Categories
ಸಿನಿ ಸುದ್ದಿ

ವಿನೋದ್ ಪ್ರಭಾಕರ್ ಈಗ ನೆಲ್ಸನ್! ಟೀಸರ್ ಸಖತ್ ಮಾಸ್: ಹೀರೋ ಆಗಿದ್ದ ಅರುಣ್ ಕುಮಾರ್ ನಿರ್ದೇಶಕ

ಗೊಂಬೆಗಳ ಲವ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್‌ ಕುಮಾರ್ ಈಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ ‘ನೆಲ್ಸನ್’ ಎಂಬ ಶೀರ್ಷಿಕೆ ಇಡಲಾಗಿದ್ದು, ರಕ್ತದಲ್ಲಿ ನೆಂದ ದೇವರಕಾಡು ಎಂಬ ಅಡಿ ಬರಹ ಚಿತ್ರದ ಸಾರಂಶವನ್ನು ವಿವರಿಸ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಸಖತ್ ಮಾಸ್ ಆಗಿ ಮೂಡಿಬಂದಿರುವ ನೆಲ್ಸನ್ ಟೀಸರ್ ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಆಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇಂದು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಟೀಸರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಉಪೇಂದ್ರ ಮಾತನಾಡಿ, ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೇ.. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನೂ ಹೇಳೋದು. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ ಎಂದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ, ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್ ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆಹಿಂದೆ ಬಹಳಷ್ಟು ಜನ ಕೆಲಸ‌ ಮಾಡಿದ್ದೀರಿ ಎಂದರು.

ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಲಾಕ್ ಡೌನ್ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರೀಗೆ ಕಥೆ ತೆಗೆದುಕೊಂಡು. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದರು.

ನಂಬಿಕೆ ಹುಟ್ಟಿಕೊಳ್ತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನಾನು ಟೀಂ ನನ್ನ ಬೆನ್ನೆಲುಬು ಆಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. 60 ರಿಂದ 90 ಒಳಗಡೆ ಚಾಮರಾಜನಗರದಲ್ಲಿ ನಡೆಯುವ ಕಥೆ ಇದು. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ ಎಂದರು.

ನಿರ್ಮಾಪಕ ಬಿ.ಎಂ.ಶ್ರೀರಾಮ್ (ಕೋಲಾರ) ಮಾತನಾಡಿ, ಉಪ್ಪಿ ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿ ಆಯ್ತು. ನಾವು ತುಂಬ ಬಡತನದಿಂದ ಮೇಲೆ ಬಂದವರು. ನಾವು ಈ ಮಟ್ಟದಲ್ಲಿ ಬೆಳೆಯಲು ಐದು ಜನರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ. ಅದರಲ್ಲಿ ಉಪ್ಪಿ ಸರ್ ಕೂಡ ಒಬ್ಬರು. ತಂದೆ ತಾಯಿ ಆಶೀರ್ವಾದ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಇದ್ದೀವಿ. ಅರುಣ್ ಅವರನ್ನು ನನ್ನ ಸ್ನೇಹಿತರು ರೆಫರ್ ಮಾಡಿದ್ದರು. ಇದು ಚಾಮರಾಜನಗ ಆಚಾರ,ವಿಚಾರ ಅಂಶಗಳು ಇರುವುದರಿಂದ ಕಥೆ ಒಪ್ಪಿಕೊಂಡೆ. ವಿನೋದ್ ಸರ್ ಅಪ್ರೋಚ್ ಮಾಡಿದ್ವಿ. ಕಥೆ ಹೇಳಿದ್ವಿ ಒಪ್ಪಿಕೊಂಡರು. ಟೀಸರ್ ಮಾಡಿದ್ಮೇಲೆ ಅರುಣ್ ಟೀ ಮೇಲೆ ಭರವಸೆ ಹೆಚ್ಚಾಯ್ತು ಎಂದರು.

‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್‌ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. ವಿಶೇಷ ಅಂದರೆ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ. ಬಹಳ ಇಂಪ್ರೆಸ್ ಎನಿಸುವ ಟೀಸರ್ ಝಲಕ್ ನಲ್ಲಿ ಛಾಯಾಗ್ರಹಣ ಹಾಗೂ ಸಂಗೀತವೂ ಗಮನಸೆಳೆಯುತ್ತಿದೆ.

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಅರುಣ್ ಕುಮಾರ್ ಆ ಎಲ್ಲಾ ಕಲೆಯನ್ನು ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಅವರ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ. ಆಕ್ಷನ್ ಟೀಸರ್ ಧಮಾಕ ಎಬ್ಬಿಸಿರುವ ಚಿತ್ರತಂಡ ನವೆಂಬರ್ ತಿಂಗಳಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.

