Categories
ಸಿನಿ ಸುದ್ದಿ

ಶಿವನಪಾದ ಮತ್ತೆ ಶುರು… ಎರಡನೇ ಹಂತದ ಶೂಟಿಂಗ್‌ಗೆ ಟೀಮ್‌ ರೆಡಿ

ಕನ್ನಡ ಚಿತ್ರರಂಗ ಈಗ ಹೊಸ ಹುರುಪಿನಲ್ಲಿದೆ. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ ಕೂಡ ಚಿತ್ರರಂಗದ ಚಟುವಟಿಕೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಈಗ ಶೇ.೧೦೦ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಾಗಿದೆ. ಸ್ಟಾರ್‌ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ. ಅತ್ತ, ಹೊಸಬರ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದ ಕೆಲವು ಸಿನಿಮಾಗಳು ಸಹ ತನ್ನ ಚಿತ್ರೀಕರಣ ಮುಂದುವರೆಸುತ್ತಿವೆ. ಆ ಸಾಲಿಗೆ “ಶಿವನಪಾದ” ಸಿನಿಮಾವೂ ಸೇರಿದೆ.

ಹೌದು, ಸೀ ಶೋರ್ ಸ್ಟುಡಿಯೋಸ್ ಬ್ಯಾನರ್‌ನಡಿ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ ಈ ಚಿತ್ರ ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿದೆ. ಜೊತೆಗೆ ಕ್ರೈಮ್‌ ಕೂಡ ಇಲ್ಲಿದೆ. ಈ ಹಿಂದೆ ಲೂಸ್‌ ಮಾದ ಯೋಗಿ ಅಭಿನಯದ “ಬಂಗಾರಿ” ಹಾಗು ಮಕ್ಕಳ ಸಿನಿಮಾಗಳಾದ “ಬೆಟ್ಟದ ದಾರಿ”, “ನಡಗಲ್ಲು”, ತಮಿಳಿನ “ಕಾದಲ್ ಪೈತ್ಯಂ” ಚಿತ್ರಗಳನ್ನು ನಿರ್ದೇಶಿಸಿದ್ದ ಮಾ.ಚಂದ್ರು ಅವರು “ಶಿವನಪಾದ” ಚಿತ್ರಕ್ಕೆ ನಿರ್ದೇಶಕರು. ಸದ್ಯ ಈ ಚಿತ್ರ ಶೇ.೫೦ರಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಮಾತಿನಭಾಗ ಹಾಗೂ ಎರಡು ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಮುದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.


ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತೆ. ಅದೇ ಚಿತ್ರದ ಹೈಲೈಟ್.‌ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳಲ್ಲೊಂದು.

“ಶಿವನಪಾದ” ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆ ಇದು ಎಂಬುದು ನಿರ್ದೇಶಕರ ಮಾತು.

ಚಿತ್ರದಲ್ಲಿ ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹಮೂರ್ತಿ, ಸೂರಿ, ರಂಭಾ ಇತರರು ಇದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವೀರ್ ಸಮರ್ಥ ಅವರ ಸಂಗೀತವಿದೆ. ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪೊಲೀಸ್‌ ಕಮೀಷನರ್‌ ಭೇಟಿ ಮಾಡಿದ ಸ್ಯಾಂಡಲ್‌ವುಡ್‌ ! ಪೈರಸಿ ತಡೆಗೆ ಸೈಬರ್‌ ಕ್ರೈಮ್‌ ಮೊರೆ ಹೋದ ನಿರ್ಮಾಪಕರು

ಸರ್ಕಾರ ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 14 ರಿಂದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ.


ಕರ್ನಾಟಕದಲ್ಲಿ ಪೈರಸಿ ಹೆಚ್ಚಾಗುವ ಸೂಚನೆಯಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸ್‌ ಮುಖ್ಯಸ್ಥರನ್ನು ಭೇಟಿ ಮಾಡಲಾಗಿದೆ.

ಈ ವೇಳೆ ನಿರ್ಮಾಪಕರಾದ ಕೆ.ಮಂಜು, ಜಯಣ್ಣ, ಗಣೇಶ್, ರಮೇಶ್ ಯಾದವ್, ಕೆ.ಪಿ.ಶ್ರೀಕಾಂತ್ ಮುಂತಾದ ನಿರ್ಮಾಪಕರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಸುಪ್ರೀಂ ಹೀರೋ; ಭಜರಂಗಿ ಲೋಕಿಯ ಲುಕ್ ಬೆಂಕಿ ಗುರು : ತೆರೆ ಮೇಲೆ ಸರ್ಪ್ರೈಸ್​ ನೀಡಲಿದೆ ಈ ಪಾತ್ರ !!

ಸೌರವ್ ಲೋಕಿ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಮೂಲಕವೇ. ಭಜರಂಗಿ ಚಿತ್ರ ಕೊಟ್ಟ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಮತ್ತೆ ‘ ಭಜರಂಗಿ 2 ‘ ಮೂಲಕ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಇದು

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ ಭಜರಂಗಿ 2 ‘ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್‌ ಮಾಡಿದೆ. ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಲು ಮುಂದಾಗಿರುವ ಚಿತ್ರ ತಂಡ, ಈಗ ಒಂದು ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈಗಾಗಲೇ ಟೀಸರ್ ನಲ್ಲಿ ಆ ಪಾತ್ರದ ಲುಕ್ ಕಾಣಿಸಿಕೊಂಡರೂ, ಆ ಪಾತ್ರದ ಪರಿಚಯಕ್ಕೆ ಅಂತಲೇ ಈಗ ವಿಶೇಷವಾದ ಪೋಸ್ಟರ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದೆ.‌ ಈಗಾಗಲೇ ಅದು ವೈರಲ್‌ ಕೂಡ ಆಗಿದೆ.‌ ನಿರೀಕ್ಷೆಯಂತೆ ಸಿನಿಮಾದ ಬಗ್ಗೆ ದೊಡ್ಡ ಕ್ರೇಜ್ ಶುರುವಾಗಲು ಅದು ನಾಂದಿ‌ ಹಾಡಿದೆ. ಅಂದ‌ಹಾಗೆ, ಆ ಪಾತ್ರ ಮತ್ತು ಪಾತ್ರದ ಕಲಾವಿದ ಬೇರಾರು ಅಲ್ಲ, ಅವರೇ ಭಜರಂಗಿ‌ ಲೋಕಿ.

ಸೌರವ್ ಲೋಕಿ ಹೆಸರಲ್ಲಿ ಬೆಳ್ಳಿತೆರೆಗೆ ಬಂದು ಭಜರಂಗಿ ಚಿತ್ರದ ಮೂಲಕವೇ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದ ನಟ ಇವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಚಿತ್ರದ ಮೂಲಕವೇ. ಅಲ್ಲಿಂದ ಶುರುವಾದ ಅವರ ರಿಯಲ್ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಭಜರಂಗಿ ಚಿತ್ರ ಕೊಟ್ಟಂತಹ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಈಗ ಮತ್ತೆ ‘ ಭಜರಂಗಿ 2 ‘ ಚಿತ್ರದ ಮೂಲಕ ಮತ್ತೊಂದು‌ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಈ ಪೋಸ್ಟರ್.

