Categories
ಸಿನಿ ಸುದ್ದಿ

ರಾಮನ ಮೆಲೋಡಿ ಅವತಾರ! ರಿಷಿ ಸಿನಿಮಾದ ಹಿಸ ಹಾಡು ಬಂತು

ವಿಭಿನ್ನ ಹಾಗೂ ಹೊಸತನ ಸಿನಿಮಾಗಳ ಮೂಲಕ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿರುವ ಕನ್ನಡದ ಪ್ರತಿಭಾನ್ವಿತ ನಟ ರಿಷಿ. ಕಾಮಿಡಿ, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಯಾವುದೇ ಇರಲಿ ಅದಕ್ಕೆ ರಿಷಿ ಸರಿಹೊಂದುತ್ತಾರೆ. ಬರೀ ಸಿನಿಮಾ ಮಾತ್ರವಲ್ಲ ವೆಬ್ ಸೀರಿಸ್ ಮೂಲಕವೂ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ಆಕ್ಷನ್ ಕಟ್ ಹೇಳಿರುವ ಕ್ರೈಮ್ ಡ್ರಾಮಾ ‘ಶೈತಾನ್’ನಲ್ಲಿ ರಿಷಿ ರಗಡ್ ಆಗಿ ಮಾಸ್ ಅವತಾರದಲ್ಲಿ ಅಮೋಘವಾಗಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಈಗ ರಾಮನ ಅವತಾರ ಸಿನಿಮಾ ಮೂಲಕ ಲವರ್ ಬಾಯ್ ಆಗಿ ಪ್ರತ್ಯಕ್ಷರಾಗಿದ್ದಾರೆ.

ರಿಷಿ ನಟನೆಯ ಬಹು ನಿರೀಕ್ಷಿತ ಸಿನಿಮಾ ರಾಮನ ಅವತಾರ. ಇತ್ತೀಚೆಗೆಷ್ಟೇ ರಾಮ ಈಸ್ ಜೆಂಟಲ್ ಮೆನ್ ಅಂತಾ ಹೆಜ್ಜೆ ಹಾಕಿದ್ದ ರಿಷಿ ಮನಸ್ಸು ಬೇರೆಯ ದಿಕ್ಕಿಗೆ ಸಾಗಲು ಎಂದು ಗುನುಗುತ್ತಿದ್ದಾರೆ. ಅಂದರೆ ರಾಮನ ಅವತಾರ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

ಸಿಂಪಲ್ ಸುನಿ ಸಾಹಿತ್ಯದ ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಉಡುಪಿ ಬೀಚ್ ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ ಜೋಡಿ ನೋಡುಗರ ಗಮನಸೆಳೆಯುತ್ತಿದೆ.

ರಾಮನ ಅವತಾರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸದ್ಯ ಸೆನ್ಸಾರ್ ಅಂಗಳಕ್ಕೆ ಹೊರಡಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ಹಾಸ್ಟೆಲ್ ಹುಡುಗರ ಸಕ್ಸಸ್ ನೋಡಿ ಶಿವಣ್ಣ ಏನಂದ್ರು ಗೊತ್ತಾ?

ಯುವ ಪ್ರತಿಭೆಗಳ ಹೊಸತನ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆನ್ನು ತಟ್ಟಿದ್ದಾರೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರಚಾರ ಮಾಡಿ, ಇಡೀ ಸ್ಯಾಂಡಲ್ ವುಡ್ ಸಾಥ್ ಕೊಟ್ಟಿರುವ ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಕನಸ್ಸಿನ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆ. ಹಾಸ್ಟೆಲ್ ಹುಡುಗರ ಫನ್ ರೈಡ್ ಕಥೆಯನ್ನು ನಿನ್ನೆ ಗೀತಾ ಶಿವರಾಜ್ ಕುಮಾರ್ ಮಗಳು ನಿವೇದಿತಾ ಒಟ್ಟಿಗೆ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂಜಾಯ್ ಮಾಡಿದ್ದರು. ಇಂದು ಶಿವಣ್ಣನ ನಾಗವರ ನಿವಾಸದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಹೊಸಬರ ಹೊಸ ಪ್ರಯತ್ನಕ್ಕೆ ಶಿವಣ್ಣ, ಗೀತಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಶಿವಣ್ಣ ಮಾತನಾಡಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಇಡೀ ತಂಡಕ್ಕೆ ಗುಡ್ ಲಕ್. ನಿನ್ನೆ ನಾನು ಸಿನಿಮಾ ನೋಡಬೇಕಿತ್ತು. ವರುಣ್ ಗೆ ಹೇಳಿದ್ದೇ ನಾನು ಫಸ್ಟ್ ಡೇ ನೋಡುತ್ತೇನೆ ಎಂದು. ಆದರೆ ಜಾಹೀರಾತು ಶೂಟ್ ಇದ್ದಿದ್ದರಿಂದ ಆಗಲಿಲ್ಲ. ಅದಕ್ಕೆ ಗೀತಾ ಬಂದಿದ್ದರು. ಮೋರಲ್ ಸಪೋರ್ಟ್ ಆಗಿರುತ್ತದೆ ಎಂದಿದ್ದೆ. ಸಿನಿಮಾ ಚೆನ್ನಾಗಿದ್ದರೆ ಮೋರಲ್ ಸಪೋರ್ಟ್ ಗಿಂತ ನಾವು ನೋಡಿ ತೃಪ್ತಿಪಡಬಹುದು. ನನ್ನ ಪರವಾಗಿ, ನನ್ನ ಚಿಕ್ಕ ಮಗಳು ನಿವೇದಿತಾ ಎಲ್ಲರೂ ಸಿನಿಮಾ ನೋಡಿದರು. ವರುಣ್ ನನಗೆ 15 ವರ್ಷದಿಂದ ಗೊತ್ತು. ಆ ಸಮಯದಿಂದ ನೋಡುತ್ತಿದ್ದೇನೆ. ತುಂಬ ಕಷ್ಟಪಟ್ಟು ಮೇಲೆ ಬಂದವರು.

