Categories
ಸಿನಿ ಸುದ್ದಿ

ಕನ್ನಡದ ಉಸಿರಿಗೆ ತೆಲುಗಿನ ಬ್ರಹ್ಮಾನಂದಂ- ಅಲಿ ಸಾಥ್…

” ಉಸಿರೇ ಉಸಿರೇ” ಅಂದಾಕ್ಷಣ ನೆನಪಾಗೋದೇ ಕಿಚ್ಚ ಸುದೀಪ್. ಅವರ ಹುಚ್ಚ ಸಿನಿಮಾದ ಉಸಿರೇ ಉಸಿರೇ ಹಾಡು ಈಗ ಸಿನಿಮಾವೊಂದರ ಟೈಟಲ್ ಆಗಿದೆ. ಹೌದು ಆ ಹಾಡಿಂದಲೆ ಆರಂಭವಾದ ಚಿತ್ರ “ಉಸಿರೇ ಉಸಿರೇ”. ಸಿಸಿಎಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಈ ಚಿತ್ರದ ಹೀರೋ. ಈ ಚಿತ್ರದ ಚಿತ್ರೀಕರಣ ಸದ್ಯ ಕೋಲಾರದಲ್ಲಿ ನಡೆಯುತ್ತಿದೆ.

ರಾಜೀವ್, ನಾಯಕಿ ಶ್ರೀಜಿತ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಯಿಕುಮಾರ್, ಬ್ರಹ್ಮಾನಂದಂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಅಲಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಕೋಲಾರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು, ಕೋಲಾರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಿಸುತ್ತಿರುವ
ಈ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದೆ‌.

ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.ಕೆ.ಎಂ.ಪ್ರಕಾಶ್ ಈ ಚಿತ್ರದ ಸಂಕಲನಾರರು.

Categories
ಸಿನಿ ಸುದ್ದಿ

ಕಿರಿಕ್ ಹುಡುಗಿಯ ಹೊಸ ಕ್ರೀಂ; ಅಗ್ನಿ ಶ್ರೀಧರ್ ಸಾರಥ್ಯ

ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡ ಚಿತ್ರರಸಿಕರ ಮನಗೆದ್ದಿದೆ. ಈಗ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ
“ಕ್ರೀಂ” ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಅಭಿಷೇಕ್ ಬಸಂತ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. “ಕಿರಿಕ್ ಪಾರ್ಟಿ” ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿದ್ದಾರೆ. ಡಿ.ಕೆ.ದೇವೇಂದ್ರ ನಿರ್ಮಾಣ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೂ ನನಗೆ ಸಿನಿಮಾ ಬಗ್ಗೆ ಆಸಕ್ತಿ. ನನ್ನ ಮನೆಯವರು ನನ್ನನ್ನು ಹಾಗೆ ಬೆಳೆಸಿದ್ದರು. ಆ ನಂತರ ಎಂ ಬಿ ಎ ಹಾಗೂ ಎಂ ಎಸ್ ಮಾಡಿದೆ. ಈಗ ನನ್ನ ಆಸೆಯಂತೆ ಚಿತ್ರರಂಗದತ್ತ ಬಂದಿದ್ದೀನಿ. ನನ್ನ ಅನುಭವ ಅಂದರೆ ಹೆಡ್ ಬುಷ್ ಚಿತ್ರದಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಗ್ನಿ ಶೀಧರ್ ಸರ್ ಅವರ ಒಡನಾಟದಿಂದ, ಅವರ ಜೊತೆ ಆಡಿರುವ ಮಾತುಗಳಿಂದ ಹೆಚ್ಚಿನ ಅನುಭವ ಪಡಿದಿದ್ದೇನೆ. ನೀನು ನಿರ್ದೇಶನ ಮಾಡು ಎಂದು ಹೇಳಿದ್ದೆ ಅವರು. ಅಗ್ನಿ ಶ್ರೀಧರ್ ಅವರಿಗೆ ನನ್ನ ವಂದನೆಗಳು ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

ನಾನು ಕಥೆ ಕೇಳಲು ಹೊದಾಗ ತುಂಬಾ ಕುತೂಹಲ ಮನೆಮಾಡಿತ್ತು. ನನ್ನ ಪಾತ್ರದ ಬಗ್ಗೆ ನಾನು ಹೇಳುವುದಕ್ಕಿಂತ ಅಗ್ನಿ ಶ್ರೀಧರ್ ಸರ್ ಹೇಳಿದರೆ ಒಂದು ಕಳೆ. ನಾನು ಈ ಚಿತ್ರದಲ್ಲಿ ಫೀಮೇಲ್ ಹೀರೋ ಅನ್ನಬಹುದು. ಈ ಅವಕಾಶ ನೀಡಿದ್ದಕ್ಕೆ ಅಗ್ನಿ ಶ್ರೀಧರ್ ಸರ್ ಗೆ ಧನ್ಯವಾದ. ನಾನು ಈವರೆಗೂ ಮಾಡಿರದ ಪಾತ್ರ ಅಂತ ಹೇಳಬಹುದು ಎಂದರು ಸಂಯುಕ್ತ ಹೆಗಡೆ.

