Categories
ಸಿನಿ ಸುದ್ದಿ

ಸ್ಟುಟೆಂಡ್ಸ್ ಸ್ಕ್ಯಾಮ್! ವಿದ್ಯಾರ್ಥಿಗಳು ರಿಲೀಸ್ ಮಾಡಿದ ಪೋಸ್ಟರ್

ಇಂದಿನ ವಿದ್ಯಾರ್ಥಿಗಳೆ ಮುಂದಿನ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕುರಿತಾದ ಕಥಾಹಂದರ ಹೊಂದಿರುವ “SCAM (1770)” ಚಿತ್ರ ಬರುತ್ತಿದೆ.

ಡಿ.ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು 20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು. ಆ ತಂಡಗಳ ನಾಯಕರು(ವಿದ್ಯಾರ್ಥಿಗಳು) “SCAM (1770)” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾನೆ SCAM (1770) ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ.

ಡಿ.ಕ್ರಿಯೇಷನ್ಸ್ ಇತ್ತೀಚೆಗೆ ಆಕ್ಟ್-1978 ಮತ್ತು 19.20.21 ಎಂಬ ಸದಭಿರುಚಿ ಚಿತ್ರಗಳನ್ನು ನೀಡಿದ್ದು, ದೇವರಾಜ್ ಆರ್ ಅವರ ನಿರ್ಮಾಣದ ಈ ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ನೇತ್ರಾವತಿ(ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರ ಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈಗಾಗಲೇ “SCAM (1770)” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. April 15th ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಅಭಿರಾಮಚಂದ್ರ ನಿಗೆ ಶಿವಣ್ಣ ಸಾಥ್: ಇದು ರಥ ಕಿರಣ್, ಸಿದ್ದು ಮೂಲಿಮನಿ ಚಿತ್ರ- ಟೀಸರ್ ನೋಡಿ ಸೆಂಚುರಿ ಸ್ಟಾರ್ ಹೇಳಿದ್ದು ಹೀಗೆ

ಅಭಿರಾಮಚಂದ್ರ ಟೀಸರ್ ಬಗ್ಗೆ ಶಿವಣ್ಣ ಹೇಳಿದ್ದೇನು?
ಅಭಿರಾಮಚಂದ್ರ ಟೀಸರ್ ರಿಲೀಸ್ ಮಾಡಿದ್ದು ಬಹಳ ಖುಷಿಯಾಯ್ತು. ನಾಗೇಂದ್ರ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ತುಂಬಾ ಬ್ಯೂಟಿಫುಲ್ ವಿಷ್ಯೂವಲ್ಸ್ ಇತ್ತು. ಬರೀ ಮಕ್ಕಳ ಕಥೆ ಇದೆ. ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ. ಅದನ್ನು ನಾವು ಹೇಳೋದಿಕ್ಕಿಂತ ಡೈರೆಕ್ಟರ್ ಹೇಳಿದರೆ ಒಳ್ಳೆಯದು. ಟೀಸರ್ ನೋಡ್ತಿದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ತರ ಹಿಟ್ ಆಗಲಿ..ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದ್ದು, ನಾನು ನೋಡ್ತೇನೆ. ನೀವು ನೋಡಿ.. ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ ಅಭಿರಾಮಚಂದ್ರ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.

ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಸಿನಿಮಾಕ್ಕಿದೆ. ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಎ.ಜಿ. ಎಸ್ ಎಂಟಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಾ ಕೊನೆ ಹಂತದಲ್ಲಿರುವ ಅಭಿರಾಮಚಂದ್ರ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಶಿವಾಜಿ ಸುರತ್ಕಲ್ 2 ಟ್ರೇಲರ್ ಹೊರಬಂತು: ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್

ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

“ಶಿವಾಜಿ ಸುರತ್ಕಲ್ 2” ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ‌ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಏಪ್ರಿಲ್ 14 ರಂದು ನಮ್ಮ ಶಿವಾಜಿ ಮತ್ತೆ ಹೊಸ ಕೇಸ್ ಹೊತ್ತು ಬರಲಿದ್ದಾನೆ. ಎಲ್ಲರಲ್ಲೂ ಮನೆ ಮಾಡಿರುವ “ಮಾಯಾವಿ” ಯಾರು? ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.

ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಚೆನ್ನಾಗಿದೆ. ಇದೇ ಏಪ್ರಿಲ್ 14 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದರು ನಟ ರಮೇಶ್ ಅರವಿಂದ್.

ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಅನೂಪ್ ಗೌಡ.

ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಅರ್ಜುನ್ ಜನ್ಯ45 ಸಿನಿಮಾಗೆ ನಾಯಕಿ ಸಿಕ್ಕಳು! ನನ್ನರಸಿ ರಾಧೆ ಧಾರಾವಾಹಿ ಹುಡುಗಿ ಕೌಸ್ತುಭ ಮಣಿ ಆಯ್ಕೆ

ಅರ್ಜುನ್ ಜನ್ಯ ಮೊದಲ ಸಲ ಸಿನಿಮಾ ನಿರ್ದೇಶನ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆ ಸಿನಿಮಾದಲ್ಲಿ ಶಿವರಾಜಕುಮಾರ್, ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್ ಬಿ.ಶೆಟ್ಟಿ ಕೂಡ ಆಕರ್ಷಣೆ. ಸದ್ಉಕ್ಕೆ ಒಬ್ಬ ನಾಯಕಿಯ ಅಯ್ಕೆ ನಡೆದಿದ್ದು, ಆ ಸುದ್ದಿ ಹೊರಬಿದ್ದಿದೆ.

ಸದಭಿರುಚಿ ಚಿತ್ರಗಳ ನಿರ್ಮಾಪಕರಾದ ರಮೇಶ್ ರೆಡ್ಡಿ ನಿರ್ಮಾಣದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರಥಮ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ “45”.

ಈ ಚಿತ್ರದ ನಾಯಕಿಯಾಗಿ ಕೌಸ್ತುಭ ಮಣಿ ಆಯ್ಕೆಯಾಗಿದ್ದಾರೆ.
ಕಲರ್ಸ್ ಕನ್ನಡದ “ನನ್ನರಸಿ ರಾಧೆ”, ಜೀ ತೆಲುಗಿನ ಪ್ರಸಿದ್ದ ಧಾರಾವಾಹಿ ಹಾಗೂ ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಫಿಸಿಕ್ಸ್ ಹುಡುಗ ಈಗ ಚಾಕೊಲೇಟ್ ಬಾಯ್!

ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ತಮ್ಮ ನಟನೆಯಿಂದ ಭರವಸೆ ಮೂಡಿಸಿದ ಬಹು ಭಾಷಾ ನಟ ಸುಮುಖ, ಈಗ ಕನ್ನಡದಲ್ಲಿ ಮತ್ತೊಂದು ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ನಿಧಿ ಹೆಗಡೆ ಇದ್ದಾರೆ. ಇನ್ನೂ ಹೆಸರಿಡಬೇಕಾದ, ಸ್ನೇಹ ಹಾಗೂ ಸಹೋದರತ್ವದ ಸಂದೇಶ ಹೊತ್ತಿರುವ, ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ಮುಗಿದಿದೆ.


ಚಿತ್ರ ಕಥೆಯ ತಿರುಳೇನೆಂದು ಕೇಳಿದಾಗ “ಇದೊಂದು ಸಹೋದರತ್ವ ಅಥವಾ ಸ್ನೇಹದ ಬಾಂಧವ್ಯ ಸಾರುವ ಚಿತ್ರ” ಎನ್ನುತ್ತಾರೆ.
ಫಿಸಿಕ್ಸ್ ಟೀಚರ್ ಒಂದು ಗಂಭೀರ ಕಥಾವಸ್ತುವಿರುವ ಚಿತ್ರವಾಗಿತ್ತು. ಹಾಗೆಯೇ ಅವರ ಪಾತ್ರ ಕೂಡ ಅದೇ ಸ್ವರೂಪದ್ದಾಗಿತ್ತು ಹಾಗೂ ಮನೋಜ್ಞವಾಗಿತ್ತು ಕೂಡ. ಆದರೆ ಈ ಚಿತ್ರದಲ್ಲಿ ಉತ್ಸಾಹದ ಬುಗ್ಗೆಯಾಗಿರುವ ಹಾಸ್ಯವನ್ನು ಪ್ರೀತಿಸುವ ಚಾಕೊಲೇಟ್ ಬಾಯ್ ಪಾತ್ರದಲ್ಲಿ ಸುಮುಖ ಕಾಣಿಸಿಕೊಳ್ಳುತ್ತಿದ್ದಾರೆ.