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್​ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.

ಸದ್ಯಕ್ಕೆ ‘ ಭಜರಂಗಿ 2 ‘ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಇರುವ ದೊಡ್ಡ ನಿರೀಕ್ಷೆಗಳ ಪೈಕಿ, ಭಜರಂಗಿ ಲೋಕಿ ಯವರ ಪಾತ್ರದ ಬಗ್ಗೆಯೂ ಇದೆ. ಅವರ ಪಾತ್ರದ ವಿಶೇಷ ಗೆಟಪ್ ನೋಡಿದಾಗ ಲೋಕಿ ಅವರ ಕೆರಿಯರ್ ನಲ್ಲಿ ಇದು ಕೂಡ ಒಂದು ಮೈಲುಗಲ್ಲು ಆಗುವುದು ಕೂಡ ಗ್ಯಾರಂಟಿ‌ ಅಂತೆ.‌ ‘ ಭಜರಂಗಿ 2 ‘ ಚಿತ್ರದಲ್ಲಿನ ತಮ್ಮ ಪಾತ್ರದ‌ ಕುರಿತು‌ ಮಾತನಾಡುವ ಸೌರವ್ ಲೋಕಿ ಅಲಿಯಾದ್ ಭಜರಂಗಿ‌ಲೋಕಿ, ಈ ಚಿತ್ರ ತೆರೆ ಕಂಡರೆ ತಮ್ಮನ್ನು ಇದು ಇನ್ನೊಂದು ಲೆವೆಲ್ ಗೆ ತೆಗೆದುಕೊಂ ಡು‌ ಹೋಗುವುದು ಖಚಿತ ಎನ್ನುವ ವಿಶ್ವಾಸ ಅವರದು. ಅಂತೆಯೇ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎನ್ನುವುದು ಸಿನಿ ಲಹರಿ ಆಶಯ ಕೂಡ.

Categories
ಸಿನಿ ಸುದ್ದಿ

ಸಲಗನಿಗೆ ಸಂತೋಷದಲ್ಲಿ ಸಂಭ್ರಮ; ಕೋಟಿಗೊಬ್ಬನಿಗೆ ನರ್ತಕಿಯ ಸ್ವಾಗತ!

ಹೆಂಗೆ ನಾವು, ಹೆಂಗೆ ಹೆಂಗೆ ನಾವು ಅಂತ ಸ್ಟಾರ್‌ಗಳಿಬ್ಬರು ಹೇಳ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ತಲೆಮೇಲೆ ಹೊತ್ತು ಮೆರೆಸೋಕೆ ಸಜ್ಜಾಗುತ್ತಿರುವ ಹಾಗೂ ಒಂದೇ ಅಖಾಡದಲ್ಲಿರುವ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಮಾತ್ರ `ಹೆಂಗೆ ನಾವು ಹೆಂಗೆ ಹೆಂಗೆ ನಾವು’ ಅಂತ ಡೈಲಾಗ್ ಹೊಡೆದುಕೊಂಡು ಖುಷಿಪಡುತ್ತಿವೆ. ಅದಕ್ಕೆ ಕಾರಣ ಭರ್ತಿ ಒಂದೂವರೆ ವರ್ಷಗಳ ನಂತರ ಒಟ್ಟೊಟ್ಟಿಗೆ ಇಬ್ಬರು ಸ್ಟಾರ್‌ನಟರುಗಳನ್ನು ಚಿತ್ರಮಂದಿರಕ್ಕೆ ವೆಲ್‌ಕಮ್ ಮಾಡಿಕೊಳ್ಳುವಂತಹ ಅವಕಾಶ ಸಿಕ್ಕಿದೆ. ಅಟ್ ದಿ ಸೇಮ್ ಟೈಮ್ ಥಿಯೇಟರ್ ಮುಂದೆ ಹಬ್ಬದ ಸಂಭ್ರಮ ಹಾಗೂ ಹೌಸ್‌ಫುಲ್ ಆಗುವಂತಹ ಗಳಿಗೆಯನ್ನು ನೋಡಲಿಕ್ಕೆ ಎರಡು ಥಿಯೇಟರ್‌ಗಳು ಕಾತುರದಿಂದ ಕಾಯ್ತಿವೆ.

ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ, ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಅಂದ್ರೆ, ಅದನ್ನು ಬಣ್ಣದ ಲೋಕದ ಭಾಷೆಯಲ್ಲಿ ಸ್ಟಾರ್‌ವಾರ್ ಅಂತಾನೇ ಹೇಳ್ತಾರೆ. ಸದ್ಯ ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿಕೊಡಲಿಕ್ಕೆ ಭರ್ಜರಿ ತಯ್ಯಾರಿ ನಡೆದಿದೆ. ಆ ಸಿನಿಮಾಗಳ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಕೋಟಿಗೊಬ್ಬ-೩ ಹಾಗೂ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಹೈವೋಲ್ಟೇಜ್ `ಸಲಗ’ ಚಿತ್ರಗಳ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಆಯುಧ ಪೂಜೆಯ ದಿನದಂದೇ ಗಂಧದಗುಡಿಯ ನಾಯಕರಿಬ್ಬರು ಅಖಾಡಕ್ಕೆ ಧುಮ್ಕುತ್ತಿರುವುದರಿಂದ ಸ್ಟಾರ್‌ವಾರ್ ಜೋರಾಗಲಿದೆ, ಬಾಕ್ಸ್ಆಫೀಸ್ ಅಂಗಳದಲ್ಲಿ ಕಾದಾಟ ನಡೆಯಲಿದೆ ಎನ್ನುವುದು ಗಾಂಧಿನಗರದ ಪಿಎಚ್‌ಡಿ ಪಂಡಿತರ ಮಾತು.

