Categories
ಸಿನಿ ಸುದ್ದಿ

ಗಿರ್ಕಿ ಟೀಸರ್‌ ಸದ್ದು ಜೋರು ಗುರು!‌ ಗೆಳೆಯ ವಿಶ್ವನಿಗೆ ಶುಭ ಕೋರಿದ ಶರಣ್…

ಹಾಸ್ಯನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, “ಗಿರ್ಕಿ” ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ವಾಸುಕಿ ಭುವನ್ ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ವೀರೇಶ್ ಪಿ.ಎಂ. ನಿರ್ದೇಶನದ ಈ ಚಿತ್ರದ ಟೀಸರ್ ಖ್ಯಾತ ನಟ ಶರಣ್ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ಟೀಸರ್ ಈಗ ಎಲ್ಲೆಡೆ ಜನಪ್ರಿಯವಾಗಿದೆ.

ಈ ವೇಳೆ ಮಾತನಾಡಿದ ಶರಣ್‌, ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭವಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.‌

ನಮ್ಮ ಸ್ನೇಹಕ್ಕೆ ಬೆಲೆಕೊಟ್ಟು ಬಂದಿರುವ ಶರಣ್ ಅವರಿಗೆ ಧನ್ಯವಾದ. ನಾನು ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಿರ್ಮಾಣದ ಜೊತೆಗೆ ನಾನು ಪ್ರಮುಖ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮೇನಲ್ಲಿ ಬಿಡುಗಡೆಯಾಗಲಿದೆ ಎಂದರು ವಿಶ್ವ.

“ಗಿರ್ಕಿ” ಎಂದರೆ ಸುತ್ತಾಟ ಹಾಗೂ ಪರ್ಯಟನೆ. ಒಂದೇ ತರಹದ ಕಥೆಯಲ್ಲ. ಲವ್, ಕಾಮಿಡಿ, ಕೌಟುಂಬಿಕ ಎಲ್ಲಾ ತರಹದ ಮಿಶ್ರಣ ಈ “ಗಿರ್ಕಿ”. ಹೆಚ್ಚಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಚಿತ್ರ ಚೆನ್ನಾಗಿದೆ. ನೋಡಿ ಹರಸಿ ಎಂ ಬುದು ನಿರ್ದೇಶಕ ವೀರೇಶ್ ಮಾತು.

ಹಿಂದೆ ಇದೇ ಸಭಾಂಗಣದಲ್ಲಿ ನಾನು ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವೊಂದರ ಸಮಾರಂಭ ನಡೆದಿತ್ತು. ಆ ತಂಡದವರು ನನ್ನ ವೇದಿಕೆಗೆ ಕರೆಯದೆ ಅವಮಾನ ಮಾಡಿದ್ದರು. ಅದನ್ನು ಗಮನಿಸಿದ್ದ ವಿಶ್ವ ಅವರು, ನಿನ್ನನ್ನು ಹೀರೋ ಮಾಡುತ್ತೇನೆ ಎಂದಿದ್ದರು. ಅಂದಂತೆ ಈಗ ಹೀರೋ ಮಾಡಿದ್ದಾರೆ ಅವರಿಗೆ ಹಾಗೂ ಇಡೀ ತಂಡಕ್ಕೆ ನಾನು ಆಭಾರಿ ಎಂದು ನಾಯಕ ವಿಲೋಕ್ ತಿಳಿಸಿದರು.

ನಾಯಕಿಯರಾದ ದಿವ್ಯಾ ಉರುಡುಗ ಹಾಗೂ ರಾಶಿ ಮಹದೇವ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಸಂಗೀತ ಹಾಗು ಹಾಡುಗಳ ಕುರಿತು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿದರು.

Categories
ಸಿನಿ ಸುದ್ದಿ

ಬಾಂಡ್ ರವಿಗೆ ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್: ಪ್ರಮೋದ್ ಬೆನ್ನುತಟ್ಟಿ ಶುಭಕೋರಿದ ಧ್ರುವ-ವಿನೋದ್

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಪ್ರಮೋದ್ ನಾಯಕನಾಗಿ ನಟಿಸುತ್ತಿರುವ ಬಾಂಡ್ ರವಿ ಸಿನಿಮಾಗೆ ಪೊಗರು ಪೋರ ಧ್ರುವ ಹಾಗೂ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಗುರುವಾರ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ-ವಿನೋದ್ ಪ್ರಮೋದ್ ಬೆನ್ನುತಟ್ಟಿ ಇಡೀ ಸಿನಿಮಾ ಟೀಂಗೆ ಶುಭಾಶಯ ಕೋರಿದರು.

