Categories
ಸಿನಿ ಸುದ್ದಿ

ಟ್ರೆಂಡ್ ಆಗೋಕೆ ಏನ್ ಮಾಡ್ಬೇಕು ಗೊತ್ತಾ? ಸೂತ್ರಧಾರಿಯ ಹೊಸ ಸೂತ್ರವಿದು…

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಈಗಾಗಲೇ ಹದಿನೇಳು ಮಿಲಿಯನ್ ವೀಕ್ಷಣೆಯಾಗಿ ಜನರ ಮನ ಗೆದ್ದಿದೆ. ಈಗ “ಸೂತ್ರಧಾರಿ” ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ “ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು” ಎಂಬ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದೆ‌. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾದ ನಮ್ಮ ಚಿತ್ರದ “ಡ್ಯಾಶ್” ಸಾಂಗ್ ಭರ್ಜರಿ ಯಶಸ್ಸು ಕಂಡಿದೆ. ಈಗ ಈ ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್ ಈಶ್ವರ್ ಅವರಿಗೆ, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ ಚಂದನ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನೊಂದು ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ನಿರ್ಮಾಪಕ ನವರಸನ್ ತಿಳಿಸಿದರು‌.

“ಸೂತ್ರಧಾರಿ” ಸಿನಿಮಾದ “ಡ್ಯಾಶ್” ಹಾಡು ಭರ್ಜರಿ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನ್ನಗಿತ್ತು. ಈಗ ವಿಜಯ್ ಈಶ್ವರ್ ಬರೆದಿರುವ “ಏನ್ ಮಾಡ್ಬೇಕು” ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡು ಕೂಡ ಎಲ್ಲರ ಮನ ಗೆಲ್ಲುತ್ತದೆ ಎನ್ನುತ್ತಾರೆ ಚಿತ್ರದ ನಾಯಕ, ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ.

“ಸೂತ್ರಧಾರಿ ಬಗ್ಗೆ ಸಂಪೂರ್ಣ ವಿವರವನ್ನು ನಿರ್ದೇಶಕ ಕಿರಣ್ ಕುಮಾರ್ ನೀಡಿದರು. ನಾಯಕಿ ಅಪೂರ್ವ, ನಟರಾದ ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಚಂದನ್ ಶೆಟ್ಟಿ, ನಿರ್ಮಾಪಕರಾದ ಸಂಜಯ್ ಗೌಡ, ಚೇತನ್ ಗೌಡ, ರಾಜೇಶ್, ಗೋವಿಂದರಾಜು ಹಾಗೂ ನಿರ್ದೇಶಕ ಮಹೇಶ್ ಕುಮಾರ್ “ಸೂತ್ರಧಾರಿ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

Categories
ಸಿನಿ ಸುದ್ದಿ

ನಿರ್ಭಯ 2 ಇದು ಹೆಣ್ಣಿನ ಮೇಲಿನ ಶೋಷಣೆ ಕುರಿತ ಚಿತ್ರ: ಮೋಷನ್ ಪೋಸ್ಟರ್ ರಿಲೀಸ್

ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ “ನಿರ್ಭಯ 2” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ‌.|ವಿ.ನಾಗೇಂದ್ರಪ್ರಸಾದ್ಮೋ ಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ವಿ ನಾಗೇಂದ್ರ ಪ್ರಸಾದ್ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ ಪ್ರಮುಖವಾಗಿ ಅತ್ಯಾಚಾರ ಈ ಎಲ್ಲಾ ಶೋಷಣೆಗಳು ಕಡಿಮೆಯಾಗಲಿ ಅಂತ್ಯವಾಗಲಿ ಎಂದು ಹರಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರದಲ್ಲಿ ಶ್ರಾವ್ಯ ರಾವ್ , ಅರ್ಜುನ್ ಕೃಷ್ಣ, ಕುಸುಮ, ಹರೀಶ್ ಜಲೀಲ ಮುಂತಾದವರಿದ್ದಾರೆ. ತುಮಕೂರು, ಬೆಂಗಳೂರು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ‌.