ಯಾವುದೇ ಮಾಡಿದರು ಬಹಳ ಶಿಸ್ತಿನಿಂದ ಮಾಡುತ್ತಾನೆ. ಅವರ ಬಳಿಕ ಸಿನ್ಸಿಯಾರಿಟಿ ಇದೆ. ನನಗೆ ಅದು ತುಂಬಾ ಇಷ್ಟ. ಸಾಂಗ್ಸ್ ಎಲ್ಲಾ ನೋಡಿದಾಗ ತುಂಬಾ ಇಂಟ್ರೆಸ್ಟಿಂಗ್ ಅನಿಸಿತು. ಒನ್ಸ್ ನೋಡಿದಾಗ ಒಂದು ಸ್ಟೈಕ್ ಆಯ್ತು. ಜನ ಥಿಯೇಟರ್ ಗೆ ಬರದ ಸಮಯದಲ್ಲಿ ಜನ ಥಿಯೇಟರ್ ಗೆ ಬಂದು ಸಪೋರ್ಟ್ ಮಾಡಿದ್ದಾರೆ. ಇಡೀ ಸ್ಯಾಂಡಲ್ ವುಡ್ ಸಿನಿಮಾಗೆ ಸಾಥ್ ಕೊಟ್ಟಿದೆ. ಇಂಡಸ್ಟ್ರೀ ಅಂದರೆ ಒಂದು ಫ್ಯಾಮಿಲಿ. ಫ್ಯಾಮಿಲಿ ಅಂದಾಗ ಯಾರದ್ದೇ ಸಿನಿಮಾವಾಗಲಿ ಪ್ರೋತ್ಸಾಹ ಮಾಡಬೇಕು ಎಂದರು.

ರಮ್ಯಾ ವಿವಾದದ ಬಗ್ಗೆಯೂ ಮಾತನಾಡಿದ ಶಿವಣ್ಣ, ಯಾರ ಬಗ್ಗೆ ಏನು ಕಮೆಂಟ್ ಮಾಡುವುದು ಬೇಡ. ಎಲ್ಲದಕ್ಕಿಂತ ಕೊನೆಗೆ ಗೆಲುವು ಮುಖ್ಯ. ಸಿನಿಮಾ ಬರೋಕು ಮೊದಲು ಒಳ್ಳೆ ರಿಪೋರ್ಟ್ ಇತ್ತು. ಒಳ್ಳೆ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಾವುದೇ ತಡೆ ಬರಲ್ಲ. ಅದಕ್ಕೆ ಇದೇ ಉತ್ತಮ ಉದಾಹರಣೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾ ಕೈಬಿಡಲ್ಲ. ಸತ್ಯ ಇದ್ದರೆ ಜಯ ಇದ್ದೇ ಇರುತ್ತೆ. ಅವರವರು ತಿಳಿದುಕೊಳ್ಳಬೇಕು. ಯಾಕೆ ಹೀಗಾಯ್ತು ಅನ್ನೋದು ಗೊತ್ತಾಗ್ತಿಲ್ಲ. ನಮ್ಮ ಇಂಡಸ್ಟ್ರಿ ಬೆಳೀಬೇಕು ಅಷ್ಟೆ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಹೊಸಬರು ಬಂದಾಗ ಎಲ್ಲರೂ ಸಪೋರ್ಟ್ ಮಾಡಬೇಕು. ಆ ವಿಚಾರವನ್ನು ಈಗ ದೊಡ್ಡದು ಮಾಡುವುದು ಬೇಡ ಎಂದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಈ ತರ ಸಿನಿಮಾ ನೋಡಿ ಬಹಳ ವರ್ಷವಾಗಿತ್ತು. ವರುಣ್ ನಮ್ಮ ಕುಟುಂಬ. ನಿರ್ದೇಶಕರಿಂದ ಹಿಡಿದು ಎಲ್ಲರು ಹೊಸಬರೇ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಸ್ಟೆಲ್ ಲೈಫ್ ಹೀಗೆ ಇತ್ತೇನೋ ಅನಿಸುವಷ್ಟು ಬಹಳ ಸ್ವಾಭಾವಿಕವಾಗಿತ್ತು. ಎಲ್ಲಾ ಫ್ಯಾಮಿಲಿ ಕುಳಿತು ನೋಡಬಹುದು. ಈ ತರ ಸಿನಿಮಾಗಳು ಮತ್ತಷ್ಟು ಬರಬೇಕು. ಆರಂಭದಿಂದ ಕೊನೆತನಕ ಎಲ್ಲಿಯೂ ಬೋರ್ ಆಗುವುದಿಲ್ಲ. ನಾನು ಸಿನಿಮಾ ಎಂಜಾಯ್ ಮಾಡಿದೆ. ಇಡೀ ತಂಡಕ್ಕೆ ಎಲ್ಲರಿಗೂ ಒಳ್ಳೆದಾಗಲಿ ಎಂದರು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ದಿಗಂತ್, ರಿಷಬ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್, ರಮ್ಯಾ ಸಾಥ್ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಬ್ಯಾನರ್ ನಡಿ ಈ ಚಿತ್ರವನ್ನು ಅರ್ಪಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ನಟಿಸಿ ಸೈ ಎನಿಸಿಕೊಂಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ವರುಣ್ ಗೌಡ ಹಾಗೂ ಪ್ರಜ್ವಲ್ ನಿರ್ಮಿಸಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಗಿದೆ.

