Categories
ಸಿನಿ ಸುದ್ದಿ

ಮಾದೇವನಿಗೆ ಶ್ರೀನಗರ ಕಿಟ್ಟಿ ಸೆಡ್ಡು: ವಿನೋದ್ ಪ್ರಭಾಕರ್ ಎದುರು ಕಿಟ್ಟಿ ವಿಲನ್…

ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮಾದೇವ ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ ಎದುರು ಶ್ರೀನಗರ ಕಿಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.

ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ.

ಹೈದ್ರಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇ. ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಚಂದನ್ ಶೆಟ್ಟಿಗೊಂದು ಚಂದದ ಸಿನಿಮಾ ಮಾಡ್ತಾರೆ ನವರಸನ್: ಅಕ್ಟೋಬರ್‌ 10ರಿಂದ ಶೂಟಿಂಗ್ ಶುರು…

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಈಗ ನಟರೂ‌ ಕೂಡ. ಇವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ವಿಜಯ ದಶಮಿ ಶುಭದಿನದಂದು ಆರಂಭವಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹಾಡುಗಳ ಬಿಡುಗಡೆ, ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಸಮಾರಂಭಗಳನ್ನು ಅದ್ದೂರಿಯಾಗಿ ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುವ ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ ಮೀಡಿಯಾ ದ ನವರಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈವರೆಗೂ “ದಮಯಂತಿ” ಸೇರಿದಂತೆ ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದೊಂದಿಗೆ ಕ್ರಿಯೇಟಿವ್ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ‌.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಬಲ ನಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ.

Categories
ಸಿನಿ ಸುದ್ದಿ

ಕಬ್ಜ ಟೀಸರ್ ಸಖತ್ ಕುತೂಹಲ! ರಿಲೀಸ್ ಮಾಡಿದ ರಾಣಾ ದಗ್ಗುಬಾಟಿ ಮೆಚ್ಚುಗೆ…

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ ಅಭಿನಯದ, ಆರ್. ಚಂದ್ರು ನಿರ್ದೇಶಿಸಿರುವ,
ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಿಡುಗಡೆಯಾದ ಕ್ಷಣದಿಂದಲೇ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸುತ್ತಿದೆ.

ಉಪೇಂದ್ರ ಸರ್ ಮುಂದೆ ನಿಂತು ಮಾತನಾಡುವುದಕ್ಕೆ ಭಯ ಆಗತ್ತೆ. ಅಂತಹ ಅದ್ಭುತ ನಟ ಅವರು. ಖ್ಯಾತ ನಟಿ ಶ್ರೀಯಾ ಶರಣ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್. ಚಂದ್ರು ಮತ್ತು ತಂಡದ ಅದ್ಭುತ ಕೆಲಸ ಟೀಸರ್ ನಲ್ಲಿ ಕಾಣುತ್ತಿದೆ. “ಕಬ್ಜ” ಭರ್ಜರಿ ಯಶಸ್ಸು ಕಾಣಲಿ ಎಂದು ರಾಣಾ ದಗ್ಗುಬಾಟಿ ಹಾರೈಸಿದರು.

ನನಗೆ ಆರ್. ಚಂದ್ರು ಅವರು ಕಥೆ ಹೇಳಲು ಬಂದಾಗ, ಕಥೆ ಕೇಳಿ, ನಿಜವಾಗಿಯೂ ಈ ರೀತಿ ಮಾಡಲು ಆಗುವುದಾ? ಅಂತಾ ಕೇಳಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ ಚಂದ್ರು ಅವರ ಕಾರ್ಯ ವೈಖರಿ ನೋಡಿ ಆಶ್ಚರ್ಯವಾಯಿತು. ಈಗಂತೂ ಟೀಸರ್ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ಹೆಚ್ಚಿನ ಕ್ರೆಡಿಟ್ ಚಂದ್ರು ಅವರಿಗೆ ಸೇರಬೇಕು. ಶ್ರೀಯಾ ಅವರ ಅಭಿನಯ ಕೂಡ ಚೆನ್ನಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ರಾಣಾ ಅವರಿಗೆ ಧನ್ಯವಾದ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ನನಗೆ ಖುಷಿಯಾಗಿದೆ. ಅದರಲ್ಲೂ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿರುವುದು ಹೆಚ್ಚಿನ ಸಂತೋಷ ತಂದಿದೆ. ತುಂಬಾ ಸಹೃದಯಿ, ಸರಳವ್ಯಕ್ತಿ ಅವರು. ಚಂದ್ರು ಸರ್ ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನನ್ನ ಪಾತ್ರ‌ ಕೂಡ ತುಂಬಾ ಚೆನ್ನಾಗಿದೆ ಎಂದ ನಾಯಕಿ ಶ್ರೀಯಾ ಶರಣ್, ಟೀಸರ್ ಬಿಡುಗಡೆ ಮಾಡಿದ ರಾಣಾ ಅವರಿಗೆ ಧನ್ಯವಾದ ತಿಳಿಸಿದರು.

