Categories
ಸಿನಿ ಸುದ್ದಿ

ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್ ಪಡೆದ ಗಾಯಕಿ ; ಭಾರತದ ಮೊದಲ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಮಾಡಿದ ಸಾಧನೆ ಇದು

ಭಾರತೀಯ ಚಿತ್ರರಂಗದ ಇತಿಹಾಸ ದೊಡ್ಡದು. ಈಗಾಗಲೇ ಹಲವು ಸಾಧಕರು ಕಲಾವಿದರ ಕುರಿತು ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದಿರುವುದುಂಟು. ಈಗ ಹೊಸ ಸುದ್ದಿ ಅಂದರೆ, ಇದೇ ಮೊದಲ ಬಾರಿಗೆ ಭಾರತದ ಮೊದಲ ಹಿನ್ನೆಲೆ ಗಾಯಕಿಯೊಬ್ಬರು ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್‌ ಪಡೆದಿದ್ದಾರೆ. ಬಹುಭಾಷಾ ಹಿನ್ನೆಲೆ ಗಾಯಕಿ ಎನಿಸಿಕೊಂಡಿರುವ ಪ್ರಿಯದರ್ಶಿನಿ ಅವರು ಈ ಸಾಧನೆ ಮಾಡಿದ್ದು, ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಪ್ರದಾನಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿ ಹಲವಾರು ಭಕ್ತಿ ಗೀತೆಗಳು, ಆಲ್ಬಂಗಳಿಗೆ ಹಾಡಿದ್ದಾರೆ. ಪ್ರಿಯದರ್ಶಿನಿ ಅವರು ಸಿಂಗಾಪುರ್ ನಲ್ಲಿ ಎಂಜಿನಿಯರಿಂಗ್ ಓದುವ ವೇಳೆ ಭಾರದ್ವಾಜ್ ಸಂಗೀತ ನಿರ್ದೇಶನದ “ಕಾದಲ್ ಡಾಟ್ ಕಾಮ್” ಎಂಬ ತಮಿಳು ಚಲನ ಚಿತ್ರದಲ್ಲಿ ಗಾಯಕ ಹರಿಹರನ್ ಜೊತೆ ಯುಗಳಗೀತೆ ಹಾಡುವ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ನಂತರ ಹಲವು ಸಂಗೀತ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. “ಚೆಲುವಿನ ಚಿತ್ತಾರ”, “ಜ್ಯೂಲಿ” , “ನನ್ನೆದೆಯ ಹಾಡು”, “ಕುಸ್ತಿ” , “ನಂದಿ”, “ಸಿಂಹಬಲುಡು”, “ಮಾಣಿಕ್ಯಮ್ 420”, “ಗಿರಿ”, “ಮುತ್ತಿನ ಮಳೆಯಲಿ”, “ಪ್ರೀತಿಯಿಂದ ರಮೇಶ್” “ನ್ಯೂಸ್” ಹಾಗು ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟಿನೆಯ “ಗರಂ ಮಸಾಲ” ಚಿತ್ರದಲ್ಲಿ ಹಾಡಿದ್ದಾರೆ. ಯಶ್ ಅಭಿನಯದ “ರಾಕಿ” ಚಿತ್ರದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಜೊತೆ ಹಾಡಿದ ಹೆಮ್ಮೆ ಇವರದು. ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ “ಅಜ್ಜು” ಇವರ ಮೊದಲ ಹಾಡಿನ ಸಿನಿಮಾ.

ಪ್ರಿಯದರ್ಶಿನಿ ಅವರು, ನಾಲ್ಕನೇ ವಯಸ್ಸಲ್ಲೇ ಗುರು ಶಾರದಾ ಸ್ವಾಮಿನಾಥನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸಿ, 9ನೆೇ ವಯಸ್ಸಿಗೆ ಮೊದಲ ಸಂಗೀತ ಕಛೇರಿ ನೀಡಿದ್ದಾರೆ. ನಂತರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್ ಶ್ರೀ ಚರಣ್ ಬಳಿ ಕಲಿತು, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಾಶ್ಚಾತ್ಯ ಸಂಗೀತವನ್ನು – ಲಂಡನ್ ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಹಿನ್ನಲೆ ಗಾಯಕಿಯಾದ ಇವರು ಭಾರತೀಯ ಚಲನಚಿತ್ರ ಸಂಗೀತ ಬಹು ಆಯಾಮವನ್ನು ಹೊಂದಿದೆ ಅಂದುಕೊಂಡವರು. ಈವರಗೆ ಅವರು ಕಂಡಂತೆ ಸಿನಿಮಾ ಬಗ್ಗೆ ಹಲವಾರು ಗ್ರಂಥಗಳು ಪುಸ್ತಕಗಳಿವೆ. ಆದರೆ, ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯೆಷ್ಟು ಮಾತ್ರ ಪುಸ್ತಕಳಲ್ಲಿ ಮಾಹಿತಿ ಇದೆ.

ಹೀಗಾಗಿ ಅವರು ಚಲನಚಿತ್ರ ರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹದಾಸೆಯಿಂದ ಈ ಸಂಶೋಧನ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ ಎನ್ನುತ್ತಾರೆ ಅವರು.

ಡಾ.ಸಿ.ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ನಡೆಸಿದ್ದು “ಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮಾ- ಸ್ಟಡಿ” ಎಂಬ ವಿಷಯದಲ್ಲಿ ಇವರು ಸಂಶೋಧನೆ ಮಾಡಿದ್ದಾರೆ. ಇವರ ಮಹಾ ಪ್ರಬಂಧವು (1917-2020) ಸರಿಸುಮಾರು 100 ವರ್ಷಗಳ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿನ ಸಂಗೀತಕ್ಕೆ ಸಂಬಂಧಪಟ್ಟಿದ್ದು , ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನಲೆ ಗಾಯನ, ಹಿನ್ನಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ.

ಇನ್ನು, ಈ ಸಂಶೋಧನೆಯ ಅಧ್ಯಯನಕ್ಕೆ ಇವರು ಅನೇಕ ಸಂಗೀತ ದಿಗ್ಗಜರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಎ.ಆರ್. ರೆಹಮಾನ್, ಎಸ್. ಜಾನಕಿ, ಇಳಯರಾಜ, ಎಂ. ಬಾಲಮುರಳಿಕೃಷ್ಣ, ವಾಣಿ ಜಯರಾಮ್, ರಾಮಕುಮಾರ್ ಗಣೇಶನ್, ಧೀನ, ರಾಜನ್ (ರಾಜನ್-ನಾಗೇಂದ್ರ), ಪಿ. ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರ, ಆರ್. ರತ್ನ, ಬಿ. ಕೆ. ಸುಮಿತ್ರ, ವಿ. ಮನೋಹರ್, ಭಾರದ್ವಾಜ್ ಸೇರಿದಂತೆ ಹಲವರ ಜೊತೆ ವಿಷಯ ಹಂಚಿಕೊಂಡಿದ್ದಾರೆ.

