Categories
ಸಿನಿ ಸುದ್ದಿ

ತಮ್ಮನ ಸಿನಿಮಾಗೆ ಜಗ್ಗೇಶ್ ಸಾಥ್: ಉಂಡೆನಾಮ ಟ್ರೇಲರ್ ರಿಲೀಸ್; ಏಪ್ರಿಲ್ 14 ಚಿತ್ರ ಬಿಡುಗಡೆ

ಬಹಳ ವರ್ಷಗಳ ನಂತರ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಉಂಡೆನಾಮ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್ , ಬಹಳ ವರ್ಷಗಳ ನಂತರ ನಟಿಸಿರುವ ಚಿತ್ರವಿದು. “ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ ಇವನ ಹಾಗೆ ನಾನು ಕಾಮಿಡಿ ಕಲಿಯಬೇಕು” ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್ ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ.
ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಜಗ್ಗೇಶ್ ಹಾರೈಸಿದರು.

ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಏಪ್ರಿಲ್ 14 ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ನಾಯಕ ಕೋಮಲ್ ಕುಮಾರ್.

ಮೊದಲ ಲಾಕ್ ಡೌನ್ ನಲ್ಲಿ ಕಥೆ ಬರೆದೆ. ಆನಂತರ ನಿರ್ಮಾಪಕ ನಂದಕಿಶೋರ್ ಅವರ ಬಳಿ ಕಥೆ ಹೇಳಿದಾಗ, ಅವರು ಈ ಚಿತ್ರವನ್ನು ಕೋಮಲ್ ಅವರು ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ. ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ. ಸಹಕಾರ ನೀಡಿದ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನನ್ನ ಅಭಿನಂದನೆ ಎಂದರು ನಿರ್ದೇಶಕ ಕೆ.ಎಲ್ ರಾಜಶೇಖರ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಅವರಿಗೆ ಧನ್ಯವಾದ. ಇಡೀ ತಂಡದ ಶ್ರಮದಿಂದ “ಉಂಡೆನಾಮ” ಚಿತ್ರ ಚೆನ್ನಾಗಿ ಬಂದಿದೆ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕರಾದ ಟಿ.ಆರ್ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್.

ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ತಬಲನಾಣಿ, ಅಪೂರ್ವ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರೈತ ನೀನೇ ಭಗವಂತ, ನೀನೇ ಶ್ರೀಮಂತ ! ಹೀಗೊಂದು ಶ್ರೀಮಂತಭರಿತ ಚಿತ್ರ!!

ಎಲ್ಲರೂ ಬರೀ ಬಾಯಿ ಮಾತಲ್ಲೇ ರೈತ ರೈತ ಅಂತ ಹೇಳೋದಷ್ಟೆ. ಆದರೆ, ರೈತನ ನಿಜವಾದ ನೋವು, ಸಂಕಷ್ಟಗಳಿಗೆ ಸ್ಪಂದಿಸುವ ಗುಣವಂತರ ಸಂಖ್ಯೆ ತೀರಾ ಕಡಿಮೆ. ಹಣ ಇದ್ದ ಮಾತ್ರಕ್ಕೆ ಅವರನ್ನು ಶ್ರೀಮಂತರು ಅಂತ ಕರೆಯಬೇಕಾ? ಹಣ ಇರೋರೆಲ್ಲರೂ ಶ್ರೀಮಂತರೆನಾ? ರೈತರೂ ಕೂಡ ಶ್ರೀಮಂತರೇ! ಹೀಗಂತ ಹೊಸ ತಂಡವೊಂದು ರೈತರನ್ನು ನಿಜವಾದ ಶ್ರೀಮಂತ ಎಂದು ಬಣ್ಣಿಸಿದೆ. ಆ ಕುರಿತಾಗಿಯೇ’ ಶ್ರೀಮಂತ ಸಿನಿಮಾ ಮಾಡಿದೆ. ಈಗಾಗಲೇ ತೆರೆಗೆ ಅಪ್ಪಳಿಸಲು ಸಜ್ಜಾದ ಶ್ರೀಮಂತ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ…

