ಹೆಚ್ಚು ಹೊಸ ಕಲಾವಿದರೆ ಅಭಿನಯಿಸುತ್ತಿದ್ದಾರೆ.


“ಪ್ರೀತಿಯ ರಾಯಭಾರಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಹಾಗೂ ಅನೇಕ ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ‌. ಶಕ್ತಿ ಶೇಖರ್ ಈ ಚಿತ್ರದ ಛಾಯಾಗ್ರಾಹಕರು ಎಂದು ನಿರ್ದೇಶಕ ಪಿ.ಸಿ.ಶೇಖರ್ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಕಿರಣ್ ರಾಜ್ ಹುಟ್ದಬ್ಬಕ್ಕೆ ರಾನಿ ಟೀಸರ್ ರಿಲೀಸ್

ಟೈಟಲ್ ಹಾಗೂ ಪೋಸ್ಟರ್ ನಿಂದ ಸಿನಿ ಪ್ರೇಕ್ಷರಲ್ಲಿ ಕುತೂಹಲ ಹುಟ್ಟಿಸಿದ “ರಾನಿ” ಸಿನಿಮಾದ ಟೀಸರ್ ನಾಯಕ ನಟ ಕಿರಣ್ ರಾಜ್ ಹುಟ್ಟುಹಬ್ಬದ ದಿನ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. “ರಾನಿ” ಚಿತ್ರದ​ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ “ರಾನಿ” ಚಿತ್ರದ ಟೈಟಲ್ ಅನಾವರಣಗೊಳಿಸಿದ್ದರು, ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡುಸಿತ್ತು. ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು.

ಈ ಬಾರಿ ಗಟ್ಟಿ ಕಥೆಯೊಂದಿಗೆ ಆಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ ಎನ್ನುವ ನಿರ್ದೇಶಕ ಗುರುತೇಜ್ ಶೆಟ್ಟಿ, ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳು ಚಿತ್ರದಲ್ಲಿದೆ ಎನ್ನುತ್ತಾರೆ.

ರವಿಶಂಕರ್ ಮೈಕೋ ನಾಗರಾಜ್ ,ಉಗ್ರಂ ರವಿ , ಉಗ್ರಂ ಮಂಜು, B ಸುರೇಶ , ಮಂಡ್ಯ ರಮೇಶ್ , ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಹೀಗೆ ಮುಂತಾದ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಈ ಚಿತ್ರದ ನಾಯಕಿಯರು. ಮೂವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ B.ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೆಶನ​​ವಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ.

ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ ,ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಇದೆ ವರ್ಷ ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು.

Categories
ಸಿನಿ ಸುದ್ದಿ

ಭವಾನಿ ಹಿಂದೆ ಆರ್ಯನ್! ಹೊಸ ಸಿನಿಮಾ ಅನೌನ್ಸ್ ಮಾಡಿದ ಬಿಗ್ ಬಾಸ್ ಹುಡುಗ: ಶೀರ್ಷಿಕೆ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಾಯಕ ಆರ್ಯನ್. ಇದೀಗ ಅವರು ದಿ ಭವಾನಿ ಫೈಲ್ಸ್ ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಜವಾಬ್ದಾರಿ ಹೊತ್ತುಕೊಂಡಿರುವ ಆರ್ಯನ್ ಚಿತ್ರಕ್ಕೆ ದೊಡ್ಮನೆ ಸೊಸೆ ಸಾಥ್ ಕೊಟ್ಟಿದ್ದಾರೆ. ದಿ ಭವಾನಿ ಫೈಲ್ಸ್ ಸಿನಿಮಾದ ಟೈಟಲ್ ಲಾಂಚ್ ಮಾಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ.

ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 14ನೇ ಶತಮಾನ ‘ದಿ ಭವಾನಿ ಫೈಲ್ಸ್’ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ.

ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ. ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾವನ್ನು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಸಾಥ್ ಕೊಡಲಿದೆ. ಕಲ್ಟ್ ಜಾನರ್ ಈ ಸಿನಿಮಾದ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ಬ್ಲಿಂಕ್ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪ್ಲೀಟ್; ರ್ಟಕಿ, ಅರೇಬಿಕ್ , ಪಾಕಿಸ್ತಾನದ ರಬಾಬ್ ಉಪಕರಣ ಬಳಕೆ

ಜನನಿ ಪಿಕ್ಚರ್ಸ್ ಅಡಿಯಲ್ಲಿ ರವಿಚಂದ್ರ ಎ.ಜೆ ನಿರ್ಮಾಣದಲ್ಲಿ ತಯಾರಾಗುತ್ತಿರುವ ಬ್ಲಿಂಕ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಆರ್ಕೆಸ್ಟ್ರಾ ಸೆಷನ್ ಭಾಗದ ರೀ-ರೆಕಾರ್ಡಿಂಗ್ ಕೊಚ್ಚಿ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ. ಟರ್ಕಿ, ಅರೇಬಿಕ್, ಪಾಕಿಸ್ತಾನದ ರಬಾಬ್ ಇನ್ಸ್ಟ್ರುಮೆಂಟ್ ಬಳಸಿ ರೀ-ರೆಕಾರ್ಡಿಂಗ್ ಮಾಡಿರೋದು ವಿಶೇಷ. ನೋಡುಗರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಬ್ಲಿಂಕ್ ಸಿನಿಮಾ ಬಳಗ ಕಂಸಾಳೆ, ಜನಪದ ಗೀತೆ ಕಂಪನ್ನು ಸಿನಿಮಾದಲ್ಲಿ ಅಳವಡಿಸಿದೆ. ಇದು ಪ್ರೇಕ್ಷಕರಿಗೆ ಹೊಸ ಫ್ಲೇವರ್ ಕೊಡಲಿದೆ ಅನ್ನೋದು ಚಿತ್ರತಂಡ ಮಾತು.

ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಬ್ಲಿಂಕ್. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ unexpected ಘಟನೆಗಳು ಹೇಗೆ ಆವನ ಸುತ್ತ- ಮುತ್ತಲಿನ ವಾತಾವರಣ ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. Sci-Fi ಶೈಲಿಯಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರಕ್ಕೆ ನಾಯಕ ನಟರಾಗಿ ದಿಯಾ ಹಾಗೂ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ನಟಿಸುತ್ತಿದ್ದು ಮುಖ್ಯಪಾತ್ರಗಳಲ್ಲಿ ವಜ್ರಧೀರ್ ಜೈನ್ , ಗೋಪಾಲಕೃಷ್ಣ ದೇಶಪಾಂಡೆ, ಸುರೇಶ್ ಅನಗಳ್ಳಿ ಕಾಣಿಸಿಕೊಂಡಿದ್ದಾರೆ.

ಅವಿನಾಶ್ ಶಾಸ್ತ್ರೀ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಬ್ಲಿಂಕ್ ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಶೀಘ್ರದಲ್ಲಿಯೇ ವಿಶೇಷ ಹಾಡು ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಮಾಲಾಶ್ರೀ ಮಾತೇ ಕೆಂಡ! ಕೆಂಡದ ಸೆರಗು ಸಿನಿಮಾಗೆ ಕನಸಿನ ರಾಣಿಯ ಕೆಂಡದಂತ ಮಾತು

ಕೆಂಡದ ಸೆರಗು ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ ಅವರು ತಾವೇ ಸ್ವತಃ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಮಾಲಾಶ್ರೀ ಅವರು ನಟಿಸಿರುವ ಸಿನಿಮಾಗಳಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ ತಮ್ಮ ಧ್ವನಿ ಕೊಡುತ್ತಾರೆ ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಕಿ‌ ಸೋಮ್ಲಿ ಅವರು.

