Categories
ಸಿನಿ ಸುದ್ದಿ

ಪಿ.ಲಂಕೇಶ್ ಮೊಮ್ಮಗನ ಸಿನಿಮಾ ಎಂಟ್ರಿ: ಮಗನಿಗೆ ಇಂದ್ರಜಿತ್ ನಿರ್ದೇಶನ; ಗೌರಿಯಾಗಿ ಸಮರ್ಜಿತ್ ಲಂಕೇಶ್ ಪಾದಾರ್ಪಣೆ

ಹಿರಿಯ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್‍ ಲಂಕೇಶ್‍ ಅವರ ಮಗ ಸಮರ್ಜಿತ್ ಲಂಕೇಶ್‍ ನಾಯಕರಾಗಿ ನಟಿಸುತ್ತಿರುವ “ಗೌರಿ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದೆ. ಈ ಚಿತ್ರದ ಮೂಲಕ ಸಮರ್ಜಿತ್ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಬಸವನಗುಡಿ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿದ್ದು,. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್‍ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡಿದ ಇಂದ್ರಜಿತ್ ಲಂಕೇಶ್, “ಗೌರಿ” ಶೀರ್ಷಿಕೆ ಇಡಲು ಕಾರಣವಿದೆ. ನಮ್ಮ ಅಕ್ಕನ ನೆನಪಿನಲ್ಲಿ ಈ ಶೀರ್ಷಿಕೆಯಿಟ್ಟಿದ್ದೇನೆ. ಈ ಚಿತ್ರ ಯುವಕರಿಗೊಂದು ಸ್ಫೂರ್ತಿದಾಯಕ ಸಿನಿಮಾ‌ ಆಗುವುದಂತು ನಿಜ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ. ಏನೇ ಹೆಚ್ಚು ಹೇಳಿದರೂ ಈ ಚಿತ್ರದ ಕಥೆ ಏನಿರಬಹುದು? ಎಂಬುದು ಎಲ್ಲರಿಗೂ ತಿಳಿಯುತ್ತದೆ.

ಇದು ನಮ್ಮ ರಾಜ್ಯದ ಕಥೆ. ಇಡೀ ದೇಶಕ್ಕೇ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಮುಂದಿನ ದಿನಗಳಲ್ಲಿ ಒಂದೊಂದೇ ವಿಷಯಗಳನ್ನು ಹಂಚಿಕೊಳ್ಳುತ್ತಾ ಹೋಗುತ್ತೇ ಎನ್ನುತ್ತಾರೆ ಇಂದ್ರಜಿತ್‍.

‘ಗೌರಿ’ ಚಿತ್ರದಲ್ಲಿ ನಾಯಕ ಸಮರ್ಜಿತ್ ಲಂಕೇಶ್ ಮತ್ತು ನಾಯಕಿ ಸಾನಿಯಾ ಅಯ್ಯರ್ ಸಹ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸಪಟ್ಟರು. ‘ಕಾಂತಾರ’ ಚಿತ್ರದ ಖ್ಯಾತಿಯ ಮಾನಸಿ ಸುಧೀರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದ್ರಜಿತ್‍ ಅವರ ಪತ್ನಿ ಅರ್ಪಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಮತ್ತು ಚಂದನ್‍ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆ ಬರೆಯುತ್ತಿದ್ದಾರೆ.

‘ಗೌರಿ’ ಚಿತ್ರವನ್ನು 2024 ರ ಮಾರ್ಚ್ ನಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್.

ಈ ಸಂದರ್ಭದಲ್ಲಿ ಸಂಭಾಷಣೆಕಾರರಾದ ಬಿ.ಎ. ಮಧು ಮತ್ತು ಮಾಸ್ತಿ ಮಂಜು, ಗೀತರಚನೆಕಾರ ಕವಿರಾಜ್, ಆನಂದ್ ಆಡಿಯೋ ಶ್ಯಾಮ್, ಹಿರಿಯ ನಿರ್ಮಾಪಕ ಕೆ. ಮಂಜು ಮುಂತಾದವರು ಹಾಜರಿದ್ದು ‘ಗೌರಿ’ ಚಿತ್ರತಂಡಕ್ಕೆ ಶುಭಕೋರಿದರು.

