Categories
news

ಚಿತ್ರೋತ್ಸವದಲ್ಲಿ ʼಮಹಾಕವಿʼ ದರ್ಶನ

ಇದು ಬರಗೂರು ರಾಮಚಂದ್ರಪ್ಪ ಅವರ 25ನೇ ಚಿತ್ರ

ಬೆಳಗಾವಿಯ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ, ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮಹಾಕವಿʼ ಚಿತ್ರವು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ನಿರ್ಮಾಪಕರಾದ ಪ್ರಭು, ʼವೃತ್ತಿಯಲ್ಲಿ ವಕೀಲನಾಗಿರುವ ನಾನು ಬೆಳಗಾವಿಯವನು. ನನಗೆ ನನ್ನ ಸ್ನೇಹಿತನ ಮೂಲಕ ಬರಗೂರು ರಾಮಚಂದ್ರಪ್ಪ ಅವರ ಪರಿಚಯವಾಯಿತು. ಅವರು ನನಗೆ ʼಮಹಾಕವಿʼ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಯಿತು. ಈಗ ಚಿತ್ರ ಸಿದ್ದವಾಗಿದ್ದು, ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ನಮ್ಮ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಬಹಳ ಖುಷಿಯಾಗಿದೆ. ಈ ಚಿತ್ರವನ್ನು ಏಪ್ರಿಲ್‌ ತಿಂಗಳಲ್ಲಿ ಕನ್ನಡವಲ್ಲದೆ, ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆʼ ಎಂದರು.

ಗುರುಗಳಾದ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25ನೇ ಚಿತ್ರದ ನಾಯಕಿಯಾಗಿ ನಟಿಸಿದ್ದು ಹಾಗೂ ನಮ್ಮ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದು ಎರಡು ಬಹಳ ಸಂತೋಷ ತಂದಿದೆ ಎಂದು ನಾಯಕಿ ಅನುಷಾ ರೈ ಹೇಳಿದರು.

ʼಮಹಾಕವಿʼ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಬರಗೂರು ರಾಮಚಂದ್ರಪ್ಪನವರು ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕಿಶೋರ್ ಅವರು ಪಂಪನ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದಲ್ಲಿ ನಟಿಸಿರುವ ರಾಜಪ್ಪ ದಳವಾಯಿ ತಿಳಿಸಿದರು.

ಛಾಯಾಗ್ರಾಹಕ ನಾಗರಾಜ ಆದವಾನಿ ಮಾತನಾಡಿ, ʼಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 25 ಚಿತ್ರಗಳಲ್ಲಿ ಈ ಚಿತ್ರವೂ ಸೇರಿದಂತೆ 18 ಚಿತ್ರಗಳಿಗೆ ನಾನೇ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿದ್ದೇನೆʼ ಎಂದರು.

Categories
news

ಮಹಿಳಾ ಪ್ರಧಾನ ಚಿತ್ರಗಳೆಲ್ಲವೂ ಮಹಿಳಾ ಪರ ಚಿತ್ರ ಆಗಿರಲ್ಲ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂವಾದದಲ್ಲಿ ಲೇಖಕಿ ಸಂಧ್ಯಾರಾಣಿ ಅಭಿಪ್ರಾಯ

ಬೆಂಗಳೂರು ಚಿತ್ರೋತ್ಸವ ವೇದಿಕೆ: ಮಹಿಳಾ ಪ್ರಧಾನ ಚಿತ್ರಗಳಿಗೂ, ಮಹಿಳಾ ಪರ ಚಿತ್ರಗಳಿಗೂ ವ್ಯತ್ಯಾಸವಿದೆ. ಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳು ಮಹಿಳಾ ಪರ ಚಿತ್ರಗಳಿಗಿಂತ, ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು ಎಂದು ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಿದ್ಧಲಿಂಗಯ್ಯ ನಿರ್ದೇಶನದ ʼಹೇಮಾವತಿʼ ಚಿತ್ರದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ʼಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳಾಗಿದ್ದವೇ ಹೊರತು, ಮಹಿಳಾ ಪರ ಚಿತ್ರಗಳಾಗಿರಲಿಲ್ಲ. ಅವರ ಚಿತ್ರಗಳ ಮಹಿಳಾ ಪಾತ್ರಗಳು ಗಂಡು ಬಯಸುವ ಪಾತ್ರಗಳಾಗಿದ್ದವು.

