Categories
ಸಿನಿ ಸುದ್ದಿ

ಪ್ರಜ್ವಲ್ ಬರ್ತ್ ಡೇಗೆ ಬಂತು ಗಣ ಟೀಸರ್

ನಾಯಕ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಕ್ಷಣದಲ್ಲಿ ಪ್ರಜ್ವಲ್ ನಾಯಕರಾಗಿ ನಟಿಸಿರುವ “ಗಣ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಟ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆಯಾಯಿತು. ಹಾಗಾಗಿ “ಗಣ” ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ಪಾರ್ಥು, ಸೋಶಿಯಲ್ ಮೀಡಿಯಾದಲ್ಲಿ ನಾನು ಪ್ರಜ್ವಲ್ ಅವರನ್ನು ಫಾಲೋ ಮಾಡುತ್ತಿದ್ದೆ‌. ಅದರಲ್ಲಿ ಪ್ರಜ್ವಲ್ ಅವರ ಅಭಿಮಾನಿಗಳು ಯಾವ ರೀತಿ ಚಿತ್ರ ನಿರೀಕ್ಷಿಸುತ್ತಿದ್ದರೊ, ಅದೇ ತರಹದ ಚಿತ್ರ ಮಾಡಿದ್ದೇವೆ. ಪ್ರಜ್ವಲ್ ದೇವರಾಜ್ ಅವರು ಈವರೆಗೂ ಮಾಡಿರದ ಪಾತ್ರ ಎನ್ನಬಹುದು. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದೆ. ಹರಿಪ್ರಾಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ ಎಂದರು.

ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಕೆಲಸ ಸಿನಿಮಾ ಮಾಡಬೇಕೆಂದು ಬಂದ ಪಾರ್ಥು ಅವರಿಗೆ ಅಭಿನಂದನೆ ತಿಳಿಸಿ “ಗಣ” ಚಿತ್ರದ ಬಗ್ಗೆ ಮಾತು ಆರಂಭಿಸಿದ ಪ್ರಜ್ವಲ್ ದೇವರಾಜ್, “ಗಣ” ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಮುಗಿದಿರುವ ಚಿತ್ರ ಹಾಗೂ ಡಿಫರೆಂಟ್ ಜಾನರ್ ನ ಚಿತ್ರ ಕೂಡ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಚಿತ್ರದಲ್ಲಿ ನಟಿಸಿರುವ ವೇದಿಕ, ಕೃಷಿ ತಾಪಂಡ, ಶಿವರಾಜ್ ಕೆ.ಆರ್ ಪೇಟೆ, ಮಾಸ್ಟರ್ ರಘುನಂದನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಹಕ ಜೈ ಆನಂದ್, ಕಲಾ ನಿರ್ದೇಶಕ ಸತೀಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ಗೋಪಿ ಅವರು “ಗಣ”ದ ಬಗ್ಗೆ ಮಾತನಾಡಿದರು. ಶ್ರೀನಿವಾಸ್ ಚಿಕ್ಕಬಳ್ಳಾಪುರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Categories
ಸಿನಿ ಸುದ್ದಿ

ಕೋಮಲ್ ಹುಟ್ದಬ್ಬಕ್ಕೆ ಯಲಾಕುನ್ನಿ ಫಸ್ಟ್ ಲುಕ್: ವಜ್ರಮುನಿ ಗೆಟಪ್ ಗೆ ಫ್ಯಾನ್ಸ್ ಫಿದಾ

ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಹಾಗೂ ಎನ್ ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ “ಯಲಾ ಕುನ್ನಿ” ಚಿತ್ರದ ಫಸ್ಟ್ ಲುಕ್ ನಾಯಕ ಕೋಮಲ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೋಮಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಈ ಫಸ್ಟ್ ಲುಕ್ ನಲ್ಲಿ ಕೋಮಲ್ ಅವರು ಹಿರಿಯ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಲುಕ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಗಣ್ಯರು ಈ ಫಸ್ಟ್ ಲುಕನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

