Categories
ಗಾಳಿ ಮಾತು ಸಿನಿ ಸುದ್ದಿ

ಟಕಿಲಾ ನಶೆ ಯಲ್ಲಿ ನಿಖಿತಾ ಸ್ವಾಮಿ !

ನಾಗಚಂದ್ರ ನಿರ್ಮಾಣ ಹಾಗೂ ಪ್ರವೀಣ್‌ ನಾಯಕ್‌ ನಿರ್ದೇಶನದ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಹೀರೋ, ನಿಖಿತಾ ಸ್ವಾಮಿ ಹೀರೋಯಿನ್

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ. ʼವಿದ್ಯಾರ್ಥಿʼ ಹಾಗೂ “ ಮುನಿಯʼ ಹಾಗೂ “ ಜನಧನ್‌ʼ  ಚಿತ್ರಗಳ ನಿರ್ದೇಶನದ ನಂತರವೀಗ ಅವರೇ ಒಂದು ಚಿತ್ರದ  ನಿರ್ಮಾಣಕ್ಕೆ ಮುಂದಾ ಗಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್‌ ನಾಯಕ್‌  ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.  ಅಂದ ಹಾಗೆ ಈ ಜೋಡಿಯ ಚಿತ್ರವೇ “ಟಕಿಲಾʼ.

ಚಿತ್ರದ ಶೀರ್ಷಿಕೆಯೇ  ಇಲ್ಲಿ ವಿಶೇಷ. ಯಾಕಂದ್ರೆ ಟಿಕಿಲಾ ಅಂದ್ರೆ ಒಂದ್ರೀತಿಯ ನಶೆ.ಅದನ್ನಿಲ್ಲಿ ಅವರು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರಂತೆ.  ಈ ತಿಂಗಳ ಅಂತ್ಯದ ಹೊತ್ತಿಗೆ ಸಿನಿಮಾ ಶುರುವಾಗುತ್ತಿದೆ.ಈಗಾಗಲೇ ಈ ಜೋಡಿ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡಿದೆ. ಹಾಗೆಯೇ ನಾಯಕ-ನಾಯಕಿಯನ್ನು ಫೈನಲ್‌ ಮಾಡಿಕೊಂಡಿದೆ. ಯುವ ನಟ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಇಲ್ಲಿ ಜೋಡಿಯಾಗಿದ್ದಾರೆ.

ಇದೊಂದು ಲವ್‌, ಸೆಂಟಿಮೆಂಟ್‌ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅದಕ್ಕೆ ತಕ್ಕಂತೆ ಯಂಗ್‌ ಪೇರ್‌ ಬೇಕಿತ್ತು. ಆದಕ್ಕೆ ಪೂರಕವಾಗಿ ನಾವು ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ  ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಥೆಗೆ ಈ ಜೋಡಿ  ಆಫ್ಟ್‌ ಆಗಿದೆ ಎನ್ನುತ್ತಾರೆ ನಿರ್ಮಾಪಕ ನಾಗಚಂದ್ರ ಮರಡಿಹಳ್ಳಿ.

ಇನ್ನು ಒಬ್ಬ ನಿರ್ದೇಶಕ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ತಾನು ನಿರ್ದೇಶಕರಾಗಿರುವ ಕೆ. ಪ್ರವೀಣ್‌ ನಾಯಕ್‌ ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್‌ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಅದೇ ಅನುಭವದಲ್ಲೀಗ ಟಕಿಲಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹಾಗೆಯೇ ಚಿತ್ರ ತಂಡ ಅನುಭವಿ ತಂತ್ರಜ್ಣರನ್ನೇ ಆಯ್ಕೆ ಮಾಡಿಕೊಂಡಿದೆ.ಪಿ.ಕೆ.ಎಚ್.‌ ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.ಟಾಪ್‌ ಸ್ಟಾರ್‌ ರೇಣು ಸಂಗೀತ ನಿರ್ದೇಶನವಿದೆ. ಗಿರೀಶ್‌ ಸಂಕಲನ ಮಾಡುತ್ತಿದ್ದಾರೆ. ಪ್ರಶಾಂತ್‌ ಕಲೆಯ ಹೊಣೆ ಹೊತ್ತುಕೊಂಡಿದ್ಧಾರೆ. ತಾರಾಗಣದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಅವರೊಂದಿಗೆ  ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ ನಾಯಕ್‌ ಇದ್ದಾರೆ.  ಹಾಗೆಯೇ ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ನಿರ್ಮಾಪಕ ನಾಗಚಂದ್ರ ಹಾಗೂ ನಿರ್ದೇಶಕ ಪ್ರವೀಣ್‌ ನಾಯಕ್‌ ಇದಿಷ್ಟು ಮಾಹಿತಿ ರಿವೀಲ್‌ ಮಾಡಿದೆ.