Categories
ಸಿನಿ ಸುದ್ದಿ

ಯುವ ರಾಜಕುಮಾರ್ ಅಭಿನಯದ ಯುವ ಬಿಡುಗಡೆ ದಿನಾಂಕ ಘೋಷಣೆ: 2024ರ ಮಾರ್ಚ್ 28ಕ್ಕೆ ರಿಲೀಸ್

ಯುವ ರಾಜಕುಮಾರ್ ಅಭಿನಯದ ಯುವ ಸಿನಿಮಾ ರಿಲೀಸ್ ಡೆಡಟ್ ಅನೌನ್ಸ್ ಆಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ “ಕೆ ಜಿ ಎಫ್”, “ಕಾಂತಾರ” ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ, ಜನಪ್ರಿಯ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಚೊಚ್ಚಲ ಚಿತ್ರ “ಯುವ” ಯಾವಾಗ ಬಿಡುಗಡೆಯಾಗಬಹುದು? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಅಭಿಮಾನಿಗಳಲ್ಲಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹು ನಿರೀಕ್ಷಿತ ಈ ಚಿತ್ರ 2024 ರ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ

Categories
ಸಿನಿ ಸುದ್ದಿ

ಸೈಕಿಕ್ ಟೀಸರ್ ಬಂತು: ಇದು ಕ್ರೈಮ್ ಥ್ರಿಲ್ಲರ್ ಚಿತ್ರ

ಕ್ರೈಮ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸೈಕಿಕ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿವೃತ್ತ ಪೊಲೀಸ್ ಆಧಿಕಾರಿಗಳ ಉಪಸ್ಥಿತಿಯಲ್ಲಿ ನೆರವೇರಿತು. ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ‌ ಕೆಲಸ ಮಾಡಿರುವ ಪುಷ್ಕರ್ ಗಿರಿಗೌಡ, ಸೈಕಿಕ್ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ಮಾಮೂಲಿ ಚೌಕಟ್ಟನ್ನು ಬಿಟ್ಟು ಈರೀತಿಯೂ ಮಾಡಿ ತೋರಿಸಬಹುದು ಎಂದು ಹೇಳಹೊರಟಿರುವ ನಿರ್ದೇಶಕ ಪುಷ್ಕರ ಗಿರಿಗೌಡ ಅದಕ್ಕೆ ತಕ್ಕಂತೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ. ನಿರ್ದೇಶಕ ಕೆ.ಎಂ.ಚೈತನ್ಯ, ನಿವೃತ್ತ ಎಸಿಪಿಗಳಾದ ಶಿವರಾಮ್, ಹನುಮಂತೇಗೌಡ್ರು, ಎಸ್.ಕೆ. ಉಮೇಶ್, ನಿರ್ಮಾಪಕ ದೇವೇಂದ್ರರೆಡ್ಡಿ, ಮಂಜುನಾಥ್ ನಾಯಕ ಸರ್ದಾರ್ ಸತ್ಯ, ನಾಯಕಿ ಹಂಸ ಪ್ರತಪ್ ಇತೃಉ ಇದ್ದರು.

ಸರ್ದಾರ್ ಸತ್ಯ, ಹಂಸಾ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಮುಖ್ಯ ಭೂಮಿಕೆಯಲ್ಲಿರುವ ಸೈಕಿಕ್ ಸಿನಿಮಾದ ಟೀಸರ್ ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಹಿನ್ನೆಲೆ ಸಂಗೀತ, ಸಿನಿಟೆಕ್ ಸೂರಿ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ನಿರ್ದೇಶಕ ಪುಷ್ಕರ ಗಿರಿಗೌಡ ಮಾತನಾಡುತ್ತ “ಕ್ರೈಮ್-ಥ್ರಿಲ್ಲರ್- ಇನ್ವೆಸ್ಟಿಗೇಶನ್ ಸಿನಿಮಾ ಎಂದರೆ ರಕ್ತ ಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಸೈಕಿಕ್ ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ‌ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ.

ಮೂರು ರೀತಿಯ ಲವ್ ಸ್ಟೋರಿಗಳನ್ನು ಇಲ್ಲಿ ಹೇಳಿದ್ದೇವೆ. ಚಿತ್ರದ ಹಲವಾರು ಮುಖ್ಯ ಅಂಶಗಳನ್ನು ಟೀಸರ್ ನಲ್ಲಿ ಬಿಟ್ಟುಕೊಟ್ಟಿಲ್ಲ. ಮುಂದೆ ಟ್ರೇಲರ್ ನಲ್ಲಿ ಅದನ್ನು ಹೇಳುತ್ತೇವೆ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇದ್ದರೂ ಅದರ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ‌ ಎಂದರು. ಹಂಸ ಪ್ರತಾಪ್ ಮಾತನಾಡಿ ಪೊಲೀಸ್ ಪಾತ್ರ ಮಾಡಬೇಕೆನ್ನುವುದು ನನ್ನ ಬಹುದಿನಗಳ ಕನಸು. ಅದು ಈ ಚಿತ್ರದಲ್ಲಿ ನೆರವೇರಿದೆ ಎಂದರು.
ತುಂಬಾ ದಿನಗಳ ನಂತರ ಸರ್ದಾರ್ ಸತ್ಯ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾ ಸ್ಟ್ರಾಂಗ್ ಕಂಟೆಂಟ್ ಇರುವ ಚಿತ್ರ. ಇಲ್ಲಿ ನಾನು ಈವರೆಗೂ ಮಾಡಿರದ ಹೊಸತನದ ಪಾತ್ರ ಮಾಡಿದ್ದೇನೆ ಎಂದರು.