“ಕಬ್ಜ” ನನ್ನ ಕನಸು. ಈ ಹಿಂದೆ “ತಾಜ್ ಮಹಲ್”, ” ಚಾರ್ ಮಿನಾರ್”, “ಮೈಲಾರಿ” ನಂತಹ‌ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ಇದು ಬೇರೆಯದೆ ತರಹದ ಸಿನಿಮಾ. “ಕಬ್ಜ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂದರೆ ಅದು ನನ್ನೊಬ್ಬನಿಂದ ಅಲ್ಲ. ಇಡೀ ತಂಡದಿಂದ. ಅದರಲ್ಲೂ ಉಪೇಂದ್ರ ಸರ್ ಅವರ ಸಹಕಾರ ಅಪಾರ. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಳ್ಳಬೇಕು. ನಾನು ಈ ರೀತಿಯ ಪಾತ್ರವಿದೆ ಅಂತ ಹೇಳಿದೆ. ಅವರು ಒಪ್ಪಿಕೊಂಡು ಅಭಿನಯಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಶ್ರೀಯಾ ಶರಣ್ ಅವರು ಈ ಚಿತ್ರದಲ್ಲಿ ಅಭಿನಯಿಸಿರುವುದು ಹೆಚ್ಚಿನ ಖುಷಿ ತಂದಿದೆ. ಟೀಸರ್ ಬಿಡುಗಡೆ ಮಾಡಿಕೊಡಲು ಕೇಳಿದಾಗ ಒಪ್ಪಿ ಬಂದು ಟೀಸರ್ ಬಿಡುಗಡೆ ಮಾಡಿಕೊಟ್ಟಿರುವುದಕ್ಕೆ ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರಿಗೆ ಹಾಗೂ ಇಂದಿನ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ
ತುಂಬು ಹೃದಯದ ಧನ್ಯವಾದ.

ನಮ್ಮ‌”ಕಬ್ಜ” ಚಿತ್ರ ಏಳು ಭಾಷೆಗಳ ಚಿತ್ರವಲ್ಲ. ಒಟ್ಟು ಒಂಭತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ‌ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು.

ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ಎ ಜೆ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು “ಕಬ್ಜ” ದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಲಂಕೆಯಲ್ಲಿ ಸಿಕ್ತು ಸಂಭ್ರಮದ ರಾಮಪ್ರಸಾದ! ಯೋಗಿ ಚಿತ್ರ ಯಶಸ್ವಿ ಒಂದು ವರ್ಷ ಪೂರ್ಣ…

ಕೊರೋನ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಬಿಡುಗಡೆಯಾದ ಚಿತ್ರ ಲೂಸ್ ಮಾದ ಯೋಗಿ ಅಭಿನಯದ “ಲಂಕೆ”. ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಇತ್ತೀಚೆಗೆ ನೂರು ದಿನಗಳ ಕಾಲ ಚಿತ್ರ ಪ್ರದರ್ಶನವಾಗುತ್ತಿರುವುದೇ ಕಷ್ಟ. ಅಂತಹದರಲ್ಲಿ ಕನ್ನಡ ಚಿತ್ರವೊಂದು 365 ದಿನಗಳು ಪೂರೈಸಿರುವುದು ಖುಷಿಯ ವಿಚಾರ.

ಈ ಖುಷಿ ಹಂಚಿಕೊಳ್ಳಲು ನಿರ್ದೇಶಕ ಕಮ್ ನಿರ್ಮಾಪಕ ರಾಮ್ ಪ್ರಸಾದ್ ಸಮಾರಂಭ ಆಯೋಜಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.

ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು ನಾಯಕ ಲೂಸ್ ಮಾದ ಯೋಗಿ.

ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನು ನಿರ್ಮಾಪಕರಾದ ಸುರೇಖ ರಾಮ್‌ ಪ್ರಸಾದ್ ಹಾಗೂ‌ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು.

ಹೊಸ ಚಿತ್ರ ಅನೌನ್ಸ್…

ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ . ನಿಮ್ಮ ಹಾರೈಕೆಯಿರಲಿ ಎಂದ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದರು.

ನಾಯಕಿ ಕೃಷಿ ತಾಪಂಡ, ಚಿತ್ರದಲ್ಲಿ ನಟಿಸಿರುವ ಎಸ್ತರ್ ನರೋನ, ಡ್ಯಾನಿ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಲಂಕೆ” ಯ ಗೆಲುವನ್ನು ಹಂಚಿಕೊಂಡರು.

ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ. ಇದಕ್ಕೆ ಕಾರಣ ರಾಮ್ ಪ್ರಸಾದ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.

Categories
ಸಿನಿ ಸುದ್ದಿ

ಇದು ರಾಕಿಂಗ್ ದಂಪತಿಯ ನೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಫೋಟೋಗ್ರಫಿ ಸಂಸ್ಥೆ: ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಎಂಬ ಸೆಲೆಬ್ರೆಟಿಗಳ ಚಂದದ ಫೋಟೋಶೂಟ್ ಕಂಪನಿ…

ಈಗಂತೂ ಯಾವುದೇ ಸಮಾರಂಭವಾದ್ರೂ ಸರಿ ಸಂತೋಷದ ಘಳಿಗೆಗಳನ್ನ ಫೋಟೋಶೂಟ್, ವೀಡಿಯೋ ಮಾಡೋ ಮೂಲಕ ಸೆರೆ ಹಿಡಿದು ನೆನಪುಗಳನ್ನ ಜೀವಂತವಾಗಿ ಸಂಭ್ರಮಿಸುವ ಟ್ರೆಂಡ್ ಜೋರಾಗಿದೆ. ಪ್ರಿ ವೆಡ್ಡಿಂಗ್, ಎಂಗೇಜ್ ಮೆಂಟ್, ಮದುವೆ, ಸೀಮಂತ, ಗೃಹ ಪ್ರವೇಶ ಅನೇಕ ಕಾರ್ಯಕ್ರಮಗಳ ಮೆರುಗನ್ನ ಹೆಚ್ಚಿಸಲೆಂದೇ ಈಗ ತರಹೇವಾರಿ ಟೆಕ್ನಾಲಜಿಯೊಂದಿಗೆ ಫೋಟೋಶೂಟ್ ಈವೆಂಟ್ ಮ್ಯಾನೇಜ್‌ ಮೆಂಟ್ ಸಂಸ್ಥೆಗಳು ತಲೆ ಎತ್ತಿವೆ. ಅಂತಹ ಸಂಸ್ಥೆಗಳಲ್ಲಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ಸಂಸ್ಥೆ ಚಂದನವನದ ಅಂಗಳದಲ್ಲಿ ಮುಂಚೂಣಿಯಲ್ಲಿದೆ.

ಹೌದು, 2015 ರಲ್ಲಿ ಆರಂಭಗೊಂಡ ಈ ಸಂಸ್ಥೆ ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಈವೆಂಟ್ ಅಂಡ್ ವೆಡ್ಡಿಂಗ್ ಪೋಟೋಶೂಟ್ ಸಂಸ್ಥೆ. ಸ್ಯಾಂಡಲ್ ವುಡ್ ರಾಕಿಂಗ್ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಪರ್ಸನಲ್ ಹಾಗೂ ಸಿನಿ ಸಂಬಂಧಿತ ಎಲ್ಲಾ ಚಂದದ ಸ್ಟಿಲ್ಸ್ ಹಿಂದೆ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡದ ಶ್ರಮವಿದೆ. ರಾಕಿಂಗ್ ದಂಪತಿಗಳಿಗೆ ಇವರ ಸಂಸ್ಥೆ ಎಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ಫೋಕಸ್ ಫೋಟೋಗ್ರಫಿ ಸರ್ವಿಸ್ ತಂಡದ ಹಾಜರಿ ಇರಲೇಬೇಕು. ಅಷ್ಟರ ಮಟ್ಟಿಗೆ ಯಶ್ ಕುಟುಂಬಕ್ಕೆ ಆತ್ಮೀಯ ಈ ಸಂಸ್ಥೆ.