“ಯಲಾಕುನ್ನಿ” ಚಿತ್ರದಲ್ಲಿ ಕೋಮಲ್ ಅವರು ಬಹುಭಾಗ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.”ಮೇರಾ ನಾಮ್ ವಜ್ರಮುನಿ ” ಎಂಬ ಅಡಿಬರಹ ಹಾಗೂ “ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ” ಎಂಬ ಬರಹದೊಂದಿಗೆ “ಯಲಾಕುನ್ನಿ” ಚಿತ್ರ ಬರಲಿದೆ. ನವರಸ ನಾಯಕ ಜಗ್ಗೇಶ್ ರವರ ಮಗ “ಯತಿರಾಜ್” ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ನ ಬಹು ನಿರೀಕ್ಷಿತ ‘ಸಲಾರ್’ ಚಿತ್ರದ ಟೀಸರ್ ಜುಲೈ 6ಕ್ಕೆ ರಿಲೀಸ್

ಈ ವರ್ಷದ ಅತೀ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’. ಪ್ರಭಾಸ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಜುಲೈ 6 ರಂದು ಬಿಡುಗಡೆಯಾಗುತ್ತಿದೆ.
ಚಿತ್ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಆ ಎಲ್ಲಾ ಕುತೂಹಲಗಳಿಗೆ ಜುಲೈ 6 ರ ಗುರುವಾರ ತೆರೆಬೀಳಲಿದೆ.
ಜುಲೈ 06ರಂದು ಬೆಳಿಗ್ಗೆ 5.12ಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ‘ಸಲಾರ್’ ಚಿತ್ರವನ್ನು ನಿರ್ಮಿಸುತ್ತಿದೆ.

ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

Categories
ಸಿನಿ ಸುದ್ದಿ

ಜುಲೈ 21ಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ!

ಟೀಸರ್, ಸಾಂಗ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 21ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಗಪ್ಪಳಿಸಲಿದೆ. ಸೆಟ್ಟೇರಿದ ದಿನದಿಂದಲೂ ವಿಭಿನ್ನ ಬಗೆಯಲ್ಲಿ ಪ್ರಚಾರ ನಡೆಸುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಪುನೀತ್ ರಾಜ್ ಕುಮಾರ್, ರಮ್ಯಾ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್ ಸೇರಿದಂತೆ ಚಂದನವನದ ಹಲವು ತಾರೆಯರು ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ದೂದ್ ಪೇಡಾ ದಿಗಂತ್ ಹಾಸ್ಟೆಲ್ ಹುಡುಗರ ಬಳಗ ಸೇರಿದ್ದಾರೆ.

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.

ಪ್ರತಿ ಬಾರಿ ಯುನಿಕ್ ಕಾನ್ಸಎಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ನಿಮ್ಮೆಲ್ಲರ ಆಶೀರ್ವಾದ ಈ ಸಿನಿಮಾ ತಂಡದ ಮೇಲಿರಲಿ: ಪೋಸ್ಟರ್ ರಿಲೀಸ್ ಆಯ್ತು; ಶೀಘ್ರವೇ ಚಿತ್ರ ಬಿಡುಗಡೆ

ವರುಣ್ ಸಿನಿ ಕ್ರಿಯೇಷನ್ಸ್ ಚೊಚ್ಚಲ ಹೆಜ್ಜೆ ನಿಮ್ಮೆಲ್ಲರ ಆರ್ಶೀರ್ವಾದ ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ವರುಣ್ ಹೆಗ್ಡೆ ಹಣ ಹಾಕಿದ್ದು, ಇದು ಇವರ ಮೊದಲ ಪ್ರಯತ್ನವಾಗಿದೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು,‌ ನೋಡುಗರ ಗಮನಸೆಳೆಯುತ್ತಿದೆ.

ಕೌಟುಂಬಿಕ ಕಥಾಹಂದರದ ನಿಮ್ಮೆಲ್ಲರ ಆಶೀರ್ವಾದ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್‌ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್‌ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ. ಎನ್‌.ಲಕ್ಷ್ಮೀದೇವಿ, ಅರವಿಂದ ಬೋಳಾರ್‌, ಗೋವಿಂದೇಗೌಡ, ಸ್ವಾತಿ ಗುರುದತ್‌, ದಿನೇಶ್‌ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.

