ತನುಷ್ ಸಿನಿಮಾಸ್ ಬ್ಯಾನರ್ ನಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆಯೊಂದು ಬಿಡುಗಡೆಯಾಗಿದೆ. ಹಾಡು ಎಲ್ಲೆಡೆ ಮೆಚ್ಚುಗೆ ಪಡೆದಿದೆ.
ಈ ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಅಚ್ಚಚ್ಚಚ್ಚು ಅಚ್ಚುಮೆಚ್ಚು” ಎಂಬ ಪ್ರೇಮಗೀತೆ ಆನಂದ್ ಆಡಿಯೋ ಮೂಲಕ ಹೊರಬಂದಿದ್ದು ಎಲ್ಲರ ಮನ ಗೆಲ್ಲುತ್ತಿದೆ. ಧರ್ಮವಿಶ್ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಗಾಯಕ ಸಾಯಿ ವಿಘ್ನೇಶ್ ಕಂಠಸಿರಿಯಲ್ಲಿ ಸುಮಧುರವಾಗಿ ಮೂಡಿಬಂದಿದೆ. ತನುಷ್ ಶಿವಣ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿ.ಲವ ನಿರ್ದೇಶಿಸಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕನ್ನಡದಲ್ಲಿ ಪ್ರಾಣಿ ಪ್ರೀತಿಯ ಕಥೆಗಳು ಹೊಸದೇನಲ್ಲ. ಆ ಸಾಲಿಗೆ ಈಗ ಕೋಳಿ ಪ್ರೀತಿಯ ಕಥೆ ಕೂಡ ವಿಶೇಷವಾಗಿದೆ. ಅದು ನಾ ಕೋಳಿಕ್ಕೆ ರಂಗ ಸಿನಿಮಾ ಮೂಲಕ ಅನಾವರಣವಾಗುತ್ತಿದೆ.
ಹೌದು ಮಾಸ್ಟರ್ ಆನಂದ್ ಬಹಳ ದಿನಗಳ ಬಳಿಕ ಹೀರೋ ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು. ಅಂದಹಾಗೆ, ಎಸ್.ಟಿ.ಸೋಮಶೇಖರ್ ನಿರ್ಮಿಸಿರುವ ಈ ಸಿನಿಮಾಗೆ ಗೊರವಾಲೆ ಮಹೇಶ್ ನಿರ್ದೇಶನವಿದೆ. ಇದೊದು ಗ್ರಾಮೀಣ ಭಾಗದ ಸೊಗಡಿನ ಕಥೆ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮಾಸ್ಟರ್ ಆನಂದ್ ಹಾಗು ರಾಜೇಶ್ವರಿ ಈ ಸಿನಿಮಾದ ನಾಯಕ, ನಾಯಕಿ. ಇಲ್ಲಿ ಹಾಸ್ಯದ ಜೊತೆಗೆ ಸಂಬಂಧಗಳ ಮೌಲ್ಯವನ್ನು ಸಾರಲಾಗಿದೆ.
ಇದು ಕೊರೊನಾ ಸಂಕಷ್ಟಗಳನ್ನು ಎದುರಿಸಿ ನಿಂತಿರುವ ಚಿತ್ರ. ಹಾಗಾಗಿ ಬಿಡುಗಡೆ ಕಾಣುವುದು ತಡವಾಗಿದೆ. ಆದರೂ ಚಿತ್ರ ಗೆಲುವು ಕಾಣುವ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ. ಏಕೆಂದರೆ ಚಿತ್ರ ಎಲ್ಲಿಯೂ ಕೂಡ ಬೋರ್ ಎನಿಸುವುದಿಲ್ಲ ಎಂಬುದು ನಿರ್ಮಾಪಕ ಎಸ್.ಟಿ.ಸೋಮಶೇಖರ್ ಮಾತು.
ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅತೀವವಾದ ಗೌರವವಿತ್ತು. ಹಾಗಾಗಿ ಅವರ ಬಗ್ಗೆ ಹಠ ತೊಟ್ಟು ಹಾಡು ಮಾಡಿದೆವು. ಕೈಲಾಶ್ ಖೇರ್ ಹಾಡಿರುವ ಆ ಹಾಡು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಮಾತ್ರವಲ್ಲ; ಈಗಾಗಲೇ ಜನಮನ ಗೆದ್ದಿದೆ ಎಂದರು.
