ಯುವ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗಾಗಲೇ ಜೋರು ಸುದ್ದಿಯಾಗುತ್ತಿದ್ದು, ಸಿನೆಮಾದ ಮೊದಲ ಟೀಸರ್ ರಿಲೀಸ್ ಗೆ ನಿರ್ದೇಶಕ ಜೋಗಿ ಪ್ರೇಮ್ ಬುಧವಾರ ಸಂಜೆ 5 ಕ್ಕೆ ಚಾಲನೆ ನೀಡುತ್ತಿದ್ದಾರೆ. ಶಿವಕುಮಾರ್
ನಿರ್ಮಾಣದ ಈ ಚಿತ್ರಕ್ಕೆ ಶರತ್ ಕುಮಾರ್ , ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು, ಸೆಲ್ವ ರಾಜ್ ಸಹ ನಿರ್ಮಾಣವಿದೆ. ಕೊಡಲಿದ್ದಾರೆ. ನವೀನ್ ಪೂಜಾರಿ ಕಥೆ ಬರೆದರೆ, ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಇದೆ. ಮಾನಸ ಹೊಳ್ಳ ಸಂಗೀತವಿದೆ. ಸಂತೋಷ ಆಚಾರ್ಯ ಛಾಯಾಗ್ರಹಣವಿದೆ. ಗಣೇಶ್ ನೀರ್ಜಾಲ್ ಸಂಕಲನವಿದೆ.
Category: ಸಿನಿ ಸುದ್ದಿ
ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ ಲಗ್ನ ಪತ್ರಿಕೆ ಹಂಚೋಕೆ ರೆಡಿಯಾಗಿದ್ದಾರೆ!
ಅರೇ, ಹೀಗಂದಾಕ್ಷಣ ಮತ್ತೊಂದು ಮದ್ವೆಗೆ ಏನಾದರೂ ಅವರು ತಯಾರಿ ನಡೆಸಿದ್ದಾರಾ ಅನ್ನೋ ಪ್ರಶ್ನೆ ಸಹಜ. ಆದರೆ, ಅವರು ಹೊಸ ಮದ್ವೆ ಆಗ್ತಾ ಇಲ್ಲ, ಬದಲಾಗಿ ಮದ್ವೆಗೆ ಸಂಬಂಧಿಸಿದ ಹೊಸ ಬಗೆಯ ಕಥೆ ಹೆಣೆದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರವಿಂದ್ ಕೌಶಿಕ್ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ ಫುಲ್ ಸ್ಟೋರಿ ಮೂಲಕ ರಂಜಿಸಲು ತಮ್ಮ ತಂಡದೊಂದಿಗೆ ತಯಾರಾಗಿದ್ದಾರೆ.
ಬರೀ ರಿಮೇಕ್ ಹಾವಳಿ ಇರುವ ಈ ದಿನಮಾನದಲ್ಲೂ ಅವರು ದೇಸಿ ಸೊಗಡಿನ ಪಕ್ಕಾ ನಮ್ಮತನ ಇರುವ ಸ್ವಂಥದ್ದೊಂದು ಕಥೆ ಹೆಣೆದು ಧಾರಾವಾಹಿ ಮೂಲಕ ಮನೆ ಮಂದಿಯ ಮನ ತಣಿಸಲು ಹೊರಟಿದ್ದಾರೆ.
ಈ ಧಾರಾವಾಹಿ ಮೂಲಕ ಅಪ್ಪಟ ಕನ್ನಡದ ಪ್ರತಿಭಾವಂತರನ್ನ ಹಾಗೂ ಕ್ರಿಯಾಶೀಲ ಬರಹಗಾರರಿರುವ ತಂಡ ಕಟ್ಟಿಕೊಂಡು ಹೊಸ ಸವಿರುಚಿ ಉಣಬಡಿಸುವ ಉತ್ಸಾಹದಲ್ಲಿದ್ದಾರೆ.
ಅವರ ನಿರ್ದೇಶನದ ‘ಲಗ್ನಪತ್ರಿಕೆ’ ಧಾರಾವಾಹಿಯಲ್ಲಿ
ಸುಂದರ್ ಮತ್ತು ನವೀನ್ ಸಾಗರ್ ಕೈ ಜೋಡಿಸಿದ್ದಾರೆ. ಅವರ ಜೊತೆ ಅರವಿಂದ್ ಕೂಡ ಕಥೆ, ಚಿತ್ರಕಥೆಯಲ್ಲಿ ನಿರತರಾಗಿದ್ದಾರೆ.
ಕ್ರಿಯಾಶೀಲ ಬರಹಗಾರ ನವೀನ್ ಸಾಗರ್ ಲಗ್ನ ಪತ್ರಿಕೆಗೆ ಮಾತುಗಳನ್ನು ಪೋಣಿಸುತ್ತಿರುವುದು ವಿಶೇಷ.
ಅರವಿಂದ್ ಕೌಶಿಕ್ ಅವರ ಲಗ್ನ ಪತ್ರಿಕೆ ಸಂಭ್ರಮಕ್ಕೆ ಕಲಾವಿದರಾದ ಸುಂದರ್,ರವಿ ಭಟ್, ರೇಣುಕ,ಮರೀನಾ ತಾರಾ ,ಜ್ಯೋತಿ ,ಕುಲ್ದೀಪ್ ,ಸುಪ್ರಿಯಾ,ದರ್ಶನ್ ಸೂರ್ಯ , ಸಂಜನಾ ಬುರ್ಲಿ , ಸೂರಜ್ ಹೂಗಾರ್ ಸಾಕ್ಷಿಯಾಗಲಿದ್ದಾರೆ.
ಮನೋಹರ್ ಯಾಪ್ಲರ್, ಕ್ಯಾಮೆರಾ ಹಿಡಿದರೆ, ಗಣಪತಿ ಭಟ್ ಸಂಕಲನವಿದೆ. ಸಂಗೀತ ಅರ್ಜುನ್ ರಾಮು ಸಂಗೀತವಿದೆ. ಗಣೇಶ್ ಕಾರಂತ್ , ಸ್ಪರ್ಶಾ ಹಾಡಿದ್ದಾರೆ. ಸಹ ನಿರ್ದೇಶಕ ಸುರೇಶ್ ಕುಣಿಗಲ್ ಸಾಥ್ ನೀಡಿದ್ದಾರೆ. ಕುಲ್ದೀಪ್ ಹಾಗು ಚೇತನ್ ನಿರ್ಮಾಣ ಕೆಲಸದ ಉಸ್ತುವಾರಿ ಹೊತ್ತಿದ್ದಾರೆ.
ಅಂತೂ ಲಾಕ್ ಡೌನ್ ಆಗಿ ಬೇಸತ್ತಿದ್ದ ಮನೆ ಮಂದಿ ಒಂದೊಳ್ಳೆಯ ಮದುವೆ ಊಟದಷ್ಟು ರುಚಿ ಈ ಧಾರಾವಾಹಿಯಿಂದ ನಿರೀಕ್ಷಿಸಬಹುದು.

