Categories
news

ಮಹಿಳಾ ಪ್ರಧಾನ ಚಿತ್ರಗಳೆಲ್ಲವೂ ಮಹಿಳಾ ಪರ ಚಿತ್ರ ಆಗಿರಲ್ಲ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂವಾದದಲ್ಲಿ ಲೇಖಕಿ ಸಂಧ್ಯಾರಾಣಿ ಅಭಿಪ್ರಾಯ

ಬೆಂಗಳೂರು ಚಿತ್ರೋತ್ಸವ ವೇದಿಕೆ: ಮಹಿಳಾ ಪ್ರಧಾನ ಚಿತ್ರಗಳಿಗೂ, ಮಹಿಳಾ ಪರ ಚಿತ್ರಗಳಿಗೂ ವ್ಯತ್ಯಾಸವಿದೆ. ಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳು ಮಹಿಳಾ ಪರ ಚಿತ್ರಗಳಿಗಿಂತ, ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು ಎಂದು ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಿದ್ಧಲಿಂಗಯ್ಯ ನಿರ್ದೇಶನದ ʼಹೇಮಾವತಿʼ ಚಿತ್ರದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ʼಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳಾಗಿದ್ದವೇ ಹೊರತು, ಮಹಿಳಾ ಪರ ಚಿತ್ರಗಳಾಗಿರಲಿಲ್ಲ. ಅವರ ಚಿತ್ರಗಳ ಮಹಿಳಾ ಪಾತ್ರಗಳು ಗಂಡು ಬಯಸುವ ಪಾತ್ರಗಳಾಗಿದ್ದವು.

ಚಿತ್ರದ ನಾಯಕಿಯು ʼಈ ಶತಮಾನದ ಮಾದರಿ ಹೆಣ್ಣು …ʼ ಎಂದು ಹಾಡುತ್ತಾ, ಹಾಡಿನ ಕೊನೆಯಲ್ಲಿ ತನ್ನ ಪರ್ಸ್‌ ಕಳೆದುಕೊಳ್ಳುತ್ತಾಳೆ. ಅದನ್ನು ಹುಡುಕಿಕೊಂಡು ತರುವುದು ಗಂಡಸರು. ಪುಟ್ಟಣ್ಣನವರು ತಮ್ಮ ಎಲ್ಲಾ ಚಿತ್ರಗಳಲ್ಲಿ ಮಹಿಳೆ ಸನಾತನ ಸಂಸ್ಕೃತಿ ಹೇಳಿದ ರೀತಿ ಇದ್ದರೆ, ಜಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ, ಮಹಿಳಾ ಪ್ರಧಾನ ಚಿತ್ರಗಳೆಲ್ಲಾ ಮಹಿಳಾ ಪರ ಚಿತ್ರಗಳಾಗಿರುವುದಿಲ್ಲʼ ಎಂದು ಪ್ರತಿಪಾದಿಸಿದರು.

ಈ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಚ.ಹ. ರಘುನಾಥ, ʼಸಿದ್ಧಲಿಂಗಯ್ಯನವರ ಚಿತ್ರಗಳಲ್ಲೇ ವಿಭಿನ್ನವಾದ ಚಿತ್ರವೆಂದರೆ ಅದು ʼಹೇಮಾವತಿʼ. ಈ ಚಿತ್ರ ಮಾಡುವ ಮೊದಲು ಅವರು ಅಷ್ಟರಲ್ಲಾಗಲೇ ʼಬಂಗಾರದ ಮನುಷ್ಯʼ ಮತ್ತು ʼಬೂತಯ್ಯನ ಮಗ ಅಯ್ಯುʼ ಎಂಬ ಎರಡು ಕಲಾಕೃತಿಗಳನ್ನು ನೀಡಿದ್ದರು. ಆ ಚಿತ್ರಗಳ ನಂತರ ʼಹೇಮಾವತಿʼ ಮೂಲಕ ಹೊಸ ಸಾಹಸ ಮಾಡುವುದರ ಜೊತೆಗೆ ಹೊಸ ಸವಾಲು ಸ್ವೀಕರಿಸಿದರು.