ಸದ್ಯ ಡಾಕ್ಟರೇಟ್‌ ಪಡೆದಿರುವ ಇವರು, ಮುಂದೆಯೂ ಹಿನ್ನಲೆ ಗಾಯನ ಮುಂದುವರಿಸುವುದರ ಜೊತೆಯಲ್ಲಿ ಈ ಮಹಾ ಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸುವ ಉದ್ದೇಶ ಹೊಂದಿದ್ದಾರೆ. ಇಂಗ್ಲಿಷ್‌ನಿಂದ ಇತರ ಭಾಷೆಗಳಿಗೆ ಅನುವಾದಿಸುವ ಬಗ್ಗೆಯೂ ಯೋಚಿಸಿದ್ದಾರೆ. ಇದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘವಾದ ಪ್ರಬಂಧವಾದ್ದರಿಂದ ಇದನ್ನು “ಗಿನ್ನೆಸ್ ವಿಶ್ವ ದಾಖಲೆಗಳು” ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಲು ಯೋಜಿಸಿದ್ದಾರೆ.

Categories
ಸಿನಿ ಸುದ್ದಿ

ಲಾಂಗ್ ಹಿಡಿದು ಎಂಟ್ರಿಕೊಟ್ಟ `ರಾಣ’ ; ಕೆ.ಮಂಜು ಮಗನ ಬಗ್ಗೆ ಹೀಗಂದ್ರು ಉಪ್ಪಿ !?

ಲಾಂಗ್ ತಯಾರಾದ್ಮೇಲೆ ನಾನ್ ಕೊಟ್ಟೆ ನೀನ್ ಕೊಟ್ಟೆ ನಾನ್ ಹಿಡ್ದೆ ನೀನ್ ಹಿಡ್ದೆ ಅಲ್ಲ. ಲಾಂಗ್‌ನ ಬಿಸಿ ಕುಲುಮೆಯಲ್ಲಿ ಹಾಕಿ ತಯಾರ್ ಮಾಡಿದ್ದನ್ನ ಯಾರು ಮರೆತಿಲ್ಲ. ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್, ಎಲ್ಲರ ಕಾಳ್ ಎಳೀತದೆ ಕಾಲ..ಇದು ಉಪ್ಪಿ-2 ಚಿತ್ರದ ಕೆಂಡದಂತಹ ಡೈಲಾಗ್. ರಿಯಲ್‌ಸ್ಟಾರ್ ಉಪ್ಪಿಯವರ ಈ ಜಬರ್ದಸ್ತ್ ಡೈಲಾಗ್‌ನ ಅವರ ಫ್ಯಾನ್ಸ್ ಮಾತ್ರವಲ್ಲ ಇಂಡಸ್ಟಿçಯ ಮಂದಿಯೂ ಮರೆಯೋ ಹಂಗಿಲ್ಲ ಬಿಡಿ

ಲಾಂಗ್' ಬಗ್ಗೆ ಮಾತನಾಡುವಾಗ ರಿಯಲ್‌ಸ್ಟಾರ್ ಉಪ್ಪಿನಾ ಹಾಗೂ ಶಿವಣ್ಣನ್ನ ಕಣ್ತುಂಬಿಕೊಳ್ಳಲೆಬೇಕು. ಯಾಕಂದ್ರೆ, ಮಾಯಬಜಾರ್‌ನಲ್ಲಿಲಾಂಗ್’ ಮೂಲಕ ಓಂಕಾರ ಬರೆದವರು ಈ ಇಬ್ಬರು ಧ್ರುವತಾರೆಗಳು. ಇವತ್ತಿಗೂ ಲಾಂಗ್ ಹಿಡ್ಕೊಂಡು ಫೀಲ್ಡ್ ಗೆ ಎಂಟ್ರಿಕೊಡುವವರು ಶಿವಣ್ಣ ಹಾಗೂ ಉಪ್ಪಿಯವರ ಸಜೆಷನ್ ತಗೋತ್ತಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜುಗೆ ಶಿವಣ್ಣ ಲಾಂಗ್ ಹಿಡಿಯೋದನ್ನ ಹೇಳಿಕೊಟ್ಟಿದ್ದರು. ಸೆಂಚುರಿಸ್ಟಾರ್ ಕೈನಿಂದ ಲಾಂಗ್ ಹಿಡಿಯೋ ವಿದ್ಯೆ ಕಲಿತ ಶ್ರೇಯಸ್ `ರಾಣ’ ಅಖಾಡಕ್ಕೆ ಧುಮ್ಕಿದ್ದರು.

ರಾಣ' ಶ್ರೇಯಸ್ ಮಂಜು ಅಭಿನಯದ ಹೈವೋಲ್ಟೇಜ್ ಸಿನಿಮಾ. ಟೈಟಲ್‌ನಿಂದಲೇ ಸಂಚಲನ ಸೃಷ್ಟಿಸಿರುವರಾಣ’ ಚಿತ್ರ ಈಗ ಫಸ್ಟ್ ಲುಕ್ ಟೀಸರ್ ಮೂಲಕ ಹವಾ ಎಬ್ಬಿಸಿದೆ. ದೊಡ್ಮನೆ ಯುವರಾಜನಿಂದ ಲಾಂಗ್ ಹಿಡಿಯೋದನ್ನ ಹೇಳಿಸಿಕೊಂಡು ರಾಣ' ಶೂಟಿಂಗ್ ಸೆಟ್‌ಗೆ ಎಂಟ್ರಿಕೊಟ್ಟಿದ್ದ ನಟ ಶ್ರೇಯಸ್, ಟೀಸರ್‌ನಲ್ಲಿ ಲಾಂಗ್ ಹಿಡಿದುಕೊಂಡೇ ದರ್ಶನ ನೀಡಿದ್ದಾರೆ. ಮೈಹುರಿಗೊಳಿಸಿಕೊಂಡು, ಕಣ್ಣಲ್ಲಿ ಬೆಂಕಿನೋಟ ಇಟ್ಟುಕೊಂಡು, ಶ್ರೇಯಸ್ರಾಣ’ನಾಗಿ ಧಗಧಗಿಸ್ತಿರುವುದನ್ನ ನೋಡಿ, ಪಡ್ಡೆಹುಲಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. `ರೊಚ್ಚಿಗೆದ್ದ ಸಿಂಹ ಇವನು. ಚಂಡಪ್ರಚಂಡ ಇವನು. ಬೆಚ್ಚಿಬೀಳಿಸೋ ಸಿಂಹ ಇವನು ದೂರ ನಿಲ್ಲಲೆ. ರ‍್ಯಾಪರ್ ಚಂದನ್ ಶೆಟ್ಟಿ ಟ್ಯೂನ್ ಹಾಕಿರೋ ಲಿರಿಕ್ಸ್ ನ ಶ್ರೇಯಸ್ ಫ್ಯಾನ್ಸ್ ಹಮ್ಮಿಂಗ್ ಮಾಡ್ತಿದ್ದಾರೆ.

