Categories
ಸಿನಿ ಸುದ್ದಿ

ಕಿರಣ್ ಅಲಿಯಾಸ್ ಶಿವಕುಮಾರ್ ಬದುಕಲ್ಲಿ ಇದು ಸಂಭ್ರಮದ ದೀಪಾವಳಿ; ನಿರ್ದೇಶಕನಾಗುವ ಅವರ ಸಾಹಸದಲ್ಲಿ ಹಬ್ಬಕ್ಕೆ ಸಿಡೀತು ‘1000 ವಾಲಾ’ ಪಟಾಕಿ !

ದೇಶಾದ್ರಿ ಹೊಸ್ಮನೆ

ಸಿನಿಮಾವೇ ಬದುಕು ಎನ್ನುವ ಗೆಳೆಯ ಹಾಗೂ ಒಡನಾಡಿ ಕಿರಣ್ ಅಲಿಯಾಸ್ ಶಿವಕುಮಾರ್ ಅವರ ಬದುಕಲ್ಲಿ ಇದು ನಿಜವಾದ ದೀಪಾವಳಿ. ಯಾಕಂದ್ರೆ ಚಿತ್ರ ನಿರ್ದೇಶಕನಾಗಬೇಕೆನ್ನುವ ಅವರ ಬಹು ದಿನದ ಕನಸು ಈಗ ಈಡೇರುತ್ತಿದೆ. ಗೆಳೆಯರಾದ ಅಶೋಕ್ ಅವರ ಬೆಂಬಲದ ಮೂಲಕ ಶಿವಕುಮಾರ್ ಅವರ ಬಹು ದಿನದ ಕನಸು ನನಸಾಗುತ್ತಿದೆ. ಆ ಮೂಲಕ ಈ ವರ್ಷದ ದೀಪಾವಳಿ ಹಬ್ಬ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಿಸಿದೆ. ಆ ಪ್ರಯತ್ನದ ಫಲವಾಗಿ ದೀಪಾವಳಿ ಹಬ್ಬಕ್ಕೆ ಶಿವಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಿದೆ.


‘1000 ವಾಲಾ ‘ ಎನ್ನುವುದು ಆ ಚಿತ್ರದ ಶೀರ್ಷಿಕೆ. ‘ದಿ ಸೌಂಡ್ ಆಫ್ ಮಾಸ್’ ಎನ್ನುವುದು ಇದರ ಟ್ಯಾಗ್ ಲೈನ್. ಟೈಟಲ್ ಹಾಗೂ ಅದರ ಟ್ಯಾಗ್ ಲೈನ್ ತುಂಬಾ ಆಕರ್ಷಕವಾಗಿವೆ. ಹಾಗೆಯೇ ಕೈ ಗೆ ಪಟಾಕಿ ಸುತ್ತಿಕೊಂಡಿರುವ ಪೋಸ್ಟರ್ ಫಸ್ಟ್ ಲುಕ್ ಕೂಡ ಕುತೂಹಲಕಾರಿಯಾಗಿದೆ. ಇನ್ನು ‘ ತೌಜಂಡ್ ವಾಲಾ’ ಅಂದ್ರೇನು ಅನ್ನೋದು ಎಲ್ಲರಿಗೂ ಗೊತ್ತು. ಇದೊಂದು ಪಟಾಕಿ ಹೆಸರು. ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಪವರ್ ಫುಲ್ ಪಟಾಕಿ. ಅದನ್ನೇ ಚಿತ್ರದ ಟೈಟಲ್ ಆಗಿಸಿಕೊಂಡಿರುವ ಯುವ ನಿರ್ದೇಶಕ ಶಿವಕುಮಾರ್ ಕನ್ಮಡಕ್ಕೊಂಡು ಪವರ್ ಫುಲ್ ಕಂಟೆಂಟ್ ನ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದಾರೆ. ಅಂದ ಹಾಗೆ, ಈ ಸಿನಿಮಾ ಕೆಲಸ ಈಗಷ್ಟೇ ಶುರುವಾಗಿದೆ. ಕೆಲಸದ ಮೊದಲ ಸೌಂಡ್ ಗೆ ಅಂತ ದೀಪಾವಳಿ ಹಬ್ಬಕ್ಕೆ ಟೈಟಲ್ ಲಾಂಚ್ ಮಾಡಿರುವ ನಿರ್ದೇಶಕ ಶಿವಕುಮಾರ್, ಶೀಘ್ರವೇ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ತಯಾರಿಯಲ್ಲಿದ್ದಾರೆ.


ಇನ್ನು ಈ ಚಿತ್ರಕ್ಕೆ ನಾಯಕ, ನಾಯಕಿ ಸೇರಿದಂತೆ ಕಲಾವಿದರು‌ ಹಾಗೂ‌ ತಂತ್ರಜ್ಜರು ಫೈನಲ್ ಆಗಿಲ್ಲ. ನಿರ್ದೇಶಕ ಶಿವಕುಮಾರ್ ಹೇಳುವ ಪ್ರಕಾರ ಅದಕ್ಕೊಂದಷ್ಟು ಸಮಯ‌ಬೇಕಿದೆ. ಆದರೂ‌ ಈಗ ನಾಯಕರ ಹುಡುಕಾಟ‌ ನಡೆದಿದೆಯಂತೆ.ಕಥೆಗೆ ಸೂಕ್ತ ಎನಿಸುವುದರ ಜತೆಗೆ ಜನರಿಗೂ‌ ಪರಿಚಯ ಇರುವ ನಟರನ್ನೇ ಚಿತ್ರದ ನಾಯಕರನ್ನಾಗಿ ಆಯ್ಕೆ‌ ಮಾಡಿಕೊಳ್ಳಬೇಕೆನ್ನುವ ಇಚ್ವಾಸಕ್ತಿ ಹೊಂದಿದ್ದೇನೆ.ಆ‌‌ ನಿಟ್ಟಿನಲ್ಲಿ ‌ಒಂದಿಬ್ಬರು‌ ನಾಯಕರನ್ನು ಭೇಟಿಮಾಡಿ‌ಮಾತುಕತೆ ನಡೆಸಿದ್ದೇನೆ. ಆದರೆ ಅದ್ಯಾರು ಕೂಡ ಫೈನಲ್ ಆಗಿಲ್ಲ.‌ಇಷ್ಟರಲ್ಲಿಯೇ ಒಂದು ನಿರ್ಧಾರಕ್ಕೆ ಬಂದ ನಂತರ ಉಳಿದ ಕಲಾವಿದರ ಆಯ್ಕೆಯ ಕಡೆ ಗಮನ ಹರಿಲಾಗುವುದು ಎನ್ನುತ್ತಾರೆ ಯುವ ನಿರ್ದೇಶಕ ಶಿವಕುಮಾರ್.