ಒಂದು ವಾರ ಅಂತರದಲ್ಲಿ ಸ್ಟಾರ್‌ನಟರಿಬ್ಬರ ಚಿತ್ರಗಳು ಬಿಡುಗಡೆಯಾದ್ರೇನೇ ಬಿಗ್‌ ಸ್ಕ್ರೀನ್ ನಲ್ಲಿ ಪೈಪೋಟಿ ಶುರುವಾಗುತ್ತೆ, ಬಾಕ್ಸ್ಆಫೀಸ್ ಡಬ್ಬದಲ್ಲಿ ತಿಕ್ಕಾಟ ಆರಂಭವಾಗುತ್ತೆ. ಅಂತ್ರದಲ್ಲಿ ಒಂದೇ ದಿನ ಮಾಸ್‌ಗೂ ಕ್ಲಾಸ್‌ಗೂ ಬಾಸ್‌ಗಳಾಗಿರುವ ಮಾಣಿಕ್ಯ ಹಾಗೂ ಜಯ್ಯಮ್ಮನ ಮಗ ಅಖಾಡಕ್ಕೆ ಇಳಿಯುತ್ತಾರೆ ಅಂದ್ರೆ ಸಹಜವಾಗಿ ನೆಕ್ ಟು ನೆಕ್ ಫೈಟ್‌. ಸ್ಟಾರ್ಟ್ ಆಗುತ್ತೆ. ಚಿತ್ರಮಂದಿರಗಳು ಹಂಚಿಕೆಯಾಗುತ್ತವೆ, ಬಾಕ್ಸ್ಆಫೀಸ್ ಮಂಕಾಗುತ್ತದೆ. ಇದರೊಟ್ಟಿಗೆ ಫ್ಯಾನ್ಸ್ ಫ್ಯಾನ್ಸ್ ನಡುವೆ ಸಣ್ಣಗೆ ಕಿಡಿ ಹೊತ್ತಿಕೊಳ್ಳುತ್ತದೆ. ನಮ್ಮ ಬಾಸ್ ಫಸ್ಟ್, ನಿಮ್ಮ ಬಾಸ್ ನೆಕ್ಸ್ಟ್, ನಮ್ಮ ಬಾಸ್ ಸಿನಿಮಾ ಇಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ, ನಿಮ್ಮ ಬಾಸ್ ಸಿನಿಮಾ ಅಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗೆ ಏನೇನೋ ಮಾತನಾಡಿಕೊಳ್ಳುತ್ತಾ ಸುಖಾಸುಮ್ಮನೇ ಕಾದಾಟಕ್ಕೆ ರೆಡಿಯಾಗ್ತಾರೆ. ಸ್ಟಾರ್‌ಗಳ ಮಧ್ಯೆ ವಾರ್ ಶುರುವಾಗದೇ ಹೋದ್ರೂ ಕೂಡ ಫ್ಯಾನ್ಸ್ ವಾರ್ ಜೋರಾಗುತ್ತೆ.

ಇದ್ಯಾವುದು ಆಗ್ಬಾರ್ದು, ನಮ್ಮನಮ್ಮವರ ಮಧ್ಯೆ ಯಾವ ಯುದ್ದವೂ ನಡಿಯಬಾರ್ದು ಎನ್ನುವುದೇ ಎಲ್ಲರ ಆಶಯ. ಈ ಹಿನ್ನಲೆಯಲ್ಲಿ ಸಿನಿಲಹರಿ ತಂಡ `ಸಲಗ’ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದ್ದಿಷ್ಟು. ನಿಜಕ್ಕೂ ಇದು ಸ್ಟಾರ್‌ವಾರ್ ಅಂತ ಪರಿಗಣಿಸಬೇಡಿ. ನಮ್ಮ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಒಂದೇ ದಿನ ರಿಲೀಸ್ ಮಾಡ್ಲೆಬೇಕು ಎನ್ನುವ ಹಠಕ್ಕೂ ನಾವು ಬಿದ್ದಿಲ್ಲ. ಅಷ್ಟಕ್ಕೂ ಗಂಧದಗುಡಿಯಲ್ಲಿ ಹೆಲ್ದಿ ಕಾಂಪಿಟೇಷನ್ ಇದೆ ಬಿಟ್ರೆ ಈ ವಾರ್ ಗೀರ್ ಎಂತಹದ್ದು ಇಲ್ಲ ಎಂದರು. ಜೊತೆಗೆ ಹಬ್ಬದ ಸೀಸನ್‌ಗಳು ಬಂದಾಗ ಸ್ಟಾರ್‌ಗಳು ಅಖಾಡಕ್ಕೆ ಇಳಿಯೋದು ಸಹಜ. ನಮ್ಮ ಸ್ಟಾರ್‌ಗಳ ನಡುವೆ ಪರಭಾಷಾ ಸ್ಟಾರ್‌ಗಳು ಕೂಡ ಫೀಲ್ಡಿಗಿಳಿಯುತ್ತಾರೆ. ಆದರೆ, ಈ ಭಾರಿ ದಸರಾ ಹಬ್ಬಕ್ಕೆ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪ್ರತಿವರ್ಷ ಬೇರೆ ಭಾಷೆಯ ಚಿತ್ರಗಳೊಟ್ಟಿಗೆ ನಮ್ಮ ಭಾಷೆಯ ಚಿತ್ರಗಳು ಬಾಕ್ಸ್ಆಫೀಸ್ ಅಂಗಳದಲ್ಲಿ ಸೆಣಸಾಡಬೇಕಿತ್ತು. ಆದರೆ, ಈ ಭಾರಿ ಅಂತದ್ದೇನಿಲ್ಲ ನಮ್ಮ ಭಾಷೆಯ ಸಿನಿಮಾಗಳದ್ದೇ ಬೆಳ್ಳಿತೆರೆ ಹಾಗೂ ಬಾಕ್ಸ್ಆಫೀಸ್ ಅಖಾಡದಲ್ಲಿ ಅಬ್ಬರ ಅಂದರು.‌

`ಸಲಗ’ ನಿರ್ಮಾಪಕರ ಮಾತು ಹಂಡ್ರೆAಡ್ ಪರ್ಸೆಂಟ್ ನಿಜ. ಪರಭಾಷೆಯ ಸಿನಿಮಾಗಳು ಈ ಭಾರಿಯ ದಸರಾ ಹಬ್ಬಕ್ಕೆ ರಿಲೀಸ್ ಆಗದೇ ಇರೋದ್ರಿಂದ ಕನ್ನಡ ಸಿನಿಮಾಗಳಿಗೆ ಪ್ಲಸ್ ಆಗುತ್ತೆ. ಬಯಸಿದಷ್ಟು ಚಿತ್ರಮಂದಿರಗಳು ಸಿಗುತ್ತವೆ. ರಾಜ್ಯಾದ್ಯಂತ ಅವರಿಷ್ಟದ ಥಿಯೇಟರ್‌ಗಳಲ್ಲೇ ಸಿನಿಮಾನ ರಿಲೀಸ್ ಮಾಡ್ಬೋದು. ಹೀಗಾಗಿಯೇ ಸಲಗ ಚಿತ್ರತಂಡ ಆಯುಧ ಪೂಜೆಗೆ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಆರ್ಭಟ ಶುರುವಾಗಲಿದೆ. ಅದೇ ದಿನ ನರ್ತಕಿಯಲ್ಲಿ ಕೋಟಿಗೊಬ್ಬ-೩ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗ್ತಿದೆ. ಒಂದೇ ಅಖಾಡದಲ್ಲಿ ಎರಡು ಚಿತ್ರಮಂದಿರಗಳು ಇರೋದ್ರಿಂದ ಪೈಪೋಟಿ ಏಳಬಹುದು. ಆದರೆ, ಇಬ್ಬರು ಸ್ಟಾರ್‌ನಟರುಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಥಿಯೇಟರ್ ಅಂತೂ ಹೌಸ್‌ಫುಲ್ ಆಗುತ್ತೆ ಅದರಲ್ಲಿ ನೋಡೌಟ್.

ಒಂದ್ವೇಳೆ ಯಾರಾದ್ರೂ ಒಬ್ಬರು ಹಿಂದೆಸರಿದಿದ್ದರೆ, ಒಂದು ಚಿತ್ರತಂಡ ದೊಡ್ಡ ಮನಸ್ಸು ಮಾಡಿ ಮುಂದಿನ ವಾರ ಬರೋಣ ಬಿಡು ಎಂದು ತೀರ್ಮಾನಿಸಿದ್ದರೆ, ಥಿಯೇಟರ್ ಹೌಸ್‌ಫುಲ್ ಆಗೋದ್ರ ಜೊತೆಗೆ ಮತ್ತೊಂದು ಶೋಗೆ ಆಗುವಷ್ಟು ಜನ ಹೊರಗಡೆ ನಿಂತಿರುತ್ತಿದ್ದರು. ಕನ್ನಡ ಸಿನಿಮಾ ಪ್ರೇಕ್ಷಕರೆಲ್ಲರೂ ಕೂಡ ಚಿತ್ರಮಂದಿರದತ್ತ ದೌಡಾಯಿಸಿ ಬಾಕ್ಸ್ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿಕೊಡುತ್ತಿದ್ದರು. ಆದರೆ, ಸಲಗ ಹಾಗೂ ಕೋಟಿಗೊಬ್ಬ-3 ಎರಡು ಕೂಡ ಬಹುನಿರೀಕ್ಷೆಯ ಸಿನಿಮಾಗಳಾಗಿರೋದ್ರಿಂದ, ಎರಡು ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋನೇ ನೋಡಬೇಕಾಗಿರೋದ್ರಿಂದ ಕನ್ನಡ ಪ್ರೇಕ್ಷಕರು ಡಿವೈಡ್ ಆಗ್ತಾರೆ. ಇದ್ರಿಂದ ಒಂದು ಚಿತ್ರತಂಡಕ್ಕೆ ಅಲ್ಲ ಬದಲಾಗಿ ಎರಡು ಚಿತ್ರತಂಡಕ್ಕೂ ಕೊಂಚ ನಷ್ಟವೇ. ಅದನ್ನು ಯಾರು ತುಂಬಿಕೊಡುವುದಕ್ಕೆ ಆಗಲ್ಲ ಯಾಕಂದ್ರೆ ಅದು ಅವರಿಬ್ಬರೇ ತೆಗೆದುಕೊಂಡಿರುವ ಡಿಸೈಡ್ ಅಲ್ಲವೇ.

ವಿಶಾಲಾಕ್ಷಿ ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೋಂಟ್ ಅಂಡರೆಸ್ಟಿಮೇಟ್ ಪ್ಲೀಸ್; ಆತ್ಮಹತ್ಯೆಗೆ ಮುನ್ನ ಸವಿ ಮಾದಪ್ಪ ಹೀಗಂದಿದ್ಯಾರಿಗೆ?

ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿಗೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ?

ಚೌಕಟ್ಟು ಹಾಗೂ ಫನ್ ಸಿನಿಮಾದ ನಾಯಕಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ಘಟನೆ ನಡೆದಿದ್ದು, ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾದ ಸೌಜನ್ಯ ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಅಪಾರ್ಟ್ಮೆಂಟ್‌ನಲ್ಲಿ ಸೂಸೈಡ್ ಮಾಡಿಕೊಂಡು ಉಸಿರು ಚೆಲ್ಲಿದ್ದಾರೆ. ನಟಿಯ ಮೃತದೇಹದ ಬಳಿ ಡೆತ್‌ನೋಟ್ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೌಜನ್ಯ ಅಲಿಯಾಸ್ ಸವಿಮಾದಪ್ಪ ಗೀಚಿಟ್ಟಿರುವ ಡೆತ್‌ನೋಟ್ ಎನ್ನಲಾದ ನಾಲ್ಕು ಪುಟಗಳುಳ್ಳ ಡೆತ್‌ನೋಟ್‌ನಿಂದ ಹಲವು ಅಂಶಗಳು ಬೆಳಕಿಗೆ ಬಂದಿವೆ. ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಮೂರು ದಿನದ ಮುಂಚಿತವಾಗಿಯೇ ಡೆತ್‌ನೋಟ್ ಬರೆಯಲು ಆರಂಭಿಸಿದ್ದರಂತೆ. ಮೊದಲ ಪುಟ ೨೭ರಂದು ಬರೆದಿದ್ದು, ಕೊನೆಯ ಪುಟವನ್ನು ಇಂದು ಬೆಳಗ್ಗೆ ಅಂದ್ರೆ ೩೦ನೇ ತಾರೀಖ್‌ನಂದು ಬರೆದಿದ್ದಾರಂತೆ.ನನ್ನ ಸಾವಿಗೆ ನಾನೇ ಕಾರಣ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಬಿಡಿ ಎಂದಿರುವ ನಟಿ ಸವಿಮಾದಪ್ಪ, ಸಾಯೋದಕ್ಕೆ ಇಷ್ಟವಿಲ್ಲ ಹಾಗಂತ ಬದುಕೋದಕ್ಕೆ ಆಗ್ತಿಲ್ಲ. ಆರೋಗ್ಯ ಚೆನ್ನಾಗಿಲ್ಲ ಎನ್ನುವುದಕ್ಕಿಂತ ಜೀವನದಲ್ಲಿ ತೀರಾ ನೊಂದುಬಿಟ್ಟಿದ್ದೇನೆ. ಹೀಗಾಗಿ, ಬದುಕೋದಕ್ಕೆ ಕಷ್ಟವಾಗ್ತಿದೆ ಎಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗ್ತಿದೆ.

ಅಷ್ಟಕ್ಕೂ, ಪೊಲೀಸರ ಕೈಗೆ ಲಭ್ಯವಾಗಿರುವ ಈ ಡೆತ್‌ನೋಟ್ ನಿಜಕ್ಕೂ ನಟಿ ಸವಿಮಾದಪ್ಪ ಅವರೇ ಬರೆದಿದ್ದಾ ಅಥವಾ ಈ ನಟಿಯ ಆತ್ಮಹತ್ಯೆಯ ಹಿಂದೆ ಯಾರದ್ದಾದರೂ ಕೈವಾಡವಿದೆಯಾ ಗೊತ್ತಿಲ್ಲ? ಈಗಷ್ಟೇ ಪೊಲೀಸರ ತನಿಖೆ ಆರಂಭಗೊಂಡಿದೆ. ನಟಿಯ ಪೋಷಕರು ಈಕೆಯ ಬರವಣಿಗೆಯ ಅಕ್ಷರಗಳನ್ನು ಐಡೆಂಟಿಫೈ ಮಾಡಿದರೆ, ಅಥವಾ ನಟಿ ಈ ಹಿಂದೆ ಯಾವುದಾದರೂ ಪುಸ್ತಕದಲ್ಲಿ ಅಕ್ಷರಗಳನ್ನು ಗೀಚಿಟ್ಟಿದ್ದರೆ ಫೈಂಡ್‌ಔಟ್ ಮಾಡೋದಕ್ಕೆ ಈಸಿಯಾಗುತ್ತದೆ ಅದೇ ಹಾದಿಯಲ್ಲಿ ಖಾಕಿ ಪಡೆಯ ತನಿಖೆ ಸಾಗುತ್ತಿದೆ.