ಹೆಣ್ಣಿನ ಮೇಲಿನ ಶೋಷಣೆಗಳನ್ನು ತಡೆಯುವಂತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ

Categories
ಸಿನಿ ಸುದ್ದಿ

ಇದು ರೈತರ ಮಕ್ಕಳ ಸಿನಿಮಾ: ಅವರೂ ಬೆಳೀಬೇಕು! ಜವಾರಿ ಹುಡುಗರ ಒಂಥರಾ ಲೈಲಾ, ಮಜ್ನು ಸ್ಟೋರಿ!!

ಯಲ್ಲು ಪುಣ್ಯಕೋಟಿ ಅವರ ನಿರ್ದೇಶನದ ಅವಳು ಲೈಲಾ ಅಲ್ಲ ನಾನು ಮಜ್ನು ಅಲ್ಲ ಚಿತ್ರದ ಡ್ಯುಯೆಟ್ ಹಾಡು ಬಿಡುಗಡೆಯಾಗಿದೆ. ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಸಾಂಗ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಜಯ್ ಈ ಚಿತ್ರದ ನಾಯಕನಾಗಿದ್ದು, ನಿಹಾರಿಕಾ, ಅಶ್ವಿನಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಡಿಂಗ್ರಿ ನರೇಶ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಾಯಕ ಹಾಗು ನಿರ್ಮಾಪಕ ಅಜಯ್ ಮಾತನಾಡಿ, ನನ್ನ ತಂದೆಯೂ ಒಬ್ಬ ರಂಗಭೂಮಿ ಕಲಾವಿದರು, ಅವರನ್ನು ನೋಡಿ ಬೆಳೆದ ನನಗೆ ನಟನೆ ಅಂದರೆ ಮೊದಲಿಂದಲೂ ಬಹಳ ಇಷ್ಟ, ರಾಯಚೂರಿನಲ್ಲಿ ಕಾಲೇಜ್ ಮುಗಿಸಿ ಕೆಎಎಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದೆ, ಆಗಲೇ ನೀನಾಸಂ ಆಫರ್ ಬಂತು. ನಂತರ ನೀನಾಸಂನಲ್ಲಿ ಆಕ್ಟಿಂಗ್ ತರಬೇತಿ ಪಡೆದು, ಸಾಕಷ್ಟು ಆಡಿಷನ್ ಅಟೆಂಡ್ ಮಾಡಿದೆ, ನಂತರ ನಾವೇ ಬಂಡವಾಳ ಹೂಡಿ ಸಿನಿಮಾ ಆರಂಭಿಸಿದೆವು.

ಚಿತ್ರವನ್ನು ಕೋವಿಡ್‌ಗೂ ಮುಂಚೆಯೇ ಶುರು ಮಾಡಿದ್ದೆವು. 16ರಿಂದ 24 ವರ್ಷದ ಹುಡುಗ, ಹುಡುಗಿಯರ ಕುರಿತಾದ ಚಿತ್ರ. ಯಲ್ಲು ಅವರು ಒಳ್ಳೇ ಕಥೆ ಮಾಡಿಕೊಂಡು, ನಿರ್ದೇಶನ ಮಾಡಿದ್ದಾರೆ, ಸಂತು ಎಂಬ ಸಾಫ್ಟ್ ಹಾಗೂ ರಫ್ ಕ್ಯಾರೆಕ್ಟರ್ ಹುಡುಗನಾಗಿ ಎರಡು ಶೇಡ್ ಇರುವ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ, ಆತ ಹೈಸ್ಕೂಲಿನಲ್ಲಿದ್ದಾಗ, ನಂತರ ಕಾಲೇಜಿಗೆ ಹೋದ ಮೇಲೆ, ಆತನ ಜೀವನದಲ್ಲಿ ಪ್ರೀತಿ ಪ್ರೇಮದ ವಿಷಯದಲ್ಲಿ ಏನೇನೆಲ್ಲ ಘಟನೆಗಳು ನಡೆದವು ಎನ್ನುವುದೇ ಚಿತ್ರದ ಕಥೆ.