ರಿಯಲ್‌ಸ್ಟಾರ್ ಉಪೇಂದ್ರ ಅವರು ರಾಣ' ಫಸ್ಟ್ ಲುಕ್ ಟೀಸರ್‌ನ ರಿಲೀಸ್ ಮಾಡಿಕೊಟ್ಟಿದ್ದಾರೆ. ಶ್ರೇಯಸ್ ಇನ್ನೋಸೆಂಟ್ ಫೇಸ್‌ನಲ್ಲಿ ವೈಲೆಂಟ್ ಲುಕ್ ತೋರಿಸಿದ್ದೀರಿ ನಿರ್ದೇಶಕರೇ ಗುಡ್‌ಜಾಬ್ ಅಂತ ಡೈರೆಕ್ಟರ್ ನಂದಕಿಶೋರ್‌ಗೆ ಕಾಂಪ್ಲಿಮೆಂಟ್ ಕೊಟ್ಟರು. ಪಡ್ಡೆಹುಲಿ ಹಾಗೂ ವಿಷ್ಣುಪ್ರಿಯ ಎರಡು ಸಿನಿಮಾಗಿಂತರಾಣ’ ಚಿತ್ರಕ್ಕೆ ತುಂಬಾ ಹಾರ್ಡ್ ವರ್ಕ್ ಮಾಡಿದ್ದೀಯಾ ಅದು ಸ್ಕ್ರೀನ್ ಮೇಲೆ ಕಾಣುತ್ತಿದೆ ಒಳ್ಳೆಯದಾಗಲಿ ಹೀರೋ ಅಂತ ಶ್ರೇಯಸ್‌ಗೆ ಉಪ್ಪಿ ವಿಶ್ ಮಾಡಿದ್ರು. ಸೂಪರ್‌ರಂಗ ಸಿನಿಮಾದಿಂದ ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎ' ಸಿನಿಮಾನ ನನ್ನೆಲ್ಲಾ ಟಾಲಿವುಡ್ ಫ್ರೆಂಡ್ಸ್ ಗೆ ತೋರಿಸಿದ್ದೆ ಹಾಗೂಸೂಪರ್’ ಚಿತ್ರಕ್ಕೆ ಇಡೀ ಕ್ಲಾಸ್‌ಮೆಟ್ಸ್ ಎಲ್ಲಾ ಹೋಗಿದ್ವಿ ಎಂದು ನೆನಪು ಮಾಡಿಕೊಂಡರು.

ನಿರ್ಮಾಪಕ ಗುಜ್ಜಾಲ್ ಜೊತೆ ಸೇರಿ ಮಗನ ರಾಣ' ಚಿತ್ರಕ್ಕೆ ಕೆ. ಮಂಜು ಕೂಡ ಬಂಡವಾಳ ಹೂಡಿದ್ದಾರೆ. ಫಸ್ಟ್ ಲುಕ್ ಟೀಸರ್ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕರಾದ ಕೆ.ಮಂಜು, ರಿಯಲ್‌ಸ್ಟಾರ್ ಗೆ ಕೃತಜ್ಞತೆ ಸಲ್ಲಿಸಿದರು.ರಾಣ’ ಚಿತ್ರದ ಮುಹೂರ್ತಕ್ಕೆ ಕರೆದ್ವಿ ಬಂದರು. ಈಗ ಟೀಸರ್ ರಿಲೀಸ್‌ಗೆ ಬಂದು ಶುಭಹಾರೈಸಿದ್ದಾರೆ. ಸಿನಿಮಾಗೋಸ್ಕರ ಕಷ್ಟಪಟ್ಟಿದ್ದೇನೆ ಅಂತ ಶ್ರೇಯಸ್ ಹೇಳ್ತಿದ್ದಾನೆ ಆದರೆ ಉಪ್ಪಿ ಸಿಕ್ಕಾಪಟ್ಟೆ ಕಷ್ಟಪಟ್ಟಿರುವುದನ್ನ ನಾನು ನೋಡಿದ್ದೇನೆ. ಆಗೆಲ್ಲಾ ಜಿಮ್ ಇಲ್ಲ ಏನು ಇಲ್ಲ ಅಂತಹ ಹೊತ್ತಲ್ಲೇ ಫಿಟ್ ಆಗಿರುವುದಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದಾರೆ ಎಂದರು.

ರಾಣ' ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಪವರ್‌ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್ ಗಳನ್ನೊಳಗೊಂಡಿರುವರಾಣ’ ಚಿತ್ರಕ್ಕೆ ಪೊಗರು ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ್ದಾರೆ. ಪಡ್ಡೆಹುಲಿ ಹೀರೋ ಪೊಗದಸ್ತಾದ ಬಾಡಿಬಿಲ್ಡ್ ಮಾಡಿದ್ದಾರೆ. ನಾಯಕ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ- ರಜಿನಿ ಭಾರದ್ವಾಜ್ ಜೊತೆಯಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಗರು ಚಿತ್ರದ ಟೆಕ್ನಿಷಿಯನ್ಸ್ ರಾಣ ಚಿತ್ರಕ್ಕೆ ಬೆವರು ಸುರಿಸುತ್ತಿದ್ದು ಮೂವೀ ಅದ್ದೂರಿಯಾಗಿ ಮೂಡಿಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರಾತಕ-2 ಲೆಕ್ಕ ಚುಪ್ತ ಮಾಡಿದ್ರಂತೆ ಯಶ್ ! ಬಡ್ಡಿ ಸಮೇತ 13 ಕೋಟಿ ಸೆಟ್ಲ್ ಮೆಂಟ್ ಮಾಡಿದ್ದು ನಿಜವೇನು ?

ಸಾಮಾಜಿಕ ಜಾಲತಾಣದಲ್ಲಿ ಕಿರಾತಕ 2 ಸೆಟಲ್ ಮೆಂಟ್ ವಿಚಾರವಾಗಿ ಚರ್ಚೆಗಳಾಗ್ತಿದೆ. ಕೆಲವರು ಈ‌ ಸುದ್ದಿ ನಿಜ ಅಂತ ಒಪ್ಕೊಂಡ್ರೆ, ಇನ್ನೂ ಕೆಲವರು ಫೇಕ್ ನ್ಯೂಸ್ ಬಿಟ್ಟಾಕ್ರಿ ಅಂತಿದ್ದಾರೆ. ನಿಜಕ್ಕೂ ರಾಕಿಭಾಯ್ ಸೆಟಲ್ ಮೆಂಟ್ ಮಾಡಿದ್ರಾ ? ಮೈ ನೇಮ್ ಈಸ್ ಕಿರಾತಕ ಚಿತ್ರದ ಅನ್ನದಾತನಿಗೆ ಬಡ್ಡಿ ಸಮೇತ 13 ಕೋಟಿ ಕೊಟ್ಟರಾ? ಆ ಬಡಾ ಖಬರ್ ಸ್ಟೋರಿ ಇಲ್ಲಿದೆ

ಕೆಜಿಎಫ್.. ಕೆಜಿಎಫ್..ಕೆಜಿಎಫ್ ಈ ಮೂರಕ್ಷರದ ಮಹಾ ಸಿನಿಮಾದ ಅಬ್ಬರ ಆರ್ಭಟದ ನಡುವೆ ಕಿರಾತಕ 2 ಚಿತ್ರದ ಸುದ್ದಿಯೊಂದು ಸಲಾಂ ರಾಕಿಭಾಯ್ ಎನ್ನುತ್ತಿದೆ. ಸೆಲ್ಫ್ ಮೇಡ್ ಷೆಹಜಾದನನ್ನ ತಲೆ ಮೇಲೆ ಹೊತ್ತು ಕುಣಿಯುತ್ತಿದೆ. ಅನ್ನದಾತನಿಗೆ ಬಡ್ಡಿ ಸಮೇತ ಕೊಟ್ಟರೆನ್ನುವ ಬಡಾಬ್ರೇಕಿಂಗ್ ನ್ಯೂಸು ಸೆನ್ಸೇಷನ್ ಸೃಷ್ಟಿಸಿದೆ. ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ.