ಹಾಗೆನೆ, ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರವಾದರೂ, ಸಿನಿಮಾ‌ ಪಯಣ ಸಾಕಷ್ಟು ವರ್ಷಗಳದ್ದು.‌‌ ಕನ್ನಡ ಹಾಗೂ ತಮಿಳು ಅ ಭಾಷೆಯ ಚಿತ್ರಗಳಿಗೆ ಸಹಾಯಕ‌ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ .‌ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಶಿವಕುಮಾರ್ ಅವರಿಗೆ ಕನ್ನಡದ‌ ಮೂಲಕವೇ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಕನಸು ಹೊತ್ತಿದ್ದರಂತೆ.ಆ ಕನಸು ಈಗ ನನಸಾಗುತ್ತಿದೆ ಎನ್ನುವ ಸಂಭ್ರಮದಲ್ಲಿಯೇ ಹಬ್ಬಕ್ಕೆ 1000 ವಾಲಾ ಪಟಾಕಿ ಸಿಡಿಸಿದ್ದಾರೆ. ಆಲ್ ದಿ ಬೆಸ್ಟ್ ಶಿವಕುಮಾರ್ ಅಂಡ್ ಟೀಮ್.

Categories
ಸಿನಿ ಸುದ್ದಿ

ಕಿರಣ್ ಅಲಿಯಾಸ್ ಶಿವಕುಮಾರ್ ಬದುಕಲ್ಲಿ ಇದು ಸಂಭ್ರಮದ ದೀಪಾವಳಿ; ನಿರ್ದೇಶಕನಾಗುವ ಅವರ ಸಾಹಸದಲ್ಲಿ ಹಬ್ಬಕ್ಕೆ ಸಿಡೀತು ‘1000 ವಾಲಾ’ ಪಟಾಕಿ !

ದೇಶಾದ್ರಿ ಹೊಸ್ಮನೆ

ಸಿನಿಮಾವೇ ಬದುಕು ಎನ್ನುವ ಗೆಳೆಯ ಹಾಗೂ ಒಡನಾಡಿ ಕಿರಣ್ ಅಲಿಯಾಸ್ ಶಿವಕುಮಾರ್ ಅವರ ಬದುಕಲ್ಲಿ ಇದು ನಿಜವಾದ ದೀಪಾವಳಿ. ಯಾಕಂದ್ರೆ ಚಿತ್ರ ನಿರ್ದೇಶಕನಾಗಬೇಕೆನ್ನುವ ಅವರ ಬಹು ದಿನದ ಕನಸು ಈಗ ಈಡೇರುತ್ತಿದೆ. ಗೆಳೆಯರಾದ ಅಶೋಕ್ ಅವರ ಬೆಂಬಲದ ಮೂಲಕ ಶಿವಕುಮಾರ್ ಅವರ ಬಹು ದಿನದ ಕನಸು ನನಸಾಗುತ್ತಿದೆ. ಆ ಮೂಲಕ ಈ ವರ್ಷದ ದೀಪಾವಳಿ ಹಬ್ಬ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಿಸಿದೆ. ಆ ಪ್ರಯತ್ನದ ಫಲವಾಗಿ ದೀಪಾವಳಿ ಹಬ್ಬಕ್ಕೆ ಶಿವಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಿದೆ.


‘1000 ವಾಲಾ ‘ ಎನ್ನುವುದು ಆ ಚಿತ್ರದ ಶೀರ್ಷಿಕೆ. ‘ದಿ ಸೌಂಡ್ ಆಫ್ ಮಾಸ್’ ಎನ್ನುವುದು ಇದರ ಟ್ಯಾಗ್ ಲೈನ್. ಟೈಟಲ್ ಹಾಗೂ ಅದರ ಟ್ಯಾಗ್ ಲೈನ್ ತುಂಬಾ ಆಕರ್ಷಕವಾಗಿವೆ. ಹಾಗೆಯೇ ಕೈ ಗೆ ಪಟಾಕಿ ಸುತ್ತಿಕೊಂಡಿರುವ ಪೋಸ್ಟರ್ ಫಸ್ಟ್ ಲುಕ್ ಕೂಡ ಕುತೂಹಲಕಾರಿಯಾಗಿದೆ. ಇನ್ನು ‘ ತೌಜಂಡ್ ವಾಲಾ’ ಅಂದ್ರೇನು ಅನ್ನೋದು ಎಲ್ಲರಿಗೂ ಗೊತ್ತು. ಇದೊಂದು ಪಟಾಕಿ ಹೆಸರು. ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಪವರ್ ಫುಲ್ ಪಟಾಕಿ. ಅದನ್ನೇ ಚಿತ್ರದ ಟೈಟಲ್ ಆಗಿಸಿಕೊಂಡಿರುವ ಯುವ ನಿರ್ದೇಶಕ ಶಿವಕುಮಾರ್ ಕನ್ಮಡಕ್ಕೊಂಡು ಪವರ್ ಫುಲ್ ಕಂಟೆಂಟ್ ನ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದಾರೆ. ಅಂದ ಹಾಗೆ, ಈ ಸಿನಿಮಾ ಕೆಲಸ ಈಗಷ್ಟೇ ಶುರುವಾಗಿದೆ. ಕೆಲಸದ ಮೊದಲ ಸೌಂಡ್ ಗೆ ಅಂತ ದೀಪಾವಳಿ ಹಬ್ಬಕ್ಕೆ ಟೈಟಲ್ ಲಾಂಚ್ ಮಾಡಿರುವ ನಿರ್ದೇಶಕ ಶಿವಕುಮಾರ್, ಶೀಘ್ರವೇ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ತಯಾರಿಯಲ್ಲಿದ್ದಾರೆ.


