Categories
ಸಿನಿ ಸುದ್ದಿ

‘ಆಡಿಸಿದಾತ’ನ ಟೀಸರ್ ಲಾಂಚ್

ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಚಿತ್ರ ‘ಆಡಿಸಿದಾತ’ ಟೀಸರ್ ಹೊರಬಂದಿದೆ. ಡಿ.ಬಿಟ್ಸ್ ಮ್ಯೂಜಿಕ್ ಸಂಸ್ಥೆಯ ಮೂಲಕ ಟೀಸರ್ ಲಾಂಚ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ‘ ಟೀಸರ್ ತುಂಬಾ ಚೆನ್ನಾಗಿದೆ’. ಅಣ್ಣ ರಾಘವೇಂದ್ರ ರಾಜ್ ಕುಮಾರ್ ಲುಕ್ ಅದ್ಬುತವಾಗಿದೆ. ಚಿತ್ರ ಪ್ರೇಕ್ಷಕರಿಗೆ ಖುಷಿ ಕೊಡಲಿದೆ‌ ಅಂತ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು.ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ ನಿರ್ದೇಶಕ ಫಣೀಶ್ ಭಾರದ್ವಾಜ್ ಉಪಸ್ಥಿತಿತರಿದ್ದರು.

Categories
ಸಿನಿ ಸುದ್ದಿ

ಡಿಎನ್ಎ ಟೆಸ್ಟ್ ಗೆ ರೆಡಿ

ಸಿನಿಮಾ ಪ್ರೇಕ್ಷಕ ಡಿ ಎನ್ ಎ ಟೆಸ್ಟ್ ಗೆ ರೆಡಿ ಆಗಬೇಕಿದೆ. ಯಾಕಂದ್ರೆ ನಿರ್ದೇಶಕ ಪ್ರಕಾಶ್ ಮೇಹು ಡಿಎನ್ ಎ ಟೆಸ್ಟ್ ಮಾಡಿಸಲು ಬರುತ್ತಿದ್ದಾರೆ. ಅಂದ ಹಾಗೆ ಅವರೇನು ವೈದ್ಯರೇ ಅಂತ ಯೋಚಿಸಬೇಡಿ. ಅವರು ನಿರ್ದೇಶಿಸಿ, ತೆರೆಗೆ ತರಲು ಹೊರಟಿರುವ ‘ಡಿಎನ್ ಎ’ ಹೆಸರಿನ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಮೇಹು ಪ್ರಕಾರ ಅದಕ್ಲೆ ಸೆನ್ಸಾರ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿ ತ್ರ ನೋಡಿದ ತಂತ್ರಜ್ಞರು ಅನೇಕರು ಬಹಳ ಮೆಚ್ಚುಗೆಯ ಮಾತನ್ನಾಡಿದ್ದಾರೆ, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ಕುತೂಹಲದಿಂದ ನೋಡಿಸಿಕೊಳ್ಳುವ ಭಾವನಾತ್ಮಕ ಚಿತ್ರ ಇದಾಗಿದೆ, ರಾಜಕುಮಾರ್,ಪುಟ್ಟಣ್ಣನವರ ಕಾಲದ ಕಥಾಪ್ರಧಾನ ಚಿತ್ರಗಳನ್ನು ನೆನಪಿಸಿಕೊಳ್ಳುವವರಿಗೆ ಈ ಚಿತ್ರ ರಸದೌತಣ ನೀಡಲಿದೆ ಅನ್ನುವುದು ನೋಡಿದವರ ಒಟ್ಟಾರೆ ಅಭಿಪ್ರಾಯ, ಪುನೀತ್ ರಾಜಕುಮಾರ್ ಅವರ “ರಾಜಕುಮಾರ” ನಂತರ ಆ ಜಾನರ್ನಲ್ಲಿ ಬರುತ್ತಿರುವ ಉತ್ತಮ ಚಿತ್ರ ಅನ್ನುವುದು ಸೆನ್ಸಾರ್ ಮಾಡಿದವರು ವ್ಯಕ್ತಪಡಿಸಿದ ಅಭಿಪ್ರಾಯ’ ಎನುತ್ತಾರೆ ನಿರ್ದೇಶಕ ಪ್ರಕಾಶ್ ಮೇಹು.

Categories
ಸಿನಿ ಸುದ್ದಿ

ಮಳೆಯ ಹಾಡಲ್ಲಿ ಮಿಂದೆದ್ದ ಸಲಗ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸಲಗ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊದು ಮಳೆಯ ಹಾಡು ಹೊರ ಬಂದಿದೆ. ಮಳೆಯೇ ಮಳೆಯೇ ಲೊರಿಕಲ್ ಸಾಂಗ್ ರಿಲೀಸ್ ಆಗಿದ್ದು, ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ.