ಅಚ್ಚರಿ ಅಂದ್ರೆ ಕಳೆದ ಎರಡು ದಿನಗಳ ಹಿಂದೆ ನಟಿ ಸವಿಮಾದಪ್ಪ ಅವರು ಇನ್ಸ್ ಟಾಗ್ರಾಮ್‌ನಲ್ಲಿ ಕೆಲವೊಂದು ಪೋಸ್ಟ್ಗಳನ್ನು ಹಾಕಿದ್ದಾರೆ. ಅದರಲ್ಲಿ, ಇದೊಂದು ಪೋಸ್ಟ್ ನೋಡುಗರನ್ನು ಬಹುವಾಗಿ ಕಾಡುತ್ತೆ. ಹೌದು, `ನೆವರ್ ಅಂಡರೆಸ್ಟಿಮೇಟ್ ಎನಿವನ್’ ಯಾಕಂದ್ರೆ, ಫನ್ನಿ ಎನಿಸುವ ವ್ಯಕ್ತಿಗಳ ಜೀವನದಲ್ಲೂ ನೋವಿನ ಕಥೆ ಇರುತ್ತೆ ಅದು ಯಾರಿಗೂ ಗೊತ್ತಿರುವುದಿಲ್ಲ ಅಷ್ಟೇ. ಹೀಗಂತ ಬರೆದು ಕೆಫೆ ಕಾಫಿ ಡೇ ಮುಂದೆ ನಿಂತು ಕ್ಲಿಕಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಸವಿಯವರ ಈ ಟ್ವೀಟ್ ಗಮನಿಸಿದರೆ ಇವರ ಜೀವನದಲ್ಲೂ ಯಾರಿಗೂ ಹೇಳಿಕೊಳ್ಳದಂತಹ, ಯಾರಿಗೂ ತಿಳಿಯದಂತಹ ನೋವು ಮನಸ್ಸನ್ನು ಹಿಂಡಿ ಹಿಂಸೆ ಮಾಡುತ್ತಿತ್ತು ಎನಿಸುತ್ತೆ.

ಅಷ್ಟಕ್ಕೂ, ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿನೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ? ಈ ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಪೊಲೀಸ್ ತನಿಖೆ ಆಗ್ಬಹುದು? ಕಾರಣ ಇದೇ ಅಂತ ಷರಾ ಬರೆದು ಪತ್ರದ ಮೂಲಕ ತಿಳಿಸಬಹುದು. ಆದರೆ, ಉಸಿರು ಚೆಲ್ಲಿದ ನಟಿ ಮತ್ತೆ ಬರುವುದಿಲ್ಲ, ಹೆತ್ತವರ ಕ್ಷಣಕ್ಷಣಕ್ಕೂ ಹೊಟ್ಟಗೆ ಬೆಂಕಿ ಹಾಕಿಕೊಂಡು ಮರುಗುವುದು ನಿಲ್ಲಲ್ಲ. ಆದರೂ, ಪೊಲೀಸ್ ತನಿಖೆಯಿಂದ ಯಾವ ಮಾಹಿತಿ ಹೊರಬೀಳುತ್ತೋ ಕಾದುನೋಡಬೇಕು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಸ್ಯಾಂಡಲ್‌ವುಡ್‌ ನಟಿ-ಅವಕಾಶಗಳಿಲ್ಲದೇ ಮನನೊಂದಿದ್ದರಂತೆ ಸವಿ ಮಾದಪ್ಪ !?

ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ? ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ

ಕೂರ್ಗ್ ಚೆಲುವೆ, ಸ್ಯಾಂಡಲ್‌ವುಡ್‌ನ ಸುಂದರಿ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಅವಕಾಶಗಳಿಲ್ಲದೇ ಮನನೊಂದು ನೇಣಿಗೆ ಕೊರಳೊಡ್ಡಿದ್ದಾರೆನ್ನಲಾಗ್ತಿದೆ. ಚೌಕಟ್ಟು ಚಿತ್ರದ ಮೂಲಕ ನಟಿ ಸವಿಮಾದಪ್ಪ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.

ಈ ಚಿತ್ರದ ನಿರ್ಮಾಪಕ ಮಂಜುನಾಥ್ ಅವ್ರನ್ನ ಸಿನಿಲಹರಿ ತಂಡ ಸಂಪರ್ಕ ಮಾಡಿದಾಗ, ಬಣ್ಣದ ಲೋಕದಲ್ಲಿ ಅವಕಾಶಗಳು ಕಡಿಮೆ ಆಯ್ತು ಎನ್ನುವ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ನಮಗೆ ತಿಳಿದುಬಂದಿದೆ ಎಂದರು. ಸವಿಮಾದಪ್ಪ ಅವ್ರಿಗೆ ಚಿತ್ರರಂಗಕ್ಕೆ ಬರಲು ಅವರ ತಂದೆಯೇ ಪ್ರೇರಣೆಯಂತೆ. ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಖುದ್ದಾಗಿ ಹೇಳಿಕೊಂಡಿದ್ದರು. ದರ್ಶನ್ ಅಂದ್ರೆ ತುಂಬಾ ಇಷ್ಟ, ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿರುವುದಾಗಿ ತಿಳಿಸಿದ್ದರು.

ಚಿಕ್ಕಂದಿನಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿಯಿದ್ದು, ಅಭಿನಯದ ಜೊತೆಗೆ ಸಿನಿಮಾಟೋಗ್ರಫಿ ಮಾಡುವ ಆಸಕ್ತಿಯಿದೆ ಎಂದಿದ್ದರು. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ?

ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Categories
ಸಿನಿ ಸುದ್ದಿ

ರಾಜನಿವಾಸದಲ್ಲಿ ನಿಂತ ಶ್ರೀನಗರ ಕಿಟ್ಟಿ- ಹೊಸ ಅವತಾರದಲ್ಲಿ ಕಿಟ್ಟಪ್ಪ !!