ಉಳಿದಂತೆ ಕೈಲಾಸ್ ದೇವ್, ನಿಖಿತಾ ದೋರ್ತೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಕೇಶವ್ ಮೊದಲಾದವರು ಸೈಕಿಕ್ ಚಿತ್ರದ ತಾರಬಳಗದಲ್ಲಿದ್ದಾರೆ.
ಸಿಲ್ಕ್ ಸಿನಿಮಾ ಅರ್ಪಿಸುವ ಸೈಕಿಕ್ ಚಿತ್ರವನ್ನು ಚೇತನ್ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ವೈ.ಎಸ್.ಶ್ರೀಧರ್ ಅವರ ಸಂಕಲನ, ಪ್ರಸನ್ನ ಶೆಟ್ಟಿ ಅವರ ಸಂಭಾಷಣೆ ಹಾಗೂ ಗೋಪಿ ಜಾ ಅವರ ಸಾಹಸ ಸಂಯೋಜನೆಯಿದೆ.

Categories
ಸಿನಿ ಸುದ್ದಿ

ಟಗರು ಪಲ್ಯ ಜಾತ್ರೆ ಶುರು: 175 ಥಿಯೇಟರ್ ನಲ್ಲಿ ರಿಲೀಸ್: ಇದು ಡಾಲಿ ಪಿಕ್ಚರ್ಸ್ ಮೂರನೇ ಚಿತ್ರ

ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರದ ಪ್ರಚಾರ ಶುರು ಆಗಿದೆ. ಇದೇ ವಾರವೇ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಪಕ ಧನಂಜಯ್ ಹಾಗೂ ಇಡೀ ಚಿತ್ರತಂಡ ಮಾಧ್ಯಮದವರೊಟ್ಟಿಗೆ ಸಾಕಷ್ಟು ವಿಷಯ ಹಂಚಿಕೊಂಡಿದೆ.

ವಿತರಕ ಕಾರ್ತಿಕ್ ಗೌಡ ಮಾತನಾಡಿ, 45 ದಿನ ಮೊದಲೇ ಸಿನಿಮಾ ತೋರಿಸಿದ್ದರು. ಬಡವ ರಾಸ್ಕಲ್ ಕೂಡ‌ ರಿಲೀಸ್ ಗೂ‌ ಮುನ್ನ ಎರಡು ಮೂರು ತಿಂಗಳು ಮೊದಲೇ ತೋರಿಸಿದ್ದರು. ವಾಸುಕಿ ಆಗ ಒಂದು ಮಾತು ಹೇಳಿದ್ದರು. ಒಟಿಟಿ ನೋಡಿ ನಮ್ಮಲ್ಲೇ ಈ ರೀತಿ ಸಿನಿಮಾ ಬರಲ್ಲ ಅಂತಾರೇ. ಇದು ಎಲ್ಲಾರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿ ನಟಿಸಿದ್ದಾರೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡ್ತಿರುವ ಬೆಸ್ಟ್ ಸಿನಿಮಾ ಎಂದರು. 175 ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಸಿಎಂ ಟಗರು ಪಲ್ಯ ನೋಡಲು ಬರ್ತಾರೆ ಎಂದರು.

ನಿರ್ಮಾಪಕ ಧನಂಜಯ್ ಮಾತನಾಡಿ, ಕೆಲವೊಂದು ಯಾಕೆ ಘಟಿಸುತ್ತದೆ. ಹೇಗೆ ಘಟಿಸುತ್ತದೆ ಗೊತ್ತಿಲ್ಲ. ಬಡವ ರಾಸ್ಕಲ್ ಪ್ರೊಡಕ್ಷನ್ ಮಾಡಿದ್ವಿ. ಹೆಡ್ ಬುಷ್ ಪ್ರೊಡಕ್ಷನ್ ಮಾಡಿದ್ವಿ. ಕಳೆದ ವರ್ಷ ನನ್ನ ಬರ್ತ್ ಡೇಯಲ್ಲಿ ಕಾರ್ತಿಕ್ ಜೊತೆ ಚರ್ಚೆ ಮಾಡುವಾಗ ಪ್ರೊಡಕ್ಷನ್ ಕಂಟಿನ್ಯೂ ಮಾಡಬೇಕು.‌ ಒಳ್ಳೆ ಕಥೆ ನಿರ್ಮಾಣ ಮಾಡಬೇಕು ಎಂದಾಗ. ಆಗ ಆಡಿಯನ್ಸ್ ಗೆ ಪ್ರಾಮಿಸ್ ಮಾಡಿ. ಹೊಸಬರಿಗೆ ವರ್ಷಕ್ಕೆ ಒಂದು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು. ಅವತ್ತು ಅವರು ಹೇಳಿದಾಗ ನಿಜ ಅನಿಸಿತು. ಅದನ್ನು ನನ್ನ ಹುಟ್ಟುಹಬ್ಬದಲ್ಲಿ ಅನೌನ್ಸ್ ಮಾಡಿದೆ. ಸಿನಿಮಾಗೆ ಒಂದೊಳ್ಳೆ ಕಥೆಗೆ ಏನ್ ಬೇಕು ಅದೆಲ್ಲವನ್ನೂ ಟಗರು ಪಲ್ಯಗೆ ಒದಗಿಸಿದ್ದೇವೆ.

ಈ ಚಿತ್ರವನ್ನು ಯಾಕೆ ನೋಡಿಕ್ಕೆ ಬನ್ನಿ ಎಂದು ರಿಕ್ವೆಸ್ಟ್ ಮಾಡಿಕೊಳ್ತೀವಿ ಎಂದರೆ, ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡೆಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ. ನಮ್ಮಗೆ ತುಂಬಾ ಕನೆಕ್ಟ್ ಆಗುವ ಸಬ್ಜೆಕ್ಟ್. ಬೇರೆ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ‌. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು. ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್ ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಅನ್ನೋದು ನಮ್ಮ ಹೆಮ್ಮೆ ಎಂದರು.