ಇನ್ನು, ಈ ಚಿತ್ರಕ್ಕೆ ನಾಯಕ, ನಾಯಕಿ ಸೇರಿದಂತೆ ಕಲಾವಿದರು‌ ಹಾಗೂ‌ ತಂತ್ರಜ್ಞರು ಫೈನಲ್ ಆಗಿಲ್ಲ. ನಿರ್ದೇಶಕ ಶಿವಕುಮಾರ್ ಹೇಳುವ ಪ್ರಕಾರ ಅದಕ್ಕೊಂದಷ್ಟು ಸಮಯ‌ಬೇಕಿದೆ. ಆದರೂ‌ ಈಗ ನಾಯಕರ ಹುಡುಕಾಟ‌ ನಡೆದಿದೆಯಂತೆ. ಕಥೆಗೆ ಸೂಕ್ತ ಎನಿಸುವುದರ ಜತೆಗೆ ಜನರಿಗೂ‌ ಪರಿಚಯ ಇರುವ ನಟರನ್ನೇ ಚಿತ್ರದ ನಾಯಕರನ್ನಾಗಿ ಆಯ್ಕೆ‌ ಮಾಡಿಕೊಳ್ಳಬೇಕೆನ್ನುವ ಇಚ್ವಾಸಕ್ತಿ ಹೊಂದಿದ್ದೇನೆ. ಆ‌‌ ನಿಟ್ಟಿನಲ್ಲಿ ‌ಒಂದಿಬ್ಬರು‌ ನಾಯಕರನ್ನು ಭೇಟಿ ಮಾಡಿ‌ ಮಾತುಕತೆ ನಡೆಸಿದ್ದೇನೆ. ಆದರೆ ಅದ್ಯಾರು ಕೂಡ ಫೈನಲ್ ಆಗಿಲ್ಲ.‌ಇಷ್ಟರಲ್ಲಿಯೇ ಒಂದು ನಿರ್ಧಾರಕ್ಕೆ ಬಂದ ನಂತರ ಉಳಿದ ಕಲಾವಿದರ ಆಯ್ಕೆಯ ಕಡೆ ಗಮನ ಹರಿಲಾಗುವುದು ಎನ್ನುತ್ತಾರೆ ಯುವ ನಿರ್ದೇಶಕ ಶಿವಕುಮಾರ್.
ಹಾಗೆನೆ, ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರವಾದರೂ, ಸಿನಿಮಾ‌ ಪಯಣ ಸಾಕಷ್ಟು ವರ್ಷಗಳದ್ದು.‌‌ ಕನ್ನಡ ಹಾಗೂ ತಮಿಳು ಭಾಷೆಯ ಚಿತ್ರಗಳಿಗೆ ಸಹಾಯಕ‌ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಶಿವಕುಮಾರ್ ಅವರಿಗೆ ಕನ್ನಡದ‌ ಮೂಲಕವೇ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಕನಸು ಹೊತ್ತಿದ್ದರಂತೆ.ಆ ಕನಸು ಈಗ ನನಸಾಗುತ್ತಿದೆ ಎನ್ನುವ ಸಂಭ್ರಮದಲ್ಲಿಯೇ ಹಬ್ಬಕ್ಕೆ 1000ವಾಲಾ ಪಟಾಕಿ ಸಿಡಿಸಿದ್ದಾರೆ. ಆಲ್ ದಿ ಬೆಸ್ಟ್ ಶಿವಕುಮಾರ್ ಅಂಡ್ ಟೀಮ್.

Categories
ಸಿನಿ ಸುದ್ದಿ

ಸದ್ಯಕ್ಕೆ ಸಖತ್ ತೆರೆಗೆ ಬರಲ್ಲ! ನವೆಂಬರ್ 26ಕ್ಕೆ ಗಣಿ-ಸುನಿಯ ಸಖತ್ ಮ್ಯಾಜಿಕ್…!

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬೋದ ಸಖತ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಇದೇ ನವೆಂಬರ್ 12 ರಿಂದ ತೆರೆ ಮೇಲೆ ಸಖತ್ ಮ್ಯಾಜಿಕ್ ಶುರುವಾಗಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ದಿಗ್ಬ್ರಮೆಗೆ ಒಳಗಾಗಿದೆ. ಹೀಗಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಿಸಿದೆ. ನವೆಂಬರ್ 12ರ ಬದಲು 26ಕ್ಕೆ ಸಿನಿಮಾ ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ.

ಈಗಾಗ್ಲೇ ಸಖತ್ ಟೀಸರ್ ಹಾಗೂ ಸಾಂಗ್ ಝಲಕ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಂಧನ‌ ಪಾತ್ರದಲ್ಲಿ ಗಣಿ ಲುಕ್.. ಸಿಂಪಲ್ ಸುನಿ ಡೈಲಾಗ್ ಕಿಕ್.. ಜೂಡಾ ಸ್ಯಾಂಡಿ ಮ್ಯೂಸಿಕ್ ಎಲ್ಲವೂ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ.

ಕಾಮಿಡಿ ಜೊತೆ ರಿಯಾಲಿಟಿ ಶೋ ಸುತ್ತ ಎಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ಪೋಷಕ ಪಾತ್ರ ನಿಭಾಯಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.

Categories
ಸಿನಿ ಸುದ್ದಿ

ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ; ಬೇಸರಗೊಂಡ ತಮಿಳು ನಟ !?

ದೊಡ್ಮನೆ ರಾಜಕುಮಾರನ ಅಕಾಲಿಕ ಅಗಲಿಕೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಾತ್ರವಲ್ಲ ಹೊರರಾಜ್ಯ- ಪರಭಾಷೆಯ ಸ್ಟಾರ್ಸ್ ಗಳು ಕೂಡ ಶೋಕ ವ್ಯಕ್ತಪಡಿಸಿದ್ದಾರೆ. ದೊಡ್ಡ ದೊಡ್ಡ ನಟರುಗಳು ಪುನೀತ್ ನಿವಾಸಕ್ಕೆ ಆಗಮಿಸಿ ಅಪ್ಪು ಕುಟುಂಬವನ್ನು ಸಂತೈಸ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಧೈರ್ಯವಾಗಿರಿ‌ ಎನ್ನುವ ಮಾತುಗಳನ್ನಾಡ್ತಿದ್ದಾರೆ. ಅಕ್ಕಿನೇನಿ ನಾಗಚೈತನ್ಯ- ರಾಮ್ ಚರಣ್ ತೇಜಾ- ಶಿವಕಾರ್ತಿಕೇಯನ್- ಪ್ರಭು ಗಣೇಶನ್ ನಂತರ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಪವರ್ ಸ್ಟಾರ್ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದಾರೆ. ಆದರೆ, ಯುವರತ್ನನ ಮನೆಗೆ ಆಗಮಿಸುವ ಹೊತ್ತಲ್ಲಿ ಕೆಂಪೇಗೌಡ ನಿಲ್ದಾಣದಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ‌ ಭಾರೀ ವೈರಲ್ ಆಗ್ತಿದೆ.

