ಹಂಪಿ ಎಕ್ಸ್ ಪ್ರೆಸ್ ನಲ್ಲಿ ಧರ್ಮಣ್ಣ ಕಡೂರು: ಹೊಸ ಸಿನಿಮಾ ಟೈಟಲ್ ರಿಲೀಸ್ ಮಾಡಿದ ಭಟ್ರು

ರಾಮಾ ರಾಮಾ ರೇ ಸಿನಿಮಾ ಮೂಲಕ ಸುದ್ದಿಯಾದ ಹಾಸ್ಯ ಕಲಾವಿದ ಧರ್ಮಣ್ಣ ಕಡೂರು, ಇತ್ತೀಚೆಗೆ ರಾಜಯೋಗ ಸಿನಿಮಾ ಮೂಲಕ ಜೋರು ಸದ್ದು ಮಾಡಿದ್ದರು. ಈ ಸಿನಿಮಾದಲ್ಲಿ ಧರ್ಮಣ್ಣ ಪ್ರಮುಖ ಆಕರ್ಷಣೆಯಾಗಿದ್ದರು. ಅದಕ್ಕೂ ಮುನ್ನ ಧರ್ಮಣ್ಣ ಒಂದಷ್ಟು ಸಿನಿಮಾಗಳಲ್ಲಿ ಅವರು ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಮೂಲತಃ ಅವರು ಗ್ರಾಮೀಣ ಭಾಗದ ಪ್ರತಿಭೆ. ಅದರಲ್ಲೂ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಯಾವುದೇ ಸಿನಿಮಾ ಮಾಡಿದರೂ ಧರ್ಮಣ್ಣ ಪಾತ್ರಕ್ಕೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇದೀಗ ಧರ್ಮಣ್ಣ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಅಂದಹಾಗೆ, ಧರ್ಮಣ್ಣ ಒಪ್ಪಿಕೊಂಡ ಸಿನಿಮಾಗೆ ಹಂಪಿ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಯೋಗರಾಜ ಭಟ್ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ. ಇನ್ನು ಈ ಚಿತ್ರವನ್ನು ಪಾಟೀಲ್ ಲಿಂಗನಗೌಡ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕಥೆ ಚಿತ್ರಕಥೆಯೂ ಅವರದೆ. ಹಂಪಿ ಟಾಕೀಸ್ ಬಳಗ ಬ್ಯಾನರ್ ಮೂಲಕ ಸಿನಿಮಾ ತಯಾರಾಗುತ್ತಿದ. ಮನ್ ಪ್ರಸಾದ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.

ಧರ್ಮಣ್ಣ ಕಡೂರು ಅವರ ಜೊತೆ ಪದ್ಮಶ್ರಿ ಪುರಸ್ಕೃತರಾದ ಮಂಜಮ್ಮ ಜೋಗತಿ, ಮಹಾಂತೇಶ್ ಹಿರೇಮಠ್, ರಂಜಿತಾ ಪುಟ್ಟಸ್ವಾಮಿ, ರಾಮ್ ನಾಡಗೌಡ, ಇತರರು ನಟಿಸುತ್​ತಿದ್ದಾರೆ. ಚಂದನ್ ಮೂರ್ತಿ ಅವರ ಕಲಾನಿರ್ದೇಶನವಿದೆ. ಯರ್ರಿ ಸ್ವಾಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಸನ್ನ ಕುಮಾರ್, ಸಂತೋಷ್ ಕುಮಾರ್, ಪ್ರವೀಣ್ ಶೆಟ್ಟಿ, ಕಾರ್ತಿಕ್ ಹರಪನಹಳ್ಳಿ ಇವರು ಸಹ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

Related Posts

error: Content is protected !!