ಕೆಲಸದಲ್ಲಿ ನೋ ಕಾಂಪ್ರಮೈಸ್, ಟೈಂ ಟು ಟೈಂ ಸರ್ವಿಸ್ ಅನ್ನೋ ಈ ಸಂಸ್ಥೆ ಏಳು ವರ್ಷದಲ್ಲಿ ಈ ಸೂತ್ರದಿಂದಲೇ ಬಹಳ ಎತ್ತರಕ್ಕೆ ಬೆಳೆದಿದೆ. ಎಲ್ಲಾ ರೀತಿಯ ಈವೆಂಟ್ ಹಾಗೂ ವೆಡ್ಡಿಂಗ್ ಫೋಟೋಶೂಟ್ ಗಳನ್ನು ಬಹಳ ಅಚ್ಚುಕಟ್ಟಾಗಿ ಇಲ್ಲಿ ಮಾಡಿಕೊಡಲಾಗುತ್ತೆ. ಪೋಟೋಗ್ರಫಿ, ಎಡಿಟಿಂಗ್ ಎಲ್ಲದಕ್ಕೂ ಸೂಕ್ತ ಮ್ಯಾನ್ ಪವರ್ ಕೂಡ ಇದ್ದು ಇಡೀ ತಂಡ ಪರಿಶ್ರಮ ವಹಿಸಿ ನಿರಂತರವಾಗಿ ದುಡಿಯುತ್ತಿದ್ದಾರೆ. ಇವರ ಕೆಲಸದ ವೈಖರಿ ಹಾಗೂ ಕ್ವಾಲಿಟಿ ನೋಡಿಯೇ ಇಲ್ಲಿವರೆಗೂ ಹೈ ಪ್ರೊಫೈಲ್ ಪ್ರಾಜೆಕ್ಟ್ ಗಳು ಸಂಸ್ಥೆ ಪಾಲಾಗಿದೆ.

ಪಬ್ಲಿಕ್ ಟಿವಿ ರಂಗನಾಥ್ ಮಗಳ ಮದುವೆ, ನಟ ರಮೇಶ್ ಅರವಿಂದ್ ಪರ್ಸನಲ್ ಪೋಟೋ ಶೂಟ್ ಮಗಳ ರಿಸೆಫ್ಷನ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಮನೆ ಹಾಗೂ ಸಿನಿ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳು, ನಿಖಿಲ್ ಕುಮಾರ್ ಸ್ವಾಮಿ ಎಂಗೇಜ್ ಮೆಂಟ್, ಸಚಿವ ಶ್ರೀರಾಮುಲು ಮಗಳ ಎಂಗೇಜ್ ಮೆಂಟ್,
ಹೊಂಬಾಳೆ ಫಿಲ್ಮಂಸ್ ಎಲ್ಲಾ ಈವೆಂಟ್ ಗಳು ಈ ಎಲ್ಲಾ ಹೈ ಪ್ರೊಫೈಲ್ ಈವೆಂಟ್ ಗಳ ಹಿಂದೆ ದುಡಿದಿರುವ ಸಂಸ್ಥೆ ‘ಫೋಕಸ್ ಫೋಟೋಗ್ರಫಿ’. ಇವರೆಲ್ಲರೂ ತಂಡದ ಶ್ರಮವನ್ನ ಮೆಚ್ಚಿ ಅಪ್ಪಿಕೊಂಡಿರೋದು ಈ ಸಂಸ್ಥೆಯ ಬಲವನ್ನ ದುಪ್ಪಟ್ಟಾಗಿಸಿದೆ.
ಹಾಗಂತ ಚಂದನವನದ ತಾರೆಯರ ಈವೆಂಟ್ ಹಾಗೂ ಫೋಟೋಶೂಟ್ ಮಾತ್ರವಲ್ಲದೇ ಹೊರಗಿನ ಎಲ್ಲಾ ಈವೆಂಟ್ ಗಳನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಕೊಡುವಲ್ಲಿ ಯಶಸ್ವಿಯಾಗಿದೆ ಫೋಕಸ್ ಫೋಟೋಗ್ರಫಿ ಸಂಸ್ಥೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ ಜನ ಸಾಮಾನ್ಯರ ಬಹುಬೇಡಿಕೆಯ ಸಂಸ್ಥೆಯಾಗಿರುವ ‘ಫೋಕಸ್ ಫೋಟೋಗ್ರಫಿ ಸಂಸ್ಥೆ’ ನಾಗಾರಾಜ್ ಸೋಮಯಾಜಿಯವರ ಕನಸಿನ ಕೂಸು. ‘ಸಂಚಾರಿ’ ರಂಗಭೂಮಿಯಿಂದ ಬಂದ ಇವರು
ಚಿತ್ರರಂಗದ ಚಿರಪರಿಚಿತ ಮುಖ. ಪೋಟೋಗ್ರಫಿಯಲ್ಲಿ ಅಪಾರ ಪ್ಯಾಶನ್ ಇದ್ದಿದ್ದರಿಂದ ಅದು ‘ಫೋಕಸ್ ಪೋಟೋಗ್ರಫಿ ಸರ್ವಿಸ್’ ಸಂಸ್ಥೆ ತೆರೆಯುವವರೆಗೆ ತಂದು ನಿಲ್ಲಿಸಿತ್ತು. ಇದೀಗ ಈ ಸಂಸ್ಥೆ ಏಳು ವರ್ಷ ಯಶಸ್ವಿಯಾಗಿ ಪೂರೈಸಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಉತ್ತಮ ಸರ್ವಿಸ್ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಅದನ್ನು ಅಚ್ಚುಕಟ್ಟಾಗಿ ನಮ್ಮ ತಂಡ ಪಾಲಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಕೆಲಸ ನೋಡಿಯೇ ಕ್ಲೈಂಟ್ ಜಾಸ್ತಿ ಆಗ್ತಿದ್ದಾರೆ ಇದಕ್ಕಿಂತ ಖುಷಿಯ ಸಂಗತಿ ಇನ್ನೇನಿದೆ ಎನ್ನುತ್ತಾರೆ ನಾಗಾರಾಜ್ ಸೋಮಯಾಜಿ.
ರಂಗಭೂಮಿಯಿಂದ ಬಂದ ನಾಗಾರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು
‘ದಿ ಬೆಸ್ಟ್ ಆಕ್ಟರ್’ ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ.

