ಅನಿತಾಭಟ್ ನಿರ್ಮಾಣದ ಸಿನಿಮಾ ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಬಿಡುಗಡೆ ಮಾಡುತ್ತಿರುವುದು ವಿಶೇಷ.
ಸದ್ಯ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಅನಿತಾಭಟ್ ನಿರ್ಮಾಣದ ಸಿನಿಮಾ ಟೈಟಲ್ ರಿಲೀಸ್ ಮಾಡಲಿದ್ದಾರೆ ಎಂಬ ವಿಷಯ ಹೊತ್ತ ಪೋಸ್ಟರ್ ಗಮನಸೆಳೆಯುತ್ತಿದೆ. ಅಲೆಗಳಿರುವ ಒಂದು ಸಮುದ್ರದ ಭಾವಚಿತ್ರದಲ್ಲಿ “ಪ್ರತಿ ಕ್ಷಣ ಈ ಸಮುದ್ರ ಒಂದೊಂದು ಕಥೆ ಹೇಳ್ತಾ ಇರುತ್ತೆ ಎಂಬ ಬರಹವಿದೆ. ಜೊತೆಗೆ “ಅನದರ್ ಸ್ಟೋರಿ” ಎಂಬ ಹೈಲೈಟ್ರು ಬರಹವೂ ಇದೆ. ಚಿತ್ರದ ಶೀರ್ಷಿಕೆಯನ್ನು ಶ್ರೀಮುರಳಿ ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡುತ್ತಿದ್ದಾರೆ.
ಕನ್ನಡದ ಮೋಸ್ಟ್ ಅಟ್ರ್ಯಾಕ್ಷನ್ ನಟಿ ಅಂತಾನೇ ಕರೆಸಿಕೊಂಡಿರುವ ಅನಿತಾಭಟ್, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೀಗಂದಾಕ್ಷಣ, ಅಚ್ಚರಿಯಾಗಬಹುದು. ನಿಜ, ಅನಿತಾಭಟ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿ ಈಗ ಹದಿಮೂರು ವರ್ಷಗಳು ಕಳೆದಿವೆ. ಇಂದಿಗೂ ತನ್ನ ಛಾಪು ಮೂಡಿಸುತ್ತಲೇ ಬಂದಿರುವ ಅನಿತಾಭಟ್, ಎಲ್ಲಾ ಜಾನರ್ ಸಿನಿಮಾಗಳಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡವರು. ಸಿನಿಮಾನೇ ಪ್ರಾಣ ಅಂದುಕೊಂಡಿರುವ ಅನಿತಾಭಟ್, ಸದಾ ಹೊಸತೇನನ್ನೋ ಮಾಡಬೇಕು ಅಂದುಕೊಂಡವರು. ಆ ಹೊಸತನ್ನು ಹುಡುಕಿ ಹೊರಟ ಅವರನ್ನು ಸಿನಿಮಾ ನಿರ್ಮಾಪಕಿಯನ್ನಾಗಿಸಿದೆ. ಹೌದು, ಅನಿತಾಭಟ್ ನಿರ್ಮಾಪಕಿಯಾಗಿದ್ದಾರೆ.
. ಈ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ. ಅಂದಹಾಗೆ, ಅನಿತಾಭಟ್ ಈಗಾಗಲೇ “ಅನಿತಾಭಟ್ ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರೊಂದಿಗೆ ರಾಜಲಕ್ಷ್ಮಿ ಅನ್ನುವವರು ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವಿಶೇಷವೆಂದರೆ, ಅನಿತಾಭಟ್ ಇಲ್ಲಿ ವಿಶೇಷ ಕಥೆಯೊಂದನ್ನು ಹಿಡಿದು ಪ್ರೇಕ್ಷಕರ ಮುಂದೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ ಶೀರ್ಷಿಕೆಯ ಗುಟ್ಟು ರಟ್ಟು ಮಾಡದ ಅನಿತಾಭಟ್, ಅದನ್ನು ಸೆಪ್ಟೆಂಬರ್ 10ರ ಗಣೇಶ ಹಬ್ಬದಂದು ಅನಾವರಣಗೊಳಿಸುತ್ತಿದ್ದಾರೆ.