Categories
ಸಿನಿ ಸುದ್ದಿ

ಋತು ಎಂಬ ಮನಮುಟ್ಟುವ ಕಿರುಚಿತ್ರ

ಕಾಲ ಎಷ್ಟೇ ಮುಂದುವರೆದರೂ ಇನ್ನೂ ಕೆಲವು ಆಚರಣೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ಅದರಲ್ಲಿ ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟು ಕೂಡ ಒಂದು.
ಈ ಮುಟ್ಟಿನ ಸಮಸ್ಯೆ ಬಗ್ಗೆ ಟೆಂಟ್ ಸಿನಿಮಾದ ಸಮರ್ಥ್ ನಾಗರಾಜ್ ಮನಮುಟ್ಟುವ “ಖುತು” ಎಂಬ 22 ನಿಮಿಷಗಳ ಕಿರುಚಿತ್ರ ಮಾಡಿದ್ದಾರೆ. “” ಋತು” ವಿಗೆ ಬದಲಾಗಬೇಕು ಎಂಬ ಅಡಿಬರಹ ಕೂಡಯಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ವೇಳೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಮಯೂರಿ ಖ್ಯಾತರಿ ಹಾಗೂ ನಿರ್ದೇಶಕ ಶೂನ್ಯ ಈ ವೇಳೆ ಇದ್ದರು.

ಮೊದಲು “ಋತು” ಕಿರುಚಿತ್ರದ ಬಗ್ಗೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ನಾವು ಒಂದು ಕಡೆ ಚಂದ್ರಯಾನಕ್ಕೆ ಸಜ್ಜಾಗಿದ್ದೇವೆ. ಮತ್ತೊಂದು ಕಡೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ‌. ಹೆಚ್ಚಾಗಿ ಹಳ್ಳಿ ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಇದರ ಬಗ್ಗೆ ಅರಿವಿಲ್ಲದ ಜನ ಹೆಚ್ಚಿದ್ದಾರೆ. ಇಂದು ಹಳ್ಳಿಗಳಲ್ಲಿ ಮೂರು ವೈನ್ ಸ್ಟೋರ್ ಗಳಿರುತ್ತದೆ. ಅಜ್ಜ ಅಜ್ಜಿಯರ ಕೈಯಲ್ಲೂ ಮೊಬೈಲ್ ಇರುತ್ತದೆ. ಆದರೆ ಸರಿಯಾದ ಶೌಚಾಲಯ ಇರುವುದಿಲ್ಲ. ನಾವು ಇನ್ನೂ ಸಾಕಷ್ಟು ಬದಲಾಗಬೇಕು ಎಂಬುದನ್ನು ಸಮರ್ಥ್ ಈ ಕಿರುಚಿತ್ರದ ಮೂಲಕ ಸಮರ್ಥವಾಗಿ ತೋರಿಸಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದರು.

ನಟಿ ಮಯೂರಿ ಹಾಗೂ ನಿರ್ದೇಶಕ ಶೂನ್ಯ ಸಹ ಕಿರುಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು.

ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ಸಾಕಷ್ಟು ಕಲಿತಿದ್ದೇನೆ.‌ ಆ ಕಲಿಕೆಯೆ ಈ ಕಿರುಚಿತ್ರ ಮಾಡಲು ಕಾರಣ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯಿದು. ಪಿರಿಯಡ್ಸ್ ಎಂದರೆ ಒಂದು ಸಮಸ್ಯೆ ಅಂದುಕೊಂಡಿರುವವರು ಬಹಳ ಜನರಿದ್ದಾರೆ. ನಮ್ಮ ಈ ಪ್ರಯತ್ನದಿಂದ ಇದು ಸಮಸ್ಯೆಯಲ್ಲ .”ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ ಮುಟ್ಟಲ್ಲವೆ ಸೃಷ್ಟಿಯಾ ಹುಟ್ಟು,,
ಮುಟ್ಟು ಮುಟ್ಟೆಂದೇಕೆ ಮುಟ್ಟಾಳರಂತೆ ಆಡುವಿರಿ ಮುಟ್ಟಲವೆ ನಮ್ಮೆಲರ ಹುಟ್ಟಿನ ಗುಟ್ಟು” ಎಂಬ ಉತ್ತಮ ಸಂದೇಶವನ್ನು ಸಾರುದ್ದೇವೆ. ಕಿರುಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ, ನಿರ್ಮಾಣ ಮಾಡಿದ ನನ್ನ ತಂದೆ ನಾಗರಾಜ್ ಅವರಿಗೆ ಹಾಗೂ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಧನ್ಯವಾದ ಎಂದರು ನಿರ್ದೇಶಕ ಸಮರ್ಥ್ ನಾಗರಾಜ್.