ನಿಮ್ಮೆಲ್ಲರ ಆಶೀರ್ವಾದ ಸಿನಿಮಾಗೆ
ಯುವ ನಿರ್ದೇಶಕ ರವಿಕಿರಣ್‌ ಆಕ್ಷನ್ ಕಟ್ ಹೇಳಿದ್ದು, ಸರವಣನ್‌ ಜಿ.ಎನ್‌.ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್‌ ಕಲಾ ನಿರ್ದೇಶನ, ಸುನಾದ್‌ ಗೌತಮ್‌ ಸಂಗೀತ ಮತ್ತು ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್‌ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಿಮ್ಮೆಲ್ಲರ ಆಶೀರ್ವಾದ ಚಿತ್ರ ಇದೇ ತಿಂಗಳು ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಚಿತ್ರತಂಡ ಇದೇ ವಾರ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದೆ.

Categories
ಸಿನಿ ಸುದ್ದಿ

ಮನಸು ಜಾರಿದೆ ಆಲ್ಬಂ ಸಾಂಗ್ ಬಿಡುಗಡೆ ವೇಳೆ ಪ್ರಣಯ ರಾಜ ಶ್ರೀನಾಥ್ ಗೆ ಸನ್ಮಾನ

ಭಜರಂಗಿ 2 ಖ್ಯಾತಿಯ ಚೆಲುವರಾಜು ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಟಿ ವಿದ್ಯಾವಿಜಯ್ ಅಭಿನಯಿಸಿರುವ “ಮನಸು ಜಾರಿದೆ” ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಇದೇ ಸಂದರ್ಭದಲ್ಲಿ ಪ್ರಣಯ ರಾಜ ಶ್ರೀನಾಥ್ ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವರಾದ ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಲ್ಲಿರುವವರೆಲ್ಲ ಬಹಳ ಚಿಕ್ಕವರು. ಈಗಿನ ಪೀಳಿಗೆಯವರು ನನಗೆ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಖುಷಿಯಾಗಿದೆ ಎಂದರು ಪ್ರಣಯರಾಜ ಶ್ರೀನಾಥ್.

ವಿದ್ಯಾವಿಜಯ್ ಅವರು ಸಹ “ಮನಸು ಜಾರಿದೆ” ಆಲ್ಬಂ ಸಾಂಗ್ ಕುರಿತು ಹಾಗೂ VIDIS ಎಂಟರ್ಟೈನ್ಮೆಂಟ್ ಮೂಲಕ ಆಯೋಜಿಸಲಾಗಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆದ ಈ ಸಮಾರಂಭದಲ್ಲಿ ಮಕ್ಕಳಿಗಾಗಿ ದೇಸಿಶೈಲಿಯ “ದೇಸಿ ನಡಿಗೆ” ಎಂಬ ಫ್ಯಾಶನ್ ಶೋ ಕೂಡ ಆಯೋಜಿಸಲಾಗಿತ್ತು.

Categories
ಸಿನಿ ಸುದ್ದಿ

ಭೂತಾತ್ಮನಿಗೆ ಸಾಥ್ ಕೊಟ್ಟ ಧ್ರುವ ಸರ್ಜಾ: ಕೋಮಲ್ ಚಿತ್ರದ ಟೀಸರ್ ಬಂತು

ಸಹಜ ಅಭಿನಯದ ಮೂಲಕ ಜನರ ಮನ ಗೆದ್ದಿರುವ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ನಮೋ ಭೂತಾತ್ಮ 2 ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟ ಧ್ರುವ ಸರ್ಜಾ ಟೀಸರ್ ಬಿಡುಗಡೆ ಮಾಡಿದರು.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ, ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಬಿಡುಗಡೆಗೂ ಕಾಯುತ್ತಿದ್ದೇನೆ. ಮುರಳಿ ಮಾಸ್ಟರ್ ಸಹ ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. “ನಮೋ ಭೂತಾತ್ಮ 2” ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.

ನಾನು ನಿರ್ಮಿಸಿ, ನಟಿಸಿದ್ದ, ಮುರಳಿ ಮಾಸ್ಟರ್ ನಿರ್ದೇಶಿಸಿದ್ದ “ನಮೋ ಭೂತಾತ್ಮ” ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ ಈ “ನಮೋ ಭೂತಾತ್ಮ ೨” ಚಿತ್ರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿದೆ‌. ಮೊದಲಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು.