ನಿಮ್ಮ ನೆಚ್ಚಿನ ಸೆಲೆಬ್ರೆಟಿ ಫೋಟೋಗಳನ್ನ ನೋಡಿ ವಾವ್ ಎಷ್ಟು ಸಖತ್ ಆಗಿ ಪೋಟೋ ತೆಗೆದಿದ್ದಾರೆ ಅಂತಿರೋರು ಡೈರೆಕ್ಟ್ ಆಗಿ ‘ಫೋಕಸ್ ಫೋಟೋಗ್ರಫಿ ಸರ್ವಿಸ್’ ತಂಡವನ್ನ ಭೇಟಿ ಮಾಡಿ, ನಿಮ್ಮ‌ ಜೀವನದ ಚಂದದ ಕ್ಷಣಗಳನ್ನು ಸೆರೆಹಿಡಿದುಕೊಳ್ಳಬಹುದು.

Categories
ಸಿನಿ ಸುದ್ದಿ

ವಾಸಂತಿ ನಲಿಯೋ ಸಮಯ! ಅ.14ಕ್ಕೆ ವಾಸಂತಿ ಭರ್ಜರಿ ದರ್ಶನ…

ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ವಾಸಂತಿ ನಲಿದಾಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕೇಳ್ರಪ್ಪೋ ಕೇಳಿ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಈ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಒಂದೊಳ್ಳೆ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವರ್ಷದ ಜರ್ನಿ ಇದು. ಯೂತ್ ಫುಲ್ ಎಂಟರ್ ಟ್ರೈನ್ಮೆಂಟ್ ಚಿತ್ರವಿದು. ಕಂಟೆಂಟ್ ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡರು.

ನಿರ್ಮಾಪಕ ಕೆ.ಎನ್.ಶ್ರೀಧರ್ ಮಾತನಾಡಿ, ಸಿನಿಮಾದ ಕೌಂಟ್ ಡೌನ್ ಶುರುವಾಗಿದೆ. ಇನ್ನೂ 30 ದಿನಕ್ಕೆ ಸಿನಿಮಾ ಬೆಳ್ಳಿತೆರೆ ಮೇಲೆ ಇರುತ್ತದೆ. ರಾಜ್ಯಾದ್ಯಂತ ಸಿನಿಮಾವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ಚಂದ್ರಣ್ಣ, ಭೋಗಣ್ಣ ಜಯಣ್ಣ ನಮ್ಮ ಸಿನಿಮಾ ತಂಡದ ವತಿಯಿಂದ ಧನ್ಯವಾದ. ಮನೆ ಮಂದಿ ಕುಳಿತು ನೋಡುವ ಚಿತ್ರವಿದು. ಅಕ್ಟೋಬರ್ 14ರಂದು ಸಿನಿಮಾ ತೆರೆಗೆ ಬರ್ತಿದೆ ಪ್ರತಿಯೊಬ್ಬರು ಬೆಂಬಲ ಕೊಡಿ ಎಂದರು.

ಕಾಲೇಜ್ ಸ್ಟೋರಿ ಜೊತೆಗೆ ಒಂದೊಳ್ಳೆ ಪ್ರೇಮಕಥನ ಒಳಗೊಂಡಿರುವ ವಾಸಂತಿ ನಲಿದಾಗ ಸಿನಿಮಾಗೆ ರವೀಂದ್ರ ವೆಂಶಿ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ, ಭಾವನಾ ಶ್ರೀನಿವಾಸ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.

ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕರ ಮುನ್ನುಡಿ ಬರೆದಿರುವ ಚಿತ್ರತಂಡ ಮುಂದಿನ ಅಕ್ಟೋಬರ್ 14ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

Categories
ಸಿನಿ ಸುದ್ದಿ

ಅಕ್ಟೋಬರ್ 14ಕ್ಕೆ ಶುಭಮಂಗಳ ಆಗಮನ: ಟ್ರೇಲರ್ ಅನಾವರಣ…

ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸತಲ್ಲ. ಈಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ ಟೈಟಲ್ ಇಟ್ಟುಕೊಂಡು ಬಂದಿರುವ ಹೊಸ ಚಿತ್ರ ಶುಭಮಂಗಳ ರಿಲೀಸ್ ಗೆ ಸಜ್ಜಾಗಿದೆ. ಸಖತ್ ಮಜವಾಗಿರುವ ಟೀಸರ್ ಝಲಕ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ, ಈಗ ಟ್ರೇಲರ್ ಅನಾವರಣ ಮಾಡಿದೆ. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಆ ಕಥೆಗಳಲ್ಲಿ ಐದು ಆಯ್ಕೆ ಮಾಡಿ ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಬೆಂಬಲ ಕೊಡಿ ಎಂದರು.

ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಮುಂತಾದವರು ನಟಿಸಿದ್ದಾರೆ.

ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವ್ಯಕ್ತ ಫಿಲ್ಮಂಸ್ ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮದುವೆಗೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸ್ತಿರುವ ಚಿತ್ರತಂಡ ಬರುವ ಅಕ್ಟೋಬರ್ 14ಕ್ಕೆ ಚಿತ್ರವನ್ನು ತೆರೆಗೆ ತರಲಿದೆ.

Categories
ಸಿನಿ ಸುದ್ದಿ

ಇದು ಕನ್ನಡದ ಆಶಿಕಿ! ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ…

ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದ ಆಶಿಕಿ ಸಿನಿಮಾ ತಂಡ ಆಡಿಯೋ ಬಿಡುಗಡೆ ಮಾಡಿದೆ. ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿತು. ನಟ ಅಜಯ್ ರಾವ್, ನಿರ್ದೇಶಕ ಬಹದ್ದೂರ್ ಚೇತನ್, ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಇಡೀ ಆಶಿಕಿ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಅಜಯ್ ರಾವ್, ಪ್ರಯತ್ನ ಅನ್ನುವುದು ಒಂದು ಯಶಸ್ಸು. ಪ್ರಯತ್ನ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಯಾವುದಕ್ಕೂ ಸಾರ್ಥಕತೆ ಇರುವುದಿಲ್ಲ. ಮಹಿಳಾ ನಿರ್ದೇಶಕಿಯ ಪ್ರಯತ್ನ..ಸಂದೀಪ್ ತೆರೆಮೇಲೆ ಹೇಗೆ ಕಾಣಿಸುತ್ತಾರೆ. ನಾಯಕನಾಗಿ ಪಾತ್ರ ಹೇಗೆ ಪಾತ್ರ ನಿರ್ವಹಿಸುತ್ತಾರೆ ಅನ್ನೋದನ್ನು ನೋಡೋದಿಕ್ಕೆ ನಾನು ಕಾತುರನಾಗಿದ್ದೆ. ಸಂದೀಪ್ ಅವರ ದೊಡ್ಡ ಜರ್ನಿ ಇಲ್ಲಿಂದ ಸಾಗಲಿ. ನಿರ್ಮಾಪಕರಿಗೆ ದುಡ್ಡು ಬರಲಿ. ನನ್ನ ಸಿನಿಮಾ ಜರ್ನಿಯಲ್ಲಿ ದುಡ್ಡು ಮಾಡಿದ್ದನ್ನು ನೋಡಿದ್ದೇನೆ. ಕಳೆದುಕೊಂಡಿದ್ದನ್ನು ನೋಡಿದ್ದೇನೆ. ನಿರ್ಮಾಪಕರಿಗೆ ಒಳ್ಳೆ ದುಡ್ಡು ಬಂದರೆ ಇಡೀ ಸಿನಿಮಾ ಗೆದ್ದಂತೆ ಎಂದು ತಿಳಿಸಿದರು.

ನಿರ್ದೇಶಕಿ ಜೆ.ಚಂದ್ರಕಲಾ, ಮಹಿಳಾ ನಿರ್ದೇಶಕಿರು ಬಳಹ ಅಪರೂಪ ಅಂತಾ ಎಲ್ಲರೂ ಹೇಳುತ್ತಿದ್ದರು. ಯಾಕೆ ವಿರಳ ಅಂದರೆ. ಮಹಿಳಾ ನಿರ್ದೇಶಕಿಯರನ್ನು ನಂಬಿಕೊಂಡು ಯಾವ ನಿರ್ಮಾಪಕರು ದುಡ್ಡ ಹಾಕುತ್ತಾರೆ. ನಾನು ಇಂಡಸ್ಟ್ರೀಗೆ ಬಂದು ಹದಿನಾರರಿಂದ ಹದಿನೇಳು ವರ್ಷವಾಯ್ತು. ಏನೂ ದಬಾಕೋಕೆ ಆಗಿಲ್ಲ. ನಾನು ಏನಾದರೂ ಪ್ರೋವ್ ಮಾಡಬೇಕು. ನಾವುಗಳು ಅದೇ ಪ್ರಯತ್ನದಲ್ಲಿ ಇದ್ದೇವೆ. ಆಶಿಕಿ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಲಿಯೋ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ ಎಂದರು.