ಹೌದು, ನಿಜ ಅರ್ಥದಲ್ಲಿ ರೈತರೂ ಶ್ರೀಮಂತರು. ಈ ಹಿಂದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ‘ಬಂಗಾರದ ಮನುಷ್ಯ’ ಸಿನಿಮಾದಲ್ಲೇ ರೈತರ ಮಹತ್ವ ಸಾರುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಇಲ್ಲೇಕೆ ರೈತರ ವಿಷಯ ಅನ್ನೋ ಪ್ರಶ್ನೆ ಕಾಡಬಹುದು. ಅದಕ್ಕೆ ಕಾರಣ ‘ಶ್ರೀಮಂತ’.

ಹೌದು, ಶ್ರೀಮಂತ ಇದು ಅಪ್ಪಟ ದೇಸಿ ಸಿನಿಮಾ. ಅದರಲ್ಲೂ ರೈತರ ಬದುಕಿನ ಚಿತ್ರಣ ಇರುವ ಅರ್ಥಪೂರ್ಣ ಕಥಾಹಂದರದ ಚಿತ್ರ. ಈ ಚಿತ್ರದ ಕಥೆ ರೈತರ ಸುತ್ತವೇ ತಿರುಗಲಿದೆ. ಕಥೆಗೆ ಪೂರಕವಾಗಿ ಶ್ರೀಮಂತ ಶೀರ್ಷಿಕೆ ಇಡಲಾಗಿದೆ.

ರೈತನಾದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಈ ಸಿನಿಮಾದ ಆಕರ್ಷಣೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಸೋನುಸೂದ್, ಈಗ ಶ್ರೀಮಂತ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೈತರಾಗಿ ಅವರಿಲ್ಲಿ ಯಾರ ವಿರುದ್ಧ ಹೋರಾಡುತ್ತಾರೆ, ರೈತರ ಬವಣೆ, ಕಷ್ಟಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಅನ್ನೋದು ಹೈಲೈಟ್.

ಈ ಸಿನಿಮಾಗೆ ಹಾಸನ್ ರಮೇಶ್ ನಿರ್ದೇಶಕರು. ಈ ಚಿತ್ರದಲ್ಲಿ ರೈತನೇ ನಿಜವಾದ ಶ್ರೀಮಂತ ಎಂದು ಹೇಳಹೊರಟಿದ್ದಾರೆ.

ನಾವು ಎಷ್ಟೇ ಮುಂದುವರಿದರೂ ರೈತನ ಕೊಡುಗೆ ನಮಗೆ ಬಹಳ ಮುಖ್ಯ ಎಂಬ ಸಂದೇಶದ ಜೊತೆ ರೈತನ ಬದುಕು, ಬವಣೆಗಳೊಂದಿಗೆ ಸ್ನೇಹ, ಪ್ರೀತಿ, ಬಾಂಧವ್ಯದ ಕಥೆ ಹೇಳುವ ಚಿತ್ರವಿದು. ನಾರಾಯಣಪ್ಪ, ಸಂಜಯ್‌ಬಾಬು ಹಾಗೂ ಹಾಸನ್ ರಮೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ನಾದ ಬ್ರಹ್ಮ ಹಂಸಲೇಖ ಅವರಿಲ್ಲಿ ಎಂಟು ಅರ್ಥಪೂರ್ಣ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಎಸ್. ಪಿ. ಬಿ. ಅವರು ಹಾಡಿರುವ ಕೊನೆಯ ಹಾಡು ಈ ಚಿತ್ರದಲ್ಲಿದೆ ಎಂಬುದು ವಿಶೇಷ.