ನಿರ್ದೇಶಕ ಉದಯ್ ಶೆಟ್ಟಿ ಸಾರಥ್ಯದಲ್ಲಿ ಎರಡನೇ ಹಂತದ ಚಿತ್ರೀಕರಣ ಇನ್ನೇನು ಪ್ರಾರಂಭವಾಗಬೇಕಿದೆ. ಅಕ್ಷಯ್ ಶೆಟ್ಟಿ ಜೊತೆಗೂಡಿ ಕಥೆ ಹಾಗೂ ಚಿತ್ರಕಥೆ ಹೆಣೆದಿದ್ದಾರೆ ಉದಯ್ ಶೆಟ್ಟಿ.
ಇದಲ್ಲದೇ ಈಗಾಗಲೇ ಚಿತ್ರೀಕರಣ ಮುಗಿಸಿರುವ ಕನ್ನಡ ಹಾಗೂ ಮರಾಠಿಯಲ್ಲಿ ನಿರ್ಮಾಣವಾಗಿರುವ ದ್ವಿಭಾಷೆಯ ಚಿತ್ರ “ರಾಜಸ್ಥಾನ ಡೈರೀಸ್” ತೆರೆಗೆ ಬರಲು ಸಿದ್ಧವಾಗಿದೆ. ಮಾನ್ವಿತ ಕಾಮತ್ ಜೋಡಿಯಾಗಿ ನಟಿಸಿರುವ ಸುಮುಖ “ಇದೊಂದು ಔಟ್ ಅಂಡ್ ಔಟ್ ಲವ್ ಸ್ಟೋರಿ” ಎನ್ನುತ್ತಾರೆ.

ಮರಳುಗಾಡಿನ ಸೌಂದರ್ಯದ ಜೊತೆ ಜೊತೆಗೆ ಹೆಣೆದಿರುವ ಪ್ರೇಮಕಥೆಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸುಮುಖ ಅವರ ತಾಯಿ ನಂದಿತಾ ಯಾದವ್ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ಪ್ರಜ್ವಲ್ ಮಾಫಿಯಾ ಆಟ ಮುಗೀತು! ಜೂನ್ ಗೆ ಸಿನಿಮಾ ಬಿಡುಗಡೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಮಾಫಿಯಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಅರವತ್ತು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದೆ. “ಮಾಫಿಯಾ” ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಹಾಗೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಇದು ಅವರ ನಟನೆಯ ಮೂವತ್ತೈದನೇ ಚಿತ್ರವೂ ಹೌದು.


ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿವೆ. ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ಹತ್ತು ದಿನಗಳ ಕಾಲ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಕುಮಾರ್ ಬಿ.

ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ರಾಘು ಎಂಬ ಸೋಲೋ ಆಕ್ಟರ್! ಚಿನ್ನಾರಿ ಮುತ್ತನ ಚಿತ್ರ ಏ.28ಕ್ಕೆ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳ ಪರ್ವ ಕಾಲ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಬಹುನಿರೀಕ್ಷಿತ ಸಿನಿಮಾ ರಾಘು. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ರಾಘು ಏಕವ್ಯಕ್ತಿ ಚಿತ್ರ. ಅಂದರೆ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ನಿಮಗೆ ಕಾಣಿಸೋದು ನಾಯಕ ಮಾತ್ರ. ರಾಘು ಸಿನಿಮಾ ಮೂಲಕ ವಿಜಯ್ ರಾಘವೇಂದ್ರ ಇಂತಹದೊಂದು ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಒಬ್ಬರೇ ಇರುತ್ತಾರೆ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ರಾಘು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಏಪ್ರಿಲ್ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಮೊದಲ‌ ಹೆಜ್ಜೆಯಲ್ಲಿ ಹೊಸ ಜಾನರ್ ಹಾಗೂ ಹೊಸ ಪ್ರಯೋಗದೊಂದಿಗೆ ಎಂ ಆನಂದ್ ರಾಜ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಆನ ಹಾಗೂ ಬ್ಯಾಂಗ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಎಂ ಆನಂದ್ ರಾಜ್ ಸ್ವತಂತ್ರ ನಿರ್ದೇಶಕರಾಗಿ ರಾಘು ಮೂಲಕ ಬಡ್ತಿ ಪಡೆದಿದ್ದಾರೆ.

ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಚಿತ್ರ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಕಂಠ ದಾನ ಮಾಡಿದ್ದಾರೆ… ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.

Categories
ಸಿನಿ ಸುದ್ದಿ

ಸ್ಮಶಾನದೊಳ್ ಅಡವಿ ಮಂದಿ! ಪೋಸ್ಟರ್ ರಿಲೀಸ್ ಮಾಡಿದ ಪೌರಕಾರ್ಮಿಕರು

ಅಡವಿ ಇದು ಅರಂಭದಿಂದಲೂ ಸದ್ದು ಮಾಡುತ್ತಲೇ ಬಂದ ಚಿತ್ರ. ಪರಿಸರ ಸಂರಕ್ಷಣೆ ಹಾಗೂ ಆದಿವಾಸಿಗಳ ಜೀವನ ಆಧಾರಿತ ಸ್ಥಳೀಯ ಹೊಸ ಪ್ರತಿಭೆಗಳಿಂದ ಮೂಡಿಬಂದ ಈ ಚಿತ್ರದ ಪೋಸ್ಟರ್ ಅನ್ನು ರುದ್ರಭೂಮಿಯಲ್ಲಿ ಪೌರಕಾರ್ಮಿರಿಂದ ಬಿಡುಗಡೆ ಮಾಡಿಸುವ ಮೂಲಕ ನಿರ್ದೇಶಕ ಟೈಗರ್ ನಾಗ್ ವಿಶೇಷ ಮೆರೆದಿದ್ದಾರೆ.

ಪತ್ರಕರ್ತ, ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಕಾದಂಬರಿ ಆಧರಿಸಿ, ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು, ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕೊರಟಗೆರೆಯ ಪಟ್ಟಣದಲ್ಲಿ ವಿಶೇಷವಾಗಿ ರುದ್ರಭೂಮಿಯಲ್ಲಿ ಪೌರಕರ್ಮಿಕರು ಬಿಡುಗಡೆ ಮಾಡಿದ್ದು ವಿಶೇಷ.

ಅತಿಥಿಯಾಗಿ ಸ್ಮಶಾನಕ್ಕೆ ಬಂದು ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಪೌರಕಾರ್ಮಿಕೆ ಮಂಜಮ್ಮ ಮಾತನಾಡಿ, ನಗರದ ಸ್ವಚ್ಛತೆಗೆ ದುಡಿಯುವ ನಮ್ಮಂತಹ ಕಾರ್ಮಿಕರನ್ನು ಗಮನಿಸದೆ ಇರುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕಾರ‍್ಯಕ್ರಮಕ್ಕೆ ಆಹ್ವಾನಿಸಿ ಪೋಸ್ಟರ್ ಅನ್ನು ನನ್ನಂಥ ಪೌರ ಕಾರ್ಮಿಕರ ಕೈಯಿಂದ ಬಿಡುಗಡೆ ಮಾಡಿಸುವ ಮೂಲಕ ಪೌರಕಾರ್ಮಿಕರ ಮಹತ್ವವನ್ನು ಸ್ವಚ್ಛತೆಯ ಅಗತ್ಯತೆಯ ಸಂದೇಶವನ್ನು ನಾಡಿಗೆ ಚಿತ್ರತಂಡ ನೀಡಿದೆ. ನಗರ ಪಾಲಿಕೆ, ನಗರಸಭ ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ
ಸೇವೆ ಸಲ್ಲಿಸುತ್ತಿರುವ ನಮ್ಮಂತಹ ಸಾಮಾನ್ಯ ಪೌರಕಾರ್ಮಿಕರಿಂದ ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಿದ್ದು ಸ್ವಚ್ಛತಾ ರಾಯಭಾರಿ ಗಳಾಗಿ ಕೆಲಸ ಮಾಡುತ್ತಿರುವ ನಮಗೆ ಸಲ್ಲಿಸಿದ ಗೌರವವಾಗಿದೆ ಈ ಚಿತ್ರವು ಯಶಸ್ಸಾಗಲಿ ಎಂದು ಶುಭಹಾರೈಸಿದರು.

