ಈ ಬಣ್ಣದ ನಂಟೇ ಹಾಗೆ. ಇಲ್ಲಿ ಒಮ್ಮೆಎಂಟ್ರಿಯಾದರೆ ಸಾಕು, ಆ ನಂಟು ಕೊನೆಯವರೆಗೂ ಇರುತ್ತೆ. ಹಾಗೆ ನಂಟು ಉಳಿಸಿಕೊಂಡು ಇಲ್ಲಿಯವರೆಗೂ ಸಕ್ಸಸ್ ಜರ್ನಿ ಮಾಡಿರುವ ಅನೇಕ ನಟರಲ್ಲಿ ಜಿಮ್ ರವಿ ಕೂಡ ಒಬ್ಬರು
ಹೌದು, ಜಿಮ್ ರವಿ ಅಂದಾಕ್ಷಣ ನೆನಪಾಗೋದೆ, ಕಟ್ಟು ಮಸ್ತಾದ ದೇಹ, ಹೀರೋಗಳ ಕೈಯಲ್ಲಿ ಒದೆ ತಿನ್ನುವ ನಟ ನೆನಪಾಗುತ್ತಾರೆ. ಹೌದು, ಅದೇ ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ ಬಣ್ಣದ ಬದುಕಲ್ಲಿ ಮಿಂದೆದ್ದಿರುವುದು ಎಲ್ಲರಿಗೂ ಗೊತ್ತು. ಆ ಅನುಭವ ಅವರನ್ನೀಗ ಹೀರೋ ಆಗಿಯೂ, ನಿರ್ಮಾಪಕರನ್ನಾಗಿಯೂ ಮಾಡಿದೆ.
ಜಿಮ್ ರವಿ ಚೊಚ್ಚಲ ಬಾರಿಗೆ ಹೀರೋ ಆಗಿರುವ ಚಿತ್ರದ ಹೆಸರು “ಪುರುಷೋತ್ತಮ” ಆ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ಸುಮಾರು 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟರಾಗಿ ನಟಿಸಿರುವ ಜಿಮ್ ರವಿ, ಅವರು ಇದೇ ಮೊದಲ ಬಾರಿಗೆ “ಪುರುಷೋತ್ತಮ” ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ .
ಈ ಚಿತ್ರ ಒಂದು ಹೊಸ ವಿಷಯವುಳ್ಳ ಕೌಟುಂಬಿಕ ಚಿತ್ರವಾಗಿದ್ದು ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅನ್ನೋದು ವಿಶೇಷ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ರವಿ ಅವರ ಉದ್ದೇಶ ವಾಗಿದ್ದು ,ಅವರು ಚಿತ್ರಕಥೆಯಲ್ಲಿ ಬಾರಿ ವಿಶ್ವಾಸ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು , ಚಿತ್ರವು ಮೇ 6ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
ಈ ಹಿಂದೆ ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು ಪುರುಷೋತ್ತಮ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ
ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಟಿ ಅಪೂರ್ವ ಈ ಸಿನಿಮಾಗೆ ನಾಯಕಿ. ಈ ಹಿಂದೆ ಕೃಷ್ಣ ಟಾಕೀಸ್, ‘ವಿಕ್ಟರಿ 2’ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ.
ಇನ್ನು ನಿವೇದಿತಾ ಅವರು ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಈ ಹಿಟ್ ಹಾಡುಗಳ ಹಿಂದೆ ಇರೋದು ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್.
ಅದೇನೆ ಇರಲಿ, ಒಂದೊಳ್ಳೆಯ ಕಥೆ ಇರುವ ಪುರುಷೋತ್ತಮ, ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್ಬರವಿ ಅವರ ಕನಸಿನ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಅನ್ನೋದು ಆಶಯ.