ವಿನೋದ್ ಕ್ಲ್ಯಾಪ್..ಧ್ರುವ ಕ್ಯಾಮೆರಾಗೆ ಚಾಲನೆ

ಬಾಂಡ್ ರವಿ ಸಿನಿಮಾಗೆ ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡಿದ್ರೆ, ಧ್ರುವ ಸರ್ಜಾ ಕ್ಯಾಮೆರಾಗೆ ಚಾಲನೆ ನೀಡಿದರು. ಬಳಿಕ ಮಾತಿಗಿಳಿದ ವಿನೋದ್, ಧ್ರುವ ನನ್ನ ತಮ್ಮ. ನನ್ನ ಕಡೆಯಿಂದ ಕ್ಲ್ಯಾಪ್ ಮಾಡಿಸಿದ್ದಕ್ಕೆ ಧನ್ಯವಾದ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ಬಳಿಕ ಧ್ರುವ ಸರ್ಜಾ, ವಿನೋದ್ ಪ್ರಭಾಕರ್ ನಮ್ಮಣ್ಣ ಎನ್ನುತ್ತಾ, ಸಿನಿಮಾದ ಟೈಟಲ್ ಕೇಳಿದರೆ ಫೀಲ್ಡ್ ಸಿನಿಮಾ ಅನಿಸುತ್ತದೆ. ಇದು ಪ್ರಾಮಿಸಿಂಗ್ ಸಿನಿಮಾ. ಪ್ರತಿಯೊಬ್ಬರಿಗೂ ಪ್ರೋತ್ಸಾಹ ಮಾಡಬೇಕು ಅಂತಾ ನೆಗೆಟಿವ್ ಕಮೆಂಟ್ ಮಾಡುವವರಿಗೆ ವಾರ್ನಿಂಗ್ ಕೊಟ್ರು.

ಪ್ರಮೋದ್, ನಾನು ಅಪ್ಪು ಸರ್ ಅಭಿಮಾನಿಯಾಗಿ ಬಾಂಡ್ ರವಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅಣ್ಣಾ ಬಾಂಡ್ ಸಿನಿಮಾದಲ್ಲಿ ಅಪ್ಪು ಸರ್ ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿ ಇರುತ್ತದೆ. ಹೀಗಾಗಿ ಅಪ್ಪು ಸರ್ ಮ್ಯಾನರಿಸಂ, ಆಕ್ಟಿಂಗ್ ಖದರ್ ನ್ನು ನೋಡಿ‌ ಕಲಿಯುತ್ತಿದ್ದೇನೆ. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ಫ್ಯಾಷನ್ ಪ್ರೊಡ್ಯೂಸರ್ ಎಂದರು.

ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಳೆದ‌ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಯುಗಾದಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು.
ಅಂದಹಾಗೆ, ಬಾಂಡ್ ರವಿ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು, ಈ‌ ಹಿಂದೆ ನರಸಿಂಹಮೂರ್ತಿ ಮಾದ ಮನಸಿ ಸಿನಿಮಾ ನಿರ್ಮಾಣ ಮಾಡಿದ್ದರು.

ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್&ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಶುಕ್ರವಾರದಿಂದಲೇ ಶೂಟಿಂಗ್ ನಡೆಯುತ್ತಿದ್ದು, ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಐವತ್ತು ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿದೆ.

Categories
ಸಿನಿ ಸುದ್ದಿ

ಕುಚಿಕು ಗೆಳೆಯನಿಗೆ ಸಿಂಪಲ್‌ ಸುನಿ ಹೆಲ್ಪ್!‌ ಇದು ಶಾರ್ಟ್‌ ಫ್ಯೂಚರ್‌ ಫಿಲ್ಮ್; ಓಟಿಟಿಯಲ್ಲಿ ಬರಲಿದೆ ಹೊಸಬರ ಹೆಲ್ಪ್‌ ಚಿತ್ರ…

ಕಿರುಚಿತ್ರಗಳು ಸಾಕಷ್ಟು ಪ್ರಭಾವಿಸುತ್ತವೆ. ಅದರಲ್ಲೂ ಹೊಸಬರು ಸಿನಿಮಾ ಮಾಡಲು ಹೊರಡುವ ಮುನ್ನ, ಮೊದಲ ಮೆಟ್ಟಿಲಂತೆ ಈ ಕಿರುಚಿತ್ರಗಳು. ಹಲವು ಕಿರುಚಿತ್ರಗಳ ಸಾಲಿಗೆ ಈಗ ಹೆಲ್ಫ್‌ ಎಂಬ ಹೊಸ ಕಿರುಚಿತ್ರ ಮೂಡಿಬಂದಿದ್ದು, ಏಪ್ರಿಲ್‌ 27ರಂದು ಈ ಚಿತ್ರ ರಿಲೀಸ್‌ ಆಗುತ್ತಿದೆ. ಇದು ಸಾಮಾನ್ಯನ ಜೀವನದಲ್ಲಾಗುವ ಏರಿಳಿತಗಳನ್ನಿಟ್ಟುಕೊಂಡು ಮಾಡಿರುವ ಕಿರುಚಿತ್ರ ಜೆರಿನ್ ಚಂದನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅಂದಹಾಗೆ, ಏಪ್ರಿಲ್ 27ರಂದು ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರವೊಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಕಿರುಚಿತ್ರದ ತಂಡಕ್ಕೆ ಶುಭ ಹಾರೈಸಲು ನಿರ್ದೇಶಕ ಸಿಂಪಲ್ ಸುನಿ ಆಗಮಿಸಿದ್ದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಜೆರಿನ್‌ ಚಂದನ್‌, ಕ್ಲಾಸ್ ರೂಮ್ ಕಥೆಗಳು ಅರ್ಥಗರ್ಭಿತವಾಗಿದ್ದವು. ಕಥೆ ಸಂದೇಶಗಳನ್ನು ತಲುಪಿಸಲು ಇದು ಸೂಕ್ತ ವೇದಿಕೆ ಎನಿಸಿತು. ಹೀಗಾಗಿ, ಈ ಮಾಧ್ಯಮ ಬಳಸಿಕೊಂಡು ಜೀವನದ ಏರಿಳಿತಗಳನ್ನು ತೋರಿಸಲು ಈ ಕಿರುಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ ಎಂದ ನಿರ್ದೇಶಕ ಜೆರಿನ್ ಚಂದನ್, ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ ಹೇಳಿದರು.

ಉತ್ತಮ ಸಂದೇಶವಿರುವ ಚಿತ್ರವನ್ನು ಮಾಡಿದ್ದೇವೆ. “ಹೆಲ್ಪ್” ಯಾವುದೇ ಕಾರಣಕ್ಕೂ ಕಿರುಚಿತ್ರ ಅನಿಸುವುದಿಲ್ಲ. ಸಿನಿಮಾ ರೀತಿಯಲ್ಲೇ ಮಾಡಿದ್ದೇವೆ. ಮೂವತ್ತು ನಿಮಿಷ ಕಳೆಯುವುದೇ ಗೊತ್ತಾಗದ ಹಾಗೆ ನಿರ್ದೇಶಕರು ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಏಪ್ರಿಲ್ 27 ರಂದು ಓಟಿಟಿಯಲ್ಲಿ ಈ ಕಿರುಚಿತ್ರ ಬಿಡುಗಡೆಯಾಗುತ್ತಿದೆ. 20 ರ ನಂತರ ಈ ಕಿರುಚಿತ್ರದ ಪ್ರದರ್ಶನ ಏರ್ಪಡಿಸುತ್ತೇವೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ. ನಾನು ಸಹ ಇದರಲ್ಲಿ ಒಂದು ಪಾತ್ರ ಮಾಡಿದ್ದೇನೆ ಎಂದರು ನಿರ್ಮಾಪಕ ಆದಿತ್ಯ.

ನಿರ್ದೇಶಕ ಜೆರಿನ್ ಅವರ ಜೊತೆ ಶಾಲೆಯಲ್ಲಿ ಕಳೆದ ಸವಿನೆನಪುಗಳನ್ನು ನೆನಪಿಸಿಕೊಂಡರು ನಿರ್ದೇಶಕ ಸಿಂಪಲ್ ಸುನಿ. ನನ್ನ ಮೊದಲ ಚಿತ್ರ “ಸಿಂಪಲಾಗೊಂದು ಲವ್ ಸ್ಟೋರಿ ” ಚಿತ್ರದಲ್ಲಿ ಜೆರಿನ್ ಎಂಬ ಪಾತ್ರ‌ ಬರುತ್ತದೆ. ಆ ಹೆಸರಿಡಲು ನನ್ನ ಈ ಗೆಳೆಯನೆ ಸ್ಪೂರ್ತಿ. ಈಗ “ಹೆಲ್ಪ್” ಎಂಬ ಕಿರುಚಿತ್ರ ಮಾಡಿದ್ದಾನೆ. “ಹೆಲ್ಪ್” ಎಂದರೆ ಈ ಕ್ಷಣಕ್ಕೆ ನೆನಪಾಗುವುದು ಪುನೀತ್ ಸರ್. ಅವರು ಮಾಡಿರುವ ಸಹಾಯ ಎಲ್ಲರಿಗೂ ಸ್ಪೂರ್ತಿ. ಜೆರಿನ್ ಅವರಿಂದ ಇನ್ನೂ ಉತ್ತಮ ಚಿತ್ರಗಳು ಮೂಡಿಬರಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಸಿಂಪಲ್ ಸುನಿ ಹಾರೈಸಿದರು.

ಕಿರುಚಿತ್ರದಲ್ಲಿ ನಟಿಸಿರುವ ವಿನಯ್ ನಾಗೇಶ್ ರಾವ್ ಹಾಗೂ ಛಾಯಾಗ್ರಾಹಕ ರಾಜಕುಮಾರ್ “ಹೆಲ್ಪ್” ಬಗ್ಗೆ ಮಾತನಾಡಿದರು.

ಅಭಿಜಿತ್, ಬಿ.ಸುರೇಶ್, ವೀಣಾ ಸುಂದರ್ , ಡಿ.ಎನ್. ಆದಿತ್ಯ, ನಿಶಾ ಸೇರಿದಂತೆ ಅನೇಕರು “ಹೆಲ್ಪ್” ನಲ್ಲಿ ನಟಿಸಿದ್ದಾರೆ.ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಹೊರ ಬಂತು ಪ್ರೀತ್ಸು ಸಾಂಗ್ಸ್! ಇದು ಇಳಯರಾಜ ಮ್ಯೂಸಿಕಲ್‌ ಸಿನಿಮಾ…

ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಇಳಯರಾಜ ಅವರು ಸಂಗೀತ ನೀಡಿರುವ ಹಾಗೂ ಕೆ.ಗಣೇಶನ್ ನಿರ್ದೇಶಿಸಿರುವ
“ಪ್ರೀತ್ಸು” ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಭಾ.ಮ.ಹರೀಶ್, ಟೇ.ಶಿ.ವೆಂಕಟೇಶ್ ಹಾಗೂ ರವಿ ವಿಠಲ್ ಇತರರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.

ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗಲ್ಲಿದ್ದೀನಿ. ನವಭಾರತ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ವಿಭಿನ್ನ ಕಥೆಯುಳ್ಳ “ಪ್ರೀತ್ಸು” ಚಿತ್ರವನ್ನು ನಿರ್ದೇಶನ ಮಾಡಿದ್ದೀನಿ. ನನಗೆ ನಿರ್ಮಾಣದಲ್ಲಿ ಮಲೇಷಿಯಾದ ಗಾನ ವಿನೋದನ್ ಸಾಥ್ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ನೀಡಿರುವುದು ನಿಜಕ್ಕೂ ಸಂತಸ ತಂದಿದೆ. ನನಗೆ ಇಳಯರಾಜ ಅವರು ಬಹುದಿನಗಳ ಪರಿಚಯ. ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಕೊನೆಯಲ್ಲಿ ಅವರು ಬರುವುದು ರದ್ದಾಯಿತು. ವಿಡಿಯೋ ಮೂಲಕ ಅವರು ಸಂದೇಶ ಕಳುಹಿಸಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಹರಸಿ ಎಂದರು ನಿರ್ದೇಶಕ ಕೆ.ಗಣೇಶನ್.

ಮಲೇಷಿಯಾ ಗೆ ಬಂದಾಗ ಗಣೇಶನ್ ಈ ಕಥೆ ಹೇಳಿದ್ದರು. ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆವು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗಾನ ವಿನೋದನ್.

ನಾಯಕ ಸುಭಾಷ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು. ಮುಖ್ಯ ಅತಿಥಿಗಳು ಚತ್ರಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸುಭಾಷ್ ಅವರಿಗೆ ನಾಯಕಿಯಾಗಿ ನೇಹ ಅಭಿನಯಿಸಿದ್ದಾರೆ. ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ ಹಾಗೂ ಜಾನ್ ಪೀಟರ್ ಅವರ ಕಲಾ ನಿರ್ದೇಶನ “ಪ್ರೀತ್ಸು” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಡಾ.ಸುಧಾಕರ್‌ ಬಣ್ಣ ಹಚ್ಚಿ ನಟನೆ! ಯಡಿಯೂರಪ್ಪ ಬಳಿಕ ತನುಜಾ ಸಿನಿಮಾದಲ್ಲಿ ಅಭಿನಯಿಸಿದ ಸಚಿವ

ನೈಜ ಘಟನೆಯಾಧಾರಿತ ತನುಜಾ ಸಿನಿಮಾದ ಕಥೆಗೆ ಮನಸೋತು ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿ ದೇಶದಾದ್ಯಂತ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಪಡೆದಿದ್ದಾರೆ.


ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ , ಸಚಿವ ಡಾ.ಕೆ ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಇನ್ನಿತರ ಸಹಾಯದಿಂದ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಪಡೆದಿದ್ದು ಎಲ್ಲರ ಹುಬ್ಬೇರಿಸಿತ್ತು, ಅಷ್ಟೇ ಅಲ್ಲದೆ ಆ ನೈಜ ಘಟನೆಯಾಧಾರಿತ ವರದಿ ಆಧರಿಸಿ ಸಿನಿಮಾ ಕೂಡ ಸೆಟ್ಟೇರಿದ್ದು ಆ ಸಿನಿಮಾಗೆ ತನುಜಾ ಎಂದು ನಾಮಕರಣ ಮಾಡಿದ್ದರು .


ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ತಮ್ಮ ಪಾತ್ರಕ್ಕೆ ತಾವೇ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಸಚಿವರಾದ ಡಾ.ಕೆ ಸುಧಾಕರ್ ಅವರು ಕೂಡ ಇಂದು ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಅನುಭವಿ ಕಲಾವಿದರ ರೀತಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ಅದ್ಭುತವಾಗಿ ನಟಿಸಿದ್ದಾರೆ ಜೊತೆಗೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ವಿಶೇಷವಾಗಿದ್ದು, ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆ.


ಇನ್ನು ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನವಿದ್ದು, Beyond Visions Cinemas ಬಂಡವಾಳ ಹೂಡಿದೆ. ಈ ಚಿತ್ರವು ಶಿವಮೊಗ್ಗ ಸುತ್ತ ಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ತಾರಾಗಣದಲ್ಲಿ ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್ , ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಅಭಿನಯಿಸಿದ್ದಾರೆ.

ಪ್ರದ್ಯೋತನ ಸಂಗೀತ ನಿರ್ದೇಶನ ರವೀಂದ್ರನಾಥ್ ಹಾಗೂ ಮೋಹನ್.ಎಲ್ ರಂಗಕಹಳೆ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನವಿದ್ದು ಆರ್ ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆ, ರಘುನಂದನ್ ಎಸ್.ಕೆ ಕಾರ್ಯಕಾರಿ ನಿರ್ಮಾಪಕರು, ಸತೀಶ್ ಬ್ರಮ್ಮಾವರ್ ನಿರ್ಮಾಣ ನಿರ್ವಹಣೆ ಇದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಶೂಟಿಂಗ್‌ ಮೊದಲೇ ಭೀಮನಿಗೆ ಭರ್ಜರಿ ಬ್ಯುಜಿನೆಸ್!‌ ದುನಿಯಾ ವಿಜಯ್‌ ಚಿತ್ರದ ಆಡಿಯೋ ದಾಖಲೆ ಮೊತ್ತಕ್ಕೆ ಖರೀದಿಸಿದ ಆನಂದ್‌ ಆಡಿಯೊ…

ಚಿತ್ರೀಕರಣಕ್ಕೂ‌ ಮೊದಲೇ ದುನಿಯಾ ವಿಜಯ್‌ ಅಭಿನಯದ ಭೀಮ ಚಿತ್ರಕ್ಕೆ ಭರ್ಜರಿ ಬ್ಯುಜಿನೆಸ್‌ ಆಗಿದೆ. ಹೌದು, ರಿಲೀಸ್‌ ಮೊದಲೇ ದುನಿಯಾ ವಿಜಯ್ ಅವರ ಭೀಮ ಚಿತ್ರದ ಆಡಿಯೋ ಹಕ್ಕನ್ನು ಆನಂದ್‌ ಆಡಿಯೋ ದಾಖಲೆ ಮೊತ್ತ ಕೊಟ್ಟು ಖರೀದಿ ಮಾಡಿದೆ. ಇದು ಚಿತ್ರತಂಡಕ್ಕೆ ಸಿಕ್ಕ ಮೊದಲ ಜಯ.