ನಟಿ ತಾರಾ ಅನುರಾಧಾ ಮಾತನಾಡಿ, ದಸರಾ ಹಬ್ಬ ಆದ ತಕ್ಷಣ ಸಖತ್ ಊಟ ಅಂದರೆ ಅದು ಟಗರು ಪಲ್ಯ. ನಿರ್ಮಾಪಕನಿಗೆ ವಯಸ್ಸು ಮುಖ್ಯ ಅಲ್ಲ. ಅವನ ಕೆಲಸ ಮುಖ್ಯ. ಡಾಲಿಗೆ ಇಡೀ ತಂಡದ ಪರವಾಗಿ ಧನ್ಯವಾದ. ಉಮೇಶ್ ಎಲ್ಲಿಯೂ ತಾನೊಬ್ಬ ಹೊಸ ನಿರ್ದೇಶಕ ಅನಿಸದೇ ಇರುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಅಮೃತಾ ಹೊಸ ಹುಡುಗಿ ಅನಿಸುವುದಿಲ್ಲ. ತುಂಬಾ ಚೆನ್ನಾಗಿ ನಟಿಸಿದ್ದಾಳೆ. ನಾಗು ಒಳ್ಳೆ ಆಕ್ಟರ್. ನಮ್ಮ ಅದೃಷ್ಟ ಏನೂ ನಾನು ರಘು ಮಾಡಿದ ಎಲ್ಲಾ ಚಿತ್ರಗಳು ಚೆನ್ನಾಗಿ ಆಗುತ್ತಿವೆ ಎಂದರು.

ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳಿರೋ ‘ಟಗರು ಪಲ್ಯ’ ಇದೇ ಶುಕ್ರವಾರ ತೆರೆ ಮೇಲೆ ಮೂಡಿ ಬರಲಿದೆ. ಹೀಗಾಗಿ ಟಗರು ಪಲ್ಯ ಪ್ರಮೋಷನ್ ಗಾಗಿ ಟ್ರಕ್ ಹತ್ತಿ ಹೊರಟಿದ್ದಾರೆ ಡಾಲಿ. ಕ್ಯಾಂಟರ್ ಓಡಿಸಿರೋ ಡಾಲಿ ಊರೂರು ಸುತ್ತಿದ್ದಾರೆ. ಆ ವೀಡಿಯೋ ವೈರಲ್ ಆಗಿದೆ.

ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿ ನಟ ಧನಂಜಯ್‌ ನಿರ್ಮಿಸಿದ್ದಾರೆ. ಉಮೇಶ್‌ ಕೃಪ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ. ಟ್ರೇಲರ್‌ ನೋಡಿ ಸಿನಿಪ್ರಿಯರು ಕೂಡಾ ಮೆಚ್ಚಿದ್ದಾರೆ.

ಅಕ್ಟೋಬರ್‌ 27 ರಂದು ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಇಕ್ಕಟ್‌ ಖ್ಯಾತಿಯ ನಾಗಭೂಷಣ್‌, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಅವರೂ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ

Categories
ಸಿನಿ ಸುದ್ದಿ

ಕ್ಯಾಪ್ಚರ್ ಎಂಬ ಹಾರರ್ ಸಿನಿಮಾಗೆ ಮಾನ್ವಿತಾ ಎಂಟ್ರಿ: ಪ್ರಿಯಾಂಕ ಮಗಳ ಪಾತ್ರದಲ್ಲಿ ಟಗರು ಪುಟ್ಟಿ

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್‌ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ ಬ್ಯೂಟಿ ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕ್ಯಾಪ್ಟರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಲಿದ್ದಾರೆ.

ಕ್ಯಾಪ್ಚರ್ ಈಗಾಗಲೇ ಗೊತ್ತಿರುವ ಹಾಗೆ ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ವಿಶೇಷ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೀಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ಕ್ಯಾಪ್ಚರ್ ಮೇಲಿನ ಕುತೂಹಲ ಹೆಚ್ಚಿಸಿದೆ. ಮಾನ್ವಿತಾ ಈ ಸಿನಿಮಾದಲ್ಲಿ ಸ್ನೇಹಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಹಾರರ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.

ಮಾನ್ವಿತಾ ಏನಂತಾರೆ?

‘ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಮೊದಲ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ವಿ, ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎನ್ನುತ್ತಾರೆ.

ಮಾನ್ವಿತಾ ಕೊನೆಯದಾಗಿ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವರ್ಷದ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ಕ್ಯಾಪ್ಚರ್ ಸಿನಿಮಾದಲ್ಲಿ ಮಾನ್ವಿತಾ ಲುಕ್ ಹೇಗಿರಲಿದೆ ಎನ್ನುವುದು ಸದ್ಯದಲ್ಲೇ ರಿವೀಲ್ ಆಗಲಿದೆ. ಕ್ಯಾಪ್ಚರ್ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.