ಅವರ ಮೊದಲ ನಿರ್ಮಾಣದ ಸಿನಿಮಾದ ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಬಿಡುಗಡೆ ಮಾಡುತ್ತಿರುವುದು ವಿಶೇಷ.
ಸದ್ಯ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಅನಿತಾಭಟ್ ನಿರ್ಮಾಣದ ಸಿನಿಮಾ ಟೈಟಲ್ ರಿಲೀಸ್ ಮಾಡಲಿದ್ದಾರೆ ಎಂಬ ವಿಷಯ ಹೊತ್ತ ಪೋಸ್ಟರ್ ಗಮನಸೆಳೆಯುತ್ತಿದೆ. ಅಲೆಗಳಿರುವ ಒಂದು ಸಮುದ್ರದ ಭಾವಚಿತ್ರದಲ್ಲಿ “ಪ್ರತಿ ಕ್ಷಣ ಈ ಸಮುದ್ರ ಒಂದೊಂದು ಕಥೆ ಹೇಳ್ತಾ ಇರುತ್ತೆ” ಎಂಬ ಬರಹವಿದೆ. “ಅನದರ್ ಸ್ಟೋರಿ” ಇರುವ ಚಿತ್ರದ ಶೀರ್ಷಿಕೆಯನ್ನು ಶ್ರೀಮುರಳಿ ಅವರು ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡುತ್ತಿದ್ದಾರೆ.
ಆ ಸಿನಿಮಾದ ಟೈಟಲ್ ಏನು ಅನ್ನೋದು ಅಂದೇ ಗೊತ್ತಾಗಲಿದೆ. ಬಹುಶಃ ಅನಿತಾಭಟ್ ಅವರ ಟೀಮ್ ಈಗ ಪೋಸ್ಟ್ ಮಾಡಿರುವ ಪೋಸ್ಟರ್ ಗಮನಿಸಿದರೆ, ಅದೊಂದು ಸಮುದ್ರದ ಕಥೆನೇ ಇರಬಹುದೇನೋ ಅಂತೆನಿಸುತ್ತದೆ. ಸಮುದ್ರದ ಕಥೆ ಆಗಿದ್ದರಿಂದ ಸಿನಿಮಾದ ಟೈಟಲ್ ಕೂಡ ಅದಕ್ಕೆ ಸಂಬಂಧಿಸಿದಂತೆಯೇ ಇರಬಹುದೇನೋ? ಗೊತ್ತಿಲ್ಲ ಅದು ಏನಿರಬಹುದು ಎಂಬ ಕುತೂಹಲಕ್ಕೆ ಗಣೇಶನ ಹಬ್ಬದವರೆಗೆ ಕಾಯಬೇಕಿದೆ.