ಕನ್ನಡದಲ್ಲೀಗ ಸಿನಿಮಾಗಳ ಕಲರವ ಶುರುವಾಗಿದೆ. ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಮುಕ್ತಾಯಗೊಂಡಿವೆ. ಆ ಸಾಲಿಗೆ ಈಗ “ರಾಜನಿವಾಸ” ಎಂಬ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಅದರಲ್ಲೂ, ಶ್ರೀನಗರ ಕಿಟ್ಟಿ ಈ ಸಿನಿಮಾದಲ್ಲಿ ಸ್ಪೆಷಲ್‌ ರೋಲ್‌ ಮಾಡಿದ್ದಾರೆ ಅನ್ನೋದೇ ವಿಶೇಷ. ಇತ್ತೀಚೆಗಷ್ಟೇ, ಶ್ರೀನಗರ ಕಿಟ್ಟಿ ಅವರು “ಗೌಳಿʼ ಸಿನಿಮಾ ಮೂಲಕ ನ್ಯೂ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಈಗ “ರಾಜ ನಿವಾಸ” ಸಿನಿಮಾದಲ್ಲೂ ಅಂಥದ್ದೊಂದು ಹೊಸ ಪಾತ್ರದ ಮೂಲಕ ಗಮನಸೆಳೆಯುತ್ತಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲ ತಾಣದಲ್ಲಿ ಚಿತ್ರೀಕರಣಗೊಂಡಿದೆ.

ಚಿತ್ರದಲ್ಲಿ ರಾಘವ್ ಕೃತಿಕಾ, ಬಲರಾಜವಾಡಿ ಇತರರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೊಸ ಲುಕ್‌ ಈಗಾಗಲೇ ರಿವೀಲ್‌ ಆಗಿದೆ. ತುಂಬಾ ಸ್ಟೈಲಿಷ್‌ ಎನಿಸುವ ಫೋಟೋಗಳು ಬಿಡುಗಡೆಯಾಗಿದ್ದು, ಅದೊಂದು ಹೊಸ ರೀತಿಯ ಪಾತ್ರ ಎಂಬುದನ್ನು ಸಾಬೀತುಪಡಿಸುತ್ತಿದೆ.

ಇನ್ನು, ಮಿಥುನ್ ಸುವರ್ಣ ನಿರ್ದೇಶಕರು. ದಾ.ಪಿ.ಆಂಜನಪ್ಪ ಹಾಗೂ ಲೋಕೇಶ್ ಎನ್.ಗೌಡ ಅವರು ನಿರ್ಮಾಪಕರು. ವಿಶೇಷವೆಂದರೆ, ದಸರಾ ಹಬ್ಬಕ್ಕೆ “ರಾಜ ನಿವಾಸ” ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ದಸರಾಗೆ ಶ್ರೀ ಕೃಷ್ಣ ಜೀ ಮೇಲ್ ಡಾಟ್‌ ಕಾಮ್‌!

ನಾಗಶೇಖರ್‌ ನಿರ್ದೇಶನದ ಚಿತ್ರವೊಂದು ಈಗ ಸದ್ದಿಲ್ಲದೆಯೇ ಬಿಡುಗಡೆಗೆ ಸಜ್ಜಾಗಿದೆ. ಹೌದು, ಸಂದೇಶ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗಿರುವ ಡಾರ್ಲಿಂಗ್‌ ಕೃಷ್ಣ ಹೀರೋ ಆಗಿರುವ [email protected]ಸಿನಿಮಾ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿಜಯದ ದಶಮಿ ಹಬ್ಬದಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿನಿಮಾತಂಡ ತಯಾರು ಮಾಡಿಕೊಂಡಿದೆ. ಕನ್ನಡದಲ್ಲಿ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ನಾಗರಾಜ್‌, ಈಗ ಮತ್ತೊಂದು ಮಜವಾದ ಸಿನಿಮಾ ಮಾಡಿ, ಅದನ್ನು ದಸರಾ ಹಬ್ಬಕ್ಕೆ ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ಬೃಂದಾ ಎನ್ ಜಯರಾಂ ಅವರ ಸಹ ನಿರ್ಮಾಣವಿದೆ.


ನಾಗಶೇಖರ್‌ ಅವರೇ ನಿರ್ದೇಶನದ ಜೊತೆಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಗೆ ನಾಗಶೇಖರ್‌ ಜೊತೆಯಲ್ಲಿ ಪ್ರೀತಂ ಗುಬ್ಬಿ ಸಾಥ್‌ ನೀಡಿದ್ದಾರೆ. ಇನ್ನು, ಹೀರೋ ಡಾರ್ಲಿಂಗ್‌ ಕೃಷ್ಣ ಅವರ ಜೊತೆಗೆ ಭಾವನಾ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಂದನ್ ಗೌಡ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಅಚ್ಯುತರಾವ್, ಸಾತ್ವಿಕ್ (ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತರರು ನಟಿಸಿದ್ದಾರೆ.

ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ “ಅಮರ್” ಚಿತ್ರಕ್ಕೂ ನಾಗಶೇಖರ್‌ ಅವರೇ ನಿರ್ದೇಶಕರಾಗಿದ್ದರು. ಈಗ ಹೊಸ ಸಿನಿಮಾಗೂ ಅವರ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ಕವಿರಾಜ್ ಗೀತಸಾಹಿತ್ಯವಿದೆ. ಸತ್ಯ ಹೆಗಡೆ ಕ್ಯಾಮೆರಾ ಹಿಡಿದಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ದೀಪು ಎಸ್. ಕುಮಾರ್ ಸಂಕಲನವಿದೆ. ಅರುಣ್ ಸಾಗರ್ ಕಲಾ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕನ್ನಡದಲ್ಲೀಗ ಸಿನಿಮಾಗಳ ಕಲರವ … ಭಜರಂಗಿ ಜೊತೆ ಪ್ರೇಮಂ ಪೂಜ್ಯಂ ರಿಲೀಸ್!‌

ಹೌದು, ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದ್ದ ಸಿನಿಮಾರಂಗ ಈಗ ಚೇತರಿಸಿಕೊಳ್ಳುತ್ತಿದೆ. ಈವರೆಗೆ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಅಕ್ಟೋಬರ್‌ 1ರಿಂದ ಶೇ.100ಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದೇ ಖುಷಿಯಲ್ಲಿರುವ ಸಿನಿಮಾ ಮಂದಿ ಹಬ್ಬದ ಸಂಭ್ರಮದಲ್ಲಿರುವುದಂತೂ ನಿಜ. ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಸ್ಟಾರ್‌ ಸಿನಿಮಾಗಳು ರಿಲೀಸ್‌ ದಿನಾಂಕವನ್ನು ಘೋಷಿಸಿಕೊಂಡಿವೆ. ಸುದೀಪ್‌ ಅಭಿನಯದ “ಕೋಟಿಗೊಬ್ಬ 3” ಮತ್ತು “ದುನಿಯಾ” ವಿಜಯ್‌ ಅಭಿನಯದ “ಸಲಗʼ ಸಿನಿಮಾಗಳು ದಸರಾಗೆ ಅಂದರೆ ಅಕ್ಟೋಬರ್‌ 14ರಂದು ದರ್ಶನ ನೀಡಲಿವೆ.

ಶಿವರಾಜ್‌ ಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರದೊಂದಿಗೆ ಲವ್ಲಿ ಸ್ಟಾರ್‌ ಪ್ರೇಮ್‌ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಎಂಟ್ರಿಕೊಡುತ್ತಿದೆ. ಹೌದು, ಪ್ರೇಮ್‌ ಅವರ “ಪ್ರೇಮಂ ಪೂಜ್ಯ” ಸಿನಿಮಾ ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರುವುದನ್ನು ಹೇಳಿಕೊಂಡಿದೆ. ಇನ್ನು ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ನಿರ್ಮಾಣ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.

