ಸ್ಮಶಾನದೊಳ್ ಅಡವಿ ಮಂದಿ! ಪೋಸ್ಟರ್ ರಿಲೀಸ್ ಮಾಡಿದ ಪೌರಕಾರ್ಮಿಕರು

ಅಡವಿ ಇದು ಅರಂಭದಿಂದಲೂ ಸದ್ದು ಮಾಡುತ್ತಲೇ ಬಂದ ಚಿತ್ರ. ಪರಿಸರ ಸಂರಕ್ಷಣೆ ಹಾಗೂ ಆದಿವಾಸಿಗಳ ಜೀವನ ಆಧಾರಿತ ಸ್ಥಳೀಯ ಹೊಸ ಪ್ರತಿಭೆಗಳಿಂದ ಮೂಡಿಬಂದ ಈ ಚಿತ್ರದ ಪೋಸ್ಟರ್ ಅನ್ನು ರುದ್ರಭೂಮಿಯಲ್ಲಿ ಪೌರಕಾರ್ಮಿರಿಂದ ಬಿಡುಗಡೆ ಮಾಡಿಸುವ ಮೂಲಕ ನಿರ್ದೇಶಕ ಟೈಗರ್ ನಾಗ್ ವಿಶೇಷ ಮೆರೆದಿದ್ದಾರೆ.

ಪತ್ರಕರ್ತ, ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಕಾದಂಬರಿ ಆಧರಿಸಿ, ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು, ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕೊರಟಗೆರೆಯ ಪಟ್ಟಣದಲ್ಲಿ ವಿಶೇಷವಾಗಿ ರುದ್ರಭೂಮಿಯಲ್ಲಿ ಪೌರಕರ್ಮಿಕರು ಬಿಡುಗಡೆ ಮಾಡಿದ್ದು ವಿಶೇಷ.

ಅತಿಥಿಯಾಗಿ ಸ್ಮಶಾನಕ್ಕೆ ಬಂದು ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಪೌರಕಾರ್ಮಿಕೆ ಮಂಜಮ್ಮ ಮಾತನಾಡಿ, ನಗರದ ಸ್ವಚ್ಛತೆಗೆ ದುಡಿಯುವ ನಮ್ಮಂತಹ ಕಾರ್ಮಿಕರನ್ನು ಗಮನಿಸದೆ ಇರುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕಾರ‍್ಯಕ್ರಮಕ್ಕೆ ಆಹ್ವಾನಿಸಿ ಪೋಸ್ಟರ್ ಅನ್ನು ನನ್ನಂಥ ಪೌರ ಕಾರ್ಮಿಕರ ಕೈಯಿಂದ ಬಿಡುಗಡೆ ಮಾಡಿಸುವ ಮೂಲಕ ಪೌರಕಾರ್ಮಿಕರ ಮಹತ್ವವನ್ನು ಸ್ವಚ್ಛತೆಯ ಅಗತ್ಯತೆಯ ಸಂದೇಶವನ್ನು ನಾಡಿಗೆ ಚಿತ್ರತಂಡ ನೀಡಿದೆ. ನಗರ ಪಾಲಿಕೆ, ನಗರಸಭ ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ
ಸೇವೆ ಸಲ್ಲಿಸುತ್ತಿರುವ ನಮ್ಮಂತಹ ಸಾಮಾನ್ಯ ಪೌರಕಾರ್ಮಿಕರಿಂದ ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಿದ್ದು ಸ್ವಚ್ಛತಾ ರಾಯಭಾರಿ ಗಳಾಗಿ ಕೆಲಸ ಮಾಡುತ್ತಿರುವ ನಮಗೆ ಸಲ್ಲಿಸಿದ ಗೌರವವಾಗಿದೆ ಈ ಚಿತ್ರವು ಯಶಸ್ಸಾಗಲಿ ಎಂದು ಶುಭಹಾರೈಸಿದರು.

