Categories
ಸಿನಿ ಸುದ್ದಿ

ಕುಡುಕರ ಟ್ರೇಲರ್ ಬಂತು : ಕಲಿ ಕುಡುಕರ ಸಿನಿಮಾ ರೆಡಿ

ಎ.ಎಂ ಕ್ರಿಯೇಷನ್ ಬ್ಯಾನರ್ ಅಡಿ ಮಹೇಶ್ ಎನ್ ನಿರ್ಮಾಣ ಮಾಡಿ ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವ ” ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಒಬ್ಬ ಆಟೋ ಡ್ರೈವರ್, ಇನ್ನೊಬ್ಬ ಉಂಡಾಡಿ ಗುಂಡ,ಮತ್ತೊಬ್ಬ ರಿಯಲ್ ಎಸ್ಟೇಟ್ ಬ್ರೋಕರ್ ,ಇದರ ಜೊತೆಗೆ ಇನ್ನೊಬ್ಬ ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೊಬ್ಬನ ಸುತ್ತ ಸಾಗುವ ಕಥೆ ಚಿತ್ರ ಒಳಗೊಂಡಿದೆ.


ತಮ್ಮ ಕುಟುಂಬದಲ್ಲಿ ಆಗುವ ಅನಾಹುತಗಳಿಗೆ ಸಮಸ್ಯೆಗಳಿಗೆ ಒಳಗಾಗಿ ಕುಡಿತಕ್ಕೆ ದಾಸರಾಗುತ್ತಾರೆ ,ಕುಡಿತವೇ ಇವರ ಜೀವನಾಗುವಷ್ಡರ ಮಟ್ಟಿಗೆ ಚಟವಾಗಿಸಿಕೊಂಡವರು. ನಿರುದ್ಯೋಗಿ ಯುವಕನನ್ನು ಆಗರ್ಭ ಯುವತಿಯನ್ನು ಪ್ರಿತಿಸುತ್ತಾಳೆ ಆದರೆ ಹುಡುಗಿ ರೌಡಿಗಳಿಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.ರೌಡಿಗಳು ಆಕೆಯನ್ನು ನೇಣು ಹಾಕುತ್ತಾರೆ. ರೌಡಿಗಳಿಗೆ ಇನ್ಸ್ ಪೆಕ್ಟರ್ ಸಹಾಯ ಇರುತ್ತದೆ. ಹೀಗಿರುವಾಗ ನಾಲ್ಕು ಜನ ನಾಯಕರು ಮತ್ತು ಸ್ನೇಹಿತ ಸೇರಿ ರೌಡಿಗಳನ್ನು ಮತ್ತು ಇನ್ಸ್ ಪೆಕ್ಟರ್ ಅವರನ್ನು ಹೇಗೆ ಸಾಯಿಸುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.


ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಹೇಶ್ ಎನ್., ಸಿನಿಮಾ ಮಾಡ್ತೇವೆ ಅಂತ ಅಂದುಕೊಂಡು ಮಾಡಿದ್ದೇವೆ. ನಾಲ್ಕು ಜನರ ಪಾತ್ರದ ಸುತ್ತ, ಸಾಗಲಿದೆ, ರಿಯಾಲಿಟಿ ಶೋ ಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತ ಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.
ನಾಗೇಂದ್ರ ಅರಸ್ ಮಾತನಾಡಿ, ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಹೊಸ ತಂಡಕ್ಕೆ ಸಹಕಾರ ಯಾವತ್ತೂ ಸಹಕಾರ ಇದ್ದೇ ಇರುತ್ತೆ. ಉತ್ಸಾಹಿ ತಂಡ ಹುರುಪಿನಿಂದ ಕೆಲಸ ಮಾಡಿದ್ದೇನೆ. ಹೊಸ ತಂಡ ಭಯ ಪಡುವರು ತಂಡಕ್ಕೆ ಸಹಕಾರ ನೀಡಿದ್ದೇನೆ ಎಂದರು.


ಸೋನು ಗೌಡ ,ಆಟೋ ಡ್ರೈವರ್ ಪಾತ್ರ, ಪಿಲ್ಮ್ ಫಿಲ್ಡ್ ಹೋಗಿ ವಾಪಸ್ ಬರುವ ಪಾತ್ರ ಎಂದರೆ ಮತ್ತೊಬ್ಬ ನಾಯಕಿ ರಿತ್ಯಾ ಅನಾಥ ಹುಡುಗನನ್ನು ಮದುವೆಯಾಗುತ್ತೇನೆ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದರು
ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಬಡ್ಡಿ ಬಂಗಾರಮ್ಮ ಪಾತ್ರ, ಮನೆ ಮನೆಯ ಪಾತ್ರ ಎಂದರೆ ಲೋಹಿತ್, ರವೀಶ್, ಮುರುಳಿ ಮಾಹಿತಿ ಹಂಚಿಕೊಂಡರು.


ತಾರಾಗಣದಲ್ಲಿ ಮಹೇಶ್ ಎನ್, ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್ ,ರಿತ್ಯಾ ,ಸೋನು ದೀಪು, ಶೃತಿ , ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ ಮತ್ತಿತರರು ಚಿತ್ರದಲ್ಲಿದ್ದಾರೆ.