Categories
ಸಿನಿ ಸುದ್ದಿ

ಹುಲಿನಾಯಕನಿಗೆ ಸುದೀಪ್ ಸಾಥ್: ಇದು ಚಕ್ರವರ್ತಿ ಕನಸಿನ ಚಿತ್ರ

ನಟ ಸುದೀಪ್ ಅವರರ 50ನೇ ಹುಟ್ಟುಹಬ್ಬದಂದು ಪತ್ರಕರ್ತ, ನಟ ಹಾಗೂ ನಿರ್ದೇಶಕ ಡಿ.ಜೆ ಚಕ್ರವರ್ತಿ(ಚಂದ್ರಚೂಡ್), “ವೃಕ್ಷದೀಪ” ಎಂಬ ಹೆಸರಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ವೃಕ್ಷದೀಪ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಕೋರಿದ್ದಾರೆ. “ಅಭಿನಯ ತಿಲಕ” ಎಂಬ ಅಭಿಮಾನದ ಹಾಡನ್ನು ಚಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಬಿಡುಗಡೆ ಮಾಡಿ ಹಾರೈಸಿದ್ದು, ಕಾರ್ಯಕ್ರಮದಲ್ಲಿ ಶಾಸಕ ರಾಜು ಗೌಡ ನಾಯಕ, ವೀರಕಪುತ್ರ ಶ್ರೀನಿವಾಸ್ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ನಿರ್ಮಿಸುತ್ತಿರುವ, ಡಿ.ಜೆ.ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿರುವ “ಹುಲಿ ನಾಯಕ” ಚಿತ್ರದ ಮೋಷನ್ ಪೋಸ್ಟರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.

ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸುದೀಒ್, ಚಕ್ರವರ್ತಿ ಬಿಗ್ ಬಾಸ್ ನಿಂದ ನನಗೆ ಹತ್ತಿರವಾದರು. ಆತ ಅದ್ಭುತ ರೈಟರ್. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಹುಲಿನಾಯಕ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

“ವೃಕ್ಷದೀಪ” ಅಭಿಯಾನಕ್ಕೆ ಚಾಲನೆ ನೀಡಿದ ಎಲ್ಲಾ ಗಣ್ಯರಿಗೆ, ಹಾಡು ಬಿಡುಗಡೆ ಮಾಡಿಕೊಟ್ಟ ಸ್ವಾಮೀಜಿ ಅವರಿಗೆ ಹಾಗೂ ಹುಟ್ಟುಹಬ್ಬದ ಸಡಗರದಲ್ಲಿದ್ದರೂ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ನನ್ನ ಧನ್ಯವಾದ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷ್ಮಣ ನಾಯಕ ಅವರ ಕುರಿತಾದ ಈ ಚಿತ್ರವನ್ನು ಮಂಜುನಾಥ್ ಅವರು ನಿರ್ಮಿಸುತ್ತಿದ್ದಾರೆ‌. ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿದ್ದಾರೆ‌. ನಾನು ನಿರ್ದೇಶನ ಮಾಡುತ್ತಿದ್ದೇನೆ‌. ಇಂದು ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ ಎಂದರು ಡಿ.ಜೆ ಚಕ್ರವರ್ತಿ.

ಚಕ್ರವರ್ತಿ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನನ್ನ ಮಗ ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿದ್ದಾನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್.

ನಮ್ಮ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಸರ್ ಅವರಿಗೆ ನಾನು ಆಭಾರಿ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ಚಕ್ರವರ್ತಿ ಅವರಿಗೆ ಧನ್ಯವಾದ ಎಂದರು ನಾಯಕ ಮಿಲಿಂದ್ ಗೌತಮ್.

ಇದೇ ಸಂದರ್ಭದಲ್ಲಿ ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ವಸಿಷ್ಠ ಸಿಂಹ, ಪೂಜಾಗಾಂಧಿ, ಸಂಜನಾ ಗಲ್ರಾನಿ ಮುಂತಾದ ಕಲಾವಿದರು ಸೇರಿ ಸಿಂಧೂರ ಲಕ್ಷ್ಮಣ್ ನಾಯಕ ಅವರ ಕುಟುಂಬದವರನ್ನು ಹಾಗೂ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರನ್ನು ಸನ್ಮಾನಿಸಿದರು.

Categories
ಸಿನಿ ಸುದ್ದಿ

ಕಾನೂನು ಹಾಡು ಕೇಳಿ: ಇದು ಕಾನೂನು ಅಸ್ತ್ರ ಸಿನಿಮಾ ಸಾಂಗ್ ; ಮೋಷನ್‌ ಪೋಸ್ಟರ್ ಬಂತು

ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಎಂಬ ಅಸ್ತ್ರ ಇಟ್ಟುಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂಬುದನ್ನು ನಾಗರಾಜ್ ಎಂ.ಜಿ.ಗೌಡ ಅವರು ಕಾನೂನು ಅಸ್ತ್ರ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಪುಟ್ಟೇಗೌಡ. ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರೇ ಕಥೆ, ಸಂಭಾಷಣೆ ಬರೆದು ಚಿತ್ರ ನಿರ್ಮಾಣ ಮಾಡುವ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಾಜೇಶ್‌ಗೌಡ ಹಾಗೂ ನಟಿ ಅಪೂರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.