ಲವ್, ಸೆಂಟಿಮೆಂಟ್ ಜೊತೆಗೆ ಒಂದಷ್ಟು ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ, ಜೊತೆಗೆ 4 ಹಾಡುಗಳಿದ್ದು, ಕೌಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾವು ಆಕಸ್ಮಿಕವಾಗಿ ಏನಾದರೂ ಮಾತನ್ನು ಹೇಳಿದರೆ, ಅದು ಆತನ ಲೈಫ್‌ನಲ್ಲಿ ಹೇಗೆ ರಿಫ್ಲೆಕ್ಟ್ ಆಗುತ್ತದೆಂದು ನಮ್ಮ ಚಿತ್ರ ಹೇಳುತ್ತದೆ ಎಂದು ವಿವರಿಸಿದರು.

ನಿರ್ದೇಶಕ ಯಲ್ಲು ಪುಣ್ಯಕೋಟಿ ಮಾತನಾಡಿ, ನಾನೂ ಸಹ ಕೊಪ್ಪಳದವನು, ನ‌ನಗೆ ಕಥೆ ಬರೆಯೋ ಹವ್ಯಾಸ ಮೊದಲಿಂದಲೂ ಇತ್ತು. ನಿರ್ದೇಶನದ ಬಗ್ಗೆ ಹೈದರಾಬಾದ್ ಕಡೆ ಹೋಗಿ ಒಂದಷ್ಟು ಕಲಿತೆ, ನಂತರ ಟಿವಿಯಲ್ಲಿ ವರ್ಕ್ ಮಾಡುವಾಗ ಅಜಯ್ ಸಿಕ್ಕರು, ನಾನು ಮಾಡಿಕೊಂಡಿದ್ದ ಕಥೆಯನ್ನು ಹೇಳಿದಾಗ ಅವರೂ ಒಪ್ಪಿದರು.

ಹಳ್ಳಿ ಮತ್ತು ನಗರದಲ್ಲಿ ನಡೆಯುವ ಕಥೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ, ಹೈಸ್ಕೂಲ್ ಎಪಿಸೋಡನ್ನು ಚಿಕ್ಕಮಗಳೂರಲ್ಲಿ ಶೂಟ್ ಮಾಡಿದ್ದೇವೆ, ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ಸೆ.8ಕ್ಕೆ ಬಿಡುಗಡೆಯಾಗುತ್ತಿದೆ ಎಂದರು.

Categories
ಸಿನಿ ಸುದ್ದಿ

ಯಥಾಭವ ಎಂಬ ಕೋರ್ಟ್ ರೂಮ್ ಜಾನರ್ ಸಿನಿಮಾ: ಟೀಸರ್ ರಿಲೀಸ್ ಆಯ್ತು

ಗೌತಮ್ ಬಸವರಾಜು ನಿರ್ಮಿಸಿ, ನಿರ್ದೇಶಿಸಿರುವ “ಯಥಾಭವ” ಚಿತ್ರದ ಟೀಸರ್ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಿದೆ

ಈ ಚಿತ್ರದ ಕಥೆ ಹೈದರಾಬಾದ್ ಸಿದ್ದವಾಗಿದೆ. ಆ ಬಳಿಕ ಶೂಟಿಂಗ್ ಚಟುವಟಿಕೆ ಶುರುವಾಗಿದೆ. ಮಾಡಿದೆ. ಈ ಕುರಿತು ಹೇಳುವ ನಿರ್ದೇಶಕ ರು, ಇಪ್ಪತ್ತೊಂದು ದಿನಗಳಲ್ಲಿ ಚಿತ್ರೀಕರಣ ಪೂರ್ಣ ಮಾಡಿದ್ದೇವೆ‌. “ಯಥಾಭವ” ಕೋರ್ಟ್ ರೂಮ್ ಜಾನರ್ ನ ಚಿತ್ರವಾಗಿದ್ದು, ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಕೋರ್ಟ್ ನಲ್ಲೇ ನಡೆಯುತ್ತದೆ. ನ್ಯಾಯಾಧೀಶರಾಗಿ ಹಿರಿಯ ನಟ ದತ್ತಣ್ಣ ಅಭಿನಯಿಸಿದ್ದಾರೆ ‌. ಗೋಪಾಲಕೃಷ್ಣ ದೇಶಪಾಂಡೆ ವಕೀಲರಾಗಿ ಹಾಗೂ ಬಾಲ ರಾಜವಾಡಿ ಅವರು ಗೃಹ ಮಂತ್ರಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪವನ್ ಶಂಕರ್, ಸಹನ ಸುಧಾಕರ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿದೆ. ಎ2 ಮ್ಯೂಸಿಕ್ ಮೂಲಕ ಟೀಸರ್ ಬಿಡುಗಡೆಯಾಗಿ, ಎಲ್ಲರ ಮನಸೂರೆಗೊಳ್ಳುತ್ತಿದೆ. ಹೈದರಾಬಾದ್ ಹಾಗೂ ಮುಂಬೈನಲ್ಲಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಗೌತಮ್ ಬಸವರಾಜು.

ಕನ್ನಡದಲ್ಲಿ ಈಗ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಹೊಸ ಚಿತ್ರಗಳು ಗೆಲ್ಲುತ್ತಿದೆ. ನಾನು ಈ ಚಿತ್ರದಲ್ಲಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ‌. ಈ ಚಿತ್ರದ ಬಹುತೇಕರು ಸಿನಿಮಾ ಕುರಿತು ಓದಿಕೊಂಡಿರುವವರು. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದು ಹಿರಿಯನಟ ದತ್ತಣ್ಣ ತಿಳಿಸಿದರು.

ಗೃಹ ಸಚಿವನ ಪಾತ್ರ ನನ್ನದು. ಚಿತ್ರದಲ್ಲಿ ನಾಯಕಿಯ ತಂದೆಯೂ ಹೌದು ಎಂದರು ನಟ ಬಾಲ ರಾಜವಾಡಿ.

ಇದು ನನ್ನ ಮೊದಲ ಚಿತ್ರ . ಎಲ್ಲರೂ ಪ್ರೋತ್ಸಾಹ ನೀಡಿ ಎಂದು ನಾಯಕ ಪವನ್ ಶಂಕರ್ ಹೇಳಿದರು. ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಸಹನ ಸುಧಾಕರ್ ತಿಳಿಸಿದರು. ನಾನು ಹಾಗೂ ನಿರ್ದೇಶಕ ಗೌತಮ್ ಬಸವರಾಜು ಬಾಲ್ಯ ಸ್ನೇಹಿತರು. ಸ್ನೇಹಿತನಿಗಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎನ್ನುತ್ತಾರೆ ಪ್ರಮುಖ ಪಾತ್ರಧಾರಿ ಗೌತಮ್ ಸುಧಾಕರ್.

ಕಲಾವಿದರಾದ ನೀನಾಸಂ ಆನಂದ್, ಮಹೇಶ್ ಕಲಿ, ಯಶಸ್ವಿನಿ ರವೀಂದ್ರ, ಮಾಸ್ಟರ್ ಶಮಂತ್ ತಮ್ಮ ಪಾತ್ರ ಕುರಿತು ಮಾತನಾಡಿದರು.

.

Categories
ಸಿನಿ ಸುದ್ದಿ

ಅವರೆಲ್ರೂ ದೇವರ ಹೆಸರಲ್ಲಿ ಪ್ರಮಾಣ ಮಾಡ್ತಾರೆ! ಹೊಸಬರ ಸಿನಿಮಾ ಪೋಸ್ಟರ್ ರಿಲೀಸ್

ಕನ್ನಡಚಿತ್ರರಂಗದಲ್ಲೀಗ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.

ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಸೆಕೆಂಡ್ ಹಾಫ್ ಹಾಗೂ ಗಾಂಧಿ ಮತ್ತು ನೋಟು ಸಿನಿಮಾದ ಬರಹಗಾರರಾಗಿ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಗುರುಪ್ರಸಾದ್ ಚಂದ್ರಶೇಖರ್ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ವರಮಹಾಲಕ್ಷ್ಮೀ ಹಬ್ಬಕ್ಕೆ ಅನಾವರಣಗೊಂಡಿದೆ.

ಸೋಷಿಯೋ ಪೊಲಿಟಿಕಲ್ ಲಿಗ್ವಿಸ್ಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಕವಿರತ್ನ ವಿ.ನಾಗೇಂದ್ರ ಪ್ರಸಾದ್, ಬಾಲ ರಾಜವಾಡಿ, ವೈಜನಾಥ್ ಬಿರಾದಾರ್, ಅಶ್ವಿತಾ ಹೆಗ್ಡೆ, ಡಿಂಪನ ಜೀವನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಭಾಷೆ ವಿಚಾರದ ಸುತ್ತ ಸಾಗುವ ಈ ಚಿತ್ರಕ್ಕೆ ಬಿ.ಶಿವಶಂಕರ್, ದತ್ತಾತ್ರೇಯ ವಿ ಜಮಾದಾರ್ ಬಂಡವಾಳ ಹೂಡಿದ್ದಾರೆ. ಶಿವಶಂಕರ್ ನೂರಬಂಡ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ.

ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಸಿನಿಮಾ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ತಯಾರಾಗುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿಯೂ ಹೊಸ ಪೋಸ್ಟರ್ ಹಬ್ಬದ ವಿಶೇಷವಾಗಿ ರಿಲೀಸ್ ಆಗಿದೆ.

Categories
ಸಿನಿ ಸುದ್ದಿ

ಇವರೇ ಹುಲಿ ನಾಯಕ! ಡಿ.ಜೆ.ಚಕ್ರವರ್ತಿ ಸಿನಿಮಾ ಶೀರ್ಷಿಕೆ ರಿಲೀಸ್ ಮಾಡಿದ ಉಪೇಂದ್ರ

ಪತ್ರಕರ್ತ, ನಟ.ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಹೆಸರು “ಹುಲಿ ನಾಯಕ”

ನಟ ಉಪೇಂದ್ರ ಅವರು ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮಂಜುನಾಥ್ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ.

ಚಿತ್ರದ ಹೆಸರು “ಹುಲಿ ನಾಯಕ” ಎಂದು ಘೋಷಣೆ ಮಾಡಿದ ಉಪೇಂದ್ರ ಅವರು, ಈ ಐತಿಹಾಸಿಕ ಚಿತ್ರ ಯಶಸ್ವಿಯಾಗಲಿ‌. ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಚ್ಚಿಕೊಂಡ‌ ದಿಗಂತ್! ಶರ್ಮಿಳಾ, ಧನ್ಯಾ ಕೈಯಲ್ಲೂ ಪೌಡರ್!! ಕಾಮಿಡಿ ಸಿನಿಮಾಗೆ ಕಿಚ್ಚ ಕ್ಲಾಪ್

ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅದರ ಮೊದಲ ಹಂತವಾಗಿ ಇಂದು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಮೊದಲ ಚಿತ್ರ ಪ್ರಾರಂಭವಾಗಿದೆ. ಅದೇ “ಪೌಡರ್”.

ಕಿಚ್ಚ ಸುದೀಪ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ಮಾಪಕ ಕಾರ್ತಿಕ್
ಗೌಡ ಅವರ ತಂದೆ ರಾಮಕೃಷ್ಣೇಗೌಡ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧನಂಜಯ್, ಸಂತೋಷ್ ಆನಂದರಾಮ್, ರೋಹಿತ್ ಪದಕಿ, ಧೀರೇನ್ ರಾಮಕುಮಾರ್, ನವೀನ್ ಶಂಕರ್, ಕೆ.ಮಂಜು, ಭೂಮಿ ಶೆಟ್ಟಿ, ನಾಗಭೂಷಣ್, ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್, ವಿಜಯ್ ಕೋಶಿ, ಚೈತನ್ಯ ಕುಂಬಕೋಣಂ ಮುಂತಾದವರು ಹಾಜರಿದ್ದರು.