ನನ್ನ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ ಕೊಟ್ಟಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಅವರಿಗೆ ವಿಶೇಷ ಧನ್ಯವಾದ. ಪ್ರೇಕ್ಷಕರಿಗೆ ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ತೆಲುಗಿನಲ್ಲಿ ಕೆಲವು ಚಿತ್ರ ನಿರ್ಮಾಣ ಮಾಡಿ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೀನಿ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ದೇವೇಂದ್ರ .

ನನ್ನ ಪರಿಚಯಸ್ಥರೊಬ್ಬರ ಮೂಲಕ ದೇವೇಂದ್ರ ಅವರು ನನ್ನನ್ನು ಭೇಟಿಯಾಗಿ ಸಿನಿಮಾ ಮಾಡೋಣ ಅಂತ ಇದ್ದೀನಿ . ನಿಮ್ಮ ಕಥೆ ಬೇಕು ಎಂದರು. ನಾನು ಈಗ ಬೇಡ. ಬೇರೆ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದೀನಿ‌ ಅಂದೆ. ಆದರೆ ದೇವೇಂದ್ರ ಅವರು ಮಾತನಾಡುವ ರೀತಿಗೆ ಒಪ್ಪಿಕೊಳ್ಳಲೆ ಬೇಕಾಯಿತು. ‌ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ನಿರ್ದೇಶಕ ಅಭಿಷೇಕ್ ನನ್ನು ಹುಟ್ಟಿದ ದಿನದಿಂದ ಬಲ್ಲೆ. ಅವರ ಅಪ್ಪ ಕೂಡ ಪರಿಚಿತರು. ನೀನು ನಟನೆಗಿಂತ ಹಚ್ಚಾಗಿ ನಿರ್ದೇಶಕನಾಗುವುದು ಒಳ್ಳೆಯದು ಅಂತ ಅಭಿಷೇಕ್ ಗೆ ಹೇಳಿದೆ. ಈ ಚಿತ್ರದ ಮೂಲಕ ಆತ ನಿರ್ದೇಶಕನಾಗುತ್ತಿದ್ದಾನೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ನಟಿಯರ ಆಯ್ಕೆಯಲ್ಲಿದ್ದಾಗ, ಈ ಪಾತ್ರಕ್ಕೆ ಸಂಯುಕ್ತ ಹೆಗಡೆ ನನಗೆ ಸೂಕ್ತ ಅನಿಸಿದರು. ಸಂಯುಕ್ತ ಹೆಗಡೆ ನನ್ನ ಭೇಟಿಯಾಗಲು ಬಂದಾಗ, ಎದುರು ನಿಂತಿರುವ ನಿರ್ದೇಶಕರೊಡನೆ ಕಿಕ್ ಬಾಕ್ಸಿಂಗ್ ಮಾಡಲು‌ ಹೇಳಿದೆ. ಆಕೆ ತಕ್ಷಣ ಸಿದ್ದವಾದರು. ನಾನು ಅವರು ಯಾರನಾದರೂ ಕಳುಹಿಸಿ ಕೊಡಿ ಕಲಿಯುತ್ತೇನೆ ಅಂತ ಹೇಳಬಹುದು ಅಂದುಕೊಂಡೆ. ಆದರೆ ಅವರು ತಕ್ಷಣ ಸಿದ್ದವಾದರು. ಆಗ ಈ ಪಾತ್ರಕ್ಕೆ ನನ್ನ ಆಯ್ಕೆ ಸರಿ‌ ಎನಿಸಿತು. ಅರುಣ್ ಸಾಗರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆಗಸ್ಟ್‌ -ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. “ಕ್ರೀಂ” ಎಂದರೆ ಸಂಸ್ಕೃತದಲ್ಲಿ ಬರುವ ದೇವಿಯ ಕುರಿತಾದ ಮಂತ್ರ. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು ಎಂದರು ಅಗ್ನಿ ಶ್ರೀಧರ್.

ರೋಶನ್ ಅವರ ಬಳಿ ನನ್ನ‌ ಮಗ ಕಿಕ್ ಬಾಕ್ಸಿಂಗ್ ಗೆ ಹೋಗುತ್ತಾನೆ. ಅವರ ಬಳಿ ನಾನು ಹೇಳುತ್ತಿದ್ದೆ. ಒಂದು ಸಲ ನಾನು ಅಗ್ನಿ ಶ್ರೀಧರ್ ಅವರನ್ನು ಭೇಟಿಯಾಗಬೇಕು ಅಂತ. ಆದರೆ ಇತ್ತೀಚೆಗೆ ರೋಶನ್ ಅವರು ಫೋನ್ ಮಾಡಿ ಆಫೀಸಿಗೆ ಬನ್ನಿ ಅಂದರು. ಅಲ್ಲಿ ಶ್ರೀಧರ್ ಅವರನ್ನು ಭೇಟಿ ಮಾಡಿದೆ. ಸಾಕಷ್ಟು ಮಾತನಾಡಿದೆ. ಅವರು ಆಳದ ಹಾಗೂ ಆಳುವ ಮನುಷ್ಯ . ಅವರ ಎಲ್ಲಾ ಕಥೆಗಳು ಚೆನ್ನಾಗಿದೆ. ಈ ಸಿನಿಮಾ ಕೂಡ ಉತ್ತಮವಾಗಿ ಮೂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ಚಿತ್ರದಲ್ಲಿ ಅಭಿನಯಿಸುತ್ತಿರುವ ಅರುಣ್ ಸಾಗರ್.