Categories
ಸಿನಿ ಸುದ್ದಿ

ದಸರಾಗೆ ಶುರುವಾಯ್ತು ನಾನಿ 31ನೇ ಚಿತ್ರ: ಸೂರ್ಯನ ಶನಿವಾರ ಸಿನಿಮಾಗೆ ಆರ್ ಆರ್ ಆರ್ ನಿರ್ಮಾಪಕ ಬಂಡವಾಳ

ನ್ಯಾಚುರಲ್ ಸ್ಟಾರ್ ನಾನಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಸರಾ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ನಾನಿ 31ನೇ ಸಿನಿಮಾ ಅನೌನ್ಸ್ ಆಗಿತ್ತು. ಈ ಹಿಂದೆ ಕಾಮಿಡಿ ಕಥಾಹಂದರದ ಅಂಟೆ ಸುಂದರಾನಿಕಿ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ.

ದಸರಾ ಹಬ್ಬದ ಅಂಗವಾಗಿ ಹೈದ್ರಾಬಾದ್ ನಲ್ಲಿ ’ಸೂರ್ಯನ ಶನಿವಾರ’ ಸಿನಿಮಾ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದ್ರೆ, ವಿವಿ ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

’ಸೂರ್ಯನ ಶನಿವಾರ’ ಪಕ್ಕ ಮಾಸ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿದ್ದು, ತಮಿಳು ಸ್ಟಾರ್ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ.

’ಸೂರ್ಯನ ಶನಿವಾರ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ತ್ರಿಬಲ್ ಆರ್ ಸೇರಿದಂತೆ ಹಲವರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ’ಸೂರ್ಯನ ಶನಿವಾರ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಟೈಮ್ ಅಂದ್ರೆ ಇದು ಗುರು!ಟೈಮ್ ಕೆಟ್ರೆ ಲೈಫು ಕರಾಬು : ಸರಿ ಇದ್ರೆ ಸೂಪರ್ಬು!! ಋಷಿ ತಪಸ್ಸು ತಮನ್ನಾವರೆಗೆ… ಕನ್ನಡಕ್ಕೆ ಬರ್ತಾರ ತಮನ್ನಾ ಭಾಟಿಯಾ?

ಈ ಸಿನಿಮಾರಂಗವೇ ಹಾಗೆ. ಅಂದುಕೊಂಡಿದ್ದು ಆಗೋದು ಕಷ್ಟ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಜನಮನ್ನಣೆ ಪಡೆಯುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಸಿನಿಮಾರಂಗ ಮಾತ್ರ. ಇಲ್ಲೂ ಗೆಲುವು ಸುಲಭವಲ್ಲ. ಹೆಸರು ಸಿಗೋದು ಸಲೀಸಲ್ಲ. ನೂರಾರು ಸಮಸ್ಯೆ ಕಷ್ಟ -ನಷ್ಟಗಳ ನಡುವೆ ಬಣ್ಣದ ಲೋಕದಲ್ಲಿ ಮಿಂದೇಳಲೇಬೇಕು. ಇಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಆಗಬಹುದು. ಅಂತಹ ಅನೇಕ ಉದಾಹರಣೆಗಳ ಮಧ್ಯೆ ಇಲ್ಲೊಬ್ಬ ನಿರ್ದೇಶಕ ಇದ್ದಾರೆ. ಸಿನಿಮಾದಿಂದಾಗಿ ಬೀದಿಗೆ ಬಂದಿದ್ದ, ಬದುಕೇ ಸಾಕು ಅಂತ ಸಾಯಲು ಹೊರಟಿದ್ದ ಅವರು ನಿರ್ಧರಿಸಿದ್ದು, ಇಲ್ಲೇ ಇದ್ದು ಗೆಲ್ಲಬೇಕು ಅಂತ ಹಠ ಮಾಡಿದ್ದರ ಹಿನ್ನೆಲೆ, ಈಗ ತೆಲುಗು ಸ್ಟಾರ್ ನಟಿಯನ್ನು ತಮ್ಮ ಸಿನಿಮಾಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಯಾರು ಆ ನಿರ್ದೇಶಕ, ಯಾವ ನಟಿಯ ಹಿಂದೆ ಬಿದ್ದಿದ್ದಾರೆ ಅನ್ನೋ ಸ್ಟೋರಿ ಇದು…

ಆ ನಿರ್ದೇಶಕ ಎದುರಿಸಿದ ಸಮಸ್ಯೆ ಒಂದಾ ಎರಡಾ? ಬಹುಶಃ ಬೇರೆ ಯಾವುದೇ ನಿರ್ದೇಶಕನಿಗೆ ಅಂಥದ್ದೊಂದು ಸಮಸ್ಯೆ ಎದುರಾಗಿದ್ದರೆ, ಅವರ ಗತಿ ಅಷ್ಟೇ…

ಇದು ಕನ್ನಡದ ನಿರ್ದೇಶಕರೊಬ್ಬರ ಇಂಟ್ರೆಸ್ಟಿಂಗ್ ಸ್ಟೋರಿ. ಹೌದು, ಅದು ಬೇರಾರು ಅಲ್ಲ, ಅವರ ಹೆಸರು ನಮ್ ಋಷಿ. ಈ ಹೆಸರು ಕೇಳಿದಾಕ್ಷಣ ನೆನಪಾಗೋದೇ, ‘ಒಳಿತು ಮಾಡು ಮನಸ ನೀ ಇರೋದು ಮೂರು ದಿವಸ…’ ಎಂಬ ಅರ್ಥಪೂರ್ಣ ಸಾಹಿತ್ಯ ಇರುವ ಗೀತೆ. ಇಂಥದ್ದೊಂದು ಗೀತೆ ರಚಿಸಿದ ನಮ್ ಋಷಿ, ಕನ್ನಡ ಸಿನಿಮಾ ರಂಗದಲ್ಲಿ ಒಂದೆರೆಡು ಸಿನಿಮಾ ನಿರ್ದೇಶನ ಮಾಡಿದ್ದರು. ಇವರು ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ನಗುವಿಗಿಂತ ಅಳುವನ್ನು ನುಂಗಿದ್ದೇ ಹೆಚ್ಚು. ಇವೆಲ್ಲದರ ಜೊತೆ ಅವಮಾನಗಳ ಸರಮಾಲೆ ಕೂಡ ಧರಿಸಿದ್ದುಂಟು.

