ಈಗಲೂ ಸಿನಿಮಾ ರಂಗ ಎಚ್ಚರಿಕೆ ವಹಿಸಿದಂತಿಲ್ಲ. ಆತುರವೋ, ಅಚಾತುರ್ಯವೋ, ಆವೇಶವೋ, ಅಬ್ಬರವೋ…. ಶೂಟಿಂಗ್ ಸೆಟ್ನಲ್ಲಿ ಅವಘಡಗಳು ನಡೆಯುತ್ತಲೇ ಇವೆ. ಎಚ್ಚರ ವಹಿಸಬೇಕಾದ ಕಡೆ ನಿರ್ಲಕ್ಷ್ಯ ತೋರುತ್ತಿರುವುದರ ಪರಿಣಾಮ ಅನಾಹುತಗಳು ನಡೆದು, ಅಮಾಯಕರು ಬಲಿಯಾಗುತ್ತಿರುವುದು ದುರಂತ. ಮೊನ್ನೆಯಷ್ಟೇ ಆಗಿರುವ ʼಲವ್ ಯು ರಚ್ಚುʼ ಚಿತ್ರದ ದುರಂತ ಕೂಡ ಇದರಿಂದ ಹೊರತಲ್ಲ. ಸಾಹಸ ದೃಶ್ಯದ ಸನ್ನಿವೇಶದಲ್ಲಿ ಒಬ್ಬ ಫೈಟರ್ ಸಾವನ್ನಪ್ಪಿದ್ದರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಮತ್ತೊಂದೆಡೆ ನಿರ್ಮಾಪಕ ಕೆ.ಮಂಜು ನಿರ್ಮಾಣದ ʼರಾಣಾʼ ಚಿತ್ರದ ಚಿತ್ರೀಕರಣದ ವೇಳೆಯೂ ಒಂದು ಅವಘಡ ನಡೆದು ಹೋಗಿದೆ. ಒಬ್ಬ ಛಾಯಾಗ್ರಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೆಲ್ಲ ಆಕಸ್ಮಿಕವಾಗಿಯೇ ನಡೆದು ಹೋದರೂ, ಚಿತ್ರೀಕರಣಕ್ಕೆ ವಹಿಸಬೇಕಾದ ಎಚ್ಚರ ತಪ್ಪಿದ್ದೇ ಇದಕ್ಕೆ ಕಾರಣ ಅನ್ನೋದು ಅಷ್ಟೇ ಸತ್ಯ.
ಯಾಕೆ ಹಾಗೆ ? ಹಾಗೆ ನೋಡಿದರೆ ಕನ್ನಡ ಚಿತ್ರೋದ್ಯಮಕ್ಕೆ ʼಮಾಸ್ತಿಗುಡಿʼ ದುರಂತ ದೊಡ್ಡ ಪಾಠ ಆಗಬೇಕಿತ್ತು. ಸಾಹಸ ನಿರ್ದೇಶಕ ತೋರಿದ ವೈಫ ಲ್ಯದ ಪರಿಣಾಮ ಇಬ್ಬರು ನಟರು ಕಣ್ಣೇದುರೆ ಸಾವು ಕಂಡರು. ಅಲ್ಲಿಂದ ಏನಾ ಯ್ತು ಅನ್ನೋದೆಲ್ಲ ಉದ್ಯಮಕ್ಕೆ ಗೊತ್ತೇ ಇದೆ. ಅಲ್ಲಿ ಸ್ಟಂಟ್ ಮಾಸ್ಟರ್ ತೋರಿದ ನಿರ್ಲಕ್ಷ್ಯಕ್ಕೆ ನಿರ್ಮಾಪಕರು, ನಿರ್ದೇಶಕರ ಜತೆಗೆ ಕಲವಿದರು ಕೂಡ ಅದರ ನೋವು ಅನುಭವಿಸಬೇಕಾಗಿ ಬಂತು. ಇಷ್ಟಾಗಿ ಯೂ ಚಿತ್ರೋದ್ಯಮ ಪಾಠ ಕಲಿತಿಲ್ಲ ಅಂದ್ರೆ ಏನನ್ನಬೇಕೋ ಗೊತ್ತಿಲ್ಲ. ಹಾಗಂತ ಯಾರೇನು ಇಲ್ಲಿ ಬೇಕಂತ ಮಾಡುತ್ತಿಲ್ಲ. ಯಾರಿಗೂ ಈ ಅವಘ ಡಗಳು ಬೇಕಾಗಿಲ್ಲ. ಸುಸೂತ್ರವಾಗಿ ನಡೆಯುವ ಚಿತ್ರೀಕರಣ ಗಳೆಲ್ಲಿ ಇನ್ನೇನು ತೊಂದರೆ ತಂದುಕೊಂಡು ವಿನಾಕರಣ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಕೂಡ ಯಾರಿಗೂ ಬೇಕಿಲ್ಲ. ಇಷ್ಟಾಗಿಯೂ ಇಂತ ಹ ದುರಂತ ನಡೆದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡ ಬೇಕು?
ʼಲವ್ ಯೂ ರಚ್ಚುʼ ದುರಂತದಲ್ಲೀಗ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಾಹಸ ನಿರ್ದೇಶಕರು ಹೊಣೆಗಾರರಾಗಿದ್ದಾರೆ. ಮಾಡಿದ ತಪ್ಪಿಗೆ ಅವರೇನೋ,ಮಡಿದ ವ್ಯಕ್ತಿಯ ಕುಟಂಬಕ್ಕೆ ಒಂದಷ್ಟು ಪರಿಹಾರ ನೀಡಬಹುದು, ಇಲ್ಲವೇ ಕಾನೂನಿನಡಿ ಒಂದಷ್ಟು ಶಿಕ್ಷಿಗೂ ಗುರಿಯಾಗಬಹುದು, ಆದರೆ ಯಾರದೋ ನಿರ್ಲಕ್ಷ್ಯ ವಿನಾಕಾರಣ ಸತ್ತು ಹೋದ ವ್ಯಕ್ತಿ ಮತ್ತೆ ಬರುತ್ತಾನೆಯೇ? ಸಿನಿಮಾ ಶೂಟಿಂಗ್ ಈಗ ತೀರಾ ಆತುರಕ್ಕೆ ನಡೆಯುತ್ತಿವೆ. ಎಷ್ಟೋ ನಿರ್ಮಾಪಕರು ನಿಗದಿ ಮಾಡಿಕೊಂಡ ಶೆಡ್ಯೂಲ್ ಗಿಂತ ಮುಂಚೆಯೇ ಶೂಟಿಂಗ್ ಮುಗಿಸಿ ಅಂತ ನಿರ್ದೇಶಕರ ಮೇಲೆ ಒತ್ತಡ ಹಾಕುವ ಕಾರಣಕ್ಕೆ ಹಗಲು-ರಾತ್ರಿ ಶೂಟಿಂಗ್ ನಡೆದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಅವಸರಗಳು ಕೂಡ ಶೂಟಿಂಗ್ ಸೆಟ್ ನಲ್ಲಿ ಅವಘಡ ಸಂಭವಿಸುವುದಕ್ಕೂ ಕಾರಣ.