ಜೀಬ್ರಾದಿಂದ ಹೊರ ಬಿತ್ತು ʻಸತ್ಯದೇವ್ʼ ಫಸ್ಟ್‌ ಲುಕ್‌; ಡಾಲಿ ಧನಂಜಯ್‌ ಸಾಥ್!

ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುತಾರಾಗಣದ ಚಿತ್ರ `ಜೀಬ್ರಾ’ ಅನೌನ್ಸ್‌ ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾಗೆ ಸತ್ಯದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಮಾತ್ರವಲ್ಲ ಸ್ಯಾಂಡಲ್‌ವುಡ್‌ ಸ್ಟಾರ್ ಡಾಲಿ ಧನಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ, ಸತ್ಯದೇವ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಫಸ್ಟ್ ಲುಕ್ ರಿವೀಲ್‌ ಮಾಡಿದೆ.

ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸತ್ಯ ದೇವ್ ಸಹ ಮುಖ್ಯ ಪಾತ್ರದಲ್ಲಿರಲಿದ್ದಾರೆ. ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಜೀಬ್ರಾ ತಂಡ ಫಸ್ಟ್‌ ಲುಕ್‌ ಅನಾವರಣಗೊಳಿಸಿದೆ.

ಪೋಸ್ಟರ್‌ನಲ್ಲಿ ಸತ್ಯದೇವ್ ಅತ್ಯಂತ ಸ್ಟೈಲಿಶ್ ಅವತಾರ ತಾಳಿದ್ದಾರೆ. ಸೂಟ್‌ ಧರಿಸಿ ಅತ್ಯಂತ ಖಡಕ್‌ ಲುಕ್‌ನಲ್ಲಿ ಕಂಡಿದ್ದಾರೆ. ತುಂಬಾ ಗಂಭೀರವಾಗಿ ಕಂಡಿದ್ದಾರೆ ಸತ್ಯದೇವ್‌. ಭುಜದ ಮೇಲೆ ಚೀಲವನ್ನು ಹೊತ್ತುಕೊಂಡು ಬಹಳ ಗಭೀರದಿಂದ ನಡೆಯುತ್ತಿರುವ ಲುಕ್‌ನಲ್ಲಿ ಕಂಡಿದ್ದಾರೆ. ಇನ್ನೊಂದು ಕೈಯಲ್ಲಿ ಪೆನ್ನು ಇದೆ. ಪೋಸ್ಟರ್‌ ಬ್ಯಾಕ್‌ರೌಂಡ್‌ನಲ್ಲಿ ನೋಟುಗಳು ಚೆಲ್ಲಾಪಿಲ್ಲಿಯಾಗಿವೆ. ʻಜೀಬ್ರಾ’ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸತ್ಯದೇವ್, ನಟಿ ಅಮೃತಾ ಐಯ್ಯಂಗಾರ್, ಪ್ರಿಯಾ ಭವಾನಿ ಶಂಕರ್, ತೆಲುಗಿನ ಜನಪ್ರಿಯ ಹಾಸ್ಯನಟ ಸುನಿಲ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಊರ್ವಶಿ ರೌಟೆಲ್ಲಾ ಇನ್ನೂ ಕೆಲವು ಪ್ರತಿಭಾವಂತ ನಟರು ಇರಲಿದ್ದಾರೆ. ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ.

ʻಲಕ್ ಫೇವರ್ಸ್ ದಿ ಬ್ರೇವ್ʼ ಎಂದು ಅಡಿಬರಹ ಕೂಡ ಇದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆಗುತ್ತಿವೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.

ಈಶ್ವರ್ ಕಾರ್ತಿಕ್ ನಿರ್ದೇಶನದ ಈ ಕ್ರೈಮ್ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಪ್ರಿಯಾ ಭವಾನಿ ಶಂಕರ್ ಮತ್ತು ಜೆನ್ನಿಫರ್ ಪಿಕ್ಕಿನಾಟೊ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸತ್ಯ ಅಕಾಲ ಮತ್ತು ಸುನಿಲ್ ಇತರ ಪ್ರಮುಖ ಪಾತ್ರಧಾರಿಗಳು. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ,ಮೀರಾಖ್ ಸಂಭಾಷಣೆ ಇದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಚಿತ್ರ ಸತ್ಯದೇವ್, ಡಾಲಿ ಧನಂಜಯ, ಸತ್ಯರಾಜ್, ಪ್ರಿಯಾ ಭವಾನಿ ಶಂಕರ್, ಜೆನ್ನಿಫರ್ ಪಿಕ್ಕಿನಾಟೊ, ಸತ್ಯ ಅಕಾಲ, ಸುನಿಲ್ ಹೀಗೆ ಬಹು ತಾರಾಗಣ ಹೊಂದಿದೆ.

Related Posts

error: Content is protected !!