ಕಾಂತರ – ಕಾಟೇರ ಚಿತ್ರಗಳ ಮೊದಲೇ ಚಿತ್ರೀಕರಣ ಮುಗಿಸಿದ್ದ ಧೈರ್ಯಂ ಸರ್ವತ್ರ ಸಾಧನಂ. ಕಾಂತಾರ ಚಿತ್ರದಲ್ಲಿ ಬಂದೂಕು ಹಂದಿ ಬೇಟೆ , ಬುಡಕಟ್ಟು ಜನಾಂಗ ಅಸ್ಪೃಶ್ಯತೆ ಎಂಬ ಕೆಲವೊಂದು ಅಂಶಗಳು ಗಮನ ಸೆಳೆದಿತ್ತು.
ಕಾಟೇರ ಕೂಡ ಇದೇ ಸಾಲಿನಲ್ಲಿ ಸಾಗಿದ ಚಿತ್ರ.
ಈಗ ಧೈರ್ಯಂ ಸರ್ವತ್ರ ಸಾಧನಂ ಚಿತ್ರದಲ್ಲೂ ಸಮಾಜದಲ್ಲಿ ನೊಂದವರ, ಬೆಂದವರ ಕಥೆ ಇದೆ. ಇಲ್ಲೂ ಬಂದೂಕು, ಹಂದಿ ಬೇಟೆ ಎಂಬ ಅಂಶಗಳಿವೆ.
ನಿರ್ದೇಶಕ ಎ. ಆರ್. ಸಾಯಿರಾಮ್ ಸಿನಿಮಾ ಬಗ್ಗೆ ಹೇಳುವುದಿಷ್ಟು.
2021 ಡಿಸೆಂಬರ್ 6 ರಂದು ಚಿತ್ರೀಕರಣ ಶುರು ಆಗಿ,
ಜನವರಿ 14ರಂದು ಚಿತ್ರೀಕರಣ ಮುಗಿಯಿತು.
ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿತ್ತು. ಇದೊಂದು ನೆಲದ ಕಥೆ. ನೊಂದವರ ಬದುಕು ಇಲ್ಲಿದೆ. ಆ ಕಾಲಘಟ್ಟದಲ್ಲಿನ ಅಂಶಗಳು ಇಲ್ಲಿವೆ ಎಂದರು.
ನಿರ್ಮಾಪಕರ ಆನಂದ್ ಬಾಬು ಮಾತನಾಡಿ, ಇದೊಂದು ಕಾಡುವ ಹಾಗು ನೋಡುವ ಚಿತ್ರ. ಇಲ್ಲಿ ಗ್ರಾಫಿಕ್ಸ್ ಹೆಚ್ಚಾಗಿದೆ.
4 ರೀತಿಯ ಹಂದಿ 2 ಮೊಲ ಹಾಗೂ ಖಳನಾಯಕನ ಮನೆಯನ್ನು ಸಿಜಿ ಮೂಲಕ ಮಾಡಿರುವುದು ವಿಶೇಷ.
ತುಂಬಾ ನೈಜವಾಗಿ ಕಾಣುವಂತೆ ನಿರ್ದೇಶಕರು ಸಿಜಿ ಕೆಲಸ ಮಾಡಿಸಿದ್ದಾರೆ.
ಪ್ರತಿಯೊಂದು ವಿಭಾಗದಲ್ಲಿ ನಿರ್ದೇಶಕರು ಸೂಕ್ಷ್ಮವಾಗಿ ಕೆಲಸ ಮಾಡಿದ್ದಾರೆ. ಗುಣಮಟ್ಟಕ್ಕಾಗಿ ಸಮಯವಾಗಿದೆ. ಫೆಬ್ರವರಿ 23ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.
ಜನರಿಗೆ ತುಂಬಾ ಇಷ್ಟ ಆಗುವ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ, ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಕಥೆಗಳು ಇರುತ್ತವೆ ಪ್ರೇಕ್ಷಕರ ನಾಡಿ ಮಿಡಿತಕ್ಕೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ ಎಂಬುದು ನಿರ್ಮಾಪಕ ಆನಂದ್ ಬಾಬು ಮಾತು.
ಎ.ಪಿ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದಲ್ಲಿ ಚಿತ್ರ ತಯಾರಾಗಿದೆ.
ಈಗಾಗಲೇ ಹೆಂಡವೇ ನಮ್ಮ ಮನೆಯ ದೇವರು ಹಾಡು
ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಹೃದಯ ಶಿವ ಅವರ ಸಾಹಿತ್ಯವಿದು. ಸಮಾಜದಲ್ಲಿ ನಮ್ಮ ಸುತ್ತ ಮುತ್ತಲೇ ನಮಗೆ ಅರಿವಿಗೆ ಬಾರದ ರೀತಿ ನಮ್ಮ ಮುತ್ತಲು ಬೆಂಕಿ ಹಾಕೋ ಕ್ರೂರ ಮನಸ್ಥಿತಿಗಳ ಅನಾವರಣ ಮಾಡುವ ಹಾಡಿದು.
ಸದ್ಯ ಬೇಡಿಕೆ ಹೆಚ್ಚಾಗುತ್ತಿದೆ. ಅಂದಹಾಗೆ ಇದು ಎ.ಆರ್. ಸಾಯಿರಾಮ್ ಅವರ ಮೊದಲ ನಿರ್ದೇಶನದ ಚಿತ್ರ. ಎ.ಪಿ ಪ್ರೊಡಕ್ಷನ್ಸ್ ಸಂಸ್ಥೆಯ ಆನಂದ್ ಬಾಬು ನಿರ್ಮಾಣದ ನಾಲ್ಕನೆ ಚಿತ್ರ (ಕಮರೊಟ್ಟು ಚೆಕ್ ಪೋಸ್ಟ್. ಗುಬ್ಬಿಮರಿ.) ರವಿಕುಮಾರ್ ಸನಾ ಛಾಯಾಗ್ರಹಣವಿದೆ. ಜ್ಯೂಡ ಸ್ಯಾಂಡಿ ಸಂಗೀತ ಮಾಡಿದರೆ, ಶ್ರೀಕಾಂತ್ ಅವರ ಸಂಕಲನವಿದೆ.