ಮಾತಲ್ಲಿ ನಿರತನಾದ ಲಂಕಾಸುರ! ಇದು ವಿನೋದ್‌ ಪ್ರಭಾಕರ್‌ ನಿರ್ಮಾಣದ ಸಿನಿಮಾ…

ನಟ ವಿನೋದ್ ಪ್ರಭಾಕರ್ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು ಗೊತ್ತೇ ಇದೆ. ಆ ಬ್ಯಾನರ್‌ ಮೂಲಕ ” ಲಂಕಾಸುರ” ಎಂಬ ಚಿತ್ರ ನಿರ್ಮಾಣ ಮಾಡುತ್ತಿರುವ ಸುದ್ದಿಯೂ ಹೊಸದೇನಲ್ಲ. ಈ ಚಿತ್ರಕ್ಕೆ ನಿಶಾ ವಿನೋದ್ ಪ್ರಭಾಕರ್ ನಿರ್ಮಾಪಕರು ವಿಷಯ ಏನಪ್ಪಾ ಅಂದರೆ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈಗ ಸಿನಿಮಾದ ಡಬ್ಬಿಂಗ್‌ ಕೆಲಸ ಜೋರಾಗಿ ಸಾಗುತ್ತಿದೆ.

ಹೌದು, ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಒಂದು ಸಾಹಸ ಸನ್ನಿವೇಶ ಮಾತ್ರ ಚಿತ್ರಕ್ಕೆ ಬಾಕಿಯಿದೆ. ಈ ಸಾಹಸ ದೃಶ್ಯಕ್ಕಾಗಿ ವಿನೋದ್ ಹತ್ತು ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಈ ಹಿಂದೆ “ಮೂರ್ಕಲ್ ಎಸ್ಟೇಟ್” ಎಂಬ ಚಿತ್ರ ನಿರ್ದೇಶಿಸಿದ್ದ ಪ್ರಮೋದ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಸಾಹಸ ದೃಶ್ಯಗಳಿವೆ. ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ ಈ ಚಿತ್ರದ ಸಾಹಸ ನಿರ್ದೇಶನ ಮಾಡಿದ್ದಾರೆ.

ವಿಜೇತ್ ಕೃಷ್ಣ ಸಂಗೀತ ನಿರ್ದೇಶನ ಮಾಡಿದರೆ, ಸುಜ್ಞಾನ್ ಛಾಯಾಗ್ರಹಣವಿದೆ. ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Related Posts

error: Content is protected !!