ಅರವಿಂದ್ ಕೌಶಿಕ್
ಅಕ್ಕ – ತಂಗಿಯರೆಂದರೆ ಹೀಗಿರಬೇಕು!
ಸ್ಟಾರ್ ಸಿಸ್ಟರ್
ನೇಹಾ- ಸೋನು ಆತ್ಮೀಯತೆಯ ಆಟ

ಚೆಂದನವನಲ್ಲಿ ಮಿಂಚುತ್ತಿರುವ ಸ್ಟಾರ್ ಸಿಸ್ಟರ್ ಪೈಕಿ ನೇಹಾ ಮತ್ತು ಸೋನು ಕೂಡ ಇದ್ದಾರೆ. ಇವ್ರು ಚಿತ್ರ ರಂಗದ ಹೆಸರಾಂತ ಮೆಕಪ್ ಕಲಾವಿದ ರಾಮಕೃಷ್ಣ ಅವರ ಪುತ್ರಿಯರು ಎನ್ನುವುದು ಬಣ್ಣದ ಲೋಕಕ್ಕೆ ಗೊತ್ತಿರುವ ಸಂಗತಿ. ಅದೃಷವೇ ಎನ್ನುವಂತೆ ಇಬ್ಬರು ಈಗ ಕಲರ್ಫುಲ್ ದುನಿಯಾ ಸ್ಟಾರ್ ಸಹೋದರಿಯರು.

ನೇಹಾ ಸೀರಿಯಲ್ ಜಗತ್ತಿನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದರೆ, ಸೋನು ತಾನೇನುಕಮ್ಮಿಇಲ್ಲ ಅಂತ ಸಿನಿಮಾರಂಗದ ಬಹುಬೇಡಿಕೆ ನಟಿಆಗಿದ್ದಾರೆ. ಇಬ್ಬರು ಈಗಬಿಡುವಿಲ್ಲದ. ಬ್ಯುಸಿನಟಿಯರು.ಈಗ ಕೊರೋನಾಕಾರಣ ಚಿತ್ರೀಕರಣ ಇಲ್ಲದೆ ಮನೆಯಲ್ಲಿ ಕುಳಿತಿರುವ ನೇಹಾ ಮತ್ತು ಸೋನು, ಪುಟಾಣಿಗಳ ಹಾಗೆ ತಮ್ಮ ಅನನ್ಯ ಪ್ರೀತಿಗೆ, ಒಡನಾಟಕ್ಕೆ, ಆತ್ಮೀಯತೆಗೆ ಸಾಕ್ಷಿಯಾಗುವಂತೆ ಕ್ಯಾಮರಾಕ್ಕೆ ಪೋಸು ನೀಡಿದ್ದಾರೆ.