ಈ ಹಿಂದೆ ಕೆಂಡದ ಸೆರಗು ಸಿನಿಮಾ ಬಗ್ಗೆ ಹೇಳಿದ್ದ ಮಾಲಾಶ್ರೀ ಅವರು, “ಕೆಂಡದ ಸೆರಗು” ದೇಸಿ ಕುಸ್ತಿ ಕಥೆಯ ಜೊತೆಗೆ ಹೃದಯ ಅಂಟುವ ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳು.
ತಂಡದ ಪ್ರತಿ ಒಬ್ಬರು ಸಹ ಸಿನಿಮಾವನ್ನು ಆರಾಧಿಸುವ ತಂತ್ರಜ್ಞಾನರ ತಂಡ, ನಾನು ತುಂಬ ಖುಷಿಯಿಂದ ಸೆಟ್ ನಲ್ಲಿ ಪ್ರೀತಿಯಿಂದ ಕೆಲಸ ಮಾಡಿದ್ದೇನೆ, ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ, ಈ ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ, ಈ ತಂಡದ ಜೊತೆಗೆ ನಾ ಸದ ಇರುತ್ತೇನೆ ಎಂದು ಹೇಳಿದ್ದಾರೆ.

ಚಿತ್ರಿಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ.
ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್, ಆರು ಹಾಡುಗಳಲ್ಲಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ಇನ್ನೂ ಉಳಿದ ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂದೂಲೋಕನಾಥ್ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ವಿಪಿನ್ ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಬ್ಳಿ ಯವರ ಸಂಗೀತ, ಶ್ರೀಕಾಂತ್ ರವರ ಸಂಕಲನ, ಶ್ರೀಮುತ್ತು ಟಾಕೀಸ್ ಅಡಿಯಲ್ಲಿ , ಕೊಟ್ರೇಶ್ ಗೌಡ ಅವರು ಬಂಡವಾಳ ಹೂಡಿದ್ದು ಗೆಲ್ಲುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ

Categories
ಸಿನಿ ಸುದ್ದಿ

ವಿಜಯ್ ಹುಟ್ದಬ್ಬಕ್ಕೆ ‘ಲಿಯೋ’ ಚಿತ್ರದ ಫಸ್ಟ್ ಲುಕ್ ಹಾಗು “ನಾ ರೆಡಿ” ಹಾಡಿನ ಪ್ರೋಮೋ ಬಿಡುಗಡೆ

ತಮಿಳಿನ ಸ್ಟಾರ್ ನಟ ವಿಜಯ್ ಹುಟ್ಟು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸುವುದಕ್ಕೆ ‘ಲಿಯೋ’ ಚಿತ್ರತಂಡವು “ನಾ ರೆಡಿ” ಎಂಬ ಹಾಡಿನ ಪ್ರೋಮೋ ಜೊತೆಗೆ ಚಿತ್ರದಲ್ಲಿನ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ.
‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ವಿಜಯ್, ‘ಲಿಯೋ’ ಎಂಬ ಇನ್ನೊಂದು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು ಕೆಲವ ತಿಂಗಳ ಹಿಂದೆ ಚೆನ್ನೈನಲ್ಲಿ ಶುರುವಾಗಿತ್ತು. ಆದರೆ, ಇದುವರೆಗೂ ಚಿತ್ರತಂಡದವರು ಚಿತ್ರದಲ್ಲಿ ವಿಜಯ್ ಅವರ ಪಾತ್ರವೇನು? ಅಥವಾ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಈಗ ಪೋಸ್ಟರ್ ಮತ್ತು ಪ್ರೋಮೋ ಮೂಲಕ ವಿಜಯ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.