ಹೌದು, 1.50ಕೋಟಿ ದಾಖಲೆಯ ಮೊತ್ತಕ್ಕೆ ಭೀಮ ಚಿತ್ರದ ಆಡಿಯೋ ಸೋಲ್ಡೌಟ್ ಆಗಿರುವುದು ನಿಜಕ್ಕೂ ಖುಷಿಯ ವಿಷಯವೇ. ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್‌ ಹಾಗು ಆನಂದ್‌ ಅವರು ಭೀಮ ಚಿತ್ರದ ಆಡಿಯೋ ರೈಟ್ಸ್‌ ಅನ್ನು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

ಸಲಗ ಚಿತ್ರ ಆಡಿಯೋ ಸಕ್ಸಸ್ ನ ಎಫೆಕ್ಟ್ ಇದಾಗಿದ್ದು, ಅಲ್ಲದೆ ದುನಿಯಾ ವಿಜಯ್ ಹಾಗೂ ಚರಣ್ ಕಾಂಬಿನೇಷನ್‌ ಸಿನಿಮಾ ಮತ್ತೆ ಮೂಡಿ ಬರುತ್ತಿರುವ ಹಿನ್ನಲೆಯಲ್ಲಿ ಈ ಭರ್ಜರಿ ಬ್ಯುಜಿನೆಸ್‌ ಆಗಿದೆ.

ಆನಂದ್ ಆಡಿಯೋದಿಂದ ಅಡ್ವಾನ್ಸ್ ಚೆಕ್ ಹಾಗೂ ಅಗ್ರಿಮೆಂಟ್ ಸ್ವೀಕರಿಸಿರುವ ಭೀಮ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಅವರು ಇದೇ ಏಪ್ರಿಲ್ 18ಕ್ಕೆ ಭೀಮ ಚಿತ್ರ ಅದ್ಧೂರಿ ಮುಹೂರ್ತ ನಡೆಸಲು ತೀರ್ಮಾನಿಸಿದ್ದಾರೆ. ದುನಿಯಾ ವಿಜಯ್ ಅವರ ಇಷ್ಟ ದೇವತೆ ಶ್ರೀ ಬಂಡೆ ಮಾಹಾಂಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ.

Categories
ಸಿನಿ ಸುದ್ದಿ

ಬೆಲ್‌ ಬಟನ್‌ ಒತ್ತಿದ ದೇಸಾಯಿ! ಹೊಸಬರಿಗೆ ‌ಸುನೀಲ್‌ ಕುಮಾರ್ ಸಾಥ್…‌

ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರಲ್ಲಿ ಸುನೀಲ್ ಕುಮಾರ್ ದೇಸಾಯಿ ಸಹ ಒಬ್ಬರು. ಅಂತಹ ನಿರ್ದೇಶಕರಿಂದ ಇತ್ತೀಚೆಗೆ “ಬೆಲ್ ಬಟನ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವ ಇರುವ ಲ‌ಕ್ಷ್ಮಿನರಸಿಂಹ. ಎಂ “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಫ್ರೆಶ್ ಫಿಲಂಸ್ ಮೂಲಕ ಗಂಗರಾಜ್ ಗೌಡ ಆರ್, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎ.ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎಸ್ ಎಂ ರಾಹಿತ್ಯ ಸಂಗೀತ ನೀಡುತ್ತಿದ್ದಾರೆ. ಗೌತಮ್ ನಾಯಕ್ ಛಾಯಾಗ್ರಹಣ ಹಾಗೂ ಎಸ್. ಆಕಾಶ್ ಮಹೇಂದ್ರಕರ್
ಸಂಕಲನ ಈ ಚಿತ್ರಕ್ಕಿದೆ.

ಕಲಾವಿದರ ಆಯ್ಕೆಯಲ್ಲಿ ‌ತೊಡಗಿರುವ ನಿರ್ದೇಶಕ ಲಕ್ಷ್ಮಿನರಸಿಂಹ ಅವರು, ಮೇನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಹೊಂದಿಸಿ ಬರೆಯಿರಿ ಅದೇ ಜೀವನ ; ಸ್ಟುಡೆಂಟ್‌ ಲೈಫ್‌ ನೆನಪಿಸೋ ಟೀಸರ್‌ ಇದು…