ಕೆಜಿಎಫ್‌ ಚಿತ್ರ ತೆರೆಕಂಡಾಗಿನಿಂದಲೂ ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ಳುತ್ತಲೇ ಇದ್ದಾರೆ. ಅಪ್‌ಕೋರ್ಸ್ ಮಾಡಿಕೊಳ್ಳಲೆಬೇಕು. ಇದೀಗ ಮತ್ತೊಮ್ಮೆ ರಾಕಿಂಗ್ ಭಕ್ತರು ಕಣ್ಣುಬ್ಬು ಎಗರಿಸುತ್ತಾ ಸೀಟಿ ಹೊಡೆಯೋದಕ್ಕೆ ಕಾರಣ
‘ಮೈ ನೇಮ್ ಈಸ್ ಕಿರಾತಕ’ ಚಿತ್ರದ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ 13 ಕೋಟಿ‌ ಸೆಟಲ್ ಮೆಂಟ್ ಮಾಡಿರುವುದು.

‘ಮೈ ನೇಮ್ ಈಸ್ ಕಿರಾತಕ’ ಅಣ್ತಮ್ಮ ಯಶ್ ಅಭಿನಯಿಸಬೇಕಿದ್ದ ಚಿತ್ರ. ಕೆಜಿಎಫ್ ಪಾರ್ಟ್ 1 ರಿಲೀಸ್ ಟೈಮ್ ನಲ್ಲಿ ‘ ಮೈ ನೇಮ್ ಈಸ್’ ಕಿರಾತಕ ಚಿತ್ರ ಸೆಟ್ಟೇರಿತ್ತು. ಗಡ್ಡ- ಮೀಸೆಗೆ ಕತ್ತರಿ ಹಾಕಿಸಿಕೊಂಡು ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಸಿಕೊಂಡು ಪಂಕಾಗಿ ಯಶ್ ಕ್ಯಾಮೆರಾ ಮುಂದೆ ಬಂದಿದ್ದರು. ವೈಟ್ ವೈಟ್ ಪಂಚೆ ತೊಟ್ಟು ಬ್ಲೂ ಕಲರ್ ಶರ್ಟ್ ನಲ್ಲಿ ಅಣ್ತಮ್ಮನ ‘ ಮೈ ನೇಮ್ ಈಸ್’ ಕಿರಾತಕ ಫೋಟೋಶೂಟ್ ಕೂಡ ನಡೆದಿತ್ತು. ಈ ಮಧ್ಯೆ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ರಾಜ್ಯದ ಗಡಿ ದಾಟುವುದಲ್ಲದೇ ರಾಷ್ಟ್ರವನ್ನ ದಾಟಿತು. ರಾಕಿಂಗ್ ಸ್ಟಾರ್ ಗೆ ನ್ಯಾಷನಲ್ ಸ್ಟಾರ್ ಕಿರೀಟಮುಡಿಗೇರಿತು. ನೋಡ ನೋಡುತ್ತಲೇ ಯಶ್ ಇಮೇಜ್ ಏಕ್ದಮ್ ನರಾಚಿ ಲೋಕ ದಾಟಿ ಚಿನ್ನದ ಸಾಮ್ರಾಜ್ಯ ಅಲಂಕರಿಸಿತ್ತು.ಕೆಜಿಎಫ್ ಚಾಪ್ಟರ್ 2 ಗಾಗಿ ಬೇಡಿಕೆ ಹೆಚ್ಚಾಯ್ತು.

ಮೈ ನೇಮ್ ಈಸ್ ಕಿರಾತಕ ಆರಂಭಿಸುವ ಹೊತ್ತಲ್ಲಿ ಕೆಜಿಎಫ್‌ ಸಿನಿಮಾನ‌ ಎರಡು ಚಾಪ್ಟರ್ ನಲ್ಲಿ ತೆರೆಗೆ ತರಬೇಕು ಎನ್ನುವ ಪ್ಲ್ಯಾನ್ ಆಗಿತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಕೆಜಿಎಫ್ ಬಿಡುಗಡೆಗೆ ಮೊದಲೇ ‘ ಮೈ ನೇಮ್ ಈಸ್’ ಕಿರಾತಕ ಚಿತ್ರಕ್ಕೆ ಚಾಲನೆ‌ ಕೊಡಲಾಗಿತ್ತು. ಫೋಟೋಶೂಟ್ ನಂತರ ಕೆಜಿಎಫ್ ಪ್ರಮೋಷನ್ ನಲ್ಲಿ ಯಶ್ ಬ್ಯುಸಿಯಾದ ಕಾರಣಕ್ಕೆ ಕಿರಾತಕ 2 ಗೆ ಬ್ರೇಕ್ ಹಾಕಿದರು. ಕೆಜಿಎಫ್ ಬಿಡುಗಡೆಗೊಂಡು ಸುನಾಮಿ ಎಬ್ಬಿಸಿದಾಗ ಸ್ವತಃ ಯಶ್ ಕಿರಾತಕ 2 ಚಿತ್ರ ಮಾಡುವುದಾಗಿ ಹೇಳಿಕೊಂಡರಾದರೂ ಕೆಜಿಎಫ್ ಚಾಪ್ಟರ್ 2 ಸುನಾಮಿಯ ನಡುವೆ ಮೈ ನೇಮ್ ಈಸ್ ಕಿರಾತಕ ಸಿನಿಮಾ ಸೈಲೆಂಟ್ ಆಯ್ತು. ಇದೀಗ ಸೆಟ್ಲ್ ಮೆಂಟ್ ಸುದ್ದಿ ಕಿರಾತಕ 2 ಚಿತ್ರಕ್ಕೆ ಫುಲ್ ಸ್ಟಾಪ್ ಹಾಕ್ತಿದೆ.

ಹೌದು, ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೆ ಯಶ್ ಬಣ್ಣ ಹಚ್ಚೋದು ಇನ್ನೂ ಕನಸಿನ ಮಾತಾ? ಗೊತ್ತಿಲ್ಲ ಕಣ್ರೀ. ಆದರೆ, ಶೂಟಿಂಗ್ ಗೆ 3 ಕೋಟಿ ಖರ್ಚಾಗಿತ್ತಂತೆ. ನಿರ್ಮಾಪಕರಾದ ಜಯ್ಯಣ್ಣ ಯಶ್ ಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರಂತೆ. ಚಿತ್ರೀಕರಣಕ್ಕೆ ಖರ್ಚಾದ ಮೂರು ಕೋಟಿ ಹಾಗೂ ಅಡ್ವಾನ್ಸ್ ಆಗಿ ತೆಗೆದುಕೊಂಡ ಹಣ ಎಲ್ಲದಕ್ಕೂ ಶೇಕಡ 3 ರಷ್ಟು ಬಡ್ಡಿ ಸೇರಿಸಿ ಒಟ್ಟು 13 ಕೋಟಿ ಹಣವನ್ನ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ ವಾಪಾಸ್ ನೀಡಿದ್ದಾರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿದೆ.