ಚಿತ್ರಕ್ಕೆ ಸನ್ನಿ ಮಾಧವನ್ ಸಂಗೀತವಿದ್ದು ಎರಡು ಹಾಡುಗಳಿವೆ. ಚಿತ್ತೋರ್ ಸೂರಿ ಕ್ಯಾಮರ ,,ಶ್ರೀರಂಗ ಹಾಲುವಾಗಿಲು ಸಾಹಿತ್ಯ, ಸುಪ್ರೀಂ ಸುಬ್ಬ ಸಾಹಸ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕೆಟಿಎಂ ಮತ್ತೊಂದು ಸಾಂಗ್ ರಿಲೀಸ್: ಫೆಬ್ರವರಿ 16ಕ್ಕೆ ಸಿನಿಮಾ ಬಿಡುಗಡೆ

ಕನ್ನಡದ ‘ದಿಯಾ’ ಹಾಗೂ ತೆಲುಗಿನ ‘ದಸರಾ’ ಸಿನಿಮಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಅಭಿನಯದ “ಕೆಟಿಎಂ’ ಸಿನಿಮಾ ತನ್ನ ಟೀಸರ್‌ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ.

ಕೆಟಿಎಂ ಸಿನಿಮಾದ ಹಾಡುಗಳು ಕೇಳುಗರನ್ನು ಮೋಡಿ ಮಾಡುತ್ತಿವೆ. ಈ ಹಿಂದೆ ಬಿಡುಗಡೆಯಾಗಿದ್ದ ಎರಡು ಸಾಂಗ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ‌. ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಕೆಟಿಎಂ ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿವೆ‌. ಇದೀಗ. ಕೆಟಿಎಂ ಸಿನಿಮಾದ ಮೂರನೇ ಹಾಡು ಅನಾವರಣಗೊಂಡಿದೆ


ಎಲ್ಲಾ ನೀನೇನೆ ಎಂಬ ಮೆಲೋಡಿ ಗಾನಬಜಾನಕ್ಕೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಚೇತನ್ ರಾವ್ ಸಂಚಿತ್ ಹೆಗ್ಡೆ ಜೊತೆಗೂಡಿ ಧ್ವನಿಯಾಗುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ಎಲ್ಲಾ ನೀನೇನೆ ಎನ್ನುತ್ತಾ ದೀಕ್ಷಿತ್ ಸಂಜನಾ ದಾಸ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಈ ಹಿಂದೆ “ಅಥರ್ವ’ ಸಿನಿಮಾ ನಿರ್ದೇಶಿಸಿದ್ದ ಅರುಣ್‌ “ಕೆಟಿಎಂ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ಮಹಾಸಿಂಹ ಮೂವೀಸ್‌’ ಬ್ಯಾನರ್‌ನಲ್ಲಿ ವಿನಯ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನವಿರಾದ ಪ್ರೇಮಕಹಾನಿ ಇರುವ “ಕೆಟಿಎಂ’ ಸಿನಿಮಾದಲ್ಲಿ ದೀಕ್ಷಿತ್‌ ಶೆಟ್ಟಿ ನಾಲ್ಕು ವಿಭಿನ್ನ ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಕಾಜಲ್‌ ಕುಂದರ್‌ ಹಾಗೂ ಸಂಜನಾ ನಾಯಕಿಯರಾಗಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಪ್ರಕಾಶ್‌ ತುಮ್ಮಿನಾಡು, ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು, ರಘು ರಾಮನಕೊಪ್ಪ, ಶಾನಿಲ್‌ ಗುರು, ಬಾಬು ಹಿರಣಯ್ಯ, ದೇವ್‌ ದೇವಯ್ಯ, ಅಭಿಷೇಕ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾಕ್ಕೆ ನವೀನ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನವಿದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಸುತ್ತಮುತ್ತ “ಕೆಟಿಎಂ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಇದೇ ಫೆಬ್ರವರಿ 16ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಕಲರ್ಸ್ ಕನ್ನಡದಲ್ಲಿ ಮತ್ತೆ ಗಿಚ್ಚಿ ಗಿಲಿಗಿಲಿ ಶುರು

ಬಿಗ್‌ಬಾಸ್‌ ಸೀಸನ್‌ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್‌ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ”ಯ ಎರಡು ಸೂಪರ್‌ ಹಿಟ್‌ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.

ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್‌ಬಾಸ್‌ ಗ್ರಾಂಡ್‌ ಫಿನಾಲೆಯಲ್ಲಿ ಬಿಗ್‌ಬಾಸ್‌ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್‌ಬಾಸ್‌ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡದ ಅದ್ಭುತ ಕಾಮಿಡಿಯನ್‌ಗಳ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್‌ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪ್ರಶಾಂತ್‌ ನಾಯಕ್.

ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು.

ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ‌. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.

“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು.

ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ‌ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ‌. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.

ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ.

“ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್.

ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್‌ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್‌ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.