ಸಂವಿಧಾನ ಸಿನಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗಿರುವ ಅಡವಿ ಚಿತ್ರವು ನನಗೆ ಮುಖ್ಯ ಭೂಮಿಯಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಚಿತ್ರೀಕರಣದ ಆರಂಭದಲ್ಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು. ಅರಣ್ಯ ಸಂರಕ್ಷಣೆ. ಅರಣ್ಯದೊಂದಿಗೆ ಬೆಸೆದುಕೊಂಡಿರುವ ಮೂಲ ನಿವಾಸಿಗಳ ಬದುಕಿನ ಹೋರಾಟದ ವಾಸ್ತವದ ನೈಜ ಚಿತ್ರಣವನ್ನು ತೆರೆದಿಡಲಿದೆ. ಈ ಚಿತ್ರದಲ್ಲಿ ಸಾಮಾಜಿಕ ಹೋರಾಟಗಾರರು ಪ್ರಗತಿಪರ ಚಿಂತಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಗಾಂಧಿನಗರದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ ಎಂದು ಅರ್ಜುನ್ ಪಾಳೇಗಾರ್ ಹೇಳಿದ್ದಾರೆ.

ಚಿತ್ರದ ನಾಯಕ ಮೋಹನ್ ಮೌರ್ಯ ಮಾತನಾಡಿ ನನಗೆ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಲು ಅವಕಾಶ ಮಾಡಿಕೊಟ್ಟ ಟೈಗರ್ ನಾಗ್ ಮತ್ತು ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆಗೆ ಥ್ಯಾಂಕ್ಯು ಹೇಳ್ತೀನಿ.
ಈ ಚಿತ್ರ ಎಪ್ರಿಲ್ 14ರ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನ ತೆರೆಗೆ ಬರಲು ತಯಾರಿ ನಡೆಸಿದೆ. ಸಮಾಜ ಕಟ್ಟಕಡೆಯ ಸಮುದಾಯಕ್ಕೆ ನ್ಯಾಯಒದಗಿಸುವ ನೈಜ್ಯ ಕಾದಂಬರಿ ಆಧಾರಿತ ಚಿತ್ರ ಇದ್ದಾಗಿದ್ದು, ರಾಜ್ಯದ ಜನತೆ ನವ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ನೋಡಲೇ ಬೇಕಾದ ಚಿತ್ರ ನಮ್ಮ ಅಡವಿ ಚಿತ್ರವನ್ನು ಚಿತ್ರ ಮಂದಿರಗಳಿಗೆ ಆಗಮಿಸಿ ವೀಕ್ಷಣೆ ಮಾಡಬೇಕೆಂದು ಮನವಿ ಮಾಡುತ್ತೇವೆ. ಎಂಬುದು ಮೋಹನ್ ಆರ್ಯ ಮಾತು.