ಸಿನಿಮಾ ಪ್ರೀತಿ ಹೆಚ್ಚಾಗಿ ಗಳಿಸಿದ್ದಕ್ಕಿಂತ ಕಳಕೊಂಡಿದ್ದೇ ಜಾಸ್ತಿ. ಸಿನಿಮಾ ಅಂದಮೇಲೆ ಲಾಸು ಲಾಭ ಕಾಮನ್. ಒಂದರ ಮೇಲೊಂದರ ಹೊಡೆತದಿಂದ ಕುಗ್ಗಿ ಹೋದ ನಿರ್ದೇಶಕ ನಮ್ ಋಷಿ, ಮೌನ ತಾಳಿದ್ದರು. ಅಷ್ಟೇ ಅಲ್ಲ, ದೂರವೇ ಉಳಿದಿದ್ದರು. ಆದರೆ, ಒಳಗಿರುವ ಬರಹಗಾರ ಸುಮ್ಮನಿರಲಿಲ್ಲ. ‘ಮೂಳೆ ಮಾಂಸದ ದೇಹಕೆ, ಚಿನ್ನದ ಲೇಪನ ಏತಕೆ’ ಎಂಬ ಮತ್ತೊಂದು ಅರ್ಥಪೂರ್ಣ ಸಾಹಿತ್ಯ ಗೀಚಿದರು. ಎಲ್ಲೆಡೆ ಈ ಹಾಡು ವೈರಲ್ ಆಯ್ತು. ‘ ಅಪ್ಪು ಮಾಡಿದ ತಪ್ಪೇನು’ ಎಂಬ ಹಾಡೂ ಹೊರಬಂತು. ಇದರ ಜೊತೆಯಲ್ಲೇ ಸದ್ದಿಲ್ಲದೆ ‘ರಾಮ್ ರಹೀಮ್’ ಎಂಬ ಸಿನಿಮಾವೊಂದನ್ನೂ ನಿರ್ದೇಶಿಸಿದ್ದಾರೆ. ಅದೀಗ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.

ಇಷ್ಟೆಲ್ಲಾ ಮಾಡಿದ ನಮ್ ಋಷಿ, ಸಾವಿಗೆ ಮುಂದಾಗಿದ್ದರು. ಅದಕ್ಕೆ ಕಾರಣ, ‘ಒನ್ ವೇ’ ಎಂಬ ಸಿನಿಮಾ. ಈ ಸಿನಿಮಾದಲ್ಲಿ ಋಷಿ ಕೈ ಸುಟ್ಟುಕೊಂಡರು. ಸಾಲ ಮೈ ಮೇಲೆ ಬಂತು. ಇಂಡಸ್ಟ್ರಿಯಿಂದ ದೂರ ಉಳಿದರು. ಕೈಯಲ್ಲಿ ಸಿನಿಮಾ ಇಲ್ಲ. ಇನ್ನು ಸಾಲದ ಹೊರೆ ಬೇರೆ, ಸಾವಿಗೆ ಶರಣಾಗದೆ ಗತಿ ಇಲ್ಲ ಅಂತ ಸಾಯೋಕೆ ನಿರ್ಧರಿಸಿದರು. ಅದೇ ವೇಳೆ ಹಾಡೊಂದನ್ನು ಬರೆಯುವ ಅವಕಾಶ ಬಂತು. ಆಗ ‘ ಸಾವು ಇದೆ ಅಂತ ಗೊತ್ತು ಮನುಜ ನಿನಗೇ. ಸಾವಿಗಿಂತ ದೊಡ್ಡ ನಷ್ಟ ಇಲ್ಲ ಜಗದೊಳಗೆ. ಪರಿಹಾರ ಹುಟ್ಟಿದ ಮೇಲೆ ಸಮಸ್ಯೆ ಹುಟ್ಟಿದ್ದು, ಸಮಸ್ಯೆಗೆ ಅಂಜಿ ಇಲ್ಲಿ ಯಾರು ಸಾಯಬಾರದು…’ ಎಂಬ ಸಾಲು ಬರೆದರು. ಹಾಡು ಸೊಗಸಾಗಿ ಮೂಡಿಬಂತು. ಆಗ ನಮ್ ಋಷಿ ಸಾಯುವ ನಿರ್ಧಾರ ಬದಲಿಸಿದರು. ಮತ್ತೆ ಸಿನಿಮಾ ಮಾಡಲು ಹೊರಟರು. ಆಗ ನಿರ್ಧರಿಸಿದ್ದೇ ಹೊಸ ಸಿನಿಮಾ ನಿರ್ದೇಶನ ಮಾಡೋಕೆ. ಸದ್ದಿಲ್ಲದೆ ಆ ಸಿನಿಮಾ ಮಾಡಿ ಇದೀಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ.