‌ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್‌ ತುಕಾಲಿ ಸಂತೋಷ್‌ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್‌ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್‌ಬಾಸ್ ಸೀಸನ್‌ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್‌ ಗೊಬ್ಬರಗಾಲ ಇದ್ದೇ ಇರುತ್ತಾರೆ.


ಇವರ ಜೊತೆಗೆ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದ ದ್ರೋಣ್‌ ಪ್ರತಾಪ್‌ ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್‌ಬಾಸ್‌ ಸೀಸನ್‌ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್‌ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ.
ಉಳಿದಂತೆ ಕಲರ್ಸ್‌ ಕನ್ನಡದ ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್‌, ಶಿವು, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್‌, ನಂದೀಶ್‌ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್‌ಸ್ಟಾರ್‌” ನ ಪುನೀತಾ, “ಮಜಾ ಟಾಕೀಸ್‌”ನ ಮೋಹನ್‌, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.

Categories
ಸಿನಿ ಸುದ್ದಿ

ಆ ಗೊಂಬೆಗೆ ಮನಸೋತ ಮನೆಹಾಳ! ಕೆರೆಬೇಟೆಯ ರೊಮ್ಯಾಂಟಿಕ್ ಸಾಂಗ್ ರಿಲೀಸ್

‘ಕೆರೆಬೇಟೆ’ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ದಾರೆ.

‘ಮಲೆನಾಡ ಬೊಂಬೆ’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತವಾದ ಹಾಡು ನಡಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಫಿದಾ ಆಗಿದ್ದಾರೆ. ಮಲೆನಾಡಿನ ಸುತ್ತಮುತ್ತವೇ ಈ ಹಾಡಿನ ಚಿತ್ರೀಕರಣ ಮಾಡಿರುವುದು ವಿಶೇಷ.

‘ಕೆರೆಬೇಟೆ’ ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ನಾಯಕ ಗೌರಿಶಂಕರ್ ಮತ್ತು ನಾಯಕಿ ಬಿಂಧು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ರೋಮ್ಯಾಂಟಿಕ್ ಹಾಡು ಇದಾಗಿದೆ. ಅಂದಹಾಗೆ ಈ ಸುಂದರ ಹಾಡಿಗೆ ‘ಕಾಂತಾರ’ ಸಿನಿಮಾದ ‘ಸಿಂಗಾರ ಸಿರಿಯೇ…’ ಹಾಡಿನ ಖ್ಯಾತಿಯ ಪ್ರಮೋದ್ ಮರುವಂತೆ ಸಾಹಿತ್ಯ ರಚಿಸಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.

ಈ ಹಾಡಿನ ಚಿತ್ರೀಕರಣದ ಅನುಭವ ತೆರೆದಿಟ್ಟ ಸಿನಿಮಾ ತಂಡ. ‘ಈ ಹಾಡನ್ನು ತುಂಬಾ ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಅತಿಯಾದ ಮಳೆಯಿಂದ ಅನೇಕ ಬಾರಿ ಚಿತ್ರಿಕರಣ ನಿಲ್ಲಿಸಲಾಗಿತ್ತು. ಮನುಷ್ಯರೇ ಓಡಾಡದೇ ಇರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಪ್ರಾಣಿಗಳ ಭಯ ಕೂಡ ಇತ್ತು. ಮಲೆನಾಡಿನ ತುಂಬಾ ರಿಮೋಟ್ ಏರಿಯಾದಲ್ಲಿ ನಾಲ್ಕು ದಿನಗಳ ಕಾಲ ಈ ಹಾಡನ್ನು ಸೆರೆಹಿಡಿದಿದ್ದೇವೆ. ಈ ಹಾಡಿಗಾಗಿ ಹರಸಾಹಸ ಪಟ್ಟಿದ್ದೇವೆ’ ಎನ್ನುತ್ತಾರೆ.

ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ‘ಕೆರೆಬೇಟೆ’ ಸಿನಿಮಾ ಇದೀಗ ಹಾಡಿನ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಮುಂದಿನ ತಿಂಗಳು ಅಂದರೆ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೀಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

Categories
ಸಿನಿ ಸುದ್ದಿ

ಶ್ರದ್ಧೆ ಪ್ರೀತಿ ಇದ್ರೆ ಸಿನಿಮಾ ದೊಡ್ಡದೇನಲ್ಲ! ಧೈರ್ಯಂ ನಿರ್ಮಾಣ ಬಲಂ: ಇದು ಆಫೀಸ್ ಬಾಯ್ ಒಬ್ಬ ನಿರ್ಮಾಪಕನಾದ ಕಥೆ…

ಈ ಸಿನಿಮಾ ಅನ್ನೋದೇ ಹಾಗೆ. ಇಲ್ಲೊಮ್ಮೆ ಕಾಲಿಟ್ಟರೆ ಸಾಕು, ಹಿಂದಿರುಗುವ ಮನಸ್ಸಾಗೋದೇ ಇಲ್ಲ. ಅದೆಷ್ಟೋ ಮಂದಿ ಸಿನಿಮಾ ಕನಸು ಹೊತ್ತು ಬಂದು ಗಟ್ಟಿನೆಲೆ ಕಂಡಿದ್ದಾರೆ. ಅಂತಹವರ ಸಾಲಿಗೆ ಆನಂದ ಬಾಬು ಒಬ್ಬರು. ಆಫೀಸ್ ಬಾಯ್ ಆಗಿದ್ದ ಹುಡುಗನೊಬ್ಬ ನಿರ್ಮಾಪಕನಾಗಿದ್ದೇ ಸಾಹಸ. ಅಂದಹಾಗೆ ಆ ಹುಡುಗ ಈಗ ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾ ನಿರ್ಮಿಸಿ, ಫೆಬ್ರವರಿ 23ಕ್ಕೆ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಆ ಕುರಿತು ಒಂದು ವರದಿ

ಇದು ಆನಂದ ಕಥೆ!

ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ದುಡಿಯುತ್ತಿದ್ದ ಒಬ್ಬ ಸಾಮಾನ್ಯ ಹುಡುಗ, ಒಂದು ಪ್ರೊಡಕ್ಷನ್ಸ್ ಸಂಸ್ಥೆ ಸ್ಥಾಪಿಸಿ ನಿರ್ಮಾಪಕ ಆಗೋದು ಸುಲಭವಲ್ಲ. ಆದರೆ ಇಲ್ಲೊಬ್ಬ ಹುಡುಗ ಅದು ಸಾಧ್ಯ ಅಂತಾ ಸಾಧಿಸಿ ಬಿಟ್ಟಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ
ಆನಂದ್ ಅವರ ಮಾತು ಕಡಿಮೆ, ಕೆಲಸ ಜಾಸ್ತಿ.
ಯಾವ ಉಸಾಬರಿಗೂ ಹೋಗದ ಆನಂದ್ಪ್ಪ ಅಪ್ಟಪ ಸಿನಿಮಾ ಪ್ರೇಮಿ.

ಸಿನಿಮಾ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉದ್ದೇಶದಿಂದ ಡಿಗ್ರಿ ನಂತರ ಓದಿಗೆ ಗುಡ್ ಬೈ ಹೇಳಿ ಬೆಂಗಳೂರಿಗೆ ಹೊರಟರು.ಅಲ್ಲ ಸಾಕಷ್ಟು
ಕಷ್ಟಪಟ್ಟು ಒಂದು ಪ್ರೊಡಕ್ಷನ್ ಯೂನಿಟ್ ನಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ನಂತರ ಅಲ್ಲೇ “ಲೈಟ್ ಬಾಯ್” ಆಗಿ ಕೆಲಸ ಮಾಡ್ತಾರೆ.
ಲೈಟ್ ಬಾಯ್ ಕೆಲಸ ಮಾಡಿಕೊಂಡೆ ಶೂಟಿಂಗ್ ಕೆಲಸಗಳನ್ನು ಕಲಿಯುತ್ತಾ ಹೋಗುತ್ತಾರೆ.
ಇವರಿಗೆ ನಿರ್ದೇಶಕನಾಗಿ ಹೆಸರು ಮಾಡಬೇಕು ಎಂಬ ಬಹು ದೊಡ್ಡ ಆಸೆ.

ಒಂದು ದಿನ ನಿರ್ದೇಶಕ ಶಿವಮಣಿಯವರ “ಅಕ್ಕ” ಧಾರಾವಾಹಿಗೆ ಆನಂದ್ ಲೈಟ್ ಹಿಡಿಯುತ್ತಾರೆ.
ಬ್ರೇಕ್ ನಲ್ಲೂ ಸೆಟ್ ನಲ್ಲೇ ಇರುತ್ತಿದ್ದ, ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದ ಇವರ ಆಸಕ್ತಿಯನ್ನು ಗಮನಿಸಿದ ಶಿವಮಣಿಯವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿಯಾ ಅಂತ ಕೇಳುತ್ತಾರೆ.
ಇಷ್ಟು ದಿನ ಇದೇ ಸಮಯವನ್ನು ಕಾಯುತ್ತಿದ್ದ ಆನಂದ್ ಲೈಟ್ ಬಾಯ್ ನಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾರೆ.

ಈ ಸೀರಿಯಲ್ ನಂತರ ಎಸ್. ನಾರಾಯಣ್‌ ಅವರ ಸೇವಂತಿ ಸೇವಂತಿ ಚೆಲುವಿನ ಚಿತ್ತಾರ, ಚಂಡ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ,

ನಂತರದ ದಿನಗಳಲ್ಲಿ ಝೀ ಕನ್ನಡ ವಾಹಿನಿಯ “ಯಾರಿಗುಂಟು ಯಾರಿಗಿಲ್ಲಾ” ಕುಣಿಯೋಣು ಬಾರ, ಸೈ, ಬಾಳೇ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿ ಅಸೋಸಿಯೇಟ್ ಅನ್ನಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಆನಂದ್ ಕೆಲಸವನ್ನು ಗುರುತಿಸಿದ “ಶ್ರೀ ಶಂಕರ” ಟಿವಿಯ ಮಾಲೀಕರಾದ “ಜಿ.ಶ್ರೀನಿವಾಸ್ ಹಾಗೂ ಹರಿಕೃಷ್ಣ” ರವರು “ಶ್ರೀ ಶಂಕರ ಟಿವಿ” ಗೆ ಆನಂದ್ ಅವರನ್ನು ಕಾರ್ಯಕ್ರಮ ನಿರ್ಮಾಪಕನಾಗಿ ಬಡ್ತಿ ನೀಡುತ್ತಾರೆ,

