ಕಿರಣ್ ರಾಜ್ ಹುಟ್ದಬ್ಬಕ್ಕೆ ರಾನಿ ಟೀಸರ್ ರಿಲೀಸ್

ಟೈಟಲ್ ಹಾಗೂ ಪೋಸ್ಟರ್ ನಿಂದ ಸಿನಿ ಪ್ರೇಕ್ಷರಲ್ಲಿ ಕುತೂಹಲ ಹುಟ್ಟಿಸಿದ “ರಾನಿ” ಸಿನಿಮಾದ ಟೀಸರ್ ನಾಯಕ ನಟ ಕಿರಣ್ ರಾಜ್ ಹುಟ್ಟುಹಬ್ಬದ ದಿನ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. “ರಾನಿ” ಚಿತ್ರದ​ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ “ರಾನಿ” ಚಿತ್ರದ ಟೈಟಲ್ ಅನಾವರಣಗೊಳಿಸಿದ್ದರು, ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡುಸಿತ್ತು. ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು.

ಈ ಬಾರಿ ಗಟ್ಟಿ ಕಥೆಯೊಂದಿಗೆ ಆಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ ಎನ್ನುವ ನಿರ್ದೇಶಕ ಗುರುತೇಜ್ ಶೆಟ್ಟಿ, ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳು ಚಿತ್ರದಲ್ಲಿದೆ ಎನ್ನುತ್ತಾರೆ.

ರವಿಶಂಕರ್ ಮೈಕೋ ನಾಗರಾಜ್ ,ಉಗ್ರಂ ರವಿ , ಉಗ್ರಂ ಮಂಜು, B ಸುರೇಶ , ಮಂಡ್ಯ ರಮೇಶ್ , ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಹೀಗೆ ಮುಂತಾದ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಈ ಚಿತ್ರದ ನಾಯಕಿಯರು. ಮೂವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ B.ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೆಶನ​​ವಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ.

ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ ,ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಇದೆ ವರ್ಷ ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು.

Related Posts

error: Content is protected !!