ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಸರಳ ಜೀವನಕ್ಕೆ ಅನಿರೀಕ್ಷಿತವಾಗಿ ಬಂದೊಗುವ ಕಷ್ಟ,ತೊಂದರೆಗಳಿಂದ ಮುಕ್ತನಾಗಲೂ ಸುಬ್ಬಣ ಭಟ್ಟ ಎದುರಿಸುವ ಸವಾಲುಗಳು ಹಾಗೂ ಶಾಖಾಹಾರಿ ಹೋಟೆಲ್ ಶಾಖಾಹಾರಿಯಾಗುವ ಬಗೆಯನ್ನು ಇಲ್ಲಿ ಕಾಣಬಹುದು.
ಎಸ್ ಐ ಮಲ್ಲಿಕಾರ್ಜುನ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ, ವಿನಯ್ ಯು ಜೆ, ನಿಧಿ ಹೆಗಡೆ, ಹರಿಣಿ ಶ್ರೀಕಾಂತ್, ಸುಜಯ್ ಶಾಸ್ತ್ರಿ, ಪ್ರಶಾಂತ್ ನಟನ, ಶ್ರೀಹರ್ಷ ಗೋಭಟ್, ಪ್ರತಿಮಾ ನಾಯಕ್, ಮೋಹನ್ ಶೇಣಿ, ಶಿಲ್ಪಾ ಶೈಲೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಲೆನಾಡಿನ ತಪ್ಪಲಿನಲ್ಲೇ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ.
ಶಾಖಾಹಾರಿ ಸಿನೆಮಾದ ಕಥೆ, ಸಂಭಾಷಣೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂದೀಪ್ ಸುಂಕದ್ ಅವರ ಸೂಕ್ಷ್ಮತೆ, ವಿಶ್ವಜಿತ್ ರಾವ್ ಅವರ ಕ್ಯಾಮೆರ ಕೈಚಳಕ ಸಿನೆಮಾಗೆ ಶಕ್ತಿಯಾಗಿರುವುದಲ್ಲದೇ, ಶಶಾಂಕ್ ನಾರಾಯಣ್ ಅವರ ಸಂಕಲನ, ಮಯೂರ್ ಅಂಬೇಕಲ್ಲು ಅವರ ಸಂಗೀತ ಸಿನೆಮಾಗೆ ಪುಷ್ಟಿ ನೀಡಿದೆ.
ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನರವರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ.
ಶಾಖಾಹಾರಿ ಸಿನಿಮಾದ ಟ್ರೇಲರ್ ಅನ್ನು ಡಾಲಿ ಧನಂಜಯ್ ರವರು ಬಿಡುಗಡೆ ಮಾಡಿ ಮೆಚ್ಚಿದ್ದಾರೆ.
ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.
ಹಿಂದೆಂದೂ ಕಾಣದ ರೀತಿಯಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.. ಹೊಸತನದ ಈ ಹೊಸಬರ ಚಿತ್ರಕ್ಕೆ ಚಿತ್ರಕಥೆಯೇ ಜೀವಾಳವಾಗಿದೆ, ಮರ್ಡರ್ ಮಿಸ್ಟರಿ ಸಿನೆಮಾ ಇದಾಗಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು