ನಟ ಸುದೀಪ್ ಅವರು ನಮಗೆ ಮಾತು ಕೊಟ್ಟಂತೆ ನಮಗೆ ಡೇಟ್ ನೀಡಿ ಜೊತೆಗೆ ಸಿನಿಮಾ ಮಾಡಬೇಕು. ಒಂದು ವೇಳೆ ಸಿನಿಮಾ ಮಾಡಲು ಡೇಟ್ ಕೊಡದಿದ್ದರೆ ಅವರ ಮನೆಯ ಮುಂದೆ ಧರಣಿ ಕೂರುವುದಾಗಿ ನಿರ್ಮಾಪಕ ಎನ್.ಕುಮಾರ್ ಹೇಳಿಕೆ ನೀಡಿದ್ದರು. ಆದರೆ, ಕುಮಾರ್ ಅವರು ಸುದೀಪ್ ಮನೆಯ ಮುಂದೆ ಧರಣಿ ಮಾಡಲಿಲ್ಲ. ಸುದೀಪ್ ಮನೆಯ ಮುಂದರ ಧರಣಿ ಮಾಡದೆ, ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದರು ಧರಣಿ ನಡೆಸಿದ್ದಾರೆ.
ನಮ್ಮ ಜೊತೆಗೆ ಒಂದು ಸಿನಿಮಾ ಮಡಿಕೊಡಬೇಕು ಎಂದು ಸುದೀಪ್ ಅವರಿಗೆ ಅಡ್ವಾನ್ಸ್ ಕೊಡಲಾಗಿತ್ತಂತೆ. ಆಎರೆ, ಸುದೀಪ್ ಮಾತ್ರ ಸಿನಿಮಾ ಮಾಡಲು ಡೇಟ್ ಕೊಡದೆ, ಅಡ್ವಾನ್ಸ್ ಕೂಡ ಕೊಡದೆ ಚಿತ್ರ ಮುಂದೂಡುತ್ತಿದ್ದಾರೆ. ಹೀಗಾಗಿ ನನಗೆ ನಷ್ಟ ಕಷ್ಟ ಎರಡೂ ಆಗಿದೆ ಅಂತ ಈ ಹಿಂದೆ ಕುಮಾರ್ ಅವರು ವಾಣಿಜ್ಯ ಮಂಡಳಿಯಲ್ಲಿಬಪ್ರೆಸ್ ಮೀಟ್ ಮಾಡಿ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಆಗ ಕುಮಾರ್, ನನಗೆ ಸುದೀಪ್ ಸ್ಪಂದಿಸದಿದ್ದರೆ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದರು. ಆದರೆ, ಕುಮಾರ್ ಮಾತ್ರ ಸುದೀಪ್ ಅವರ ಮನೆಯ ಮುಂದೆ ಧರಣಿ ಮಾಡಲಿಲ್ಲ.
ಸುದೀಪ್ ಕೂಡ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ನಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ನಾನು ತಪ್ಪು ಮಾಡಿದ್ದರೆ ಅಲ್ಲೇ ದಂಡ ಕಟ್ಟುತ್ತೇನೆ ಎಂದಿದ್ದರು.
ಆದರೆ, ಕುಮಾರ್ ಇದಕ್ಕೆ ಒಪ್ಪದೆ ವಾಣಿಜ್ಯ ಮಂಡಳಿಯಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದು ಚೇಂಬರ್ ಮುಂದೆ ಧರಣಿ ನಡೆಸಿದ್ದಾರೆ.
ಧರಣಿ ವೇಳೆ ಕುಮಾರ್ ಹೇಳಿದಿಷ್ಟು, ವಾಣಿಜ್ಯ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಿ, ಆ ಸಭೆಗೆ ಸುದೀಪ್ ಬರಬೇಕು. ಅಲ್ಲೇ ನಾನು ಎಲ್ಲಾ ದಾಖಲೆ ಕೊಡುತ್ತೇನೆ. ಸುದೀಪ್ ಬಗ್ಗೆ ಎಲ್ಲೂ ಕೆಟ್ಟ ಪದ ಮಾತಾಡಿಲ್ಲ. ನನ್ನ ಸಮಸ್ಯೆಗೆ ಅವರು ಸ್ಪಂದಿಸಿಲ್ಲ ಎಂದು ಹೇಳಿದ್ದೇನೆ. ಚೇಂಬರ್ ನಮ್ಮ ಮಾತೃಸಂಸ್ಥೆ . ಏನೇ ಸಮಸ್ಯೆ ಇದ್ದರೂ ಅಲ್ಲೇ ಬಗೆಹರಿಸಿಕೊಳ್ಳೋಣ ಎಂದರು.