ಆ ಸಿನಿಮಾಗೆ ‘ಟೈಮ್’ ಎಂದು ನಾಮಕರಣ ಮಾಡಿದ್ದಾರೆ. ಈ ಸಿನಿಮಾಗೆ ತೆಲುಗಿನ ಸ್ಟಾರ್ ನಟಿ ತಮನ್ನಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ ಅನ್ನೋದೇ ವಿಶೇಷ. ಈಗಾಗಲೇ ತಮನ್ನಾ ಅವರ ಮ್ಯಾನೇಜರ್ ಜೊತೆ ಚರ್ಚೆ ಕೂಡ ಮಾಡಿದ್ದಾರಂತೆ. ಈ ಮೊದಲು ಕನ್ನಡದ ನಟಿಯೊಬ್ಬರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಲು ಹಲವಾರು ಸಲ ಫೋನ್ ಮಾಡಿದರೂ ಅವರು ಇವರ ಫೋನ್ ತೆಗೆದಿಲ್ಲ. ಅದೊಂದೇ ಕಾರಣಕ್ಕೆ ನಮ್ ಋಷಿ, ತಮನ್ನಾ ಮೊರೆ ಹೋಗಲು ನಿರ್ಧರಿಸಿ, ಅವರ ಮ್ಯಾನೇಜರ್ ಬಳಿ ಒಂದು ಸುತ್ತು ಮಾತಾಡಿದ್ದಾರೆ. ಅವರ ಸಂಭಾವನೆ ಹೆಚ್ಚು ಅಂತ ತಿಳಿದರೂ ಕೂಡ ಅವರನ್ನೇ ಟೈಮ್ ಸಿನಿಮಾಗೆ ಕರೆ ತರುವ ಹಠ ಮಾಡಿದ್ದಾರೆ.

ಇಂಡಸ್ಟ್ರಿಯಿಂದ ಮಾಯವಾಗೇ ಬಿಟ್ಟರು ಅಂದುಕೊಂಡರೆ ನಾನಿಲ್ಲೇ ಇದೀನಿ ಅಂತ ತೋರಿಸಲು ಈ ಬಾರಿ ದೊಡ್ಡಮಟ್ಟದಲ್ಲೇ ಸದ್ದು ಮಾಡೋಕೆ ಅಣಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಿರ್ದೇಶಕರುಗಳೇ ಅವರು ಬರ್ತಾರೆ, ಇವರು ಬರ್ತಾರೆ ಅಂತ ಸುದ್ದಿ ಮಾಡಿದ್ದು ಗೊತ್ತೇ ಇದೆ. ಆಮೇಲೆ ಅವರ್ಯಾರು ಬರದೆ ಸುಮ್ಮನಾದ ಉದಾಹರಣೆಗಳೂ ಸಾಕಷ್ಠಿದೆ. ಈಗ ಋಷಿ ತೆಲುಗು ಸ್ಟಾರ್ ನಟಿ ಕರೆತರುವ ಉತ್ಸಾಹದಲ್ಲಿದ್ದಾರೆ. ಅದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?ಇಷ್ಟು ವರ್ಷಗಳ ಋಷಿ ತಪಸ್ಸು ತಮನ್ನಾ ಮೂಲಕವಾದರೂ ಈಡೇರಲಿ.

ಅದೇನೆ ಇರಲಿ, ಈ ಟೈಮ್ ಕಥೆ ಬಗ್ಗೆ ಹೇಳುವ ಅವರು, ಅದೊಂದು ಕ್ರೈಮ್ ಥ್ರಿಲ್ಲರ್ ಸ್ಟೋರಿ. ತಮನ್ನಾ ಅವರು ನಟಿಸಲು ಒಪ್ಪಿಕೊಂಡರೆ, ಅವರದು ಡಿಸಿಪಿ ಪಾತ್ರವಂತೆ. ನೈಜ ಘಟನೆಗಳ ಎಳೆ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾದಲ್ಲಿ ಹಲವು ಕಾಡುವ ಅಂಶಗಳಿರಲಿವೆ ಎಂಬುದು ನಮ್ ಋಷಿ ಮಾತು.

ಅಂದಹಾಗೆ, ಈ ಸಿನಿಮಾಗೆ ನಮ್ ಋಷಿ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಎಸ್.ಟಿ. ಸೋಮಶೇಖರ್, ಹನುಮಂತು, ನಾರಬಂಡ, ಪಾರ್ಥಸಾರಥಿ, ರಂಗನಾಥ್ ಅವರ ನಿರ್ಮಾಣವಿದೆ. ಶಂಕರ್ ಕ್ಯಾಮೆರಾ ಹಿಡಿದರೆ, ಶ್ರೀ ಗುರು ಅವರ ಸಂಗೀತವಿದೆ. ಕುಮಾರ್ ಸಂಕಲನ ಮಾಡಿದರೆ, ಥ್ರಿಲ್ಲರ್ ಮಂಜು ಅವರ ಸಾಹಸವಿದೆ. ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಜಿ. ವಸಂತ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಗರುಡ ಪುರಾಣ ಟ್ರೇಲರ್ ಬಂತು: ನವೆಂಬರ್ 3ಕ್ಕೆ ಸಿನಿಮಾ ರಿಲೀಸ್


27 ಫ್ರೇಮ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ “ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ನವೆಂಬರ್ 3 ರಂದು ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.