ಹೀಗೆ ಹರಿದಾಡ್ತಿರುವ ಸುದ್ದಿ ನಿಜಾನೋ? ಸುಳ್ಳೋ ? ಗೊತ್ತಿಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಲ್ಲವೇ.‌ಎನಿವೇ, ಇಂತಹದ್ದೊಂದು ಬೆಳವಣಿಗೆ ಆಗಿದ್ದರೆ ನಿಜಕ್ಕೂ ಒಳ್ಳೆಯದೇ. ಅನ್ನದಾತರ ಕಣ್ಣೀರು ಒರೆಸಿದಂತಾಗುತ್ತೆ, ಕೈಹಿಡಿದಂತಾಗುತ್ತೆ. ಕಲಾವಿದರು ಯಾರೇ ಇರಲಿ ಸಿನಿಮಾ ಮಾಡೋದಕ್ಕೆ ಇಷ್ಟ ಇಲ್ಲ ಅಂದರೆ, ಡೇಟ್ ಕ್ಲ್ಯಾಷ್ ಆಗ್ತಿದೆ ಅಂದರೆ, ಚಿತ್ರತಂಡದಿಂದ ಹೊರಬರುವ ನಿರ್ಧಾರ ತೆಗೆದುಕೊಂಡರೆ, ಅಟ್ ಲೀಸ್ಟ್ ಅಡ್ವಾನ್ಸ್ ಹಣವನ್ನಾದರೂ ವಾಪಾಸ್ ಮಾಡುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳುವುದಕ್ಕೆ ರಾಕಿಭಾಯ್ ಪ್ರೇರಣೆಯಾಗ್ತಾರೆ. ಮೈ ನೇಮ್ ಈಸ್ ಕಿರಾತಕ ಕೈಬಿಟ್ಟಿದ್ದು ನಿಜವೇ ಆದರೆ
ಅದಕ್ಕೆ ಕಾರಣ ನ್ಯಾಷನಲ್ ಸ್ಟಾರ್ ಕಿರೀಟವಾ? ಅಥವಾ ಇಂಟರ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುವ ಹೊತ್ತಲ್ಲಿ ಹಳ್ಳಿ ಸೊಗಡಿನ ಚಿತ್ರ ಮಾಡಬಾರದು ಎನ್ನುವ ನಿರ್ಧಾರವಾ ?ಸ್ವತಃ ಅಣ್ತಮ್ಮನೇ ಸತ್ಯವನ್ನ ಕ್ಯಾಮರಾ ಮುಂದೆ ಹೇಳೋವರೆಗೂ ಕಾಯಬೇಕು ಕಾಯೋಣ ಅಲ್ಲವೇ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅನಿರುದ್ಧ್ ವಾಯ್ಸ್!‌‌ ಆಪರೇಶನ್ D ಸಾಂಗ್ಸ್; ಫಸ್ಟ್‌ ಟೈಮ್‌ ಎಲ್ಲಾ ಸಾಂಗ್‌ ಹಾಡಿದ್ರು ಶಾಸ್ತ್ರಿ

ಅದ್ವಿತ ಫಿಲಂ ಫ್ಯಾಕ್ಟರಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಆಪರೇಶನ್ D” ಚಿತ್ರದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕನ್ನು ಅನಿರುದ್ಧ್ ಶಾಸ್ತ್ರಿ ಅವರೇ ಹಾಡಿರುವುದು ವಿಶೇಷ. ಚಿತ್ರದ ಎಲ್ಲಾ ಹಾಡುಗಳನ್ನು ತಾವೇ ಹಾಡಿರುವುದು ಇದೇ ಮೊದಲು ಎಂಬುದು ಅನಿರುದ್ಧ್ ಶಾಸ್ತ್ರಿ ಮಾತು. ವೇದಿಕ ಹಾಗೂ ಪೃಥ್ವಿ ಭಟ್ (ಸರಿಗಮಪ ಖ್ಯಾತಿ) ಸಹ ಅನಿರದ್ಧ್ ಅವರೊಂದಿಗೆ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ. ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ ರವಿಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.


ವೇದಿಕ ಹಾಗೂ ದ್ವೇಪಾಯನ‌ ಸಿಂಗ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣವಿದೆ. ವಿಕ್ರಮ್ ಶ್ರೀಧರ್ ಸಂಕಲನವಿದೆ. ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕ್ರಿಯೇಟಿವ್ ಹೆಡ್ ಸುರೇಶ್ ಜಯ ಹರಿಪ್ರಸಾದ್ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನವಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ (ಕಮಲಿ ಧಾರಾವಾಹಿ), ರುದ್ರೇಶ್ ಬುದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಪ ಇದ್ದಾರೆ. ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಶಿವಾನಂದ, ಮಹೇಶ್ ಎಸ್ ಕಲಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವ್ಹೀಲ್ ಚೇರ್‌ ರೋಮಿಯೊ ಚಿತ್ರದ ಲಿರಿಕಲ್‌ ಸಾಂಗ್‌ ರಿಲೀಸ್‌ ರಂಗುರಾಟೆ ಹಾಡಿಗೆ ಭರಪೂರ ಮೆಚ್ಚುಗೆ

ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೊಂದು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದರೆ, ಅದು “ವ್ಹೀಲ್‌ ಚೇರ್‌ ರೋಮಿಯೊ”. ಹೌದು, ಈ ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ರಂಗುರಾಟೆ” ಎಂಬ ಹಾಡು ಇದೀಗ ರಿಲೀಸ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.


ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಈ ಹಾಡಿಗೆ .ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಝೇಂಕಾರ್‌ ಮ್ಯೂಸಿಕ್ ಮೂಲಕ ಹಾಡು ರಿಲೀಸ್‌ ಆಗಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತವಿದೆ. ಸದ್ಯದಲ್ಲೇ “ವ್ಹೀಲ್ ಚೇರ್ ರೋಮಿಯೋ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕಲ ಚೇತನವೊಬ್ಬನ ಲವ್‌ಸ್ಟೋರಿ ಚಿತ್ರದ ಹೈಲೈಟ್.‌ ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ತಂದೆ-ಮಗನ‌ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಮತ್ತೊಂದು ಹೈಲೈಟ್.‌ .ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

1980 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್;‌ ಇದು ಪ್ರಿಯಾಂಕ ಉಪೇಂದ್ರ ನಟನೆಯ ಚಿತ್ರ

ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಸುದೀಪ್‌, “ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ.‌ ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ. ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು. ಇನ್ನು, ನಟ ಉಪೇಂದ್ರ ಕೂಡ ಈ ವೇಳೆ ಮಾತಿಗಿಳಿದರು. “ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ ಅಂದರು.

ಅಂದು ನಟಿ ಪ್ರಿಯಾಂಕ ಉಪೇಂದ್ರ ಹೈಲೈಟ್‌ ಆಗಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ ಪ್ರಿಯಾಂಕ, “ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ ೧೫ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಅನ್ನೋದು ಪ್ರಿಯಾಂಕ ಮಾತು.


“ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎಂಬುದು ನಿರ್ದೇಶಕ ರಾಜ್ ಕಿರಣ್ ಮಾತು. ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಇದ್ದರು. ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಬಹುತೇಕ ಈ ಚಿತ್ರದ ಚಿತ್ರೀಕರಣ ಶನಿವಾರಸಂತೆ ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ರಾಜ್ ಕಿರಣ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇತರರು ನಟಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತವಿದೆ. ಜೀವನ್ ಆಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.

Categories
ಸಿನಿ ಸುದ್ದಿ

ಪ್ರೇಕ್ಷಕರ ಮುಂದೆ ಬರಲು ದನಗಳು ರೆಡಿ! ಬಿ.ಎಲ್.ವೇಣು ಅವರ ಮತ್ತೊಂದು ಕಾದಂಬರಿ ಸಿನಿಮಾ ಆಯ್ತು- ಫಸ್ಟ್‌ ಟೈಮ್‌ ಮಧು ಮಂದಗೆರೆ ಹೀರೋ!!

ಮಧು ಮಂದಗೆರೆ ಈವರೆಗೆ ನಟಿಸಿರುವ 75 ಚಿತ್ರಗಳ ಪೈಕಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ. ಹೌದು, ಇದು ಕಥೆಗಾರ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್‌ ನಿರ್ದೇಶಕರು. ಇದರೊಂದಿಗೆ ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮಧು ಮಂದಗೆರೆ ಅವರೂ ಹೀರೋ ಆಗಿ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಹಾಗೆ ನೋಡಿದರೆ, ಮಧು ಅವರಿಗೆ ಸಿನಿಮಾರಂಗ ಹೊಸದೇನೂ ಅಲ್ಲ, ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗವನ್ನು ಅರಿತಿರುವ ಮಧು ಮಂದಗೆರೆ, ಸಾಕಷ್ಟು ಹೀರೋಗಳ ಜೊತೆ ನಟಿಸಿದ್ದಾರೆ. ಈಗಿನ ಸ್ಟಾರ್‌ ನಟರ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆ ಹೇಳುವುದಾದರೆ, ಮಧು ಮಂದಗೆರೆ ಅವರು ಇದುವರೆಗೆ ಸುಮಾರು ‌೭೫ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

ಹೌದು, ಮಧು ಮಂದಗೆರೆ ಈವರೆಗೆ ನಟಿಸಿರುವ ೭೫ ಚಿತ್ರಗಳ ಪೈಕಿ ಸುಮಾರು ೫0 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್‌ ಮುಗಿಸಿರುವ ಚಿತ್ರ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಶೇ.೫೦ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ರಿಲೀಸ್‌ಗೆ ತಡವಾಗುತ್ತಿದೆ. ಸರ್ಕಾರ ಶೇ.೧೦೦ ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಚಿತ್ರ ಬಿಡುಗಡೆ ಮಾಡಲು ತಂಡ ತಯಾರಿ ಮಾಡಿಕೊಳ್ಳಲಿದೆ.

ಇನ್ನ, “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆಯೇ ಇದರ ಹೈಲೈಟು. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್‌ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್‌.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.

ಈಗಾಗಲೇ “ದನಗಳು’ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇದೆ. ವಾಸ್ತವ ಸಂಗತಿಗಳನ್ನೂ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಹೀರೋ, ಮಧು ಮಂದಗೆರೆ ಅವರಿಗೆ ಈ ಸಿನಿಮಾ ಒಳ್ಳೆಯ ಅನುಭವ ನೀಡಿದೆಯಂತೆ. ಒಂದೊಳ್ಳೆಯ ಕಥಾಹಂದರ ಇರುವಂತಹ ಚಿತ್ರದಲ್ಲಿ ನಟಿಸಿದ್ದು, ಖುಷಿ ಕೊಟ್ಟಿದೆ ಎನ್ನುವ ಅವರು, “ದನಗಳು” ಚಿತ್ರ ಹೊರಬಂದರೆ, ನಿಜಕ್ಕೂ ಮೆಚ್ಚುಗೆ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ.


ಚಿತ್ರದಲ್ಲಿ ಮಧು ಮಂದಗೆರೆ ಅವರ ಜೊತೆ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ಕೃಷ್ಣ, ಅಶೋಕ್‌ ಜಂಬೆ, ಸಂಪತ್‌, ಪ್ರಿಯಾ, ಚಂದ್ರು, ಹರಿಚರಣ ತಿಲಕ್‌, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್‌ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್‌ ರಿಶಿಕ್‌ ಸಂಗೀತವಿದೆ. ಮಧು ಮಂದಗೆರೆ ಅವರು ನಟಿಸಿರುವ “ಭಜರಂಗಿ ೨”, “ಅರ್ಜುನ್‌ ಗೌಡ”, “ಜಾಸ್ತಿ ಪ್ರೀತಿ”,” ಕಬ್ಜ”,” ಪ್ರಾರಂಭ”,” ಅಲ್ಲೇ ಡ್ರಾ ಅಲ್ಲೇ ಬಹುಮಾನ”, “ಫೈಟರ್‌” ಸೇರಿದಂತೆ ಒಂದಷ್ಟು ಚಿತ್ರಗಳಿವೆ.

Categories
ಸಿನಿ ಸುದ್ದಿ

ಶುಭಪುಂಜಾ ಹೊಸ ಅವತಾರ ! ಲಂಬಾಣಿ ಗೆಟಪ್ಪು- ಕೈಲಿ ಚೂರಿ- ತಲೆಬುರುಡೆ!! ಏನಿದರ ಗುಟ್ಟು?


ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ

ಸ್ಯಾಂಡಲ್ ವುಡ್ ನ ಸೆಕ್ಸಿ ಸುಂದರಿ, ಪಡ್ಡೆಹೈಕ್ಳ ಮೋಹಕ ಮದನಾರಿ ಶುಭಪುಂಜಾ, ತಮ್ಮ ಮಾದಕ ನೋಟ ಹಾಗೂ ಮೈಮಾಟದಿಂದಲೇ ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ಬೋಲ್ಡ್ ಅಂಡ್ ಬೊಂಬಾಟ್ ಅಭಿನಯದ ಮೂಲಕ ಸಿನಿಪ್ರಿಯರ ಮನಸೂರೆಗೊಳ್ತಾರೆ. ಬೆಲ್ಲಿಡ್ಯಾನ್ಸ್ ಮಾಡುತ್ತಾ ಬೆಳ್ಳಿತೆರೆಯನ್ನ ಬೆಳಗುತ್ತಾರೆ. ಇಂತಿಪ್ಪ‌ ನಟಿ
ಶುಭಾ ಪುಂಜಾ ಈಗ ತಮ್ಮ ನಯಾ ಲುಕ್ ನಿಂದ ಚಿತ್ರಪ್ರೇಮಿಗಳನ್ನ ದಂಗುಬಡಿಸಿದ್ದಾರೆ. ಯಸ್, ನಟಿ ಶುಭಾ ಪುಂಜಾ ನಯಾ ಅವತಾರದಲ್ಲಿ ಮಿಂಚಿ ನೋಡುಗರನ್ನ ಬೆರಗುಗೊಳಿಸಿದ್ದಾರೆ. ಲಂಬಾಣಿ ಉಡುಗೆ ತೊಟ್ಟುಒಂದು ಕೈಯಲ್ಲಿ ಚೂಪಾದ ಚೂರಿ, ಇನ್ನೊಂದು ಕೈಯಲ್ಲಿ ತಲೆಬುರುಡೆ ಹಿಡ್ಕೊಂಡು ಕ್ಯಾಮರಾ ಕಣ್ಣಿಗೆ ಕೆಂಡದಂತಹ ಪೋಸ್ ಕೊಟ್ಟಿದ್ದಾರೆ. ಬದಲಾದ ಲುಕ್ ಗೆಟಪ್ ನಲ್ಲಿ ಮೊಗ್ಗಿನ ಮನಸ್ಸಿನ ಹುಡುಗಿಯನ್ನ ನೋಡಿದವರು ವಾರೆವ್ಹಾ ಶುಭಕ್ಕ ಅಂತ ಚಪ್ಪಾಳೆ ತಟ್ಟುತ್ತಿದ್ದಾರೆ.

