ವಿಭ
ಚಿತ್ರ: ಕ್ಯಾಲೆಂಡರ್
ನಿರ್ಮಾಣ: ಆದರ್ಶ್ ಗುಂಡುರಾಜ್
ನಿರ್ದೇಶನ: ನವೀನ್ ಶಕ್ತಿ
ತಾರಾಗಣ: ಆದರ್ಶ್ ಗುಂಡುರಾಜ್, ನಿವಿಷ್ಕ ಪಾಟೀಲ್, ಸುಶ್ಮಿತಾ, ಮಾಲಾಶ್ರೀ, ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಇತರರು.
ಅವನೊಬ್ಬ ಡಾಕ್ಟರ್. ಬೇರೆಯವರ ಕಣ್ಣಿಗೆ ತುಂಬಾ ಒಳ್ಳೆಯ ವ್ಯಕ್ತಿ. ಆದರೆ, ಆತ ಕೊಲೆ ಕೇಸಿನ ಆಸಾಮಿ. ಪೊಲೀಸರ ಕಣ್ ತಪ್ಪಿಸಿ ಓಡಾಡುತ್ತಿರೋ ಆತ ನಿಜವಾಗಿಯೂ ಕೊಲೆ ಮಾಡಿದ್ದಾನಾ? ಬೇರೆ ಯಾತಾದರೂ ಮಾಡಿದ್ದಾರಾ? ಇದೆ ಬೆನ್ನತ್ತುವ ಪೊಲೀಸ್ ಅಧಿಕಾರಿಗೆ ಕೊಲೆಗಾರ ಸಿಗ್ತಾನ? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

‘ಕ್ಯಾಲೆಂಡರ್’ ಅನ್ನೋದು ಪ್ರತಿಯೊಬ್ಬರಿಗೂ ನಿತ್ಯವೂ ನೆನಪಾಗುತ್ತೆ. ಈ ಕ್ಯಾಲೆಂಡರ್ ಗೂ ಆ ಡಾಕ್ಟರ್ ಗು ಇರುವ ವಿಷಯ ಏನು ಅನ್ನೋದು ಸಸ್ಪೆನ್ಸ್.
ಇದೊಂದು ಹೊಸತರಹದ ವಿಷಯ ಇಟ್ಟುಕೊಂಡು ಮಾಡಿದ ಸಿನಿಮಾ. ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ ಜೊತೆಗೆ ನೋಡುಗರಿಗೆ ಒಂದಷ್ಟು ಟೆಸ್ಟೂ ಇದೆ.
ಇಲ್ಲಿ ಹೀರೋ ತೆರೆ ಮೇಲಷ್ಟೇ ಅಲ್ಲ, ಕಥೆಯಲ್ಲೂ ಕೈ ಆಡಿಸಿದ್ದಾರೆ. ಆ ಕಾರಣಕ್ಕೆ ಕೊಂಚ ವಿಭಿನ್ನ ಪ್ರಯತ್ನದ ಉದ್ದೇಶ ಇಲ್ಲಾ್ಇದೆ ಎನ್ನಬಹುದು.
ಕಥೆ ಸರಳ. ಮಹಿಳೆಯರ ದೃಷ್ಟಿಕೋನದಲ್ಲಿ ಹೆಣೆಯಲಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಕನೆಕ್ಟ್ ಅನಿಸುವ ಎಳೆ ಇದೆ. ಅದೇ ಹೈಲೆಟ್. ಅದೇನು ಅನ್ನುವುದಕ್ಕೆ ಸಿನಿಮಾ ನೋಡಬೇಕು.
ಕಥೆಗಾರರ ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕ ನವೀನ್ ಶಕ್ತಿ ಅವರ ನಿರೂಪಣೆ ವಿಚಾರದಲ್ಲಿ ಸ್ವಲ್ಪ ಬಿಗಿ ಹಿಡಿತ ಬೇಕಿತ್ತು. ಚಿತ್ರಕಥೆ ಕಡೆ ಹೆಚ್ಚು ಗಮನ ವಹಿಸಬೇಕಿತ್ತು.
ಮೊದಲರ್ಧ ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಶೇಷವಿಲ್ಲ. ದ್ವಿತಿಯಾರ್ಧ ಇದಕ್ಕೆ ಹೊರತಲ್ಲ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ವಿಶೇಷತೆ ಇದೆ. ಅದೇ ಸಿನಿಮಾದ ಜೀವಾಳ.
ನಾಯಕ ಒಬ್ಬ ಡಾಕ್ಟರ್. ಆದರೆ ಕುಡಿಯೋದೇ ಅವನ ವೀಕ್ ನೆಸ್. ಈ ನಡುವೆ ಒಂದು ರೀಸರ್ಚ್ ಮಾಡ್ತಾನೆ. ಅದು ಮಹಿಳೆಯರ
ಋತುಚಕ್ರದ ಸಮಯದಲ್ಲಿ ಅವರ ಮಾನಸಿಕ ಸ್ಥಿತಿಯ ಬದಲಾವಣೆ ಮತ್ತು ಅದರಿಂದ ಆಗುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ತಾನೆ. ಇಲ್ಲಿ ಒಂದಷ್ಟು ಕಮರ್ಷಿಯಲ್ ವಿಚಾರವನ್ನು ಸೇರಿಸಿ ಎಲ್ಲೂ ಬೋರ್ ಆಗದಂತೆ ಜಾಗೃತ ವಹಿಸಿದ್ದಾರೆ. ಆದರೂ ಕೆಲ ಅನಗತ್ಯ ದೃಶ್ಯಗಳನ್ನು ಕೈ ಬಿಡಬಹುದಿತ್ತು. ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ.
ನಾಯಕ ಆದರ್ಶ್ ನಗುಮೊಗದಲ್ಲೇ ಕಾಣಿಸಿಕೊಂಡಿದ್ದಾರೆ. ನೋಡುಗರನ್ನು ಖುಷಿಪಡಿಸಲು ಶ್ರಮಿಸಿದ್ದಾರೆ.
ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅವರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ಮಾಲಾಶ್ರೀ ಅವರನ್ನು ಹೆಚ್ಚು ಬಳಸಿಕೊಂಡಿಲ್ಲ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ ಎಂದಿನಂತೆ ಪಾತ್ರಗಳಿಗೆ ಮೋಸ ಮಾಡಿಲ್ಲ.
ಸುಚೇಂದ್ರ ಪ್ರಸಾದ್ ಮತ್ತು ಚಂದ್ರಪ್ರಭಾ ಪರವಾಗಿಲ್ಲ. ರಮೇಶ್ ಕೊಯಿರಾ ಛಾಯಾಗ್ರಹಣದಲ್ಲಿ ಕ್ಯಾಲೆಂಡರ್ ಸೊಬಗಿದೆ. ಸುನಾದ್ ಗೌತಮ್ ಸಂಗೀತಕ್ಕೆ ಧಮ್ ಬೇಕಿತ್ತು.