ಜನಪ್ರಿಯ “ಕಾಂತಾರ” ಸೇರಿದಂತೆ ಅನೇಕ ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯನಿರ್ವಹಿಸಿರುವ ಮಂಜುನಾಥ್ ಬಿ ನಾಗಬಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ “ಗರುಡ ಪುರಾಣ” ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ “ಗರುಡ ಪುರಾಣ” ಚಿತ್ರದ ನಾಯಕನಾಗೂ ಮಂಜುನಾಥ್ ಬಿ ನಾಗಬಾ ನಟಿಸಿದ್ದಾರೆ, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪುನೀತ್ ಆರ್ಯ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ “ಗರುಡ ಪುರಾಣ” ಚಿತ್ರದ ಛಾಯಾಗ್ರಾಹಕರು.

Categories
ಸಿನಿ ಸುದ್ದಿ

ರೋನಿ ಮತ್ತೊಂದು ದಾಖಲೆ! ನಟ ಕಿರಣ್ ರಾಜ್ ಹಿಮಾಚಲದಲ್ಲಿ 8 ಸಾವಿರ ಅಡಿ ಎತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಸಾಹಸ

ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ” ಚಿತ್ರದ ನಾಯಕ ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ. ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರೋನಿ ಚಿತ್ರದ ಟೈಟಲ್ ಬಿಡುಗಡೆ ಮಾಡಿ ದಾಖಲೆ ಮಾಡಿದ್ದರು. ಈಗ ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ಟ್ರೈನಿಂಗ್ ಪಡೆದು 8000 ಅಡಿ ಎತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ದಾಖಲೆ ತಮ್ಮದಾಗಿಸಿಕೊಂದ್ದಿದ್ದಾರೆ.


ಈ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸುದ್ದು ಮಾಡುತ್ತಿದೆ. ಈ ಸಾಹಸ ತರಬೇತಿಗಳು ನನ್ನ ಮುಂದಿನ ಚಿತ್ರದ ತಯಾರಿ ಎನ್ನುತಿರುವ ಕಿರಣ್ ರಾಜ್, ಮುಂದಿನ ಚಿತ್ರ ಯಾವುದು? ಎನ್ನುವ ಸುಳಿವು ಬಿಟ್ಟುಕೊಟ್ಟಿಲ್ಲ.

Categories
ಸಿನಿ ಸುದ್ದಿ

ವಿಧು ವಿನೋದ್ ಚೋಪ್ರಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 12 th ಫೇಲ್ ಅಕ್ಟೋಬರ್ 27ಕ್ಕೆ ರಿಲೀಸ್: ಕೆ ಆ ರ್ ಜಿ ಸ್ಟುಡಿಯೋಸ್ ವಿತರಣೆ

” ಪರಿಂದ”, “1942 ಎ ಲವ್ ಸ್ಟೋರಿ”, “ಥ್ರೀ ಇಡಿಯೆಟ್ಸ್” ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಾಣ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “12th ಫೇಲ್” ಅಕ್ಟೋಬರ್ 27 ರಂದು ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ‌. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಪಡೆದುಕೊಂಡಿದೆ.

12th ಫೇಲ್‍ ಚಿತ್ರ ಅನುರಾಗ್‍ ಪಾಠಕ್‍ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಚಿಕ್ಕವಯಸ್ಸಿನಿಂದ ವಿಧು ವಿನೋದ್ ಚೋಪ್ರಾ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು ನಾನು, ಎಂದು ಮಾತು ಆರಂಭಿಸಿದ ಕೆ.ಆರ್.ಜಿ ಸಂಸ್ಥೆಯ ಕಾರ್ತಿಕ್ ಗೌಡ ಅವರು, ಈ ಚಿತ್ರವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ರೋಹಿತ್ ಪದಕಿ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡದ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ನಮ್ಮ ಮುಂದಿನ ಚಿತ್ರಗಳನ್ನು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಧು ವಿನೋದ್ ಚೋಪ್ರಾ ಅವರಿಗೆ ಧನ್ಯವಾದ. ಸದಭಿರುಚಿಯ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಉತ್ತಮ ಸಂದೇಶವುಳ್ಳ ಚಿತ್ರವನ್ನು ವಿತರಣೆ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಕೆ.ಆರ್.ಜಿ ಸಂಸ್ಥೆಯ ಯೋಗಿ ಜಿ ರಾಜ್ ತಿಳಿಸಿದರು.

ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ವಿಧು ವಿನೋದ್ ಚೋಪ್ರಾ ಅವರು ಕರೆ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದಾಗ ತುಂಬಾ ಸಂತೋಷವಾಯಿತು. ಅಸಾಧ್ಯವನ್ನು ಸಾಧ್ಯವಾಗಿಸಿದ ಐ.ಪಿ.ಎಸ್ ಮನೋಜ್ ಕುಮಾರ್ ಶರ್ಮ ಅವರ ಜೀವನ್ನಾಧಾರಿತ ಈ ಚಿತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ಎನ್ನುತ್ತಾರೆ ನಾಯಕ ವಿಕ್ರಾಂತ್ ಮಾಸ್ಸೆ.

ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮೇಧಾ ಶಂಕರ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ‌. ಉತ್ತಮ ಸಂದೇಶವಿರುವ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ ಎಂದು ಮೇಧಾ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

error: Content is protected !!