ಸಂವರ್ಧಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕೆ.ದೇವೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ಸುನೋಜ್ ವೇಲಾಯುಧನ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಹೊಸ ಡೋಸ್! ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ಹಿಡಿದು ಬಂದವರು…

“ಡೋಸ್” ಇದು ಕೊರೊನೊ ವ್ಯಾಕ್ಸಿನೇಷನ್‌ ಡೋಸ್ ಅಲ್ಲ. ಬದಲಾಗಿ ಚಿತ್ರವೊಂದರ ಹೆಸರು. ಹೌದು ಉತ್ಸಾಹಿ ಯುವ ತಂಡವೊಂದರ ವಿಶಿಷ್ಟ ಆಲೋಚನೆಯ ಚಿತ್ರವಿದು. ತಮ್ಮದೇ ಆದ ರೀತಿಯಲ್ಲಿ ಹೊಸದೊಂದು ಕಥಾ ಪ್ರಪಂಚವನ್ನು ಸಿನಿರಸಿಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು “ಡೋಸ್” ಸಿನಿಮಾ ಮೂಲಕ ಹೊಸಬರ ತಂಡ ಮಾಡಲು ಹೊರಟಿದೆ.

ಆ ಪ್ರಯತ್ನದ ಮೊದಲ ಭಾಗವಾಗಿ ಚಿತ್ರದ ಮೊದಲ ಥೀಮ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಈ ಪೋಸ್ಟರ್ ರೀಲೀಸ್ ಮಾಡಿದ್ದಾರೆ. ಕಾನಿ ಸ್ಟುಡಿಯೋ ಡಿಸೈನ್ ಮಾಡಿರುವ ಈ ಪೋಸ್ಟರ್ ಹೊಸತನದ ಸ್ಪರ್ಶ ಹೊಂದಿದೆ. ಚಿತ್ರದ ಥೀಮ್ ಪೋಸ್ಟರ್ ಬಗ್ಗೆ ಈಗಾಗಲೇ ತುಂಬಾ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಸಿಂಪಲ್ ಸುನಿ, ಜಯತೀರ್ಥ, ಭಜರಂಗಿ ಲೋಕಿ, ಗುರು ಶಿಷ್ಯರು ಜಡೇಶ್ ಕುಮಾರ್ ಮುಂತಾದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ

ಧನಂಜಯ ದಿಡಗ ಈ ಚಿತ್ರದ ನಿರ್ದೇಶಕರು. ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ‌ ಮತ್ತು ಕನ್ನಡದದ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಸ್ವತಂತ್ರ ನಿರ್ದೇಶಕರಾಗಿ ಈಗಾಗಲೇ ಚಿತ್ರವೊಂದನ್ನು ನಿರ್ದೇಶಿಸಿದ್ದು, ಇದು ಇವರ ಎರಡನೇ ಚಿತ್ರವಾಗಿದೆ. “ಡೋಸ್” ಚಿತ್ರದಲ್ಲಿ ಅತ್ಯಂತ ವಿಭಿನ್ನ ರೀತಿಯ ಕಥೆಯ ಎಳೆಯನ್ನು ಇಟ್ಟುಕೊಂಡು, ಹೊಸ ತರದ ನಿರೂಪಣೆಯ ಮೂಲಕ, ಅತ್ಯಂತ ಗಾಢವಾದ ಭಾವ ಪ್ರಪಂಚ ವನ್ನು ಕಟ್ಟಿಕೊಡುವ ಪ್ರಯತ್ನವಿದೆ. ಚಿತ್ರ ಸೂಪರ್ ನ್ಯಾಚುರಲ್, ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನಲ್ಲಿರಲಿದೆ.

ಗರುಡ ಗಮನ ವೃಷಭ ವಾಹನ ಚಿತ್ರದ ಖ್ಯಾತಿಯ ಗೋಪಾಲಕೃಷ್ಣ ದೇಶಪಾಂಡೆ, ಒನ್ ಲವ್ ಟು ಸ್ಟೋರಿ ಚಿತ್ರದ ನಾಯಕ ನಟರಾಗಿದ್ದ ಸಂತೋಷ್ ಕುಮಾರ್, ಲವ್ 360 ಚಿತ್ರದ ನಾಯಕ ನಟರಾಗಿದ್ದ ಅರ್ಜುನ್ ಕಿಶೋರ್ ಚಂದ್ರ, ಬಬ್ಲುಷ ಚಿತ್ರದ ನಾಯಕ ನಟರಾಗಿದ್ದ ಹರ್ಷ್ ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ
ಜೊತೆಗೆ ಸಾಯಿ ಹರ್ಷ, ಸಂತು ಗೌಡ, ದರ್ಶನ್, ಸವಿತಾ ಹಿರೇಮಠ, ಆರ್ಯ ಮುಂತಾದವರ ತಾರಾಬಳಗವಿದೆ. ನವೀನ್ ಸೂರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಟೇಶ್ ಯುಡಿವಿ ಸಂಕಲನವಿದೆ. ಮತ್ತು ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಭೀಮೇಶ್, ಹರ್ಷ, ಅಪ್ಪು ಶಂಕರ್, ಭರತ್, ರಂಜಿತ್,
ಕೆಲಸ ಮಾಡುತ್ತಿದ್ದಾರೆ.

ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಚಿತ್ರತಂಡ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಹೊರಡುವ ತಯಾರಿಯಲ್ಲಿದೆ. ಕುಂದಾಪುರದ ಸುತ್ತಲಿನ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

.

Categories
ಸಿನಿ ಸುದ್ದಿ

ನಿಖಿಲ್ ಹೊಸ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್! ಕೆವಿಎನ್ ಪ್ರೊಡಕ್ಷನ್ ನಡಿ ಬರಲಿದೆ ‘ಯುವರಾಜ’ನ ಚಿತ್ರ!

ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಂಜು ಅಥರ್ವ, ತಮಿಳಿನ ಕದಿರನ್‌ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮೊದಲ‌ ಹಂತದಲ್ಲಿ ‘ರೈಡರ್’ ಹೊಸ ಸಿನಿಮಾ!

ನಿಖಿಲ್ ಹಾಗೂ ಮಂಜು ಅಥರ್ವ ಕಾಂಬೋದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದ್ದ, ಈ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.‌ ಪಕ್ಕ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾವಾಗಿರುವ ಈ ಚಿತ್ರಕ್ಕೆ ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರ್ತಿರುವ ಈ ಸಿನಿಮಾಗೆ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದು, ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ನೀಡಲಿದೆ.

Categories
ಸಿನಿ ಸುದ್ದಿ

ಬಜಾರ್‌ ಹುಡುಗ ಧ್ವನ್ವೀರ್‌ ಈಗ ವಾಮನ…! ಸಂಕ್ರಾಂತಿಗೆ ಹೊಸ ಸಿನಿಮಾ ಅನೌನ್ಸ್

ಬಜಾರ್ ಹೀರೋ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಬಜಾರ್‌ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್,‌ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ಸರ್ ಬಾರಿಸಿದಾಗಿದೆ. ಸದ್ಯ ಬೈ ಟು ಲವ್ ಗೆ ಎದುರು ನೋಡುತ್ತಿರುವ ಧ್ವನೀರ್ ಮೂರನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ

ವಾಮನ’ನ ಅವತಾರದಲ್ಲಿ ಶೋಕ್ದಾರ್…

ಸಂಕ್ರಾಂತಿ ಹಬ್ಬದ ಪ್ರಯುಕ್ತ ಧನ್ವೀರ್ ಗೌಡ ನಟಿಸುತ್ತಿರುವ ಮೂರನೇ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಅದಕ್ಕೆ “ವಾಮನ” ಎಂದು ಹೆಸರಿಡಲಾಗಿದೆ. ಜೊತೆಗೆ ಅದರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಕೈಯಲ್ಲಿ ಚಾಕು ಹಿಡಿದು ಖಡಕ್ ಲುಕ್ ನಲ್ಲಿ ಧನ್ವೀರ್ ಮಿಂಚಿದ್ದಾರೆ.

ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಿನಿಮಾ ಬದುಕಿನ 13 ವರ್ಷದ ಅನುಭವವನ್ನೂ ಈ ಸಿನಿಮಾಗೆ ಧಾರೆ ಎರೆಯುತ್ತಿರುವ ಶಂಕರ್ ರಾಮನ್, ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ ಟ್ರೈನರ್ ವಾಮನ ಸಿನಿಮಾವನ್ನು ಧನ್ವೀರ್ ಗೆ ಸಿದ್ಧಪಡಿಸಿದ್ದಾರೆ.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ನಡಿ ಧನ್ವೀರ್ ಮೂರನೇ ಸಿನಿಮಾಗೆ ಚೇತನ್ ಕುಮಾರ್ ಗೌಡ ಬಂಡವಾಳ‌ ಹೂಡಲಿದ್ದು, ಸಂಕ್ರಾಂತಿ ಹಬ್ಬದಂದು ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ.