ಅದೇನೆ ಇರಲಿ, ಕಳೆದ ಎರಡು ವರ್ಷಗಳಿಂದಲೂ ದಂಗುಬಡಿದಿದ್ದ ಚಿತ್ರರಂಗಕ್ಕೆ ಈಗ ಮಂದಹಾಸ ಮೂಡಿದೆ. ಸದ್ಯ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ ಎಂಬುದೇ ವಿಶೇಷ. ಅಭಿಮಾನಿಗಳು ಈಗ ಥಿಯೇಟರ್‌ ಮುಂದೆ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಆ ವೈಭವ ಮರುಕಳಿಸಲು ಬಹಳ ದಿನಗಳೇನು ಬೇಕಿಲ್ಲ. ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡು ಫ್ಯಾನ್ಸ್‌ ಸಿನಿಮಾ ನೋಡಿ, ಚಿತ್ರರಂಗವನ್ನು ಬೆಳೆಸಬೇಕಿದೆ. ಹಾಗೆಯೇ, ಥಿಯೇಟರ್‌ಗಳಿಗೆ ಮತ್ತೆ ಆ ಸಂಭ್ರಮ ತಂದುಕೊಡಬೇಕಿದೆ.

Categories
ಸಿನಿ ಸುದ್ದಿ

ಎಸ್‌ಪಿಬಿ ಪುಸ್ತಕ ಲೋಕಾರ್ಪಣೆ- ಕನ್ನಡದೊಂದಿಗೆ ಅನುಪಮ ಅನುಬಂಧ ಈ ನಮ್ಮ ಗಾಯಕ; ಇದು ಹಿರಿಯ ಪತ್ರಕರ್ತರ ಕೃತಿ

ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ದಾವಣಗೆರೆಯ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಎಸ್‌ಪಿಬಿ ಕುರಿತು ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ರಚಿಸಿದ್ದಾರೆ. ಈ ಕೃತಿ ಸೆಪ್ಟೆಂಬರ್‌ 25ರಂದು ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಪುಸ್ತಕದಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.

ನನ್ನನ್ನು ಭಾರತದ ಎಲ್ಲಾ ಸ್ಥಳದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅದೇಕೋ ನನಗೂ ಗೊತ್ತಿಲ್ಲ. ಅವರೆಲ್ಲರಿಗಿಂತಲೂ ಕನ್ನಡಿಗರಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಖಂಡಿತವಾಗಿಯೂ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಆಸೆ. ಇದು ಉತ್ಪ್ರೇಕ್ಷೆ ಅಲ್ಲ ಮತ್ತು ಪ್ರಚಾರಕ್ಕಾಗಿಯೂ ಅಲ್ಲ. ನನ್ನ ಹೃದಯಾಂತರಾಳದ ಮಾತು ಎಂದು ಎಸ್.ಪಿ.ಬಿ. ಅನೇಕ ಸಂದರ್ಭದಲ್ಲಿ ಹೇಳಿದ್ದರು. ಕನ್ನಡವರಿಗೆ ಹೆಚ್ಚು ಪ್ರಿಯರಾದ ಎಸ್‌ಪಿಬಿ ಸಾವಿರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ "ನಕ್ಕರೆ ಅದೇ ಸ್ವರ್ಗ" ಚಿತ್ರವು 1966ರಲ್ಲಿ ತೆರೆಕಂಡಿತು. ಬಾಲು ಕೂಡ ಪ್ರಥಮವಾಗಿ ಅದೇ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದರೆನ್ನಬಹುದು. ಮೊದಲ ಹಾಡಿಗೆ ದೊರೆತ ಸಂಭಾವನೆ 150ರೂ.ಗಳು. ಆ ಕಾಲಕ್ಕೆ ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಪಿ.ಬಿ. ಶ್ರೀನಿವಾಸ್ ಒಂದು ಹಾಡಿಗೆ 250ರೂ. ಸಂಭಾವನೆ ಪಡೆಯುತ್ತಿದ್ದರು. "ದೇವರಗುಡಿ" ಸಿನಿಮಾದಮಾಮರವೆಲ್ಲೋ ಕೋಗಿಲೆ ಎಲ್ಲೋ” ಹಾಡು ಅವರಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆಗೆ ನಾಂದಿ ಹಾಡಿತೆನ್ನಬಹುದು.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡದ 15ಕ್ಕೂ ಹೆಚ್ಚು ನಾಯಕನಟರಿಗೆ ಅವರ ಧ್ವನಿಯೇ ಪರ್ಫೆಕ್ಟ್ ಎಂಬಂತೆ ಹೊಂದಿಕೊಂಡಿತು. ‘ಈ ಭೂಮಿ ಬಣ್ಣದ ಬುಗುರಿ’ ಎನ್ನುವಾಗ ವಿಷ್ಣುವರ್ಧನ್ ಹಾಡಿದಂತೆ, ಚಂದನದ ಗೊಂಬೆ ಚೆಲುವಾದ ಗೊಂಬೆ" ಪಲ್ಲವಿ ಕೇಳಿದಾಗ ಅನಂತ್‌ನಾಗ್ ದನಿ ಎನ್ನುವಂತಾಗುವುದು, ‘ಜೊತೆ ಜೊತೆಯಲಿ’ ಎಂದು ಗುನುಗುವಾಗ ಶಂಕರ್‌ನಾಗ್ ಹಾಡಿದಂತೆ, ‘ಸ್ನೇಹದ ಕಡಲಲ್ಲಿ’ ಹಾಡಿನ ನೆನಪು ಶ್ರೀನಾಥ್‌ರ ದನಿಯಾಗಿ, ‘ಶಿವ ಶಿವ ಎಂದರೆ ಭಯವಿಲ್ಲ...’ ಎನ್ನುವಾಗ ಲೋಕೇಶ್,ನಮ್ಮೂರು ಮೈಸೂರು, ನಿಮ್ಮೂರು ಯಾವೂರು” ಪಲ್ಲವಿಯು ದ್ವಾರಕೀಶ್‌ರೇ ಹಾಡಿದಂತೆ, ‘ಮಂಡ್ಯದ ಗಂಡು’ ಹಾಡಿನ ನೆನಪಿಗೆ ಅಂಬರೀಶ್ ದನಿಯಾದಂತೆ, ‘ಟುವ್ವಿ ಟುವ್ವಿ’ ಎಂದಾಗ ಶಿವರಾಜ್‌ಕುಮಾರ್, `ಈ ಬೆಳದಿಂಗಳು” ಎಂದಾಗ ರಮೇಶ್ ಅರವಿಂದ್‌ರ ದನಿಯೇ ನಮಗೆ ಕೇಳಿಸಿದಂತಹ ಪ್ರಭಾವಕ್ಕೆ ಸಿಲುಕಿಸಿರುವುದರ ಹಿಂದೆ ಎಸ್.ಪಿ.ಬಿ.ಯವರೇ ಹಾಡಿದ್ದರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಎಸ್‌ಪಿಬಿ ನಿರಂತರವಾಗಿ ಹಾಡಲು ಸಾಧ್ಯವಾದದ್ದು ಹೇಗೆ?
ಬಾಲು ಹಾಡುತ್ತಿದ್ದ ಕಾಲಘಟ್ಟದಲ್ಲಿ ಗಾಯಕರಾಗಿ ಬಂದವರು. ಹೆಚ್ಚು ವರ್ಷ ಚಾಲ್ತಿಯಲ್ಲಿ ಉಳಿಯಲಿಲ್ಲ. ಇವರು ಮಾತ್ರ ನಿರಂತರವಾಗಿ ಹಾಡುತ್ತಾ, ವಿಶ್ರಾಂತಿಯ ಸಂಗತಿಯನ್ನು ಮರೆತವರಂತಿದ್ದರು. ನಟರ ಧ್ವನಿಯನ್ನು ಅನುಸರಿಸುತ್ತಿದ್ದ ಎಸ್.ಪಿ.ಬಿ.ಗೆ ಅದೇ ಸಂಗೀತಕ್ಕೂ ವರದಾನ ಆಯಿತೆನ್ನಬಹುದು. ಹಾಡಬೇಕಾದ ನಟರ ಹೆಸರು ಹೇಳಿದರೆ ಸಾಕು. ಅವರ ಧ್ವನಿಗೆ ತಕ್ಕಂತೆ ಹಾಡುವುದು ಅವರಿಗೆ ಕರತಲಾಮಲಕ ಎನ್ನುವಂತಾಯಿತು. ಅವರ ಕಂಠ ಮಾಧುರ್ಯದ ಸಾಮರ್ಥ್ಯ ಹೇಗಿತ್ತೆಂದರೆ ಇಪ್ಪತ್ತು ವರ್ಷದ ಹಿಂದಿನ ಹಾಡನ್ನು ನಂತರ ಹಾಡಿಸಿದಾಗಲೂ ಅದೇ ಫೋರ್ಸ್‌ನಲ್ಲಿ ಅದೇ ವಾಯ್ಸ್ ಕಲ್ಚರ್‌ನಲ್ಲಿ, ಯಾವ ಲ್ಯಾಂಡಿಂಗ್ ನೋಟ್ಸ್‌ಗಳಿಗೂ ವ್ಯತ್ಯಾಸವಾಗದ ಹಾಗೆ ಪ್ರಸೆಂಟ್ ಮಾಡುವಲ್ಲಿ ಎಸ್ಪಿಬಿಯವರಿಗೆ ಅವರೇ ಸಾಟಿ ಎನಿಸಿದ್ದರು.