ಇನ್ನು ವರನಟ ಡಾ.ರಾಜ್ ಕುಮಾರ್ ಅವರ ಮೇಲೆ ಅಭಿಮಾನ ಹಾಗಾಗಿ ಪುನೀತ್ ಸರ್ ಅವರಿಂದ ಒಂದು ಹಾಡು ಹಾಡಿಸಬೇಕೆಂದು ಮಾಡಿದ ಪ್ರಯತ್ನ ಕೂಡ ಯಶಸ್ಸು ಕಂಡಿತು. ದೇವರ ಮಗ ಅವರು ಮಾಸ್ಟರ್ ಆನಂದ್ ಅವರಿಗೆ ನೀವು ಹಾಡಬೇಕು ಎಂದ ತಕ್ಷಣವೇ ಒಪ್ಪಿ ಹಾಡಿದರು. ಅದು ನನ್ನ ಪುಣ್ಯ ಎಂದರು ನಿರ್ಮಾಪಕ ಸೋಮಶೇಖರ್.
ಚಿತ್ರವನ್ನು ಕಷ್ಟಪಟ್ಟು ಮಾಡಿದ್ದೇವೆ. ಈಗ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರಬೇಕಾಗಿದೆ. ಈಗ ಅದನ್ನು ಎದುರು ನೋಡುತ್ತಿದ್ದೇವೆ ಎಂದರು ನಿರ್ದೇಶಕ ಗೊರವಾಲೆ ಮಹೇಶ್.
ಮಾಸ್ಟರ್ ಆನಂದ್, ಇದು ತಮಗೆ ದಕ್ಕಿದ ಅಪೂರ್ವ ಅವಕಾಶವಾಗಿದೆ ಎಂದರು.
ಈ ಚಿತ್ರ ಮಾಡಿದ್ದು ಆಕಸ್ಮಿಕ. ಕೊರೊನಾ ಸಮಯದಲ್ಲಿ ಆರಂಭವಾದ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ನಿರ್ಮಾಪಕರು ಸೇರಿದಂತೆ ತಂಡದ ಎಲ್ಲರೂ ಶ್ರಮಪಟ್ಟಿದ್ದಾರೆ. ನನ್ನ ಜೊತೆ ಕಾಮಿಡಿ ಕಿಲಾಡಿ ತಂಡವು ಪರಿಶ್ರಮ ಪಟ್ಟಿದೆ. ಹಾಗಾಗಿ ನಾನು ಎಲ್ಲರಿಗೂ ಕೃತಜ್ಞತೆ ಹೇಳುವೆ ಎಂದರು ಆನಂದ್.
ಹಿರಿಯ ನಟಿ ಭವ್ಯ ತಾಯಿಯಾಗಿ ಪಾತ್ರವನ್ನು ಕಾಣಿಸಿಕೊಂಡಿದ್ದಾರೆ. ಅವರು ಚಿತ್ರತಂಡದ ಜೊತೆಗಿನ ಅನುಭವಗಳನ್ನು ಹೇಳಿಕೊಂಡರು.
ಈ ಚಿತ್ರ ನನ್ನ ವೃತ್ತಿ ಬದುಕಿನ ಮೊದಲ ಚಿತ್ರವಾಗಿರುವುದು ನನ್ನ ಪುಣ್ಯ ಎಂದರು ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರು.
ನಿರ್ಮಾಪಕ ಸೋಮಶೇಖರ್ ಅವರ ಪುತ್ರಿ ರಾಜೇಶ್ವರಿ ಸಿನಿಮಾ ಕುರಿತು ಮಾತನಾಡಿದರು.
ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಜೊತೆಗೆ ನವಿರಾದ ಪ್ರೇಮಕಥೆಯ, ಪ್ರಮೋದ್ ಜಯ ನಿರ್ದೇಶಿಸಿರುವ “ದಿಲ್ ಖುಷ್” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ದಿಲ್ ಖುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
“ದಿಲ್ ಖುಷ್” ಎಂದರೆ ನಾಯಕ – ನಾಯಕಿ ಹೆಸರು. ದಿಲ್ಮಯ ನಾಯಕಿಯ ಹೆಸರಾದರೆ, ಕುಷಾಲ್ ನಾಯಕನ ಹೆಸರು. ಮನೆಮಂದಿಯಲ್ಲಾ ಕುಳಿತು ನೋಡುವ ಈ ಕೌಟುಂಬಿಕ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ.