Categories
ಸಿನಿ ಸುದ್ದಿ

ಧನಂಜಯ್‌ ಈಗ ಹೊಯ್ಸಳ! ಕೆಆರ್‌ಜಿ ಸ್ಟುಡಿಯೋಸ್‌ ಬ್ಯಾನರ್‌ನ ಹೊಸ ಚಿತ್ರ ಅನೌನ್ಸ್

ಕನ್ನಡದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಸಂಕ್ರಾಂತಿ ಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ. ಹೌದು, ಅವರು ತಮ್ಮ ಹೊಸ ನಿರ್ಮಾಣದ ಸಿನಿಮಾಗೆ “ಹೊಯ್ಸಳ” ಎಂದು ನಾಮಕರಣ ಮಾಡಿದ್ದಾರೆ.
ಇತ್ತೀಚೆಗೆ ರಿಲೀಸ್‌ ಆಗಿ ಸಾಕಷ್ಟು ಜನಪ್ರಿಯಗೊಂಡ “ರತ್ನನ್ ಪ್ರಪಂಚ” ಚಿತ್ರದ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

ಇನ್ನು, ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಅರ್ಪಿಸುತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಈ ಹಿಂದೆ “ಗೀತಾ” ಚಿತ್ರ ನಿರ್ದೇಶಿಸಿದ್ದ ವಿಜಯ್ ಹೊತ್ತುಕೊಂಡಿದ್ದಾರೆ. ಇನ್ನು, ಚಿತ್ರಕ್ಕೆ ಎಸ್‌.ಎಸ್.ತಮನ್‌ ಅವರು ಸಂಗೀತ ನೀಡುತ್ತಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ ಮಾಡಲ್ಲಿದ್ದಾರೆ. ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನವಿದೆ. ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಚಿತ್ರಕ್ಕೆ ಸುಧೀಂದ್ರ ವೆಂಕಟೇಶ್‌ ಪ್ರಚಾರಕರ್ತರು. ಅವರ ಜೊತೆ ಚಿತ್ರದ ಪ್ರಚಾರವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ಮಾಡುತ್ತಿದೆ.

ವಿಶೇಷವೆಂದರೆ, ಈ ಚಿತ್ರದ ನಾಯಕರಾಗಿ ಧನಂಜಯ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಧನಂಜಯ ಅವರ ೨೫ ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ಅವರಿಗೆ ಈ ಚಿತ್ರ ಒಂದು ಮೈಲಿಗಲ್ಲು. ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜೆಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ. ಕಥೆಯ ಒನ್‌ಲೈನ್‌ ಹೇಳುವುದಾದರೆ, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿ ಸುತ್ತ ಹೆಣೆದಿರುವ ಕಥೆ ಇದು. ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಉತ್ತರ ಪ್ರದೇಶದ ಹನುಮ ದೇವಾಲಯದಲ್ಲಿ ಭೈರವನಿಗೆ ಪೂಜೆ! ಸಂಕ್ರಾಂತಿಗೆ ಹೊಸಬರ ಸಿನಿಮಾ ಶುರು…

ಸಂಕ್ರಾಂತಿ ಹಬ್ಬದಂದೇ ಭಜರಂಗಿ ಆಶೀರ್ವಾದ ಪಡೆದು “ಭೈರವ” ಚಿತ್ರಕ್ಕೆ ಚಾಲನೆ ದೊರೆತಿದೆ. ಶುಕ್ರವಾರ ಮುಹೂರ್ತ ನಡೆಸಿ ಶೂಟಿಂಗ್‌ ಚಟುವಟಿಕೆ ಶುರುಮಾಡಿದೆ. ಈ ಹಿಂದೆ ಮುಂಬೈನಲ್ಲಿ ಟೈಟಲ್ ಲಾಂಚ್ ಮಾಡಿ ಸುದ್ದಿಯಾಗಿದ್ದ ರಾಮತೇಜ್ ನಿರ್ದೇಶನದ ಭೈರವ ಇಂದು ಮೂಹರ್ತ ಕಾರ್ಯ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.

ಉತ್ತರ ಪ್ರದೇಶದ ಗೋವಿಂದಪುರಿ ನಗರದ ಹನುಮಾನ್ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆದಿರುವುದು ವಿಶೇಷತೆಗಳಲ್ಲೊಂದು. ಉತ್ತರ ಪ್ರದೇಶದ ಬಿಜೆಪಿಯ ಮಖಂಡ ಡಾ.ಮಂಜು ಶಿವಾಜ್ ಅವರು ಮುಖ್ಯ ಅತಿಥಿಯಾಗಿ, ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಿದಂಬರ ಕುಲಕರ್ಣಿ ಕಾಮೆರಾ ಚಾಲನೆ ಮಾಡಿದರು. ವೈಭವ ಬಜಾಜ್ ಮತ್ತು ಹನಿ ಚೌಧರಿ (ವಿಸಿಕಾ ಫಿಲ್ಮ್ಸ್ ಸಂಸ್ಥೆ) ಸೇರಿ ಅದ್ದೂರಿಯಾಗಿ ಈ ಚಿತ್ರವನ್ನು ಶುರುಮಾಡಿದ್ದಾರೆ.