ಕಿರುಚಿತ್ರದಲ್ಲಿ ನಟಿಸಿರುವ ” ಜೊತೆಜೊತೆಯಲಿ” ಖ್ಯಾತಿಯ ಅಪೂರ್ವ, ಸಿಂಚನ ಶಿವಣ್ಣ ಮುಂತಾದವರು “ಖುತು”ವಿನ ಬಗ್ಗೆ ಮಾಹಿತಿ ನೀಡಿದರು.

ಈ ಕಿರುಚಿತ್ರ ಎನ್ ಆರ್ ಎಸ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ನೋಡಲು ಲಭ್ಯವಿದೆ.“ಋತು” ಮುಟ್ಟಿನ ಬಗ್ಗೆ ಒಂದು ಮನಮುಟ್ಟುವ ಕಿರುಚಿತ್ರ .

ಕಾಲ ಎಷ್ಟೇ ಮುಂದುವರೆದರೂ ಇನ್ನೂ ಕೆಲವು ಆಚರಣೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ಅದರಲ್ಲಿ ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟು ಕೂಡ ಒಂದು.
ಈ ಮುಟ್ಟಿನ ಸಮಸ್ಯೆ ಬಗ್ಗೆ ಟೆಂಟ್ ಸಿನಿಮಾದ ಸಮರ್ಥ್ ನಾಗರಾಜ್ ಮನಮುಟ್ಟುವ “ಖುತು” ಎಂಬ 22 ನಿಮಿಷಗಳ ಕಿರುಚಿತ್ರ ಮಾಡಿದ್ದಾರೆ. “” ಋತು” ವಿಗೆ ಬದಲಾಗಬೇಕು ಎಂಬ ಅಡಿಬರಹ ಕೂಡಯಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಮಯೂರಿ ಖ್ಯಾತರಿ ಹಾಗೂ ನಿರ್ದೇಶಕ ಶೂನ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮೊದಲು “ಋತು” ಕಿರುಚಿತ್ರದ ಬಗ್ಗೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ನಾವು ಒಂದು ಕಡೆ ಚಂದ್ರಯಾನಕ್ಕೆ ಸಜ್ಜಾಗಿದ್ದೇವೆ. ಮತ್ತೊಂದು ಕಡೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ‌. ಹೆಚ್ಚಾಗಿ ಹಳ್ಳಿ ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಇದರ ಬಗ್ಗೆ ಅರಿವಿಲ್ಲದ ಜನ ಹೆಚ್ಚಿದ್ದಾರೆ. ಇಂದು ಹಳ್ಳಿಗಳಲ್ಲಿ ಮೂರು ವೈನ್ ಸ್ಟೋರ್ ಗಳಿರುತ್ತದೆ. ಅಜ್ಜ ಅಜ್ಜಿಯರ ಕೈಯಲ್ಲೂ ಮೊಬೈಲ್ ಇರುತ್ತದೆ. ಆದರೆ ಸರಿಯಾದ ಶೌಚಾಲಯ ಇರುವುದಿಲ್ಲ. ನಾವು ಇನ್ನೂ ಸಾಕಷ್ಟು ಬದಲಾಗಬೇಕು ಎಂಬುದನ್ನು ಸಮರ್ಥ್ ಈ ಕಿರುಚಿತ್ರದ ಮೂಲಕ ಸಮರ್ಥವಾಗಿ ತೋರಿಸಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದರು.

ನಟಿ ಮಯೂರಿ ಹಾಗೂ ನಿರ್ದೇಶಕ ಶೂನ್ಯ ಸಹ ಕಿರುಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು.

ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ಸಾಕಷ್ಟು ಕಲಿತಿದ್ದೇನೆ.‌ ಆ ಕಲಿಕೆಯೆ ಈ ಕಿರುಚಿತ್ರ ಮಾಡಲು ಕಾರಣ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯಿದು. ಪಿರಿಯಡ್ಸ್ ಎಂದರೆ ಒಂದು ಸಮಸ್ಯೆ ಅಂದುಕೊಂಡಿರುವವರು ಬಹಳ ಜನರಿದ್ದಾರೆ. ನಮ್ಮ ಈ ಪ್ರಯತ್ನದಿಂದ ಇದು ಸಮಸ್ಯೆಯಲ್ಲ .”ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ ಮುಟ್ಟಲ್ಲವೆ ಸೃಷ್ಟಿಯಾ ಹುಟ್ಟು,,
ಮುಟ್ಟು ಮುಟ್ಟೆಂದೇಕೆ ಮುಟ್ಟಾಳರಂತೆ ಆಡುವಿರಿ ಮುಟ್ಟಲವೆ ನಮ್ಮೆಲರ ಹುಟ್ಟಿನ ಗುಟ್ಟು” ಎಂಬ ಉತ್ತಮ ಸಂದೇಶವನ್ನು ಸಾರುದ್ದೇವೆ. ಕಿರುಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ, ನಿರ್ಮಾಣ ಮಾಡಿದ ನನ್ನ ತಂದೆ ನಾಗರಾಜ್ ಅವರಿಗೆ ಹಾಗೂ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಧನ್ಯವಾದ ಎಂದರು ನಿರ್ದೇಶಕ ಸಮರ್ಥ್ ನಾಗರಾಜ್.