ಯುವಪ್ರತಿಭೆ ರಂಜಿತ್ “ದಿಲ್ ಖುಷ್” ಚಿತ್ರದ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಅರುಣಾ ಬಾಲರಾಜ್, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು, ಸೂರ್ಯ ಪ್ರವೀಣ್ ಮುಂತಾದವರು ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.
ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದೆ.
ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.
ಸುನಿ-ವಿನಯ್ ’ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ರಾಘಣ್ಣ…ಶೂಟಿಂಗ್ ಮುಗಿಸಿದ ಚಿತ್ರತಂಡ ಹೇಳಿದ್ದೇನು?
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಸಿಂಪಲ್ ಸುನಿ ಹಾಗೂ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಒಂದು ಸರಳ ಪ್ರೇಮ ಕಥೆ. ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಸುನಿ ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ..ಅಂದರೆ ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ..ಒಟ್ಟು ಸಿನಿಮಾದಲ್ಲಿ 11 ಸಾಂಗ್ ಗಳು ಇವೆ. ಎಲ್ಲಾ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.
ರಾಘಣ್ಣ ಮಾತನಾಡಿ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ನೋಡಿದ್ಮೇಲಿನಿಂದ ಸುನಿ ಅವರ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿತ್ತು. ನನ್ನ ಮಗ ನಟಿಸುತ್ತಿದ್ದೇನೆ ಎಂದಾಗ ದೊಡ್ಡ ವಿಷಯ ಎನಿಸಿತು. ನನಗೆ ಟೈಟಲ್ ತುಂಬಾ ಇಷ್ಟವಾಯಿತು. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ನನಗೆ ಸಂತೋಷ ಕೊಡುತ್ತದೆ. ಕುಂಬಳಕಾಯಿ ಹೊಡೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಚೆನ್ನಾಗಿ ಆಗಲಿ. ಸಿನಿಮಾ ನಿಮ್ಮ ಮುಂದೆ ಬರಲಿ. ನಿಮ್ಮ ಬೆಂಬಲ ಇರಲಿದೆ ಎಂದರು.
ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಒಂದು ಸರಳ ಪ್ರೇಮಕಥೆ..ಈ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್ ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಅವರು ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಕೊಡ್ತು. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಪರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಅದ್ಭುತವಾಗಿ ನಟಿಸಿದ್ದಾರೆ ಎಂದರು.
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, ನನ್ನ ಸಿನಿಮಾ ಕರಿಯರ್ ನ ಅತ್ಯಂತ ಉತ್ಕೃಷ್ಟ ಮ್ಯೂಸಿಕ್ ಸಂಗೀತ ಸಿನಿಮಾ ಒಂದು ಸರಳ ಪ್ರೇಮ ಕಥೆ. ನನ್ನ ಎರಡನೇ ಸಿನಿಮಾದಲ್ಲಿ 10 ಹಾಡುಗಳಿದ್ದವು. ತುಂಬ ದೊಡ್ಡ ಹೆಸರು ತಂದುಕೊಟ್ಟಿತ್ತು. ಆ ನಂತರ ಯೋಗರಾಜ್ ಭಟ್ ಅವರ ಪ್ರೊಡಕ್ಷನ್ ನಲ್ಲಿ ದೇವ್ರೇ ಅಂತಾ ಮಾಡಿದ್ದೆ. ಅದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಈ ಸಿನಿಮಾ ಆ ಎರಡು ಸಿನಿಮಾಗಳನ್ನು ಈ ಚಿತ್ರ ಮೀರಿಸುತ್ತದೆ ಅನಿಸುತ್ತಿದೆ. ಯಾಕಂದರೆ ಈ ಸಿನಿಮಾದಲ್ಲಿ 11 ಹಾಡುಗಳಿವೆ. ಸಿನಿಮಾದ ನಡುವೆ ಚಿಕ್ಕ ಚಿಕ್ಕ ಬೀಟ್ ಬರುತ್ತದೆ. 2 ಗಂಟೆ 20 ನಿಮಿಷ ಸಿನಿಮಾದಲ್ಲಿ ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತದೆ ಎಂದರು.