ಮಾಸ್ಟರ್ ಶೆಫ್ ಶೂಟಿಂಗ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದ ತಮಿಳು ನಟ ವಿಜಯ್ ಅವರು, ಚಿತ್ರೀಕರಣದ ನಂತರ
ನಟಸಾರ್ವಭೌಮನ ಪುಣ್ಯಭೂಮಿಗೆ ಭೇಟಿ ನೀಡಲು ನಿರ್ಧರಿಸಿದ್ದರಂತೆ.
ಆದರೆ, ಏರ್ ಪೋರ್ಟ್ ನಲ್ಲಿಯೇ ನಟನ ಮೇಲೆ ಹಲ್ಲೆ ಯತ್ನ ನಡೆದಿದೆ. ವಿಮಾನದಲ್ಲಿ ವಿಜಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಚಾರದಲ್ಲಿ ವಿಜಯ್ ಪಿ.ಎ ಮತ್ತು ಸಹಪ್ರಯಾಣಿಕನ ಮಧ್ಯೆ ಕಿರಿಕ್ ಆಗಿತ್ತಂತೆ. ಸಹಪ್ರಯಾಣಿಕ ಪಾನಮತ್ತನಾಗಿದ್ದು, ಸೇತುಪತಿ ಪಿ.ಎ ಜೊತೆ ವಾಗ್ವಾದ ನಡೆಸಿದ್ದಾನೆ ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ನಡೆದು ಹೋಗುವಾಗ ಹಿಂದೆಯಿಂದ ಬಂದು ಕಾಲಿನಿಂದ ಎಗರೆಗರಿ ಹೊಡೆದಿದ್ದಾನೆ.
ಈ ವೇಳೆ ಸೇತುಪತಿಯವರ ಭದ್ರತಾ ಸಿಬ್ಬಂಧಿ ಯುವಕನನ್ಮು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಚ್ಚರಿ ಅಂದರೆ, ತಮಿಳು ನಟ ವಿಜಯ್‌ ಅವರು ಹಲ್ಲೆ ಘಟನೆಯನ್ನು ದೊಡ್ದದು ಮಾಡಲಿಕ್ಕೆ ಹೋಗಿಲ್ಲ. ತಾವು ಬಂದ ಕೆಲಸದ ಕಡೆ ಗಮನ ವಹಿಸಿ ಅಲ್ಲಿಂದ ತೆರಳಿದ್ದಾರೆ. ಒಂದು ವೇಳೆ ವಿಷ್ಯ ದೊಡ್ದು ಮಾಡಿದ್ದರೆ ವಿಜಯ್ ಮೇಲಿನ ಹಲ್ಲೆ ಘಟನೆ ಬೇರೆಯದ್ದೇ ಆದ ತಿರುವು ಪಡೆಯುತ್ತಿತ್ತು. ರೊಚ್ಚಿಗೇಳುವ, ಆಕ್ರೋಶಗೊಂಡು ಅಲ್ಲೋಲ- ಕಲ್ಲೋಲ ಮಾಡುವ ಘಟನೆಗಳು ಸಂಭವಿಸುತ್ತಿತ್ತು. ಇದ್ಯಾವುದಕ್ಕೂ ಆಸ್ಪದ ಕೊಡದ ಜನಪ್ರಿಯ ನಟ,ಶೂಟಿಂಗ್ ಮುಗಿಸಿಕೊಂಡು ಅನಂತರ ಅಂಜನಿಪುತ್ರನ ಪುಣ್ಯಭೂಮಿಗೆ ಭೇಟಿಕೊಟ್ಟು ಹೂವಿನ ಹಾರ ಹಾಕಿ ಅಪ್ಪುಗೆ ನಮಿಸಿದ್ದಾರೆ. ಅನಂತರ ಅಪ್ಪು ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ನಾನು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ. ಆದರೆ, ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ಕಾಲ್​​​ನಲ್ಲಿ‌ ಒಂದು ಸ‌ಲ ಮಾತನಾಡಿದ್ದೆ. ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ನನ್ನ ಸಿನಿಮಾ ನೋಡಿ ಕಾಲ್ ಮಾಡಿದ್ರು, ನನಗೆ ಅವರು ಇಲ್ಲ ಎನ್ನುವುದು ಈ ಕ್ಷಣದವರೆಗೂ ಅರಗಿಸಿಕೊಳ್ಳಲು ಆಗಿಲ್ಲ. ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ನ್ಯೂಸ್​ ನೋಡಿದಾಗ ಅವರು ತುಂಬಾ ಫಿಟ್​​ ಇದ್ದಾರೆ.. ಖಂಡಿತ ಹುಷಾರಾಗಿ ವಾಪಸ್​ ಬರ್ತಾರೆ ಅಂತ ಅಂದು ಕೊಂಡಿದ್ದೆ. ಅವರ ಆತ್ಮಕ್ಕೆ ಶಾಂತಿ‌ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು. ಇಂತಹ ಮನಸ್ಥಿತಿಯ ವ್ಯಕ್ತಿ ನಮ್ಮ ರಾಜವಂಶದ ಕುಡಿಯ ಅಗಲಿಕೆಗೆ ಕಂಬನಿ ಮಿಡಿಯಲು ಬರುತ್ತಿರುವಾಗ, ಅದ್ಯಾರೋ ಪಾನಮತ್ತ ಯುವಕ ಹಲ್ಲೆ ನಡೆಸಿದ್ದು ನಿಜಕ್ಕೂ ಖಂಡನೀಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆಸರೆಯಾಗಿದ್ದ ಚಾರಿಟಿಗಳಿಗೆ 8 ಕೋಟಿ ಡೆಪಾಸಿಟ್ ಮಾಡಿಟ್ಟು ಹೋಗಿದ್ದಾರಂತೆ ಅಪ್ಪು- ದೊಡ್ಮನೆ ರಾಜಕುಮಾರ ಕಣ್ಣಿಗೆ ಕಾಣುವ ದೇವರು ಎನ್ನುತ್ತಿದ್ದಾರೆ ಫ್ಯಾನ್ಸ್ !?

ಬದುಕು‌ ಅನಿರೀಕ್ಷಿತ life is so unpredictable ಅಂತಾರೆ. ಜೀವನ ಯಾರದ್ದೇ ಆಗಿರಲಿ ಹೀಗೆ ಇರುತ್ತೆ, ಹೀಗೆ ನಡೆಯುತ್ತೆ ಎಂಬುದನ್ನು ಊಹೆ ಮಾಡೋದಕ್ಕೆ ಸಾಧ್ಯವಿಲ್ಲ. ಈ‌ ಕಟುಸತ್ಯವನ್ನು ಅರಿತುಕೊಂಡಿದ್ದ ಕನ್ನಡದ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಾವುದಕ್ಕೂ ಇರಲಿ ಅಂತ ತಾವು ಆಸರೆಯಾಗಿದ್ದ ಚಾರಿಟಿಗಳಿಗೆ ಬರೋಬ್ಬರಿ 8 ಕೋಟಿ ಡೆಪಾಸಿಟಿ ಮಾಡಿಟ್ಟು ಹೋಗಿದ್ದಾರೆನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಈ ಸುದ್ದಿ ಕೇಳಿದ ಅಪ್ಪು ಭಕ್ತರು ನಮ್ಮ ಬಾಸ್ ದೇವರು ಅಂತಿದ್ದಾರೆ.

ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ‌ ಆದರೆ ದೇವರ ರೂಪದಲ್ಲಿ ದೊಡ್ಮನೆಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದರು ಮತ್ತು ಇದ್ದಾರೆ ಎನ್ನುವುದೇ ಅಚ್ಚರಿಯ ಸತ್ಯ. ಬದುಕಿದ್ದಷ್ಟು ದಿನ ಪ್ರೀತಿ ಹಂಚಿದರು, ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಂತೆ ನೋಡಿಕೊಂಡರು. ದೇಹಿ ಎನ್ನುವ ಮೊದಲೇ ದಾನ ಮಾಡಿದರು. ಅನಾಥಾಶ್ರಮ- ವೃದ್ಧಾಶ್ರಮ- ವಸತಿ ಶಿಕ್ಷಣ- ಗೋಶಾಲೆಗೆ ಆಸರೆಯಾದರು. 1800 ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಹೊಣೆ ಹೊತ್ತರು. ಇಷ್ಟೆಲ್ಲಾ ಮಾಡಿದರೂ ಪ್ರಚಾರ ಬಯಸಲಿಲ್ಲ. ಮಾಧ್ಯಮದ ಮುಂದೆ ಯಾವತ್ತೂ ಹೇಳಿಕೊಳ್ಳಲಿಲ್ಲ.