ಚಿತ್ರದ ನಾಯಕಿಯು ʼಈ ಶತಮಾನದ ಮಾದರಿ ಹೆಣ್ಣು …ʼ ಎಂದು ಹಾಡುತ್ತಾ, ಹಾಡಿನ ಕೊನೆಯಲ್ಲಿ ತನ್ನ ಪರ್ಸ್‌ ಕಳೆದುಕೊಳ್ಳುತ್ತಾಳೆ. ಅದನ್ನು ಹುಡುಕಿಕೊಂಡು ತರುವುದು ಗಂಡಸರು. ಪುಟ್ಟಣ್ಣನವರು ತಮ್ಮ ಎಲ್ಲಾ ಚಿತ್ರಗಳಲ್ಲಿ ಮಹಿಳೆ ಸನಾತನ ಸಂಸ್ಕೃತಿ ಹೇಳಿದ ರೀತಿ ಇದ್ದರೆ, ಜಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ, ಮಹಿಳಾ ಪ್ರಧಾನ ಚಿತ್ರಗಳೆಲ್ಲಾ ಮಹಿಳಾ ಪರ ಚಿತ್ರಗಳಾಗಿರುವುದಿಲ್ಲʼ ಎಂದು ಪ್ರತಿಪಾದಿಸಿದರು.

ಈ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಚ.ಹ. ರಘುನಾಥ, ʼಸಿದ್ಧಲಿಂಗಯ್ಯನವರ ಚಿತ್ರಗಳಲ್ಲೇ ವಿಭಿನ್ನವಾದ ಚಿತ್ರವೆಂದರೆ ಅದು ʼಹೇಮಾವತಿʼ. ಈ ಚಿತ್ರ ಮಾಡುವ ಮೊದಲು ಅವರು ಅಷ್ಟರಲ್ಲಾಗಲೇ ʼಬಂಗಾರದ ಮನುಷ್ಯʼ ಮತ್ತು ʼಬೂತಯ್ಯನ ಮಗ ಅಯ್ಯುʼ ಎಂಬ ಎರಡು ಕಲಾಕೃತಿಗಳನ್ನು ನೀಡಿದ್ದರು. ಆ ಚಿತ್ರಗಳ ನಂತರ ʼಹೇಮಾವತಿʼ ಮೂಲಕ ಹೊಸ ಸಾಹಸ ಮಾಡುವುದರ ಜೊತೆಗೆ ಹೊಸ ಸವಾಲು ಸ್ವೀಕರಿಸಿದರು.

ಅವರು. ಈ ಚಿತ್ರದಲ್ಲಿ ರಾಮಾಯಣವನ್ನು ಅವರು ನೇರವಾಗಿ ತರದಿದ್ದರೂ, ಅದರ ಛಾಯೆ ಇತ್ತು. ಇದು ಯಾವುದೋ ಒಂದು ಊರಿನ ಕಥೆಯಾಗದೆ, ದೇಶದ ಯಾವುದೇ ಮೂಲೆಗೆ ಬೇಕಾದರೂ ಸಲ್ಲುವಂತಹ ಕಥೆಯಾಗಿತ್ತು. ಚಿತ್ರದ ಕಥೆ ಸ್ವಾತಂತ್ರ್ಯಪೂರ್ವದ್ದಾಗಿದ್ದರೂ, ಈಗಲೂ ಸಲ್ಲುವಂತಿದೆ. ರಾಮಾಯಣದಲ್ಲಿ ಸೀತೆ ಅಗ್ನಿಪರೀಕ್ಷೆ ಎದುರಿಸಿದರೆ, ಇಲ್ಲಿ ಹೇಮಾವತಿ ಮತ್ತು ಚೆನ್ನಿ ಎಂಬ ಎರಡು ಪಾತ್ರಗಳು ಬೇರೆಬೇರೆಯದೇ ರೀತಿಯಲ್ಲಿ ಅಗ್ನಿದಿವ್ಯಕ್ಕೆ ಒಳಗಾಗುತ್ತಾರೆ. ಈ ಚಿತ್ರ ಈಗ ತಯಾರಾಗಿದ್ದರೆ ಬಿಡುಗಡೆ ಕಷ್ಟವಾಗಿರುತ್ತಿತ್ತು. ಸಿದ್ಧಲಿಂಗಯ್ಯನವರು ಇನ್ನೊಂದು ಸಿನಿಮಾ ಮಾಡುವುದು ಕಷ್ಟವಾಗಿರುತ್ತಿತ್ತು. ಸೆನ್ಸಾರ್‌ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿತ್ತುʼ ಎಂದು ಹೇಳಿದರು.

ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಹೆಣ್ಣೆಂದರೆ ಬರೀ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಲೇಖಕಿಯರ ಸಂಘದ ಅಧ್ಯಕ್ಷರಾದ ಸುನಂದಮ್ಮ, ʼಮಹಿಳೆಗೆ ಅದೆಷ್ಟೇ ಪ್ರತಿಭೆ, ಶಿಕ್ಷಣ, ಕ್ರಿಯೇಟಿವಿಟಿ ಇದ್ದರೂ ಮುಖ್ಯವಲ್ಲ, ಆಕೆ ಸೌಂದರ್ಯಕ್ಕೆ ಮಾತ್ರ ಸೀಮಿತ ಎನ್ನುವಂತಹ ಪರಿಸ್ಥಿತಿ ಇತ್ತು. ಈಗ ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದೆʼ ಎಂದು ಹೇಳಿದರು.