ಇನ್ನು “ಸಿನಿಲಹರಿ” ಜೊತೆ ಮಾತಾಡಿದ ಅನಿತಾಭಟ್, “ನಾನು ಮೊದಲಿನಿಂದಲೂ ಒಳ್ಳೆಯ ಕಥೆಗಾಗಿ ಹುಡುಕಾಟ ನಡೆಸುತ್ತಲೇ ಇದ್ದೆ. ಒಳ್ಳೆ ಕಥೆ ಸಿಕ್ಕರೆ ನಾನೇ ನಿರ್ಮಾಣ ಮಾಡಬೇಕು ಅಂತ. ಅದು ಸಿಕ್ಕಿದ್ದರಿಂದಲೇ ನಾನು ನಿರ್ಮಾಪಕಿಯಾಗಿದ್ದೇನೆ. ವಿಶೇಷವೆಂದರೆ, ನಾನು ಒಂದಲ್ಲ ಎರಡು ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಈಗ ಒಂದು ಸಿನಿಮಾ ಸೆನ್ಸಾರ್ಗೆ ಹೋಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಎರಡು ಸಿನಿಮಾಗಳ ಕಥೆ ಚೆನ್ನಾಗಿವೆ. ಕಥೆಗೆ ಏನೆಲ್ಲಾ ಬೇಕೋ ಅದನ್ನು ಪೂರೈಸಿ, ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಿದೆ. ನನ್ನೊಂದಿಗೆ ರಾಜಲಕ್ಷ್ಮಿ ಅವರು ಕೈ ಜೋಡಿಸಿದ್ದಾರೆ. ಒಳ್ಳೆಯ ತಂಡ ನನ್ನೊಂದಿಗಿದೆ. ರಿಷಿ ಮತ್ತು ಧನುಷ್ ಇವರೊಂದಿಗೆ ತೃಪ್ತಿ ಎನಿಸುವ ಸಿನಿಮಾ ಮಾಡಿದ ಖುಷಿ ಇದೆ. ನಿಜ ಹೇಳ್ತೀನಿ. ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ, ಆ ಎರಡು ಸಿನಿಮಾಗಳು ಕಮರ್ಷಿಯಲ್ ಆಗಿವೆ. ಕಂಟೆಂಟ್ ಕೂಡ ಅಷ್ಟೇ ಚೆನ್ನಾಗಿದೆ” ಎನ್ನುತ್ತಾರೆ ಅನಿತಾಭಟ್.
ಒಂದು ಸಿನಿಮಾದಲ್ಲಿ ನಾನು ಮತ್ತು ಶಿವಧ್ವಜ್ ನಟಿಸಿದ್ದೇವೆ. ಇನ್ನೊಂದು ಸಿನಿಮಾದಲ್ಲಿ ನಾನು, ನೀತು, ಷಫಿ, ಟಿವಿ ಸುದ್ದಿ ವಾಚಕ ರೆಹಮಾನ್, ಚಕ್ರವರ್ತಿ ಚಂದ್ರಚೂಡ್ ಕಾಣಿಸಿಕೊಂಡಿದ್ದೇವೆ. ಇವರೆಲ್ಲರೂ ಕೂಡ ನನ್ನ ಸಿನಿಮಾಗೆ ಸಾಥ್ ನೀಡಿದ್ದಾರೆ. ಸಹಕಾರ ನೀಡಿ, ಪ್ರೋತ್ಸಾಹಿಸಿದ್ದರಿಂದಲೇ ಇಂದು ನಾನು ನಿರ್ಮಾಣ ಮಾಡೋಕೆ ಸಾಧ್ಯವಾಗಿದೆ. ಮುಂದೆ ಇನ್ನೂ ಒಳ್ಳೆಯ ಸಿನಿಮಾ ಮಾಡುವ ಆಸೆ ಇದೆ. ಅದರಲ್ಲೂ ನಾನು ಶಿವರಾಜಕುಮಾರ್ ಫ್ಯಾನ್. ಅವರಿಗೆ ಒಂದೊಳ್ಳೆಯ ಸಿನಿಮಾ ನಿರ್ಮಿಸುವ ಆಸೆಯೂ ನನಗಿದೆ. ನೋಡೋಣ. ಎಲ್ಲದ್ದಕ್ಕೂ ಒಳ್ಳೆಯ ಸಮಯ ಬರಬೇಕು ಎನ್ನುವ ಅನಿತಾಭಟ್, ಸದ್ಯ ನಿರ್ಮಿಸಿರುವ ಸಿನಿಮಾಗಳನ್ನು ಬಿಡುಗಡೆ ಮಾಡಿ, ಜನಮನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕನ್ನಡದಲ್ಲಿ ನಟಿಯಾಗಿ ಬಂದು, ಈಗ ನಿರ್ಮಾಪಕಿಯಾಗಿರುವ ಅನಿತಾಭಟ್, ಇನ್ನೂ ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ಕೊಡಲಿ ಎಂಬುದು “ಸಿನಿಲಹರಿ” ಹಾರೈಕೆ.