ಕೆಲಸವನ್ನು ಮಾಡಿಕೊಂಡೆ ಜೊತೆಗೆ ಇನ್ನೂ ಕಲಿಕೆಯ ದೃಷ್ಟಿಯಿಂದ ಸಂಜೆಯ ವೇಳೆಯಲ್ಲಿ ಅಭಿನಯ ತರಂಗ ಎಂಬ ರಂಗಭೂಮಿಗೆ ಸೇರಿ ಒಂದು ವರ್ಷದ ಕೋರ್ಸ್ ಮಾಡುತ್ತಾರೆ, ನೂರಾರು ಬೀದಿ ನಾಟಕ, ನೂರಾರು ಬೇರೆ ಬೇರೆ ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಒಂದು ಸಂಧರ್ಭದಲ್ಲಿ ನಿರ್ದೇಶಕನಾಗಬೇಕಿದ್ದ ಆನಂದ್ ಅನಿವಾರ್ಯ ಕಾರಣದಿಂದ ನಿರ್ಮಾಪಕನಾಗಿಬಿಡುತ್ತಾರೆ.

2016 ರಲ್ಲಿ ಒಂದು ಚಿತ್ರ ನಿರ್ಮಾಣ ಮಾಡಲು ಹೋಗಿ ಕೈ ಸುಟ್ಟು ಕೊಳ್ಳುತ್ತಾರೆ. ಸೋಲನ್ನು ಅನುಭವಿಸುತ್ತಾರೆ,
ಮೈ ತುಂಬ ಸಾಲದ ಹೊರೆ ಬೀಳುತ್ತದೆ.. ಸಾಮಾನ್ಯವಾಗಿ ಸೋಲೋಪ್ಪದ ಆನಂದ ನಂತರ ಛಲ ಬಿಡಲ್ಲ.

2018 ರಲ್ಲಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ವಿ ಚಿತ್ರವನ್ನು ನಿರ್ಮಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ನಾಗುತ್ತಾರೆ.

2020 ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯಾಧಾರಿತ “ಗುಬ್ಬಿಮರಿ” ಎಂಬ ಚಿತ್ರವನ್ನು ಮಾಡಿ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ ಪಡೆಯುತ್ತಾರೆ.

2022 ರಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂಬ ದೊಡ್ಡ ಮಟ್ಟದ ಚಿತ್ರವೊಂದನ್ನು ನಿರ್ಮಿಸಿದ್ದಾರೆ
ಧೈರ್ಯಂ ಸರ್ವತ್ರ ಸಾಧನಂ ಚಿತ್ರವು ಪೆಬ್ರವರಿ 23ಕ್ಕೆ ಬಿಡುಗಡೆಯಾಗುತ್ತಿದೆ.

ಒಬ್ಬ ಆಫೀಸ್ ಬಾಯ್ ಹುಡುಗ, ಒಬ್ಬ ಲೈಟ್ ಬಾಯ್ ಹುಡುಗ, ಈ ಮಟ್ಟಿಗೆ ನಾಲ್ಕು ಚಿತ್ರಗಳ ನಿರ್ಮಾಣ ಮಾಡಿ ನಿರ್ಮಾಪಕನಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ.
ಅದರೆ ಇಷ್ಟು ವರ್ಷಗಳ ಇವನ ಪಯಣದಲ್ಲಿ ಪಟ್ಟಿರುವ ಕಷ್ಟ ಅವರಿಗೆ ಮಾತ್ರ ಗೊತ್ತು.

ಆನಂದ್ ಗೆ ಶ್ರದ್ಧೆ ಇದೆ, ಕಮಿಟ್ ಮೆಂಟ್ ಇದೆ, ಬಡತನದ ಅರಿವಿದೆ, ನಡೆದು ಬಂದ ಹಾದಿಯ ಕಷ್ಟ ಸುಖದ ಅರಿವಿದೆ, ತನ್ನ ಕೆಲಸದ ಬಗ್ಗೆ ಗೌರವವಿದೆ, ಎಲ್ಲಾರೊಳಗೊಂದಾಗುವ ಗುಣವಿದೆ, ಗೆಲ್ಲುವೆ ಎಂಬ ಕಿಚ್ಚಿದೆ,

Categories
ಸಿನಿ ಸುದ್ದಿ

ರಂಗಾಯಣ ರಘು ಹೊಸ ಹೋಟೆಲ್ ಆರಂಭ: ಶಾಖಾಹಾರಿ ಜನರ ಮುಂದೆ ಶೀಘ್ರ

ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಸರಳ ಜೀವನಕ್ಕೆ ಅನಿರೀಕ್ಷಿತವಾಗಿ ಬಂದೊಗುವ ಕಷ್ಟ,ತೊಂದರೆಗಳಿಂದ ಮುಕ್ತನಾಗಲೂ ಸುಬ್ಬಣ ಭಟ್ಟ ಎದುರಿಸುವ ಸವಾಲುಗಳು ಹಾಗೂ ಶಾಖಾಹಾರಿ ಹೋಟೆಲ್ ಶಾಖಾಹಾರಿಯಾಗುವ ಬಗೆಯನ್ನು ಇಲ್ಲಿ‌ ಕಾಣಬಹುದು.