ಜನರು ವಾಹನ ಸಾಲ ಪಡೆದು, ಕಂತು ಕಟ್ಟಲು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರ ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂದು ಈ ಚಿತ್ರ ಹೇಳಲಿದೆ.

ಕಾನೂನಿನಲ್ಲಿ ಶ್ರೀಮಂತ, ಬಡವ ಎನ್ನುವ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳಿಂದ ಪಾರಾಗುವುದಕ್ಕೆ ಇರೋದು ಒಂದೇ ಆಯುಧ ಎಂದರೆ ಅದು ’ಕಾನೂನು ಅಸ್ತ್ರ . ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು, ಕುಶಾಲನಗರ, ಮಡಕೇರಿ ಹಾಗೂ ಹೊರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.


ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ವಿನಯ್‌ಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಬಾಲು ಮಾಸ್ಟರ್ ಅವರ ಕೊರಿಯೋಗ್ರಫಿ ಚಿತ್ರಕ್ಮಿದೆ.
ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ,
ಬಂಡೆಬಾಬು., ಲಕ್ಷ್ಮಿನಾರಾಯಣ್, ಸೌಮ್ಯರಾಜ್, ಯೋಗೇಶ್‌ಶೆಟ್ಟಿ ಇದ್ದಾರೆ.

ಇವರೊಂದಿಗೆ ಬೇಬಿ ಸಾನ್ವಿ ಗೌಡ, ಯೋಗೇಶ್, ಅಂಜನ್, ಚಂದನ,, ಸೌಂದರ್ಯ, ಗಿರೀಶ್, ಮಂಜುನಾಥ್ ಹಿರಿಯೂರು, ಸೌಮ್ಯ ರಾಜ್, ಆನಂದ್, ಮಾನ್ಯ ಗೌಡ, ಇನ್ನೂ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುಸಿದ್ದಾರೆ‌.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನವೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಮಡಿಕೇರಿಯಲ್ಲಿ ಮಂಜಿನ ಸದ್ದು ಮಾಡ್ತಾರೆ ಕಾಲ್ಗೆಜ್ಜೆ ಬಂಗಾರು! ಶಿಷ್ಯನ ಪ್ರೇಮ ಕಾವ್ಯಕ್ಕೆ ಸಾಥ್ ಕೊಟ್ಟ ಎಸ್.ಮಹೇಂದರ್ ಎಂಬ ಗುರು

ರಾಜ್ಯಪ್ರಶಸ್ತಿ ವಿಜೇತ ‘ಕಾಲ್ಗೆಜ್ಜೆ’ ಎಂಬ ಅದ್ಭುತ ಸಿನೆಮಾ ಮಾಡಿದ್ದ ಎ. ಬಂಗಾರು ಈಗ ಹೊಸದೊಂದು ಸಿನಿಮಾಗೆ ಅಣಿಯಾಗಿದ್ದಾರೆ. ಆ ಸಿನಿಮಾಗೆ ‘ಮಡಿಕೇರಿ’ ಎಂದು ನಾಮಕರಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಬಂಗಾರು ಅವರ ಸಿನೆಮಾ ಗುರು ಎಸ್. ಮಹೇಂದರ್ ಅವರು ಶೀರ್ಷಿಕೆ ಬಿಡುಗಡೆ ಮಾಡಿದ್ದು ವಿಶೇಷ. ಈ ವೇ ವೇಳೆ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯ ವಿಶೇಷವಾಗಿತ್ತು.

ಕನ್ನಡದಲ್ಲಿ ಪ್ರೀತಿ ಪ್ರೇಮ ಕುರಿತ ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ಹೊಸ ಬಗೆಯ ಕಥೆ ಹೆಣೆದು ನಿರ್ದೇಶನಕ್ಕೆ‌ಅಣಿಯಾಗಿರುವ ಬಂಗಾರು ಅವರ ‘ ಮಡಿಕೇರಿ’ ಸಿನಿಮಾ ಕೂಡ ಸೇರಿದೆ. ಅಂದಹಾಗೆ, ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಎ. ಬಂಗಾರು ಅವರು ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.