ಉಳಿದಂತೆ ಕಮರೊಟ್ಟು ಚೆಕ್‌ಪೋಸ್ಟ್ ಖ್ಯಾತಿಯ ನಾಯಕ ಸನತ್, ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕಿ ಶೈಲಶ್ರಿ ಮುಲ್ಕಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಖಳನಟರಾಗಿ ಉಮೇಶ ಸಕ್ಕರೆನಾಡು ಇದ್ದಾರೆ. ಚಿತ್ರಕ್ಕೆ ಸಂದೀಪ್‌ ಫ್ರೇಡಿಕ್‌ ಕ್ಯಾಮೆರಾ ಹಿಡಿದರೆ, ಕಪಿಲ್ ದೀಕ್ಷಿತ್‌ ಸಹಾಯಕ ನಿರ್ದೆಶಕರು. ಕರುಣ್ ಕ್ಷೀತಿ ಸುವರ್ಣ ಸೇರಿದಂತೆ ಮೀರತ್ ನಗರದ ವಕೀಲರಾದ ರಾಜಕುಮಾರ ಗುಪ್ತಾ ಮತ್ತು ಡಾ.ಸಂಜೀವ ಚೌಧರಿ ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಕರುನಾಡಿಗರ ಮನ ಗೆದಿದ್ದ ಬಾಲ ಪ್ರತಿಭೆ ಈಗ ದೂರ… ಬಲುದೂರ… ತುಂಟು ಮಾತಿಂದಲೇ ನಗಿಸಿದ್ದ ಸಮನ್ವಿ ಇನ್ನು ನೆನಪು ಮಾತ್ರ…

ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸ. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು

ಹೌದು… ಆಗಷ್ಟೇ ಚಿಗುರುತ್ತಿದ್ದ ಸುಪ್ತ ಪ್ರತಿಭೆಯೊಂದು ಕಣ್ಮರೆಯಾಗಿದೆ. ಅದು ಕೇವಲ ಕುಟುಂಬಕ್ಕೆ ಮಾತ್ರವಲ್ಲ ಕನ್ನಡ ಕಿರುತೆರೆ ಲೋಕಕ್ಕೇ ತುಂಬಲಾರದ ನಷ್ಟವೂ ಹೌದು. ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ನಟಿ ಅಮೃತಾ ನಾಯ್ಡು ಅವರ ಪುತ್ರಿ ಸಮನ್ವಿ. ಇವರಿಬ್ಬರೂ ಗುರುವಾರ ಸಂಜೆ ಸ್ಕೂಟಿಯಲ್ಲಿ ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು. ಅಷ್ಟೇ ಅಲ್ಲ, ನೋಡುಗರ ಮನ ಗೆದ್ದಿದ್ದರು. ಇದೀಗ ಈ ದುರ್ಘಟನೆ ಸಂಭವಿಸಿದೆ. ಅವರ ತಾಯಿ ಅಮೃತಾ ಅವರೂ ಸಹ ಈ ಘಟನೆಯಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಕಿರುತೆರೆ ಲೋಕ ದುಃಖದ ಮಡುವಿನಲ್ಲಿ ಮುಳುಗಿದೆ. ಅದರಲ್ಲೂ ಆ ಶೋನ ತೀರ್ಪುಗಾರರಾಗಿದ್ದ ನಟಿ ತಾರಾ, ಅನುಪ್ರಭಾಕರ್ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಇತರರು ಸಮನ್ವಿ ನಿಧನದಿಂದ ಅಘಾತಗೊಂಡಿದ್ದಾರೆ. ನಟಿ ತಾರಾ ಅವರಿಗೆ ಈ ಘಟನೆ ಕುರಿತಂತೆ ಹಲವರು ಫೋನ್‌ ಮಾಡಿದಾಗಲೇ ಅವರಿಗೊಂದು ರೀತಿ ಆತಂಕ ಶುರುವಾಗಿತ್ತಂತೆ. ಅದರಲ್ಲೂ, ಸಮನ್ವಿ ಇನಿಲ್ಲ ಎಂಬ ಸುದ್ದಿ ಕೇಳಿದಾಕ್ಷಣ, ತಾರಾ ಅವರು ನಂಬಲೇ ಇಲ್ಲ. ಕಾರಣ, ಕಳೆದ ಏಳೆಂಟು ವಾರಗಳ ಕಾಲ ಆ ಹುಡುಗಿ ತಾರಾ ಅವರೊಂದಿಗೇ ಇದ್ದಳು. ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಹನ್ನೆರೆಡು ಮಂದಿ ಅಮ್ಮಂದಿರು, ಅವರ ಹನ್ನೆರೆಡು ಮಕ್ಕಳು ಜೊತೆಯಲ್ಲಿದ್ದರು. ಅವರ ಒಡನಾಟ ಹೆಚ್ಚಾಗಿತ್ತು. ಒಂದು ರೀತಿ ಆ ಶೋನಲ್ಲಿದ್ದ ಎಲ್ಲರೂ ಒಂದೇ ಕುಟುಂಬದಂತಿದ್ದರು. ಆದರೆ, ಪುಟ್ಟ ಪ್ರತಿಭೆ ಸಮನ್ವಿ ಇಲ್ಲ ಅನ್ನುವ ಸುದ್ದಿ ತಾರಾ ಸೇರಿದಂತೆ ಹಲವರಿಗೆ ಬರಸಿಡಿಲು ಬಡಿದಂತಾಗಿದೆ.