2014 ರಲ್ಲಿ ನನಗೆ ಕೋಮಲ್ ಅವರು “ನಮೋ ಭೂತಾತ್ಮ” ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ “ನಮೋ ಭೂತಾತ್ಮ 2” ಚಿತ್ರದಲ್ಲಿ ಅವರ ಜೊತೆ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೋನ ಸಮಯದಲ್ಲೇ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡಿದ್ದೆ. ಆನಂತರ ಕೋಮಲ್ ಅವರಿಗೆ ನಾನು ಹಾಗೂ ಸಂತೋಷ್ ಹೋಗಿ ಈ ಚಿತ್ರದ ಕಥೆ ಹೇಳಿದ್ದೆವು. ಕೋಮಲ್ ಅವರು ನಟಿಸಲು ಒಪ್ಪಿದರು.

ಚಿತ್ರಕ್ಕೆ “ನಮೋ ಭೂತಾತ್ಮ 2” ಎಂದು ಹೆಸರಿಟ್ಟೆವು. ನನ್ನ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಮುರಳಿ.

ನಾಯಕಿ ಲೇಖಾ ಚಂದ್ರ, ಚಿತ್ರದಲ್ಲಿ ನಟಿಸಿರುವ ಜಿ.ಜಿ, ಮೋನಿಕಾ, ವರುಣ್ ರಾಜ್ ಹಾಗೂ ಚಿತ್ರದ ನಿರ್ಮಾಪಕ ಸಂತೋಷ್ ಶೇಖರ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರಾಗಿಣಿಯ ಶೀಲ ಬಿಡುಗಡೆಗೆ ರೆಡಿ

ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಶೀಲ” ಚಿತ್ರ ಜುಲೈ ತಿಂಗಳ ಕೊನೆಗೆ ತೆರೆ ಕಾಣಲಿದೆ. ಚಿತ್ರ ಕನ್ನಡ ಹಾಗೂ ಮಲೆಯಾಳಂನಲ್ಲಿ ನಿರ್ಮಾಣವಾಗಿದೆ

“ಶೀಲ” ಮಹಿಳಾ ಪ್ರಧಾನ ಚಿತ್ರ ಎಂದು ಮಾತು ಆರಂಭಿಸಿದ ರಾಗಿಣಿ ದ್ವಿವೇದಿ, ಪ್ರಸ್ತುತ ಹೆಣ್ಣು ಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಿದ್ದೇವೆ.

ಹೆಣ್ಣು ಲಕ್ಷ್ಮೀ ಸ್ವರೂಪಳು ಹೌದು. ಕಾಳಿ ಸ್ವರೂಪಳು ಹೌದು. ನಿರ್ದೇಶಕ ಬಾಲು ನಾರಾಯಣನ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.
ಕೇರಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲೂ ಚಿತ್ರೀಕರಣವಾಗಿದೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾನು ಮೂಲತಃ ಉದ್ಯಮಿ. ಕಳೆದ ಮೂವತ್ತೈದು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇವೆ‌. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಕಥೆ ಚೆನ್ನಾಗಿದೆ . ಜುಲೈ ತಿಂಗಳ ಕೊನೆಯವಾರದಲ್ಲಿ ಬಿಡುಗಡೆ ಮಾಡುತ್ತೇವೆ. ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಡಿ.ಎಂ.ಪಿಳ್ಳೈ.

ಬಾಲು ನಾರಾಯಣನ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ
ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರಿದ್ದಾರೆ‌.

Categories
ಸಿನಿ ಸುದ್ದಿ

ಕೃಷ್ಣಂ ಪ್ರಣಯ ಸಖಿ: ಇದು ಗೋಲ್ಡನ್ ಚಿತ್ರ: ಗಣೇಶ್ ಹುಟ್ದಬ್ಬಕ್ಕೆ ಬಂತು ಫಸ್ಟ್ ಲುಕ್

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ” ಕೃಷ್ಣಂ ಪ್ರಣಯ ಸಖಿ”. ಗಣೇಶ್ ನಾಯಕರಾಗಿ ನಟಿಸುತ್ತಿರುವ 41 ನೇ ಚಿತ್ರವಿದು‌. ಕನ್ನಡದ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿಸುತ್ತಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ.

ಜುಲೈ 2, ನಾಯಕ ಗಣೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು.

ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ದೃಶ್ಯರೂಪಕ್ಕೆ ಬಂದ ಹರಿದಾಸ ಶ್ರೀ ಪ್ರಸನ್ನ ವೆಂಕಟದಾಸರ ಚರಿತ್ರೆ

ಈ ಹಿಂದೆ ಶ್ರೀಜಗನ್ನಾಥದಾಸರು ಎಂಬ ಚಿತ್ರ ನಿರ್ಮಾಣ ಮಾಡಿ, ನಿರ್ದೇಶಿಸಿದ್ದ ಮಧುಸೂದನ್ ಹವಾಲ್ದಾರ್, ಈಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಶ್ರೀಪ್ರಸನ್ನವೆಂಕಟದಾಸರ ಕುರಿತಾದ ಚಿತ್ರವನ್ನು ಮಾತಾಂಬುಜ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರ ಜುಲೈ 7 ರಂದು ಬಿಡುಗಡೆಯಾಗಲಿದೆ‌.

ಪ್ರಸನ್ನ ವೆಂಕಟದಾಸರ ವಂಶಸ್ಥರು ಹಾಗೂ ಜನಪ್ರಿಯ ಬರಹಗಾರರು ಆದ ರೇಖಾ ಕಾಖಂಡಕಿ ಅವರು ಬರೆದಿರುವ ಶ್ರೀ ಪ್ರಸನ್ನವೆಂಕಟದಾಸರ ಕುರಿತಾದ ಪುಸ್ತಕವನ್ನು ಆಧರಿಸಿ ಈ ಚಿತ್ರ ಮಾಡಿದ್ದೇನೆ‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರೇಖಾ ಕಾಖಂಡಕಿ ಅವರೆ ಬರೆದಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ಜಗನ್ನಾಥದಾಸರು ಸಿನಿಮಾ ನೋಡಿದ ರೇಖಾ ಕಾಖಂಡಕಿ ಹಾಗೂ ಅವರ ಪತಿ ಸುಭಾಷ್ ಕಾಖಂಡಕಿ ಪ್ರಸನ್ನವೆಂಕಟದಾಸರ ಪುಸ್ತಕ ನೀಡಿ, ಸಿನಿಮಾ ಮಾಡಲು ಹೇಳಿದರು. ಸಿಂಗಾಪುರದಲ್ಲಿ ವಾಸವಾಗಿರುವ ಸುಧಾ ಸ್ವಾಮಿರಾವ್ ದೇಸಾಯಿ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಲು ಮುಂದಾದರು. ಪ್ರಭಂಜನ ದೇಶಪಾಂಡೆ ಪ್ರಸನ್ನವೆಂಕಟದಾಸರ ಪಾತ್ರ ನಿರ್ವಹಿಸಿದ್ದಾರೆ‌. ಸಾಕಷ್ಟು ಹೊಸ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ‌. ಜುಲೈ 7 ನಮ್ಮ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ರೇಖಾ ಕಾಖಂಡಕಿ ಹಾಗೂ ಸುಭಾಷ್ ಕಾಖಂಡಕಿ ಮಾತಾನಾಡಿ ಮಧುಸೂದನ್ ಹವಾಲ್ದಾರ್ “ಪ್ರಸನ್ನವೆಂಕಟದಾಸರು” ಚಿತ್ರವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ಎಂದರು.

ಪ್ರಮುಖ ಪಾತ್ರಧಾರಿ ಪ್ರಭಂಜನ ದೇಶಪಾಂಡೆ ಚಿತ್ರೀಕರಣ ಮಾಡುತ್ತಿರುವಾಗ ತಮ್ಮಗಾದ ಅನುಭವ ಹೇಳಿಕೊಂಡರು. ಚಿತ್ರದಲ್ಲಿ ನಟಿಸಿರುವ ವಿಜಯಾನಂದ ನಾಯಕ್, ವಿಷ್ಣುತೀರ್ಥ ಜೋಶಿ, ದೇವರಥ ಜೋಶಿ, ಲಕ್ಷ್ಮೀ, ಲೀಲಾ ಅನಿಲಾಚಾರ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಛಾಯಾಗ್ರಹಕ ನಾಗರಾಜ್, ಸಂಕಲನಕಾರ ದೊರೈರಾಜ್, ವಿತರಕ ಆಟೋ ರಾಜು ಹಾಗೂ ಸಹ ನಿರ್ದೇಶಕರಾದ ಸಾವಂತ್ – ಬಾಬಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!