ಹಿರಿಯ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ. ನನ್ನ ಶಿಷ್ಯ ಮಾಡಿದ್ದ ಕಾಲ್ಗೆಜ್ಜೆ ಚಿತ್ರವನ್ನ 2012ರಲ್ಲಿ ನೋಡಿ ತುಂಬಾ ಖುಷಿಪಟ್ಟಿದ್ದೆ. ಅಷ್ಟೊಂದು ಅದ್ಭುತ ಚಿತ್ರ ಅದಾಗಿತ್ತು. ಅದೇ ಬಂಗಾರು ಇದೀಗ ಇನ್ನೊಂದು ಹೊಸ ಯೋಚನೆ-ಯೋಜನೆಯೊಂದಿಗೆ ಮತ್ತೆ ಬಂದಿದ್ದಾರೆ. ನನ್ನ ಶಿಷ್ಯರಲ್ಲಿ ಅತ್ಯಂತ ಪ್ರಿಯವಾದವರು ಬಂಗಾರು. ಮಡಿಕೇರಿ ಸಿನೆಮಾ ಶೀರ್ಷಿಕೆಯೇ ಅದ್ಭುತವಾಗಿದೆ. ಖಂಡಿತ ಇದು ವಿಷಯಾಧಾರಿತ ಚಿತ್ರವಾಗಿ ಹೊರ ಹೊಮ್ಮಲಿದೆ ಎನ್ನುವ ಭರವಸೆ ಇದೆ. ಖಂಡಿತ ಬರಹಗಾರ ಮತ್ತು ಭಾವನಾಜೀವಿ ಬಂಗಾರು ಗೆಲುವು ಸಾಧಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.

ನಿರ್ದೇಶಕ ಎ ಬಂಗಾರು ಮಾತನಾಡಿ, ‘ಇದೊಂದು ಸುಮಧುರ ದೃಶ್ಯಕಾವ್ಯ. ಸಂಗೀತವೇ ಚಿತ್ರದ ಜೀವಾಳ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಟೈಟಲ್ ಝಲಕ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ರವಿ ಶಾಮನೂರು ಮಾತನಾಡಿ, “ಬಂಗಾರು ಅವರು ಹದಿನೈದು ವರ್ಷದ ಸ್ನೇಹಿತರು. ಅವರ ಸಿನೆಮಾ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈ ಹಿಂದೆ ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಕೈ ಜೋಡಿಸಿದ್ದೇನೆ” ಎಂದರು.

ಇನ್ನೊಬ್ಬ ನಿರ್ಮಾಪಕರಾದ ಶಿವಪ್ರಕಾಶ್ ಮಾತನಾಡಿ, “ಬಂಗಾರು ಅವರ ಕಾಲ್ಗೆಜ್ಜೆ ಸಿನೆಮಾ ನೋಡಿ ತುಂಬಾ ಸಂಭ್ರಮಪಟ್ಟಿದ್ದೆ. ಥಿಯೇಟರ್ ನಿಂದ ಹೊರಬಂದವನೇ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಅಡ್ವಾನ್ಸ್ ಕೊಟ್ಟಿದ್ದೆ. ಅವರ ಸಿನೆಮಾ ಪ್ಯಾಷನ್ ನನಗೆ ತುಂಬಾ ಇಷ್ಟವಾಗಿ ನಾವೆಲ್ಲಾ ಸೇರಿ ಈ ಚಿತ್ರಕ್ಕೆ ಸಾಥ್ ನೀಡಿದ್ದೇವೆ” ಎಂದು ಸಂಭ್ರಮಪಟ್ಟರು.
ಬಳಿಗಾರ್, ಮಹೇಂದ್ರ ಬಡಳ್ಳಿ ಸೇರಿದಂತೇ ಬಂಗಾರು ಅವರ ಹಿತೈಷಿಗಳು ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತಾಡಿದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿನೆಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಸಂಗೀತ ನಿರ್ದೇಶಕ ಗಂಧರ್ವ, ‘ಇದೊಂದು ಸಂಗೀತಮಯ ಚಿತ್ರವಾಗಿದ್ದು, ಚಿತ್ರದ ಟೈಟಲ್ ಗೆ ತಕ್ಕಂತೇ ಮ್ಯೂಸಿಕ್ ಮಾಡಿದ್ದೇನೆ’ ಎಂದು ವಿವರಿಸಿದರು. ನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಅನುಭವ ಹಂಚಿಕೊಂಡರು.
ಚಿತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೇ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೆ ಸಾಕಷ್ಟು ಕಲಾವಿದರು ಇರಲಿದ್ದಾರೆ. ಚಿತ್ರದ ಇನ್ನೊಂದು ವಿಶೇಷತೆ ಎಂದರೆ, ಚಂದ್ರ-ಪ್ರಭ ಮತ್ತು ಯಾಸಿನ್ ಅವರ ಕ್ಯಾಮೆರಾ ಕೈ ಚಳಕವಿದೆ. ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ನಿರ್ದೇಶನವಿದೆ. ದಿವ್ಯಾ ಭಾರತಿ ಅವರು ಈ ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಅಕ್ಟೋಬರ್ 19ಕ್ಕೆ ಘೋಸ್ಟ್ ಹವಾ! ವಿದೇಶದಲ್ಲೂ ಬಿಗ್ ಡ್ಯಾಡಿ ಮಿಂಚಿಂಗ್

ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ‌‌‌. ಅಕ್ಟೋಬರ್ 19 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ‌. “ಘೋಸ್ಟ್” ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ.

ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big daddy” ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.

“ಘೋಸ್ಟ್” ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ.

ಲಂಡನ್ ನಿಂದ ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು “ಘೋಸ್ಟ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶೆಟ್ಟರ ಅಧಿಕ ಪ್ರಸಂಗ! ಹೊಸ ಸಿನಿಮಾದ ಫಸ್ಟ್ ಲುಕ್ ನಲ್ಲಿ ಪ್ರಮೋದ್ ಶೆಟ್ಟಿ ಶೈನಿಂಗ್

ಸ್ಯಾಂಡಲ್‌ವುಡ್‌ನ ಭರವಸೆಯ ಕಲಾವಿದರಲ್ಲಿ ಪ್ರಮೋದ್ ಶೆಟ್ಟಿ ಕೂಡ ಒಬ್ಬರು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ತೂತು ಮಡಿಕೆ, ಕಾಂತಾರ ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಅನ್ನೋ ಸಿನಿಮಾದಲ್ಲಿ ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಮೋದ್ ಶೆಟ್ಟಿ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಎಂಬ ಶೀರ್ಷಿಕೆ ಇಡಲಾಗಿದೆ. ಪ್ರಮೋದ್ ಶೆಟ್ಟಿ ಹುಟ್ಟುಹಬ್ಬ..ಅವರ ಜನ್ಮದಿನದ ಅಂಗವಾಗಿ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರವು ಒಂದು ಊರಿನಲ್ಲಿ ಆದ ಅಪಾರ್ಥವೂ ಅನಾಹುತವಾಗಿ, ಅನಾಹುತವು ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ವಡ್ಡಾರಾಧಕ ಹಾಗೂ ಶಬರಿ ಎನ್ನುವ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಆಕ್ಷನ್ ಕಟ್ ಹೇಳಿದ್ದಾರೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಚಂದ್ರಕಲಾ ಚಿತ್ರದ ಭಾಗವಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಇಡುವಾಣಿ ಎನ್ನುವ ಒಂದು ಹಳ್ಳಿಯಲ್ಲಿ ಚಿತ್ರವನ್ನು ಚಿತ್ರಿಸಿದ್ದು ಇಡೀ ಊರಿಗೆ ಊರನ್ನೇ ಸಿನಿಮಾ ಸೆಟ್ಟನ್ನಾಗಿಸಿಕೊಂಡು ಊರು ಜನಗಳನ್ನೇ ಉಪಯೋಗಿಸಿಕೊಂಡು ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸುಮತ್ ಶರ್ಮಾ ಛಾಯಾಗ್ರಹಣ, ಸಂಜೀವ್ ಜಾಗೀರ್ದಾರ್ ಸಂಕಲನ, ಚೇತನ್ ಕುಮಾರ್ ಸಂಗೀತ ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರಕ್ಕಿದೆ.

ಗನ್ನಿ ಬ್ಯಾಗ್ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ನಿರ್ಮಾಣ ಮಾಡಿದ್ದು, ಊರ್ ಮನೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Categories
ಸಿನಿ ಸುದ್ದಿ

ಯುವಕರಿಗೊಂದು ಹೊಸ ಕ್ರೇಜ್: ಕ್ರೇಜಿ ಕೀರ್ತಿ ಸಿನಿಮಾ ಟ್ರೇಲರ್ ರಿಲೀಸ್

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು‌ ಬಂದಿವೆ. ಆ ಸಾಲಿಗೆ ಈಗ ‘ಕ್ರೇಜಿ ಕೀರ್ತಿ’ ಎಂಬ ಸಿನಿಮಾ‌ ಕೂಡ ಸೇರಿದೆ. ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕುವ ಉತ್ಸುಕದಲ್ಲಿದೆ.

ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ ಈ ಚಿತ್ರಕ್ಕೆ ಬಾಲಾಜಿ ಮಾಧವ ಶೆಟ್ಟಿ ನಿರ್ದೇಶಕರು. ಚಿತ್ರದ ನಿರ್ಮಾಪಕರು ಕೂಡ ಅವರೆ. ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದಿದೆ.

ನಿರ್ದೇಶಕ, ನಿರ್ಮಾಪಕರಾಗಿರುವ ಬಾಲಾಜಿ ಮಾಧವ ಶೆಟ್ಟಿ ಮಾತನಾಡಿ, ಇದು ಮೊದಲ ಸಿನಿಮಾ. ಸಾಕಷ್ಟು ಶ್ರಮ ವಹಿಸಿ ಸಿನಿಮಾ‌ ಮಾಡಿದ್ದೇವೆ. ಇದೊಂದು ಯುವಜನತೆಯ ಮೇಲೆ ಮಾಡಿರುವ ಸಿನಿಮಾ. ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆ ಇದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಪ್ಲಸ್.

ಇನ್ನು, ಈ ಸಿನಿಮಾ ಇಷ್ಟೊಂದು‌ ಚೆನ್ನಾಗಿ ಮೂಡಿ ಬರಲು ಕಾರಣ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಅವರಿಗೆ ಇಲ್ಲೊಂದು ವಿಶೇಷ ಎನಿಸುವ ಪಾತ್ರವಿದೆ. ಪಾತ್ರದ ಜೊತೆಗೆ ಸಿನಿಮಾ ಹೇಗೆ ಬರಬೇಕು, ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಹೇಳುವ ಮೂಲಕ ಓಂ ಪ್ರಕಾಶ್ ರಾವ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣರಾಗಿದ್ದಾರೆ. ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.

ಈ ಸಿನಿಮಾದಲ್ಲಿ ನನಗೆ ಕೆಲಸ ಮಾಡಲು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಮೊದಲು ಒಂದು ಪಾತ್ರವಿದೆ. ಅದನ್ನು ನೀವೆ ಮಾಡಬೇಕು ಅಂತ ಹೇಳಿದಾಗ, ಕಥೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ. ಇನ್ನು, ಕೊರೊನಾ ಸಮಯದಲ್ಲಿ ನನಗೆ ಈ ಸಿನಿಮಾದಲ್ಲಿ ಕೆಲಸ‌ ಮಾಡುವ ಅವಕಾಶ ಕೊಟ್ಟಿದ್ದು ವಿಶೇಷ. ಆ ಕಾರಣಕ್ಕೆ ನಾನು ಸಿನಿಮಾದ ತೆರೆಯ ಮೇಲೂ ಮತ್ತು ಹಿಂದೆಯೂ ಇದ್ದು, ಒಂದೊಳ್ಳೆಯ ಸಿನಿಮಾ ಆಗಲು ಅವರ ಜೊತೆ ಕೈ ಜೋಡಿಸಿದ್ದೇನೆ ಎಂದು ಓಂಪ್ರಕಾಶ್ ರಾವ್ ತಿಳಿಸಿದರು.

ಹೀರೋ ಅಭಿಲಾಶ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ‌ ಮಾಡಿದ್ದಾರೆ. ಸಿನಿಮಾ ಯಶಸ್ಸು ಕಾಣಲಿ ಎಂದುವ ಓಂ ಪ್ರಕಾಶ್ ರಾವ್ ಹಾರೈಸಿದರು.

ನಾಯಕ ಅಭಿಲಾಶ್ ಮಾತನಾಡಿ, ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಇದು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ಮನರಂಜನೆಗೆ ಇಲ್ಲಿ ಸಾಕಷ್ಟು ಜಾಗವಿದೆ. ಕ್ರೇಜಿ ಹುಡುಗಿ ಏನೆಲ್ಲಾ ಮಾಡುತ್ತಾಳೆ ಎಂಬುದನ್ನು‌ ಸಿನಿಮಾದಲ್ಲೇ ನೋಡಬೇಕು ಎಂದರು‌.