ಇನ್ನು, ಯುವ ನಟ ಕ್ರಾಂತಿ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ , ವೈಷ್ಣವಿ ಚಂದ್ರನ್ ಮೆನನ್ ಇದ್ದಾರೆ. ಅಲ್ಲದೆ ನಟ ಚರಣರಾಜ್ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ನಿರ್ದೇಶಕ ಹಾಸನ್ ರಮೇಶ್ ಹೇಳೋದು ಹೀಗೆ…
ಹಣ ಇರುವವರು ಮಾತ್ರವೇ ಶ್ರೀಮಂತರಲ್ಲ. ನಿಜವಾದ ಆರ್ಥದಲ್ಲಿ ಶ್ರೀಮಂತ ಎಂದರೆ ರೈತ. ರೈತ ಒಂದು ವ್ಯಕ್ತಿಯಲ್ಲ, ಶಕ್ತಿ. ಆತನದು ಸಂಭ್ರಮದ ಬದುಕು ಎಂದು ಶ್ರೀಮಂತ ಚಿತ್ರದ ಮೂಲಕ ಹೇಳಹೊರಟಿದ್ದೇವೆ.

ದೇಶದಲ್ಲಿ ಶೇ.80ರಷ್ಟು ರೈತರಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಚಿತ್ರದಲ್ಲಿ ಎಲ್ಲ ಮನರಂಜನಾತ್ಮಕ ಅಂಶಗಳಿವೆ. ನಾಯಕಿ ಹಳ್ಳಿಯಲ್ಲೂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. 8 ಹಾಡುಗಳ ಜೊತೆ ಒಗಟು, ಗಾದೆಗಳೂ ಚಿತ್ರದಲ್ಲಿವೆ ಎಂಬುದು ವಿಶೇಷ ಎನ್ನುತ್ತಾರೆ ಅವರು.

ನಟಿ ಕಲ್ಯಾಣಿ ಇಲ್ಲಿ ನಾಯಕನ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ ಇತರರು ಇದ್ದಾರೆ. ಕೆ.ಎಂ.ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಅವರು ಕ್ಯಾಮೆರಾ ಹಿಡಿದಿದ್ದಾರೆ. ಮಾಸ್ ಮಾದ ಸಾಹಸವಿದೆ. ಮದನ್ ಹರಿಣಿ, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಈಗಾಗಲೇ ಭರ್ಜರಿ ಪ್ರಚಾರದಲ್ಲಿರುವ ಸಿನಿಮಾ ಏಪ್ರಿಲ್ ನಲ್ಲಿ ರಿಲೀಸ್ ಗ್ರ್ಯಾಂಡ್ ಆಗಿ ಆಗುತ್ತಿದೆ.

Categories
ಸಿನಿ ಸುದ್ದಿ

ಸಚಿವರ ಮುಂದೆ ಮಾಜರ್! ಹೊಸಬರ ಮಾಜರ್ ಹಾಡು ರಿಲೀಸ್

ಗೀತರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ ನಿರ್ದೇಶನದ “ಮಾಜರ್” ಚಿತ್ರದ ಹಾಡುಗಳನ್ನು ಸಚಿವ ಕೆ‌.ಗೋಪಾಲಯ್ಯ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. A2 music ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ “ಮಾಜರ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ.

ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ನೀಡುವ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಬರೀ ಇಷ್ಟೇ ಅಲ್ಲ. ಲವ್ ಸ್ಟೋರಿ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ಹೇಳಿದರು.

ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಆಸೆಯಿತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಿದ್ದೇನೆ ಎಂದರು ನಿರ್ಮಾಪಕ ಮುರುಗನಂದನ್.

ಹಾಡುಗಳ ಬಗ್ಗೆ ಎ.ಟಿ.ರವೀಶ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್ ಹಾಗೂ ನೃತ್ಯ ನಿರ್ದೇಶಕರಾದ ಸೈ ಗೀತ, ವಾಸ್ತು ನಾಗ “ಮಾಜರ್” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಬರಗೂರು ರಾಮಚಂದ್ರಪ್ಪರ ಚಿಣ್ಣರ ಚಂದ್ರ: ಬರಗೂರು ಮೊಮ್ಮಗ ಆಕಾಂಕ್ಷ್ ಬರಗೂರು ಹೀರೋ!