ಅವರು. ಈ ಚಿತ್ರದಲ್ಲಿ ರಾಮಾಯಣವನ್ನು ಅವರು ನೇರವಾಗಿ ತರದಿದ್ದರೂ, ಅದರ ಛಾಯೆ ಇತ್ತು. ಇದು ಯಾವುದೋ ಒಂದು ಊರಿನ ಕಥೆಯಾಗದೆ, ದೇಶದ ಯಾವುದೇ ಮೂಲೆಗೆ ಬೇಕಾದರೂ ಸಲ್ಲುವಂತಹ ಕಥೆಯಾಗಿತ್ತು. ಚಿತ್ರದ ಕಥೆ ಸ್ವಾತಂತ್ರ್ಯಪೂರ್ವದ್ದಾಗಿದ್ದರೂ, ಈಗಲೂ ಸಲ್ಲುವಂತಿದೆ. ರಾಮಾಯಣದಲ್ಲಿ ಸೀತೆ ಅಗ್ನಿಪರೀಕ್ಷೆ ಎದುರಿಸಿದರೆ, ಇಲ್ಲಿ ಹೇಮಾವತಿ ಮತ್ತು ಚೆನ್ನಿ ಎಂಬ ಎರಡು ಪಾತ್ರಗಳು ಬೇರೆಬೇರೆಯದೇ ರೀತಿಯಲ್ಲಿ ಅಗ್ನಿದಿವ್ಯಕ್ಕೆ ಒಳಗಾಗುತ್ತಾರೆ. ಈ ಚಿತ್ರ ಈಗ ತಯಾರಾಗಿದ್ದರೆ ಬಿಡುಗಡೆ ಕಷ್ಟವಾಗಿರುತ್ತಿತ್ತು. ಸಿದ್ಧಲಿಂಗಯ್ಯನವರು ಇನ್ನೊಂದು ಸಿನಿಮಾ ಮಾಡುವುದು ಕಷ್ಟವಾಗಿರುತ್ತಿತ್ತು. ಸೆನ್ಸಾರ್‌ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿತ್ತುʼ ಎಂದು ಹೇಳಿದರು.

ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಹೆಣ್ಣೆಂದರೆ ಬರೀ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಲೇಖಕಿಯರ ಸಂಘದ ಅಧ್ಯಕ್ಷರಾದ ಸುನಂದಮ್ಮ, ʼಮಹಿಳೆಗೆ ಅದೆಷ್ಟೇ ಪ್ರತಿಭೆ, ಶಿಕ್ಷಣ, ಕ್ರಿಯೇಟಿವಿಟಿ ಇದ್ದರೂ ಮುಖ್ಯವಲ್ಲ, ಆಕೆ ಸೌಂದರ್ಯಕ್ಕೆ ಮಾತ್ರ ಸೀಮಿತ ಎನ್ನುವಂತಹ ಪರಿಸ್ಥಿತಿ ಇತ್ತು. ಈಗ ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದೆʼ ಎಂದು ಹೇಳಿದರು.

ಪತ್ರಕರ್ತೆ ಮಾನಸಾ ಚಂದ್ರಿಕಾ ಮಾತನಾಡಿ, ʼಕಿರುತೆರೆಯಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಧಾರಾವಾಹಿಗಳು ಬರುತ್ತಿವೆ. ಆದರೆ, ಈ ಧಾರಾವಾಹಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಹೆಣ್ಣು. ಶೋಷಣೆ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಗಂಡಸರ ಎದುರು ನಿಂತು ಮಾತಾಡಿದರೆ, ಅವರಿಗೆ ಗಂಡುಬೀರಿ ಎಂಬ ಹಣೆಪಟ್ಟಿ ಬೀಳುತ್ತದೆ. ಆಕೆ ಮೊದಲು ತನ್ನ ಕುಟುಂಬವನ್ನು ಜಯಿಸಬೇಕು, ನಂತರ ಸಮಾಜವನ್ನು ಜಯಸಿಬೇಕುʼ ಎಂದರು.

ಈ ಸಂವಾದವನ್ನು ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ನಡೆಸಿಕೊಟ್ಟರು.

Categories
ಸಿನಿ ಸುದ್ದಿ

`ಪುಷ್ಪ’ ಜೊತೆ ಡಿಜೆ ವರ್ಕೌಟ್; ಫಿಟ್ನೆಸ್ ಫ್ರೀಕ್ ಚಕ್ರವರ್ತಿ ಚಂದ್ರಚೂಡ್ !