ನಾಯಕಿ ಸಾರಿಕ ರಾವ್ ಅವರಿಗೆ ಇಲ್ಲಿ‌ ಲವಲವಿಕೆಯ ಪಾತ್ರ ಇದೆಯಂತೆ. ಕೀರ್ತಿ ಎಂಬುದು ಅವರ ಪಾತ್ರದ ಹೆಸರು. ಅವರೇ ಹೇಳುವಂತೆ, ಸಿನಿಮಾದಲ್ಲಿ‌ ಸಾಕಷ್ಟು ಅನುಭವ ಆಗಿದೆ. ಓಂ ಪ್ರಕಾಶ್ ರಾವ್ ಅವರಿಂದ ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅವರಿಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ‌ ಮಾಡಿದ್ದಾರೆ. ಹೊಸತನ ಕಥೆ ಇಲ್ಲಿದೆ. ಹೊಸ ಜಾನರ್ ಸಿನಿಮಾಗೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದರು.

ಸಂಗೀತ ನಿರ್ದೇಶನ ಮಾಡಿರುವ ಲಯ ಕೋಕಿಲ ಅವರು, ಇಲ್ಲಿ ಎರಡು ಹಾಡು ಹಾಗು ಹಿನ್ನೆಲೆ ಸಂಗೀತ ನೀಡಿದ ಬಗ್ಗೆ ಮಾತಾಡಿದರು.

ಮತ್ತೊಬ್ಬ ನಾಯಕಿ ರಿಶಾ ಗೌಡ ಅವರಿಗೆ ಇದು‌ ಮೊದಲ ಸಿನಿಮಾ. ಅವರ ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಅವರು, ಆ ಪಾತ್ರ ಸಿನಿಮಾದ ಹೈಲೆಟ್. ಅದನ್ನು‌ ಸಿನಿಮಾದಲ್ಲೇ ನೋಡಬೇಕು ಎಂದರು ರಿಶಾ ಗೌಡ.

ಸಂದೀಪ್ ಮಾಧವ ಶೆಟ್ಟಿ ಇತರರು ಇದ್ದರು. ಚಿತ್ರದಲ್ಲಿ ರಂಗಾಯಣ ರಘು, ಪದ್ಮಜಾ ರಾವ್, ಪ್ರಕಾಶ್ ಶೆಣೈ, ಆಶಾ ಸುಜಯ್ ಇತರರು ಇದ್ದಾರೆ. ಮನೋಹರ ಅವರ ಛಾಯಾಗ್ರಹಣವಿದೆ. ಲಕ್ಷ್ಮಿನಾರಾಯಣ ರೆಡ್ಡಿ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಜವಾನ್ ಟ್ರೇಲರ್ ರಿಲೀಸ್; ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ನಯನತಾರಾ

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಿಡುಗಡೆಗೆ ಇನ್ನೊಂದೇ ವಾರವಿದ್ದರೂ, ಚಿತ್ರದ ಟ್ರೇಲರ್ ಬಿಡುಗಡೆಯಾಗಿಲ್ಲ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗಾಗಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.


ವಿಶೇಷವೆಂದರೆ, ಈ ಟ್ರೇಲರ್ ಬಿಡುಗಡೆ ಮಾಡಿರುವುದು ಚಿತ್ರದ ನಾಯಕಿ ನಯನತಾರಾ. ಇನ್ಸ್ಟಾಗ್ರಾಮ್ ನಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ನಯನತಾರಾ ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ನಟಿಯ ಚಿತ್ರವೊಂದರ ಟ್ರೇಲರ್ ಬಿಡುಗಡೆ ಆಗಿರುವುದು ಖುಷಿಯಾದರೆ, ನಯನತಾರಾ ಸೋಷಿಯಲ್ ಮೀಡಿಯಾಗೆ ಬಂದಿರುವುದು ಅವರ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.


ಈ ಟ್ರೇಲರ್ ನಲ್ಲಿ ರೋಚಕವೆನಿಸುವಂತಹ ಸಾಹಸಮಯ ದೃಶ್ಯಗಳು, ಎದೆ ಝಲ್ಲೆನಿಸುವ ಆಕ್ಷನ್ ದೃಶ್ಯಗಳು ಹೆಚ್ಚಿದ್ದು, ‘ಜವಾನ್’ ಪ್ರಪಂಚವನ್ನು ತೆರೆದಿಟ್ಟಿದೆ. ಕಣ್ಣು ಸೆಳೆಯುವ ದೃಶ್ಯಗಳಿರುವ ಈ ಟ್ರೇಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದ್ದು, ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.


‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿಯಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮ ಸಹನಿರ್ಮಾಪಕರಾಗಿದ್ದಾರೆ. ಚಿತ್ರವು ಸೆ.07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಗುರುರಾಯರ ಸನ್ನಿಧಿಯಲ್ಲಿ ಚಿನ್ನದ‌ ಮಲ್ಲಿಗೆ ಹೂವು!