Categories
ಗಾಳಿ ಮಾತು

ಬಾಳಿ ಬದುಕುವ ಕುರಿತು ಉಪದೇಶ ಕೊಟ್ರು‌‌‌‌ ಈ ನಟಿ ! ಈ ನಟಿ ಈ ಮಾತು ಯಾಕೆ ಹೇಳಿದ್ರು ಗೊತ್ತಾ?

 

ಬಾಳು ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ’

 

 

 

ಇವರು ‘ತರಲೆ ನನ್ಮಕ್ಳು ‘ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಬಂದ ನಟಿ. ಹೆಸರು ಅಂಜನಾ.ಅದು‌ ಯಾಕೋ‌ ಸರಿ ಬರಲಿಲ್ಲ ಅಂತ ನ್ಯೂಮ್ಯಾರಾಲಜಿ ಪ್ರಕಾರ ಸುಕೃತಾ ದೇಶಪಾಂಡೆ ಅಂತ ಹೆಸರು ಬದಲಾಯಿ ಸಿಕೊಂಡರು.‌ಹಾಗಂತ ಕೈ ತುಂಬಾ ಅವಕಾಶ ಪಡೆದು, ರಾತ್ರೋರಾತ್ರಿ ಸ್ಟಾರ್ ಆದ್ರಾ? ಅದು ಇಲ್ಲ.‌ ಹೆಸರು ಬದಲಾದರೂ ಹಣೆ ಬರಹ ಬದಲಾಗಬೇಕಲ್ಲ?ಮೊದಲ‌ಸಿನಿಮಾಕ್ಕೆ‌ಅವರು ನಾಯಕಿ‌ಅಂತ ಆಗಿದ್ದಷ್ಟೇ ಲಾಭ.‌ಅದು ಅಂತಹ ಸಕ್ಸಸ್ ಕಾಣಲಿಲ್ಲ.ಇತ್ತ ಅಂಜನಾ‌ ಅಲಿಯಾಸ್ ಸುಕೃತಾ ಅವರಿಗೂ ಹೆಸರು ತಂದು ಕೊಡಲಿಲ್ಲ. ಅವಕಾಶಗಳೂ ಹುಡುಕಿ ಬರಲಿಲ್ಲ. ಹಾಗಂತ ಅವರಿಗೆ ಬೇರೆಯವರ ಹಾಗೆ ನಟಿಯಾಗಿ ಮಿಂಚುವ ಹುಚ್ಚು, ಕೆಚ್ಚು ಬಿಡಲಿಲ್ಲ. ಅತ್ತ ಮೆಲ್ಲನೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲೂ‌ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಯಾವೊಂದು ಅಲ್ಲಿ ಸುದ್ದಿಯಾಗಲಿಲ್ಲ. ಪುನಃ ಗಾಂಧಿನಗರದತ್ತ ಮುಖ ಮಾಡಿದ ಈ ನಟಿಗೆ ಸಿಕ್ಕಿದ್ದು “ಪ್ರೀತಿಯ ರಾಯಭಾರಿ’ ಎಂಬ ಹೊಸಬರ ಸಿನಿಮಾ.