ಅಂದ್ಹಾಗೇ, ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ.ಕುತೂಹಲಭರಿತ ಫಸ್ಟ್ ಲುಕ್ ಪೋಸ್ಟರ್ ಸಿನಿಮಾ ಪ್ರೇಮಿಗಳ ದಿಲ್ ಕದಿಯುತ್ತಿದೆ.‌

ನಟಿ ಶುಭಾ ಪೂಂಜಾ ಅವರ ಸಿನಿ ಕೆರಿಯರ್‌ ನಲ್ಲಿಯೇ ಇದೊಂದು ಸ್ಪೆಷಲ್‌ ಲುಕ್.‌ ಲಂಬಾಣಿ ಪಾತ್ರ ಈ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು. ಅವರಿಲ್ಲಿ ಹಾಕಿರುವ ಈ ಕಾಸ್ಟ್ಯೂಮ್‌ನ ತೂಕ ಬರೋಬ್ಬರಿ ೨೦ ಕೆಜಿ ಇದೆ. ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡದಲ್ಲಿ ಇದನ್ನು ನಾಲ್ಕು ತಿಂಗಳು ಸಮಯ ತೆಗೆದುಕೊಂಡು ತಯಾರು ಮಾಡಿಸಿದ್ದಾರಂತೆ ಶ್ರೀನಿ ಹನುಮಂತ ರಾಜು. ಅವರ ಪ್ರಕಾರ ಇದೊಂದು ವಿಶೇಷ ಕಥಾಹಂದರದ ಚಿತ್ರ. ʼ ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ, ಹಾಗೂ ಅವರು ಅನುಭವಿಸುವ ತೊಂದರೆಗಳೇನು ಎನ್ನುವುದರ ಜತೆಗೆ ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಒಟ್ಟು ಒಟ್ಟು ಚಿತ್ರಣ ಈ ಚಿತ್ರದಲ್ಲಿದೆ ಯಂತೆ.

‘ಅಂಬುಜ’ ನಾಯಕಿ ಪ್ರಧಾನ ಚಿತ್ರ. ಶ್ರೀನಿ ಹನುಮಂತರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ಶ್ರೀನಿಯವರು ‘ ಅಂಬುಜ’ ಸಿನಿಮಾದ ಮೂಲಕ ನಯಾ ಸವಾಲಿಗೆ ಸಿದ್ದರಾಗಿದ್ದಾರೆ.ನಟಿ ಶುಭಪುಂಜಾ ಕೇಂದ್ರಬಿಂದು. ಹಿರಿಯ ನಟಿ ಪದ್ಮಜಾ ರಾವ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರ್ದೇಶಕ ಶರಣಯ್ಯ, ಕಲಾವಿದ ಗೋವಿಂದೇ ಗೌಡ, ಸಂದೇಶ್‌ ಶೆಟ್ಟಿ, ಮಜಾ ಭಾರತದ ಪ್ರಿಯಾಂಕ ಕಾಮತ್‌, ಬೇಬಿ ಆಕಾಂಕ್ಷ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಸದ್ಯಕ್ಕೀತ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಅಕ್ಟೋಬರ್‌ ತಿಂಗಳಲ್ಲಿ ಒಂದೇ ಶೆಡ್ಯೂಲ್‌ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಬೆಂಗಳೂರು, ಗದಗ ಹಾಗೂ ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣಕ್ಕೆ ಲೋಕೆಷನ್‌ ಫಿಕ್ಸ್‌ ಆಗಿದೆ. ಇನ್ನು ಚಿತ್ರಕ್ಕೆ ಕಾಶೀನಾಥ್‌ ಮಡಿವಾಳರ್‌ ಬಂಡವಾಳ ಹೂಡಿದ್ದಾರೆ. ವಿಶೇಷ ಅಂದ್ರೆ ಅವರೇ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೇಶಕ ಶ್ರೀನಿ. ಹಾಗೆಯೇ ಚಿತ್ರದ ತಾಂತ್ರಿಕ ವರ್ಗದಲ್ಲಿ ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಕುಮಾರ್‌ ಸಂಗೀತ, ಎಂಸ್‌ ತ್ಯಾಗರಾಜ್‌ ಹಿನ್ನೆಲೆ ಸಂಗೀತದ ಮಾಡುತ್ತಿದ್ಧಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ರೆಡ್‌ ಶೇಡ್‌ ಟೊಮೆಟೊ ! ದಿ ಕಲರ್‌ ಆಫ್‌ ಟೊಮೆಟೊ ಟೀಸರ್‌ಗೆ ಜನ ಮೆಚ್ಚುಗೆ

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಠೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಠೆಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮೆಟೊ ಕಥೆ ಎನಿಸುತ್ತೆ. ಟೊಮ್ಯಾಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ. ಇದು ವಾಸ್ತವತೆಗೆ ಹತ್ತಿರದ ಕಥೆ ಅನ್ನುವುದನ್ನು ಹೇಳುತ್ತದೆ

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಸಿನಿಮಾಗಳು ಶುರುವಾಗುತ್ತಲೇ ಇವೆ. ಅದರಲ್ಲೂ ಹೊಸ ಪ್ರತಿಭಾವಂತರು ಅಂದರೆ ಸುಮ್ಮನೆ ಅಲ್ಲ ಬಿಡಿ. ಮೊದಲ ಪ್ರಯತ್ನದಲ್ಲೇ ಸುದ್ದಿಯಾಗಿಬಿಡುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಹೊಸ ಸಿನಿಮಾದ ಫಸ್ಟ್‌ ಲುಕ್‌ ಕುರಿತು. ಅಷ್ಟೇ ಅಲ್ಲ, ಈಗಾಗಲೇ ಆ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ. ಪ್ರತಾಪ್‌ ನಾರಾಯಣ್‌ ಅಭಿನಯದ ಈ ಚಿತ್ರದ ಫಸ್ಟ್‌ ಲುಕ್‌ ವಿಶೇಷವೆನಿಸಿದೆ. ಹೌದು, ಅ ಚಿತ್ರದ ಹೆಸರು. “ದಿ ಕಲರ್‌ ಆಫ್‌ ಟೊಮೆಟೊ” ಚಿತ್ರದ ಶೀರ್ಷಿಕೆಯೇ ವಿಭಿನ್ನ ಅಂದುಕೊಂಡರೆ, ಕಥೆ ಅದಕ್ಕಿಂತಲೂ ವಿಭಿನ್ನವಾಗಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ.