ಡಿ.ಜೆ ಚಕ್ರವರ್ತಿಯವರ ಹೊಸ ಜಿಮ್ ಪಾರ್ಟ್ನರ್ ಇವರು. ಇವರ ಹೆಸರು ಪುಷ್ಪ. ಇತ್ತೀಚೆಗೆ ಚಕ್ರವರ್ತಿ ಚಂದ್ರಚೂಡ್ ಅವರು ಪುಷ್ಪ ಜೊತೆ ವರ್ಕೌಟ್ ಮಾಡಿದ್ದಾರೆ. ಮೈ ಬೆವರಿಳಿಸಿ, ಕೊಬ್ಬು ಕರಗಿಸಿ ಇರೋಬರೋ ಪ್ಯಾಕ್ಸೆಲ್ಲಾ ಬರಿಸಿಕೊಂಡಿದ್ದಾರೆ. ಡಿಜೆ ಪ್ಲಸ್ ಪುಷ್ಪ ವರ್ಕೌಟ್ ಕಥೆ ಇಲ್ಲಿದೆ ನೋಡಿ

ಚಕ್ರವರ್ತಿ ಚಂದ್ರಚೂಡ್ ಸಾಮಾಜಿಕ ಹೋರಾಟಗಾರರು, ಬರಹಗಾರರು, ಪತ್ರಕರ್ತರು ಕಮ್ ಬಿಗ್‌ಬಾಸ್ ಸೀಸನ್ ೮ರ ಪ್ರಬಲ ಸ್ಪರ್ಧಿ. ದೊಡ್ಮನೆಯಲ್ಲಿ ಟಫ್ ಕಾಂಪಿಟೇಷನ್ ಕೊಟ್ಟು ಟಾಪ್ ಫೈವ್ ವರೆಗೂ ಬಂದಿದ್ದರು. ಕೊನೆಗೆ ಕಿಚ್ಚನ ಅಕ್ಕ-ಪಕದಲ್ಲಿ ನಿಲ್ಲೋದಕ್ಕೆ ಆಗಲಿಲ್ಲ. ಬಿಗ್‌ಬಾಸ್ ವಿನ್ನರ್-ರನ್ನರ್ ಅಪ್ ಕಿರೀಟ ಗೆಲ್ಲದೇ ಇದ್ದರೆ ಏನಂತೆ? ಬಾದ್ ಷಾ ಬರ್ತ್ಡೇಗೆ ಸುದೀಪಿಯನ್ಸ್'ಸಾಂಗ್‌ನ ಗಿಫ್ಟ್ ಮಾಡಿ ಕಿಚ್ಚನ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು.ಮಾಣಿಕ್ಯನ ಹೆತ್ತವರು ಮಾತ್ರವಲ್ಲ ಅಭಿನಯ ಚಕ್ರವರ್ತಿಯೂ ಖುಷಿಪಡುವಂತೆ ಮತ್ತು ಹೆಮ್ಮೆಪಡುವಂತೆ ಮಾಡಿದರು.ಈಗ ಪುಷ್ಪ’ ಜೊತೆ ವರ್ಕೌಟ್ ಮಾಡಿ ಚಕ್ರವರ್ತಿಯವರು ಸೌಂಡ್ ಮಾಡ್ತಿದ್ದಾರೆ.

