ತೆರೆ ಮೇಲೆ ಮತ್ತೆ ಮರಿಯಾ ಮೈ ಡಾರ್ಲಿಂಗ್

ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ‌ ಕೆಲಸ ಮಾಡುತ್ತಿರುವ ಕೆ.ನರೇಂದ್ರ ಬಾಬು ಅವರು ನೆನಪಿರಲಿ ಪ್ರೇಮ್ ಅಭಿನಯದ ಪಲ್ಲಕ್ಕಿ, ರಾಘಣ್ಣ ಶೃತಿ ಅಭಿನಯದ 13 ಸೇರಿದಂತೆ ಹಲವಾರು ವಿಭಿನ್ನ ಜಾನರ್ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿದ್ದಾರೆ. ಈಗ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.

ದಶಕಗಳ ಹಿಂದೆ ನಟ ಕಮಲಹಾಸನ್ ಅಭಿನಯದಲ್ಲಿ ತೆರೆಕಂಡಿದ್ದ, ಸೂಪರ್ ಹಿಟ್ ಚಲನಚಿತ್ರವೊಂದರ ಶೀರ್ಷಿಕೆ ಇಟ್ಟುಕೊಂಡು ವಿಭಿನ್ನ ಪ್ರೇಮಕಥೆಯೊಂದನ್ನು ಹೇಳಹೊರಟಿದ್ದಾರೆ.

ವಿನ್ಸ್ ಡೆವಲಪರ್ಸ್ ಅರ್ಪಿಸಿ, ಎಸ್.ಕೆ. ಸಿನಿ ಎಂಟರ್ ಟೈನರ್ಸ್ ಅಡಿಯಲ್ಲಿ, ಶ್ರೀಮತಿ ಚೇತನಾ ಮಂಜುನಾಥ್ ಅವರು ನಿರ್ಮಿಸುತ್ತಿರುವ ಆ ಚಿತ್ರದ ಹೆಸರು “ಮರಿಯಾ ಮೈ ಡಾರ್ಲಿಂಗ್ “
ಇದು ಮತ್ತೊಂದು ಅಪ್ಪಟ ಪ್ರೇಮ ಕಾವ್ಯವಾಗಿದ್ದು ಕನ್ನಡ ಸಿನಿರಸಿಕರಿಗೆ ಹೊಸತನದ ಸಿಂಚನ ನೀಡುವ ಕಥಾಹಂದರವನ್ನು ಒಳಗೊಂಡಿದೆ.

ಬರುವ ನವೆಂಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಿ, ಉತ್ತರ ಭಾರತದ ಕಾಶ್ಮೀರ ಮತ್ತು ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದ ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಕೆ. ನರೇಂದ್ರಬಾಬು ಅವರು ತಿಳಿಸಿದ್ದಾರೆ.

Related Posts

error: Content is protected !!