ಬರಗೂರು ರಾಮಚಂದ್ರಪ್ಪನವರು ಮಕ್ಕಳ ಚಿತ್ರವೊಂದನ್ನು ಸದ್ದಿಲ್ಲದೆ ಸಿದ್ಧ ಮಾಡಿದ್ದಾರೆ. ತಮ್ಮ ರಚನೆಯ ‘ಅಡಗೂಲಜ್ಜಿ’ ಎಂಬ ಕಾದಂಬರಿ ಆಧರಿಸಿದ ಈ ಚಿತ್ರಕ್ಕೆ ‘ಚಿಣ್ಣರ ಚಂದ್ರ’ ಎಂದು ಹೆಸರಿಡಲಾಗಿದೆ. ಬರಗೂರರ ಮೊಮ್ಮಗ ಆಕಾಂಕ್ಷ್
ಬರಗೂರ್ ಈ ಹಿಂದೆ ಬಯಲಾಟದ ಭೀಮಣ್ಣ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಪುಟ್ಟ ಪಾತ್ರ ವಹಿಸಿದ್ದು ‘ಚಿಣ್ಣರ ಚಂದ್ರ’ದಲ್ಲಿ ನಾಯಕ.


ಆಕಾಂಕ್ಷ್ ಬರಗೂರ್ ಜೊತೆಗೆ ಈಶಾನ್ ಪಾಟೀಲ್, ನಿಕ್ಷೇಪ್, ಅಭಿನವ್ ನಾಗ್, ಶಡ್ಜಹೆಗ್ಡೆ ಇತರೆ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಂದರರಾಜ್,
ರೇಖಾ, ರಾಧಾ ರಾಮಚಂದ್ರ ಅವರಲ್ಲದೆ ರಾಘವ್, ಸುಂದರರಾಜ ಅರಸು, ಹಂಸ, ವೆಂಕಟರಾಜು, ಗೋವಿಂದರಾಜು, ವತ್ಸಲಾ ಮೋಹನ್, ರಾಜಪ್ಪ ದಳವಾಯಿಯವರು ಕಾಣಿಸಿಕೊಂಡಿದ್ದಾರೆ.


‘ಚಿಣ್ಣರ ಚಂದ್ರ’ ಚಿತ್ರ ಪ್ರಮುಖವಾಗಿ ಮಕ್ಕಳಿಗೆ ಅಗತ್ಯವಾದ ಉತ್ತಮ ಶಿಕ್ಷಣ, ಕ್ರೀಡೆ ಮುಂತಾದ ಆಶಯಗಳ ಜೊತೆಗೆ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುತ್ತದೆ. ಈ ಸಿನಿಮಾದಲ್ಲಿ ಅಡಗೂಲಜ್ಜಿಯ ಪಾತ್ರದ ಮೂಲಕ
ಮಕ್ಕಳಿಗೆ ಜನಪದ ಕತೆಗಳ ಪರಿಚಯವಾಗುತ್ತದೆ.

ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಧಕ್ಕೆ ಬರುತ್ತದೆಯೆಂದುಕೊಂಡಾಗ
ಅಡಗೂಲಜ್ಜಿಯು ಸಿನಿಮಾ ಕತೆಗಳನ್ನೇ ಜನಪದ ಕತೆಗಳನ್ನಾಗಿಸಿ ಮಕ್ಕಳು ಮತ್ತು ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಕಥನದ ಮಹತ್ವದ ಜೊತೆಗೆ
ಜಾನಪದವು ಆಧುನಿಕ ರೂಪ ಪಡೆಯುವ ಹೊಸ ವಿಧಾನವನ್ನು ನಿರೂಪಿಸಲಾಗಿದೆ. ಜಾನಪದಕ್ಕೆ ಅಂತ್ಯವಿಲ್ಲವೆಂದು ಧ್ವನಿಸಲಾಗಿದೆ. ಸಿನಿಮಾ ಕೂಡ
ಒಂದು ಜಾನಪದವಾಗುವುದನ್ನು ಸಾಂಕೇತಿಕವಾಗಿ ಹೇಳಲಾಗಿದೆ.