ಹೌದು, ಅಪ್ಪು ಧ್ವನಿಯಾದ ಹಾಡಿಗೆ ಸಿಗುತ್ತಿದ್ದ ಸಂಭಾವನೆ ಮೈಸೂರಿನ ಶಕ್ತಿಧಾಮ ಚಾರಿಟಿಗೆ ಹೋಗುತ್ತೆ ಎನ್ನುವ ವಿಚಾರ ಗೊತ್ತಿತ್ತೆ‌ ವಿನಃ, 16 ವೃದ್ಧಾಶ್ರಮಗಳಿಗೆ, 19 ಗೋಶಾಲೆಗಳಿಗೆ, 45 ಉಚಿತ ಶಾಲೆಗಳಿಗೆ, ಶಕ್ತಿ ಧಾಮದಂತಹ ಎಷ್ಟೋ ಅನಾಥಾಶ್ರಮಗಳಿಗೆ ಆಸರೆಯಾಗಿದ್ರು ಎನ್ನುವ ಸುದ್ದಿ ಯಾರಿಗೂ ಗೊತ್ತಿರಲಿಲ್ಲ. ಅಪ್ಪು ಅಗಲಿಕೆಯ ನಂತ್ರ ಅದೆಷ್ಟು ಸಮಾಜಮುಖಿ ಕೆಲಸ ಮಾಡ್ತಿದ್ದರು ಎನ್ನುವ ಸತ್ಯ ಬಹಿರಂಗಗೊಂಡಿತು. ಇದೀಗ, ಆಸರೆಯಾಗಿದ್ದ ಸಂಸ್ಥೆಗಳು ಯಾವ ಸಂದರ್ಭದಲ್ಲೂ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಪುನೀತ್ ಮೊದಲೇ 8 ಕೋಟಿ ಡೆಪಾಸಿಟ್ ಮಾಡಿದ್ದರು ಎನ್ನುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.

ಒಂದ್ವೇಳೆ ಈ‌ ಸುದ್ದಿ ನಿಜ ಆದರೆ ಕನಿಷ್ಟ ಪಕ್ಷ ಅರ್ಧ ವರ್ಷವಾದರೂ ಚಾರಿಟಿಯವರು ದೊಡ್ಮನೆ ಅರಸು ಆಸರೆಯಾಗಿದ್ದ ಸಂಸ್ಥೆಗಳನ್ಮು ನಿಶ್ಚಿಂತೆಯಿಂದ ನಡೆಸುತ್ತಾರೆ. ರಾಜಕುಮಾರ ಇಲ್ಲ ಎನ್ನುವ ಕೊರಗಿನ ನಡುವೆಯೂ ಆಶ್ರಮದಲ್ಲಿ ನೆಲೆಕಂಡುಕೊಂಡವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಶಕ್ತಿಧಾಮದಲ್ಲಿರುವ ವಿಧ್ಯಾರ್ಥಿಗಳು ಸೇರಿದಂತೆ ರಾಜ್ಯದ ಒಟ್ಟು 1800 ವಿಧ್ಯಾರ್ಥಿಗಳ ಓದಿನ ಜವಬ್ದಾರಿ ನನಗಿರಲಿ. ಮುಂದಿನ ವರ್ಷದಿಂದ ನಾನು ಅವರೆಲ್ಲರಿಗೂ ಆಸರೆಯಾಗುವುದಾಗಿ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್ ಆಶ್ವಾಸನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಪ್ಪು ನಡೆಸುತ್ತಿದ್ದ ಅಷ್ಟು ಅನಾಥಾಶ್ರಮ, ವೃದ್ಧಾಶ್ರಮ- ಉಚಿತ ಶಾಲೆ ಹಾಗೂ ಗೋಶಾಲೆಗಳಿಗೆ ನೆರವಾಗುವುದಕ್ಕೆ ಯಾರಾದರೂ ಮುಂದೆ ಬಂದರೆ ಒಳ್ಳೆಯದಾಗುತ್ತೆ. ವಿಶಾಲ್ ರಂತೆ ಸ್ಟಾರ್ ಗಳು, ರಾಜಕೀಯದವರು ಯಾರೇ ಆಗಲಿ ಮುಂದೆ ಬಂದು ಟೇಕ್ ಓವರ್ ಮಾಡಿಕೊಂಡು ಸಮಾಜ ಸೇವೆ ಮಾಡಲಿ ಎನ್ನುವುದೇ ಸಕಲರ ಬೇಡಿಕೆ

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಪುನೀತ್ ಮನೆಗೆ ಕೂಡಲ ಸಂಗಮ ಜಗದ್ಗುರು ಭೇಟಿ; ಕುಟುಂಬಕ್ಕೆ ಸಾಂತ್ವಾನ

ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಅಥವಾ ಫಿಲಂ ಸಿಟಿ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಶ್ರೀಗಳ ಸಲಹೆ

ಅಪ್ಪು ಅವರ ಮನೆಗೆ ಭೇಟಿ ನೀಡಿದ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಶ್ರೀಗಳು, ಅಪ್ಪು ಅವರ ಪತ್ನಿ ಆಶ್ವಿನಿ , ಮಗಳಾದ ದೃತಿ ಹಾಗೂ ವಂದಿತಾ, ವಿನಯ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.


ಈ ಸಂಧರ್ಭದಲ್ಲಿ ಮಾಜಿ ಮೇಯರ್ ಪುಟ್ಟರಾಜ್ , ಮಾಜಿ ಸದಸ್ಯ ನಟರಾಜ್ , ಯುವ ನಟ ಅಭಿಲಾಷ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೆವಾಡ , ಕಾರ್ಯದರ್ಶಿ ವೀರೇಶ ಮೊದಲಾದವರು ಉಪಸ್ತಿತರಿದ್ದರು.

Categories
ಸಿನಿ ಸುದ್ದಿ

ಒಗ್ಗಟ್ಟಿನ ಮಂತ್ರ ಜಪಿಸಿದ ಗಂಧದಗುಡಿಯ ಅಭಿಮಾನಿ ಬಳಗ…ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್…!

ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಈ ಬೆಳವಣಿಗೆ ಇಡೀ ಕನ್ನಡ ಸಿನಿಪ್ರಿಯರಿಗೆ ಖಂಡಿತ ಖುಷಿ ಕೊಡುತ್ತೆ. ಅಂತಹ ಬೆಳವಣಿಗೆ ಏನು ಅಂತಾ ಬಾಯಮೇಲೆ ಬೆರಳಿಡಬೇಡಿ. ಇಡೀ ಕನ್ನಡ ಅಭಿಮಾನಿದೇವರುಗಳು ಒಗ್ಗಟ್ಟಿನ ಮಂತ್ರ ಜಪಿಸ್ತಿದೆ

ಹೌದು.. ಕನ್ನಡದ ರಾಜರತ್ನ..ಯುವರತ್ನ..ಪವರ್ ಸ್ಟಾರ್ ಪುನೀತ್ ಹಠಾತ್ ಸಾವು ಎಲ್ಲರನ್ನು ದಿಗ್ರ್ಬಮೆಗೆ ತಳ್ಳಿದೆ. ಇರೋ ನಾಲ್ಕೈದು ದಿನ ಎಲ್ಲರು ಖುಷಿಯಿಂದ ಒಗ್ಗಟ್ಟಿನಿಂದ ಇರೋಣ. ಈ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲ ಪಕ್ಕಕ್ಕಿಟ್ಟು. ಒಗ್ಗಟ್ಟಿನಿಂದ ಜೀವಿಸೋಣ ಅನ್ನೋ ಸಂದೇಶವನ್ನು ಅಭಿಮಾನಿಗಳು ಸಾರಿ ಸಾರಿ ಹೇಳ್ತಿದ್ದಾರೆ.

ನಮ್ಮ ಕನ್ನಡ ಇಂಡಸ್ಟ್ರೀಯ ಎಲ್ಲಾ ಸ್ಟಾರ್ಸ್ ಅಭಿಮಾನಿಗಳು ಒಂದಾಗಿದ್ದಾರೆ. ಸದಾ ಸ್ಟಾರ್ಸ್ ವಾರ್ ಫ್ಯಾನ್ ವಾರ್ ಅಂತಾ ತೋಳೇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಸ್ತಿದ್ದ ಅಭಿಮಾನಿ ದೇವರುಗಳು ಈಗ ನಾವೆಲ್ಲ ಒಂದೇ ಅನ್ನೋ ಮಂತ್ರ ಜಪಿಸ್ತಿದ್ದಾರೆ.

ಕನ್ನಡದ ಹಿರಿಯ ನಟ..ನವರಸ ನಾಯಕ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲರ ಸ್ಟಾರ್ಸ್‌ ಒಂದಾಗಿರುವ ಫೋಟೋವನ್ನು ಹಂಚಿಕೊಂಡು, ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು!
ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ!
ಕನ್ನಡಿಗರು ನಮ್ಮ ಬಂಧುಗಳು!
ನಮ್ಮ ಈಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು!ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು!ಈಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ
ಅಂತ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಈ ನಡೆಗೆ ಜಗ್ಗೇಶ್ ಸಾಥ್ ಕೊಟ್ಟಿದ್ದಾರೆ. ಅಪ್ಪು, ಕಿಚ್ಚ, ದಚ್ಚು ಗಣಿ, ಶಿವಣ್ಣ ಹೀಗೆ ಕನ್ನಡದ ಎಲ್ಲಾ ಸ್ಟಾರ್ಸ್‌ ಫ್ಯಾನ್ಸ್, ಫ್ಯಾನ್ಸ್ ವಾರ್ ಬೇಡ್ವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಜೇನಿನಗೂಡ ನಾವೆಲ್ಲ ಹೀಗೆ ಇರೋಣ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ದೊಡ್ಮನೆಗೆ ಭೇಟಿ ಕೊಟ್ಟ ಅಕ್ಕಿನೇನಿ ನಾಗಾರ್ಜುನ್‌ ; ಅಪ್ಪು ಇಲ್ಲ ಅನ್ನೋದು ನಂಬೋಕೆ ಆಗ್ತಿಲ್ಲ ಅಂದ್ರು…

ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಮಂಗಳವಾರ ಪುನೀತ್‌ ರಾಜಕುಮಾರ್‌ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬದವರ ಜೊತೆ ಮಾತನಾಡಿ, ಅವರನ್ನು ಸಂತೈಸುವುದರ ಜೊತೆ ಧೈರ್ಯ ತುಂಬಿದ್ದಾರೆ. ಪುನೀತ್‌ ಅವರ ಸಹೋದರ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಮಾತನಾಡಿದ ಬಳಿಕ, ಮಾಧ್ಯಮದವರ ಜೊತೆ ಪುನೀತ್‌ ಬಗ್ಗೆ ಹೇಳಿದ್ದಿಷ್ಟು. “ನನಗೆ ಪುನೀತ್‌ ರಾಜಕುಮಾರ್‌ ಅವರು ಇಲ್ಲ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್‌ ಆಯ್ತು. ಎರಡ್ಮೂರು ದಿನಗಳಿಂದಲೂ ಈ ಸುದ್ದಿ ಕೇಳುತ್ತಲೇ ಇದ್ದೇನೆ. ನಿಜವಾಗಿಯೂ ಈ ಸುದ್ದಿ ನಿಜಾನಾ, ಇದು ನಡೀತಾ, ಇಲ್ಲವೋ ಅನ್ನುವುದನ್ನೂ ಊಹೆ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್‌ ರಾಜಕುಮಾರ್‌ ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಒಂದೊಮ್ಮೆ ಯೋಚಿಸಿದರೆ, ಇದೆಲ್ಲಾ ನಡೀತಾ ಅನ್ನೋದೇ ಗೊತ್ತಾಗುತ್ತಿಲ್ಲ.


ಪುನೀತ್‌ ರಾಜಕುಮಾರ್‌ ಅವರ ಬಗ್ಗೆ ಯಾರು ಏನೇ ಮಾತಾಡಿದರೂ, ಒಳ್ಳೆಯತನದಿಂದಲೇ ಮಾತಾಡುತ್ತಾರೆ. ಅವರ ಕುರಿತು ಒಳ್ಳೆಯ ಅಭಿಪ್ರಾಯವನ್ನೇ ಹೇಳುತ್ತಾರೆ. ಯಾರನ್ನೇ ಕೇಳಿ ಪುನೀತ್‌ ಬಗ್ಗೆ ಒಳ್ಳೆಯದನ್ನು ಬಿಟ್ಟರೆ ಬೇರೆ ಏನನ್ನೂ ಹೇಳುವುದಿಲ್ಲ. ಪುನೀತ್‌ ರಾಜಕುಮಾರ್‌ ಅವರು ಹಾಗೆ ಹೆಲ್ಪ್‌ ಮಾಡಿದ್ದಾರೆ, ಈ ರೀತಿ ಕೆಲಸ ಮಾಡಿದ್ದಾರೆ ಪ್ರತಿಭೆಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಹೀಗೆ ಒಳ್ಳೊಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಕುರಿತಾಗಿಯೇ ಮಾತುಗಳು ಕೇಳಿಬರುತ್ತಿದೆ.