ಸಂವಿಧಾನ ಸಿನಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗಿರುವ ಅಡವಿ ಚಿತ್ರವು ನನಗೆ ಮುಖ್ಯ ಭೂಮಿಯಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಚಿತ್ರೀಕರಣದ ಆರಂಭದಲ್ಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು. ಅರಣ್ಯ ಸಂರಕ್ಷಣೆ. ಅರಣ್ಯದೊಂದಿಗೆ ಬೆಸೆದುಕೊಂಡಿರುವ ಮೂಲ ನಿವಾಸಿಗಳ ಬದುಕಿನ ಹೋರಾಟದ ವಾಸ್ತವದ ನೈಜ ಚಿತ್ರಣವನ್ನು ತೆರೆದಿಡಲಿದೆ. ಈ ಚಿತ್ರದಲ್ಲಿ ಸಾಮಾಜಿಕ ಹೋರಾಟಗಾರರು ಪ್ರಗತಿಪರ ಚಿಂತಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಗಾಂಧಿನಗರದಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ ಎಂದು ಅರ್ಜುನ್ ಪಾಳೇಗಾರ್ ಹೇಳಿದ್ದಾರೆ.

ಚಿತ್ರದ ನಾಯಕ ಮೋಹನ್ ಮೌರ್ಯ ಮಾತನಾಡಿ ನನಗೆ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಲು ಅವಕಾಶ ಮಾಡಿಕೊಟ್ಟ ಟೈಗರ್ ನಾಗ್ ಮತ್ತು ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆಗೆ ಥ್ಯಾಂಕ್ಯು ಹೇಳ್ತೀನಿ.
ಈ ಚಿತ್ರ ಎಪ್ರಿಲ್ 14ರ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನ ತೆರೆಗೆ ಬರಲು ತಯಾರಿ ನಡೆಸಿದೆ. ಸಮಾಜ ಕಟ್ಟಕಡೆಯ ಸಮುದಾಯಕ್ಕೆ ನ್ಯಾಯಒದಗಿಸುವ ನೈಜ್ಯ ಕಾದಂಬರಿ ಆಧಾರಿತ ಚಿತ್ರ ಇದ್ದಾಗಿದ್ದು, ರಾಜ್ಯದ ಜನತೆ ನವ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ನೋಡಲೇ ಬೇಕಾದ ಚಿತ್ರ ನಮ್ಮ ಅಡವಿ ಚಿತ್ರವನ್ನು ಚಿತ್ರ ಮಂದಿರಗಳಿಗೆ ಆಗಮಿಸಿ ವೀಕ್ಷಣೆ ಮಾಡಬೇಕೆಂದು ಮನವಿ ಮಾಡುತ್ತೇವೆ. ಎಂಬುದು ಮೋಹನ್ ಆರ್ಯ ಮಾತು.

ನಾಯಕಿ ಶಿಲ್ಪಾ ಮಾತನಾಡಿ, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅವರ ಪ್ರಥಮ ಚಿತ್ರವನ್ನು ಟೈಗರ್ ನಾಗ್ ನಿರ್ದೇಶಿಸಿದ್ದಾರೆ ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆ ಬಿಂಬಿಸುವ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಅವಕಾಶ ಕೊಟ್ಟ ಟೈಗರ್ ನಾಗ್ ಅವರಿಗೆ ಧನ್ಯವಾದ ಎಂದರು.

ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಫುಲೆ ಕುವೆಂಪುರವರ ಆದರ್ಶ ದಂತೆ ಮೌಡ್ಯತೆ ವಿರೋಧಿಸಿ ಸ್ಮಶಾನದಲ್ಲಿ ಅಡವಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಆದಿವಾಸಿಗಳ ಕುರಿತು ಪರಿಸರ ಹಾಗೂ ಸಂವಿಧಾನ ಜಾಗೃತಿ ಕಾದಂಬರಿ ಆಧಾರಿತ ಅಡವಿ ಚಿತ್ರದ ಪೋಸ್ಟರ್ ಅನ್ನು ಕೊರಟಗೆರೆ ಪಟ್ಟಣದ ಸ್ಮಶಾನದಲ್ಲಿ ಪೌರಕಾರ್ಮಿಕರಿಂದ ವಿಶೇಷವಾಗಿ ಬಿಡುಗಡೆ ಮಾಡಿದ್ದು ಹೆಮ್ಮೆ ಎನಿಸುತ್ತೆ . ಶೀಘ್ರದಲ್ಲೇ ತೆರೆಗೆ ಬರಲು ಸಿದ್ದರಾಗುತ್ತಿದ್ದೇವೆ.
ಈ ಚಿತ್ರಕ್ಕಾಗಿ ಸಿದ್ದರಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲಹಟ್ಟಿ ಸೆಟ್ಟನ್ನು ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ರವರ ಕಲಾ ನಿರ್ದೇಶನದಲ್ಲಿ ನಿರ್ಮಾಣ ಮಾಡಲಾಗಿತ್ತು.

ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿತ್ತು. ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ತಾಣಗಳಲ್ಲಿ ಚಿತ್ರೀಕರಣವಾಗಿದೆ. ಅರಣ್ಯ ರಕ್ಷಣೆಯ ಜಾಗೃತಿಯ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನ ವ್ಯವಸ್ಥೆಯ ಹಾಗೂ ಪರಿಸರ ಸಂರಕ್ಷಣೆಯ ಕಥೆಯನ್ನು ತೆರೆದಿಡುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರವಾಗುವ ನಿರೀಕ್ಷೆ ಇದೆ ಎಂದಿದ್ದಾರೆ ನಿರ್ದೇಶಕ ಟೈಗರ್ ನಾಗ್ ಹೇಳಿದ್ದಾರೆ.

ಛಾಯಾಗ್ರಾಹಕ ರವಿಕುಮಾರ್ ಸನಾ, ಆರ್ ಅನಂತರಾಜ್. ರಥವಾರಂ ದೇವು. ಶಿಲ್ಪಾ ನಾಗ್. ವಾಲೆ ಚಂದ್ರು . ರಾಮನಾಯಕ್ . ವೃಶ್ಚಿಕ. ಮಂಜೀವ. ಸರಸ್ವತಿ. ಬಾಲ ನಟಿ ಬೇಬಿ ಸಿಂಚನ, ಶಿವಾನಂದ್. ಕೆ. ಆರ್. ಓಬಳರಾಜು ನವೀನ್ ಕಲ್ಪತರು ಆನಂದ್ ದಿನೇಶ್ ರಾಜ್ ಹರ್ಷಿತ್. ಅರುಣ್,ದಾಸೇಗೌಡ ಸೇರಿದಂತೆ ಇತರರು ಇದ್ದಾರೆ.

ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಮಧುಗಿರಿ ಸಾಧಿಕ್ ಸಾಬ್, ಛಾಯಾಗ್ರಹಣ ವಿಪಿನ್ ರಾಜ್. ಸಂಗೀತ ನಿರ್ದೇಶಕ ಮಂಜು ಮಹಾದೇವ್. ಸಂಕಲನ ಸಂಜೀವ್ ರೆಡ್ಡಿ. ಸಾಹಿತ್ಯ ಕವಿರಾಜ್ ವಿ ಮನೋಹರ್. ಸಂಭಾಷಣೆ ಸಾಹಸ ನೃತ್ಯ ಎ.ಆರ್ ಸಾಯಿರಾಮ್. ಸಹ ನಿರ್ದೇಶಕ ಕೆ.ಮಂಜುನಾಥ್ ಕೋಟೆ ಕೆರೆ. ವಸ್ತ್ರಾಲಂಕಾರ ಪುಟ್ಟರಾಜ. ಮೇಕಪ್ ದಯಾನಂದ್ ಕೆಲಸ‌ ಮಾಡಿದ್ದಾರೆ.

ಪೋಸ್ಟರ್ ಬಿಡುಗಡೆ ವೇಳೆ ಪ.ಪಂ ಸದಸ್ಯ ನಟರಾಜು, ಯುವಮುಖಂಡ ರಮೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಪವನ್ ಡಾಲಿ ರಾಖಿ ಪ್ರಭು ಇದ್ದರು.

Related Posts

error: Content is protected !!