“ಪೌಡರ್” ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.

ನಮ್ಮ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ “ಪೌಡರ್”. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ತಿಳಿಸಿದರು.

ಕೆ.ಆರ್‌.ಜಿ ಸ್ಟುಡಿಯೋಸ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಟಿವಿಎಫ್ ಸಂಸ್ಥೆಯ ಅರುಣಭ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಕಾಮಿಡಿ ಜಾನರ್ ನ ಈ ಕಥೆ ಎಲ್ಲರಿಗೂ ಹಿಡಿಸಲಿದೆ ಎಂದರು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ.

ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಎರಡು ದೊಡ್ಡ ಸಂಸ್ಥೆಗಳು ಸೇರಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ನಾಯಕ ದಿಗಂತ್.

ಶರ್ಮಿಳಾ ಮಾಂಡ್ರೆ, ಧನ್ಯ, ಅನಿರುದ್ಧ್ ಆಚಾರ್ಯ, ಅಚ್ಯುತ ಕುಮಾರ್, ರವಿಶಂಕರ್ ಗೌಡ ಮುಂತಾದ ಕಲಾವಿದರು “ಪೌಡರ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಇವ್ನು ಗ್ಯಾಂಗ್ ಸ್ಟರ್ ಅಲ್ಲ! ಪ್ರಾಂಕ್ ಸ್ಟರ್!! ಟ್ರೇಲರ್ ರಿಲೀಸ್ ಮಾಡಿದ ಸಚಿವ ಮಹದೇವಪ್ಪ

ವುಡ್ ಕ್ರೀಪರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ, ತಿಲಕ್ ಶೇಖರ್(ಉಗ್ರಂ ಖ್ಯಾತಿ) ನಾಯಕರಾಗಿ ನಟಿಸಿರುವ “ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ‌ಸಚಿವ ಹೆಚ್ ಸಿ ಮಹದೇವಪ್ಪ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಆನಂದ್ ಆಡಿಯೋ ಶ್ಯಾಮ್ ಅವರು ಸಹ ಸಮಾರಂಭಕ್ಕೆ ಆಗಮಿಸಿ ಯಶಸ್ಸನ್ನು ಹಾರೈಸಿದರು.

ಈ ಹಿಂದೆ ನಾನು “ಭಾವಚಿತ್ರ” ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿದ್ದೇನೆ.‌ ತಿಲಕ್ ಅವರು “ಗ್ಯಾಂಗ್ ಸ್ಟರ್” ಆಗಿ, ನಾನು “ಪ್ರಾಂಕ್ ಸ್ಟರ್” ಆಗಿ ನಟಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇದು ಯೂಟ್ಯೂಬರ್ ಒಬ್ಬನ ಕಥೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸಚಿವರಿಗೆ ಹಾಗೂ ಗಣ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಹಾಗೂ ನಟ ಗಿರೀಶ್ ಕುಮಾರ್.

ನಾನು “ಗ್ಯಾಂಗ್ ಸ್ಟರ್” ಆಗಿ ಕಾಣಿಸಿಕೊಂಡಿದ್ದೇನೆ. ಗಿರೀಶ್ ಕುಮಾರ್ ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಜನರಿಗೆ ಹತ್ತಿರವಾಗಲಿದೆ ಎಂದು ನಾಯಕ ತಿಲಕ್ ಶೇಖರ್ ತಿಳಿಸಿದರು.

ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಹಾಗೂ ಚಿತ್ರದ ಪ್ರಮುಖಪಾತ್ರದಲ್ಲೂ ಅಭಿನಯಿಸಿದ್ದೇನೆ.‌ ಚಿತ್ರದಲ್ಲಿ ನಾನು‌ ಸಹ “ಗ್ಯಾಂಗ್ ಸ್ಟರ್” ಎಂದರು ಗಿರೀಶ್ ಬಿಜ್ಜಳ್.

ನಾಯಕಿ ವಿರಾನಿಕ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ತಿಲಕ್ , ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ತುಕ್ರ-ತನಿಯ ಸಿನಿಮಾಗೆ ಭೀಮ ಸಾಥ್: ರಘು ಶಿವಮೊಗ್ಗ ಚಿತ್ರದ ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್

ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿರುವ ನಟ ಕಂ ನಿರ್ದೇಶಕ ರಾಘು ಶಿವಮೊಗ್ಗ ಮೂರನೇ ಕನಸು ಇಂದು ಅನಾವರಣಗೊಂಡಿದೆ. ರಾಘು ನಿರ್ದೇಶನದ ಹೊಸ ಸಿನಿಮಾದ ಟೈಟಲ್ ನ್ನು ಭೀಮ ದುನಿಯಾ ವಿಜಯ್ ಅನಾವರಣ ಮಾಡಿ ಶುಭಾಶಯ ಕೋರಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ತುಕ್ರ ತನಿಯ ಎಂಬ ವಿಭಿನ್ನ ಬಗೆಯ ಶೀರ್ಷಿಕೆ ಇಡಲಾಗಿದೆ.

ತುಕ್ರ ಅಂದರೆ ಶುಕ್ರವಾರ ಹುಟ್ಟಿದವನು. ತನಿಯ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ-ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ. ಪ್ರವೀಣ್ ತೇಜ್ ಹಾಗೂ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ ನಿಂದ ಚಿತ್ರೀಕರಣ ನಡೆಸೋದಿಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ತುಕ್ರ ತನಿಯ ಸಿನಿಮಾಗೆ ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿದೆ.

ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ಚೂರಿಕಟ್ಟೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು.

ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸ್ಮಾಲ್ ಸ್ಕ್ರೀನ್ ಟು ಬಿಗ್ ಸ್ಕ್ರೀನ್: ಗಟ್ಟಿಮೇಳ ರಕ್ಷ್ ಈಗ ಸಿನಿಮಾ ಹೀರೋ; ಬರ್ಮಗೆ ಬಹದ್ದೂರ್ ಚೇತನ್ ನಿರ್ದೇಶಕ

ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳ ಸಾರಥಿ ಚೇತನ್ ಕುಮಾರ್ ಹೊಸ ಸಿನಿಮಾ ಇಂದು ಘೋಷಣೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ರಿವೀಲ್ ಮಾಡಿದೆ. ಬರ್ಮ ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ರಕ್ಷ್ ರಾಮ್ ನಾಯಕ. ಅಂದಹಾಗೇ ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ.

ಬರ್ಮ. ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ.ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ಬರ್ಮ ಸಿನಿಮಾ ಅನೌನ್ಸ್ ದಿನವೇ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದಪ್ಪ ಚೇತನ್ ಸಿನಿಮಾಗಳ ರೆಕಾರ್ಡ್ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ. ಈಗಾಗಲೇ ರಕ್ಷ್ ರಾಮ್ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದು, ಬರ್ಮ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಪ್ರತಿ ಸಿನಿಮಾದಲ್ಲೊಂದು ಹೊಸತನ ಹೊತ್ತು ತರುತ್ತಾರೆ. ಅದೇ ನಿರೀಕ್ಷೆ ಬರ್ಮ ಸಿನಿಮಾ ಮೇಲೆಯೂ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ ನಿಂದ ಶೂಟಿಂಗ್ ಅಖಾಡಕ್ಕೆ ಚಿತ್ರತಂಡ ಧುಮುಕಲಿದೆ. ಇನ್ನುಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ನೀಡಲಿದೆ.

error: Content is protected !!