ಅವರೊಬ್ಬ ಹೀರೋ ಆಗಿಯೂ ಸಾಕಷ್ಟು ಬೇರೆ ಪ್ರತಿಭಾವಂತರಿಗೆ ಬೆನ್ನು ತಟ್ಟುತ್ತಿದ್ದರು. ಪ್ರೋತ್ಸಾಹ ಕೊಡುತ್ತಿದ್ದರು. ಇಂತಹ ಮನುಷ್ಯನನ್ನು ದೇವರು ಬೇಗನೇ ಕರೆದುಕೊಂಡು ಹೋದ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ಗೆ, ಕನ್ನಡಿಗರಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಫ್ಯಾನ್ಸ್‌, ಕನ್ನಡಿರಗರು ಫ್ಯಾಮಿಲಿಗೆ ದುಃಖ ಬರಿಸೋ ಶಕ್ತಿ ನೀಡಲಿ

Categories
ಸಿನಿ ಸುದ್ದಿ

ಕಿರುತೆರೆಗೆ ರಾಬರ್ಟ್‌ ಎಂಟ್ರಿ! ದಚ್ಚು ಫ್ಯಾನ್ಸ್‌ಗೆ ಡಬ್ಬಲ್‌ ಧಮಾಕ!! ದೀಪಾವಳಿಗೆ ದರ್ಶನ

ಕನ್ನಡ ಚಿತ್ರರಂಗ ಈಗಾಗಲೇ ಸಾಗರದಾಚೆಗೂ ಸದ್ದು ಮಾಡಿರೋದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, “ರಾಬರ್ಟ್‌” ಈಗ ಇನ್ನಷ್ಟು ಹತ್ತಿರಕ್ಕೆ ಬರುತ್ತಿದೆ. ಅರೇ, ಇದೇನಪ್ಪಾ ರಾಬರ್ಟ್‌ ಹತ್ತಿರದ ವಿಷಯ ಅನ್ನೋ ಕನ್‌ಫ್ಯೂಷನ್ನಾ? ವಿಷಯ ಇದೆ. ರಾಬರ್ಟ್‌ ಚಿತ್ರ ಈಗ ಮನೆ ತಲುಪುತ್ತಿದೆ. ಹೌದು, ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದವರಿಗೆ ಸಿನಿಮಾ ಟಿವಿಯಲ್ಲಿ ಬರುತ್ತಿದೆ ಅನ್ನೋದೇ ಖುಷಿಯ ಸುದ್ದಿ. ಮನೆಯಲ್ಲೇ ಮನೆ ಮಂದಿ ಜೊತೆಗೆ ಕೂತು ನೋಡುವಂತಹ ಅವಕಾಶವನ್ನು ಉದಯ ಟಿವಿ ಮಾಡಿಕೊಟ್ಟಿದೆ. ರಾಬರ್ಟ್‌ ಕಿರುತೆರೆಗೆ ಎಂಟ್ರಿಗೆ ಜೋರಾದ ತಯಾರಿಯೂ ನಡೆಯುತ್ತಿದೆ. ಇದೇ ಮೊದಲ ಸಲ ರಾಬರ್ಟ್‌ ಕನ್ನಡದ ಕಿರುತೆಯಲ್ಲಿ ಬಿಡುಗಡೆಯಾಗುತ್ತಿದೆ.

ಹಾಗಾಗಿ ರಾಬರ್ಟ್‌ ಮಿಸ್‌ ಮಾಡಿಕೊಂಡವರು ಮಿಸ್‌ ಮಾಡದೇ ಮನೆಯಲ್ಲೇ ಸಿನಿಮಾ ನೋಡಲಡ್ಡಿಯಿಲ್ಲ.
ಇನ್ನು, ಈ ವಿಷಯ ದರ್ಶನ್‌ ಫ್ಯಾನ್ಸ್‌ಗಂತೂ ಸಂಭ್ರಮವೋ ಸಂಭ್ರಮ. ನವೆಂಬರ್‌ 4ನೇ ತಾರೀಖಿನಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ರಾಬರ್ಟ್‌ ಪ್ರಸಾರವಾಗಲಿದೆ. ಹಬ್ಬದ ದಿನವೇ ಸಿನಿಮಾ ಪ್ರಸಾರ ಆಗುತ್ತಿರುವುದರಿಂದ ಇದು ದರ್ಶನ್‌ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ. ಪಟಾಕಿ ಸಿಡಿಸಿ ಸಂಭ್ರಮಿಸೋ ಹಬ್ಬದಲ್ಲಿ ರಾಬರ್ಟ್‌ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ.


ರಾಬರ್ಟ್‌ ಕೊರೊನಾ ಲಾಕ್‌ಡೌನ್‌ ನಂತರ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ದೊಡ್ಡ ಹಿಟ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಪಕ್ಕಾ ಮಾಸ್ ಸ್ಟೋರಿ ಇದ್ದ ಈ ಚಿತ್ರ ಮಾಸ್‌ ಆಡಿಯನ್ಸ್‌ ಜೊತೆಗೆ ಫ್ಯಾಮಿಲಿ ಕೂಡ ನೋಡಬಹುದಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಾಬರ್ಟ್‌ ಈಗ ಕಿರುತೆರೆಗೂ ಕಾಲಿಡುತ್ತಿದ್ದಾನೆ. ಇಲ್ಲೂ ಮತ್ತಷ್ಟು ರೆಕಾರ್ಡ್‌ ಗ್ಯಾರಂಟಿ.

ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಉಮಾಪತಿ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ನಟಿ ಆಶಾ ಭಟ್, ದೇವರಾಜ್ ಸೇರಿದಂತೆ ದೊಡ್ಡ ಕಲಾಬಳಗ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಹಾಗು ಅರ್ಜುನ್ ಜನ್ಯ ಸಂಗೀತವಿದೆ. ಸುಧಾಕರ್ ಕ್ಯಾಮೆರಾ ಹಿಡಿದಿದ್ದಾರೆ.

Categories
ಸಿನಿ ಸುದ್ದಿ

ಪವರ್‌ ಸ್ಟಾರ್‌ ಡೇ ಆಚರಿಸಲು ಶುರುವಾಯ್ತು ಕ್ಯಾಂಪೇನ್;‌ ಕೈ ಜೋಡಿಸಿ ಅಂತಿದಾರೆ ಫ್ಯಾನ್ಸ್‌ !

