ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಮುಂದಿನ ಸಿನಿಮಾ? ಐತಿಹಾಸಿಕ ಚಿತ್ರಕ್ಕೆ ಸಜ್ಜಾದ ರಾಕಿಭಾಯ್- ವೇಲ್ ಪಾರಿ ಎಂಬ ರಾಜನ ಕಥೆಗೆ ಯಶ್ ಗ್ರೀನ್ ಸಿಗ್ನಲ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಐತಿಹಾಸಿಕ ಕಥೆ ಅಗಿದ್ದು, ವೇಲ್ ಪಾರಿ ಎಂಬ ರಾಜನ ಕಥೆ ಎನ್ನಲಾಗಿದೆ. ನೆಟ್ ಫ್ಲಿಕ್ಸ್ ಹಾಗು ಕರಣ್ ಜೋಹರ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎನ್ನಲಾಗಿದ್ದು, ಇದು ಅಂದಾಜು ಒಂದು ಸಾವಿರ ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದ್ದು ಪ್ಯಾನ್ ವರ್ಲ್ಡ್ ಸಿನಿಮಾ ಎಂಬ ಮಾತುಗಳು ಕೇಳಿ ಬರುತ್ತಿವೆ

ರಾಕಿಂಗ್ ಸ್ಟಾರ್ ಯಶ್..
ಕನ್ಮ
ಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ಒಪ್ಪಿ, ಅಪ್ಪಿಕೊಂಡ ನಟ. ಕನ್ನಡದ ಕೆಜಿಎಫ್ ಮೂಲಕ ಸಾಗರದಾಚೆಗೂ ಕನ್ನಡದ ಕಹಳೆಯನ್ನು ಜೋರಾಗಿಯೇ ಊದಿದ ಅಪರೂಪದ ಹೀರೋ.
ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ.

ಕೆಜಿಎಫ್ ಬಳಿಕ ಯಶ್ ಆ ಕಥೆ ಕೇಳುತ್ತಿದ್ದಾರೆ. ಈ ಸಿನಿಮಾ ಮಾಡುತ್ತಿದ್ದಾರೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು. ನಿಜ ಹೇಳೋದಾದರೆ, ಯಶ್ ಯಾವ ಕಥೆ ಕೇಳಿದರು ಅನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟಕ್ಕೂ ಬಾಲಿವುಡ್ ನ ಅನೇಕ ಮಂದಿ ಅವರ ಬಳಿ ಬಂದು ಕಥೆ ಹೇಳಿದರೂ ಯಶ್ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಈಗ ಹೊಸ ಸುದ್ದಿ ಏನೆಂದರೆ, ಯಶ್ ಹೊಸ ಕಥೆ ಒಪ್ಪಿಕೊಂಡಿದ್ದು, ಮತ್ತೊಂದು ದಾಖಲೆ ಬರೆಯುವಂತಹ ಸಿನಿಮಾ ಮಾಡಲು ಸಜ್ಜಾಗಿದ್ದರೆ ಎಂಬುದು ಈ ಹೊತ್ತಿನ ವಿಶೇಷ.

ಹೌದು, ಯಶ್ ಕೆಜಿಎಫ್ ಬಳಿಕ ಯಾವ ಸಿನಿಮಾ, ಯಾರ ಜೊತೆ ಮಾಡುತ್ತಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಬಲ್ಲ ಮೂಲಗಳ ಪ್ರಕಾರ, ಯಶ್ ಈಗ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಐತಿಹಾಸಿಕ ಹಿನ್ನೆಲೆ ಇರುವ ಸಿನಿಮಾ‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಪಕ್ಕದ ತಮಿಳುನಾಡಿನಿಂದ ನಿಮ್ಮ ‘ಸಿನಿಲಹರಿ’ ಕಿವಿಗೆ ಅಪ್ಪಳಿಸಿದೆ.

ಶಂಕರ್ ಮತ್ತು ಯಶ್ ಕಾಂಬಿನೇಶನ್ ಸಿನಿಮಾ ಅಂದರೆ ನಿಜಕ್ಕೂ ಅದೊಂದು ಬಹು ನಿರೀಕ್ಷೆಯ ಸಿನಿಮಾ ಆಗಲಿದೆ ಎಂಬುದು ದಿಟ. ಅಂದಹಾಗೆ, ಆ ಚಿತ್ರ ನೆಟ್ ಫ್ಲಿಕ್ಸ್ ಮತ್ತು ಕರಣ್ ಜೋಹರ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅದು ಸುಮಾರು ಒಂದು ಸಾವಿರ ಕೋಟಿ ಬಜೆಟ್ ಸಿನಿಮಾ ಅನ್ನುವ ಮಾತುಗಳೂ ಕೇಳಿಬರುತ್ತಿವೆ.

ಇನ್ನು ಆ ಚಿತ್ರಕ್ಕೆ ‘ವೇಲ್ ಪಾರಿ’ ಎಂದು ಹೆಸರನ್ನಿಡಲಾಗಿದೆ ಎಂಬ ಮಾತೂ ಹರಿದಾಡಿದೆ. ಅದೊಂದು ಐತಿಹಾಸಿಕ ಸಿನಿಮಾ ಆಗಿದ್ದು, ಒಂದು ನಾವೆಲ್ ಬೇಸ್ಡ್ ಸಿನಿಮಾ ಎನ್ನಲಾಗುತ್ತಿದೆ. ಒಬ್ಬ ರಾಜನ ಕಥೆ ಅದಾಗಿದ್ದು, ಪಾರಿ ಎಂಬ ರಾಜನ ಹೋರಾಟ, ಆವೇಶ ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ.

ಇನ್ನು ಸು. ವೆಂಕಟೇಸನ್ ಎಂಬ ಲೇಖಕರ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂಬುದು ಸುದ್ದಿ.
ಇಲ್ಲಿ ಯಶ್ ಅವರು ಪಾರಿ ಎಂಬ ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ರಾಮ್ ಚರಣ್ ಸಿನಿಮಾ ಆಗುತ್ತಿದ್ದು, ಆ ಸಿನಿಮಾ ನಂತರ ಯಶ್ ಭಿನಯದ ವೇಲ್‌ಪಾರಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ಅದೇನೆ ಇರಲಿ, ಈ ಸಿನಿಮಾ ಮಾಹಿತಿ ಎಷ್ಟರಮಟ್ಟಿಗೆ ಸರಿ ಅನ್ನುವುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ. ಸದ್ಯಕ್ಕೆ ಈ ಸುದ್ದಿ ಪಕ್ಕಾ ಎನ್ನುವುದಕ್ಕೆ ಇನ್ನೂ ಸಮಯವಿದೆ. ಸಿನಿಲಹರಿ ಇಂಥದ್ದೊಂದು ಸುದ್ದಿ ನೀಡಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಸಿನಿಮಾ ಅನೌನ್ಸ್ ಬೇಗನೇ ಆಗಲಿದೆ.

Related Posts

error: Content is protected !!