ಗುಂಡು ಮಕ್ಕಳಿಲ್ಲದ ಮೆಕಪ್ ಕಲಾವಿದ ರಾಮಕೃಷ್ಣ ಅವರಿಗೆ ಇವರೇ ಮುದ್ದಿನ ಗಂಡುಮಕ್ಕಳು.ಅಪ್ಪ-ಅಮ್ಮನ ಮುದ್ದಿನಸಹೋದರಿಯರು. ಬೇಡಿಕೆಯ ನಟಿಯರಾದರೂ, ಕಿಂಚಿತ್ತು ಜಂಬ ಅವರಲಿಲ್ಲ.ಸರಳ- ಸಜ್ಜನಿಕೆಯೇ ಅವರ ಆಸ್ತಿ. ಹಾಗೆ ಸುಮ್ಮನೆ ಸ್ಟಾರ್ ಸಿಸ್ಟರ್ ಕ್ಯಾಮರಾ ಕ್ಕೆ ಪೋಸು ನೀಡಿರುವ ರೀತಿ ನೋಡಿದರೆ, ಇತರೆಯವರಿಗೂ ಮಾದರಿ…
ಅಪ್ಪು ʼಮಾರ್ಗʼದರ್ಶನ
ಆ ದಿನಗಳು ಖ್ಯಾತಿಯ ಚೇತನ್ ಅಭಿನಯದ ಹೊಸ ಚಿತ್ರ ಮಾರ್ಗ ಇತ್ತೀಚೆಗೆ ಮುಹೂರ್ತ ಕಂಡಿದೆ. ಚಿತ್ರತಂಡಕ್ಕೆ ಪುನೀತ್ ರಾಜಕುಮಾರ್ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚೇತನ್ ಜೊತೆ ಅಪ್ಪು ಮಾತುಕತೆ ಜೋರಾಗಿಯೇ ನಡೆದಿದೆ. ಒಂದಷ್ಟು ಹೊಸ ಮಾರ್ಗದರ್ಶನ ಕೊಟ್ಟ ಪುನೀತ್, ಚೇತನ್ ಹಾಗೂ ಇತರೆ ಕನ್ನಡ ನಟರ ಜೊತೆ ಅಪ್ತ ಮಾತುಕತೆ ನಡೆಸಿದರು. ಅಂದಿನ ಫೋಟೋ ಮಾತುಕತೆ…

ಬಯೋಫಿಕ್ ಬರೆಯುತ್ತಿದ್ದಾರೆ ಸೈಫ್ ಅಲಿಖಾನ್!

ಸಾಧಕರ ಆತ್ಮಕತೆಗಳಿಗೂ ಬಾಲಿವುಡ್ ಹತ್ತಿರದ ನಂಟು. ಯಾಕಂದ್ರೆ ಸಾಧಕರ ಬಯೋಫಿಕ್ ಆಧರಿಸಿ ಸಿನಿಮಾ ಮಾಡುವುದು ಅಲ್ಲಿನ ಪ್ಯಾಷನ್. ಹಾಗೆಯೇ ಅದಕ್ಕಲ್ಲಿ ದೊಡ್ಡ ಮಾರ್ಕೆಟ್ ಕೂಡ ಇದೆ. ಹಲವು ಸಿನಿಮಾಗಳಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು ಸಾಕ್ಷಿ. ಅಲ್ಲಿನ ಸದ್ಯದ ಪರಿಸ್ಥಿತಿ ಹೀಗಿರುವಾಗಲೇ ನಟ , ನಿರ್ಮಾಪಕ ಸೈಪ್ ಅಲಿಖಾನ್ ತಮ್ಮದೇ ಬಯೋಫಿಕ್ ಬರೆಯುವುದಾಗಿ ಹೇಳಿದ್ದಾರೆ.

