Categories
ಸಿನಿ ಸುದ್ದಿ

ರಾಜಿಯ ಹಾಡು ಪಾಡು! ರಾಘಣ್ಣನ ಈ ಚಿತ್ರ ಏಪ್ರಿಲ್ 29ಕ್ಕೆ ರಿಲೀಸ್

ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ನಟಿಸಿರುವ “ರಾಜಿ” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.

ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದ ವರ್ಷ ಅಕ್ಟೋಬರ್ 30 ರಂದು ನಿಗದಿಯಾಗಿತ್ತು. ನನ್ನ ತಮ್ಮ ಅಪ್ಪು ಕ್ಲ್ಯಾಪ್ ಮಾಡಲು ಬರಬೇಕಿತ್ತು. ಆದರೆ ಅಕ್ಟೋಬರ್ 29 ಅಪ್ಪು ನಮ್ಮನ್ನು ಬಿಟ್ಟು ದೂರವಾದ. ಒಂದು ನಿಮಿಷ ನನ್ನ ಎದೆ ನಿಂತು. ಮತ್ತೆ ಬಡೆಯಲು ಆರಂಭವಾದ ದಿನವದು. ಆನಂತರ ಕೆಲವು ದಿನಗಳ ನಂತರ ಮುಹೂರ್ತ ನಡೆಯಿತು. ಅದೇ ಕಂಠೀರವ ಸ್ಟುಡಿಯೋದಲ್ಲಿ. ಅಪ್ಪು ಸಮಾಧಿ ಬಳಿ. ಈಗ ಕಾಕತಾಳೀಯವಾಗಿ ಇದೇ 29ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಪ್ಪುವಿನ ಏಳನೇ ತಿಂಗಳ ಪುಣ್ಯತಿಥಿಯಂದು. ಸಿನಿಮಾ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಪ್ರೇಕ್ಷಕರ ಹೇಳುತ್ತಾರೆ ಎಂದರು ರಾಘವೇಂದ್ರ ರಾಜಕುಮಾರ್.

ನಾನು ಇಪ್ಪತ್ತೈದು ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅವರ ಮೇಲಿನ ಗೌರವ ಇಮ್ಮಡಿಯಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. “ರಾಜಿ” ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ ಎಂದು. ಬಸವರಾಜು ಮೈಸೂರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕಿ, ನಟಿ ಪ್ರೀತಿ ಎಸ್ ಬಾಬು ತಿಳಿಸಿದರು.

ಚಿತ್ರದಲ್ಲಿ ಏಳು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಡಾ. ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಉಪಾಸನ ಮೋಹನ್ ತಿಳಿಸಿದರು.

ಚಿತ್ರ ನಿರ್ಮಾಣವಾದ ಬಗ್ಗೆ ಬಸವರಾಜ್ ಮೈಸೂರು ಹಾಗೂ ತಮ್ಮ ಅಭಿನಯದ ಕುರಿತು ಪ್ರತಾಪ್ ಸಿಂಹ ಮಾತನಾಡಿದರು.

ಕಿಟ್ಟಿ, ವಿಜಯ ರಾಘವೇಂದ್ರ, ವಿ.ನಾಗೇಂದ್ರ ಪ್ರಸಾದ್, ಕೆಂಪ್ಪಣ್ಣ ಚೆಟ್ಟಿ, ಮುನಿರಾಜು ರಾಮಯ್ಯ, ತಬಲಾ ನಾಣಿ , ಸಾಗರ್ ಪುರಾಣಿಕ್ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂದ್ರು ಪ್ರೇಮ್ ಧ್ರುವ !? ಏನಿದು ಹೊಸ ವಿಷ್ಯ..? ಮುಹೂರ್ತದ ಇನ್ವಿಟೇಷನ್ ನಲ್ಲೇ ಟೆನ್ಷನ್ ಕೊಟ್ರು ಪ್ರೇಮ್ ..!!!

