ಸಿಂಪಲ್ ಸುನಿ ಹೊಸ ಚಿತ್ರ: ದೇವರು ರುಜು ಮಾಡಿದನು: ಹೊಸ ಪ್ರತಿಭೆ ವಿರಾಜ್ ಹೀರೋ

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ
ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ, ‘ದೇವರು ರುಜು ಮಾಡಿದನು’ ಎಂಬುದು ಕುವೆಂಪುರವರ ಕವಿತೆ ಸಾಲಾಗಿದ್ದು ಅದನ್ನೇ ಚಿತ್ರದ ಟೈಟಲ್ ಆಗಿ ಇಟ್ಟಿದ್ದಾರೆ.

ಇನ್ನೂ ಚಿತ್ರದ ನಾಯಕ. ವಿರಾಜ್ ರಂಗಭೂಮಿ ಪ್ರತಿಭೆಯಾಗಿದ್ದು ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ, ವಿರಾಜ್ ತಂದೆ ಗೋವಿಂದ್ ರಾಜ್ ರವರ ಗ್ರೀನ್ ಹೌಸ್, ಪ್ರೆಸ್ ಮೀಟ್ ಮತ್ತು ಇವೆಂಟ್ ಗಳಿಗೆ ಹೆಸರಾಗಿದ್ದು ಈಗ ಅವರದೇ ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ,

ಚಿತ್ರದ ತಂಡ ನಾಯಕಿ ಮತ್ತು ಇನ್ನಿತರ ಕಲಾವಿದರ ಹುಡುಕಾಟದಲಿದ್ದು, ಶೂಟಿಂಗ್ ಅನ್ನು ಸೆಪ್ಟೆಂಬರ್ ನಲ್ಲಿ ಶುರು ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ, ಮುಂದಿನ ಅಪ್ಡೇಟ್ ಗಳನ್ನು ಚಿತ್ರತಂಡ ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಿದ್ದಾರೆ.

Related Posts

error: Content is protected !!