ಮನುಷ್ಯ ಇದ್ದಾಗ ಅವರ ಬೆಲೆ ಗೊತ್ತಾಗೋದೇ ಇಲ್ಲ. ಅದೇ ಅವರಿಲ್ಲವಾದಾಗ, ನಿಜವಾದ ಬೆಲೆ ಗೊತ್ತಾಗುತ್ತೆ. ಆದರೆ, ಪುನೀತ್‌ ರಾಜಕುಮಾರ್‌ ವಿಷಯದಲ್ಲಿ ಹಾಗೆ ಆಗಲೇ ಇಲ್ಲ. ಅವರು ಇದ್ದಾಗಲೇ ದೊಡ್ಡ ಬೆಲೆ ಇತ್ತು. ಹೌದು, ಈ ಮಾತು ಅಕ್ಷರಶಃ ನಿಜ. ಅವರು ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದರು. ಅದೆಷ್ಟೋ ನೊಂದ ಜೀವಗಳಿಗೆ ಸಾಂತ್ವಾನ ಹೇಳಿದ್ದರು. ದಿಕ್ಕಿಲ್ಲದವರನ್ನು ಸಂತೈಸಿದ್ದರು. ಸೂರಿಲ್ಲದವರಿಗೆ ತಲೆ ಸವರಿ ಆಶ್ರಯ ನೀಡಿದ್ದರು. ಅನಾಥರಿಗೆ ಆಪ್ತರಾಗಿ, ಅವರ ಕಣ್ಣೀರು ಹೊರೆಸಿದ್ದರು. ಇನ್ನು ಗೊತ್ತಾಗದೇ ಉಳಿದಿರುವ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದರು ಪುನೀತ್‌ ರಾಜಕುಮಾರ್.‌


ಪುನೀತ್‌ ಇಲ್ಲ ಎಂಬ ಮಾತನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅದರಲ್ಲೂ ಪುನೀತ್‌ ಇಲ್ಲ ಅಂತ ಯಾರೊಬ್ಬರೂ ಭಾವಿಸಿಲ್ಲ. ಅನೇಕರು ಪುನೀತ್‌ ನಮ್ಮೊಂದಿಗಿದ್ದಾರೆ ಅಂತಾನೇ ಜೈಕಾರ ಹಾಕುತ್ತಿದ್ದಾರೆ. ನಿಜವಾಗಿಯೂ ಪುನೀತ್‌ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ನಮ್ಮ ಜೊತೆಗಿದ್ದಾರೆ. ಅವರು ನಟಿಸಿದ ಸಿನಿಮಾಗಳಲ್ಲಿ ಜೀವಂತವಾಗಿದ್ದಾರೆ. ಈಗ ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಒಂದು ಕ್ಯಾಂಪೇನ್‌ ಶುರುಮಾಡಿದೆ. ಪವರ್‌ ಆಫ್‌ ಯೂತ್‌ ಎಂಬ ಟ್ಯಾಗ್‌ಲೈನ್‌ ಇರುವ ಟೀಮ್‌ವೊಂದು, 29-10-2021 ದಿನವನ್ನು ಪವರ್‌ ಸ್ಟಾರ್‌ ಡೇ ಎಂದು ಪರಿಗಣಿಸಿ, ಆಚರಿಸಬೇಕು ಎಂಬ ಮನವಿ ಮಾಡುತ್ತಿದೆ. ಅಪ್ಪು ಇಲ್ಲದ ಆ ದಿನ ಅವರ ದಿನವನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿರುವ ಆ ತಂಡ, ಎಲ್ಲರ ಸಹಕಾರ ಕೋರಿದೆ. ಎಲ್ಲರೂ ಸಹರಿಸಿ, ಪವರ್‌ ಸ್ಟಾರ್‌ ಡೇ ಆಚರಿಸಲು ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ.

ಅಷ್ಟೇ ಈ ಪವರ್‌ ಸ್ಟಾರ್‌ ಡೇ ಕೇವಲ ನಾವಿರುವಷ್ಟು ದಿನ ಮಾತ್ರವಲ್ಲ, ಈ ದಿನ ನಾವು ಸತ್ತಮೇಲೂ ಮುಂದುವರೆಯಬೇಕು. ಇದಕ್ಕೆ ನಿಮ್ಮ ಬೆಂಬಲ ಬೇಕು. ಕೈ ಜೋಡಿಸಿ ಎಂದು ಕ್ಯಾಂಪೇನ್‌ ಶುರು ಮಾಡಿದೆ.
ಪ್ರೀತಿ, ಅಭಿಮಾನ ಅಂದರೆ ಇದೇ ಅಲ್ಲವೇ? ಮೊನ್ನೆಯಷ್ಟೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ಪುನೀತ್‌ ರಾಜಕುಮಾರ್‌ ಅವರ ಸಾಧನೆಯನ್ನು ಪರಿಗಣಿಸಿ, ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಎಂದು ಮನವಿ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನೂ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಕೂಡ ರಾಜರತ್ನ ಪ್ರಶಸ್ತಿಗೆ ಪರಿಗಣಿಸಿ, ಮರಣೋತ್ತರ ರಾಜರತ್ನ ಪ್ರಶಸ್ತಿ ಕೊಡಿ ಎಂದು ಆಗ್ರಹಿಸಿದ್ದರು. ಸಿಎಂ. ಬಸವರಾಜ ಬೊಮ್ಮಾಯಿ ಅವರು ಕೂಡ ಈ ಕುರಿತು ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.


ಈಗ ಫ್ಯಾನ್ಸ್‌ ಅಪ್ಪು ಮೇಲಿರುವ ಪ್ರೀತಿಗೆ, ತಾವೇ ಪುನೀತ್‌ ಅವರನ್ನು ಕಳೆದುಕೊಂಡ ದಿನವನ್ನು “ಪವರ್‌ ಸ್ಟಾರ್‌ ಡೇ” ಎಂದು ಆಚರಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಬಹುಶಃ ಎಲ್ಲರೂ ಕೈ ಜೋಡಿಸುವುದರಲ್ಲಿ ಅನುಮಾನವೇ. ಇಲ್ಲ. ಪುನೀತ್‌ ಇಲ್ಲದ ದಿನವನ್ನು ಕರಾಳ ದಿನ ಎಂದು ಬೇಸರಿಸಿಕೊಂಡಿದ್ದ ಸ್ಯಾಂಡಲ್‌ವುಡ್‌ ಕೂಡ, ಅಕ್ಟೋಬರ್‌ ೨೯ ರಂದು ಪವರ್‌ ಸ್ಟಾರ್‌ ಡೇ ಎಂದು ಆಚರಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪುನೀತ್‌ ಅವರು ತಮ್ಮ ತಂದೆ ಹೇಗೆ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರೋ, ಹಾಗೆಯೇ, ಪುನೀತ್‌ ಕೂಡ ಅಭಿಮಾನಿಗಳನ್ನು ಅದೇ ಪ್ರೀತಿಯಿಂದ ನೋಡುತ್ತಿದ್ದರು. ಈಗ ಪವರ್‌ ಆಫ್‌ ಯೂತ್‌ ಟೀಮ್‌ ಪವರ್‌ ಸ್ಟಾರ್‌ ಡೇ ಆಚರಿಸಲು ತೀರ್ಮಾನಿಸಿರುವುದರಿಂದ ಎಲ್ಲೆಡೆಯಿಂದಲೂ ಇದಕ್ಕೆ ಭರ್ಜರಿ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿದೆ.

error: Content is protected !!