ಜೋಗಿ ಪ್ರೇಮ್ ನಿರ್ದೇಶನದ, ಧ್ರುವಾ ಸರ್ಜಾ ಅಭಿನಯದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರದ, ಮುಹೂರ್ತ ಏಪ್ರಿಲ್ 24ಕ್ಕೆ ನಡೆಯಲಿದೆ.
ಇದಕ್ಕೆ ನಿರ್ದೇಶಕ‌ ಪ್ರೇಮ್ ತಮ್ಮದೇ ಸ್ಟೈಲಲ್ಲಿ ಇನ್ವಿಟೇಷನ್ ಡಿಸೈನ್ ಮಾಡಿ, ಪ್ರೇಕ್ಷಕರ ತಲೆಗೆ ಹುಳ‌ ಬಿಟ್ಟಿದ್ದಾರೆ.

ಇದರಲ್ಲಿ 1970 ಇಸವಿ, ಡೆಲ್ಲಿ ಗೇಟ್ ಮಾದರಿಯ ಗೇಟ್ , ಗನ್ ಹಿಡಿದು ನಿಂತಿರೋ ವ್ಯಕ್ತಿ, ಹೀಗೆ ರೆಟ್ರೋ‌ ಸ್ಟೈಲಲ್ಲಿ ಪ್ರೇಮ್ ಪೋಸ್ಟರ್ ಬಿಟ್ಟಿದ್ದಾರೆ. ಜೊತೆಗೆ ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತ ಬರೆದು ಅಡಿ ಬರಹದಲ್ಲಿ ಇದು ನೈಜ ಘಟನೆಯನ್ನಾಧರಿಸಿದ ಕಥೆ ಅನ್ನೋದನ್ನ ಹೇಳಿದ್ದಾರೆ.

Categories
ಸಿನಿ ಸುದ್ದಿ

ಹೇಮಂತ್ ರಾವ್ ನಿರ್ಮಾಣದಲ್ಲಿ ಅಜ್ಞಾತವಾಸಿ: ಜನಾರ್ದನ ಚಿಕ್ಕಣ್ಣ ನಿರ್ದೇಶನದ ಚಿತ್ರವದು

“ಗೋಧಿಬಣ್ಣ‌ ಸಾಧಾರಣ ಮೈಕಟ್ಟು” ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, ” ಗುಲ್ಟು ” ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಅಜ್ಞಾತವಾಸಿ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ.

ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು. ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು.
ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ.
ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.‌

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.
“ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ.‌ ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್.

ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ‌. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು.

ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಜಿಮ್ ರವಿ ಎಂಬ ಪುರುಷೋತ್ತಮನ ದರುಶನಕ್ಕೆ ದಿನಗಣನೆ! ಮೇ.6ಕ್ಕೆ ಸಿನಿಮಾ ರಿಲೀಸ್

ಈ ಬಣ್ಣದ ನಂಟೇ ಹಾಗೆ. ಇಲ್ಲಿ ಒಮ್ಮೆಎಂಟ್ರಿಯಾದರೆ ಸಾಕು, ಆ ನಂಟು ಕೊನೆಯವರೆಗೂ ಇರುತ್ತೆ. ಹಾಗೆ ನಂಟು ಉಳಿಸಿಕೊಂಡು ಇಲ್ಲಿಯವರೆಗೂ ಸಕ್ಸಸ್ ಜರ್ನಿ ಮಾಡಿರುವ ಅನೇಕ ನಟರಲ್ಲಿ ಜಿಮ್ ರವಿ ಕೂಡ ಒಬ್ಬರು

ಹೌದು, ಜಿಮ್ ರವಿ ಅಂದಾಕ್ಷಣ ನೆನಪಾಗೋದೆ, ಕಟ್ಟು ಮಸ್ತಾದ ದೇಹ, ಹೀರೋಗಳ ಕೈಯಲ್ಲಿ ಒದೆ ತಿನ್ನುವ ನಟ ನೆನಪಾಗುತ್ತಾರೆ. ಹೌದು, ಅದೇ ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ‌ ಬಣ್ಣದ ಬದುಕಲ್ಲಿ ಮಿಂದೆದ್ದಿರುವುದು ಎಲ್ಲರಿಗೂ ಗೊತ್ತು. ಆ ಅನುಭವ ಅವರನ್ನೀಗ ಹೀರೋ ಆಗಿಯೂ, ನಿರ್ಮಾಪಕರನ್ನಾಗಿಯೂ ಮಾಡಿದೆ.