ಇಂಜಿನಿಯರಿಂಗ್ ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ “ಹೊಂದಿಸಿ ಬರೆಯಿರಿ” ಸಿನಿಮಾ ಮೂಲಕ ನಿರ್ದೇಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಹೌಸ್ ನಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿ ಅನುಭವವಿರುವ ಜಗನ್ನಾಥ್, ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ “ಹೊಂದಿಸಿ ಬರೆಯಿರಿ” ಸಿನಿಮಾದ ಫಸ್ಟ್ ಲುಕ್ ರಿಲೀಸ್ ಸಖತ್ ಸೌಂಡ್ ಮಾಡಿತ್ತು. ಈಗ ಬಿಡುಗಡೆಯಾಗಿರುವ ಟೀಸರ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿದ್ಯಾರ್ಥಿ ಜೀವನದ ಅನುಭವ ಅನಾವರಣ
ನೆನಪು, ಕನಸು ಹಾಗೂ ವಾಸ್ತವ..ಈ ಮೂರು ಪರಿಕಲ್ಪನೆಗಳ ಮೇಲೆ ಅನಾವರಣವಾಗುವ ಸಿನಿಮಾವೇ ಹೊಂದಿಸಿ ಬರೆಯಿರಿ. ಅದರಂತೆ ಟೀಸರ್ ನಲ್ಲಿ ಕಾಲೇಜ್ ನೆನಪುಗಳನ್ನು ಕಟ್ಟಿಕೊಡಲಾಗಿದೆ. ವಿದ್ಯಾರ್ಥಿ ಜೀವನದ ಏರಿಳಿತಗಳನ್ನು ತೋರಿಸಲಾಗಿದೆ. ಟೀಸರ್ ನಲ್ಲಿ ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ವಾಸ್ತುಪ್ರಕಾರದಿಂದ ಪರಿಚಿತರಾದ ಐಶಾನಿ ಶೆಟ್ಟಿ, ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ವನಾರಾವ್ ಹೀಗೆ ಹಲವರಿದ್ದಾರೆ.

ಈಗಾಗಲೇ “ಹೊಂದಿಸಿ ಬರೆಯಿರಿ” ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. “ಟಗರು” ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ವಸಿಷ್ಠ ವಿಶಿಷ್ಠ ಹೆಜ್ಜೆ! ಸಿಂಹ ಆಡಿಯೋ ಶುರು ಮಾಡಿದ ಕಂಚಿನ ಕಂಠದ ನಟ!!

ವಿಲನ್ ಹೀರೋನೂ ಆಗಬಹುದು.. ಹೀರೋ ಸಿಂಗರ್ ಆಗಬಹುದು ಅನ್ನೋದು ಸಾಬೀತು ಮಾಡಿದವರು ಕಂಚಿನ ಕಂಠದ ಗಾಯಕ, ಖಡಕ್ ಖಳನಟ, ಹ್ಯಾಂಡ್ಸಮ್ ಹೀರೋ ವಸಿಷ್ಠ ಸಿಂಹ. ಇಂದು ವಸಿಷ್ಠ ಸಿಂಹ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಮತ್ತು ಗಾಯಕ ಕೂಡ. ಟಾಲಿವುಡ್ ನಲ್ಲಿಯೂ ಮಿಂಚುತ್ತಿರುವ ಪ್ರತಿಭಾನ್ವಿತ ನಾಯಕ ನಟ ಅನ್ನೋದು ವಿಶೇಷ. ಗಾಯಕನಾಗಿ ಸಾಧನೆ ಮಾಡಬೇಕೆಂಬ ಕನಸು ಹೊತ್ತು ಬಂದ ವಸಿಷ್ಠ ಅವರಿಗೆ ನಾಯಕನಟ, ಖಳ‌ನಟನಾಗಿಯೂ ಕಮಾಲ್ ಮಾಡುವ ಅವಕಾಶ ಸಿಕ್ತು. ಈ ಅವಕಾಶ ಸದುಪಯೋಗಪಡಸಿಕೊಂಡು ಸಕ್ಸಸ್‌ ಕಾಣುತ್ತಲೇ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಮ್ಮದೇ ಆಡಿಯೋ ಸಂಸ್ಥೆಯನ್ನು ಅನಾವರಣ ಮಾಡಿದ್ದಾರೆ….

ಸಿಂಹಾ ಆಡಿಯೋ ಲೋಗೋ‌ ಲಾಂಚ್

ಅಪ್ಪನ ಮುದ್ದಿನ ಮಗನಾಗಿರುವ ವಸಿಷ್ಠ ತಂದೆಯ ಹೆಸರಿನಡಿ, ತನ್ನ ನೆಚ್ಚಿನ ಆರಾಧ್ಯ ತಾಯಿ ಚಾಮುಂಡೇಶ್ವರಿ ನೆನೆಪಿನಾರ್ಥವಾಗಿ ಸಿಂಹಾ ಎಂಬ ಹೆಸರಿನಡಿ ಆಡಿಯೋ ಕಂಪನಿ ಶುರು ಮಾಡಿದ್ದಾರೆ. ನೆಚ್ಚಿನ ಗೆಳೆಯನ ಹಾಗೂ ಅಚ್ಚುಮೆಚ್ಚಿನ ಗುರು ಸ್ವರಬ್ರಹ್ಮ ಹಂಸಲೇಖ ಸಾಥ್ ನಲ್ಲಿ ಆಡಿಯೋ‌ ಲೋಗೋ ಅನಾವರಣಗೊಂಡಿದೆ.