‘ನಾ ರೆಡಿದಾ ವರವಾ’ ಎಂಬ ಹಾಡನ್ನು ಸ್ವತಃ ವಿಜಯ್ ಹಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ವಿಷ್ಣು ಎಡವನ್ ಬರೆದಿರುವ ಈ ಹಾಡಿನ ಪ್ರೋಮೊ ಸೋನಿ ಮ್ಯೂಸಿಕ್ ಸೌಥ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ಕೂಡ ಬಿಡುಗಡೆಯಾಗಲಿದೆ.
ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಲಲಿತ್ ಕುಮಾರ್ ನಿರ್ಮಿಸುತ್ತಿರುವ ‘ಲಿಯೋ’ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.


ಈ ಚಿತ್ರದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ಅಭಿನಯಿಸುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮತ್ತು ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ.

‘ಲಿಯೋ’ ಚಿತ್ರವು ಅಕ್ಟೋಬರ್ 19ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಮೈ ನೇಮ್ ಈಸ್ ಶೀಲ! ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಗಿಣಿ

ರಾಗಿಣಿ ಕನ್ನಡ ಹಾಗೂ ಮಲೆಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಬರುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ‌ಯಾಗಿದೆ. ರಾಗಿಣಿ ಇಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ.

ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ “ಶೀಲ” ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

“ಶೀಲ” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರವಾಗಿದೆ. ನನ್ನ ಪಾತ್ರ ಚೆನ್ನಾಗಿದೆ. ಸಮಾಜದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಹೆಣ್ಣು ಮಗಳೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥಾಸಾರಾಂಶ‌.

ಈ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ ಎಂದು ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.

ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ ನಿರ್ದೇಶಿಸಿದ್ದಾರೆ.

ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಾರೆವ್ಹಾ ಪರಂವಃ! ಹಾಡು ಬಿಡುಗಡೆ: ಲವ್ಲಿ ಸಾಂಗ್ ಎಂದ ಪ್ರೇಮ್

ಪ್ರಸಿದ್ದ ದೇಸಿ ಕಲೆ ವೀರಗಾಸೆ ಮತ್ತು ತಂದೆ-ಮಗನ ನಡುವಿನ ಭಾಂದವ್ಯದ ಬಗ್ಗೆಗಿನ ಕಥಾಹಂದರ ಹೊಂದಿರುವ ಚಿತ್ರ ‘ಪರಂವಃ’. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಮೂಲಕ ಜನರ ಮನ ಗೆದ್ದಿದೆ‌.

ಇತ್ತೀಚೆಗೆ “ಪರಂವಃ” ಚಿತ್ರಕ್ಕಾಗಿ ನಾಗೇಶ್ ಕುಂದಾಪುರ ಬರೆದಿರುವ “ನೂರಾರೂ ರಂಗಿರೊ” ಎಂಬ ಹಾಡನ್ನು ಜನಪ್ರಿಯ ನಟ ಲವ್ಲೀ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿದರು. ನಿರ್ದೇಶಕ ಜಡೇಶ್ ಕುಮಾರ್ ಸಹ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಿನಿಮಾ ತಂಡದ ಬಗ್ಗೆ ತಿಳಿದು ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವಿದು. ಇದು ನಿಜಕ್ಕೂ ಖುಷಿಯ ವಿಚಾರ. ನನಗೆ ಸಿನಿಮಾ ಬಗ್ಗೆ ಆಸಕ್ತಿಯಿರುವ ಪ್ರೇಕ್ಷಕರೆ ನಿರ್ಮಾಣ ಮಾಡಿದ್ದಾರೆ ಅನಿಸುತ್ತದೆ. ಈಗ ಹೊಸತಂಡದ ಹೊಸಪ್ರಯತ್ನವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ “ಪರಂವಃ” ಚಿತ್ರ ಸಹ ಸೇರಲಿ ಎಂದು ನಟ ಪ್ರೇಮ್ ಹಾರೈಸಿದರು.