ಕಿರುಚಿತ್ರದಲ್ಲಿ ನಟಿಸಿರುವ ” ಜೊತೆಜೊತೆಯಲಿ” ಖ್ಯಾತಿಯ ಅಪೂರ್ವ, ಸಿಂಚನ ಶಿವಣ್ಣ ಮುಂತಾದವರು “ಖುತು”ವಿನ ಬಗ್ಗೆ ಮಾಹಿತಿ ನೀಡಿದರು.

ಈ ಕಿರುಚಿತ್ರ ಎನ್ ಆರ್ ಎಸ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ನೋಡಲು ಲಭ್ಯವಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ವಿಕ್ರಂ ವೇದ ಮ್ಯೂಸಿಕ್ ಡೈರೆಕ್ಟರ್! ಶಿವಣ್ಣನ ಸಿನಿಮಾಗೆ ಸ್ಯಾಮ್ ಟ್ಯೂನ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಘೋಷಣೆಯಾಗಿವೆ. ಏಕಕಾಲಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಗಳು ಅನೌನ್ಸ್ ಆಗಿವೆ. ಈ ಪೈಕಿ ಶಿವಣ್ಣ SCFC01 ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ‌. ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕರಾದ ಸ್ಯಾಮ್ ಸಿ.ಎಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಕ್ರಂ ವೇದ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿರುವ ಸ್ಯಾಮ್ ಕರುನಾಡ ಚಕ್ರವರ್ತಿ ಶಿವಣ್ಣ ಬಣ್ಣ ಹಚ್ಚಲಿರುವ ಅಪ್ ಕಮ್ಮಿಂಗ್ ಪ್ರಾಜೆಕ್ಟ್ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಧೀರ್ ಚಂದ್ರ ಪದ್ರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಾರ್ತಿಕ್ ಅದ್ವೈತ್ ನಿರ್ದೇಶನದಲ್ಲಿ ಮಾಡಲಿದ್ದಾರೆ.

ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಪ್ರಾಜೆಕ್ಟ್ ಮೂಲಕ ಸ್ಯಾಮ್ ಸಿ ಎಸ್ ಪ್ಯಾನ್ ಇಂಡಿಯಾ ಮ್ಯೂಸಿಕಲ್ ಐಕಾನ್ ಆಗಲಿದ್ದಾರೆ.

Categories
ಸಿನಿ ಸುದ್ದಿ

ಜಂಟಲ್ ಮ್ಯಾನ್ 2 ಸಿನಿಮಾಗೆ ಚಾಲನೆ: ಸಂಗೀತ ಸಂಯೋಜನೆ ಶುರು

ಈ ಹಿಂದೆ ‘ಜಂಟಲ್ ಮ್ಯಾನ್’, ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ.

ಈ ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಅದಕ್ಕೂ ಮುನ್ನ, ಸಂಗೀತ ಸಂಯೋಜನೆಯ ಕೆಲಸಗಳು ಪ್ರಾರಂಭವಾಗಿವೆ.
RRR ಚಿತ್ರದ ‘ನಾಟ್ಟು ನಾಟ್ಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಕೀರವಾಣಿ ಸಂಗೀತಕ್ಕೆ ಖ್ಯಾತ ಗೀತರಚನೆಕಾರ ವೈರಮುತ್ತು ಸಾಹಿತ್ಯ ರಚಿಸುತ್ತಿದ್ದಾರೆ. ಈಗಾಗಲೇ ಸೋಮವಾರದಿಂದ ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಟ್ಯೂನ್ ಹಾಕುವ ಕೆಲಸ ಪ್ರಾರಂಭವಾಗಿದೆ. ಈ ಸೆಷನ್ನಲ್ಲಿ ಕೀರವಾಣಿ, ವೈರಮುತ್ತು, ಕುಂಜುಮೋನ್, ಗೋಕುಲ್ ಕೃಷ್ಣ ಮುಂತಾದವರು ಭಾಗವಹಿಸಿದ್ದಾರೆ.


‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಎ. ಗೋಕುಲ್ ಕೃಷ್ಣ ಕಥೆ-ಚಿತ್ರಕಥೆ ರಚಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.

Categories
ಸಿನಿ ಸುದ್ದಿ

ಸುದೀಪ್ ಮನೆ ಅಲ್ಲ, ಚೇಂಬರ್ ಮುಂದೆ ಧರಣಿ ಕೂತ ನಿರ್ಮಾಪಕ ಎನ್.ಕುಮಾರ್!