ಕಾಲಚಕ್ರ ಹಾಡು ಬಿಡುಗಡೆ

ಸುಮನ್ ಕ್ರಾಂತಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿರುವ, ವಿಭಿನ್ನ ಗೆಟಪ್ ನಲ್ಲಿ ವಸಿಷ್ಠ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾದ ನೀನೇ ಬೇಕು ಎಂಬ ಹಾಡು ವಸಿಷ್ಠ ಸಿಂಹ ಸಾರಥ್ಯದ ಸಿಂಹಾ ಆಡಿಯೋ ಕಂಪನಿಯಲ್ಲಿ ಬಿಡುಗಡೆಯಾಗಿದೆ. ತಮ್ಮದೆ ಸಿನಿಮಾದ ಮೊದಲ ಹಾಡು ತಮ್ಮದೇ ಆಡಿಯೋ ಕಂಪನಿ ಪಾಲಾಗಿರೋದು ವಸಿಷ್ಠಗೆ ಡಬ್ಬಲ್ ಖುಷಿಕೊಟ್ಟಿದೆ.

ಅಂದಹಾಗೆ ವಸಿಷ್ಠ ಸಿಂಹ ಕಿರಿಕ್ ಪಾರ್ಟಿ’ ಸಿನಿಮಾದ ‘ನೀಚ ಸುಳ್ಳು ಸುತ್ತೋ ನಾಲಿಗೆ..’, ‘ದಯವಿಟ್ಟು ಗಮನಿಸಿ..’ ಸಿನಿಮಾದ ‘ಮರೆತೇ ಹೋದೆನು..’ ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಅವರಿಗೆ ಸಂಗೀತದ ಮೇಲೂ ಆಸಕ್ತಿ ಹಾಗೂ ಹೊಸ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಿಂಹಾ ಆಡಿಯೋ ಸಂಸ್ಥೆ ಕಣ್ತೆರೆದಿದ್ದು, ದೊಡ್ಡ ಎತ್ತರಕ್ಕೆ ಬೆಳೆಯಲಿ ಅನ್ನೋದು ಅಭಿಮಾನಿಗಳ ಹಾರೈಕೆ.

Categories
ಸಿನಿ ಸುದ್ದಿ

ಮಾತಲ್ಲಿ ನಿರತನಾದ ಲಂಕಾಸುರ! ಇದು ವಿನೋದ್‌ ಪ್ರಭಾಕರ್‌ ನಿರ್ಮಾಣದ ಸಿನಿಮಾ…

ನಟ ವಿನೋದ್ ಪ್ರಭಾಕರ್ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು ಗೊತ್ತೇ ಇದೆ. ಆ ಬ್ಯಾನರ್‌ ಮೂಲಕ ” ಲಂಕಾಸುರ” ಎಂಬ ಚಿತ್ರ ನಿರ್ಮಾಣ ಮಾಡುತ್ತಿರುವ ಸುದ್ದಿಯೂ ಹೊಸದೇನಲ್ಲ. ಈ ಚಿತ್ರಕ್ಕೆ ನಿಶಾ ವಿನೋದ್ ಪ್ರಭಾಕರ್ ನಿರ್ಮಾಪಕರು ವಿಷಯ ಏನಪ್ಪಾ ಅಂದರೆ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈಗ ಸಿನಿಮಾದ ಡಬ್ಬಿಂಗ್‌ ಕೆಲಸ ಜೋರಾಗಿ ಸಾಗುತ್ತಿದೆ.

ಹೌದು, ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಒಂದು ಸಾಹಸ ಸನ್ನಿವೇಶ ಮಾತ್ರ ಚಿತ್ರಕ್ಕೆ ಬಾಕಿಯಿದೆ. ಈ ಸಾಹಸ ದೃಶ್ಯಕ್ಕಾಗಿ ವಿನೋದ್ ಹತ್ತು ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಈ ಹಿಂದೆ “ಮೂರ್ಕಲ್ ಎಸ್ಟೇಟ್” ಎಂಬ ಚಿತ್ರ ನಿರ್ದೇಶಿಸಿದ್ದ ಪ್ರಮೋದ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಸಾಹಸ ದೃಶ್ಯಗಳಿವೆ. ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ ಈ ಚಿತ್ರದ ಸಾಹಸ ನಿರ್ದೇಶನ ಮಾಡಿದ್ದಾರೆ.

ವಿಜೇತ್ ಕೃಷ್ಣ ಸಂಗೀತ ನಿರ್ದೇಶನ ಮಾಡಿದರೆ, ಸುಜ್ಞಾನ್ ಛಾಯಾಗ್ರಹಣವಿದೆ. ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

error: Content is protected !!