ಈಗಾಗಲೇ ಚಿತ್ರೋದ್ಯಮದಲ್ಲಿ೨೫ ವರ್ಷ ಗಳಿಂದ ವಿವಿಧ ಪಾತ್ರ, ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ನಟಿ ಸೈಪ್, ನಟಿ ಕರೀನಾ ಕೈ ಹಿಡಿಯುವ ಮೂಲಕದೊಡ್ಡ ಸುದ್ದಿ ಯಾಗಿದ್ದು ಅವರ ಸಿನಿ ಜರ್ನಿ ಯ ಇನ್ನೊಂದು ಘಟ್ಟ. ಅಷ್ಟು ಮಾತ್ರವೇ ಅಲ್ಲ, ನಟನಾಗಿ ಸೋಲು- ಗೆಲವು ಕಂಡಿದ್ದಾರೆ.
ಅಗರ್ಭ ಶ್ರೀಮಂತಿಕೆ ಇದ್ದರೂ, ನಟನಾಗಿ ನಿರೀಕ್ಷೆ ಯಷ್ಟು ಮಿಂಚಲು ಆಗಿಲ್ಲ. ಅವೆಲ್ಲವನ್ನೂ ಈಗ ತಮ್ಮ ಆತ್ಮ ಚರಿತ್ರೆಯ ಲ್ಲಿ ತೆರೆದಿಡಲಿದ್ದಾರಂತ. ಹಾಗಂತ ಬಯೋಫಿಕ್ ಬರೆಯುವುದು ಅದ್ಬುತ ಅಂತ ಅವರು ಭಾವಿಸಿಲ್ಲ. ಅದೊಂದು ಸ್ವಾರ್ಥದ ಹೊತ್ತಿಕೆ ಆಗುವುದು ಅನ್ನುವ ಅರಿವು ಕೂಡ ಅವರಿಗಿದೆ.
ಅದೇ ವೇಳೆ, ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಅವರದು. ಹಾಗಾಗಿಯೇ ಬಯೋಫಿಕ್ ಬರೆಯುವುದಕ್ಕೆ ಶುರು ಮಾಡಿದ್ದೇನೆ ಎನ್ನುತ್ತಾರೆ ನವಾಬ್ ಸೈಪ್ ಅಲಿಖಾನ್. ಹಲವು ಸಂಗತಿಗಳು ಬದಲಾಗುತ್ತವೆ. ಅವು ಗಳನ್ನು ನೆನಪಿಸಿಕೊಳ್ಳುವುದು, ಬರೆಯುವುದು ಒಂಥರ ವಿಶೇಷ ಅನುಭವ ಎನ್ನುವ ಸೈಪ್, ಅಭಿಮಾನಿಗಳಿಗೆ ಅದೆಲ್ಲ ಮೆಚ್ಚುಗೆ ಆಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ . ಸೈಪ್ ಹಾಗೂ ಕರೀನಾ ಜೋಡಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
……….,…………………………