ಅಂದಹಾಗೆ, ಕಳೆದ ಎಪಿಸೋಡ್‌ನಲ್ಲಷ್ಟೆ ಅಮೃತಾ ನಾಯ್ಡು ಮತ್ತು ಸಮನ್ವಿ ಎಲಿಮಿನೇಟ್ ಆಗಿದ್ದರು. ಆ ಶೋನಿಂದ ಎಲಿಮಿನೇಟ್ ಆದಮೇಲೂ ಸಮನ್ವಿ ತಾಯಿ ಅಮೃತಾ ತಾರಾ ಅವರಿಗೆ ಫೋನ್‌ ಮಾಡಿ ಸಮನ್ವಿ ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಅಂದಿದ್ದರು. ಆಗ ತಾರಾ ಕೂಡ ಆಕೆಯನ್ನು ಸೆಟ್‌ಗೆ ಕರೆದುಕೊಂಡು ಬರುವಂತೆ ಹೇಳಿದ್ದರು. ಅದೇನೆ ಇರಲಿ, ಸಮನ್ವಿ ಪ್ರತಿಭಾವಂತೆ. ಆಕೆ ನಡೆಯುವುದು, ನಿಲ್ಲುವುದು, ಮಾತಾಡುವುದು ಎಲ್ಲವೂ ವಿಭಿನ್ನ ಮತ್ತು ವಿಶೇಷ ಎಂದು ಗುಣಗಾನ ಮಾಡಿರುವ ತಾರಾ, ಸಮನ್ವಿ ನೆನೆದು ಕಣ್ಣೀರಾಗಿದ್ದಾರೆ.

ಹಲವು ವರ್ಷಗಳಿಂದ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಕೂಡ ನಟಿಸುತ್ತಿದ್ದಾರೆ. ಕನ್ನಡದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ತನ್ನ ಮಗಳು ಸಮನ್ವಿ ಜೊತೆ ಕಾಣಿಸಿಕೊಂಡಿದ್ದು, ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಕನ್ನಡದ ಮನೆ ಮನಗಳಲ್ಲಿ ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಮಕ್ಕಳು ಸ್ಥಾನ ಪಡೆದುಕೊಂಡಿದ್ದಾರೆ. ವಾರಾಂತ್ಯ ಬಂದರೆ ಸಾಕು, ಮನೆಗಳಲ್ಲಿ ಆ ರಿಯಾಲಿಟಿ ಶೋ ಮುಂದೆ ಕೂತುಬಿಡುತ್ತಿದ್ದರು. ಅದರಲ್ಲೂ, ಅಲ್ಲಿ ಪಾಲ್ಗೊಂಡ ಮಕ್ಕಳ ಮಾತು ಕೇಳುವುದೇ ಖುಷಿಪಡಿಸುತ್ತಿತ್ತು. ಅಂತಹ ಮುದ್ದು ಮಕ್ಕಳಲ್ಲಿ ಕಲಾವಿದೆ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಕೂಡ ತನ್ನ ತುಂಟುತನದಿಂದಲೇ ಎಲ್ಲರ ಅಚ್ಚುಮೆಚ್ಚು ಎನಿಸಿಕೊಂಡಿದ್ದರು. ಆದರೆ, ವಿಧಿ ಅವಳನ್ನು ಬಿಡದೆ ಕರೆದೊಯ್ದಿದೆ. ಇದು ಕಿರುತೆರೆ ಮಾತ್ರವಲ್ಲ, ಇಡೀ ಕರುನಾಡೇ ಸಮನ್ವಿ ನೆನೆದು ದುಃಖ ಪಡುವಂತಾಗಿದೆ. ಎಲ್ಲರ ಮನಸ್ಸನ್ನೂ ಗಾಸಿಘೊಳಿಸಿಬಿಟ್ಟಿದೆ.

ಕೆಲವರು ಕಡಿಮೆ ಅವಧಿಯಲ್ಲೇ ಕೀರ್ತಿ ಗಳಿಸಿ ಸಂಭ್ರಮಿಸುವಂತೆ ಮಾಡಿಬಿಡುತ್ತಾರೆ. ಅಂತಹವರ ಸಾಲಿಗೆ ಈ ಸಮನ್ವಿ ಕೂಡ ಸೇರಿದ್ದಳು. ಆದರೆ, ಆ ಸಂಭ್ರಮ ಮಾತ್ರ ಹೆಚ್ಚು ದಿನ ಉಳಿಯಲೇ ಇಲ್ಲ. ಸಮನ್ವಿ ಜೀವ ಬಾರದ ಲೋಕಕ್ಕೆ ಹಾರಿ ಹೋಗಿದೆ.

ಸಮನ್ವಿ ಈಗ ನಮ್ಮೊಂದಿಗಿಲ್ಲ. ಆದರೆ, ಆಕೆಯ ತುಂಟಾದ ಮಾತುಗಳು, ಅವಳ ನಡೆ ಮತ್ತು ಮುಗ್ಧ ಪ್ರಶ್ನೆ ಉತ್ತರಗಳು ಮಾತ್ರ ಗುನಗುನಿಸುವಂತಿವೆ. ಚಿಕ್ಕವಯಸ್ಸಲ್ಲೇ ಸೈ ಎನಿಸಿಕೊಂಡು ನಕ್ಕು ನಲಿದಾಡುತ್ತಿದ್ದ ಸಮನ್ವಿ ಈಗ ಬರೀ ನೆನಪು ಮಾತ್ರ….