ನಿರ್ಮಾಪಕ ಜಿ ಚಂದ್ರಶೇಖರ್ ಮಾತನಾಡಿ, ಸಿನಿಮಾಗೆ ಪ್ರೋತ್ಸಾಹ ಕೊಟ್ಟ ಎಲ್ಲಾ ಟೆಕ್ನಿಷಿಯನ್ಸ್. ನನ್ನ ಸ್ನೇಹಿತರಿಗೆ ಎಲ್ಲರಿಗೂ ಧನ್ಯವಾದ. ನನ್ನ ಚಿತ್ರದ ಬಗ್ಗೆ ನಾನು ಮಾತಾಡಿದರೆ ಚೆನ್ನಾಗಿರುವುದಿಲ್ಲ. ಜನರು ನೋಡಿ ಮಾತನಾಡಬೇಕು ಎಂದು ತಿಳಿಸಿದರು.

ಜೆ ಚಂದ್ರಕಲಾ(JCK) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್, ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದು, ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ.

ಮ್ಯೂಸಿಕಲ್ ಲವ್ ಸ್ಟೋರಿ ಜೊತೆಗೆ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿಬಂದಿವೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀಸ್ ಬ್ಯಾನರ್ ನಡಿ ಜಿ ಚಂದ್ರಶೇಖರ್ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ಲಿಯೋ ಸಂಗೀತ ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ನಮ್​ ಕನಸ ಕನ್ನಡ: ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಹಾಡು ಬಂತು…

ಸತೀಶ್​ ಬತ್ತುಲ ನಿರ್ದೇಶನದ ‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಿಂದ ಇನ್ನೊಂದು ಹೊಸ ಹಾಡು ಹೊರಬಂದಿದೆ. ‘ನಮ್​ ಕನಸ ಕನ್ನಡ …’ ಎಂದು ಸಾಗುವ ಈ ಹಾಡಿಗೆ ಎಲ್.ಎನ್.ಸೂರ್ಯ ಸಾಹಿತ್ಯ ರಚಿಸಿದ್ದು, ಜನಾರ್ದನ್​ ಮತ್ತು ಸಿ.ಎಚ್.ಶ್ರೀಕೃತಿ ಧ್ವನಿಯಾಗಿದ್ದಾರೆ. ಕಾರ್ತಿಕ್ ಕೊಡಕಂಡ್ಲ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್​ನ ಮಿಥುನ ಮ್ಯೂಸಿಕ್​ ಚಾನಲ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ.


‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರವನ್ನು ‘ಜಬರ್ದಸ್ತ್’ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿದ್ದಾರೆ. ಶಿವಕುಮಾರ್, ಅಕ್ಷತಾ ಶ್ರೀಧರ್ ಮತ್ತು ಅರ್ಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಮಿಥುನಾ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈನ್ಸ್ ಸ್ಟುಡಿಯೋಸ್​ನಡಿ ಎಂ.ಎಂ. ಅರ್ಜುನ್ ಮತ್ತು ಕಮಲ್ ಮೇಡಗೋಣಿ ನಿರ್ಮಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್​ ಥ್ರಿಲ್ಲರ್​ ಚಿತ್ರವಾಗಿದ್ದು, ಏಕಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲನಲ್ಲಿ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.


ಈ ಪ್ಯಾನ್​ ಇಂಡಿಯಾ ಚಿತ್ರದ ಬಗ್ಗೆ ಕುರಿತು ಮಾತನಾಡುವ ನಿರ್ಮಾಪಕರಾದ ಎಂ.ಎಂ.ಅರ್ಜುನ್ ಮತ್ತು ಕಮಲ್ ಮೇಡಗೋಣಿ, ‘ನಿರ್ದೇಶಕ ಸತೀಶ್ ಅವರ ನಿರೂಪಣೆ ನಮಗೆ ಇಷ್ಟವಾಯಿತು. ಚಿತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ ಅವರು. ನಿರ್ಮಾಪಕನಾಗಿ ನಾನು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ಇದೆ. ಇದೊಂದು ಯೂನಿವರ್ಸಲ್ ಕಥೆಯಾದ್ದರಿಂದ ಪ್ಯಾನ್​-ಇಂಡಿಯಾ ಚಿತ್ರವನ್ನಾಗಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಇದಕ್ಕೂ ಮುನ್ನ ‘ನಿನ್ನ ನೋಡಿದ …’ ಎಂಬ ಹಾಡು ಬಿಡುಗಡೆಯಾಗಿದೆ. ಶೀಘ್ರದಲ್ಲೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ’ ಎನ್ನುತ್ತಾರೆ.