ಎಸ್ ಐ ಮಲ್ಲಿಕಾರ್ಜುನ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ, ವಿನಯ್ ಯು ಜೆ, ನಿಧಿ ಹೆಗಡೆ, ಹರಿಣಿ ಶ್ರೀಕಾಂತ್, ಸುಜಯ್ ಶಾಸ್ತ್ರಿ, ಪ್ರಶಾಂತ್ ನಟನ, ಶ್ರೀಹರ್ಷ ಗೋಭಟ್, ಪ್ರತಿಮಾ ನಾಯಕ್, ಮೋಹನ್ ಶೇಣಿ, ಶಿಲ್ಪಾ ಶೈಲೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಲೆನಾಡಿನ ತಪ್ಪಲಿನಲ್ಲೇ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ.

ಶಾಖಾಹಾರಿ ಸಿನೆಮಾದ ಕಥೆ, ಸಂಭಾಷಣೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂದೀಪ್ ಸುಂಕದ್ ಅವರ ಸೂಕ್ಷ್ಮತೆ, ವಿಶ್ವಜಿತ್ ರಾವ್ ಅವರ ಕ್ಯಾಮೆರ ಕೈಚಳಕ ಸಿನೆಮಾಗೆ ಶಕ್ತಿಯಾಗಿರುವುದಲ್ಲದೇ, ಶಶಾಂಕ್ ನಾರಾಯಣ್ ಅವರ ಸಂಕಲನ, ಮಯೂರ್ ಅಂಬೇಕಲ್ಲು ಅವರ ಸಂಗೀತ ಸಿನೆಮಾಗೆ ಪುಷ್ಟಿ ನೀಡಿದೆ.

ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನರವರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ.

ಶಾಖಾಹಾರಿ ಸಿನಿಮಾದ ಟ್ರೇಲರ್ ಅನ್ನು ಡಾಲಿ‌ ಧನಂಜಯ್ ರವರು ಬಿಡುಗಡೆ ಮಾಡಿ ಮೆಚ್ಚಿದ್ದಾರೆ.

ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.

ಹಿಂದೆಂದೂ ಕಾಣದ ರೀತಿಯಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.. ಹೊಸತನದ ಈ ಹೊಸಬರ ಚಿತ್ರಕ್ಕೆ ಚಿತ್ರಕಥೆಯೇ ಜೀವಾಳವಾಗಿದೆ, ಮರ್ಡರ್ ಮಿಸ್ಟರಿ ಸಿನೆಮಾ ಇದಾಗಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು

Categories
ಸಿನಿ ಸುದ್ದಿ

ಹೀಗೊಂದು ರವಿಕೆ ಪ್ರಸಂಗ! ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್

ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ.
ರವಿಕೆ ಪ್ರಸಂಗ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.


ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತನವನ್ನು ನಿರ್ದೇಶಕರು ರವಿಕೆಪ್ರಸಂಗ ಸಿನಿಮಾದಲ್ಲಿ ಮಾಡಿದ್ದಾರೆ.


‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.


ರವಿಕೆ ಪ್ರಸಂಗ ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯುಟರ್ಸ್ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.


ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ
ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ.

ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ರವಿಕೆಪ್ರಸಂಗ ರಾಜ್ಯಾದ್ಯಂತ ತೆರೆಕಾಣಲಿದೆ.

Categories
ಸಿನಿ ಸುದ್ದಿ

ಇದು ಸಂಯುಕ್ತ ಹೆಗಡೆಯ ಕ್ರೀಂ! ಟ್ರೇಲರ್ ರಿಲೀಸ್ ಆಯ್ತು

“ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಸಂಯುಕ್ತ ಹೆಗಡೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಕ್ರೀಂ” ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಈ ಚಿತ್ರದ ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದರು.

ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ.

ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿಟ್ಟುಕೊಂಡಿದ್ದೇನೆ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ಎಲ್ಲಾ ಊರುಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದೆ. ಸಿನಿಮಾ ಮಾಡಲು ಆಗಿರಲಿಲ್ಲ. ನಿರ್ಮಾಪಕ ದೇವೇಂದ್ರ ಅವರು ಸಿನಿಮಾ ಮಾಡಲೇಬೇಕು ಎಂದು ನನ್ನ ಒತ್ತಾಯಿಸಿದಾಗ ಈ ಚಿತ್ರದ ಕಥೆ ಹೇಳಿದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು.‌ ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ. ಇನ್ನೂ ಸಂಯುಕ್ತ ಹೆಗಡೆ ಈ ಚಿತ್ರಕ್ಕಾಗಿ ತನ್ನ ಜೀವವನ್ನೇ ಕೊಟ್ಟು ಬಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ. ನಿರ್ದೇಶಕ ಅಭಿಷೇಕ್ ಬಸಂತ್ ನನ್ನ ತಮ್ಮನ ಮಗ.‌ ಆತ ಬಹಳ ಬುದ್ದಿವಂತ. ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾನೆ. ಶಿವು ಅವರ ಕಲಾ ನಿರ್ದೇಶನ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.‌ ಇಂದು ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ನಿಮ್ಮ ಮುಂದೆ ಚಿತ್ರ ಬರಲಿದೆ‌ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ಆಕ್ಷನ್ ಕೂಡ ಮಾಡಿದ್ದೇನೆ. ಕಾಲು ಕೂಡ ಮುರಿದಿತ್ತು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ “ಕ್ರೀಂ” ಚಿತ್ರ ಚೆನ್ನಾಗಿ ಬಂದಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸುಂದರವಾಗಿದೆ. ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ವಿಶೇಷವಾಗಿ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಂಯುಕ್ತ ಹೆಗಡೆ.

ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇಡೀ ತಂಡದ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಡಿ.ಕೆ.ದೇವೇಂದ್ರ ತಿಳಿಸಿದರು.

ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ರೋಷನ್‌ ಅಗ್ನಿ ಶ್ರೀಧರ್ ಬಚ್ಚನ್, ಇಫ್ರಾನ್ ಮುಂತಾದವರು “ಕ್ರೀಂ” ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಲೇಡಿಸ್ ಬಾರ್ ಗೆ ಬಂದ ಫಿಲ್ಮ್ ಚೇಂಬರ್ ಅಧ್ಯಕ್ಷ!

ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಲೇಡಿಸ್‌ಬಾರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಧರ್ಮ ಕೀರ್ತಿರಾಜ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಧರ್ಮ ಕೀರ್ತಿರಾಜ್, ಟ್ರೇಲರ್ ಚೆನ್ನಾಗಿದೆ. ನಿರ್ದೇಶಕ ಮುತ್ತು, ನಮ್ಮ “ರೋನಿ” ಸಿನಿಮಾಗೆ ಅಸೋಸಿಯೇಟ್ ಆಗಿದ್ದರು, ಈಗ ಸಮಾಜಕ್ಕೆ ಸಂದೇಶ ಕೊಡುವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎಂದರು.

ನಿರ್ದೇಶಕ ಮುತ್ತು.ಎ.ಎನ್ ಮಾತನಾಡಿ, ಚಿತ್ರದಲ್ಲಿ ಅದ್ಭುತವಾದ ಕಥೆಯಿದೆ, ಕಥೆಯೇ ನಮ್ಮ ಚಿತ್ರದ ಹೀರೋ. ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಈಗಾಗಲೇ ಜನಪ್ರಿಯವಾಗಿದೆ. ಮನೋರಂಜನೆಯ ಮಹಾಪೂರವೇ ನಮ್ಮ ಚಿತ್ರದಲ್ಲಿದೆ. ಹೆಣ್ಣುಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ? ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಾಗಂತ “ಲೇಡಿಸ್‌ಬಾರ್” ಚಿತ್ರದಲ್ಲಿ ಬರೀ ಕುಡಿತವನ್ನಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವಿದೆ ಎಂದರು.

ಹೊಸಬರು ಸಿನಿಮಾ ಮಾಡಿದಾಗ ನಾವೆಲ್ಲ ಸಪೋರ್ಟ್ ಮಾಡಬೇಕು. ಈ ಟ್ರೇಲರ್ ನೋಡಿದಾಗ ಏನೋ ವಿಶೇಷತೆಯಿದೆ ಎನ್ನುವುದು ಕಾಣುತ್ತದೆ. ನಿಮ್ಮ ಕೆಲಸದಲ್ಲಿ ಶ್ರದ್ದೆ ಪ್ರಾಮಾಣಿಕತೆ ಇದ್ದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹೇಳಿದರು.

ನಂತರ ನಿರ್ಮಾಪಕ ಸೋಮರಾಜ್ ಮಾತನಾಡಿ ನಮ್ಮ ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ನಮ್ಮ ಸಮಾಜದಲ್ಲಿ ಈಗ ಯಾವ ವ್ಯವಸ್ಥೆ ಇದೆ ಎನ್ನುವುದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗದು ಸುಲಭವಾಗಿ ಅರ್ಥವಾಗುತ್ತದೆ ಎಂದರು.

ನಟ ಗಣೇಶ್‌ರಾವ್ ಕೇಸರಕರ್ ಮಾತನಾಡಿ ಬಾರ್‌ನಿಂದಾಗುವ ಅನುಕೂಲ, ಅನಾನುಕೂಲ ಏನೆಂದು ಈ ಚಿತ್ರದಲ್ಲಿ ತೋರಿಸಿದ್ದಾರೆ, ನಾನು ಪೊಲೀಸ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ನಾನು ಶಿಳ್ಳೆ ಎಂಬ ಪಾತ್ರ ಮಾಡಿದ್ದೇನೆ ಎಂದು ನಟ ಹರೀಶ್ ರಾಜ್ ತಿಳಿಸಿದರು. ನಾನು ಈವರೆಗೂ ಹೆಚ್ಚು ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ ಎಂದು ನಟಿ ಮೀನಾಕ್ಷಿ ಹೇಳಿದರು.