ನಾಯಕಿ ಶಿಲ್ಪಾ ಮಾತನಾಡಿ, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅವರ ಪ್ರಥಮ ಚಿತ್ರವನ್ನು ಟೈಗರ್ ನಾಗ್ ನಿರ್ದೇಶಿಸಿದ್ದಾರೆ ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆ ಬಿಂಬಿಸುವ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಅವಕಾಶ ಕೊಟ್ಟ ಟೈಗರ್ ನಾಗ್ ಅವರಿಗೆ ಧನ್ಯವಾದ ಎಂದರು.

ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಫುಲೆ ಕುವೆಂಪುರವರ ಆದರ್ಶ ದಂತೆ ಮೌಡ್ಯತೆ ವಿರೋಧಿಸಿ ಸ್ಮಶಾನದಲ್ಲಿ ಅಡವಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಆದಿವಾಸಿಗಳ ಕುರಿತು ಪರಿಸರ ಹಾಗೂ ಸಂವಿಧಾನ ಜಾಗೃತಿ ಕಾದಂಬರಿ ಆಧಾರಿತ ಅಡವಿ ಚಿತ್ರದ ಪೋಸ್ಟರ್ ಅನ್ನು ಕೊರಟಗೆರೆ ಪಟ್ಟಣದ ಸ್ಮಶಾನದಲ್ಲಿ ಪೌರಕಾರ್ಮಿಕರಿಂದ ವಿಶೇಷವಾಗಿ ಬಿಡುಗಡೆ ಮಾಡಿದ್ದು ಹೆಮ್ಮೆ ಎನಿಸುತ್ತೆ . ಶೀಘ್ರದಲ್ಲೇ ತೆರೆಗೆ ಬರಲು ಸಿದ್ದರಾಗುತ್ತಿದ್ದೇವೆ.
ಈ ಚಿತ್ರಕ್ಕಾಗಿ ಸಿದ್ದರಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲಹಟ್ಟಿ ಸೆಟ್ಟನ್ನು ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ರವರ ಕಲಾ ನಿರ್ದೇಶನದಲ್ಲಿ ನಿರ್ಮಾಣ ಮಾಡಲಾಗಿತ್ತು.

ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿತ್ತು. ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ತಾಣಗಳಲ್ಲಿ ಚಿತ್ರೀಕರಣವಾಗಿದೆ. ಅರಣ್ಯ ರಕ್ಷಣೆಯ ಜಾಗೃತಿಯ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನ ವ್ಯವಸ್ಥೆಯ ಹಾಗೂ ಪರಿಸರ ಸಂರಕ್ಷಣೆಯ ಕಥೆಯನ್ನು ತೆರೆದಿಡುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರವಾಗುವ ನಿರೀಕ್ಷೆ ಇದೆ ಎಂದಿದ್ದಾರೆ ನಿರ್ದೇಶಕ ಟೈಗರ್ ನಾಗ್ ಹೇಳಿದ್ದಾರೆ.

ಛಾಯಾಗ್ರಾಹಕ ರವಿಕುಮಾರ್ ಸನಾ, ಆರ್ ಅನಂತರಾಜ್. ರಥವಾರಂ ದೇವು. ಶಿಲ್ಪಾ ನಾಗ್. ವಾಲೆ ಚಂದ್ರು . ರಾಮನಾಯಕ್ . ವೃಶ್ಚಿಕ. ಮಂಜೀವ. ಸರಸ್ವತಿ. ಬಾಲ ನಟಿ ಬೇಬಿ ಸಿಂಚನ, ಶಿವಾನಂದ್. ಕೆ. ಆರ್. ಓಬಳರಾಜು ನವೀನ್ ಕಲ್ಪತರು ಆನಂದ್ ದಿನೇಶ್ ರಾಜ್ ಹರ್ಷಿತ್. ಅರುಣ್,ದಾಸೇಗೌಡ ಸೇರಿದಂತೆ ಇತರರು ಇದ್ದಾರೆ.

ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಗಿರಿ ಸಾಧಿಕ್ ಸಾಬ್, ಛಾಯಾಗ್ರಹಣ ವಿಪಿನ್ ರಾಜ್. ಸಂಗೀತ ನಿರ್ದೇಶಕ ಮಂಜು ಮಹಾದೇವ್. ಸಂಕಲನ ಸಂಜೀವ್ ರೆಡ್ಡಿ. ಸಾಹಿತ್ಯ ಕವಿರಾಜ್ ವಿ ಮನೋಹರ್. ಸಂಭಾಷಣೆ ಸಾಹಸ ನೃತ್ಯ ಎ.ಆರ್ ಸಾಯಿರಾಮ್. ಸಹ ನಿರ್ದೇಶಕ ಕೆ.ಮಂಜುನಾಥ್ ಕೋಟೆ ಕೆರೆ. ವಸ್ತ್ರಾಲಂಕಾರ ಪುಟ್ಟರಾಜ. ಮೇಕಪ್ ದಯಾನಂದ್ ಕೆಲಸ‌ ಮಾಡಿದ್ದಾರೆ.

ಪೋಸ್ಟರ್ ಬಿಡುಗಡೆ ವೇಳೆ ಪ.ಪಂ ಸದಸ್ಯ ನಟರಾಜು, ಯುವಮುಖಂಡ ರಮೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಪವನ್ ಡಾಲಿ ರಾಖಿ ಪ್ರಭು ಇದ್ದರು.

Categories
ಸಿನಿ ಸುದ್ದಿ

ಪೊನ್ನಿಯಿನ್ ಸೆಲ್ವನ್-2 ಹಾಡು, ಟ್ರೇಲರ್ ಹೊರ ಬಂತು: ಕಮಲ್ ಹಾಸನ್ ಆಕರ್ಷಣೆ- ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ ತಾರೆಯರು…

ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯೆನ್ ಸೆಲ್ವನ್-2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಲರ್ ಫುಲ್ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.. ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಯ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ.

ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ಮೊದಲ ಭಾಗ ರಿಲೀಸ್ ಆಗಿತ್ತು.

ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ, ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ..ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ ಗಳು ಟ್ರೇಲರ್ ನಲ್ಲಿ ಝಗಮಗಿಸಿವೆ.

ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ. ಆರ್ ರೆಹಮಾನ್ ಸಂಗೀತ ಸಿನಿಮಾಗಿದೆ.

ಟ್ರೇಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರ ರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿದೆ.

ಐಶ್ವರ್ಯ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

Categories
ಸಿನಿ ಸುದ್ದಿ

ಟೈಗರ್ ಪ್ರಭಾಕರ್ ಬರ್ತ್ ಡೇಗೆ ಲಂಕಾಸುರ ಟೀಸರ್

ಮಾರ್ಚ್ 30 ರಂದು ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಟೈಗರ್ ಟಾಕೀಸ್ ಮೂಲಕ ನಿರ್ಮಾಣವಾಗಿರುವ ಮೊದಲ ಚಿತ್ರ “ಲಂಕಾಸುರ”ದ ವಿಶೇಷ ಟೀಸರ್ ಬಿಡುಗಡೆಯಾಗಲಿದೆ.ಈ ಕುರಿತು ನಿರ್ಮಾಪಕಿ ನಿಶಾ ಹಾಗು ನಟ ವಿನೋದ್ ಪ್ರಭಾಕರ್ ಹೇಳೋದಿಷ್ಟು.


ನಾವು ಈ ಚಿತ್ರ ಪ್ರಾರಂಭಿಸಿದ ದಿನದಿಂದಲೂ ನಮಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಖುಣಿ. ನಮಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎನ್ನುತ್ತಾರೆ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್.

ಈಗಾಗಲೇ ” ಲಂಕಾಸುರ ” ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?

ಎಂಬ ಕಾತುರ ಅಭಿಮಾನಿಗಳಿಗಿದೆ. ಅನುಭವಿ ಕಲಾವಿದರ ಅಭಿನಯ ಹಾಗೂ ಉತ್ತಮ ತಂತ್ರಜ್ಞರ ಕಾರ್ಯವೈಖರಿಯಲ್ಲಿ “ಲಂಕಾಸುರ” ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

error: Content is protected !!