Categories
ಸಿನಿ ಸುದ್ದಿ

ಕ್ರೇಜಿ ಪುತ್ರನ ಕಲರ್ ಫುಲ್ ಪೋಸ್ಟರ್ ರಿಲೀಸ್- ಮುಗಿಲ್ ಪೇಟೆಯಲ್ಲೊಂದು ಸುತ್ತು

#mugilpete

ಕ್ರೇಜಿ ಪುತ್ರನ ಚಿತ್ರದ ಕಲರ್ ಫುಲ್ ಪೋಸ್ಟರ್ ರಿಲೀಸ್

ಮನುರಂಜನ್ ಅಭಿನಯದ ಮುಗಿಲ್ ಪೇಟೆ ಚಿತ್ರತಂಡ
“ಗೌರಿ -ಗಣೇಶ” ಹಬ್ಬದಲ್ಲಿನಮ್ಮ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಭರತ್ ನಾವುಂದ ನಿರ್ದೇಶನದ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
ರಕ್ಷಾ ವಿಜಯಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧುಕೋಕಿಲ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಳೆ‌ ಮಳೆ ಹಾಡಿಗೆ ಮೈ ಮನವೆಲ್ಲಾ ತಂಪು

ಯುವ ನಟ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಈಗ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಇದೇ ಮೊದಲ‌ ಸಲ ನಿರ್ದೇಶನ ಮಾಡಿರುವ ಸೂರಜ್ ಅವರ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಳೆ ಮಳೆ ಎಂಬ ಬ್ಯೂಟಿಫುಲ್ ಹಾಡಿಗೆ ರಘುದೀಕ್ಷಿತ್ ಸಂಗೀತವಿದೆ. ಜೊತೆಗೆ ಆ ಹಾಡಿಗೆ ಧ್ವನಿಯನ್ನೂ ನೀಡಿದ್ದಾರೆ. ಇನ್ನು ವಾಸುಕಿ ವೈಭವ್ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿ.

Categories
ಸಿನಿ ಸುದ್ದಿ

ನಟ ರವಿಶಂಕರ್ ಗೌಡ ಪುತ್ರ ಈಗ ನಿರ್ದೇಶಕ

ನಟ ರವಿಶಂಕರ್ ಗೌಡ ಪುತ್ರ ಸೂರ್ಯ ತೇಜಸ್ವಿ ಈಗ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾನೆ. ಹೌದು ಇದೇ ಮೊದಲ‌ಸಲ ಸೂರ್ಯ ತೇಜಸ್ವಿ ವೈ… ಫೈ? ಎಂಬ ಪುಟಾಣಿ ಹಾಸ್ಯ ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾನೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ  ಕಿರುಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಈ ಕಿರುಚಿತ್ರದಲ್ಲಿ ಸೂರ್ಯ ಜೊತೆ ನಿಖಿಲ್ ನರೇಶ್ ನಟಿಸಿದ್ದಾರೆ. ಅಜಯ್ ಜಮದಗ್ನಿ ಸಂಕಲನವಿದೆ.

Categories
ಸಿನಿ ಸುದ್ದಿ

ವಾಸಂತಿ ನಲಿದಾಗ ಚಿತ್ರಕ್ಕೆ ಚಾಲನೆ

#ವಾಸಂತಿ_ನಲಿದಾಗ ಇದು ಹೊಸಬರ ಚಿತ್ರ. ಸೋಮವಾರ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
ರವೀಂದ್ರ ವಂಶಿ ನಿರ್ದೇಶಕರು. ಜೇನುಗೂಡು ಕೆ.ಎನ್ ಶ್ರೀಧರ್ ಚಿತ್ರದ ನಿರ್ಮಾಪಕರು. ಶ್ರೀದೇವಿ ಮಂಜುನಾಥ ಸಂಭಾಷಣೆ ಇದೆ. ಶ್ರೀ ಗುರು ಸಂಗೀತವಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮ

Categories
ಬ್ರೇಕಿಂಗ್‌ ನ್ಯೂಸ್

ಯೋಗಿಗೆ ಅದೃಷ್ಟ

– ಲೂಸ್ ಮಾದ ಯೋಗಿಗೆ ಖುಲಾಯಿಸಿದ ಅದೃಷ್ಟ

– ದೇವೇಂದ್ರ ಬಡಿಗೇರ್ ಹೊಸ ಸಿನಿಮಾಕ್ಕೆ ನಾಯಕ ನಟ

–  ಯೋಗಿಗೆ ಜೋಡಿಯಾಗಿ ಗೊಂಬೆಗಳ ಖ್ಯಾತಿಯ ಚೆಲುವೆ

– ಪಾವನಾ ಗೌಡ ನಾಯಕಿಯಾಗಿ ಆಯ್ಜೆ

– ಡಿಸೆಂಬರ್ ಹೊತ್ತಿಗೆ ಸಿನಿಮಾ‌ಶುರು

Categories
ಬ್ರೇಕಿಂಗ್‌ ನ್ಯೂಸ್

ಕಿರಿಕ್‌ ಶಂಕರನ ಹಾಡಿಗೆ ಭರ್ಜರಿ ಮೆಚ್ಚಗೆ- ಇದು ಲೂಸ್ ಮಾದ ಯೋಗಿಯ ಚಿತ್ರ

ಲೂಸ್ ಮಾದ ಯೋಗಿ ಅಭಿನಯದ ಕಿರಕ್ ಶಂಕರ್ ಸಿನಿಮಾ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಗಣೇಶ ಹಬ್ಬದಂದು ಲಿರಿಕಲ್ ವಿಡಿಯೊ ಬಿಡುಗಡೆ ಮಾಡಿದೆ.


ಎಂ.ಎನ್. ಕುಮಾರ್ ನಿರ್ಮಾಣದ ಈ ಚಿತ್ರವನ್ನು ಅನಂತ್ ರಾಜು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಇರುವ ‘ದರ್ಬಾರ್ ದರ್ಬಾರ್ ನಮ್ದೇ ದರ್ಬಾರ್ ದರ್ಬಾರ್…’ ಎಂಬ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಪಕ್ಕಾ ಮಾಸ್ ಫೀಲ್ ಇರುವ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

error: Content is protected !!