ಪತ್ರಕರ್ತೆ ಮಾನಸಾ ಚಂದ್ರಿಕಾ ಮಾತನಾಡಿ, ʼಕಿರುತೆರೆಯಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಧಾರಾವಾಹಿಗಳು ಬರುತ್ತಿವೆ. ಆದರೆ, ಈ ಧಾರಾವಾಹಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಹೆಣ್ಣು. ಶೋಷಣೆ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಗಂಡಸರ ಎದುರು ನಿಂತು ಮಾತಾಡಿದರೆ, ಅವರಿಗೆ ಗಂಡುಬೀರಿ ಎಂಬ ಹಣೆಪಟ್ಟಿ ಬೀಳುತ್ತದೆ. ಆಕೆ ಮೊದಲು ತನ್ನ ಕುಟುಂಬವನ್ನು ಜಯಿಸಬೇಕು, ನಂತರ ಸಮಾಜವನ್ನು ಜಯಸಿಬೇಕುʼ ಎಂದರು.

ಈ ಸಂವಾದವನ್ನು ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ನಡೆಸಿಕೊಟ್ಟರು.

Categories
news

ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್ ‘ಪಳ್ಳಚಟ್ಟಂಬಿ’ಯಲ್ಲಿ ಟೋವಿನ್ ಥಾಮನ್ ಗೆ ನಾಯಕಿ

ಮಲಯಾಳಂ‌ ನಟ ಟೋವಿನೋ ಥಾಮಸ್ ನಟಿಸುತ್ತಿರುವ ಬಹು ನಿರೀಕ್ಷಿತ ಪಳ್ಳಿಚಟ್ಟಂಬಿ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕಿ ಕಯಾದು ಲೋಹರ್ ಫಸ್ಟ್ ಲುಕ್ ಅನಾವರಣ ಮಾಡಲಾಗಿದ್ದು, ವಿಂಟೇಜ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಡಿಜೋ ಜೋಸ್ ಆಂಟೋನಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ತಾರಾಗಣದಲ್ಲಿದ್ದಾರೆ. 1950-60ರ ದಶಕದ ಸುತ್ತ ಕಥೆಯನ್ನು ಎಣೆಯಲಾಗಿದೆ.

ಚಿತ್ರದ ಛಾಯಾಗ್ರಹಣವನ್ನು ಟಿಜೊ ಟಾಮಿ ನಿರ್ವಹಿಸಿದರೆ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಶ್ರೀಜಿತ್ ಸಾರಂಗ್ ಮತ್ತು ನಿರ್ಮಾಣ ವಿನ್ಯಾಸವನ್ನು ದಿಲೀಪ್ ನಾಥ್ ನಿರ್ವಹಿಸಿದ್ದಾರೆ. ಚಿತ್ರಕಥೆಯನ್ನು ಎಸ್ ಸುರೇಶ್ ಬಾಬು ಬರೆದಿದ್ದಾರೆ.

ಪಳ್ಳಚಟ್ಟಂಬಿ ಸಿನಿಮಾ ವರ್ಲ್ಡ್ ವೈಡ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನೌಫಲ್ ಮತ್ತು ಬ್ರಿಜೀಶ್ ನಿರ್ಮಿಸಿದ್ದಾರೆ, ಜೊತೆಗೆ ಸಿ ಕ್ಯೂಬ್ ಬ್ರದರ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಚಾಣುಕ್ಯ ಚೈತನ್ಯ ಚರಣ್ ನಿರ್ಮಿಸಿದ್ದಾರೆ. ಪಳ್ಳಚಟ್ಟಂಬಿ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಪ್ರಿಲ್ 9 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
news

Добро пожаловать в ресурсосберегающее земледелие…

Добро пожаловать в ресурсосберегающее земледелие…

Ресурсосберегающее сельское хозяйство (СА) определяется как устойчивая и ресурсосберегающая система сельскохозяйственного производства, включающая набор методов ведения сельского хозяйства, адаптированных к требованиям составляющих однолетних и многолетних культур и местным условиям каждой фермы и региона, чьи методы ведения сельского хозяйства и управления почвами защищают землю от эрозии и деградации, улучшают ее https://www.unian.net/society/10277106-dorogi-shkola-i-cerkvi-selu-na-ivano-frankovshchine-pomogaet-kompaniya-bahmatyuka.html качество и биоразнообразие, а также способствуют сохранению природных ресурсов, воды и воздуха, оптимизируя при этом урожайность и общую производительность фермы.

Агрономические методы, включенные в системы ОК, основаны на трех основных принципах, которые должны выполняться одновременно, которые применяются вместе с другими дополнительными передовыми методами ведения сельского хозяйства:

Отсутствие или минимальное нарушение почвы (без обработки почвы и прополки). Поддержание постоянного мульчирующего покрытия почвы (пожнивные остатки, покровные культуры). Разнообразие систем земледелия (севообороты, связанные с ними посевы).

Вы можете узнать больше о ресурсосберегающем сельском хозяйстве, посетив страницу «Наша история»..

error: Content is protected !!