ಪುಷ್ಪ ಅಂದಾಕ್ಷಣ ಯಾವ್ ಪುಷ್ಪ? ಏನ್ ಸಮಾಚಾರ? ಎನ್ನುವ ಕೂತೂಹಲ ಹೆಚ್ಚುತ್ತೆ. ಆ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಬೇಕು ಅಂದರೆ ಚಕ್ರವರ್ತಿ ವರ್ಕೌಟ್ ವಿತ್ ಪುಷ್ಪ' ಕಥೆನಾ ಹೇಳಲೆಬೇಕು.ಚಕ್ರವರ್ತಿ ಚಂದ್ರಚೂಡ್ ಅವರು ಫಿಟ್ನೆಸ್ ಫ್ರೀಕ್. ಜಿಮ್ಮು-ವರ್ಕೌಟ್-ಡಯಟ್ ಅಂತ ಕಟ್ಟುನಿಟ್ಟಾಗಿ ಪಾಲಿಸುತ್ತಾ ಫಿಟ್ ಅಂಡ್ ಫೈನ್ ಆಗಿರೋದಕ್ಕೆ ಬಯಸ್ತಾರೆ.ಇತ್ತೀಚೆಗೆ ಜಿಮ್‌ನಲ್ಲಿ ಮೈ ಬೆವರಿಳಿಸೋದಕ್ಕೆಪುಷ್ಪ’ ಸಪೋರ್ಟ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ, ಆ ಪುಷ್ಪ ಹುಡುಗನೂ ಅಲ್ಲ…ಹುಡುಗಿನೂ ಅಲ್ಲ… ಆಂಟಿನೂ ಅಲ್ಲ.. ಅಂಕಲ್ಲು ಅಲ್ಲ.. ಹಾಗಾದ್ರೆ ಮತ್ಯಾರು ಅಂತೀರಾ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ ಸಿನಿಮಾ ಗುರು

ಯಸ್, ಚಕ್ರವರ್ತಿ ಚಂದ್ರಚೂಡ್ ಅವರು ಇತ್ತೀಚೆಗೆ ಜಿಮ್ ಮಾಡುವಾಗ ಪುಷ್ಪ' ಸಪೋರ್ಟ್ ತೆಗೆದುಕೊಂಡಿದ್ದಾರೆ.ಬೆಳಕನು ತಿಂತದೆ ಎಲೆ. ಎಲೆಯನು ತಿಂತದೆ ಮೇಕೆ. ಮೇಕೆಯನು ತಿಂತದೆ ಹುಲಿ.ಇದು ಹಸಿವಿನ ಹಾವಳಿ.. ಇದು `ಪುಷ್ಪ’ ಸಿನಿಮಾದ ಕನ್ನಡ ವರ್ಷನ್ ಹಾಡು. ಈ ಸಾಂಗ್‌ನ ಪ್ಲೇ ಮಾಡಿಕೊಂಡು ಡಂಬಲ್ಸ್ ನ ಎತ್ತಿ-ಇಳಿಸಿದ್ದಾರೆ. ಫಿಟ್ ಅಂಡ್ ಫೈನ್ ಆಗಿರಲು ಹೀರೋಗಳು ವರ್ಕೌಟ್ ಮಾಡಿದಂತೆ, ಕಟ್ಟುಮಸ್ತಾದ ದೇಹವನ್ನು ಕಾಪಾಡಿಕೊಳ್ಳೋದಕ್ಕೆ ಚಂದ್ರಚೂಡ್ ಅವರು ಜಿಮ್‌ನಲ್ಲಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ.

ಅಂದ್ಹಾಗೇ, ವರ್ಕೌಟ್ ಮಾಡುವಾಗ ಬ್ಯಾಗ್ರೌಂಡ್‌ನಲ್ಲಿ ಯಾವುದಾದರೊಂದು ಸಾಂಗ್ ಪ್ಲೇ ಆಗ್ಬೇಕು. ಥ್ರೆಡ್ ಮಿಲ್ ಮೇಲೆ ಓಡುವಾಗ, ವೇಯ್ಟ್ ಲಿಫ್ಟಿಂಗ್ ಮಾಡುವಾಗ, ಬೈಸೆಪ್ ವರ್ಕೌಟ್ ಮಾಡುವಾಗ ಸಾಂಗ್ ಪ್ಲೇ ಆದರೆ ಅದರ ಕಿಕ್ಕೇ ಬೇರೆ. ಹೀಗಾಗಿ, ಜಿಮ್‌ನಲ್ಲಿ ಸಾಂಗ್ ಹವಾ ಜೋರಾಗಿರುತ್ತೆ. ಫಿಟ್ನೆಸ್ ಫ್ರೀಕ್‌ಗಳನ್ನ ಚಿಯರ್ ಅಪ್ ಮಾಡುತ್ತಿರುತ್ತೆ. ಸದ್ಯಕ್ಕೆ, ಡಿಜೆ ಚಕ್ರವರ್ತಿಯವರಿಗೆ ಪುಷ್ಪ ಸಾಂಗ್ ಚಿಯರ್ ಅಪ್ ಮಾಡ್ತಿದೆ.

error: Content is protected !!