ನಟ ಸುದೀಪ್ ಅವರು ನಮಗೆ ಮಾತು ಕೊಟ್ಟಂತೆ ನಮಗೆ ಡೇಟ್ ನೀಡಿ ಜೊತೆಗೆ ಸಿನಿಮಾ ಮಾಡಬೇಕು. ಒಂದು‌ ವೇಳೆ ಸಿನಿಮಾ ಮಾಡಲು ಡೇಟ್ ಕೊಡದಿದ್ದರೆ ಅವರ ಮನೆಯ ಮುಂದೆ ಧರಣಿ ಕೂರುವುದಾಗಿ ನಿರ್ಮಾಪಕ ಎನ್.ಕುಮಾರ್ ಹೇಳಿಕೆ ನೀಡಿದ್ದರು. ಆದರೆ, ಕುಮಾರ್ ಅವರು ಸುದೀಪ್ ಮನೆಯ ಮುಂದೆ ಧರಣಿ ಮಾಡಲಿಲ್ಲ. ಸುದೀಪ್ ಮನೆಯ ಮುಂದರ ಧರಣಿ ಮಾಡದೆ, ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದರು ಧರಣಿ ನಡೆಸಿದ್ದಾರೆ.

ನಮ್ಮ ಜೊತೆಗೆ ಒಂದು ಸಿನಿಮಾ ಮಡಿಕೊಡಬೇಕು ಎಂದು ಸುದೀಪ್ ಅವರಿಗೆ ಅಡ್ವಾನ್ಸ್ ಕೊಡಲಾಗಿತ್ತಂತೆ. ಆಎರೆ, ಸುದೀಪ್ ಮಾತ್ರ ಸಿನಿಮಾ ಮಾಡಲು ಡೇಟ್ ಕೊಡದೆ, ಅಡ್ವಾನ್ಸ್ ಕೂಡ ಕೊಡದೆ ಚಿತ್ರ ಮುಂದೂಡುತ್ತಿದ್ದಾರೆ. ಹೀಗಾಗಿ ನನಗೆ ನಷ್ಟ ಕಷ್ಟ ಎರಡೂ ಆಗಿದೆ ಅಂತ ಈ ಹಿಂದೆ ಕುಮಾರ್ ಅವರು ವಾಣಿಜ್ಯ ಮಂಡಳಿಯಲ್ಲಿಬಪ್ರೆಸ್ ಮೀಟ್ ಮಾಡಿ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಆಗ ಕುಮಾರ್, ನನಗೆ ಸುದೀಪ್ ಸ್ಪಂದಿಸದಿದ್ದರೆ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದರು. ಆದರೆ, ಕುಮಾರ್ ಮಾತ್ರ ಸುದೀಪ್ ಅವರ ಮನೆಯ ಮುಂದೆ ಧರಣಿ ಮಾಡಲಿಲ್ಲ.

ಸುದೀಪ್ ಕೂಡ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ನಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ನಾನು ತಪ್ಪು ಮಾಡಿದ್ದರೆ ಅಲ್ಲೇ ದಂಡ ಕಟ್ಟುತ್ತೇನೆ ಎಂದಿದ್ದರು.
ಆದರೆ, ಕುಮಾರ್ ಇದಕ್ಕೆ ಒಪ್ಪದೆ ವಾಣಿಜ್ಯ ಮಂಡಳಿಯಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದು ಚೇಂಬರ್ ಮುಂದೆ ಧರಣಿ ನಡೆಸಿದ್ದಾರೆ.

ಧರಣಿ ವೇಳೆ ಕುಮಾರ್ ಹೇಳಿದಿಷ್ಟು, ವಾಣಿಜ್ಯ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಿ, ಆ ಸಭೆಗೆ ಸುದೀಪ್ ಬರಬೇಕು. ಅಲ್ಲೇ ನಾನು ಎಲ್ಲಾ ದಾಖಲೆ ಕೊಡುತ್ತೇನೆ. ಸುದೀಪ್ ಬಗ್ಗೆ ಎಲ್ಲೂ ಕೆಟ್ಟ ಪದ ಮಾತಾಡಿಲ್ಲ. ನನ್ನ ಸಮಸ್ಯೆಗೆ ಅವರು ಸ್ಪಂದಿಸಿಲ್ಲ ಎಂದು ಹೇಳಿದ್ದೇನೆ. ಚೇಂಬರ್ ನಮ್ಮ ಮಾತೃಸಂಸ್ಥೆ . ಏನೇ ಸಮಸ್ಯೆ ಇದ್ದರೂ ಅಲ್ಲೇ ಬಗೆಹರಿಸಿಕೊಳ್ಳೋಣ ಎಂದರು.

Categories
ಸಿನಿ ಸುದ್ದಿ

ಆ ಹುಡುಗಿ ಎಷ್ಟ್ ಚೆಂದ ಈ ಹುಡುಗನೂ ಅಷ್ಟೇ ಚಂದ! ಕೆಂಡದ ಸೆರಗು ಸಿನಿಮಾದ ಮತ್ತೊಂದು ಸಾಂಗ್ ಬಂತು

ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ.

ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ಈ ಹುಡುಗಿ ಎಷ್ಟು ಚೆಂದ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿ ಆರ್ ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸಿದ್ಧಾರ್ಥ್ ಮಹೇಶ್ ಈಗ ನಿರ್ದೇಶಕ: ನಟನೆ ಜೊತೆಗೆ ಆ್ಯಕ್ಷನ್ ಕಟ್ ಹೇಳ್ತಾರೆ ಯುವ ಸಿಪಾಯಿ

ನನ್ನ ಸಿಪಾಯಿ ಮತ್ತು ಗರುಡ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ. ನಾಯಕನಾಗಿ ಬಣ್ಣ ಹಚ್ಚುತ್ತಿರುವ ಸಿದ್ದಾರ್ಥ್ ಮಹೇಶ್ ನಿರ್ದೇಶಕರಾಗಿಯೂ ಹೊಸ ಹೆಜ್ಜೆ ಇಡುತ್ತಿದ್ದಾರೆ. ಬಹಳ ವರ್ಷದಿಂದಲೂ ಸಿದ್ದಾರ್ಥ್ ಅವರಿಗೆ ಡೈರೆಕ್ಟರ್ ಕ್ಯಾಪ್ ತೊಡಬೇಕೆಂಬ ಕನಸು ಇತ್ತು.

ಆದರೆ ಅದಕ್ಕೆ ಘಳಿಗೆ ಕೂಡಿ ಬಂದಿರಲಿಲ್ಲ. ಈಗ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಹಿಂದೆ ನನ್ನ ಸಿಪಾಯಿ ಸಿನಿಮಾದ ಕಥೆಯಲ್ಲಿ ಸಿದ್ಧಾರ್ಥ್‌ ಕೂಡ ಕೆಲಸ ಮಾಡಿದ್ದರು. ಅದೇ ಅನುಭವದ ಮೇಲೆ ‘ಗರುಡ’ ಸಿನಿಮಾದ ಕಥೆಯನ್ನು ಬರೆದಿದ್ದರು. ಈಗ ಅವರ ನಿರ್ದೇಶನದ ಚಿತ್ರಕ್ಕೂ ಕಥೆ ಬರೆದು ಆಕ್ಷನ್‌ ಕಟ್ ಹೇಳುತ್ತಿದ್ದಾರೆ.

ಅತಶ್ರೀ ಮೀಡಿಯಾ ಕ್ರಿಯೇಶನ್ಸ್ ಮತ್ತು ಆರೇಂಜ್ ಪಿಕ್ಸೆಲ್ಸ್ ನಡಿ ಸಿದ್ದಾರ್ಥ್ ಮಹೇಶ್ ಸ್ನೇಹಿತರಾಗಿರುವ ಎಸ್.ಚಂದನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳು ಸಿನಿಮಾ ನಿರ್ಮಿಸಿದ್ದ ಚಂದನ್ ಅವರಿಗೆ ಇದು ಚೊಚ್ಚಲ ನಿರ್ಮಾಣದ ಕನ್ನಡ ಚಿತ್ರ. ತಾನೇ ನಿರ್ದೇಶನ ಮಾಡಬೇಕೆಂದು ಸಿದ್ದಾರ್ಥ್ ಗೆ ಪ್ರೋತ್ಸಾಹ ಕೊಟ್ಟು ಹಣ ಹಾಕುತ್ತಿದ್ದಾರೆ.

ಕಥೆ ಕೊನೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್ ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೇ ಸಿದ್ದಾರ್ಥ್ ಮಹೇಶ್ ನಟಿಸಿ ನಿರ್ದೇಶನದ ಸಿನಿಮಾ ಪ್ರೇಮಕಥೆ ಆಕ್ಷನ್ ಕಥಾಹಂದರ ಹೊಂದಿದೆ.

ಮಲ್ಟಿಮೀಡಿಯಾ ಬಗ್ಗೆ ಶಿಕ್ಷಣ ಜ್ಞಾನ ಹೊಂದಿರುವ ಅವರು ನಿರ್ದೇಶನಕ್ಕೆ ಸಹಾಯಕಾರಿ ಎನ್ನುತ್ತಾರೆ. ಬಹಳ ವರ್ಷಗಳಿಂದ ನಿರ್ದೇಶಕನ ಆಗಬೇಕು ಎಂಬ ಸಿದ್ದಾರ್ಥ್ ಮಹೇಶ್ ಕನಸು ಈಗ ಸಹಕಾರವಾಗುತ್ತಿದೆ.

Categories
ಸಿನಿ ಸುದ್ದಿ

ಜಗತ್ತು ಸುತ್ತಿ ಬಂದ ಶಿವಮ್ಮ! ಎಲ್ಲೆಡೆ ಶಿವಮ್ಮನಿಗೆ ಮೆಚ್ಚುಗೆ

ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಆ ಪೈಕಿ ಶಿವಮ್ಮ ಕೂಡ ಸೇರಿದೆ.

ಹೌದು ರಿಷಬ್ ಶೆಟ್ಟಿ ಸಂಸ್ಥೆಯ ಶಿವಮ್ಮ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.