ಮಕ್ಕಳು ಈಈ ಹಿನ್ನೆಲೆಯಲ್ಲಿ ಉತ್ತಮ ಅಭಿರುಚಿಯ ಸಿನಿಮಾಗಳಿಗಾಗಿ ಒತ್ತಾಯಿಸಿ ನೈತಿಕ
ಮೌಲ್ಯವನ್ನು ಮೆರೆಯುತ್ತಾರೆ. ಹೀಗೆ ಶಿಕ್ಷಣ, ಸಿನಿಮಾ, ಜನಪದ
ಕಥನಗಳೊಂದಾದ ವಿಶಿಷ್ಟತೆಯನ್ನು ಈ ಸಿನಿಮಾದಲ್ಲಿ ಕಾಣಬಹುದು.
‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಗೋವಿಂದರಾಜ್ ಅಲಿಯಾಸ್ ಜಿಗಣಿ ರಾಜಶೇಖರ್
ಅವರು ನಿರ್ಮಾಣ ಮಾಡಿದ್ದು, ಬರಗೂರರು ಚಿತ್ರಕತೆ, ಸಂಭಾಷಣೆ, ಗೀತರಚನೆ
ಮಾಡಿ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ
ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಸ್ಟುಟೆಂಡ್ಸ್ ಸ್ಕ್ಯಾಮ್! ವಿದ್ಯಾರ್ಥಿಗಳು ರಿಲೀಸ್ ಮಾಡಿದ ಪೋಸ್ಟರ್

ಇಂದಿನ ವಿದ್ಯಾರ್ಥಿಗಳೆ ಮುಂದಿನ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕುರಿತಾದ ಕಥಾಹಂದರ ಹೊಂದಿರುವ “SCAM (1770)” ಚಿತ್ರ ಬರುತ್ತಿದೆ.

ಡಿ.ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು 20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು. ಆ ತಂಡಗಳ ನಾಯಕರು(ವಿದ್ಯಾರ್ಥಿಗಳು) “SCAM (1770)” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾನೆ SCAM (1770) ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ.

ಡಿ.ಕ್ರಿಯೇಷನ್ಸ್ ಇತ್ತೀಚೆಗೆ ಆಕ್ಟ್-1978 ಮತ್ತು 19.20.21 ಎಂಬ ಸದಭಿರುಚಿ ಚಿತ್ರಗಳನ್ನು ನೀಡಿದ್ದು, ದೇವರಾಜ್ ಆರ್ ಅವರ ನಿರ್ಮಾಣದ ಈ ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ನೇತ್ರಾವತಿ(ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರ ಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈಗಾಗಲೇ “SCAM (1770)” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. April 15th ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಅಭಿರಾಮಚಂದ್ರ ನಿಗೆ ಶಿವಣ್ಣ ಸಾಥ್: ಇದು ರಥ ಕಿರಣ್, ಸಿದ್ದು ಮೂಲಿಮನಿ ಚಿತ್ರ- ಟೀಸರ್ ನೋಡಿ ಸೆಂಚುರಿ ಸ್ಟಾರ್ ಹೇಳಿದ್ದು ಹೀಗೆ

ಅಭಿರಾಮಚಂದ್ರ ಟೀಸರ್ ಬಗ್ಗೆ ಶಿವಣ್ಣ ಹೇಳಿದ್ದೇನು?
ಅಭಿರಾಮಚಂದ್ರ ಟೀಸರ್ ರಿಲೀಸ್ ಮಾಡಿದ್ದು ಬಹಳ ಖುಷಿಯಾಯ್ತು. ನಾಗೇಂದ್ರ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ತುಂಬಾ ಬ್ಯೂಟಿಫುಲ್ ವಿಷ್ಯೂವಲ್ಸ್ ಇತ್ತು. ಬರೀ ಮಕ್ಕಳ ಕಥೆ ಇದೆ. ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ. ಅದನ್ನು ನಾವು ಹೇಳೋದಿಕ್ಕಿಂತ ಡೈರೆಕ್ಟರ್ ಹೇಳಿದರೆ ಒಳ್ಳೆಯದು. ಟೀಸರ್ ನೋಡ್ತಿದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ತರ ಹಿಟ್ ಆಗಲಿ..ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದ್ದು, ನಾನು ನೋಡ್ತೇನೆ. ನೀವು ನೋಡಿ.. ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ ಅಭಿರಾಮಚಂದ್ರ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.

ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಸಿನಿಮಾಕ್ಕಿದೆ. ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಎ.ಜಿ. ಎಸ್ ಎಂಟಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಾ ಕೊನೆ ಹಂತದಲ್ಲಿರುವ ಅಭಿರಾಮಚಂದ್ರ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಶಿವಾಜಿ ಸುರತ್ಕಲ್ 2 ಟ್ರೇಲರ್ ಹೊರಬಂತು: ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್

ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

“ಶಿವಾಜಿ ಸುರತ್ಕಲ್ 2” ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ‌ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಏಪ್ರಿಲ್ 14 ರಂದು ನಮ್ಮ ಶಿವಾಜಿ ಮತ್ತೆ ಹೊಸ ಕೇಸ್ ಹೊತ್ತು ಬರಲಿದ್ದಾನೆ. ಎಲ್ಲರಲ್ಲೂ ಮನೆ ಮಾಡಿರುವ “ಮಾಯಾವಿ” ಯಾರು? ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.

ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಚೆನ್ನಾಗಿದೆ. ಇದೇ ಏಪ್ರಿಲ್ 14 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದರು ನಟ ರಮೇಶ್ ಅರವಿಂದ್.

ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಅನೂಪ್ ಗೌಡ.

ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಅರ್ಜುನ್ ಜನ್ಯ45 ಸಿನಿಮಾಗೆ ನಾಯಕಿ ಸಿಕ್ಕಳು! ನನ್ನರಸಿ ರಾಧೆ ಧಾರಾವಾಹಿ ಹುಡುಗಿ ಕೌಸ್ತುಭ ಮಣಿ ಆಯ್ಕೆ

ಅರ್ಜುನ್ ಜನ್ಯ ಮೊದಲ ಸಲ ಸಿನಿಮಾ ನಿರ್ದೇಶನ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆ ಸಿನಿಮಾದಲ್ಲಿ ಶಿವರಾಜಕುಮಾರ್, ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್ ಬಿ.ಶೆಟ್ಟಿ ಕೂಡ ಆಕರ್ಷಣೆ. ಸದ್ಉಕ್ಕೆ ಒಬ್ಬ ನಾಯಕಿಯ ಅಯ್ಕೆ ನಡೆದಿದ್ದು, ಆ ಸುದ್ದಿ ಹೊರಬಿದ್ದಿದೆ.

ಸದಭಿರುಚಿ ಚಿತ್ರಗಳ ನಿರ್ಮಾಪಕರಾದ ರಮೇಶ್ ರೆಡ್ಡಿ ನಿರ್ಮಾಣದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರಥಮ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ “45”.

ಈ ಚಿತ್ರದ ನಾಯಕಿಯಾಗಿ ಕೌಸ್ತುಭ ಮಣಿ ಆಯ್ಕೆಯಾಗಿದ್ದಾರೆ.
ಕಲರ್ಸ್ ಕನ್ನಡದ “ನನ್ನರಸಿ ರಾಧೆ”, ಜೀ ತೆಲುಗಿನ ಪ್ರಸಿದ್ದ ಧಾರಾವಾಹಿ ಹಾಗೂ ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಫಿಸಿಕ್ಸ್ ಹುಡುಗ ಈಗ ಚಾಕೊಲೇಟ್ ಬಾಯ್!

ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ತಮ್ಮ ನಟನೆಯಿಂದ ಭರವಸೆ ಮೂಡಿಸಿದ ಬಹು ಭಾಷಾ ನಟ ಸುಮುಖ, ಈಗ ಕನ್ನಡದಲ್ಲಿ ಮತ್ತೊಂದು ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ನಿಧಿ ಹೆಗಡೆ ಇದ್ದಾರೆ. ಇನ್ನೂ ಹೆಸರಿಡಬೇಕಾದ, ಸ್ನೇಹ ಹಾಗೂ ಸಹೋದರತ್ವದ ಸಂದೇಶ ಹೊತ್ತಿರುವ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ಮುಗಿದಿದೆ.