ಇನ್ನೊಬ್ಬರ ಅವಕಾಶವನ್ನು ಕಿತ್ತುಕೊಳ್ಳಲಾರೆ
ಚಿತ್ರವೊಂದಕ್ಕೆ ವೈದ್ಯನಾಥನ್ ಸಂಗೀತ ಸಾರಥ್ಯದಲ್ಲಿ ಬಾಲು ಹಾಡನ್ನು ಹಾಡಿ ತಮ್ಮ ಪಾಲಿನದನ್ನು ಮುಗಿಸಿದರು. ಆದರೆ ನಿರ್ಮಾಪಕರೊಬ್ಬರು ಇನ್ನೊಂದು ಹಾಡನ್ನೂ ಪ್ಲೀಸ್ ಹಾಡಿರಿ ಎಂದು ವಿನಂತಿಸಿಕೊಂಡರು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಬೇಕಿತ್ತು, ಸ್ವತಃ ಪಿ.ಬಿ.ಎಸ್. ಕಾಯುತ್ತಿದ್ದರೂ ಅವಕಾಶವನ್ನು ಬದಲಾಯಿಸುವ ಪ್ರಯತ್ನ ನಡೆಯಿತು. ಬಾಲು ಅಸಲಿ ವಿಷಯವನ್ನು ತಿಳಿದುಕೊಂಡರು, ಅವರಿಂದ ಹಾಡಿಸಬೇಕಾದ ಹಾಡನ್ನು ನಾನು ಕಸಿಯುವುದು ಸಮಂಜಸವಲ್ಲ, ನೀವು ಅವರಿಂದಲೇ ಹಾಡಿಸುವುದು ನ್ಯಾಯಸಮ್ಮತ, ಅವರಿಂದಲೇ ಹಾಡಿಸಿ ಎಂದರು. ನಂತರ ಪಿ.ಬಿ.ಶ್ರೀನಿವಾಸ್ ಹಾಡುವ ತನಕ ಇದ್ದು ನಂತರ ಸ್ಟುಡಿಯೋದಿಂದ ಹೊರ ಬಂದರು. ಹಿರಿಯ ಗಾಯಕನ ಬಗೆಗಿನ ಗೌರವ ಯಾವ ರೀತಿಯಲ್ಲಿ ಇತ್ತು ಎಂದು ಇದನ್ನು ಕರೆಯಬಹುದಲ್ಲವೆ?


2007 ಡಿಸೆಂಬರ್ 16 ರಂದು ಮೈಸೂರಿನಲ್ಲಿ ಎದೆತುಂಬಿ ಹಾಡುವೆನು" ಸ್ಪರ್ಧೆಯ ಸಂಬಂಧದ ಕಾರ್ಯಕ್ರಮದಲ್ಲಿ ಬಾಲು ಪಾಲ್ಗೊಂಡಿದ್ದರು. ಆ ಹೊತ್ತಿಗೆ ಅವರು ಹಾಡಲು ಶುರು ಮಾಡಿ ನಾಲ್ಕು ದಶಕಗಳು ಕಳೆದಿದ್ದವು.

ಅಷ್ಟು ವರ್ಷಗಳ ದೀರ್ಘ ಕಾಲ ಹಾಡುವುದನ್ನು ಮುಂದುವರಿಸಿದ್ದರೂ ಅದೇ ಕಂಠಸಿರಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ಬಾಲು ಉತ್ತರ ಹೀಗಿತ್ತು,ಕಾಣದ ಊರಲಿ ನೀ ಕುಳಿತಿರುವೆ’, ‘ಎಲ್ಲರ ಕಥೆಯ ನೀ ಬರೆದಿರುವೆ” ಆ ಹಾಡನ್ನು ನೆನಪಿಸಿಕೊಂಡಿದ್ದರು, ಕನ್ನಡಿಗರು ಮತ್ತು ಕನ್ನಡದ ಪ್ರಸ್ತಾಪ ಬಂದಾಗಲೆಲ್ಲಾ ಎಸ್ಪಿಬಿಯವರಿಗೆ ಭಾವುಕತೆ ಗರ್ಭ ತುಂಬಿಕೊಳ್ಳುತ್ತಿತ್ತು.

error: Content is protected !!