ಜ್ಯೆಶಂಕರ್ ಆರ್ಯರ್, ನಿರ್ದೇಶನದ ಚೊಚ್ಚಲ ಚಿತ್ರ.
ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ನಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ‘ಶಿವಮ್ಮ’ ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ.

ಇಲ್ಲೆಲ್ಲಾ ಪ್ರಶಸ್ತಿ ಬಂದಿದೆ…


ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ,2022
ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್ , ನಾಂಟೆಸ್ 2022
ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ
ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ
ಬ್ಲಾಕ್ ಮೂವಿ ,ಸ್ವಿಟ್ಜರ್ಲ್ಯಾಂಡ್
ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್
ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್
ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ
ಇಮೆಜಿನ್ ಇಂಡಿಯಾ, ಸ್ಪೇನ್
ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ
ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್
ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ , ರಷ್ಯಾ.

Categories
ಸಿನಿ ಸುದ್ದಿ

ಜುಲೈ 21ಕ್ಕೆ ಡೇವಿಡ್ ಎಂಟ್ರಿ: ಶ್ರೇಯಸ್ ಚಿಂಗಾ ನಟಿಸಿ ನಿರ್ದೇಶಿಸಿರುವ ಚಿತ್ರ

ನೂತನ ಪ್ರತಿಭೆ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ಡೇವಿಡ್ ” ಚಿತ್ರ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.

ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ‌. ಈ ಚಿತ್ರದ ಬಗ್ಗೆ ಕುರುತು ನಾಯಕ ಶ್ರೇಯಸ್ ಚಿಂಗಾ ಅವರು,‌ ಧನರಾಜ ಬಾಬು ಅವರ ಬಳಿ ಹೇಳಿದಾಗ, ಹೊಸತಂಡದ ಹೊಸಪ್ರಯತ್ನಕ್ಕೆ ಧನರಾಜ ಬಾಬು ಅವರು ಪ್ರೋತ್ಸಾಹ ನೀಡಲು ಮುಂದಾದರು.

ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಾಕಷ್ಟು ಮಾತನಾಡಿದರು.

“ಡೇವಿಡ್” ಒಂದು ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ ಎಂದು ಮಾತು ಆರಂಭಿಸಿದ ನಾಯಕ, ನಿರ್ದೇಶಕ ಶ್ರೇಯಸ್ ಚಿಂಗಾ ಇದೊಂದು ಅದ್ಭುತ ಚಿತ್ರ. ಈವರೆಗೂ ನಾವು ನೋಡಿರದ ಬೆಂಗಳೂರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ.

ಒಟ್ಟಿನಲ್ಲಿ ಹೇಳಬೇಕೆಂದರೆ, ಇದೊಂದು ತಂತ್ರಜ್ಞರ ಸಿನಿಮಾ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾನು ಹಾಗೂ ಭಾರ್ಗವ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದೇವೆ‌. ಚಿತ್ರ ಜುಲೈ 21 ರಂದು ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.

ನಾನು ಈ ಹಿಂದೆ “ಭರತ – ಬಾಹುಬಲಿ” ಚಿತ್ರದಲ್ಲಿ ನಟಿಸಿದ್ದೆ. “ಡೇವಿಡ್‌” ನನ್ನ ಎರಡನೇ ಚಿತ್ರ. ಈ ಹಿಂದೆ ಪ್ರಸಿದ್ದ ಜಾಹೀರಾತುಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದ ಪಾತ್ರ ಚೆನ್ನಾಗಿದೆ ಎಂದು ನಾಯಕಿ ಸಾರಾ ಹರೀಶ್ ತಿಳಿಸಿದರು.

ನಾನು ಈ ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಪ್ರತಾಪ್ ನಾರಾಯಣ್ ಹೇಳಿದರು.

ಕರ್ನಾಟಕದ ಪ್ರಸಿದ್ದ ರಾಪರ್ ಗಳಾದ ಎಂ.ಸಿ.ಬಿಜು, ಸಿದ್ ಈ ಚಿತ್ರದಲ್ಲೂ ರಾಪರ್ ಪಾತ್ರದಲ್ಲೇ ಅಭಿನಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿನಯದ ಬಗ್ಗೆ ಹೇಳಿಕೊಂಡ ರಾಪರ್ ದ್ವಯರು ಸುಂದರವಾದ ರಾಪ್ ಹಾಡೊಂದನ್ನು ಹಾಡಿದರು.

ನಿರ್ಮಾಪಕ ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.‌ ನಟ ಮೋಹಿತ್ ವಾಸ್ವನಿ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಚಿತ್ರವನ್ನು ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಮಾರ್ಕೆಟಿಂಗ್ ಹಾಗೂ ಪ್ರಮೋಷನ್ ರೋಶನಿ ರಾಮಪುರಂ ಅವರದು.

ಶ್ರೇಯಸ್ ಚಿಂಗಾ, ರಾಕೇಶ್ ಅಡಿಗ, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು,ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ. “ಡೇವಿಡ್‌” ಬುಲೆಟ್ ಪ್ರಕಾಶ್ ಅವರ ನಟಸಿರುವ ಕೊನೆಯ ಚಿತ್ರ.

error: Content is protected !!