ಪ್ರೇಮ್ ಸಿಡ್ಗಲ್ ನಾಯಕನಾಗಿ ಮತ್ತು ಮೈತ್ರಿ ಜೆ. ಕಶ್ಯಪ್ ನಾಯಕಿಯಾಗಿ ಅಭಿನಯಿಸಿದ್ದಾರೆ‌. ‘ ಗಣೇಶ್ ಹೆಗ್ಗೋಡು, ನಾಜರ್, ಶ್ರುತಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಕೈದಾಳ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ‌.

‘ಶಿವನ ಢಮರುಗದಿಂದ ಹೊಮ್ಮುವ ನಾದಕ್ಕೆ ‘ಪರಂವಃ’ ಎನ್ನುತ್ತಾರೆ. ನಮ್ಮ ಸಿನಿಮಾದ ಕಥೆಗೆ ಈ ಪದ ಸೂಕ್ತವೆಂಬ ಕಾರಣಕ್ಕೆ ಇದೇ ಹೆಸರಿಟ್ಟಿದ್ದೇವೆ. ಸಿನಿಮಾದಲ್ಲಿ ವೀರಗಾಸೆ ಕಲೆಯ ಬಗ್ಗೆ ಮತ್ತು ತಂದೆ-ಮಗನ ಸಂಬಂಧದ ಬಗ್ಗೆ ಪ್ರಧಾನವಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಪ್ರೀತಿ, ಸ್ನೇಹ, ಸೆಂಟಿಮೆಂಟ್, ಥ್ರಿಲ್ಲರ್, ಆ್ಯಕ್ಷನ್ ಹೀಗೆ ಎಲ್ಲ ಥರದ ವಿಷಯಗಳು “ಪರಂವಃ” ಚಿತ್ರದಲ್ಲಿದೆ.

ಪೀಪಲ್ಸ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಟ ಪ್ರೇಮ್, ನಿರ್ದೇಶಕ ಗುರು ದೇಶಪಾಂಡೆ ಅವರು ಸೇರಿದಂತೆ ಸ್ಯಾಂಡಲ್ ವಡ್ ನ ಗಣ್ಯರು ಹಾಗೂ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮನತುಂಬಿ ಬಂದಿದೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.ಎಂದರು ನಿರ್ದೇಶಕ ಸಂತೋಷ್ ಕೈದಾಳ.

ಚಿತ್ರದ ನಾಯಕ ಪ್ರೇಮ್ ಸಿಡ್ಗಲ್, ನಾಯಕಿ ಮೈತ್ರಿ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ‘ಪರಂವಃ’ ಸಿನಿಮಾ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಆದಿತ್ಯ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶುರು: ಇದು ಕಿಶೋರ್ ಮೇಗಳಮನೆ ನಿರ್ದೇಶನದ ಮೊದಲ ಸಿನಿಮಾ

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ “ಡೆಡ್ಲಿ ಸೋಮ” ಖ್ಯಾತಿಯ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಚಿತ್ರವೊಂದು ಸದ್ದಿಲ್ಲದೆ ಆರಂಭವಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿಶೋರ್ ಮೇಗಳಮನೆ ನಿರ್ದೇಶಿಸುತ್ತಿದ್ದಾರೆ‌‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಿಶೋರ್ ಮೇಗಳಮನೆ ಅವರೆ ಬರದಿದ್ದಾರೆ. ಕಿಶೋರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಹದಿನೇಳು ದಿನಗಳ ಚಿತ್ರೀಕರಣ ನಡೆದಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ರಾಮಚಂದ್ರಯ್ಯ ಕೆ.ಜಿ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ.

ಗಾಯಕರಾಗಿ ಹೆಸರು ಮಾಡಿರುವ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ನೂತನ ಚಿತ್ರಕ್ಕಿದೆ.

ಆದಿತ್ಯ ಅವರಿಗೆ ನಾಯಕಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಶಿವಮಣಿ(ನಿರ್ದೇಶಕ), ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಕನ್ನಡದ ಚಿತ್ರರಂಗದ ಖ್ಯಾತ ನಟರೊಬ್ಬರು ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

error: Content is protected !!