ಕೊರೊನಾ ಆವರಿಸಿದ್ದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಕಳೆದ ಆರು ತಿಂಗಳಿಂದಲೂ ಸಿನಿಮಾ ರಂಗ ರಂಗು ಕಳೆದುಕೊಂಡಿತ್ತು. ಈಗ ಚಿತ್ರಮಂದಿರಗಳು ಶುರುವಾಗುವ ಸೂಚನೆ ಕೊಟ್ಟಿವೆ. ಹೌದು, ಸೆಪ್ಟೆಂಬರ್ 15 ರ ನಂತರ ಥಿಯೇಟರ್ ಓಪನ್ ಆಗಲಿವೆ ಎನ್ನಲಾಗುತ್ತಿದೆ. ಫಿಲ್ಮ್ ಚೇಂಬರ್ ಕೂಡ ಕೇಂದ್ರ ಸರ್ಕಾರ ಹೇಳಿಕೆಯಿಂದ ಉತ್ಸಾಹದಲ್ಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಥಿಯೇಟರ್ ಆರಂಭಗೊಳ್ಳುತ್ತಿದ್ದಂತೆಯೇ ಪ್ರೇಕ್ಷಕರಿಗೆ ದರ್ಶನ ನೀಡಲಿವೆ. ಕಿರುತೆರೆ ಕೂಡ ಚಿತ್ರೀಕರಣ ಶುರು ಮಾಡಿ ತಮ್ಮ ಪ್ರೇಕ್ಷಕ ವಲಯವನ್ನು ಖುಷಿಪಡಿಸುತ್ತಿದೆ. ಸೆಪ್ಟೆಂಬರ್ ನಲ್ಲಿ ಚಿತ್ರರಂಗ ಕೂಡ ತನ್ನ ಕಾರ್ಯ ಶುರು ಮಾಡಲಿದೆ.
ಪುನೀತ್ ರಾಜಕುಮಾರ್ ಅಂದಾಕ್ಷಣ ಎಲ್ಲರ ಕಣ್ಣ ಮುಂದೆ ಹಾದು ಹೋಗೋದು ಸದಾ ಹಸನ್ಮುಖಿ, ಪಾಸಿಟಿವ್ ವ್ತಕ್ತಿತ್ವ , ಯಾವಾಗಲೂ ನೀಟ್ ಶೇವ್ ಮಾಡಿದ ನಗು ಮುಖ. ಅಷ್ಟೇ ಅಲ್ಲ ಪ್ರೀತಿಯ ಮಾತುಕತೆ ಜೊತೆಗೆ ಅಪ್ಪುಗೆ. ಸದ್ಯ ಪುನೀತ್ ಗೆಟಪ್ ಬದಲಾಗಿದೆ. ಅವರೀಗ ಗಡ್ಡ ಬಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾ ಪಾತ್ರಕ್ಕಾಗಿ ಅವರು ದಾಡಿ ಬಿಟ್ಟಿದ್ದುಂಟು. ಆದರೆ, ಈಗ ಯಾವ ಚಿತ್ರದ ಚಿತ್ರೀಕರಣ ಯಾವುದೂ ಇಲ್ಲ. ಆದರೂ ಅಪ್ಪು ಹೀಗೆ ದಾಡಿ ಬಿಡೋಕೆ ಕಾರಣ ಬೇರೆ ಇದೆ. ಯುವರತ್ನ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಅವರು ಹೊಸ ಚಿತ್ರಗಳತ್ತವೂ ಗಮನ ಹರಿಸಿದ್ದಾರೆ. ಶಶಾಂಕ್ ಹಾಗೂ ಪವನ್ ಒಡೆಯರ್ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಅದಲ್ಲದೆ ಇನ್ನೂ ಕೈ ತುಂಬಾ ಚಿತ್ರಗಳಿವೆ. ಆ ಚಿತ್ರಗಳ ಪಾತ್ರಕ್ಕಾಗಿ ಅಪ್ಪು ಗಡ್ಡ ಬಿಟ್ಟಿರಬಹುದು. ಅದೇನೆ ಇರಲಿ, ಅಪ್ಪು ಫುಲ್ ಶೇವ್ ಮಾಡ್ಕೊಂಡು ಸದಾ ನಗುಮೊಗದಲ್ಲಿ ನೋಡೋದೆ ಚಂದ. ಅಪ್ಪು ಫ್ಯಾನ್ಸ್ ಮಾತ್ರ ಪವರ್ ಹೇಗಿದ್ರೂ ಸರಿ ಅವರ ಸಿನಿಮಾ ಮೂಲಕ ರಂಜಿಸುತ್ತಿರಬೇಕಷ್ಟೇ ಅಂತ ಯುವರತ್ನನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗಡ್ಡ ಬಿಟ್ಟಿರೋದಕ್ಕೆ ಕಾರಣ ಇಷ್ಟರಲ್ಲೇ ಗೊತ್ತಾಗಲಿದೆ. ಆ ಮೂಲಕ ಅವರು ಬಿಗ್ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯಬೇಕು

ಮತ್ತೊಂದುಆ್ಯಕ್ಷನ್, ಥ್ರಿಲ್ಲರ್ ಸಿನಿಮಾದಲ್ಲಿ ಡೆಡ್ಲಿ

ಡೆಡ್ಲಿ ಆದಿತ್ಯ ಆಭಿನಯದಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ಪ್ರಕಾಶ್ ಹೆಬ್ಬಾಳ್ ನಿರ್ದೇಶನದ ಆ್ಯಕ್ಷನ್, ಥ್ರಿಲ್ಲರ್ ಕಥಾ ಹಂದರ ಸಿನಿಮಾಕ್ಕೆಆದಿತ್ಯ ನಾಯಕರಾಗಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂಸಂಭಾಷಣೆ ಕೆಲಸಗಳೆಲ್ಲ ಮುಗಿದಿದೆ. ಇಷ್ಟರಲ್ಲಿಯೇ ಸಿನಿಮಾಸೆಟ್ಟೇರುವುದು ಖಚಿತವಾಗಿ ದೆ. ಸಿಎಚ್ ಇ ಕಂಬೈನ್ಸ್ ಮೂಲಕನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನುಭವಿ ತಂತ್ರಜ್ಞರೆ ಕೆಲಸ ಮಾಡಲಿದ್ದಾರೆ.