ಜಿಮ್ ರವಿ ಚೊಚ್ಚಲ ಬಾರಿಗೆ ಹೀರೋ ಆಗಿರುವ ಚಿತ್ರದ ಹೆಸರು “ಪುರುಷೋತ್ತಮ” ಆ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ಸುಮಾರು 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟರಾಗಿ ನಟಿಸಿರುವ ಜಿಮ್ ರವಿ, ಅವರು ಇದೇ ಮೊದಲ ಬಾರಿಗೆ “ಪುರುಷೋತ್ತಮ” ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ .

ಈ ಚಿತ್ರ ಒಂದು ಹೊಸ ವಿಷಯವುಳ್ಳ ಕೌಟುಂಬಿಕ ಚಿತ್ರವಾಗಿದ್ದು ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅನ್ನೋದು ವಿಶೇಷ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ರವಿ ಅವರ ಉದ್ದೇಶ ವಾಗಿದ್ದು ,ಅವರು ಚಿತ್ರಕಥೆಯಲ್ಲಿ ಬಾರಿ ವಿಶ್ವಾಸ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು , ಚಿತ್ರವು ಮೇ 6ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಈ ಹಿಂದೆ ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು ಪುರುಷೋತ್ತಮ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ
ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಟಿ ಅಪೂರ್ವ ಈ ಸಿನಿಮಾಗೆ ನಾಯಕಿ. ಈ ಹಿಂದೆ ಕೃಷ್ಣ ಟಾಕೀಸ್, ‘ವಿಕ್ಟರಿ 2’ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.


ಇನ್ನು ನಿವೇದಿತಾ ಅವರು ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಈ ಹಿಟ್ ಹಾಡುಗಳ ಹಿಂದೆ ಇರೋದು ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್.

ಅದೇನೆ ಇರಲಿ, ಒಂದೊಳ್ಳೆಯ ಕಥೆ ಇರುವ ಪುರುಷೋತ್ತಮ, ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್ಬರವಿ ಅವರ ಕನಸಿನ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಅನ್ನೋದು ಆಶಯ.

Categories
ಸಿನಿ ಸುದ್ದಿ

ಶ್ರೀರಂಗಪಟ್ಟಣದಲ್ಲಿ ಮಾಯಾಮೃಗದ ಓಟ!

ಸಿನಿಮಾ ಪತ್ರಕರ್ತನಾಗಿದ್ಸು ನಟನಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶಕರೂ ಹೌದು ಅವರೀಗ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರು “ಮಾಯಾಮೃಗ” ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

ಎಸ್ ಜಿ ಆರ್ ಫಿಲಂಸ್ ಲಾಂಛನದಲ್ಲಿ ಜಯಲಕ್ಷ್ಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ ಹಾಗೂ ಶಶಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಯತಿರಾಜ್ ಅವರಿಗೆ ನಾಯಕಿಯಾಗಿ ಸೋನು ಸಾಗರ ಅಭಿನಯಿಸುತ್ತಿದ್ದಾರೆ. “ರಂಗಿತರಂಗ” ಅರವಿಂದರಾವ್, ಕುರಿ ರಂಗ, ವಿ ಸಿ ಎನ್ ಮಂಜು,
ಶ್ರೀರಂಗಪಟ್ಟಣ ಮಂಜು, ಸಿಂಚನ, ಮಿಥಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಕಿರಗಂದೂರಲ್ಲಿ ನಿರ್ಮಾಪಕರ ಜೊತೆ ಯಶ್, ಪ್ರಶಾಂತ್ ನೀಲ್

ವಿಜಯ್ ಕಿರಗಂದೂರು ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ “ಕೆ ಜಿ ಎಫ್” ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಅವರು‌ ಕಿರಗಂದೂರಿಗೆ ಭೇಟಿ ನೀಡಿದ್ದಾರೆ. ಕಿರಗಂದೂರು ನಿರ್ಮಾಪಕ ವಿಜಯ್ ಅವರ ಊರು.

ಅಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಮೂವರು, ವಿಜಯ್ ಕಿರಗಂದೂರು ಅವರ ಮನೆಯಲ್ಲೇ‌ ಮಧ್ಯರಾತ್ರಿಯವರೆಗೂ ಕಾಲ ಕಳೆದಿದ್ದಾರೆ. ಅಲ್ಲಿನ ಪರಿಸರವನ್ನು ಕಂಡು ಯಶ್ ಹಾಗೂ ಪ್ರಶಾಂತ್ ನೀಲ್ ಸಂತೋಷಪಟ್ಟಿದ್ದಾರೆ.

Categories
ಸಿನಿ ಸುದ್ದಿ

ದುರ್ಗದ ಕೋಟೆ ಹುಡುಗನ ಹೊಸ ಜರ್ನಿ; ಲಿಖಿತ್‌ ಶೆಟ್ಟಿಗೆ ಆಕ್ಷನ್‌ ಕಟ್ ಹೇಳ್ತಾರೆ ವಿನಾಯಕ…

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಅದರಂತೆಯೇ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಆ ಸಾಲಿಗೆ ಈಗ ಎನ್.‌ ವಿನಾಯಕ ಕೂಡ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ವಿನಾಯಕ ಅವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಎಂಜಿನಿಯರಿಂಗ್‌ ಮುಗಿಸಿರುವ ವಿನಾಯಕ್‌ ಕೋಟೆ ನಾಡಿನ ಹುಡುಗ. ಸಿನಿಮಾ ನಿರ್ದೇಶಕರಾಗಬೇಕು ಅಂತ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ವಿನಾಯಕ ಅವರು, ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಹಲವು ಆಲ್ಬಂ ಸಾಂಗ್‌ ಮತ್ತು ಕಿರುಚಿತ್ರಗಳಿಗೂ ಆಕ್ಷನ್‌ ಕಟ್‌ ಹೇಳಿದ್ದಾರೆ. ಇವರ ಲಾಸ್ಟ್‌ ಸೀನ್‌ ಎಂಬ ಆಲ್ಬಂ ಸಾಂಗ್‌ ನಾಲ್ಕು ಭಾಷೆಯಲ್ಲಿ ರಿಲೀಸ್‌ ಆಗಿ ಪ್ಯಾನ್‌ ಇಂಡಿಯಾ ಸಾಂಗ್‌ ಎಂಬ ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಮಿ.ಬೀಜ ಕಿರುಚಿತ್ರ ಕೂಡ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇವಿಷ್ಟು ಅನುಭವದ ಮೇಲೆ ವಿನಾಯಕ ಅವರು ಇದೀಗ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ.

ಹೌದು, ಈಗಾಗಲೇ ‘ಫ್ಯಾಮಿಲಿ ಪ್ಯಾಕ್’, ‘ಸಂಕಷ್ಟಕರ ಗಣಪತಿ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಹೀರೋ ಲಿಖಿತ್ ಶೆಟ್ಟಿ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ ವಿನಾಯಕ. ತನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ರೊಮ್ಯಾಂಟಿಕ್- ಕಾಮಿಡಿ ಥೀಮ್ ಹೊಂದಿರುವ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ. ಸ್ವತಃ ಲಿಖಿತಿ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸ್ನೇಹಿತನ ಜೊತೆ ಸಹ ನಿರ್ಮಾಪಕರಾಗಿದ್ದ ಲಿಖಿತ್‌ ಶೆಟ್ಟಿ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ.