ಅದರಿಂದಲೇ ಈಗ ನಟಿಯಾಗಿ ಒಂದಷ್ಟು ಗುರುತಿಸಿಕೊಂಡಿರುವ ಸುಕೃತಾ ದೇಶಪಾಂಡೆ, ಕೊರೋನಾ ಕಾರಣಕ್ಕೆ ಸಿನಿಮಾ‌ ಗಿನಿಮಾ‌ಅಂತೆಲ್ಲ ತಲೆ‌ಕಡೆಸಿಕೊಳ್ಳದೇ ಮನೆಯಲ್ಲಿದ್ದು‌ಬದುಕಿನ‌ ಪಾಠ‌ಕಲಿಯುತ್ತಿದ್ದಾರೆ. ಪಾಠ ಅಲ್ಲ‌ಅದು‌ ಉಪದೇಶ. ‘ ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ.’ ಈ‌ ಮಾತನ್ನು ಹೇಳಿದ್ದಾರೋ‌ ಗೊತ್ತಿಲ್ಲ.‌ಅದರೆ ಈ‌ಮಾತನ್ನು ಸುಕೃತಾ ತಮ್ಮ‌ ಫೇಸ್ ಬುಕ್ ಖಾತೆಯಲ್ಲಿ ‌ಹಾಕಿಕೊಂಡು, ಗಮನ ಸೆಳೆದಿದ್ದಾರೆ. ‌ಅವರ‌ಕಾರ್ಯಕ್ಕೆ‌ಗಮನ‌ ಅಥವಾ ಕುತೂಹಲ‌ ಯಾಕೆ‌ ಗೋತ್ತಾ?

 

ಯಾವುದೋ ಕಾಣಕ್ಕೆ‌ಇವತ್ತು ಸೆಲಿಬ್ರಿಟಿಗಳು ಸುಸೈಡ್ ಹಂತಕ್ಕೆ ಯೋಚಿಸುತ್ತಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅದಿರಲಿ, ಬಿಗ್ ಬಾಸ್ ಖ್ಯಾತಿಯ ಕನ್ನಡದ ನಟಿ ಜಯಶ್ರೀ ರಾಮಯ್ಯ ಕೂಡ ಅಂತಹ‌ ಕೆಟ್ಟ ವಿಚಾರಕ್ಮೆ ಅಲೋಚಿಸಿ‌ದೊಡ್ಡ ಸುದ್ದಿ ಆಗಿದ್ದರು.‌ನಾಗಮಂಡಲದ ನಟಿ‌ ವಿಜಯಲಕ್ಷ್ಮಿ‌ ಕೂಡ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿಯಾದರು. ಇಂತಹ ಕ್ಷೀಣ ಮನಸ್ಸು ಗಳ‌ನಡುವೆ ನಟಿ‌ಸುಕೃತಾ ಬಾಳಿ ಬದುಕುವ ಮಹತ್ವ ಮಾತನ್ನು ತಮ್ಮ‌ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು‌‌ ಬಾಳು‌ಬದುಕುವುದಕ್ಕಾಗಿಯೇ ಹೇಳಿರುವುದು ವಿಶೇಷ.

Categories
ಗಾಳಿ ಮಾತು

ಸುದೀಪ್ ಜೊತೆ ಸನ್ನಿ ಲಿಯೋನ್, ಕನ್ನಡಕ್ಕೆ ಮತ್ತೆ ಸನ್ನಿ..

ಸನ್ನಿ ಲಿಯೋನ್

ಮಾಜಿ ನೀಲಿ ತಾರೆ ಮತ್ತು ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಭಿನಯಕ್ಕಿಂತ ಹೆಚ್ಚಾಗಿ ಐಟಂ ಹಾಡುಗಳ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿರುವ ಸನ್ನಿ ಲಿಯೋನ್, ಮತ್ತೆ ಕನ್ನಡ ಪ್ರೇಕ್ಷಕರ ಹಾರ್ಟ್ ಬೀಟ್ ಹೆಚ್ಚಿಸಲು ಬರ್ತಿದ್ದಾರಂತೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿ ಲಿಯೋನ್ ಕನ್ನಡ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಿಕೆ ಮತ್ತು ಲವ್ ಯು ಆಲಿಯಾ ಸಿನಿಮಾಗಳಲ್ಲಿ ಜಬರ್ದಸ್ತ್ ಹೆಜ್ಜೆ ಹಾಕುವ ಮೂಲಕ ಸನ್ನಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ‘ಫ್ಯಾಂಟಮ್’ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಪನ್ನಾ ಯಾರು? ಅಂದ್ಹಾಗೆ ಸನ್ನಿ ಈ ಬಾರಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ. ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ವಿಶೇಷ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಬರ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

error: Content is protected !!