- ವಿಶಾಲಾಕ್ಷಿ
ಎಣ್ಣೆ-ಹೆಣ್ಣು ಅಂದಾಕ್ಷಣ ಕಿವಿ ನೆಟ್ಟಗಾಗದಿದ್ದರೂ ಕೂಡ ರಚಿತಾ-ರಕ್ಷಿತಾ ಹೆಸರನ್ನು ಒಟ್ಟಿಗೆ ಕೇಳಿದಾಕ್ಷಣ ಕಿವಿಗಳು ಅರಳುತ್ತವೆ…ಕಣ್ಣು ಊರಗಲವಾಗುತ್ತವೆ. ಯಸ್, ಗಂಧದಗುಡಿಯ ಕ್ರೇಜಿಕ್ವೀನ್ ಹಾಗೂ ಡಿಂಪಲ್ಕ್ವೀನ್ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದರೆ ಸಹಜವಾಗಿ ಕೂತೂಹಲ ಹೆಚ್ಚಾಗುತ್ತೆ. ಅಂತದ್ರಲ್ಲಿ, ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಅಂತ ಇವರಿಬ್ಬರು ಕೇಳ್ತಿದ್ದಾರೆ ಅಂದರೆ ಕ್ಯೂರಿಯಾಸಿಟಿ ಅನ್ನೋದು ಶ್ಯಾಂಪೇನ್ ಥರ ಗಗನಕ್ಕೆ ಹಾರುತ್ತೆ ಅಪ್ಕೋರ್ಸ್ ಹಾರಲೆಬೇಕು. ಹಾರಬೇಕು ಅಂತಾನೇ ಜೋಗಿ ಪ್ರೇಮ್ ಅವರು ಪ್ಲ್ಯಾನ್ ಮಾಡಿದ್ದು ಫಿಕ್ಸ್ ಮಾಡಿದ್ದು.
ಅಷ್ಟಕ್ಕೂ, ಪ್ರೇಮ್ ಅವರು ಮಾಡಿದ ಪ್ಲ್ಯಾನ್ ಏನು? ಏನು ಫಿಕ್ಸ್ ಮಾಡಿದರು? ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳು ಗುರು ಅಂತ ರಕ್ಷಿತಾ ಹಾಗೂ ರಚಿತಾ ಯಾರ ಬಳಿ ಕೇಳ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡಬೇಕು ಅಂದರೆ ಏಕ್ ಲವ್ ಯಾ' ಬಗ್ಗೆ ಹೇಳಲೆಬೇಕು.
ಏಕ್ ಲವ್ ಯಾ’ ಹೆಸರು ಕೇಳಿದಾಕ್ಷಣ ಹಂಡ್ರೆಂಡ್ ಪರ್ಸೆಂಟ್ ನಿರ್ದೇಶಕ ಪ್ರೇಮ್ ಕಣ್ಮುಂದೆ ಬಂದಿರುತ್ತಾರೆ. ಅಟ್ ದಿ ಸೇಮ್ ಟೈಮ್ ಬಿಯರ್ ಬಾಟಲಿ ಹಿಡಿದು ಕಿಕ್ಕೇರಿಸಿದ ರಕ್ಷಿತಾ-ರಚಿತಾರ ಪೋಟೋ ಕೂಡ ಕಣ್ಮುಂದೆ ಬಂದುಬಿಡುತ್ತೆ. ಅಸಲಿ ಕಹಾನಿ ನಾವು ಬಿಚ್ಚಿಡುವ ಮೊದಲೇ ನಿಮ್ಗೆ ಎಲ್ಲಾ ಅರ್ಥವಾಗಿರುತ್ತೆ ಎನಿವೇ ಆದರೂ ಹೇಳ್ತೀವಿ ಕೇಳಿ
ಮಧುಲೋಕಕ್ಕೂ ಹಾಗೂ ಗುಂಡಾಕೋ ಗಂಡೈಕ್ಳಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನ ಕಡಿದುಹಾಕುವುದಕ್ಕೆ ಖಾಲಿಕ್ವಾಟ್ರಿಂದಲೂ ಸಾಧ್ಯವಿಲ್ಲ ಬಿಡಿ. ಹೆಣ್ಣುಮಕ್ಕಳು ತವರು ಮನೆಗೆ ಹೋಗೋದು ಬಿಡ್ಬೋದು ಆದರೆ ಸುರಪಾನಪ್ರಿಯರು ಮಾತ್ರ ತವರುಮನೆಯಂತಿರುವ ಬಾರ್ಗೆ ಹೋಗೋದನ್ನು ಮಾತ್ರ ತಡೆಯೋದಕ್ಕೆ ಆಗಲ್ಲ.
ಕರುಳು ಕೆರೆದರೆ, ತುಟಿ ಒಣಗಿದರೆ, ಪಿತ್ತ ನೆತ್ತಿಗೇರಿದರೆ, ಮನಸ್ಸು ಮಂಕಾದರೆ, ಹೃದಯಕ್ಕೆ ಗಾಯವಾದರೆ, ಲವ್ವರ್ ಕೈಕೊಟ್ಟರೆ, ವೈಫ್ ಕೂಗಾಡಿದರೆ, ಬಾಸ್ ಕಿರುಚಾಡಿದರೆ, ಬ್ಯುಸಿನೆಸ್ ಲಾಸ್ ಆದರೆ ಹೂಃ ಇದಿಷ್ಟೇ ಆದರೆ ಪರವಾಗಿಲ್ಲ ಗುರು ಹೊಸ ಲವ್ವರ್ ಸಿಕ್ಕರೆ, ಹಳೆಯ ಲವ್ವರ್ ಎದುರುಬಂದರೆ, ವೈಫ್ ತವರು ಮನೆಗೆ ಹೋದರೆ, ಮನಸ್ಸಿಗೆ ಖುಷಿಯಾಗುವ ಘಟನೆಗಳು ಘಟಿಸಿದರೆ ಮುಗೀತು `ಓಪನ್ ದಿ ಬಾಟೆಲ್’ ಅಂತ ಫೆಂಡ್ಸ್ ಜೊತೆ ಟೇಬಲ್ ಕುಟ್ಟಿಕೊಂಡು ಬೆಳಗ್ಗಿನ ಜಾವ ೩ ಗಂಟೆವರೆಗೆ ಕುಂತುಬಿಡ್ತಾರೆ. ಆದರೆ, ಹೆಣ್ಣುಮಕ್ಕಳಿಗೆ ಇದ್ಯಾವ ಸೌಭಾಗ್ಯವೂ ಇಲ್ಲ
ಮನಸ್ಸಿಗೆ ದುಃಖ ಆದಾಗ ಅಥವಾ ಖುಷಿ ಆದಾಗ ಸುರಪಾನಪ್ರಿಯರ ಥರ ನಾವು ಕೂಡ ಎಂಜಾಯ್ ಮಾಡ್ಬೇಕು ಅಂತ ಎಣ್ಣೆರುಚಿ ಹತ್ತಿರುವ ಕೆಲವು ಹೆಣ್ಣುಮಕ್ಕಳಿಗೆ ಅನಿಸುತ್ತೆ. ಹೀಗೆ ಅನಿಸಿದ್ದನ್ನ ನಾಲ್ಕು ಗೋಡೆಯ ಮಧ್ಯೆ ಮಾಡಿಬಿಡ್ತಾರೆ. ಇಷ್ಟದ ಬ್ರ್ಯಾಂಡ್ನ ಆರ್ಡರ್ ಮಾಡಿ ಚಿಪ್ಸೋ-ಉಪ್ಪಿನಕಾಯಿಯೋ ಅಥವಾ ಲೆಗ್ಪೀಸ್ ಜೊತೆಗೆ ಹೊಟ್ಟೆಗೆ ಸೇರಿಸಿಕೊಳ್ತಾರೆ. ಆದರೆ, ಗಂಡುಮಕ್ಕಳ ಥರ ಟೇಬಲ್ ಕುಟ್ಟಿಕೊಂಡು ಸಣ್ಣಕರುಳನ್ನ ತಂಪುಮಾಡಿಕೊಳ್ಳೋದಕ್ಕೆ ಆಗಲ್ಲ. ಅಷ್ಟಕ್ಕೂ, ಇವರ ಕಥೆಯನ್ನು ಕೇಳೋರು ಯಾರು ಇಲ್ಲ ಹೀಗಾಗಿಯೇ ರಚ್ಚು ಹಾಗೂ ರಕ್ಷಿತಾ ಮುಂದೆಬಂದಿದ್ದಾರೆ. `ಎಣ್ಣೆಗೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ’… ಬಾರಲ್ಲಿ ಹೆಣೈಕ್ಳು ಕುಡಿಯೋದು ತಪ್ಪಂತ ಯಾರಾನಾ ಬೋರ್ಡ್ ಹಾಕವ್ರಾ… ಅಯ್ಯೋ ನಮ್ಗೂನೂ ಲವ್ವಲ್ಲಿ ಬ್ರೇಕಪ್ ಆಗೈತೆ ಒಂದೊಳ್ಳೆ ಪೆಗ್ ಹಾಕ್ತೀರಾ.. ಈ ರೀತಿ ಪ್ರಶ್ನೆಮಾಡ್ತಿದ್ದಾರೆ
ರಚಿತಾ ಮತ್ತು ರಕ್ಷಿತಾ ಈ ರೀತಿ ಪ್ರಶ್ನೆ ಮಾಡ್ತಿರುವುದು ರಿಯಲ್ ನಲ್ಲಿ ಅಲ್ಲ ಬದಲಾಗಿ ರೀಲ್ ನಲ್ಲಿ . ಹೌದು, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ಒಂದು ಎಣ್ಣೆ ಸಾಂಗ್ ಇಡಲಾಗಿದೆ.
ರಕ್ಷಿತಾ- ರಚಿತಾ ಜೊತೆಗೆ ರಕ್ಷಿತಾ ಸಹೋದರ ರಾಣಾ ಕೂಡ ಬಾಟೆಲ್ ಕುಟ್ಟಿ ಕಿಕ್ಕೇರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡು ಎಣ್ಣೆಹೊಡೆಯೋ ಹೆಣ್ಣುಮಕ್ಕಳ ಆಂಥಮ್ ಆಗಲಿದೆ.
ಕಣ್ಣೇ ಅದಿರಿಂದಿ ಅಂತ ಹಾಡಿ ಬಜಾರ್ ನಲ್ಲಿ ಸುನಾಮಿ ಎಬ್ಬಿಸಿರುವ ಸತ್ಯವತಿ ಮಂಗ್ಲಿ ಏಕ್ ಲವ್ ಯಾ ಎಣ್ಣೆ ಸಾಂಗ್ ಗೆ ಕಂಠಕುಣಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.ಇತ್ತೀಚೆಗಷ್ಟೇ ಈ ಹಾಡಿನ ಟ್ರ್ಯಾಕ್ನ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಏಕ್ ಲವ್ ಯಾ ಪ್ರೇಮ್ ನಿರ್ದೇಶನ ಮಗದೊಂದು ಪ್ರೇಮಕಥಾ ಚಿತ್ರವಾಗಿದ್ದು ಸಿನಿಪ್ರೇಕ್ಷಕರಲ್ಲಿ ಕೂತೂಹಲ ಗರಿಗೆದರಿದೆ.