‘ಸಂಕಷ್ಟ ಕರ ಗಣಪತಿ’ ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿ , ಓ ಟಿ ಟಿಯಲ್ಲಿ ಬಿಡುಗಡೆಯಾಗಿ ಜನ ಮನ್ನಣೆ ಗಳಿಸಿದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಲಿಖಿತ್ ಶೆಟ್ಟಿ, ಇದೀಗ ಕೆ. ಎಮ್. ಚೈತನ್ಯ ನಿರ್ದೇಶನದ ‘ಅಬ್ಬಬ್ಬಾ’ ಸಿನೆಮಾದಲ್ಲಿ ನಟಿಸುತ್ತಿದ್ದು, ಅದು ಮೇ ಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಕಿರಿಕ್ ಕೀರ್ತಿ ನಿರ್ದೇಶನದ ‘ಲವ್ ಮದುವೆ ಇತ್ಯಾದಿ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಎನ್ ವಿನಾಯಕ ಹೇಳಿದ ಕತೆ ಮೆಚ್ಚಿದ ಲಿಖಿತ್ ಶೆಟ್ಟಿ, ನಟನೆ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಜುಲೈ ನಲ್ಲಿ ಶೂಟಿಂಗ್ ಆರಂಭಿಸುವ ಯೋಚನೆಯಲ್ಲೂ ಅವರಿದ್ದಾರೆ. ಇನ್ನು, ಹೊಸ ನಿರ್ದೇಶಕ ಎನ್ ವಿನಾಯಕ ಹಲವಾರು ಕನ್ನಡ ಸಿನೆಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ. ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಕುರಿತು ಇನ್ನಷ್ಟೇ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ದೇಶಕ ವಿನಾಯಕ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಲಹರಿ ಮ್ಯೂಸಿಕ್ ಸಂಸ್ಥೆಗೆ ಗ್ರ್ಯಾಮಿ ಅವಾರ್ಡ್;‌ ರಿಕ್ಕಿಕೇಜ್‌ ಆಲ್ಬಂಗೆ ಸಂದ ಗೌರವ

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಗತಿಸಿವೆ. “ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಅವಾರ್ಡ್ ಬಂದಿದೆ. ರಿಕ್ಕಿ ಕೇಜ್ ಅವರ ಸಂಗೀತ ಸಂಯೋಜನೆಗೆ ಈ ಪ್ರಶಸ್ತಿ ಸಂದಿದೆ.

ಕೇವಲ ಐನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ “ಡಿವೈನ್ ಟೈಡ್ಸ್ ” ಆಲ್ಬಂ ಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಶಸ್ತಿ ಸಮಾರಂಭಕ್ಕೆ ನಾನು ವೀಸಾ ಸಿಗದ ಕಾರಣದಿಂದ ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು , ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ನಾವೆಲ್ಲರೂ ಮನೆಯಿಂದಲೇ ನೋಡಿ ಸಂತಸಪಟ್ಟೆವು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ ಎಂದು ಲಹರಿ ವೇಲು ತಿಳಿಸಿದರು.

ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್ ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ‌ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂ ನಲ್ಲಿದ್ದಾರೆ. ನಾನು ಕನ್ನಡದಲ್ಲಿ “ಆಕ್ಸಿಡೆಂಟ್”, ” ವೆಂಕಟ ಇನ್ ಸಂಕಟ” ಹಾಗೂ “ಕ್ರೇಜಿ ಕುಟುಂಬ” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಆಸಕ್ತಿ ಹೆಚ್ಚು ಎಂದ ರಿಕ್ಕಿಕೇಜ್, ಪ್ರಶಸ್ತಿ ಪಡೆಯಲು ಲಹರಿ ಸಂಸ್ಥೆಯ ಚಂದ್ರು ಅವರೊಂದಿಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡರು. ಹಾಗೂ ಮುಂದೆ ಸಹ ಲಹರಿ ಸಂಸ್ಥೆಯವರೊಂದಿಗೆ ಇರುವುದಾಗಿ ಹೇಳಿದರು.

ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್, ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಇದೇ ಅವರ ಪ್ರೀತಿಗೆ ಸಾಕ್ಷಿ ಎಂದರು ಲಹರಿ ಸಂಸ್ಥೆಯ ಚಂದ್ರು. ರಿಕ್ಕಿಕೇಜ್ ಅವರೊಂದಿಗೆ ಹದಿನೈದು ವರ್ಷಗಳಿಂದ ಜೊತೆಗಿರುವ ವಾಡಿಯಲ್ ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಯುವ ಪ್ರತಿಭೆಯ ಬಂಬೂ ಸವಾರಿಗೆ ಸುನಿ ಕಿಟ್ಟಿ, ವಿನೋದ್‌ ಸಾಥ್…