ನಿರ್ಮಾಪಕ ಟಿ.ಎಂ.ಸೋಮರಾಜು, ಹರೀಶ್‌ರಾಜ್, ಶಿವಾನಿ, ಮೀನಾಕ್ಷಿ, ಡಾ.ರಾಜಶೇಖರ್ ಎಸ್ ಎನ್, ಗಣೇಶ್‌ರಾವ್, ಆರಾಧ್ಯ, ಪ್ರೇರಣಾ, ಚೈತ್ರ, ಎಸ್ಕಾರ್ಟ್ ಶ್ರೀನಿವಾಸ್, ಕೆಂಪೇಗೌಡ ಮುಂತಾದವರು “ಲೇಡೀಸ್ ಬಾರ್” ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ, ವೀನಸ್‌ಮೂರ್ತಿ ಅವರ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಡಾ. ಸುಭಾಷಿಣಿ ಆರ್.ಎಸ್ ಈ ಚಿತ್ರದ ಸಹ ನಿರ್ಮಾಪಕರು.

Categories
ಸಿನಿ ಸುದ್ದಿ

ಫೆಬ್ರವರಿ 16ಕ್ಕೆ ಅಲೆಮಾರಿ ಬದುಕು: ವಿಭಿನ್ನ ಕಥೆಯಿರುವ ಚಿತ್ರ ತೆರೆಗೆ

ದಿವ್ಯಕುಮಾರ್ ಎಚ್.ಎನ್. ನಿರ್ಮಾಣದ ಹಾಗೂ ಸಿದ್ದು ಸಿ ಕಟ್ಟಿಮನಿ ನಿರ್ದೇಶನದ “ಅಲೆಮಾರಿ ಈ ಬದುಕು” ಚಿತ್ರ ಫೆಬ್ರವರಿ 16 ರಂದು ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸ ಹಾಗೂ ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು “ಅಲೆಮಾರಿ” ಗಳು. ಒಂದು ಹಂತ ತಲುಪಬೇಕೆಂದು ಅಲೆದು, ಅಲೆದು ಇಂದು ಇಲ್ಲಿ ಬಂದು ಕುಳಿತ್ತಿದ್ದೇವೆ. “ಅಲೆಮಾರಿ”ಗಳ ಕುರಿತಾಗಿಯೇ ನಮ್ಮ ಚಿತ್ರದ ಕಥೆ ಇದೆ. ” “ಪ್ರೇಮಪೂಜ್ಯಂ” ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನವನ್ನು ನಾನೇ ಮಾಡಿದ್ದೇನೆ‌. ಫೆಬ್ರವರಿ 16ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ತಿಳಿಸಿದರು.

ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಖಂಡಿತಾವಾಗಿಯೂ ಈ ಚಿತ್ರ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ದಿವ್ಯಕುಮಾರ್.

ಚಿತ್ರದಲ್ಲಿ ಐದು ಹಾಡುಗಳಿದೆ. ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಹಾಗೂ ಮನೋಜ್ ಸೌಗಂದ್ ಬರೆದ್ದಿದ್ದಾರೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ತ್ಯಾಗರಾಜ ಎಂ.ಎಸ್, ಹಾಡುಗಳ ಹಾಗೂ ಹಾಡಿದವರ ಬಗ್ಗೆ ಪರಿಚಯ ಮಾಡಿದರು. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

ಈ ಚಿತ್ರತಂಡದವರು ಹಾಡುಗಳನ್ನು ನನಗೆ ತೋರಿಸಿದಾಗ ಬಹಳ ಇಷ್ಟವಾಯಿತು. ಬೇರೆ ಬೇರೆ ಕಡೆ ಹರಿಯುವ ನದಿಗಳು ಸಮುದ್ರವನ್ನು ಸೇರಿದಂತೆ. ಈ ತಂಡದವರು ಬೇರೆ ಬೇರೆ ಕಡೆಯಿಂದ ಬಂದು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳನ್ನು ಕೇಳಿ ಆನಂದಿಸಿ ಎಂದರು ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ.

ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಜೊತೆಗೆ ಸಂಕಲನಕಾರನಾಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ಶ್ರೀಧರ್ ಅಟವಿ ತಿಳಿಸಿದರು.

ನಟರಾದ ಸಂದೀಪ್, ರಾಘವೇಂದ್ರ ಸಿ ಕಟ್ಟಿಮನಿ ನಟಿಯರಾದ ಸಹನ ಹಾಗೂ ನೀಲಾಂಬಿಕ ಮುಂತಾದವರು “ಅಲೆಮಾರಿ ಈ ಬದುಕು” ಚಿತ್ರದ ಬಗ್ಗೆ ಮಾತನಾಡಿದರು.

error: Content is protected !!