ದೃಶ್ಯರೂಪಕ್ಕೆ ಬಂದ ಹರಿದಾಸ ಶ್ರೀ ಪ್ರಸನ್ನ ವೆಂಕಟದಾಸರ ಚರಿತ್ರೆ

ಈ ಹಿಂದೆ ಶ್ರೀಜಗನ್ನಾಥದಾಸರು ಎಂಬ ಚಿತ್ರ ನಿರ್ಮಾಣ ಮಾಡಿ, ನಿರ್ದೇಶಿಸಿದ್ದ ಮಧುಸೂದನ್ ಹವಾಲ್ದಾರ್, ಈಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಶ್ರೀಪ್ರಸನ್ನವೆಂಕಟದಾಸರ ಕುರಿತಾದ ಚಿತ್ರವನ್ನು ಮಾತಾಂಬುಜ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರ ಜುಲೈ 7 ರಂದು ಬಿಡುಗಡೆಯಾಗಲಿದೆ‌.

ಪ್ರಸನ್ನ ವೆಂಕಟದಾಸರ ವಂಶಸ್ಥರು ಹಾಗೂ ಜನಪ್ರಿಯ ಬರಹಗಾರರು ಆದ ರೇಖಾ ಕಾಖಂಡಕಿ ಅವರು ಬರೆದಿರುವ ಶ್ರೀ ಪ್ರಸನ್ನವೆಂಕಟದಾಸರ ಕುರಿತಾದ ಪುಸ್ತಕವನ್ನು ಆಧರಿಸಿ ಈ ಚಿತ್ರ ಮಾಡಿದ್ದೇನೆ‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರೇಖಾ ಕಾಖಂಡಕಿ ಅವರೆ ಬರೆದಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ಜಗನ್ನಾಥದಾಸರು ಸಿನಿಮಾ ನೋಡಿದ ರೇಖಾ ಕಾಖಂಡಕಿ ಹಾಗೂ ಅವರ ಪತಿ ಸುಭಾಷ್ ಕಾಖಂಡಕಿ ಪ್ರಸನ್ನವೆಂಕಟದಾಸರ ಪುಸ್ತಕ ನೀಡಿ, ಸಿನಿಮಾ ಮಾಡಲು ಹೇಳಿದರು. ಸಿಂಗಾಪುರದಲ್ಲಿ ವಾಸವಾಗಿರುವ ಸುಧಾ ಸ್ವಾಮಿರಾವ್ ದೇಸಾಯಿ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಲು ಮುಂದಾದರು. ಪ್ರಭಂಜನ ದೇಶಪಾಂಡೆ ಪ್ರಸನ್ನವೆಂಕಟದಾಸರ ಪಾತ್ರ ನಿರ್ವಹಿಸಿದ್ದಾರೆ‌. ಸಾಕಷ್ಟು ಹೊಸ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ‌. ಜುಲೈ 7 ನಮ್ಮ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ರೇಖಾ ಕಾಖಂಡಕಿ ಹಾಗೂ ಸುಭಾಷ್ ಕಾಖಂಡಕಿ ಮಾತಾನಾಡಿ ಮಧುಸೂದನ್ ಹವಾಲ್ದಾರ್ “ಪ್ರಸನ್ನವೆಂಕಟದಾಸರು” ಚಿತ್ರವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ಎಂದರು.

ಪ್ರಮುಖ ಪಾತ್ರಧಾರಿ ಪ್ರಭಂಜನ ದೇಶಪಾಂಡೆ ಚಿತ್ರೀಕರಣ ಮಾಡುತ್ತಿರುವಾಗ ತಮ್ಮಗಾದ ಅನುಭವ ಹೇಳಿಕೊಂಡರು. ಚಿತ್ರದಲ್ಲಿ ನಟಿಸಿರುವ ವಿಜಯಾನಂದ ನಾಯಕ್, ವಿಷ್ಣುತೀರ್ಥ ಜೋಶಿ, ದೇವರಥ ಜೋಶಿ, ಲಕ್ಷ್ಮೀ, ಲೀಲಾ ಅನಿಲಾಚಾರ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಛಾಯಾಗ್ರಹಕ ನಾಗರಾಜ್, ಸಂಕಲನಕಾರ ದೊರೈರಾಜ್, ವಿತರಕ ಆಟೋ ರಾಜು ಹಾಗೂ ಸಹ ನಿರ್ದೇಶಕರಾದ ಸಾವಂತ್ – ಬಾಬಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

error: Content is protected !!