ಯಾಕೆಂದರೆ, ಈ ಚಿತ್ರದ ಕಥೆ ಬರೆದಿರೋದು. ಕೋಟಿಗಾನಹಳ್ಳಿ ರಾಮಯ್ಯ. ಈ ಹೆಸರೇ ಸಾಕು ಅದ್ಭುತ ಕಥೆಗಾರ ಅನ್ನುವುದಕ್ಕೆ. ಈಗಾಗಲೇ “ಮೂಕ ಹಕ್ಕಿ” ಸಿನಿಮಾನೇ ಸಾಕು ಅವರ ಬರಹ ಎಂಥದ್ದು ಅಂತ ತಿಳಿಯೋಕೆ. ಅದಾಗಲೇ ಸಾಬೀತು ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ, ಈಗ ಮತ್ತೊಂದು ಸಿನಿಮಾ ಮೂಲಕ ಹೊಸ ವಿಷಯ ಹೇಳೋಕೆ ಬಂದಿದ್ದಾರೆ. ಅವರ ಬರಹದಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ ಎನ್ನುವುದನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಕನ್ನೇರಿ ಸಿನಿಮಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರದೇ ಬರವಣಿಗೆ ಇದೆ. ಈಗ “ದಿ ಕಲರ್‌ ಆಫ್‌ ಟೊಮೆಟೊ” ಸಿನಿಮಾಗೂ ಕಥೆ ಬರೆದಿದ್ದಾರೆ.
ಈ ಸಿನಿಮಾಗೆ ಸ್ವಾತಿ ಕುಮಾರ್ ನಿರ್ಮಾಪಕರು. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಅದರೊಂದಿಗೆ ಟೀಸರ್‌ ಕೂಡ ರಿಲೀಸ್‌ ಮಾಡಲಾಗಿದೆ.

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಟೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಟೇಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು.

ದಿ ಕಲರ್‌ ಆಫ್‌ ಟೊಮೆಟೊ ಟೀಸರ್

ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮ್ಯಾಟೊ ಕಥಾಹಂದರ ಹೊಂದಿರುವ ಸಿನಿಮಾ. ಟೊಮೆಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ.

ಅದರಲ್ಲೂ, ಇದು ವಾಸ್ತವತೆಗೆ ಹತ್ತಿರವಾಗಿರುವ ಕಥೆ ಅನ್ನುವುದನ್ನು ಈ ಟೀಸರ್‌ ಹೇಳುತ್ತದೆ. ರೈತ ಇಂದು ಟೊಮೆಟೊ ಬೆಳೆಗೆ ಬೆಂಬಲ ಸಿಗದೆ ಪರದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ರೊಚ್ಚಿಗೆದ್ದರೆ ರಕ್ತಪಾತವೂ ಗ್ಯಾರಂಟಿ ಅನ್ನೋದು ಯಾವಾಗಲೋ ಸಾಬೀತಾಗಿದೆ. ಅದೇನೆ ಇರಲಿ, ಇಲ್ಲಿ ನಿರ್ದೇಶಕ ತಾಯಿ ಲೋಕೇಶ್‌ ಏನು ಹೇಳೋಕೆ ಹೊರಟಿದ್ದಾರೋ ಗೊತ್ತಿಲ್ಲ. ಟೀಸರ್‌ ನೋಡಿದ ಮೇಲೆ, ಅದೊಂದು ಪಕ್ಕಾ ಮಾಸ್‌ ಎಲಿಮೆಂಟ್ಸ್‌ ಇರುವ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಟೀಸರ್‌ ಮೇಕಿಂಗ್‌ ಜೊತೆಗೆ ಹಿನ್ನೆಲೆ ಸಂಗೀತ ಇಲ್ಲಿ ಗಮನಸೆಳೆಯುತ್ತದೆ. ಅಲ್ಲೊಂದು ಕುತೂಹಲವೂ ಇದೆ. ಆ ಕುತೂಹಲ ಏನೆಂಬುದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

ನಿರ್ದೇಶಕ ತಾಯಿ ಲೋಕೇಶ್‌ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಒಂದಷ್ಟು ಹೋರಾಟದ ಛಾಯೆ ಈ ಟೀಸರ್‌ನಲ್ಲೂ ಈಗಾಗಲೇ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ತಾಯಿ ಲೋಕೇಶ್, ಹಲವು ಬೀದಿ ಬದಿಯ ಬದುಕನ್ನು, ಪಾತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ದಾಖಲಿಸಿದ್ದಾರೆ.

ದೊಡ್ಡವರ, ಚಿಂತಕರ ಒಡನಾಟವಿರಿಸಿಕೊಂಡಿರುವ ಅವರಿಗೆ ಸಿನಿಮಾ ಹುಚ್ಚು ಹೆಚ್ಚು. ಸಿನಿಮಾ ಕಥೆ ಬಗ್ಗೆ ಅಪಾರ ಆಸಕ್ತಿ ತೋರುವ ಅವರಿಗೆ ಸಿನೆಮಾವನ್ನು ಹೇಗೆ ಕಟ್ಟಬೇಕು ಎಂಬ ಕುರಿತು ಅರಿವಿದೆ. ಒಳ್ಳೆಯ ಆಲೋಚನೆಗಳೊಂದಿಗೆ “ದಿ ಕಲರ್‌ ಆಫ್‌ ಟೊ‌ಮೆಟೊ” ಸಿನಿಮಾ ಮಾಡಲು ಹೊರಟಿರುವ ಅವರ ತಂಡಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.

Categories
ಸಿನಿ ಸುದ್ದಿ

ಬರ್ಕ್ಲಿ ಲಿರಿಕಲ್‌ ಸಾಂಗ್‌ ರಿಲೀಸ್‌ ; ಹಾಡು ಕೇಳಿದ ಮಂದಿಯಿಂದ ಮೆಚ್ಚುಗೆ

ಹಬ್ಬಗಳು ಬಂದರೆ ಸಿನಿಮಾ ಮಂದಿಗೆ ಅದೊಂದು ರೀತಿ ದೊಡ್ಡ ಸಂಭ್ರಮ. ಕಾರಣ, ತಮ್ಮ ಸಿನಿಮಾಗಳ ಪೋಸ್ಟರ್‌, ಟೀಸರ್‌, ಟ್ರೇಲರ್‌, ಸಾಂಗ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಆ ಸಾಲಿಗೆ “ಬರ್ಕ್ಲಿʼ ಸಿನಿಮಾ ಕೂಡ ಸೇರಿದೆ. ಹೌದು, ಗೌರಿ-ಗಣೇಶ ಹಬ್ಬಕ್ಕೆ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೂ ಪಾತ್ರವಾಗಿದೆ.

ಸಂತೋಷ್ ಬಾಲರಾಜ್ ಹೀರೋ ಆಗಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ‌ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಇರುವ ಚಿತ್ರವನ್ನು ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ.
ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದೆ. “ಕರಿಯ”, “ಗಣಪ”, “ಕರಿಯ ೨”, ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ “ಬರ್ಕ್ಲಿ‌”. ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಇತರರು ನಟಿಸಿದ್ದಾರೆ.

error: Content is protected !!