ಚಿತ್ರ ಕಥೆಯ ತಿರುಳೇನೆಂದು ಕೇಳಿದಾಗ “ಇದೊಂದು ಸಹೋದರತ್ವ ಅಥವಾ ಸ್ನೇಹದ ಬಾಂಧವ್ಯ ಸಾರುವ ಚಿತ್ರ” ಎನ್ನುತ್ತಾರೆ.
ಫಿಸಿಕ್ಸ್ ಟೀಚರ್ ಒಂದು ಗಂಭೀರ ಕಥಾವಸ್ತುವಿರುವ ಚಿತ್ರವಾಗಿತ್ತು. ಹಾಗೆಯೇ ಅವರ ಪಾತ್ರ ಕೂಡ ಅದೇ ಸ್ವರೂಪದ್ದಾಗಿತ್ತು ಹಾಗೂ ಮನೋಜ್ಞವಾಗಿತ್ತು ಕೂಡ. ಆದರೆ ಈ ಚಿತ್ರದಲ್ಲಿ ಉತ್ಸಾಹದ ಬುಗ್ಗೆಯಾಗಿರುವ ಹಾಸ್ಯವನ್ನು ಪ್ರೀತಿಸುವ ಚಾಕೊಲೇಟ್ ಬಾಯ್ ಪಾತ್ರದಲ್ಲಿ ಸುಮುಖ ಕಾಣಿಸಿಕೊಳ್ಳುತ್ತಿದ್ದಾರೆ.


ನಿರ್ದೇಶಕ ಉದಯ್ ಶೆಟ್ಟಿ ಸಾರಥ್ಯದಲ್ಲಿ ಎರಡನೇ ಹಂತದ ಚಿತ್ರೀಕರಣ ಇನ್ನೇನು ಪ್ರಾರಂಭವಾಗಬೇಕಿದೆ. ಅಕ್ಷಯ್ ಶೆಟ್ಟಿ ಜೊತೆಗೂಡಿ ಕಥೆ ಹಾಗೂ ಚಿತ್ರಕಥೆ ಹೆಣೆದಿದ್ದಾರೆ ಉದಯ್ ಶೆಟ್ಟಿ.
ಇದಲ್ಲದೇ ಈಗಾಗಲೇ ಚಿತ್ರೀಕರಣ ಮುಗಿಸಿರುವ ಕನ್ನಡ ಹಾಗೂ ಮರಾಠಿಯಲ್ಲಿ ನಿರ್ಮಾಣವಾಗಿರುವ ದ್ವಿಭಾಷೆಯ ಚಿತ್ರ “ರಾಜಸ್ಥಾನ ಡೈರೀಸ್” ತೆರೆಗೆ ಬರಲು ಸಿದ್ಧವಾಗಿದೆ. ಮಾನ್ವಿತ ಕಾಮತ್ ಜೋಡಿಯಾಗಿ ನಟಿಸಿರುವ ಸುಮುಖ “ಇದೊಂದು ಔಟ್ ಅಂಡ್ ಔಟ್ ಲವ್ ಸ್ಟೋರಿ” ಎನ್ನುತ್ತಾರೆ.

ಮರಳುಗಾಡಿನ ಸೌಂದರ್ಯದ ಜೊತೆ ಜೊತೆಗೆ ಹೆಣೆದಿರುವ ಪ್ರೇಮಕಥೆಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸುಮುಖ ಅವರ ತಾಯಿ ನಂದಿತಾ ಯಾದವ್ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ಪ್ರಜ್ವಲ್ ಮಾಫಿಯಾ ಆಟ ಮುಗೀತು! ಜೂನ್ ಗೆ ಸಿನಿಮಾ ಬಿಡುಗಡೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಮಾಫಿಯಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಅರವತ್ತು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದೆ. “ಮಾಫಿಯಾ” ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಹಾಗೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಇದು ಅವರ ನಟನೆಯ ಮೂವತ್ತೈದನೇ ಚಿತ್ರವೂ ಹೌದು.


ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿವೆ. ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ಹತ್ತು ದಿನಗಳ ಕಾಲ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಕುಮಾರ್ ಬಿ.

ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

error: Content is protected !!