ಇದೊಂದು ವಿಭಿನ್ನ ಲವ್ ಎಂಟರ್‌ಟೈನರ್ ಎನ್ನುವ ನಿರ್ದೇಶಕ ಸತೀಶ್ ಬತ್ತುಲ, ‘ಇದೊಂದು ವಿಭಿನ್ನ ಕಥೆ ಇರುವ ಚಿತ್ರ. ನಿರ್ಮಾಪಕರ ಬೆಂಬಲವು ನಮ್ಮನ್ನು ಇಲ್ಲಿಯವರೆಗೆ ಕರೆದೊಯ್ದಿದೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಎಲ್ಲೂ ರಾಜಿ ಮಾಡಿಕೊಳ್ಳದೆ ನಿರ್ಮಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದು, ಸಂಗೀತ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅದ್ಭುವಾಗಿ ಮೂಡಿಬಂದಿದೆ’ ಎನ್ನುತ್ತಾರೆ.


‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಲ್ಲಿ ಶಿವಕುಮಾರ್, ಹುಮೇ ಚಂದ್, ಅಕ್ಷತಾ ಶ್ರೀಧರ್, ಅರ್ಚನಾ, ಮಾಧವಿ ಲತಾ ಮುಂತಾದವರು ನಟಿಸಿದ್ದು, ಆರೀಫ್​​ ಲಲಾನಿ ಅವರ ಛಾಯಾಗ್ರಹಣ ಮತ್ತು ಕಾರ್ತಿಕ್ ಕೊಡಕಂಡ್ಲ ಅವರ ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಈ ವಾರ ಅಪ್ಪಳಿಸಲಿದೆ ಮಾನ್ಸೂನ್ ರಾಗ: ನೋಡೋರಿಗೆ ಖುಷಿ ಯೋಗ…

ನಟ ಡಾಲಿ ಧನಂಜಯ್, ರಚಿತಾರಾಮ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಮಾನ್ಸೂನ್ ರಾಗ ಸೆ.16 ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ತನ್ನ ಮೇಕಿಂಗ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ‌ ಹುಟ್ಟಿಸಿರುವ ಚಿತ್ರ ಇದಾಗಿದ್ದು, ಬಡವ ರಾಸ್ಕಲ್, ರತ್ನನ್ ಪ್ರಪಂಚ ಚಿತ್ರಗಳ ನಂತರ ಧನಂಜಯ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವಿದು.


ಮಾನ್ಸೂನ್ ರಾಗ ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಇರುವ ಚಿತ್ರವಾಗಿದ್ದು,
ತನ್ನ ವಿಭಿನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದೆ. ಧನಂಜಯ್ ಅವರ ಜೊತೆಗೆ ಬೆಡಗಿ ರಚಿತಾರಾಮ್ ನಾಯಕಿಯಾಗಿ
ಅಭಿನಯಿಸಿದ್ದಾರೆ. ಪುಷ್ಪಕವಿಮಾನ ಖ್ಯಾತಿಯ ರವೀಂದ್ರನಾಥ್ ಅವರ ನಿರ್ದೇಶನದಲ್ಲಿ
ಮೂಡಿಬಂದಿರುವ ಈ ಚಿತ್ರಕ್ಕೆ ವಿಖ್ಯಾತ್ ಎ.ಆರ್. ಅವರು ಬಂಡವಾಳ ಹಾಕಿ ನಿರ್ಮಿಸಿದ್ದಾರೆ.

ಇಡೀ ಚಿತ್ರದ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ ಎನ್ನಲಾಗಿದ್ದು, ಟೀಸರ್‌ನಲ್ಲಿ ಮಳೆಯ ಜೊತೆಗೆ ನೆರಳು ಬೆಳಕಿನ ಹಿನ್ನೆಲೆಯ ಚಿತ್ರೀಕರಣವೂ ಸೊಗಸಾಗಿ ಮೂಡಿಬಂದದೆ. ಎಸ್.ಕೆ. ರಾವ್
ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಚಿತ್ರದ ಸುಂದರ ಹಾಡುಗಳಿಗೆ ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

error: Content is protected !!