ನಿರ್ಮಾಪಕರಾದ ಮೈಸೂರು ರಮೇಶ್ ಮಾತನಾಡಿ, ನಾನು ಪುಣ್ಯವಂತ. ಕನ್ನಡ ಚಿತ್ರರಂಗದಲ್ಲಿ ಯಾರೇ ಏನೇ ಮಾಡಬೇಕು ಎಂದರೆ ದೊಡ್ಮನೆ ಆಶೀರ್ವಾದ ಬೇಕು. ನನ್ನ ಸಿನಿಮಾದಲ್ಲಿ ರಾಘಣ್ಣ ಹಾಗೂ ವಿನಯ್ ಅವರು ನಟಿಸಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ತುಂಬಾ ಪ್ರೀತಿಯಿಂದ ಮಾಡಿದ್ದೇನೆ ಎಂದರು.
ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ವಿನಯ್ ರಾಜ್ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.
ಬರಹಗಾರನಾಗಿ ಗುರುತಿಸಿಕೊಂಡಿರುವ ಎ ಎಸ್ ಜಿ ಮೊದಲ ಕಥಾಸಂಕಲನವನ್ನು ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಕಲಾಗ್ರಾಮದ ಸಂಭಾಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟರಾಜ್ ಬುದಾಳ್, ಜಯತೀರ್ಥ ಹಾಗೂ ದಯಾ ಗಂಗನಘಟ್ಟ ವಿಶೇಷ ಅತಿಥಿಗಳಾಗಿ ಆಗಮಿಸಿ ಎ ಎಸ್ ಜಿ ಪುಸ್ತಕ ಪ್ರೀತಿಗೆ ಜೊತೆಯಾದರು.
ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಆಲದಹಳ್ಳಿಯವರಾದ ಎ ಎಸ್ ಜಿ ತನ್ನ ಸುತ್ತಮುತ್ತಲಿನ ಕತೆಗಳನ್ನು ಅಕ್ಷರ ರೂಪಕ್ಕಿಳಿಸಿ ತಯಾರಿಸಿರುವ ಗ್ರಾಮೀಣ ಸೊಗಡಿನ ಕಥೆಗಳ ಗುಚ್ಛವೇ ಬ್ಯಾಟೆಮರ. ಎ ಎಸ್ ಜಿ ಅವರ ಈ ಪುಸ್ತಕ ಪ್ರೀತಿಗೆ ಕಾರಣ ಸಿನಿಮಾರಂಗ.
ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಕ್ಕಾಗಿ ತುಡಿಯುತ್ತಿರುವ ಎ ಎಸ್ ಜಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ ತಮ್ಮಲ್ಲಿನ ಪುಸ್ತಕ ಪ್ರೀತಿಯನ್ನು ತೆರೆದಿಟ್ಟಿದ್ದಾರೆ. ನನ್ನ ಪ್ರಕಾರ, ಸಾಹೇಬ, ತೂತುಮಡಿಕೆ, ಒಂದ್ ಕಥೆ ಹೇಳ್ಲಾ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಎ ಎಸ್ ಜಿ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ.
ಈಗಾಗಲೇ ಕಥೆ ಸಿದ್ಧ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಬರಹಗಾರನಾಗಿ ಅನುಭವವಿರುವ ಎ ಎಸ್ ಜಿ ತಮ್ಮ ಇಷ್ಟು ವರ್ಷದ ಪರಿಶ್ರಮವೆಲ್ಲವನ್ನೂ ಹಾಕಿ ಸಿನಿಮಾ ನಿರ್ದೇಶನಕ್ಕಿಳಿಯುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಕಂಡಿದ್ದಾರೆ. ಈ ವರ್ಷದಲ್ಲಿ ಪಠಾಣ್ ಮತ್ತು ಜವಾನ್ ಎರಡು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಮೇಲಾಗಿ ಆ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲೂ ಸಾವಿರಾರು ಕೋಟಿ ಕಮಾಯಿ ಮಾಡಿವೆ. ಈ ಎರಡು ಸಿನಿಮಾಗಳ ಬಳಿಕ ಮತ್ತೊಂದು ವಿಭಿನ್ನ ಅವತಾರದಲ್ಲಿ ಎದುರಾಗಿ ಮನರಂಜನೆ ನೀಡಲು ಶಾರುಖ್ ಖಾನ್ ಸಿದ್ಧರಾಗಿದ್ದಾರೆ.