Categories
ಸಿನಿ ಸುದ್ದಿ

ಮಕರ ಸಂಕ್ರಾಂತಿಗೆ ಬನಾರಸ್ ಹೊಸ ಪೋಸ್ಟರ್‌ ರಿಲೀಸ್

ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಸೋನಾಲ್ ಮಾಂಟೆರೊ ನಾಯಕ,‌ ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್” ಈಗಾಗಲೇ ರಿಲೀಸ್ ಆಗಲು ರೆಡಿಯಾಗಿದೆ.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬನಾರಸ್ ಚಿತ್ರತಂಡ ಹೊಸ ಪೋಸ್ಟರ್ ಅನಾವರಣಗೊಳಿಸಿದೆ.

ಈ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿರಸಿಕರಿಗೆ‌ ಮಕರ ಸಂಕ್ರಮಣದ ಶುಭಾಶಯ ಹೇಳಿದೆ. ಸಾಕಷ್ಟು ನಿರೀಕ್ಷೆ ಹೊಂದಿರವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಮೂಲಕ ತಿಲಕ್ ರಾಜ್ ಬಲ್ಲಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ‌ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಹೊರ ಬಂತು ಜಯ ಹೇ ದೇಶಭಕ್ತಿ ಹಾಡು; ಯೋಧರಿಗೊಂದು ಗಾನ ನಮನ…

ಸಂಗೀತವೇ ಹಾಗೆ. ಎಂತಹವರನ್ನಾದರೂ ಸೆಳೆಯುವ ಶಕ್ತಿ‌ ಸಂಗೀತಕ್ಕಿದೆ. ಒತ್ತಡಗಳನ್ನು ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು ಸಂಗೀತ ಅಂದ್ರು‌ ತಪ್ಪಿಲ್ಲ. ಸಂಗೀತವೆಂಬ ಕಲೆ‌ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ಗಾಯಕ ಆದರ್ಶ್ ಅಯ್ಯಂಗಾರ್. ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪಲು ಬರುತ್ತಿದ್ದಾರೆ. ಆದರ್ಶ್ ಪ್ರೀತಿಯಿಂದ ಮಾಡಿರುವ ಜಯ ಹೇ ಹಾಡನ್ನು ವಿಂಗ್ ಕಮಾಂಡರ್ ಸುದರ್ಶನ್, ರಾಮ್ ದಾಸ್ ಜಿ ಎನ್ ( Retired LT Col ), ನಟ ವಿರಾಟ್ ಬಿಡುಗಡೆ ಮಾಡಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ, ಸ್ಟಾರ್ ಸುವರ್ಣ “ಸ್ಟಾರ್ ಸಿಂಗರ್” ಕಾರ್ಯಕ್ರಮದಲ್ಲಿ ಸ್ಪರ್ಧಿ ಭಾಗಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡರು. ನಂತರ ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದ್ರೂ ಕೂಡ ಸಂಗೀತದ ಮೇಲಿನ ಅವರ ಆಸಕ್ತಿ ಏನನ್ನಾದರು ಮಾಡುವಂತೆ ಪ್ರೇರೇಪಿಸುತ್ತಿತ್ತು. ಅದರಂತೆ ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ನಂತರ “My Friend” ಎಂಬ ವಿಡಿಯೋ ಹಾಡನ್ನು ತಮ್ಮದೆ ಆದ “ಶ್ರೀ ಕೃಷ್ಣ ಪ್ರೊಡಕ್ಷನ್” ಮೂಲಕ ಭಾರತ ಮತ್ತು ಅಮೇರಿಕಾ ಎರಡು ಕಡೆ ಶೂಟ್ ಮಾಡಿ My friend ಹಾಡಿನಿಂದ ಹೊಸ ಹೆಜ್ಜೆ ಇಟ್ಟರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.

ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ತೀರ್ಥಹಳ್ಳಿಯ ಸುತ್ತ ಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ ಆದರ್ಶ್.

ರಾಕ್-ಪಾಪ್ ಜಾನರ್ ನಲ್ಲಿ‌ ಮೂಡಿ ಬಂದಿರುವ ಜಯ ಹೇ ಎಂಬ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ನೀಡಿದ್ದು, ಆದರ್ಶ್ ಅಯ್ಯಂಗಾರ್
ಹಾಡಿಗೆ ಧ್ವನಿಯಾಗುವುದರ‌ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದು, ರಕ್ಷಿತ್ ತೀರ್ಥಹಳ್ಳಿ‌ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ,
ಸುಧೀರ್ ಎಸ್ ಜೆ ಸಂಕಲನವಿರುವ ಜಯ ಹೇ ಹಾಡು, ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ..

error: Content is protected !!