ಆರ್ಯ ಎನ್.ಮಹೇಶ್ ನಿರ್ದೇಶನದ “ಬಂಬೂ ಸವಾರಿ” ಸಿನಿಮಾ ಮುಹೂರ್ತಕ್ಕೆ ನಿರ್ದೇಶಕ ಸಿಂಪಲ್ ಸುನಿ, ನಟ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಯುವ ಆಗಮಿಸಿ ಪ್ರತಿಭೆಗಳ ಕನಸುಗಳಿಗೆ ಸಾಥ್ ನೀಡಿದರು.

ಸಿಂಪಲ್ ಸುನಿ ಮಾತನಾಡಿ, ಚಿತ್ರದ ಶೀರ್ಷಿಕೆಯಲ್ಲೇ ಪಾಸಿಟಿವ್ ಇದೆ. ಸವಾರಿ ಅನ್ನುವ ಸಿನಿಮಾ ಮೈಲುಗಲ್ಲು ಸಾಧಿಸಿತ್ತು. ಮಹೇಶ್ ಪ್ರಚಲಿತ ವಿದ್ಯಮಾನಗಳ ಮೇಲೆ ಸಿನಿಮಾ ಕಥೆ ಹೇಳ್ತಾರೆ. ವರ್ಧನ್ ಒಳ್ಳೆಯ ಕಲಾವಿದ. ಹೊಸ ತಂಡದಲ್ಲಿ ಇರುವವರಿಗೆ ಎಲ್ಲರಿಗೂ ಶುಭ ಹಾರೈಕೆಗಳು. ಸವಾರಿ ನೂರು ದಿನ ಓಡಲಿ ಎಂದು ಹಾರೈಸಿದರು.

ಶ್ರೀನಗರ ಕಿಟ್ಟಿ, ಮಹೇಶ್ ಮುಂದಿನ ಪ್ರಯತ್ನ. ನಾನು ಜಂಬೂ ಸವಾರಿ ಅಂತಾ ಅಂದುಕೊಂಡಿದ್ದೆ. ಟೈಟಲ್ ಹೇಳಿದ ಮೇಲೆ ಬಂಬೂ ಸವಾರಿ ಅಂತಾ ಗೊತ್ತಾಯ್ತು. ತಂತ್ರಜ್ಞರು, ಕಲಾವಿದರು ಎಲ್ಲರಿಗೂ ಒಳ್ಳೆದಾಲಿ ಎಂದರು.

ವಿನೋದ್ ಪ್ರಭಾಕರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ನಾನು ಕೂಡ ಕಿಟ್ಟಪ್ಪನ ತರಹ ಜಂಬೂ ಸವಾರಿ ಅಂದುಕೊಂಡಿದ್ದೆ. ನವಗ್ರಹ ಮಾಡುವಾಗ ಜಂಬೂ ಸವಾರಿ ಫೇಮಸ್ ಆಗಿತ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಬೆಸ್ಟ್ ವಿಷಸ್ ತಿಳಿಸಿದರು.

ನಿರ್ದೇಶಕ ಕೆ.ಎಂ.ಚೈತನ್ಯ, ಒಳ್ಳೆ ದಿನ ಸಿನಿಮಾ ಆರಂಭಿಸಿದ್ದೀರ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಬಂಬೂ ಸವಾರಿ ಸಿನಿಮಾದಲ್ಲಿ ತಾಂಡವ ರಾಮ, ವರ್ಧನ್, ದೀಪಕ್ ನಟಿಸುತ್ತಿದ್ದಾರೆ. ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕಿಯಾರಾಗಿ ಬಣ್ಣ ಹಚ್ಚಿದ್ದು, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್ ಕಲಾ ಬಳಗದಲ್ಲಿದೆ.