ರಾಜ್ ಕುಮಾರ್ ಹಿರಾನಿ ಸಾರಥ್ಯದ ಡಂಕಿ ಸಿನಿಮಾದ ಟೀಸರ್ ನಿನ್ನೆ ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಮಾಸ್ ಅವತಾರದಲ್ಲಿ ಅಬ್ಬರಿಸ್ತಿದ್ದ ಶಾರುಖ್ ಡಂಕಿ ಮೂಲಕ ಕ್ಲಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದು, ಟೀಸರ್ 4 ಕೋಟಿ ಮಿಲಿಯನ್ ವೀವ್ಸ್ ಕಂಡಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್ ಇದಾಗಿದೆ.
ನಿನ್ನೆ ಮುಂಬೈನಲ್ಲಿ ನಡೆದ ಡಂಕಿ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಶಾರುಖ್ ಖಾನ್, ಪಠಾಣ್ ಹಾಗೂ ಜವಾನ್ ಸಿನಿಮಾಗಿಂತ ಡಂಕಿ ಸಿನಿಮಾ ಅತಿ ಹೆಚ್ಚು ಮನರಂಜನೆ ನೀಡಲಿದೆ. ರಾಜ್ ಕುಮಾರ್ ಹಿರಾನಿ ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವಾಗಿದೆ. ಹಿರಾನಿ ಚಿತ್ರಗಳಲ್ಲಿ ಯಾವುದೇ ನಿರ್ದಿಷ್ಟ ನಟನಿಗಿಂತ ಕಥೆಯೇ ನಾಯಕತ್ವ ವಹಿಸುತ್ತದೆ. ಶೀಘ್ರದಲ್ಲೇ ಡ್ರಾಪ್ 2 ಮತ್ತು ಡ್ರಾಪ್ 3 ವಿಡಿಯೋ ರಿಲೀಸ್ ಮಾಡುವುದಾಗಿ ತಿಳಿಸಿದರು.
ರಾಜ್ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಭಾವನೆಗಳಿಗೆ, ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಎಂತಹುದೇ ಮಾಸ್ ಹೀರೋ ಆದರೂ ಅವರಿಗೆ ಬೇರೆಯದೇ ಗೆಟಪ್ ನೀಡುತ್ತಾರೆ. ‘ಡಂಕಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಶಾರುಖ್ ಖಾನ್ ಅವರು ಕ್ಲಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಜೊತೆ ಈ ಚಿತ್ರದಲ್ಲಿ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ತಮಿಳಿನ ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್ 2’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಶುಕ್ರವಾರ ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರ ಬಿದ್ದಿದೆ. ಅನ್ಯಾಯದ ವಿರುದ್ಧ ಕಮಲ್ ಹಾಸನ್ ಹೇಗೆಲ್ಲಾ ಹೋರಾಟ ಮಾಡ್ತಾರೆ ಅನ್ನೋದನ್ನು ಸೀಕ್ವೆಲ್ ನಲ್ಲಿ ಕಟ್ಟಿಕೊಡಲಾಗಿದೆ.
‘ಇಂಡಿಯನ್ 2’ ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್’ನ ಮುಂದುವರಿದ ಭಾಗ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರೆದ ಭಾಗವಾಗಿರುವಇಂಡಿಯನ್-2 ಇಂಟ್ರೋ ವೀಡಿಯೋ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ.
ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ನಡಿ ಇಂಡಿಯನ್-2 ನಿರ್ಮಾಣವಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ – ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದಿಂದ ಮತ್ತೊಂದು ಗೀತೆ ಬಿಡುಗಡೆಯಾಗಿದೆ. ರಾಘವೇಂದ್ರ ಕಾಮತ್ ಬರೆದಿರುವ “ಹಣೆಬರಹ” ಎಂದು ಆರಂಭವಾಗುವ, ಭಾವನೆಗಳನ್ನು ಬಿಂಬಿಸುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಇಂಪಾಗಿ ಹಾಡಿದ್ದಾರೆ.
ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಕೂಡ ಎಲ್ಲರ ಮನ ಗೆದ್ದಿದೆ. ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 24 ರಂದು ತೆರೆಗೆ ಬರುತ್ತಿದೆ.
ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಎಲ್ಲಾ ಚಿತ್ರಗಳಿಗಿಂತ “ಶುಗರ್ ಫ್ಯಾಕ್ಟರಿ” ಅಪಾರವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಎನ್ನಲಾಗುತ್ತಿದೆ. ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು ಕೂಡ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್ 2’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರಬೀಳಲಿದ್ದು, ಕಮಲ್ ಹಾಸನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
‘ಇಂಡಿಯನ್ 2’ ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್’ನ ಮುಂದುವರಿದ ಭಾಗ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರೆದ ಭಾಗವಾಗಿರುವಇಂಡಿಯನ್-2 ಚಿತ್ರದ ಇಂಟ್ರೋ ವೀಡಿಯೋ ನಾಳೆ ರಿಲೀಸ್ ಆಗ್ತಿದೆ.
ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿ ಆಮಿರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಡಿಯನ್-2 ಸಿನಿಮಾದ ಇಂಟ್ರೋ ವಿಡಿಯೋ ಅನಾವರಣ ಮಾಡಲಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ನಡಿ ಇಂಡಿಯನ್-2 ನಿರ್ಮಾಣವಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ – ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು ಇದ್ದಾರೆ.
ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.
ಪ್ರೇತ ಸಿನಿಮಾ ಮೂಲಕ ಕಲಾಕರ್ ಹರೀಶ್ ರಾಜ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಗೊತ್ತೇ ಇದೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಆಡಿಯೋ ಲಾಂಚ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಸಚಿವರಾದ ಬೈರತಿ ಸುರೇಶ್ ತಮ್ಮದೇ ಕ್ಷೇತ್ರದ ಕಲಾವಿದರಾದ ಹರೀಶ್ ರಾಜ್ ನಟನೆಯ ಪ್ರೇತ ಸಿನಿಮಾದ ಆಡಿಯೋ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಈ ವೇಳೆ ಕಾಂತಾರದ ಚೆಲುವೆ ಸಪ್ತಮಿ ಗೌಡ ವಿಶೇಷ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಪ್ರೇತ ಸಿನಿಮಾದ ದೂರದ ಊರಿಗೆ ಎಂಬ ಹಾಡು HRP ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಭಾವುಕ ಗೀತೆಗೆ ನವೀನ್ ಸಜ್ಜು ಧ್ವನಿಯಾಗಿದ್ದು, ಪ್ರವೀಣ್ ಶ್ರೀನಿವಾಸ್ ಮೂರ್ತಿ ಟ್ಯೂನ್ ಹಾಕಿದ್ದಾರೆ. ಹರೀಶ್ ರಾಜ್ ಹಾಗೂ ಅಹಿರಾ ಶೆಟ್ಟಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಈ ಗಾನಬಜಾನ ಕೇಳುಗರ ಗಮನ ಸೆಳೆಯುತ್ತಿದೆ.
ಅಭಿನಯದ ಜೊತೆಗೆ ಡೈರೆಕ್ಷನ್ನಲ್ಲಿಯೂ ಅನುಭವ ಹೊಂದಿರುವ ಹರೀಶ್ ರಾಜ್ ಅವರ ‘ಹರೀಶ್ ರಾಜ್ ಪ್ರೊಡಕ್ಷನ್’ನ ಐದನೇ ಕೊಡುಗೆ ಪ್ರೇತ. ಈ ಪ್ರೊಡಕ್ಷನ್ ಮೂಲಕ ಈಗಾಗಲೇ ನಾಲ್ಕು ಸಿನಿಮಾಗಳು ನಿರ್ಮಾಣವಾಗಿದ್ದು, ಇದೀಗ ‘ಪ್ರೇತ’ ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ಅವರೇ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಪ್ರೇತ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿಬರುತ್ತಿದೆ. ವಿರಾಜಪೇಟೆ ಮತ್ತು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.ಶೀರ್ಷಿಕೆಯೇ ಹೇಳುವಂತೆ ‘ಪ್ರೇತ’ ಒಂದು ಹಾರರ್ ಕಥೆಯುಳ್ಳ ಸಿನಿಮಾ. ಹರೀಶ್ ರಾಜ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಹರೀಶ್ ರಾಜ್ ಜೊತೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ, ಬಿ.ಎಂ. ವೆಂಕಟೇಶ್, ಅಮಿತ್ ಅವರು ಪಾತ್ರವರ್ಗದಲ್ಲಿ ಇದ್ದಾರೆ. ಕಿರಣ್ ಆರ್. ಹೆಮ್ಮಿಗೆ ಸಂಭಾಷಣೆ ಬರೆದಿದ್ದಾರೆ.
ಶಿವಶಂಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ. ಜೀವನ್ ಪ್ರಕಾಶ್ ಅವರು ಸಂಕಲನ, ಮಂಜು ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಗೀತೆಗಳಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.