ಇತ್ತೀಚಿಗೆ ಟೈಟಲ್ ಮೂಲಕವೇ ಬಾರಿ ಸುದ್ದಿ ಮಾಡಿದ ಚಿತ್ರ ಚಿನ್ನದ ಮಲ್ಲಿಗೆ ಹೂವೇ ಈ ಸಿನಿಮಾ ತಂಡ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಬಳಿಯಲ್ಲಿ ಸ್ಕ್ರಿಪ್ಟ್ ಪೂಜೆ ಸಲ್ಲಿಸಿ ರಾಯರ ಅನುಗ್ರಹಕ್ಕೆ ಪಾತ್ರರಾದರು.

ಈ ಪೂಜೆಯಲ್ಲಿ ರಾಜ್ ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದ ರಾಜು, ಹಾಗೂ ಎಸ್. ಎ.ಗೋವಿಂದ ರಾಜು ಸಿನಿಮಾದ ನಾಯಕ ನಟರಾದ ಷಣ್ಮುಖ ಗೋವಿಂದ, ನಿರ್ಮಾಪಕರಾದ ಶ್ವೇತಾ ಶೆಟ್ಟಿ, ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಕಲಾವಿದರಾದ ಅನಿಲ್, ಲಲಿತ್ ಇನ್ನೂ ಅನೇಕರು ಪೂಜೆಯಲ್ಲಿ ಭಾಗವಾಹಿಸಿ ಗುರುಗಳಿಂದ ಆಶೀರ್ವಾದ ಪಡೆದರು.

ಈ ಚಿತ್ರವನ್ನು ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ, ಬೆಂಗಳೂರು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಛಾಯಾಗ್ರಹಣವನ್ನು ವಿ ಆರ್ ಚಂದ್ರು ಮತ್ತು ಪ್ರಮೋದ್ ಆರ್ ಇಬ್ಬರು ಮಾಡುತ್ತಿದ್ದಾರೆ.

ಸಂಕಲನವನ್ನು ಮಧು ತುಂಬಕೆರೆ ಮಾಡಿದರೆ ಸಂಗೀತವನ್ನು ಪ್ರಣವ್ ಸತೀಶ್ ನೀಡುತ್ತಿದ್ದರೆ ಸೆಪ್ಟಂಬರ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರ ತಂಡ ತಿಳಿಸಿದರು

Categories
ಸಿನಿ ಸುದ್ದಿ

ದಶಕದ ಬಳಿಕ ಕಿಚ್ಚ‌ ನಿರ್ದೇಶಕ! ಕೆಆರ್ ಜಿ ಸ್ಟುಡಿಯೋಸ್ ಕೆಕೆ ಸಿನಿಮಾ ನಿರ್ಮಾಣ; ಕಿಂಗ್ ಕಿಚ್ಚನ ಹವಾ ಶುರು ಗುರು

ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಮಾಣಿಕ್ಯ’ ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ ‘ಕೆಕೆ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

ಸುದೀಪ್ ಅವರು (ಸೆಪ್ಟೆಂಬರ್ 02) ಶನಿವಾರ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರು ನಿರ್ದೇಶನಕ್ಕೆ ಮರಳಿರುವ ವಿಷಯ ಅವರ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚಿತ್ರಕ್ಕೆ ‘God Forgives, I don’t – King Kichcha’ ಎಂಬ ಅಡಿಬರಹವಿದ್ದು, ಈ ಚಿತ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ‘ಕೆಕೆ’ ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಹಾಗೆಯೇ, ಇದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಗುಣಮಟ್ಟದ ಚಿತ್ರಗಳು ಬಿಡುಗಡೆಯಾಗಲಿಕ್ಕೆ ಸಜ್ಜಾಗಿವೆ.

ಸುದೀಪ್ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುತ್ತಿರುವ ಕುರಿತು ಮಾತನಾಡುವ ಕಾರ್ತಿಕ್ ಗೌಡ, ‘’ಹುಚ್ಚ’ ಚಿತ್ರದಿಂದ ನಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೊತೆಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಇದೀಗ ನನಸಾಗುತ್ತಿದ್ದು, ಅವರು ನಟನೆಯ ಜೊತೆಗೆ ನಿರ್ದೇಶನ ಸಹ ಮಾಡುತ್ತಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎನ್ನುತ್ತಾರೆ.

error: Content is protected !!