ಹೇಮಂತ್ ಕುಮಾರ್ ಸಂಗೀತ, ಮಂಜು ಛಾಯಾಗ್ರಾಹಣ, ಗಿರೀಶ್ ಕುಮಾರ್ ಕೆ ಸಂಕಲನ, ನಾಗೇಂದ್ರ ಪ್ರಸಾದ್ ಸಿಂಪಲ್ ಸುನಿ, ವಿಜಯ್ ಟಿ ಪಿ ಸಾಹಿತ್ಯ,ವಿದೆ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದಾರೆ. ಬಂಬೂ ಸವಾರಿ ಕಲ್ಟ್ ಜಾನರ್ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಯಲಿದೆ.

Categories
ಸಿನಿ ಸುದ್ದಿ

ನಟ ಚೇತನ್‌ ಚಂದ್ರ ಹುಟ್ಟು ಹಬ್ಬಕ್ಕೊಂದು ಹೊಸ ಚಿತ್ರ! 15ನೇ ಸಿನಿಮಾ ಅನೌನ್ಸ್…

ಕನ್ನಡದಲ್ಲಿ “ಪಿಯುಸಿ’, ‘ರಾಜಧಾನಿ’, ‘ಕುಂಭ ರಾಶಿ’, ʼಜಾತ್ರೆʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಚೇತನ್ ಚಂದ್ರಗೆ ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್ ಡೇ ಪ್ರಯುಕ್ತ 15ನೇ ಅನೌನ್ಸ್ ಆಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ನಿರ್ಮಾಪಕರಾದ ಭಾಮಾ ಹರೀಶ್-ಪ್ರಕಾಶ್ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಚೇತನ್ ಚಂದ್ರ 15ನೇ ಸಿನಿಮಾದ ಫಸ್ಟ್ ಲುಕ್ ನ್ನು ನಿರ್ಮಾಪಕರಾದ ಭಾಮಾ ಹರೀಶ್, ರಂಗಿತರಂಗ ಸಿನಿಮಾ ಖ್ಯಾತಿಯ ಪ್ರಕಾಶ್ ಅಭಿಮಾನಿಗಳ ಸಮ್ಮುಖದಲ್ಲಿಯೇ ಬಿಡುಗಡೆಗೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಚೇತನ್ ಚಂದ್ರ ಕುಟುಂಬಸ್ಥರು ನಮಗೆ ಹಳೆಯ ಪರಿಚಯ. ಅವರ ಎಲ್ಲಾ ಸಿನಿಮಾ ನೋಡುತ್ತಾ ಬಂದಿದ್ದೀನಿ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಮತ್ತು ಯುವ ನಿರ್ದೇಶಕ ಅಗ್ನಿ ಅವರಿಗೆ ಒಳ್ಳೆಯದಾಗಲಿ ಎಂದು ನಿರ್ಮಾಪಕ ಭಾಮಾ ಹರೀಶ್ ಹೇಳಿದರು.

ಪೋಸ್ಟರ್ ತುಂಬಾ ಚೆನ್ನಾಗಿ ಬಂದಿದೆ. ಚೇತನ್ ಹೊಸ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಅದಷ್ಟು ಬೇಗ ಚೇತನ್ ಇನ್ನೊಂದು ಸಿನಿಮಾ ಮಾಡಲಿ ಎಂದು ನಿರ್ಮಾಪಕ ಪ್ರಕಾಶ್ ಹೇಳಿದರು.

ಆಂಕರ್, ಮಾಡೆಲ್ ಹಾಗೂ ಸೀರಿಯಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿರುವ ಯುವ ನಿರ್ದೇಶಕ ಅಗ್ನಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಲವ್ ಕಂ ಆಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ‌ ಮೂಡಿ ಬರಲಿರುವ ಈ ಹೊಸ ಸಿನಿಮಾಗೆ ತ್ರಿಬಲ್ ಸಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ಸದ್ಯದಲ್ಲಿಯೇ ಸಿನಿಮಾದ ಮುಹೂರ್ತ‌ ನೆರವೇರಿಸಲು ಚಿತ್ರತಂಡ ಪ್ಲ್ಯಾನ್ ಹಾಕಿದ್ದು, ಆ ದಿನವೇ ಟೈಟಲ್ ಹಾಗೂ‌ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಂತ್ರಜ್ಞರ ಮಾಹಿತಿ ನೀಡಲಿದೆ.

error: Content is protected !!